ಉಕ್ರೇನ್ ಹಾರಿಸಿದ 110 ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ರಷ್ಯಾ ತಿಳಿಸಿದೆ. ಉಕ್ರೇನ್‌ನ ಕ್ರೀವಿ ರಿಯಾ ನಗರದ ಮೇಲೆ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ 17 ಮಂದಿ ಗಾಯಗೊಂಡಿದ್ದಾರೆ. ರಷ್ಯಾದ ಏಳು ಪ್ರಾಂತ್ಯಗಳನ್ನು ಗುರಿಯಾಗಿಸಿಕೊಂಡು ಉಕ್ರೇನ್ ರಾತ್ರಿಯಿಡೀ ಡ್ರೋನ್ ದಾಳಿ ನಡೆದಿದೆ. ಕರ್ಸಕ್ ಪ್ರಾಂತ್ಯದಲ್ಲಿ ಅತಿ ಹೆಚ್ಚು ಅಂದರೆ 43 ಡ್ರೋನ್‌ಗಳ ಹೊಡೆದುರುಳಿಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ. ಝೆರ್‌ಜಿನ್‌ಸ್ಕ್ ಕೈಗಾರಿಕಾ ಪ್ರದೇಶದ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ ನಾಲ್ವರು ಯೋಧರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಗವರ್ನರ್ ಗ್ಲೆಬ್ ನಿಕಿತಿನ್ ತಿಳಿಸಿದ್ದಾರೆ. ಸೆಪ್ಟೆಂಬರ್‌ನಲ್ಲಿ ಏಕಕಾಲದಲ್ಲಿ ರಷ್ಯಾ ಮೇಲೆ 125 ಡ್ರೋನ್ ಹಾರಿಸಿದ್ದ ಬಳಿಕ, ಉಕ್ರೇನ್ ನಡೆಸಿದ ಅತಿದೊಡ್ಡ ದಾಳಿ ಇದಾಗಿದೆ. ಕ್ರೀವಿ ರಿಯಾ ನಗರದ ಮೇಲೆ ರಷ್ಯಾದ ಎರಡು ಕ್ಷಿಪಣಿಗಳು ಅಪ್ಪಳಿಸಿದ ಪರಿಣಾಮ 17 ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ನ ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ರಾತ್ರಿ ನಡೆದ ಈ ದಾಳಿಯಲ್ಲಿ ಹಲವು ಮನೆಗಳು ಮತ್ತು ಕಟ್ಟಡಗಳಿಗೆ ಹಾನಿಯಾಗಿವೆ ಎಂದು ಸ್ಥಳೀಯ ಸಂಸ್ಥೆಯ…
Author: Author AIN
ವಾರದ ಹಿಂದೆ ಇಸ್ರೇಲ್ ಸೇನೆಯಿಂದ ಹತ್ಯೆಗೀಡಾದ ಹಮಾಸ್ ನಾಯಕ ಯಹ್ಯಾ ಸಿನ್ವರ್ ನ ಮತ್ತೊಂದು ವಿಡಿಯೋವನ್ನು ಇಸ್ರೇಲ್ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ. ಹಮಾಸ್ ಬಂಡುಕೋರರು ಕಳೆದ ವರ್ಷ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ಆರಂಭಿಸುವ ಮುನ್ನ ಯಹ್ಯಾ ಸಿನ್ವರ್ ಗಾಜಾದ ಸುರಂಗದಲ್ಲಿ ದೀರ್ಘ ಕಾಲ ತಂಗಲು ತಯಾರಿ ನಡೆಸಿದ್ದ ವಿಡಿಯೊವನ್ನು ಇದೀಗ ಬಿಡುಗಡೆ ಮಾಡಲಾಗಿದೆ. ಇಸ್ರೇಲ್ ಮೇಲಿನ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬರಾಗಿದ್ದ ಸಿನ್ವರ್ ಅವರನ್ನು ಇಸ್ರೇಲ್ ಸೇನೆ ಕಳೆದ ವಾರ ಹತ್ಯೆ ಮಾಡಿತ್ತು. ಆತನ ಕೊನೆಯ ಕ್ಷಣಗಳ ವಿಡಿಯೊವನ್ನು ಈ ಹಿಂದೆ ಬಿಡುಗಡೆ ಮಾಡಿತ್ತು. ಇದೀಗ ಮತ್ತೊಂದು ವಿಡಿಯೋ ಬಿಡುಗಡೆ ಮಾಡಲಾಗಿದೆ. ಸದ್ಯ ಬಿಡುಗಡೆ ಮಾಡಲಾಗಿರುವ ವಿಡಿಯೋದಲ್ಲಿ ಸಿನ್ವರ್ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಸುರಂಗದೊಳಗೆ ತೆರಳುತ್ತಿರುವ ದೃಶ್ಯವಿದೆ. ‘ಗಾಜಾ ಪಟ್ಟಿಯ ಖಾನ್ ಯೂನಿಸ್‌ನಲ್ಲಿರುವ ಅವರ ಮನೆಯ ಕೆಳಗಡೆ ಇರುವ ಸುರಂಗ ಅದಾಗಿದೆ’ ಎಂದು ವಿಡಿಯೊ ಬಿಡುಗಡೆಗೊಳಿಸಿದ ಇಸ್ರೇನ್ ಸೇನೆಯ ವಕ್ತಾರ ಅಡ್ಮಿರಲ್ ಡೇನಿಯಲ್ ಹಗರಿ ತಿಳಿಸಿದ್ದಾರೆ.…
ನಾನು ತಪ್ಪು ಮಾಡಿದ್ದೇನೆ. ರಂಜಿತ್ ನನ್ನ ನಾನೇ ಬಲಿ ಪಶು ಮಾಡಿದೇ ಅನಿಸುತ್ತಿದೆ. ನನ್ನ ಹೆಂಡ್ತಿಗೆ ನಾನು ಪ್ರಾಮಿಸ್ ಮಾಡಿಯೇ ಬಂದಿದ್ದೆ. ಆದರೆ ಅದನ್ನು ನನ್ನಿಂದ ಉಳಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ. ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಕನಸುಗಳನ್ನ ಕಂಡ ಜನರಿದ್ದಾರೆ. ನನ್ನ ವಯಸ್ಸಿಗೆ ಅವರಿಗೆ ನಾನು ಸಪೋರ್ಟ್ ಮಾಡಬಹುದಿತ್ತು. ಆದರೆ, ನಾನು ಅತಿ ದೊಡ್ಡ ತಪ್ಪು ಮಾಡಿದ್ದೇನೆ ಎಂದು ಜಗದೀಶ್ ಹೇಳಿದ್ದಾರೆ. ನನ್ನಿಂದ ತುಂಬಾನೆ ತಪ್ಪಾಗಿದೆ. ನಾನು ಎಲ್ಲರಿಗೂ ಸಾರಿ ಕೇಳುತ್ತೇನೆ. ಫ್ಲೋದಲ್ಲಿ ಏನೋ ಬಂದು ಬಿಡ್ತು. ಹೆಣ್ಣುಮಕ್ಕಳಿಗೆ ಕೆಟ್ಟದಾಗಿಯೆ ಮಾತನಾಡಿದ್ದೇನೆ. ನನ್ನಿಂದ ತಪ್ಪಾಗಿದೆ. ಈ ರೀತಿ ಮಾತನಾಡಲೇ ಬಾರದಿತು. ನನ್ನಿಂದ ತಪ್ಪಾಗಿದೆ. ನನ್ನಿಂದಲೇ ರಂಜಿತ್ ಹೊರಗೆ ಹೋಗಿದ್ದಾರೆ. ನನ್ನಿಂದಲೇ ರಂಜಿತ್ ಬಲಿ ಪಶು ಆದ್ರು ಅನಿಸುತ್ತಿದೆ ಎಂದು ಜಗದೀಶ್ ಕ್ಷಮೆ ಕೇಳಿದ್ದಾರೆ. ನಾನು ಮನೆಯಲ್ಲಿ ಯಾವುದೇ ರೀತಿಯ ಜಗಳವನ್ನ ಮಾಡೋದಿಲ್ಲ. ಯಾರ ಜೊತೆಗೂ ಜಗಳ ಆಡೋದಿಲ್ಲ. ನೀಟ್ ಆಗಿಯೇ ಆಡಿ ಬರುತ್ತೇನೆ ಎಂದು ಹೆಂಡತಿಗೆ ಪ್ರಾಮಿಸ್ ಮಾಡಿ ಬಂದಿದ್ದೆ. ಆದರೆ,…
ನಾನು ಸಿಎಂ ಆಗಬೇಕು’ ಎಂದು ಬಿಗ್ ಬಾಸ್ ವೇದಿಕೆಯಲ್ಲಿ ಹೇಳಿದ್ದ ಜಗದೀಶ್ ಇದೀಗ ಅವಕಾಶ ಸಿಕ್ಕರೆ ರಾಜಕೀಯಕ್ಕೆ ಬರುವ ಮಾತನಾಡಿದ್ದಾರೆ. ‘ಏನು ಕರೆದು ಕೊಟ್ಟರೂ ನಾನು ಮಾಡುತ್ತೇನೆ. ಬಿಗ್ ಬಾಸ್ ಮನೆಯೊಳಗೆ ಬಾತ್ ರೂಮ್ ಕ್ಲೀನ್ ಮಾಡು ಅಂದ್ರು. ಅದನ್ನು ಮಾಡಿದೆ. ಟೈಯರ್ ಪಂಕ್ಚರ್ ಹಾಕು ಅಂದರೂ ಹಾಕುತ್ತೇನೆ. ಅದು ಕರ್ತವ್ಯ. ಕಾಂಗ್ರೆಸ್ನವರು ನನ್ನನ್ನು ಕರೆದು ಬೊಮ್ಮಾಯಿಯ ಶಿಗ್ಗಾಂವಿ ಕ್ಷೇತ್ರದಲ್ಲಿ ಟಿಕೆಟ್ ಕೊಟ್ಟು ಚುನಾವಣೆಗೆ ನಿಲ್ಲು ಎಂದರೆ ನಾನು ಸ್ಪರ್ಧಿಸುತ್ತೇನೆ. ನಾನು ಅಷ್ಟು ದೊಡ್ಡ ವ್ಯಕ್ತಿ ಅಲ್ಲ. ನನಗೆ ಹೈಕಮಾಂಡ್ ಗೊತ್ತಿಲ್ಲ. ಕಾಂಗ್ರೆಸ್ನವರು ನಿಂತುಕೊಳ್ಳಿ ಎಂದರೆ ರುಬ್ಬೋಣ ಹಾಕ್ಕೊಂಡು. ನಂಗೇನೂ ಸಮಸ್ಯೆ ಇಲ್ಲ’ ಎಂದು ಜಗದೀಶ್ ಅವರು ಹೇಳಿದ್ದಾರೆ. ‘ನಮ್ಮ ದೇಶದಲ್ಲಿ ಆದಿವಾಸಿ ಹೆಣ್ಣುಮಗಳನ್ನು ನಾವು ರಾಷ್ಟ್ರಪತಿ ಮಾಡಿದ್ದೇವೆ. ಒಬ್ಬ ಟೀ ಮಾರುವವನು ಪ್ರಧಾನಿ ಆಗಬಹುದಾದರೆ ನಾನೇಕೆ ಆಗಬಾರದು. ನಾನು ಸಿಎಂ ಆಗುತ್ತೇನೆ ಎಂದರೆ ತುಂಬಾ ಕಡಿಮೆ. ನಾನು ಪ್ರಧಾನ ಮಂತ್ರಿ ಆಗಬೇಕಾದವನು. ಆದರೆ ಏನೂ ಅಚ್ಚರಿ ಇಲ್ಲ. ಯಾಕೆಂದರೆ ನಾವು ಅದೇ…
ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿದರು ಎಂಬ ಕಾರಣಕ್ಕೆ ಬಿಗ್ ಬಾಸ್ ಮನೆಯಿಂದ ಲಾಯರ್ ಜಗದೀಶ್ ಅವರನ್ನು ಹೊರಗೆ ಕಳುಹಿಸಲಾಯಿತು. ಅಲ್ಲದೆ ಜಗದೀಶ್ ಅವರನ್ನು ತಳ್ಳಿದರು ಎಂಬ ಕಾರಣದಿಂದ ರಂಜಿತ್ ಅವರು ಕೂಡ ಬಿಗ್ ಬಾಸ್ ಮನೆಯಿಂದ ಹೊರ ಹೋದರು. ಏಕಾಏಕಿ ಇಬ್ಬರು ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ದು ಪ್ರತಿಯೊಬ್ಬರಿಗೂ ಶಾಕ್ ಆಗಿತ್ತು. ಇದೀಗ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ಮನೆ ಒಳಗೆ ಇರುವವರು ಸರಿಯಾಗಿ ಇದ್ದಾರಾ? ಈ ಪ್ರಶ್ನೆಯನ್ನು ಕಿಚ್ಚ ಸುದೀಪ್ ಅವರು ಕೇಳಿದ್ದಾರೆ. ಚೈತ್ರಾ ಕುಂದಾಪುರ ಅವರು ಜಗದೀಶ್ ಬಗ್ಗೆ ಆಡಿದ ಅವಾಚ್ಯ ಪದಗಳನ್ನು ಸುದೀಪ್ ಖಂಡಿಸಿದ್ದಾರೆ. ‘ನೀನು ಒಬ್ಬ ಅಪ್ಪನಿಗೆ ಹೊಟ್ಟಿದ್ರೆ..’ ಎಂದು ಚೈತ್ರಾ ಕುಂದಾಪುರ ಅವರು ಹೇಳಿದ್ದರು. ಆ ವಿಚಾರವನ್ನು ಸುದೀಪ್ ಅವರು ಭಾನುವಾರದ ಸಂಚಿಕೆಯಲ್ಲಿ ಪ್ರಶ್ನಿಸಿದರು. ಈ ಬಗ್ಗೆ ಕೇಳುವಾಗ ಚೈತ್ರಾ ಅವರು ತಮ್ಮ ಈ ಹಿಂದಿನ ಮಾತನ್ನು ಮರೆತಂತೆ ನಟಿಸಿದರು. ತಾವು ಅಂಥ ಮಾತನ್ನು ಹೇಳಿಯೇ ಇಲ್ಲವೇನೋ ಎಂಬಂತೆ ಸೈಲೆಂಟ್…
ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಬಿಗ್ ಬಾಸ್ ಅಭಿಮಾನಿಗಳ ನೆಚ್ಚಿನ ರಿಯಾಲಿಟಿ ಶೋ ಆಗಿತ್ತು. ಆದರೆ ಸೀಸನ್ 11 ಮಾತ್ರ ಸಾಕಷ್ಟು ಮಂದಿಯ ವಿರೋಧಕ್ಕೆ ಕಾರಣವಾಗಿದೆ. ಆರಂಭದಿಂದಲೂ ಒಂದಲ್ಲ ಒಂದು ವಿವಾದದ ಮೂಲಕವೇ ಬಿಗ್ ಬಾಸ್ ಸೀಸನ್ 11 ಸದ್ದು ಮಾಡುತ್ತಿದೆ. ಆದರೆ ಕಾರ್ಯಕ್ರಮದ ನಿರೂಪಣೆಯನ್ನು ಅಷ್ಟೇ ನಾಜೂಕಾಗಿ ಮಾಡಿ ಅಭಿಮಾನಿಗಳ ಮನಸ್ಸು ಗೆದಿದ್ದಾರೆ ಕಿಚ್ಚ ಸುದೀಪ್. ಜಗದೀಶ್ ಅವರನ್ನು ಮಿಡ್ ವೀಕ್ನಲ್ಲೇ ಹೊರಗೆ ಹಾಕಲಾಗಿದೆ. ರಂಜಿತ್ ಕೂಡ ನಿಯಮ ಉಲ್ಲಂಘಿಸಿ ಎಲಿಮಿನೇಟ್ ಆಗಿದ್ದಾರೆ. ಆದರೆ ತಮಗೆ ಇನ್ನೊಂದು ಅವಕಾಶ ಬೇಕು ಎಂದು ಜಗದೀಶ್ ಮನವಿ ಮಾಡಿದ್ದು ಇದಕ್ಕೆ ಸುದೀಪ್ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ. ಬಿಗ್ ಬಾಸ್ ಮನೆಯ ಮೂಲ ನಿಯಮಗಳನ್ನು ಉಲ್ಲಂಘಿಸಿ ಎಲಿಮಿನೇಟ್ ಆದವರನ್ನು ಮತ್ತೆ ವೇದಿಕೆಗೆ ಕರೆಸಿ ಸುದೀಪ್ ಅವರು ಮಾತನಾಡುವುದಿಲ್ಲ. ಆದರೆ ಈ ಬಾರಿ ಜಗದೀಶ್ ಅವರನ್ನು ವಿಡಿಯೋ ಕಾಲ್ ಮೂಲಕ ಸುದೀಪ್ ಅವರು ಮಾತನಾಡಿಸಿದರು. ತಾವು ಮಾಡಿದ ತಪ್ಪಿಗೆ ಜಗದೀಶ್ ಅವರು ಕ್ಷಮೆ ಕೇಳಿದ್ದಾರೆ.…
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಾಯಿ ಸರೋಜ ಅನಾರೋಗ್ಯದಿಂದ ಇಂದು ಬೆಳಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸರೋಜ ಅವರು ಚಿಕತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. ಇದರ ಬೆನ್ನಲ್ಲೇ ಕಿಚ್ಚ ಸುದೀಪ್ ಅವರು ತಮ್ಮ ತಾಯಿ ಜತೆಗೆ ಕಳೆದಿರುವ ಸಂತಸದ ಕ್ಷಣಗಳ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸುದೀಪ್ ಅವರಿಗೆ ತಂದೆ ತಾಯಿ ಎಂದರೆ ತುಂಬಾ ಪ್ರೀತಿ. ಅದರಲ್ಲೂ ತಾಯಿ ಮೇಲೆ ಪ್ರೀತಿ ತುಸು ಹೆಚ್ಚಾಗಿಯೇ ಇದೆ. ಕೆಲವು ದಿನಗಳ ಹಿಂದೆಯಷ್ಟೇ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ತೆರಳಿದ್ದು ಸುದೀಪ್ ಈ ವೇಳೆ ತಮ್ಮ ತಾಯಿಯ ಕುರಿತು ಮಾತನಾಡಿದ್ದರು. ಕಿಚ್ಚ ಸುದೀಪ್ ಅವರ ತಾಯಿ ಮೂಲತಃ ಮಂಗಳೂರಿನವರು. ಈ ಬಗ್ಗೆ ಸ್ವತಃ ಕಿಚ್ಚ ಅವರು ಹೇಳಿಕೊಂಡಿದ್ದರು. ಶಿವಮೊಗ್ಗ ಜಿಲ್ಲೆಯ ಸಂಜೀವ್ ಮಂಜಪ್ಪ ಸುದೀಪ್ ತಂದೆ. ಸುದೀಪ್ ತಂದೆ ಸಂಜೀವ್ ಮಂಜಪ್ಪ ಅವರು ಹೋಟೆಲ್ ಉದ್ಯಮದ ಜತೆಗೆ ಸಿನಿಮಾ ನಿರ್ಮಾಪರಾಗಿಯೂ ಖ್ಯಾತಿ ಪಡೆದಿದ್ದರು. ಸುದೀಪ್ ಅವರಿಗೆ ಸುಜಾತಾ…
ಖಲಿಸ್ತಾನಿ ಉಗ್ರ ಹಾಗೂ ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ ಬಳಿಕ ಭಾರತ ಹಾಗೂ ಕೆನಡಾ ನಡುವಿನ ರಾಜತಾಂತ್ರಿಕ ಸಂಘರ್ಷ ಹೆಚ್ಚಾಗಿದೆ. ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸುವ ಅಥವಾ ಕೆನಡಿಯನ್ನರ ಜೀವನವನ್ನು ಅಪಾಯಕ್ಕೆ ಸಿಲುಕಿಸುವ ಯಾವುದೇ ರಾಜತಾಂತ್ರಿಕರನ್ನು ಸರ್ಕಾರ ಸಹಿಸುವುದಿಲ್ಲ ಎಂದು ಹೇಳಿರುವ ಕೆನಡಾ ಭಾರತವನ್ನು ರಷ್ಯಾಗೆ ಹೋಲಿಕೆ ಮಾಡಿದೆ. ಒಟ್ಟಾವಾದಲ್ಲಿರುವ ಭಾರತೀಯ ಹೈಕಮಿಷನರ್ ಸಿಖ್ ನಿಜ್ಜರ್ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂಬುದು ಗೊತ್ತಾದ ಬಳಿಕ ಭಾರತೀಯ ರಾಜತಾಂತ್ರಿಕರಿಗೆ ಸ್ಪಷ್ಟವಾಗಿ ಸೂಚನೆ ನೀಡಲಾಗಿದೆ ಕೆನಡಾದ ವಿದೇಶಾಂಗ ವ್ಯವಹಾರಗಳ ಸಚಿವೆ ಮೆಲಾನಿ ಜೋಲಿ ಅವರು ಹೇಳಿದ್ದಾರೆ. ಅಲ್ಲದೆ, ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸುವ ಅಥವಾ ಕೆನಡಿಯನ್ನರ ಜೀವನವನ್ನು ಅಪಾಯಕ್ಕೆ ಸಿಲುಕಿಸುವ ಯಾವುದೇ ರಾಜತಾಂತ್ರಿಕರನ್ನು ಸರ್ಕಾರ ಸಹಿಸುವುದಿಲ್ಲ ಎಂದು ಇದೇ ವೇಳೆ ಎಚ್ಚರಿಕೆ ನೀಡಿದ್ದಾರೆ. ಭಾರತೀಯ ರಾಜತಾಂತ್ರಿಕರು ಕೆನಡಾದಲ್ಲಿ ನರಹತ್ಯೆಗಳು, ಕೊಲೆ ಬೆದರಿಕೆಗಳು ಮತ್ತು ಬೆದರಿಕೆಗಳಿಗೆ ಸಂಬಂಧಿಸಿದಂತೆ ಕೆನಡಾದ ರಾಷ್ಟ್ರೀಯ ಪೊಲೀಸ್ ಪಡೆ ಗಮನಿಸುತ್ತಿದೆ. ನಮ್ಮ ಇತಿಹಾಸದಲ್ಲಿ ನಾವು ಇಂತಹದ್ದನ್ನು ನೋಡಿಲ್ಲ. ಕೆನಡಾದ ನೆಲದಲ್ಲಿ ಆ ಮಟ್ಟದ…
ನನ್ನನ್ನು ಹತ್ಯೆ ಮಾಡಲು ಯತ್ನಿಸಿ ಹಿಜ್ಬುಲ್ಲಾ ಸಂಘಟನೆ ದೊಡ್ಡ ತಪ್ಪು ಮಾಡಿದೆ. ಇದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಇಸ್ರೇಲ್ ಕರಾವಳಿಯ ಕೆಸರಿಯಾ ನಗರದಲ್ಲಿರುವ ತಮ್ಮ ಖಾಸಗಿ ನಿವಾಸದ ಮೇಲೆ ಹಿಜ್ಬುಲ್ಲಾ ನಡೆಸಿದ ಡ್ರೋನ್ ದಾಳಿಯ ಬಗ್ಗೆ ಕುರಿತು ನೆತನ್ಯಾಹು ಅವರು ಪ್ರತಿಕ್ರಿಯೆ ನೀಡಿದ್ದಾರೆ. ದಾಳಿ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ನೆತನ್ಯಾಹು, ಹಿಜ್ಬುಲ್ಲಾ ಸಂಘಟನೆಯನ್ನು “ಇರಾನ್ ನ ಪ್ರಾಕ್ಸಿ” ಎಂದು ಉಲ್ಲೇಖಿಸಿದ್ದಾರೆ. ನನ್ನ ಮೇಲಿನ ಈ ಹತ್ಯೆ ಪ್ರಯತ್ನವು ನನ್ನನ್ನಾಗಲೀ ಅಥವಾ ಇಸ್ರೇಲ್ ಯುದ್ಧವನ್ನು ಮುಂದುವರೆಸುವುದನ್ನಾಗಲೀ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. “ನನ್ನನ್ನು ಮತ್ತು ನನ್ನ ಪತ್ನಿಯನ್ನ ಹತ್ಯೆ ಮಾಡಲು ಇರಾನ್‌ನ ಪ್ರಾಕ್ಸಿ ಹಿಜ್ಬುಲ್ಲಾ ನಡೆಸಿದ ಪ್ರಯತ್ನವು ಒಂದು ದೊಡ್ಡ ತಪ್ಪು. ಇದು ನಮ್ಮ ಭವಿಷ್ಯವನ್ನು ಭದ್ರಪಡಿಸುವ ಸಲುವಾಗಿ ನಮ್ಮ ಶತ್ರುಗಳ ವಿರುದ್ಧ ನಮ್ಮ ನ್ಯಾಯಯುತ ಯುದ್ಧವನ್ನು ಮುಂದುವರಿಸುವುದರಿಂದ ನನ್ನನ್ನಾಗಲೀ ಅಥವಾ ಇಸ್ರೇಲ್ ರಾಷ್ಟ್ರವನ್ನಾಗಲೀ ತಡೆಯಲು ಸಾಧ್ಯವಿಲ್ಲ ಎಂದು…
ಹಿಂದಿನ ಸೀಸನ್ ಗಳಿಗೆ ಕಂಪೇರ್ ಮಾಡಿದರೆ ಬಿಗ್ ಬಾಸ್ ಸೀಸನ್ 11 ಹೆಚ್ಚು ಸುದ್ದಿಯಾಗುತ್ತಿದೆ. ಆರಂಭದಿಂದಲೇ ಈ ರಿಯಾಲಿಟಿಶೋ ವಿವಾದದ ಮೂಲಕವೇ ಸದ್ದು ಮಾಡುತ್ತಿದೆ. ಬಿಗ್ ಬಾಸ್ ಸೀಸನ್ 11 ವಿರುದ್ಧ ಸಾಕಷ್ಟು ಮಂದಿ ಆಕ್ರೋಶ ಹೊರ ಹಾಕಿದ್ದಾರೆ. ಜಗದೀಶ್ ಅವರು ಮಿತಿಮೀರಿದ ವರ್ತನೆಯೆ ಇದಕ್ಕೆ ಕಾರಣವಾಗಿದ್ದು ಜಗದೀಶ್ ಅವರನ್ನು ಮನೆಯಿಂದ ಹೊರಗೆ ಕಳುಹಿಸಲಾಗಿದೆ. ಜಗದೀಶ್ ಅವರನ್ನು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಮಾಡಿರುವುದು ಗೊತ್ತೇ ಇದೆ. ಅವರನ್ನು ಬಿಗ್ ಬಾಸ್ ಅವರೇ ಎಲಿಮಿನೇಟ್ ಮಾಡಿದ್ದಾರೆ. ಇದು ನಿಜಕ್ಕೂ ಶಾಕಿಂಗ್ ಆಗಿದೆ. ಮಹಿಳಾ ಸ್ಪರ್ಧಿಗಳ ವಿರುದ್ಧ ಅವರು ಅವಾಚ್ಯ ಶಬ್ದ ಬಳಕೆ ಮಾಡಿದ್ದರು. ಇದರಿಂದ ಅವರು ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು. ಅವರು ಎಲಿಮಿನೇಟ್ ಆಗಿದ್ದು, ಮತ್ತೆ ಬರಬೇಕು ಎನ್ನುವ ಕೂಗು ಇದೆ. ಅವರು ಬರುತ್ತಾರೆ ಎಂದು ಅನೇಕರು ಅಂದುಕೊಂಡಿದ್ದು ಇದಕ್ಕೆ ಸುದೀಪ್ ಸ್ಪಷ್ಟನೆ ನೀಡಿದ್ದಾರೆ. ಅಕ್ಟೋಬರ್ 19ರ ಎಪಿಸೋಡ್ನಲ್ಲಿ ಸುದೀಪ್ ಅವರು ಮನೆಯವರಿಗೆ ಒಂದಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದರು. ಈ ಪ್ರಶ್ನೆಗಳು ಮನೆಯವರು…