ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್‌ಮನ್ ಬಾಬರ್ ಅಜಮ್ ಇತ್ತೀಚೆಗೆ ಮಾಧ್ಯಮಗಳಿಗೆ ಆಸಕ್ತಿದಾಯಕ ಮನವಿಯನ್ನು ಮಾಡಿದರು. ಮಾಧ್ಯಮಗಳು ತಮ್ಮನ್ನು “ರಾಜ” ಎಂದು ಕರೆಯುವುದನ್ನು ನಿಲ್ಲಿಸಬೇಕೆಂದು ಅವರು ವಿನಂತಿಸಿದರು. ಪಾಕಿಸ್ತಾನಿ ಕ್ರಿಕೆಟ್ ಅಭಿಮಾನಿಗಳು ಬಾಬರ್ ಅವರನ್ನು ಅವರ ಪ್ರತಿಭೆಗೆ ಗೌರವ ಸಲ್ಲಿಸಲು “ರಾಜ” ಎಂದು ಕರೆಯುತ್ತಾರೆ. ಆದರೆ, ಬಾಬರ್ ಇದನ್ನು ಒಪ್ಪಿಕೊಳ್ಳಲಿಲ್ಲ. ಬಾಬರ್ ಅಜಮ್ ಮಾಧ್ಯಮಗಳಿಗೆ ಹೇಳಿದ್ದೇನು? “ದಯವಿಟ್ಟು ನನ್ನನ್ನು ಕಿಂಗ್ ಎಂದು ಕರೆಯುವುದನ್ನು ನಿಲ್ಲಿಸಿ.” ನಾನು ರಾಜನಲ್ಲ. ನನಗೆ ಹೊಸ ಜವಾಬ್ದಾರಿಗಳಿವೆ. ನಾನು ಇಲ್ಲಿಯವರೆಗೆ ಮಾಡಿದ್ದೆಲ್ಲವೂ ಹಿಂದಿನದು. “ಪ್ರತಿಯೊಂದು ಪಂದ್ಯವೂ ಹೊಸ ಸವಾಲು, ನಾನು ವರ್ತಮಾನ ಮತ್ತು ಭವಿಷ್ಯದತ್ತ ಗಮನ ಹರಿಸಬೇಕು” ಎಂದು ಬಾಬರ್ ಮಾಧ್ಯಮಗಳಿಗೆ ತಿಳಿಸಿದರು. ಇತ್ತೀಚೆಗೆ, ಬಾಬರ್ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ. ಅವರ ಬ್ಯಾಟಿಂಗ್‌ನಲ್ಲಿ, ವಿಶೇಷವಾಗಿ ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಸ್ಥಿರತೆಯ ಕೊರತೆಯು ಟೀಕೆಗೆ ಗುರಿಯಾಗಿದೆ. ಆದರೆ, ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಗುರಿ ಹೊಂದಿದ್ದಾರೆ. https://ainlivenews.com/do-you-know-okra-definitely-helps-to-get-rid-of-diabetes/ ಚಾಂಪಿಯನ್ಸ್ ಟ್ರೋಫಿಯಲ್ಲಿ ಬಾಬರ್ ಪ್ರಮುಖ ಪಾತ್ರ ವಹಿಸಿದ್ದಾರೆ.…
Author: Author AIN
ಬೆಂಗಳೂರು: ಪ್ರಯಾಗ್ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಮಾಘ ಪೂರ್ಣಮಿಯ ವಿಶೇಷವಾದ ದಿನದಂದು ವೃಕ್ಷಮಾತೆ ಪದ್ಮಶ್ರೀ ಪರಿಸರ ರಾಯಭಾರಿಗಳಾದಂತ ಸಾಲುಮರದ ತಿಮ್ಮಕ್ಕನ ಮಗನಾದ ಉಮೇಶ್ ಸಂಗಮದಲ್ಲಿ ವಿಶೇಷ ತೀರ್ಥ ಸ್ನಾನ ಮಾಡಿದರು. ಈ ಸಂದರ್ಭದಲ್ಲಿ ವೃಕ್ಷಮತೆ ಸಾಲುಮರದ ತಿಮ್ಮಕ್ಕ ರವರ ಕಷ್ಟ ಸುಖಗಳಲ್ಲಿ ಬೆನ್ನೆಲುಬಾಗಿ ಹಾಗೂ ಮನೆಯ ಹಿರಿಯ ಮಗನಂತಿರುವ ಸರಳ ಸಜ್ಜನ ಬಡವರ ಬಂಧು ಡಾಕ್ಟರ್ ಜಿ ಪರಮೇಶ್ವರ್ ರವರಿಗೆ ಮತ್ತು ಅವರ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ಅವರ ಪರವಾಗಿ ಸಾಲು ಮರದ ತಿಮ್ಮಕ್ಕ ರವರ ದತ್ತು ಪುತ್ರ ಉಮೇಶ್ ರವರು ಪುಣ್ಯ ಸ್ನಾನ ಮಾಡಿ ಒಳ್ಳೆಯದಾಗಲಿ ಮತ್ತು ಅವರ ಕನಸುಗಳೆಲ್ಲ ನನಸಾಗಲಿ ಎಂದು ಬೇಡಿಕೊಂಡಿದ್ದಾರೆ ಪರಮೇಶ್ವರ ಅವರು ಸಾಲುಮರದ ತಿಮ್ಮಕ್ಕನ ಮೇಲೆ ಇಟ್ಟಿರುವ ನಂಬಿಕೆ, ಅವರ ಎಲ್ಲಾ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಸಹಾಯ ಮಾಡುತ್ತಾ ಬರುತ್ತಿರುವುದರಿಂದ ನಾನು ಕೂಡ ಚಿರಋಣಿಯಾಗಿದ್ದು ಅವರ ಕುಟುಂಬದವರು ಎತ್ತರಕ್ಕೆ ಬೆಳೆಯಲಿ ಎಂದರು. https://ainlivenews.com/do-you-know-okra-definitely-helps-to-get-rid-of-diabetes/ ತೀರ್ಥ ಸ್ನಾನ ಆದ ನಂತರ ಕೆಲವು ಅಖಾಡಗಳಿಗೆ ಭೇಟಿ…
ಬೆಳಗಾವಿ : ಆಕಸ್ಮಿಕವಾಗಿ ಗುಂಡು ತಗುಲಿ ನೌಕಾ ನೆಲೆಯ ಯೋಧ ಸಾವನ್ನಪ್ಪಿದ್ದಾರೆ. ಪ್ರವೀಣ ಸುಭಾಷ್ ಖಾನಗೌಡರ ಮೃತ ಯೋಧರಾಗಿದ್ದು, ಕರ್ತವ್ಯದ ವೇಳೆ ಆಕಸ್ಮಿಕವಾಗಿ ಗುಂಡು ತಗುಲಿದೆ. ಸಾಯುವುದಕ್ಕೂ ಒಂದು ಗಂಟೆಗೆ ಮುನ್ನ ತಾಯಿಯ ಜೊತೆ ಮಾತನಾಡಿದ್ದು, ಇದೀಗ ಮಗನ ಸಾವಿನ ಸುದ್ದಿ ಕೇಳಿ ಇಡೀ ಕುಟುಂಬ ಕಣ್ಣೀರಿಡುತ್ತಿದೆ. https://ainlivenews.com/operation-of-vijayapur-police-bagappa-harijan-killers-arrested/ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದ ಯೋಧ ಪ್ರವೀಣ್ ಚೆನ್ನೈನ ನೌಕಾದಳದಲ್ಲಿ ಕೆಲಸ ಮಾಡುತ್ತಿದ್ದರು. 