Author: Author AIN

‘ಬಿಗ್ ಬಾಸ್ ಕನ್ನಡ ಓಟಿಟಿ 1 ಸ್ಪರ್ಧಿ, ನಟಿ ಜಯಶ್ರೀ ಆರಾಧ್ಯ ಸದ್ಯ ದುಬೈ ಪ್ರವಾಸದಲ್ಲಿದ್ದ ಅಲ್ಲಿನ ಸುಂದರ ಸ್ಥಳಗಳಲ್ಲಿ ಎಂಜಾಯ್ ಮಾಡ್ತಿದ್ದಾರೆ. ದುಬೈನಲ್ಲಿರುವ ಜಯಶ್ರೀ ಅಲ್ಲಿನ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜಯಶ್ರೀ ಆರಾಧ್ಯ ಆಗಾಗ ಪ್ರವಾಸಕ್ಕೆ ತೆರಳುತ್ತಿರುತ್ತಾರೆ. ಕಳೆದ ವರ್ಷ ಅವರು ಜೈಜಗದೀಶ್ ಪುತ್ರಿ ವೈನಿಧಿ ಜೊತೆಗೆ ಜಯಶ್ರೀ ಆರಾಧ್ಯ ಥೈಲ್ಯಾಂಡ್‌ ಪ್ರವಾಸಕ್ಕೆ ತೆರಳಿದ್ದರು. ಕೆಲ ದಿನಗಳ ಹಿಂದೆ ಗೋವಾ ಪ್ರವಾಸ ಮಾಡಿದ್ದ ಜಯಶ್ರೀ ಇದೀಗ ದುಬೈ ಪ್ರವಾಸ ಎಂಜಾಯ್ ಮಾಡ್ತಿದ್ದಾರೆ. ಕನ್ನಡ ಸಿನಿಮಾ, ಧಾರಾವಾಹಿಗಳಲ್ಲಿ ಜಯಶ್ರೀ ಆರಾಧ್ಯ ನಟಿಸಿದ್ದಾರೆ. ಬಿಗ್ ಬಾಸ್ ಶೋನಿಂದ ಹೊರ ಬಂದ ಬಳಿಕ  ಜಯಶ್ರೀ ಆರಾಧ್ಯ ಹೊಸ ಮನೆ ಖರೀದಿ ಮಾಡಿದ್ದರು. ಜಯಶ್ರೀ ತಮ್ಮದೇ ಆದ ಉದ್ಯಮವನ್ನು ಹೊಂದಿದ್ದಾರೆ.  ‘ಬಿಗ್ ಬಾಸ್’ ಮನೆಯಲ್ಲಿ ಸಿಕ್ಕಾಪಟ್ಟೆ ಸ್ಟ್ರೇಟ್ ಫಾರ್ವರ್ಡ್ ಆಗಿದ್ದ ಜಯಶ್ರೀ ಆರಾಧ್ಯ ಅವರ ವೈಯಕ್ತಿಕ ಬದುಕಿನ ಏಳು-ಬೀಳುಗಳನ್ನು ಹಂಚಿಕೊಂಡಿದ್ದರು.

Read More

ಲಾಹೋರ್: ಪಾಕಿಸ್ತಾನದಲ್ಲಿ ನಡೆದ ಸಾರ್ವತ್ರಿಕ ಚುನಾವಣಾ ಫಲಿತಾಂಶ ಪ್ರಕಟವಾಗಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ವಿವಿಧ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿ ಜೈಲು ಸೇರಿರುವ ಪಾಕಿಸ್ಥಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ 12 ಪ್ರಕರಣಗಳಲ್ಲಿ ಜಾಮೀನು ಸಿಕ್ಕಿದೆ. ಮೇ 9ರ ಗಲಭೆಗೆ ಸಂಬಂಧಿಸಿದ 12 ಪ್ರಕರಣಗಳಲ್ಲಿ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಮಾಜಿ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿಗೆ ಜಾಮೀನು ಸಿಕ್ಕಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಸೇನಾ ನೆಲೆಗಳ ಮೇಲಿನ ದಾಳಿಗೆ ಸಂಬಂಧಿಸಿದ 12 ಪ್ರಕರಣಗಳಲ್ಲಿ ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ಮಾಜಿ ಪ್ರಧಾನಿ ಇಮ್ರಾನ್ ಖಾನ್ಮತ್ತು ಮಾಜಿ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿಗೆ ಶಿಕ್ಷೆ ವಿಧಿಸಿತ್ತು. ಇದೀಗ ಉಭಯ ನಾಯಕರಿಗೂ ಜಾಮೀನು ಮಂಜೂರಾಗಿದೆ. ಆರ್ಥಿಕವಾಗಿ, ರಾಜಕೀಯವಾಗಿ ಸಂಕಷ್ಟದಲ್ಲಿರುವ ಪಾಕಿಸ್ತಾನ ಸಂಸತ್‌ ಚುನಾವಣೆಯ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿತ್ತು. ಜೈಲು ಸೇರಿರುವ ಮಾಜಿ ಪ್ರಧಾನಿ ಇಮ್ರಾನ್‌ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳು ಅಚ್ಚರಿಯ ರೀತಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ.…

