ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ, ತರುಣ್ ಸುಧೀರ್ ನಿರ್ದೇಶನದ ಕಾಟೇರ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಸಿನಿಮಾ ರಿಲೀಸ್ ಆಗಿ ತಿಂಗಳು ಕಳೆದಿದ್ರು ಇಂದಿಗೂ ಕಾಟೇರನ ಕ್ರೇಜ್ ಹಾಗೆಯೇ ಇದೆ. ಇದೇ ಖುಷಿಯಲ್ಲಿ ಚಿತ್ರತಂಡ ಟೆಂಪಲ್ ರನ್ ಮಾಡುತ್ತಿದೆ. ಇತ್ತೀಚೆಗೆ ನಿರ್ದೇಶನ ತರುಣ್ ಸುಧೀರ್ ಕೊರಗಜ್ಜನ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದರು. ಜೊತೆಗೆ ಧರ್ಮಸ್ಥಳಕ್ಕೂ ತೆರಳಿ ಮಂಜುನಾಥನ ಆಶೀರ್ವಾದ ಬೇಡಿದ್ದರು. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಿರುಪತಿಗೆ ತೆರಳಿದ್ದಾರೆ. ಮುಂದಿನ ವಾರದ ದರ್ಶನ್ ಅವರ ಹುಟ್ಟು ಹಬ್ಬ. ಅದಕ್ಕೂ ಮುನ್ನ ಅವರು ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಹುಟ್ಟು ಹಬ್ಬ ಮತ್ತು ಕಾಟೇರ ಸಿನಿಮಾದ ಸಕ್ಸಸ್ ಪ್ರಯುಕ್ತವಾಗಿ ದೇವಸ್ಥಾನಕ್ಕೆ ತೆರಳಿದ್ದಾರೆ ಎನ್ನಲಾಗುತ್ತಿದೆ. ಎಂದಿನಂತೆ ಈ ಭಾರಿಯೂ ದರ್ಶನ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸಂದೇಶವೊಂದನ್ನು ಕಳುಹಿಸಿದ್ದಾರೆ. ತಮ್ಮ ಹುಟ್ಟುಹಬ್ಬಕ್ಕೆ ಯಾರು ಕೇಕ್, ಹಾರು, ತುರಾಯಿ ತರಬೇಡಿ. ಬದಲಾಗಿ ದವಸ ಧಾನ್ಯಗಳನ್ನು ನೀಡುವಂತೆ ಕೇಳಿದ್ದಾರೆ. ಅನಾಥಾಶ್ರಮಗಳಿಗೆ ಅಕ್ಕಿ, ಬೆಳೆ,…
Author: Author AIN
ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಇಂದು ರಾಮ ಜನ್ಮ ಭೂಮಿ ಅಯೋಧ್ಯೆಗೆ ಭೇಟಿ ನೀಡಿ ಬಾಲರಾಮನ ದೇವರ ದರ್ಶನ ಪಡೆಡಿದ್ದಾರೆ. ಸದ್ಯ ಅಮಿತಾಬ್ ಬಚ್ಚನ್ ಅಯೋಧ್ಯೆಗೆ ಭೇಟಿ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಯೋಧ್ಯೆಯಲ್ಲಿ ಬಾಲರಾಮ ನೆಲೆ ನಿಂತ ಬಳಿಕ ನಿತ್ಯ ಸಾವಿರಾರು ಭಕ್ತರು ರಾಮನ ದರ್ಶನ ಪಡೆಯಲು ಆಗಮಿಸುತ್ತಿದ್ದಾರೆ. ಇದೀಗ ಅಮಿತಾಭ್ ಬಚ್ಚನ್, ಬಾಲರಾಮ ದೇವರ ದರ್ಶನ ಪಡೆದಿದ್ದಾರೆ. ಸಿಐಎಸ್‌ಎಫ್ ಬಿಗಿ ಭದ್ರತೆಯಲ್ಲಿ ಆಗಮಿಸಿದ್ದ ಬಿಗ್ ಬಿ ಗರ್ಭಗುಡಿ ಮುಂಭಾಗದಲ್ಲಿ ನಿಂತು ರಾಮಲಲ್ಲಾನ ದರ್ಶನ ಪಡೆದಿದ್ದಾರೆ. ಬಳಿಕ ರಾಮ ಮಂದಿರದಲ್ಲಿ ಧ್ಯಾನ ಮಾಡಿ ತೆರಳಿದ್ದಾರೆ. ಬಿಗ್ ಬಿ ಅವರು ಅಯೋಧ್ಯೆಯಲ್ಲಿ 14.50 ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನು ಖರೀದಿಸಿದ್ದಾರೆ.