2020ರ ಫೆ.12 ರಂದು ನೌಕಾ ನೆಲೆ ಸೇರಿದ್ದರು. ಕಾಕತಾಳಿ ಎಂಬಂತೆ ಅದೇ ದಿನಾಂಕದಂದು ಇಹಲೋಕ ತ್ಯಜಿಸಿದ್ದಾರೆ. https://www.youtube.com/watch?v=jYb5vWiqGHY ಕಲ್ಲೋಳಿಗೆ ಪಾರ್ಥಿವ ಶರೀರ ಬರುತ್ತಿದ್ದಂತೆ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಬೆಂಗಳೂರು: ವಿದೇಶಗಳಲ್ಲಿ ಚಾಲ್ತಿಯಲ್ಲಿರುವ ಬಾಡಿಗೆ ”ಗರ್ಲ್ ಫ್ರೆಂಡ್” ಅಥವಾ ಬಾಡಿಗೆ ಬಾಯ್ ಫ್ರೆಂಡ್ ಸಂಸ್ಕೃತಿ ಇದೀಗ ರಾಜ್ಯಕ್ಕೂ ಕಾಲಿಟ್ಟಿದ್ದು, ಕೇವಲ 389/- ಕೊಟ್ರೆ ಸಾಕು ಒಂದು ದಿನದ ಪ್ರಿಯತಮ ಸಿಗ್ತಾನಂತೆ! ಹೀಗೆಂದು ಇದೀಗ ಜಯನಗರ ಭಾಗದಲ್ಲಿ ಪೋಸ್ಟರ್ ವೈರಲ್ ಆಗಿದೆ. ಗೋಡೆಗೆ ಈ ರೀತಿಯಾಗ ಪೋಸ್ಟರ್ ಅಂಟಿಸಿರುವ ಕೆಲ ಕಿಡಿಗೇಡಿಗಳು, ಬಾಯ್ ಫ್ರೆಂಡ್ ಸಿಗ್ತಾನೆ ಸ್ಕ್ಯಾನ್ ಮಾಡಿ ಎಂದು ಪೋಸ್ಟರ್ ಅಂಟಿಸಿದ್ದಾರೆ. “RENT A BOY FRIEND ONLY 389/ SCAN ME” ಹೀಗೆಂದು ಪೋಸ್ಟರ್ ಅಂಟಿಸಿದ್ದಾರೆ. ನಗರದ ವಿವಿಧ ಪ್ರದೇಶಗಳಲ್ಲಿ ಈ ರೀತಿಯ ಪೋಸ್ಟರ್ಗಳು ಕಂಡು ಬಂದಿದ್ದು. https://ainlivenews.com/do-you-know-okra-definitely-helps-to-get-rid-of-diabetes/ ಜಯನಗರ, ಬನಶಂಕರಿ, ಬಿಡಿಎ ಕಾಂಪ್ಲೇಕ್ಸ್ಗಳ ಬಳಿ ‘ವ್ಯಾಲೆಂಟೆನ್ಸ್ ಡೇಗೆ ಹುಡುಗ ಬೇಕಾದ್ರೆ ಕೇವಲ ರೂ 389/- ಕೊಟ್ರೆ ಸಾಕು ಒಂದು ದಿನದ ಬಾಯ್ ಫ್ರೆಂಡ್ ಸಿಗಲಿದ್ದಾನೆ ಎಂದು ಬರೆದಿರುವ ಪೋಸ್ಟರ್ಗಳು ಕಂಡು ಬಂದಿವೆ. ಈ ವಿಚಿತ್ರ ಪೋಸ್ಟರ್ಗಳನ್ನು ಕಂಡು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಂದಗೋಳ : 2023-24 ಸಾಲಿನ ಮುಂಗಾರು ಹಿಂಗಾರು ಹಂಗಾಮಿನಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ (ವಿಮಾ ) ಯೋಜನೆಯಡಿ ವಿಮಾ ಸಂಸ್ಥೆಯಿಂದ 1746 ಪ್ರಸ್ತಾವನೆಗಳು ತಿರಸ್ಕೃತಗೊಂಡಿವೆ. ಮುಂಗಾರು 576 ಇಂಗಾರು 1169 ಹಾಗೂ ಬೇಸಿಗೆ 01 ಸೇರಿ ಒಟ್ಟು 1746 ಪ್ರಸ್ತಾವನೆಗಳು ತಿರಸ್ಕೃತಗೊಂಡಿವೆ. ತಿರಸ್ಕೃತ ಗೊಂಡಿರುವ ಬೆಳೆ ವಿಮೆ ಪ್ರಸ್ತಾವನೆಗಳ ರೈತರ ಪಟ್ಟಿಯನ್ನು ಗ್ರಾಮ ಪಂಚಾಯತ್, ರೈತ ಸಂಪರ್ಕ ಕೇಂದ್ರ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಪ್ರದರ್ಶಿಸಲಾಗಿದೆ ಸಂಬಂಧಪಟ್ಟ ರೈತರು ಆಕ್ಷೇಪಣೆ ಇದ್ದಲ್ಲಿ ಫೆಬ್ರವರಿ 27 ನೇ ದಿನಾಂಕ ಒಳಗಾಗಿ ರೈತ ಸಂಪರ್ಕ ಕೇಂದ್ರ ಕುಂದುಗೋಳ ಹಾಗೂ ಸಂಶಿ ಕಚೇರಿಗೆ, https://ainlivenews.com/do-you-know-okra-definitely-helps-to-get-rid-of-diabetes/ 1) 2023- 24ರ ಪಹಣಿ ಪತ್ರಿಕೆಯಲ್ಲಿ (ಆರ್ ಟಿ ಸಿ ) ನಿಮಗೆ ನೋಂದಾಯಿಸಿದ ಬೆಳೆ ನಮೂದು ಪ್ರತಿ ಅಥವಾ 2.ವಿಮೆ ಮಾಡಿಸಿದ ಬೆಳಗೆ ಬೆಂಬಲ ಬೆಲೆ ಪ್ರಯೋಜನ ಪಡೆದಲ್ಲಿ ರಶೀದಿ ಅಥವಾ 3.ವಿಮಗೆ ನೋಂದಾಯಿತ ಬೆಳೆಯ ಉತ್ಪನ್ನವನ್ನು ಎಪಿಎಂಸಿ ಮಾರುಕಟ್ಟೆಗೆ ಮಾರಾಟ ಮಾಡಿದ್ದಲ್ಲಿ ದಾಖಲೆಯೊಂದಿಗೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ…
ವಿಜಯಪುರ: ಭೀಮಾತೀರದ ಬಾಗಪ್ಪ ಹರಿಜನ್ ಹತ್ಯೆ ಪ್ರಕರಣವನ್ನು ವಿಜಯಪುರ ಪೊಲೀಸರು ಬೇಧಿಸಿದ್ದು, ಮಿಂಚಿನ ಕಾರ್ಯಾಚರಣೆ ನಡೆಸಿ ಹಂತಕರನ್ನು ಬಂಧಿಸಿದ್ದಾರೆ. ಎಸ್ಪಿ ಲಕ್ಷ್ಮಣ ನಿಂಬರಗಿ, ಎಎಸ್ಪಿ ಶಂಕರ್ ಮಾರಿಹಾಳ, ಎಎಸ್ಪಿ ಹಟ್ಟಿ, ಡಿವೈಎಸ್ಪಿ ಬಸವರಾಜ್ ಎಲಿಗಾರ್, ಸಿಪಿಐ ಪ್ರದೀಪ್ ತಳಕೇರಿ, ಪಿಎಸ್‌ಐ ರಾಜು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಕೊಲೆ ನಡೆದ 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಪಿಂಟ್ಯಾ ಅಗರಖೇಡ್ ಸೇರಿ ಒಟ್ಟು ನಾಲ್ವರ ಬಂಧಿಸಲಾಗಿದೆ. https://www.youtube.com/watch?v=hhJ42BF_H0o ಕಳೆದ ಆ.8ರಂದು ಬಾಗಪ್ಪನ ಶಿಷ್ಯನಿಂದ ಪಿಂಟ್ಯಾ ಅಗರೇಖ್ ನ ಸಹೋದರ ರವಿ ಅಗರಖೇಡ್ನ ಹತ್ಯೆಗೈಯಾಗಿತ್ತು. ಇದೇ ದ್ವೇಷಕ್ಕೆ ಬಾಗಪ್ಪ ಹರಿಜನ್ ಹತ್ಯೆಗೈದಿದ್ದಾರೆ. A1 ಪ್ರಕಾಶ ಅಲಿಯಾಸ್ ಪಿಂಟ್ಯಾ ಅಗರಖೇಡ್ (25), A2 ರಾಹುಲ್ ತಳಕೇರಿ (20), A3 ಗದಿಗೆಪ್ಪ ಅಲಿಯಾಸ್ ಮನಿಕಂಠ ದನಕೊಪ್ಪ (27), A4 ಸುದೀಪ್ ಕಾಂಬಳೆ (23) ಬಂಧಿತ ಆರೋಪಿಗಳಾಗಿದ್ದಾರೆ.
ಚಿನ್ನ ಮಾಡಿಸಿಕೊಳ್ಳಬೇಕು ಎಂದಾದರೆ ಬೆಲೆ ಇಳಿಕೆಯಾಗುವುದು ಮುಖ್ಯವಾಗಿದೆ. ಆದರೂ ಒಮ್ಮೊಮ್ಮೆ ಪರಿಸ್ಥಿತಿಗೆ ಕಟ್ಟುಬಿದ್ದು ಬೆಲೆ ಏರಿಕೆಯ ಸಮಯದಲ್ಲೇ ಸಾಕಷ್ಟು ಗ್ರಾಹಕರು ಚಿನ್ನ ಖರೀದಿಸುತ್ತಾರೆ. ಬೆಲೆ ತಗ್ಗಿದರೆ ನಮಗೊಂದಿಷ್ಟು ಲಾಭವಿತ್ತೆಂದು ಸಾಕಷ್ಟು ಜನ ಈ ಸಮಯದಲ್ಲಿ ಭಾವಿಸುತ್ತಾರೆ. ಚಿನ್ನದ ಮಾರುಕಟ್ಟೆಯೇ ಹಾಗೆ ಬೆಲೆ ಯಾವಾಗ ಏರುತ್ತದೆ? ಯಾವಾಗ ಇಳಿಯುತ್ತದೆ ಎಂಬುದನ್ನು ಹೇಳಲಾಗುವುದಿಲ್ಲ. ಚಿನ್ನ ಖರೀದಿಗೂ ಮುನ್ನ ಇಂದಿನ ರೇಟ್ ಹೇಗಿದೆ ಎಂಬುದನ್ನು ತಿಳ್ಕೊಳ್ಳೋಣ https://ainlivenews.com/do-you-know-okra-definitely-helps-to-get-rid-of-diabetes/ ಫೆಬ್ರವರಿ 14ರಂದು, ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಸ್ವಲ್ಪ ಏರಿಕೆಯಾಗಿದೆ. 24 ಕ್ಯಾರಟ್ 10 ಗ್ರಾಂ ಬಂಗಾರದ ದರ ₹87,060 ಆಗಿದ್ದು, 22 ಕ್ಯಾರಟ್ 10 ಗ್ರಾಂ ದರ ₹79,810 ಇದೆ. ಪ್ರಮುಖ ನಗರಗಳ ಚಿನ್ನದ ಬೆಲೆ (10 ಗ್ರಾಂ) ಚೆನ್ನೈ ನಗರದಲ್ಲಿ – 22K ಚಿನ್ನದ ದರ ₹79,810 ಇದ್ದರೆ, 24K ಚಿನ್ನದ ಬೆಲೆ ₹87,060 ತಲುಪಿದೆ. ಮುಂಬೈ ನಗರದಲ್ಲಿ – 22K ಚಿನ್ನದ ದರ ₹79,810 ಆಗಿದ್ದು, 24K ದರ ₹87,060 ಇದೆ.…
ಮಹಾ ಕುಂಭ ಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಮೊನಾಲಿಸಾ ಇದೀಗ ಬಾಲಿವುಡ್ ಬಾಗಿಲು ತೆರೆದಿದ್ದಾಳೆ. ಸಿನಿಮಾದಲ್ಲಿ ನಟಿಸೋ ಆಫರ್ ಬಂದ ಬೆನ್ನಲ್ಲೇ ಇದೀಗ ಮತ್ತೋಂದು ದೊಡ್ಡ ಆಫರ್ ಮೊನಾಲಿಸಾಗೆ ಒಲಿದು ಬಂದಿದೆ. ಕೇರಳದ ಜನಪ್ರಿಯ ಚೆಮ್ಮನೂರ್ ಜ್ಯೂವೆಲ್ಲರಿ ತನ್ನ ಪ್ರಚಾರದ ರಾಯಭಾರಿಯಾಗಿ ಮೊನಾಲಿಸಾಳನ್ನು ನೇಮಿಸಿಕೊಳ್ಳಲು ಮುಂದಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸ್ಥೆಯ ಬಾಬಿ ಚೆಮ್ಮನೂರು, ಇವತ್ತು ಮೊನಾಲಿಸಾ ಕೇರಳದ ಕಲ್ಲಿಕೋಟೆಗೆ ಬರಲಿದ್ದಾರೆ. ಅಲ್ಲಿ ಅವರನ್ನು ಕಂಪನಿಯ ಪ್ರಚಾರದ ರಾಯಭಾರಿಯಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ. ಅವರಿ 15 ಲಕ್ಷ ರೂಪಾಯಿ ಸಂಬಳ ನೀಡಲಾಗುವುದು ಎಂದು ತಿಳಿಸಿದ್ದಾರೆ. 16 ವರ್ಷದ ಹುಡುಗಿ ಮಧ್ಯ ಪ್ರದೇಶದ ಖಾರ್ಗೊನ್ ಜಿಲ್ಲೆಯ ಮೊನಾಲಿಸ ತನ್ನ ಕಣ್ಣುಗಳ ಮೂಲಕವೇ ರಾತ್ರೋ ರಾತ್ರಿ ಫೇಮಸ್ ಆಗಿದ್ದಳು. ಈಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬಾಲಿವುಡ್ ನಿಂದ ಆಫರ್ ಬಂದಿತ್ತು. ಇತ್ತೀಚೆಗೆ ಬಂದ ವರದಿಯ ಪ್ರಕಾರ, ದಿ ಡೈರಿ ಆಫ್ ಮನಿಪುರ ಸಿನಿಮಾದಲ್ಲಿ ಮೋನಾಲಿಸಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಸೋಷಿಯಲ್ ಮೀಡಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ‘ಮೊನಾಲಿಸಾ…
ಇಂದು ಪ್ರೇಮಿಗಳ ಪಾಲಿಗೆ ಮದುರ ದಿನ. ಹಲವರು ತಮ್ಮ ಪ್ರೇಮಿಗೆ ಪ್ರೇಮ ನಿವೇದನೆ ಮಾಡಿದರೆ ಇನ್ನೂ ಕೆಲವರು ತಮ್ಮ ಪ್ರೀತಿ ಪಾತ್ರರಿಗೆ ಗಿಫ್ಟ್ ನೀಡಿ ಶುಭ ಹಾರೈಸುತ್ತಿದ್ದಾರೆ., ಅಂತೆಯೇ ನಟಿ ಪವಿತ್ರಾ ಗೌಡ ಕೂಡ ಈ ವಿಶೇಷ ದಿನದಂದು ತಮ್ಮ ಕನಸಿಗೆ ಮರು ಜೀವ ನೀಡಿದ್ದಾರೆ. ಪ್ರೇಮಿಗಳ ದಿನದ ಹಿನ್ನೆಲೆಯಲ್ಲಿ ತಮ್ಮ ಕನಸಿನ ಸ್ಟುಡಿಯೋ ಆದ ರೆಡ್ ಕಾರ್ಪೆಟ್ ಸ್ಟುಡಿಯೋವನ್ನು ನಟಿ ರೀಲಾಂಚ್ ಮಾಡಿದ್ದಾರೆ. ಅರ್ ಅರ್ ನಗರದಲ್ಲಿರುವ ಪವಿತ್ರಗೌಡ ಒಡೆತನದ ರೆಡ್ ಕಾರ್ಪೆಟ್ ಸ್ಟೂಡಿಯೋ ಈಗ ರಿ ಲಾಂಚ್ ಆಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಗೌಡ ಜೈಲು ಸೇರಿದ್ದರು. ನಂತರ ಜಾಮೀನಿನ ಮೇಲೆ ಹೊರಗೆ ಬಂದಿದ್ದರು. ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ನಂತರ ಸುಮಾರು ಏಳು ತಿಂಗಳ ಕಾಳ ರೆಡ್ ಕಾರ್ಪೆಟ್ ಬಂದ್ ಆಗಿತ್ತು. ಈಗ ಅವರು ಅದನ್ನು ರಿಲಾಂಚ್ ಮಾಡಿದ್ದಾರೆ. ಜಾಮೀನು ಪಡೆದು ಹೊರ ಬಂದ ಮೇಲೆ ಸಖಲ ಸಿದ್ದತೆ ಯೊಂದಿಗೆ ರೆಡ್ ಕಾರ್ಪೆಟ್ ರೀಲಾಂಚ್ ಮಾಡಲಾಗಿದೆ. ಸರಳವಾಗಿ…
ತುಮಕೂರು: ತುಮಕೂರಿನ ಚಿಕ್ಕನಾಯಕನಹಳ್ಳಿಯಲ್ಲಿ ಎರಡು ತಿಂಗಳ ಬಾಣಂತಿ ಸಾವನ್ನಪ್ಪಿದ್ದಾರೆ.ಕುದ್ದೂರು ಗ್ರಾಮದ ದೀಪಕ್ ಪತ್ನಿ 28 ವರ್ಷದ ಸಿಂಧು ಸಾವನ್ನಪ್ಪಿದ್ದಾರೆ. ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದಾಗಿ ಸಿಂಧು ಸಾವನ್ನಪ್ಪಿರುವುದಾಗಿ ಕುಟುಂಬಸ್ಥರು ಆರೋಪಿಸಿ, ತಡರಾತ್ರಿ ಆಸ್ಪತ್ರೆ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದರು. https://ainlivenews.com/fed-up-with-the-family-feud-the-police-personnel-hanged-themselves/ ಗುರುವಾರ ರಾತ್ರಿವರೆಗೂ ಸಹ ಆಸ್ಪತ್ರೆ ವೈದ್ಯರೇ ಚಿಕಿತ್ಸೆ ನೀಡಿದ್ದಾರೆ. ಆದರೆ ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ ಏಕಾಏಕಿ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದಿದ್ದಾರೆ. ಅದರಂತೆ ಆಸ್ಪತ್ರೆಯಿಂದ ಕರೆದುಕೊಂಡು ಹೋದ ಸ್ವಲ್ಪ ದೂರದಲ್ಲೇ ಸಿಂಧು ಕೊನೆಯುಸಿರೆಳೆದಿದ್ದಾರೆ. https://www.youtube.com/watch?v=xMHkUtBdBWk ರಾತ್ರಿವರೆಗೂ ಚಿಕಿತ್ಸೆ ನೀಡಿದ ವೈದ್ಯರು ನಂತರ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದಿದ್ದಾರೆ. ಆದರೆ ಆಸ್ಪತ್ರೆಯಿಂದ ಸ್ವಲ್ಪ ದೂರ ಹೋಗುವಷ್ಟರಲ್ಲಿ ಬಾಣಂತಿ ಮೃತಪಟ್ಟಿದ್ದಾರೆ ಎಂಬುದು ಕುಟುಂಬಸ್ಥರ ಆರೋಪವಾಗಿದೆ.