Read More

ಲಾಹೋರ್: ಪಾಕಿಸ್ತಾನದಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ಮುಕ್ತಾಯವಾಗಿದೆ. ಗುರುವಾರ ಸಂಜೆ ಮತದಾನ ಮುಕ್ತಾಯವಾಗಿದ್ದು ಇದೀಗ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ಶೆಹಬಾಜ್ ಷರೀಫ್ ಲಾಹೋರ್‌ನಲ್ಲಿ ರಾಷ್ಟ್ರೀಯ ಮತ್ತು ಪ್ರಾಂತೀಯ ಅಸೆಂಬ್ಲಿ ಸ್ಥಾನಗಳನ್ನು ಗೆದ್ದಿದ್ದಾರೆ ಎಂದು ಸುದ್ದಿ ಕೇಳಿ ಬಂದಿದೆ. ಉಗ್ರ ದಾಳಿಗಳು ಮತ್ತು ಚುನಾವಣಾ ದುಷ್ಕೃತ್ಯದ ಆರೋಪಗಳ ನಡುವೆ ಪಾಕಿಸ್ತಾನದಲ್ಲಿ ಗುರುವಾರ ಸಂಜೆ 5 ಗಂಟೆಗೆ ಸಂಸತ್ತಿನ ಚುನಾವಣೆಗೆ ಮತದಾನ ಮುಕ್ತಾಯಗೊಂಡಿದೆ.  266 ಸದಸ್ಯರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಪಿಟಿಐ ನಿಷ್ಠಾವಂತರು ಇದುವರೆಗೆ ಸುಮಾರು 49 ಸ್ಥಾನಗಳನ್ನು ಗೆದ್ದಿದ್ದಾರೆ, ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಗೆ 42 ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಗೆ 34 ಸ್ಥಾನಗಳನ್ನು ಗೆದ್ದಿದ್ದಾರೆ. ಅದೇ ವೇಳೆ ಪಾಕಿಸ್ತಾನ ಚುನಾವಣಾ ಆಯೋಗದ ವೆಬ್‌ಸೈಟ್‌ನ ಪ್ರಕಾರ ಗಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬೆಂಬಲಿತರು ಆಗಿರುವ ಪಕ್ಷೇತರರು ಎಣಿಕೆಯಾದ 136 ಸ್ಥಾನಗಳಲ್ಲಿ 49 ಸ್ಥಾನಗಳಲ್ಲಿ ಗೆಲುವು ಸಂಭ್ರಮಿಸಿದ್ದಾರೆ. ಚುನಾವಣಾ ಆಯೋಗವು ಘೋಷಿಸಿದ 122 ಸ್ಥಾನಗಳ ಪೈಕಿ…

Read More

ವಾಷಿಂಗ್ಟನ್‌: ಅಮೆರಿಕದಲ್ಲಿ ಮತ್ತೋರ್ವ ಭಾರತೀಯ ಯುವಕನ ಮೇಲೆ ಹಲ್ಲೆ ನಡೆಸಲಾಗಿದ್ದು, ಹೊಸ ವರ್ಷಾರಂಭದಲ್ಲೇ ಅಮೆರಿಕದಲ್ಲಿ ಒಟ್ಟು ಐವರು ಭಾರತೀಯನ್ನು ಕೊಲೆ ಮಾಡಲಾಗಿದೆ. ವಾಷಿಂಗ್ಟನ್‌ನ ರೆಸ್ಟೊರೆಂಟ್‌ನ ಹೊರಗೆ ನಡೆದ ಜಗಳದಲ್ಲಿ ಮಾರಣಾಂತಿಕ ಗಾಯಗೊಂಡಿದ್ದ ಭಾರತೀಯ- ಅಮೆರಿಕನ್ ಎಕ್ಸಿಕ್ಯೂಟಿವ್‌ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ಮೂಲದ, ವರ್ಜೀನಿಯಾದ ನಿವಾಸಿ ವಿವೇಕ್ ತನೇಜಾ ಮೃತಪಟ್ಟ ವ್ಯಕ್ತಿ. ಫೆಬ್ರವರಿ 2ರಂದು ವಿವೇಕ್‌, ಅವರ ಇಬ್ಬರು ಸಹೋದರಿಯರು ಹಾಗೂ ಶಂಕಿತ ಆರೋಪಿ ಜಪಾನೀಸ್ ರೆಸ್ಟೋರೆಂಟ್‌ನಲ್ಲಿ ಇದ್ದರು. ಆರೋಪಿಯು ವಿವೇಕ್‌ನನ್ನು ನೆಲಕ್ಕೆ ಕೆಡವಿ ಅವರ ತಲೆಯನ್ನು ಪಾದಚಾರಿ ಮಾರ್ಗಕ್ಕೆ ಗುದ್ದಿ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಪೊಲೀಸ್ ಮೂಲಗಳ ಪ್ರಕಾರ 41 ವರ್ಷದ ವಿವೇಕ್‌ ತನೇಜಾ ಬೆಳಗಿನ ಜಾವ 2 ಗಂಟೆ ಸುಮಾರಿಗೆ ರೆಸ್ಟೋರೆಂಟ್‌ ಬಿಟ್ಟಿದ್ದರು. ಹತ್ತಿರದ ಬೀದಿಯಲ್ಲಿ ಜಗಳ ಆರಂಭವಾಯಿತು. ದಾಳಿಯಲ್ಲಿ ವಿವೇಕ್‌ ಪ್ರಜ್ಞೆ ಕಳೆದುಕೊಂಡರು. ಪೊಲೀಸರು ಆಗಮಿಸಿ ಅವರನ್ನು ಆಸ್ಪತ್ರೆಗೆ ಸಾಗಿಸಿದರು. ಗಾಯಗೊಂಡಿದ್ದ ಅವರು ಬುಧವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ವರದಿ ತಿಳಿಸಿದೆ. ಸಿಸಿಟಿವಿಯಲ್ಲಿ ಕಾಣಿಸಿಕೊಂಡಿರುವ ಶಂಕಿತನಿಗಾಗಿ…

Read More

ಅಯೋಧ್ಯೆಯಲ್ಲಿ ಉದ್ಘಾಟನೆಯಾಗಿರುವ ಬಾಲ ರಾಮಮಂದಿರಕ್ಕೆ ಬಾಲಿವುಡ್ ನಟ ಇತ್ತೀಚೆಗೆ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದ್ದಾರೆ. ಈ ವೇಳೆ ಅಮಿತಾಬ್ ರಾಮನಿಗೆ ದುಬಾರಿ ಚಿನ್ನದ ಹಾರವನ್ನು ಅರ್ಪಿಸಿದ್ದಾರೆ. ಇತ್ತೀಚೆಗೆ ಅಮಿತಾಬ್ ಜ್ಯುವೆಲರಿ ಶಾಪ್ ಉದ್ಘಾಟನೆಗಾಗಿ ಅಯೋಧ್ಯೆಗೆ ತೆರಳಿದ್ದಾರೆ. ಜ್ಯೂವೆಲ್ಲರಿ ಉದ್ಘಾಟನೆಯ ಬಳಿಕ ಅಮಿತಾಬ್ ಬಾಲ ರಾಮನಿಗೆ ಸರವನ್ನು ನೀಡಿದ್ದಾರೆ. ದೇವಸ್ಥಾನಕ್ಕೆ ಬರುವಾಗ ಸಾಕಷ್ಟು ಭದ್ರತೆಗಳೊಂದಿಗೆ ಆಗಮಿಸಿದ ಅಮಿತಾಭ್ ಕುರ್ತಾ-ಪೈಜಾಮ ಧರಿಸಿ ಗಮನ ಸೆಳೆದಿದ್ದಾರೆ. ಕೇಸರಿ ಬಣ್ಣದ ಶಾಲನ್ನು ಕುತ್ತಿಗೆಗೆ ಹಾಕಿಕೊಂಡಿದ್ದರು. ಗುರುವಾರ ಮಧ್ಯಾಹ್ನದ ವೇಳೆಗೆ ರಾಮ ಮಂದಿರಕ್ಕೆ ಭೇಟಿ ನೀಡಿದರು ಅಮಿತಾಭ್. ಸುಮಾರು ಅರ್ಧಗಂಟೆ ಅವರು ಅಲ್ಲಿಯೇ ಇದ್ದರು. ಆ ಬಳಿಕ ಅಯೋಧ್ಯೆಯ ಅಧಿಕಾರಗಳ ಜೊತೆ ಮಧ್ಯಾಹ್ನದ ಭೋಜನ ಸವಿದಿದ್ದಾರೆ.

