ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯ ರಜನಿಕಾಂತ್ ನಿರ್ದೇಶಕಿಯಾಗಿ ಕಾಲಿವುಡ್ ಚಿತ್ರರಂಗದಲ್ಲಿ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ಐಶ್ವರ್ಯ ರಜನಿಕಾಂತ್ ನಿರ್ದೇಶನದ, ರಜನಿಕಾಂತ್ ನಟನೆಯ ಲಾಲ್ ಸಲಾಂ ಸಿನಿಮಾ ರಿಲೀಸ್ ಆಗಿದ್ದು ಹೇಳಿಕೊಳ್ಳುವ ಮಟ್ಟಿಗೆ ಸದ್ದು ಮಾಡಿಲ್ಲ. ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿರುವ ಐಶ್ವರ್ಯ ಮಾಜಿ ಪತಿ ಹಾಡಿದ್ದ ಸೂಪರ್ ಹಿಟ್ ಹಾಡಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಐಶ್ವರ್ಯ ರಜನಿಕಾಂತ್ ನಿರ್ದೇಶನದಲ್ಲಿ ‘ತ್ರಿ’ ಸಿನಿಮಾ ಮೂಡಿ ಬಂದಿತ್ತು. ಧನುಷ್ ಮತ್ತು ಶ್ರುತಿ ಹಾಸನ್ ಜೋಡಿಯಾಗಿ ನಟಿಸಿದ್ದರು. ಈ ಚಿತ್ರದ ಬಗ್ಗೆ ಐಶ್ವರ್ಯ ಪ್ರತಿಕ್ರಿಯಿಸಿ, ‘ತ್ರಿ’ ಚಿತ್ರ ಪ್ರಯೋಗಾತ್ಮಕ ಸಿನಿಮಾವಾಗಿತ್ತು. ‘ಕೊಲವೆರಿ ಡಿ’ ಹಾಡು ಸೂಪರ್ ಹಿಟ್ ಆಗಿತ್ತು. ಆದರೆ ಅದರಿಂದ ಸಿನಿಮಾಗೆ ತೊಂದರೆಯಾಯ್ತು ಎಂದಿದ್ದಾರೆ. ಧನುಷ್ ಹಾಡಿದ ಹಾಡಿನಿಂದ ಸಿನಿಮಾಗೆ ಯಾವುದೇ ಪ್ರಯೋಜನ ಆಗಲಿಲ್ಲ. ಈ ಹಾಡು ನನ್ನ ಸಿನಿಮಾವನ್ನೇ ನುಂಗಿ ಹಾಕಿತ್ತು. ಹಾಗಾಗಿ ನನಗೆ ನಷ್ಟವಾಯ್ತು ಎಂದಿದ್ದಾರೆ. ‘ಕೊಲವೆರಿ ಡಿ’ ಹಾಡು ಹಿಟ್ ಆದ್ಮೇಲೆ ಜನರ ನಿರೀಕ್ಷೆ ಹೆಚ್ಚಾಯ್ತು. ನನ್ನ ಕಥೆಗೆ ಪ್ರಾಮುಖ್ಯತೆ ಇರುವ…
Author: Author AIN
ಅಬುಧಾಬಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಫೆ.13ರಂದು ಅಬುಧಾಬಿಯಲ್ಲಿ ನಡೆದ ‘ಆಹ್ಲಾನ್ ಮೋದಿ’ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಮಾತನಾಡಿ ಗಮನ ಸೆಳೆದಿದ್ದಾರೆ. ಕನ್ನಡ, ತಮಿಳು, ತೆಲುಗು, ಮತ್ತು ಮಲಯಾಳಂನಲ್ಲಿ ಮಾತನಾಡುವ ಮೂಲಕ ಮೋದಿ ಜನರ ಹೃದಯ ಗೆದ್ದಿದ್ದಾರೆ. ಈ ನಾಲ್ಕು ಭಾಷೆಯ ಜನರು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಯುಎಇಯ ವಿವಿಧ ಪ್ರದೇಶಗಳು ಮತ್ತು ಭಾರತದ ವಿವಿಧ ರಾಜ್ಯಗಳ ಜನರು ಸ್ಥಳದಲ್ಲಿ ಜಮಾಯಿಸಿದ್ದು,”ಎಲ್ಲರ ಹೃದಯಗಳು ಸಂಪರ್ಕ ಹೊಂದಿವೆ” ಎಂದು ಪ್ರಧಾನಿ ಮೋದಿ ಹೇಳಿದರು. ಜಾಯೆದ್ ಸ್ಪೋರ್ಟ್ಸ್ ಸ್ಟೇಡಿಯಂನಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಇಂದು ಅಬುಧಾಬಿಯಲ್ಲಿ, ನೀವು ಹೊಸ ಇತಿಹಾಸವನ್ನು ಸೃಷ್ಟಿಸಿದ್ದೀರಿ. ಯುಎಇಯ ಎಲ್ಲಾ ಮೂಲೆಗಳಿಂದ ಮತ್ತು ಭಾರತದ ವಿವಿಧ ರಾಜ್ಯಗಳಿಂದ ಇಲ್ಲಿಗೆ ಬಂದಿದ್ದೀರಿ. ಆದರೆ ಪ್ರತಿಯೊಬ್ಬರ ಹೃದಯವು ಸಂಪರ್ಕ ಹೊಂದಿದೆ. ಈ ಐತಿಹಾಸಿಕ ಕ್ರೀಡಾಂಗಣದಲ್ಲಿ ಪ್ರತಿ ಹೃದಯ ಬಡಿತ, ಪ್ರತಿ ಉಸಿರು, ಪ್ರತಿ ಧ್ವನಿ ಹೇಳುತ್ತದೆ – ಭಾರತ-ಯುಎಇ ಸ್ನೇಹ ಚಿರಾಯುವಾಗಲಿ ಎಂದು ಆಶಿಸಿದರು.
ಇತ್ತೀಚೆಗೆ ಕತಾರ್ ನಿಂದ ಎಂಟು ಭಾರತೀಯ ನೌಕಾಪಡೆಯ ಸಿಂಬ್ಬಂದಿಗಳು ಬಿಡುಗಡೆಯಾಗಿದ್ದರು. ಇದರಲ್ಲಿ ಶಾರುಖ್ ಖಾನ್ ಪಾತ್ರವಿದೆ ಎಂದು ಸುದ್ದಿ ಹರಿದಾಡಿತ್ತು. ಆದರೆ ಈ ಬಗ್ಗೆ ಸ್ಪಷ್ಟಪಡಿಸಿರುವ ಶಾರುಖ್ ಖಾನ್ ಕಚೇರಿ ಸಿಬ್ಬಂದಿ, ಇದರಲ್ಲಿ ಕಿಂಗ್ ಖಾನ್ದ್ದು ಯಾವುದೇ ರೀತಿಯ ಪಾತ್ರವಿಲ್ಲ ಎಂದಿದ್ದಾರೆ. ಭಾರತದ ಎಂಟು ಮಂದಿ ಮಾಜಿ ನಾವಿಕರನ್ನು ಬೇಹುಗಾರಿಕೆ ಆರೋಪದ ಮೇಲೆ ಕತಾರ್ ಬಂಧಿಸಿತ್ತು. ಬಳಿಕ ಭಾರತ ಸರ್ಕಾರದ ಮಧ್ಯಸ್ಥಿಕೆಯ ನಂತರ ಬಿಡುಗಡೆಯಾಯಿತು. ಆದರೆ ಶಾರುಖ್ ಖಾನ್ ಇತ್ತೀಚೆಗೆ ಮಧ್ಯಪ್ರಾಚ್ಯ ದೇಶಕ್ಕೆ ಭೇಟಿ ನೀಡಿದ್ದರಿಂದ ಈ ವಿಷಯದಲ್ಲಿ ಅವರ ಪಾತ್ರವಿದೆ ಎಂದು ಸುದ್ದಿ ಕೇಳಿ ಬಂದಿತ್ತು. ವರದಿಗಳನ್ನು ನಿರಾಕರಿಸಿದ ಶಾರುಖ್ ಮ್ಯಾನೇಜರ್ ಪೂಜಾ ದದ್ಲಾನಿ, ಶಾರುಖ್ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. “ಕತಾರ್‌ನಿಂದ ಭಾರತದ ನೌಕಾ ಅಧಿಕಾರಿಗಳನ್ನು ಬಿಡುಗಡೆ ಮಾಡುವಲ್ಲಿ ಶಾರುಖ್ ಖಾನ್ ಅವರ ಯಾವುದೇ ರೀತಿಯ ಪಾತ್ರವಿಲ್ಲ. ಘಟನೆಯಲ್ಲಿ ಶಾರುಖ್ ಖಾನ್ ಪಾಲ್ಗೊಳ್ಳುವಿಕೆಯ ಅಂತಹ ಯಾವುದೇ ಸಮರ್ಥನೆಗಳು ಆಧಾರರಹಿತವಾಗಿವೆ . ಈ ಯಶಸ್ವಿ ನಿರ್ಣಯದ ಕಾರ್ಯಗತಗೊಳಿಸುವಿಕೆಗೆ ಕಾರಣರಾದವರು ಭಾರತದ…
ಟೆಲಿವಿಷನ್ ಕಲ್ಚರಲ್ ಆಂಡ್ ಸ್ಪೋರ್ಟ್ಸ್ ಕ್ಲಬ್ನ ಕಾರ್ಯದರ್ಶಿ ಆಗಿದ್ದ ನಟ ರವಿಕಿರಣ್ ಕ್ಲಬ್ಗೆ ಸೇರಿದ ಹಣವನ್ನು ದುರುಪಯೋಗ ಮಾಡಿಕೊಂಡು ಅವ್ಯವಹಾರ ಎಸಗಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಕ್ಲಬ್ನ ಸದಸ್ಯರು ಸುಬ್ರಹ್ಮಣ್ಮಪುರ ಪೊಲೀಸರಿಗೆ ದೂರು ಸಲ್ಲಿಸಿದ್ದು, ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ನಟ ರವಿಕಿರಣ್ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ರವಿಕಿರಣ್, ‘ಕಳೆದ ಡಿಸೆಂಬರ್ ಗೆ ನನ್ನ ಅವಧಿ ಮುಕ್ತಾಯವಾಗಿದೆ. ಮತ್ತೆ ಎಲೆಕ್ಷನ್ ನಡೆದಿಲ್ಲ, ಹೊಸ ಸದಸ್ಯರು ಸೇರಿಕೊಂಡು ಹೊಸ ಕಮಿಟಿ ಮಾಡಿಕೊಂಡಿದ್ದಾರೆ. ಕಾನೂನು ಬಾಹಿರವಾಗಿ ನನ್ನನ್ನು ಕ್ಲಬ್ನಿಂದ ವಜಾ ಮಾಡಿದ್ದಾರೆ, ಆ ನಂತರ ಅವರೇ ಕ್ಲಬ್ನ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದ್ದಾರೆ. ‘2003 ರಲ್ಲಿ ಕ್ಲಬ್ ಶುರುಮಾಡಿದ್ದು ನಾನು. ಕ್ಲಬ್ನ ಸಿಬ್ಬಂದಿ ವೇತನ, ಇತರೆ ಖರ್ಚು ಸೇರಿ 60 ಲಕ್ಷ ಸಾಲ ಮಾಡಿದ್ದೀನಿ. ಆ ಹಣ ವಾಪಸ್ ಕೊಡಲಿ, ಈ ಕ್ಷಣ ಕ್ಲಬ್ಗೆ ರಾಜಿನಾಮೆ ನೀಡಿ ಹೊರ ಹೋಗುತ್ತೀನಿ. ಕರೋನ ಇದ್ದ…
ವಿಶ್ವಸಂಸ್ಥೆ: ಪಾಕಿಸ್ತಾನದಲ್ಲಿ ಕಳೆದ ಗುರುವಾರ ನಡೆದ ಸಾರ್ವತ್ರಿಕ ಚುನಾವಣೆಯ ಬಗ್ಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಕಳವಳ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ಪರಿಸ್ಥಿತಿಯನ್ನು ಬಹಳ ಹತ್ತಿರದಿಂದ ನೋಡಿದ್ದೇನೆ ತ್ರೀವ್ರ. ಹಿಂಸಾಚಾರದಿಂದ ಅಭಿವೃದ್ದಿ ಹಳಿ ತಪ್ಪುತ್ತಿದ್ದು