ಸಿಂಗಪುರ: ಸಿಂಗಪುರದಲ್ಲಿ ಚೀನಾದ ಜನತೆ ಹೊಸವರ್ಷ ‘ಡ್ರ್ಯಾಗನ್’ ಸ್ವಾಗತಕ್ಕೆ ಸಜ್ಜಾಗಿದ್ದಾರೆ. ಈ ವರ್ಷದಲ್ಲಿ ಮಕ್ಕಳು ಹುಟ್ಟಿದರೆ ಮಂಗಳಕರ ಎನ್ನುವ ನಂಬಿಕೆ ಅಲ್ಲಿನ ಜನಗಳಲ್ಲಿ ಇದೆ. ಈ ಕಾರಣಕ್ಕೆ ಪ್ರಧಾನ ಮಂತ್ರಿ ಲೀ ಸಿಯೆನ್ ಲೂಂಗ್ ಈ ವರ್ಷ ಮಕ್ಕಳನ್ನು ಪಡೆಯುವಂತೆ ಸಿಂಗಪುರದ ದಂಪತಿಗಳಿಗೆ ಸಲಹೆ ನೀಡಿದ್ದಾರೆ. ಚೀನಾ ಹೊಸ ವರ್ಷದ ವಾರ್ಷಿಕ ಸಂದೇಶ ನೀಡುವ ವೇಳೆ ಮಾತನಾಡಿದ ಲೀ, ‘ಡ್ರ್ಯಾಗನ್ ವರ್ಷ ಎನ್ನುವುದು ಶಕ್ತಿ ಮತ್ತು ಅದೃಷ್ಟದ ಸಂಕೇತ. ಹಾಗಾಗಿ ಯುವ ಜೋಡಿಗಳು ನಿಮ್ಮ ಕುಟುಂಬಕ್ಕೆ ‘ಪುಟ್ಟ ಡ್ರ್ಯಾಗನ್’ ಅನ್ನು ಸೇರಿಸಿಕೊಳ್ಳಲು ಇದು ಉತ್ತಮ ಸಮಯವಾಗಿದೆ. ಕುಟುಂಬಕ್ಕೆ ನಮ್ಮ ಸರ್ಕಾರ ಬೆಂಬಲವಿದೆ’ ಎಂದಿದ್ದಾರೆ. ನಾವು ‘ಸಿಂಗಪುರ್ ಮೇಡ್ ಫಾರ್ ಫ್ಯಾಮಿಲಿಸ್’ ಅನ್ನು ನಿರ್ಮಿಸುತ್ತೇವೆ. ಮುಂದೆಯೂ ನಿಮ್ಮ ಮದುವೆ ಮತ್ತು ಪೋಷಕತ್ವದ ಆಕಾಂಕ್ಷೆಗಳನ್ನು ಬೆಂಬಲಿಸುತ್ತೇವೆ ಎಂದು ಲೀ ಹೇಳಿದ್ದಾರೆ. ಸಾಕಷ್ಟು ದಂಪತಿ ತಮ್ಮದೇ ಆದ ಕಾರಣಗಳಿಗಾಗಿ ಮಕ್ಕಳನ್ನು ಯಾವಾಗ ಪಡೆಯಬೇಕು ಎಂದು ನಿರ್ಧರಿಸುತ್ತಾರೆ. ಆದರೆ ಹೆಚ್ಚಿನವರು ತಂದೆಯಾಗುವ ಅನುಭವವನ್ನು ಬೇಗ ಪಡೆಯಲಿ ಎಂದು ಆಶಿಸುತ್ತೇನೆ…
ಒಂದೇ ಒಂದು ಸಿನಿಮಾದ ಮೂಲಕ ರಾತ್ರೋ ರಾತ್ರಿ ಸಖತ್ ಫೇಮಸ್ ಆದ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ದೂಳೆಬ್ಬಿಸ್ತಿದ್ದಾರೆ. ಆಗಾಗ ಸಖತ್ ಬೋಲ್ಡ್ ಆಗಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ನಟಿ ಅಭಿಮಾನಿಗಳ ನಿದ್ದೆ ಕದ್ದಿದ್ದಾರೆ. ಇದೀಗ ಪ್ರಿಯಾ ನೀರಿಗಿಳಿದು ಸಖತ್ತಾಗೆ ಫೋಸ್ ನೀಡಿದ್ದಾರೆ. ನಟಿಯ ಬ್ಯೂಟಿಗೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ಕೇರಳ ಶೈಲಿಯ ಸೀರೆ ಧರಿಸಿ ನೀರಿಗಿಳಿದ ಪ್ರಿಯಾ ಕ್ಯಾಮೆರಾಗೆ ಸಖತ್ತಾಗೆ ಫೋಸ್ ನೀಡಿದ್ದಾರೆ. ಸೀರೆಯುಟ್ಟು ನದಿಗೆ ಇಳಿದಿರುವ ಪ್ರಿಯಾ ಮಾದಕವಾಗಿ ಫೋಸ್ ನೀಡಿದ್ದಾರೆ. ನಟಿಯ ಫೋಟೋಗಳು ಸಾಮಾಜಿಕ ಜಾಲಾ ತಾಣದಲ್ಲಿ ವೈರಲ್ ಆಗಿದೆ. ಪ್ರಿಯಾ ಪ್ರಕಾಶ್ ವಾರಿಯರ್ ಮಲಯಾಳಂ ಚಿತ್ರರಂಗದ ನಟಿ. ಮಲಯಾಳಂನ `ಒರು ಅದಾರ್ ಲವ್’ ಚಿತ್ರದಿಂದ ಸಿನಿಜೀವನ ಆರಂಭಿಸಿದ ಈಕೆ ಒಂದು ಕಣ್ಸನ್ನೆ ದೃಶ್ಯದಿಂದ ಸಖತ್ ಪ್ರಸಿದ್ಧಿಯಾದರು. ಕಣ್ಸನೆ ಮೂಲಕ ಫೇಮಸ್ ಆಗಿರುವ ನಟಿಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ. 7.5 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಪ್ರಿಯಾ ಇಲ್ಲಿಯವರಗೆ 524 ಪೋಸ್ಟ್…
ತಮಿಳು ಚಿತ್ರರಂಗದ ಸ್ಟಾರ್ , ರಜನಿಕಾಂತ್ ಮಾಜಿ ಅಳಿಯ ಧನುಷ್ ಪತ್ನಿ ಐಶ್ವರ್ಯ ರಿಂದ ದೂರವಾಗಿ ಕೆಲ ವರ್ಷಗಳೆ ಕಳೆದಿದೆ. ಇಬ್ಬರು ದೂರ ದೂರವಾಗಿ ಜೀವನ ನಡೆಸುತ್ತಿದ್ದಾರೆ. ಈ ಮಧ್ಯೆ ಐಶ್ವರ್ಯ ರಜನಿಕಾಂತ್ ನಿರ್ದೇಶದ ರಜನಿಕಾಂತ್ ನಟನೆಯ ಲಾಲ್ ಸಿನಿಮಾ ಇಂದು ರಿಲೀಸ್ ಆಗಿದ್ದು ಧನುಷ್ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಐಶ್ವರ್ಯಾ ರಜನೀಕಾಂತ್ ನಿರ್ದೇಶನದ ‘ಲಾಲ್ ಸಲಾಂ’ ಸಿನಿಮಾ ಇಂದು ಬಿಡುಗಡೆ ಆಗಿದೆ. ಚಿತ್ರದಲ್ಲಿ ರಜನಿಕಾಂತ್ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಸುಮಾರು 40 ನಿಮಿಷಗಳ ಕಾಲ ರಜನಿಕಾಂತ್ ತೆರೆಮೇಲೆ ಕಾಣಿಸಿಕೊಂಡಿದ್ದು ಚಿತ್ರಕ್ಕೆ ಬರೋಬ್ಬರಿ ಸಂಭಾವನೆಯನ್ನೇ ಪಡೆದುಕೊಂಡಿದ್ದಾರೆ. ಮಾಜಿ ಮಾವನ ಚಿತ್ರ ಎನ್ನುವ ಕಾರಣಕ್ಕೆ ಈ ಚಿತ್ರಕ್ಕೆ ಧನುಷ್ ಶುಭಾಶಯ ತಿಳಿಸಿದ್ದಾರೆ. ರಜನಿಕಾಂತ್ ಅವರನ್ನು ಕಂಡರೆ ಧನುಷ್ಗೆ ಅಪಾರ ಗೌರವ ಇದೆ. ಐಶ್ವರ್ಯಾ ಜೊತೆ ವಿಚ್ಛೇದನ ಪಡೆದರೂ ಅವರು ರಜನಿಕಾಂತ್ ಜೊತೆ ಇರುವ ಬಾಂಧವ್ಯವನ್ನು ಕಡಿದುಕೊಂಡಿಲ್ಲ. ಈ ಕಾರಣದಿಂದ ಅವರು ರಜನಿಕಾಂತ್ ಚಿತ್ರಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಆದರೆ, ಎಲ್ಲಿಯೂ ಅವರು ಪತ್ನಿ…
ಉತ್ತಮ ಗುಣಮಟ್ಟದ ಲ್ಯಾಪ್ ಟಾಪ್ ಖರೀದಿಸಬೇಕು ಅನ್ನೋದು ಪ್ರತಿಯೊಬ್ಬರ ಕನಸಾಗಿರುತ್ತೆ. ಆದರೆ ಅದೆಷ್ಟೋ ಜನರಿಗೆ ಅದು ಸಾಧ್ಯವಾಗಿರೋದಿಲ್ಲ. ಆದರೆ ಇದೀಗ ಜನಪ್ರಿಯ ಲ್ಯಾಪ್‌ಟಾಪ್ ತಯಾರಕ ಕಂಪೆನಿಗಳಲ್ಲಿ ಒಂದಾದ ಆಸುಸ್ ಭಾರತದಲ್ಲಿ ಹೊಸ ಕ್ರೋಮ್‌ಬುಕ್ ಲ್ಯಾಪ್‌ಟಾಪ್ ಬಿಡುಗಡೆ ಮಾಡಿದೆ ಇದು ನಿಮ್ಮ ಬಜೆಟ್ ಫ್ರೆಂಡ್ಲಿ ಆಗಿರಲಿದೆ. ಆಸುಸ್ ಬಿಡುಗಡೆ ಮಾಡಿರುವ ಈ ಲ್ಯಾಪ್ ಟಾಪ್ ಗೆ ಸುಸ್ ಕ್ರೋಮ್‌ಬುಕ್ CM14 ಎಂದು ಹೆಸರಿಸಲಾಗಿದೆ. ಇನ್ನು ಈ ಲ್ಯಾಪ್‌ಟಾಪ್ MediaTek Kompanio ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದೆ. ಸುಸ್ ಕ್ರೋಮ್‌ಬುಕ್ CM14 ಲ್ಯಾಪ್‌ಟಾಪ್ ಮಿಲಿಟರಿ ದರ್ಜೆಯ ರಕ್ಷಣೆಯೊಂದಿಗೆ ಬರುತ್ತದೆ ಎಂದು ಹೇಳಲಾಗಿದೆ. ಇದು ಮೆಟಾಲಿಕ್ ಚಾಸಿಸ್ 180-ಡಿಗ್ರಿ ‘ಲೇ-ಫ್ಲಾಟ್’ ಹಿಂಗ್ಡ್ ಡಿಸ್‌ಪ್ಲೇಯನ್ನು ಹೊಂದಿದೆ. ಬಳಕೆದಾರರಿಗೆ ಸ್ನೇಹಿತರು ಮತ್ತು ಗೆಳೆಯರೊಂದಿಗೆ ಸುಲಭವಾದ ವಿಷಯ ಮತ್ತು ಕಲ್ಪನೆಯನ್ನು ಹಂಚಿಕೊಳ್ಳುವ ಅವಕಾಶಗಳನ್ನು ನೀಡುತ್ತದೆ. ಆಸುಸ್ ಕ್ರೋಮ್‌ಬುಕ್ CM14 ಲ್ಯಾಪ್‌ಟಾಪ್ 14 ಇಂಚಿನ ಫುಲ್ ಹೆಚ್‌ಡಿ ಆಂಟಿ-ಗ್ಲೇರ್ ನಾನ್-ಟಚ್ LCD ಸ್ಕ್ರೀನ್ ಹೊಂದಿದೆ. ಈ ಡಿಸ್‌ಪ್ಲೇಯು 1,920 x 1,080 ಪಿಕ್ಸೆಲ್…
ನಟನೆಯ ಜೊತೆಗೆ ನಿರ್ದೇಶಕನಾಗಿಯೂ ಗುರುತಿಸಿಕೊಂಡಿರುವ ಯುವ ನಟ ಕಂ ನಿರ್ದೇಶಕ ಅಭೀಷೇಕ್ ಶೆಟ್ಟಿ ಇದೀಗ ನಿಶ್ಚಿತಾರ್ಥದ ಸಂಭ್ರಮದಲ್ಲಿದ್ದಾರೆ. ಅಭೀಷೇಕ್ ನಮ್ ಗಣಿ ಬಿಕಾಂ ಪಾಸ್, ಗಜಾನನ & ಗ್ಯಾಂಗ್ ಚಿತ್ರದಲ್ಲಿ ನಿರ್ದೇಶನದ ಜೊತೆಗೆ ನಟನಾಗಿಯೂ ಕಾಣಿಸಿಕೊಂಡಿದ್ದಾರೆ. ಅಭಿಷೇಕ್ ‘ಆರಾಮ್ ಅರವಿಂದ ಸ್ವಾಮಿ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ. ಇತ್ತೀಚೆಗಷ್ಟೇ ಕುಂದಾಪುರದಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಸಾಕ್ಷಾ ಶೆಟ್ಟಿ ಎಂಬುವವರ ಜೊತೆ ಅಭಿಷೇಕ್ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಸಾಕ್ಷಾ ಶೆಟ್ಟಿ ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಫೈನಾನ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ವರ್ಷದ ಕೊನೆಯಲ್ಲಿ ಅಂದರೆ ಡಿಸೆಂಬರ್ 8ರಂದು ಕುಂದಾಪುರದಲ್ಲಿ ಅಭಿಷೇಕ್ ಹಾಗೂ ಸಾಕ್ಷಾ ಹಸೆಮಣೆ ಏರಲಿದ್ದಾರೆ. ಹೊಸ ಬಾಳಿಗೆ ಕಾಲಿಡಲು ಸಜ್ಜಾಗಿರುವ ನವ ಜೋಡಿಗೆ ಚಿತ್ರರಂಗದವರು ಹಾಗೂ ಸ್ನೇಹಿತರು ಶುಭ ಹಾರೈಸಿದ್ದಾರೆ.