Read More

ಬಾಲಿವುಡ್​ನ ಹಿರಿಯ ನಟ ಹಾಗೂ ಬಿಜೆಪಿ ನಾಯಕ ಮಿಥುಲ್ ಚಕ್ರವರ್ತಿ ತೀವ್ರ ಎದೆನೋವಿನಿಂದ ಬಳಲುತ್ತಿದ್ದು ಅವನ್ನು ಕೋಲ್ಕತ್ತದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು (ಫೆ 10) ಮುಂಜಾನೆ ಮಿಥುನ್ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಿಥುನ್ ಚಕ್ರವರ್ತಿ ಆರೋಗ್ಯದ ಕುರಿತು ಸೋಶೀಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದ್ದುಅಭಿಮಾನಿಗಳು ಕಂಗಾಲಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಿಥುನ್ ಚಕ್ರವರ್ತಿ ಮಗ ಮಹಾಕ್ಷಯ ತಂದೆ ಆರಾಮವಾಗಿದ್ದು ರೊಟೀನ್ ಚಕ್ ಅಪ್ ಆಗಿ ಆಸ್ಪತ್ರೆಗೆ ಬಂದಿರುವುದಾಗಿ ತಿಳಿಸಿದ್ದಾರೆ. 1976ರಲ್ಲಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಮಿಥುನ್ ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ, ಮೊದಲ ಚಿತ್ರದಲ್ಲೇ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದ್ದು ನಾಯಕನಾಗಿ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ಪೋಷಕ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಅವರು ಜಡ್ಜ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Read More

ಸಮಂತಾ ಹಾಗೂ ನಾಗಚೈತನ್ಯ ದೂರವಾಗಿ ಕೆಲ ವರ್ಷಗಳೆ ಕಳೆದಿದೆ. ಆದರೆ ಈ ಜೋಡಿ ಮತ್ತೆ ಒಂದಾಗ್ಬೇಕು ಅನ್ನೋದು ಲಕ್ಷಾಂತರ ಅಭಿಮಾನಿಗಳ ಆಸೆಯಾಗಿದೆ. ಈ ಮಧ್ಯೆ ಸಮಂತಾ ಹಾಗೂ ನಾಗಚೈತನ್ಯ ಮತ್ತೆ ಒಂದಾಗ್ತಿದ್ದು ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಅಂದ ಹಾಗೆ ಸಮಂತಾ ಹಾಗೂ ನಾಗಚೈತನ್ಯ ಒಂದಾಗ್ತಿರೋದು ರಿಯಲ್ ಲೈಫ್ ನಲ್ಲಿ ಅಲ್ಲ. ಬದಲಾಗಿ ರೀಲ್ ಲೈಫ್ ನಲ್ಲಿ.  ಸಮಂತಾ ಈಗಿನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಯೋಸಿಟಿಸ್ ಖಾಯಿಲೆ ಇನ್ನೂ ದೂರವಾಗಿಲ್ಲ. ಹಾಗಿದ್ದರೂ ಉತ್ತಮ ಆರೋಗ್ಯಕ್ಕಾಗಿ ಏನೇನು ಬೇಕು ಎಲ್ಲವನ್ನೂ ಪಡೆದುಕೊಳ್ಳುತ್ತಿದ್ದಾರೆ. ಸಿನಿಮಾದಿಂದ ಸದ್ಯ ದೂರ ಇದ್ದಾರೆ. ಆದರೆ ಇವರನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಧೂತ ಹೆಸರಿನ ವೆಬ್ ಸರಣಿ ಸಮಂತಾ ಹಾಗೂ ನಾಗಚೈತನ್ಯ ಒಟ್ಟಿಗೆ ಕಾಣಿಸಿಕೊಳ್ತಿದ್ದಾರೆ. ನಾಗಚೈತನ್ಯ ಹೀರೋ. ಮೊದಲ ಭಾಗ ಹಿಟ್ ಆಗಿದೆ. ಎರಡನೇ ಭಾಗದಲ್ಲಿ ಸಮಂತಾ ಕೂಡ ಇರಲಿದ್ದಾರೆ ಎಂಬ ಮಾತು ಕೇಳಿ ಬರ್ತಿದೆ. ‘ಧೂತ’ ವೆಬ್ ಸರಣಿಗೆ ವಿಕ್ರಮ್ ಇದರ ನಿರ್ದೇಶಕರಾಗಿದ್ದರು. ಮೊದಲ ಭಾಗ…

Read More

ಕನ್ನಡದ ಖ್ಯಾತ ನಟ ರಂಗಾಯಣ ರಘು ಅವರಿಗೆ ಶಾಖಾಹಾರಿ ಚಿತ್ರತಂಡ ಹೊಸ ಬಿರುದು ನೀಡಿ ಗೌರವಿಸಿದ್ದಾರೆ. ಸಿನಿಮಾದ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಗೂ ನಿರ್ದೇಶಕ ಸುಕ್ಕ ಸೂರಿ ವಿಶೇಷ ಅಥಿಯಾಗಿ ಆಗಮಿಸಿ ರಂಗಾಯಣ ರಘು ಅವರಿಗೆ ಅಭಿನಯಾಸುರು ಎಂಬ ಬಿರುದು ನೀಡಿ ಗೌರವಿಸಿದರು. ಇದೇ ವೇಳೆ ಮಾತನಾಡಿದ ನಿರ್ದೇಶಕ ದುನಿಯಾ ಸೂರಿ ಮಾತನಾಡಿ, ನಾನು ಈ ರೀತಿ ಮೈಕ್ ಹಿಡಿದು ಮಾತನಾಡುತ್ತಿದ್ದೇನೆ. ನನ್ನ ನಿರ್ದೇಶಕ ಅಂತಾ ಕರೆಯುತ್ತಾರೆ ಎಂದರೆ. ಈ ಹಿಂದೆ ನಾವು ಯೋಗರಾಜ್ ಮಣಿ ಅಂತಾ ಸಿನಿಮಾ ಮಾಡಬೇಕಾದರೆ ರಘು ಸರ್ ಸಿಕ್ತಾರೆ. ನಮಗೆ ಅಲ್ಲಿಂದ ದೊಡ್ಮನೆ ಹುಡುಗ ಸಿನಿಮಾದವರೆಗೂ ಜೊತೆಯಲಿ ಇದ್ದರು. ಈ ನಡುವೆ ಅಣ್ಣ ಮಾಡುವ ಪಾತ್ರ ಇಲ್ಲ ಎಂದು ಬಿಟ್ಟುಕೊಡುತ್ತೇವೆ. ನಾನು ಒಂದು ವಿಷಯ ತೆಗೆದುಕೊಂಡು ಹೋದರೆ ಅದಕ್ಕೊಂದು ಹಿನ್ನೆಲೆ ಹೇಳಿ ಗಟ್ಟಿ ಮಾಡುತ್ತಾರೆ. ಯೋಗರಾಜ್, ಸರ್ ನಮಗೆ ಗುರು. ಅನುಭವ ಹೇಳ್ತಾರೆ, ಹೆದರಬೇಡ ಅಂತಾರೇ. ನಾನು ಆಕ್ಷನ್ ಕಟ್ ಹೇಳಬಹುದು. ನಾನು…