ಕೂಡಲೆ ಸರಿ ದಾರಿಗೆ ಬರುವಂತೆ ಅಧಿಕಾರಿಗಳು ಮತ್ತು ರಾಜಕೀಯ ಮುಖಂಡರನ್ನು ಒತ್ತಾಯಿಸಿದ್ದಾರೆ. ಪಾಕಿಸ್ತಾನದ ಚುನಾವಣೆಯ ಪರಿಸ್ಥಿತಿಯನ್ನು ನೋಡಿದರೆ ನಿಜವಾಗಿಯೂ ಬಹಳ ಕಟ್ಟದ್ದಾಗಿತ್ತು. ಸ್ಥಾಪಿತ ಕಾನೂನು ಚೌಕಟ್ಟಿನಲ್ಲಿ ಎಲ್ಲಾ ಸಮಸ್ಯೆಗಳು ಮತ್ತು ವಿವಾದಗಳನ್ನು ಪರಿಹರಿಸಬಹುದು ,ಪಾಕಿಸ್ತಾನದ ಜನರ ಹಿತಾಸಕ್ತಿಯಲ್ಲಿ ಮಾನವ ಹಕ್ಕುಗಳು ಮತ್ತು ಕಾನೂನಿನ ನಿಯಮವನ್ನು ಸಂಪೂರ್ಣವಾಗಿ ಗೌರವಿಸಲು ಆಂಟೋನಿಯೊ ಗುಟೆರೆಸ್ ಕರೆ ನೀಡುತ್ತಾರೆ. ಶಾಂತಿ ಕಾಪಾಡಿ ,ದೇಶದದ ಅಭಿವೃದ್ದಿಯ ಬಗ್ಗೆ ಗಮನವಿರಲಿ ಹಿಂಸಾಚಾರ ಹಾಗು ಉದ್ವಿಘ್ನ ಪರಿಸ್ಥಿತಿ ನಿನಾಯಿಸಲು ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿದ್ದಾರೆ. ಪ್ರಸ್ತುತ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾ-ï (ಪಿಟಿಐ) ಪಕ್ಷ ಮತ್ತು ಮಾಜಿ ಪ್ರಧಾನಿ ನವಾಜ್ ಷರೀ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್)…
ಅಬುದಾಬಿ: ಅಬುದಾಬಿಯಲ್ಲಿ ಇಂದು ಆಯೋಜಿಸಿರುವ ಅಹ್ಲಾನ್ ಮೋದಿ’ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನ ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಆತ್ಮೀಯವಾಗಿ ಸ್ವಾಗತಿಸಿದರು. ಸುದ್ದಿ ಸಂಸ್ಥೆ ಹಂಚಿಕೊಂಡ ವೀಡಿಯೊದಲ್ಲಿ ಉಭಯ ನಾಯಕರು ಪರಸ್ಪರ ತಬ್ಬಿಕೊಂಡು ಉಭಯ ಕುಶಲೋಪಚರಿ ವಿಚಾರಿಸಿದ್ದಾರೆ. ಇದಕ್ಕೂ ಮುನ್ನ ಪ್ರಧಾನಿಯವರು ಆಗಮಿಸಿದಾಗ ಗಾರ್ಡ್ ಆಫ್ ಹಾನರ್ ಸ್ವೀಕರಿಸಿದ್ದರು. ಪ್ರಧಾನಿ ಮೋದಿ 2015 ರಿಂದ ಏಳನೇ ಬಾರಿಗೆ ಮತ್ತು ಕಳೆದ ಎಂಟು ತಿಂಗಳಲ್ಲಿ ಮೂರನೇ ಬಾರಿಗೆ ಯುಎಇಗೆ ಭೇಟಿ ನೀಡಿದ್ದಾರೆ. ಯುಎಇಗೆ ಆಗಮಿಸಿದ ಪ್ರಧಾನಿ ಮೋದಿ ಅವರು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಭೇಟಿಯಾಗಿದ್ದಾರೆ.