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ನಿನ್ನೆ ಅಂದರೆ ಗುರುವಾರ ಸಾರ್ವತ್ರಿಕ ಚುನಾವಣೆ ನಡೆದಿದೆ. ಈ ವೇಳೆ ಭಯೋತ್ಪಾದಕರು ದಾಳಿ ನಡೆಸಿದ್ದು ದಾಳಿಯಲ್ಲಿ 10 ಭದ್ರತಾ ಸಿಬ್ಬಂದಿ ಸೇರಿದಂತೆ ಕನಿಷ್ಠ 12 ಜನರು ನಿಧನರಾಗಿದ್ದಾರೆ. ಆದರೆ ಮತದಾನಕ್ಕೆ ಅಡ್ಡಿಪಡಿಸುವ ಭಯೋತ್ಪಾದಕರ 51 ದಾಳಿಗಳನ್ನು ಭದ್ರತಾ ಪಡೆಗಳು ವಿಫಲಗೊಳಿಸಿವೆ. ಈ ದಾಳಿಗಳಲ್ಲಿ ಹೆಚ್ಚಿನವು ಖೈಬರ್-ಪಖ್ತುಂಖ್ವಾ ಮತ್ತು ಬಲೂಚಿಸ್ತಾನ್ ಪ್ರಾಂತ್ಯಗಳಲ್ಲಿ ನಡೆದಿವೆ ಕಾರ್ಯಾಚರಣೆಯಲ್ಲಿ ಐವರು ಭಯೋತ್ಪಾದಕರೂ ಹತರಾಗಿದ್ದಾರೆ ಎಂದು ಸೇನೆ ಹೇಳಿಕೆ ಬಿಡುಗಡೆ ಮಾಡಿದೆ. ದಾಳಿಯಲ್ಲಿ ಭದ್ರತಾ ಪಡೆಗಳು ಮತ್ತು ಕಾನೂನು ಜಾರಿ ಸಂಸ್ಥೆಗಳ 10 ಸಿಬ್ಬಂದಿ ಸೇರಿದಂತೆ 12 ಜನರು ಸಾವನ್ನಪ್ಪಿದ್ದಾರೆ ಮತ್ತು 39 ಮಂದಿ ಗಾಯಗೊಂಡಿದ್ದಾರೆ ಎಂದು ಸೇನೆ ಮಾಹಿತಿ ಹಂಚಿಕೊಂಡಿದೆ.
ಕಳೆದ ಸಾಕಷ್ಟು ಸಮಯದಿಂದ ರಷ್ಯಾದಲ್ಲಿ ಯುದ್ಧ ನಡೆಯುತ್ತಿದೆ. ಈ ಯುದ್ಧದ ಮಧ್ಯೆಯೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದು, ಉಕ್ರೇನ್ ಸೇನಾ ಮುಖ್ಯಸ್ಥ ವ್ಯಾಲೆರಿ ಜಲುಜ್ನಿ ಅವರನ್ನು ತೆಗೆದುಹಾಕಿದ್ದಾರೆ. ಇದೀಗ ವ್ಯಾಲೆರಿ ಸ್ಥಾನಕ್ಕೆ ಗ್ರೌಂಡ್ ಫೋರ್ಸ್ ಕಮಾಂಡರ್ ಒಲೆಕ್ಸಾಂಡರ್ ಸಿರ್ಸ್ಕಿಯನ್ನು ನೇಮಿಸಿದ್ದಾರೆ. ಸುಮಾರು ಎರಡು ವರ್ಷಗಳ ಯುದ್ಧದ ನಂತರ ಉಕ್ರೇನ್‌ನ ಸೇನಾ ನಾಯಕತ್ವದಲ್ಲಿ ಇದು ಪ್ರಮುಖ ಬದಲಾವಣೆಯಾಗಿದೆ. ಇಂದಿನಿಂದ ಹೊಸ ನಿರ್ವಹಣಾ ತಂಡವು ಉಕ್ರೇನ್ ಸಶಸ್ತ್ರ ಪಡೆಗಳ ನಾಯಕತ್ವವನ್ನು ವಹಿಸಿಕೊಳ್ಳಲಿದೆ. ನಾನು ಕರ್ನಲ್-ಜನರಲ್ ಸಿರ್ಸ್ಕಿಯನ್ನು ಉಕ್ರೇನ್ ಸಶಸ್ತ್ರ ಪಡೆಗಳ ಕಮಾಂಡರ್-ಇನ್-ಚೀಫ್ ಆಗಿ ನೇಮಿಸಿದ್ದೇನೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ. ಉಕ್ರೇನ್ ಸಶಸ್ತ್ರ ಪಡೆಗಳಿಗೆ ಯಾವ ರೀತಿಯ ನವೀಕರಣದ ಅಗತ್ಯವಿದೆ ಎಂದು ನಾವು ಚರ್ಚಿಸಿದ್ದೇವೆ. ಉಕ್ರೇನ್ ಸಶಸ್ತ್ರ ಪಡೆಗಳ ಹೊಸ ನಾಯಕತ್ವದಲ್ಲಿ ಯಾರು ಇರಬಹುದೆಂದು ನಾವು ಚರ್ಚಿಸಿದ್ದೇವು. ಈಗ ನವೀಕರಣದ ಸಮಯ ಬಂದಿದೆ ಎಂದಿದ್ದದಾರೆ.
ಪುಷ್ಪ ಸಿನಿಮಾದ ಬಳಿಕ ನಟಿ ರಶ್ಮಿಕಾ ಮಂದಣ್ಣ ಸಖತ್ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕೊಡಗಿನ ನಟಿ ಇದೀಗ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸದ್ಯ ರಶ್ಮಿಕಾ ಹಾಗೂ ರಣಬೀರ್ ಕಪೂರ್ ನಟನೆಯ ಅನಿಮಲ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಇದೇ ಕಾರಣಕ್ಕೆ ರಶ್ಮಿಕಾ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಆಕೆ ಕೋಟಿ ಕೋಟಿ ಕೇಳುತ್ತಿದ್ದರು ನಿರ್ಮಾಪಕರು ಮಾತ್ರ ಆಕೆಯ ಹಿಂದೆಯೇ ಬಿದ್ದಿದ್ದಾರೆ. ಸದ್ಯ ರಶ್ಮಿಕಾ ಡಾರ್ಲಿಂಗ್ ಪ್ರಭಾಸ್ ಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ‘ಅನಿಮಲ್’ ಸಿನಿಮಾದಿಂದ ಸಂದೀಪ್ ಹಾಗೂ ರಶ್ಮಿಕಾ ಒಂದಾಗಿದ್ದಾರೆ. ಹೀಗಾಗಿಯೇ ಸಂದೀಪ್ ಹೊಸ ಚಿತ್ರಕ್ಕೆ ಕನ್ನಡದ ನಟಿ ರಶ್ಮಿಕಾ ನಾಯಕಿ ಎಂದೇ ಹೇಳಲಾಗುತ್ತಿದೆ. ರಶ್ಮಿಕಾ ನಟನೆಯ ಫಿದಾ ಆಗಿರುವ ಸಂದೀಪ್ ರೆಡ್ಡಿ ವಂಗಾ ಮತ್ತೊಮ್ಮೆ ಆಕೆಯ ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸೂಪರ್ ಸ್ಟಾರ್ ನಟರಿಗೆ ಜೋಡಿಯಾಗುತ್ತಿರುವ ರಶ್ಮಿಕಾ ಇದೇ ಮೊದಲ ಭಾರಿಗೆ…