Read More

ಟಾಲಿವುಡ್ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ ಜೋಡಿಗಳಲ್ಲಿ ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ಕೂಡ ಒಂದು. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಮೆಚ್ಚುಗೆ ಗಳಿಸಿದ್ದ ಜೋಡಿ ಬಳಿಕ ರಿಯಲ್ ಲೈಫ್ ನಲ್ಲೂ ಒಂದಾಗ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಇದೀಗ ಮತ್ತೆ ಸಿನಿಮಾಗಾಗಿ ಒಂದಾಗುವ ಮೂಲಕ ಅನುಷ್ಕಾ ಹಾಗೂ ಪ್ರಭಸ್ ಅಭಿಮಾನಿಗಳಿಗೆ ಜೋಡಿ ಸಿಹಿ ಸುದ್ದಿ ನೀಡಿದೆ. 6 ವರ್ಷಗಳ ಬಳಿಕ ಡಾರ್ಲಿಂಗ್ ಪ್ರಭಾಸ್ ಮತ್ತು ಸ್ವೀಟಿ ಅನುಷ್ಕಾ ತೆರೆ ಮೇಲೆ ಮತ್ತೆ ಮೋಡಿ ಮಾಡಲಿದ್ದಾರೆ. ಸದ್ದಿಲ್ಲದೇ ಪ್ರಭಾಸ್ ಸಿನಿಮಾದಲ್ಲಿ ಅನುಷ್ಕಾ ನಟಿಸುತ್ತಿದ್ದು ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಒಡಿಶಾದಲ್ಲಿ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ನಟಿ ರಮ್ಯಾಕೃಷ್ಣ ಕೂಡ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಪ್ರಭಾಸ್ ಹೋಂ ಬ್ಯಾನರ್ ಯುವಿ ಕ್ರಿಯೇಷನ್ಸ್ ಸಂಸ್ಥೆ ನಿರ್ಮಾಣ ಮಾಡ್ತಿದೆ ಎನ್ನಲಾಗಿದೆ. ಶೀಘ್ರದಲ್ಲೇ ಈ ಸಿನಿಮಾ ಅಧಿಕೃತವಾಗಿ ಘೋಷಣೆ ಆಗಲಿದೆ. ಇನ್ನೂ 10 ದಿನಗಳ ಕಾಲ ಅನುಷ್ಕಾ ಶೆಟ್ಟಿ ಹಾಗೂ ರಮ್ಯಾಕೃಷ್ಣ ಭಾಗದ ಚಿತ್ರೀಕರಣ ಒಡಿಶಾದಲ್ಲಿ…

Read More

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ, ತರುಣ್ ಸುಧೀರ್ ನಿರ್ದೇಶನದ ಕಾಟೇರ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಸಿನಿಮಾ ರಿಲೀಸ್ ಆಗಿ ತಿಂಗಳು ಕಳೆದಿದ್ರು ಇಂದಿಗೂ ಕಾಟೇರನ ಕ್ರೇಜ್ ಹಾಗೆಯೇ ಇದೆ. ಇದೇ ಖುಷಿಯಲ್ಲಿ ಚಿತ್ರತಂಡ ಟೆಂಪಲ್ ರನ್ ಮಾಡುತ್ತಿದೆ. ಇತ್ತೀಚೆಗೆ ನಿರ್ದೇಶನ ತರುಣ್ ಸುಧೀರ್ ಕೊರಗಜ್ಜನ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದರು. ಜೊತೆಗೆ ಧರ್ಮಸ್ಥಳಕ್ಕೂ ತೆರಳಿ ಮಂಜುನಾಥನ ಆಶೀರ್ವಾದ ಬೇಡಿದ್ದರು. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಿರುಪತಿಗೆ ತೆರಳಿದ್ದಾರೆ. ಮುಂದಿನ ವಾರದ ದರ್ಶನ್ ಅವರ ಹುಟ್ಟು ಹಬ್ಬ. ಅದಕ್ಕೂ ಮುನ್ನ ಅವರು ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಹುಟ್ಟು ಹಬ್ಬ ಮತ್ತು ಕಾಟೇರ ಸಿನಿಮಾದ ಸಕ್ಸಸ್ ಪ್ರಯುಕ್ತವಾಗಿ ದೇವಸ್ಥಾನಕ್ಕೆ ತೆರಳಿದ್ದಾರೆ ಎನ್ನಲಾಗುತ್ತಿದೆ. ಎಂದಿನಂತೆ ಈ ಭಾರಿಯೂ ದರ್ಶನ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸಂದೇಶವೊಂದನ್ನು ಕಳುಹಿಸಿದ್ದಾರೆ. ತಮ್ಮ ಹುಟ್ಟುಹಬ್ಬಕ್ಕೆ ಯಾರು ಕೇಕ್, ಹಾರು, ತುರಾಯಿ ತರಬೇಡಿ. ಬದಲಾಗಿ ದವಸ ಧಾನ್ಯಗಳನ್ನು ನೀಡುವಂತೆ ಕೇಳಿದ್ದಾರೆ. ಅನಾಥಾಶ್ರಮಗಳಿಗೆ ಅಕ್ಕಿ, ಬೆಳೆ,…

Read More