ಉಪೇಂದ್ರ ನಟನೆಯ ಸಿನಿಮಾಗಳ ಸುದ್ದಿ ಕೇಳೋಕೆ ಅಭಿಮಾನಿಗಳು ಕಾಯ್ತಿರ್ತಾರೆ. ಸದಾ ವಿಭೀನ್ನವಾಗಿ ತೆರೆ ಮೇಲೆ ಕಾಣಿಸಿಕೊಳ್ಳುವ ಉಪೇಂದ್ರ ಇದೀಗ ಪ್ರೇಮಿಗಳ ದಿನದಂದು ಯುಐ ಚಿತ್ರದ ಫಸ್ಟ್ ಸಿಂಗಲ್ ಪ್ರೊಮೋ ರಿಲೀಸ್ ಮಾಡಲು ರೆಡಿಯಾಗಿದ್ದಾರೆ. ನಾಳೆ (ಫೆ.14) ಬೆಳಗ್ಗೆ 10 ಗಂಟೆಗೆ ಫಸ್ಟ್ ಸಿಂಗಲ್ ಪ್ರೊಮೋ ರಿಲೀಸ್ ಆಗಲಿದೆ. ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಯುಐ ಚಿತ್ರದ ಡಬ್ಬಿಂಗ್ ಕೆಲಸದಲ್ಲಿ ಉಪೇಂದ್ರ ತೊಡಗಿಕೊಂಡಿದ್ದಾರೆ ಎಂದು ನಿರ್ಮಾಪಕರಲ್ಲಿ ಒಬ್ಬರಾದ ಕೆ.ಪಿ ಶ್ರೀಕಾಂತ್ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ ಉಪೇಂದ್ರ ಅವರು ಡಬ್ಬಿಂಗ್ ಮಾಡುತ್ತಿರುವ ವಿಡಿಯೋವನ್ನು ಅವರು ಶೇರ್ ಮಾಡಿದ್ದಾರೆ. ಈ ಹಿಂದೆ ಯುಐ ಸಿನಿಮಾದ ಟೀಸರ್ ರಿಲೀಸ್ ಆಗಿತ್ತು. ಅದಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ 23 ಮಿಲಿಯನ್ ವೀಕ್ಷಣೆ ಪಡೆದುಕೊಂಡಿತ್ತು. ಈ ಖುಷಿಯಲ್ಲಿ ಉಪ್ಪಿ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ವೀಕ್ಷಣೆಗೆ ಧನ್ಯವಾದ ತಿಳಿಸಿದ್ದರು.
ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟ ಸಾಕಷ್ಟು ಮಂದಿ ಬೇರೆ ಬೇರೆ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ‘ಬಿಗ್ ಬಾಸ್ ಸೀಸನ್ 6’ರ ರನ್ನರ್ ಅಪ್ ನವೀನ್ ಸಜ್ಜು ನಟನೆಯತ್ತ ಮುಖ ಮಾಡಿದ್ದಾರೆ. ತಮ್ಮ ಗಾಯನದ ಮೂಲಕ ಜನರ ಮನಗೆದ್ದ ನವೀನ್ ಈಗ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ‘ಚುಕ್ಕಿತಾರೆ’ ಎಂಬ ಹೊಸ ಧಾರವಾಹಿಯಲ್ಲಿ ಕಥೆ ಹೇಳಲು ಮುಂದಾಗಿದ್ದಾರೆ. ಬಿಗ್ ಬಾಸ್ ಶೋ ಮುಗಿದ ಬಳಿಕ ಸಾಲು ಸಾಲು ಧಾರಾವಾಹಿಗಳು ಪ್ರಸಾರವಾಗುತ್ತಿವೆ. ‘ಚುಕ್ಕಿತಾರೆ’ ಹೆಸರಿನ ಭಿನ್ನ ಕಥೆ ತೋರಿಸಲು ವಾಹಿನಿ ಸಜ್ಜಾಗಿದ್ದು, ಸದ್ಯ ಧಾರವಾಹಿ ಪ್ರೋಮೋ ನೋಡುಗರ ಗಮನ ಸೆಳೆಯುತ್ತಿದೆ. ಸದ್ಯ ರಿವೀಲ್ ಆಗಿರುವ ಪ್ರೋಮೋದಲ್ಲಿ ಹಳೆಯ ಕಾರಿನ ಮುಂದೆ ಇಬ್ಬರು ಹುಡುಗಿಯರು ನಿಂತು, ತಮ್ಮಿಷ್ಟದ ಹೆಸರುಗಳನ್ನು ಬರೆದಿದ್ದಾರೆ. ಅದೇ ಸಮಯಕ್ಕೆ ನವೀನ್ ಸಜ್ಜು ಕಲರ್‌ಫುಲ್ ಬಲೂನ್‌ಗಳನ್ನು ತಂದಿದ್ದಾರೆ. ಬಳಿಕ ಕಾರಿನ ಮೇಲೆ ‘ಚುಕ್ಕಿತಾರೆ’ ಎಂದು ಬರೆದು ನಗುತ್ತಲೇ ಮುಂದೆ ಸಾಗಿದ್ದಾರೆ. ನವೀನ್ ಸಜ್ಜು ಅವರು ಶರ್ಟ್ ಮತ್ತು ಪಂಚೆ ಧರಿಸಿ ಹಳ್ಳಿ ಹುಡುಗನ ಗೆಟಪ್‌ನಲ್ಲಿ…
ಬಾಲಿವುಡ್ ನಟಿ, ವಿರಾಟ್ ಕೋಹ್ಲಿ ಪತ್ನಿ ನಟಿ ಅನುಷ್ಕಾ ಶರ್ಮಾ ಕಳೆದ ಕೆಲವು ದಿನಗಳಿಂದ ತಮ್ಮ ವೈಯಕ್ತಿಕ ವಿಚಾರದಿಂದ ಪದೇ ಪದೇ ಸುದ್ದಿಯಲ್ಲಿದ್ದಾರೆ. ಅನುಷ್ಕಾ ಎರಡನೇ ಬಾರಿಗೆ ಪ್ರೆಗ್ನೆಂಟ್ ಆದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಮತ್ತೊಂದೆಡೆ ವಿರಾಟ್ ಕೊಹ್ಲಿ ಕ್ರಿಕೆಟ್ ಪಂದ್ಯಗಳಿಂದ ದೂರ ಉಳಿದಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ದಂಪತಿ ಯಾವುದೇ ಮಾಹಿತ ಹಂಚಿಕೊಂಡಿಲ್ಲ. ಆದರೆ ಇದೀಗ ಅನುಷ್ಕಾ ಶರ್ಮಾ ಆರೋಗ್ಯದ ಕುರಿತು ಸುದ್ದಿಯೊಂದು ಹರಿದಾಡುತ್ತದೆ. ಅನುಷ್ಕಾ ಆರೋಗ್ಯದ ಕುರಿತು ಪರ್ತಕರ್ತ ಅಭಿಷೇಕ್ ತ್ರಿಪಾಠಿ ಹಾಕಿರುವ ಪೋಸ್ಟ್ ಇದೀಗ ಸುದ್ದಿಯಾಗಿದೆ. ಅದರಲ್ಲಿ ಅನುಷ್ಕಾ ಮತ್ತು ವಿರಾಟ್ ಹೆಸರನ್ನು ಉಲ್ಲೇಖಿಸಿದ್ದಾರೆ. ‘ನಾಲ್ಕು ವಿಷಯಗಳು: ಒಂದು: ಡಿವಿಲಿಯರ್ಸ್ ಹೇಳಿದ್ದು ಸರಿ. ಎರಡು: ಕೆಲವು ಸಮಸ್ಯೆಗಳ ಕಾರಣ ವಿದೇಶದಲ್ಲಿ ವೈದ್ಯರ ಬಳಿ ಚಿಕಿತ್ಸೆ ಪಡೆಯಲು ಮತ್ತು ಕುಟುಂಬದೊಂದಿಗೆ ಇರಲು ವಿರಾಟ್ ನಿರ್ಧರಿಸಿದ್ದಾರೆ. ಮೂರು: ಬಿಸಿಸಿಐ ಅನುಮತಿಯೊಂದಿಗೆ ಈ ಸಮಯದಲ್ಲಿ ಅವರು ತಮ್ಮ ಕುಟುಂಬದೊಂದಿಗೆ ಇರಲು ನಿರ್ಧರಿಸಿದ್ದಾರೆ. ನಾಲ್ಕು: ನಾವು ಅವರ ಸಂತೋಷದ…
ರೆಡ್ಮಿ ತನ್ನ ಹೊಸ ಬಜೆಟ್ ಫ್ರೆಂಡ್ಲಿ ಸ್ಮಾರ್ಟ್‌ಫೋನ್ ಎ3ಯನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಪ್ರೇಮಿಗಳ ದಿನದಂದು ಅಂದರೆ ಫೆಬ್ರವರಿ 14ರಂದು ರೆಡ್ಮಿ ಎ 3 ಭಾರತದಲ್ಲಿ ಖರೀದಿಗೆ ಲಭ್ಯವಾಗಲಿದೆ. ರೆಡ್ಮಿ ಎ3 ಬಿಡುಗಡೆ ಆದ ಬಳಿಕ ಗ್ರಾಹಕರು ಇದನ್ನು ಫ್ಲಿಪ್‌ಕಾರ್ಟ್ ಇಕಾಮರ್ಸ್ ವೆಬ್‌ಸೈಟ್‌ನಲ್ಲಿ ಖರೀದಿಸಬಹುದಾಗಿದೆ. ರೆಡ್ಮಿ ಎ3 ಹ್ಯಾಲೊ ಡಿಸೈನ್ ಅನ್ನು ಹೊಂದಿದೆ. ಇದು ದೊಡ್ಡ ಹಿಂಬದಿಯ ಕ್ಯಾಮೆರಾ ಮಾಡ್ಯೂಲ್ ಹೊಂದಿದ್ದು, 5,000mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಇನ್ನೊಂದು ವಿಶೇಷತೆ ಎಂದರೆ 6GB RAM ಕಾನ್ಫಿಗರೇಷನ್ ಜತೆಗೆ, 6GB RAM ವರ್ಚುಯಲ್ ಸಪೋರ್ಟ್ ಮಾಡುವ ಫೀಚರ್ ಇದರಲ್ಲಿದೆ. ರೆಡ್ಮಿ ಎ3 ಮೊಬೈಲ್ 6.71 ಇಂಚಿನ ಹೆಚ್‌ಡಿ+ ಎಲ್‌ಸಿಡಿ ಸ್ಕ್ರೀನ್, ಮಿಡಿಯಾಟೆಕ್ ಹೀಲಿಯೊ ಜಿ36 SoC. AI ಚಾಲಿತ 13MP ಡ್ಯುಯಲ್ ಹಿಂಬದಿ ಕ್ಯಾಮೆರಾಗಳು, 8MP ಸೆಲ್ಫಿ ಕ್ಯಾಮೆರಾ.ಡ್ಯುಯಲ್ ಸಿಮ್ ಅಳವಡಿಕೆಯ ವೈಶಿಷ್ಟ್ಯ, ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್, ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹೊಂದಿದೆ. ರೆಡ್ಮಿ ಎ3 ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ…