Author: Author AIN

ಈಗೇನಿದ್ರು ಇಂಟರ್ ನೆಟ್ ಯುಗ. ಕೈಬೆರಳ ತುದಿಯಲ್ಲೇ ಎಲ್ಲವೂ ಕ್ಷಣಾರ್ಧದಲ್ಲಿ ಸಿಕ್ಕಿ ಬಿಡುತ್ತೆ. ನೀವು ಇಂಟರ್ ನೆಟ್ ಬಳಸುವಾಗ ಕೊಂಚ ಸ್ಪೀಡ್ ಕಮ್ಮಿಯಾದ್ರು ಮನಸ್ಸು ವಿಲ ವಿಲ ಒದ್ದಾಡಿ ಬಿಡುತ್ತೆ. ಹಾಗಾದ್ರೆ ನಿಮ್ಮ ಇಂಟರ್ ನೆಂಟ್ ಫಾಸ್ಟ್ ಆಗಿ ವರ್ಕ್ ಆಗಬೇಕು ಅಂದರೆ ಏನ್ ಮಾಡಬೇಕು ಅನ್ನೋದು ಇಲ್ಲಿದೆ ನೋಡಿ. ನಿಮ್ಮ ವೈಫೈ ವೇಗ ಹೆಚ್ಚಿಸಲು ಮನೆಯಲ್ಲಿರುವ ಮೈಕ್ರೋವೇವ್ ಅನ್ನು ಮೊದಲು ಆಫ್‌ ಮಾಡಿರಿ. ಕಾರಣ ವೈಫೈ ಹಾಗೂ ಮೈಕ್ರೋವೇವ್ 2.4GHz ನ ಒಂದೇ ಫ್ರಿಕ್ವೆನ್ಸಿಯಲ್ಲಿ ಚಾಲಿತವಾಗಿರುತ್ತವೆ. ಎರಡು ಒಂದೇ ವೇಳೆ ಚಾಲಿತವಾಗಿದ್ದಲ್ಲಿ ನಿಮ್ಮ ವೈಫೈ ವೇಗ ಕಡಿಮೆಯಾಗುತ್ತದೆ. ಹಾಗಾಗಿ ಮೈಕ್ರೋವೇವ್ ಮೊದಲು ಆಫ್ ಬಳಿಕ ವೈಫೈ ಬಳಕೆ ಮಾಡಿ. ರೂಟರ್‌ ಅನ್ನು ತೆರೆದ ಪ್ರದೇಶದಲ್ಲಿ ಇಡಿ. ಅಂದರೆ ಅದರ ಸುತ್ತ ಮುತ್ತ ಖುರ್ಚಿಗಳು, ವೈರ್‌ಲೆಸ್‌ ಸಿಗ್ನಲ್‌ ಅನ್ನು ತಡೆ ಹಿಡಿಯುವ ಯಾವುದೇ ಇತರೆ ವಸ್ತುಗಳು ಇರದ ಹಾಗೆ ನೋಡಿಕೊಳ್ಳಿ. ಉದಾಹರಣೆಗೆ ಫಿಶ್‌ ಟ್ಯಾಂಕ್ ಮತ್ತು ಅಕ್ವೇರಿಯಂಗಳು ವೈರ್‌ಲೆಸ್‌ ಸಿಗ್ನಲ್‌ಗಳನ್ನು ತಡೆಹಿಡಿಯುತ್ತವೆ…

Read More

ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ನಟಿ ಸಾನ್ಯಾ ಅಯ್ಯರ್ ಸಖತ್ ಬ್ಯುಸಿಯಾಗಿದ್ದಾರೆ. ಸದಾ ತಮ್ಮ ಫೋಟೋ ಶೂಟ್ ಗಳಿಂದ ಸುದ್ದಿಯಾಗೋ ಸಾನ್ಯಾ ಇದೀಗ ಪ್ರೇಮಿಗಳ ದಿನಕ್ಕೆ ಮತ್ತೊಂದು ಚಂದದ ಫೋಟೋವನ್ನು ಶೂಟ್ ಮಾಡಿಸಿದ್ದಾರೆ. ಸಾನ್ಯಾಗೆ ನಟ ಸಮರ್ಜಿತ್ ಸಾಥ್ ನೀಡಿದ್ದಾರೆ. ಪ್ರೇಮಿಗಳ ದಿನಕ್ಕಾಗಿ ಈ ಜೋಡಿ ಫೋಟೋ ಶೂಟ್ ಮಾಡಿಸಿದ್ದು ಫೋಟೋ ಶೂಟ್ ಮಾಡುವ ಐಡಿಯಾವನ್ನು ನಿರ್ದೇಶಕ ಇಂದ್ರಜಿತ್ ಲಂಕೇಶ್ ನೀಡಿದ್ದಾರೆ. ಪ್ರೇಮಿಗಳ ದಿನಕ್ಕೆ ಸ್ಪೆಷಲ್ ಗಿಫ್ಟ್ ನೀಡಲು ಪ್ಲಾನ್ ಮಾಡಿದ್ದ ಇಂದ್ರಜಿತ್ ಲಂಕೇಶ್ ಗೌರಿ ಚಿತ್ರದ ನಾಯಕ ಸಮರ್ಜಿತ್ ಹಾಗೂ ನಾಯಕಿ ಸಾನ್ಯಾ ಅಯ್ಯರ್ ಜೊತೆಯಾಗಿಸಿ ಫೊಟೋ ಶೂಟ್ ಮಾಡಿಸಿದ್ದಾರೆ. ಗೌರಿ ಸಿನಿಮಾದ ಮೂಲಕ ಸಾನ್ಯಾ ಅಯ್ಯರ್ ನಾಯಕಿ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್‌ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಗೌರಿ ಚಿತ್ರದ ಶೂಟಿಂಗ್ ಪೂರ್ಣಗೊಂಡಿದೆ. ಡಬ್ಬಿಂಗ್ ಕೂಡ ಎಲ್ಲ ಆಗಿದೆ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿಯೇ ಸಿನಿಮಾ ಇದೆ. ಪ್ರೇಮಿಗಳ ದಿನಕ್ಕೆ ಚಿತ್ರದ ಪೋಸ್ಟರ್ ರಿಲೀಸ್…

Read More

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಕಳೆದ ಗುರುವಾರ ನಡೆದ ಸಾರ್ವತ್ರಿಕ ಚುನಾವಣೆ ಬಳಿಕ ಸಾಕಷ್ಟು ಪ್ರಕ್ರಿಯೆಗಳು ನಡೆದಿವೆ. ಇದೀಗ ಮಂಗಳವಾರ ತಡರಾತ್ರಿ ನಡೆದ ಬೆಳವಣಿಗೆಯಲ್ಲಿ ಪಿಎಂಎಲ್‌- ಎನ್ (ಪಾಕಿಸ್ತಾನ ಮುಸ್ಲಿಂ ಲೀಗ್‌ – ನವಾಜ್) ಅಧ್ಯಕ್ಷ ಶೆಹಬಾಜ್ ಷರೀಫ್ ಅವರನ್ನು ಪ್ರಧಾನಿ ಸ್ಥಾನಕ್ಕೆ ಪಕ್ಷವು ನಾಮ ನಿರ್ದೇಶನ ಮಾಡಿ ಆದೇಶ ಹೊರಡಿಸಿದೆ. ನಾಲ್ಕನೇ ಬಾರಿಗೆ ಪ್ರಧಾನಿ ಹುದ್ದೆಗೇರಲು ನವಾಜ್‌ ಷರೀಫ್‌ ಸಜ್ಜಾಗಿದ್ದರು. ಆದರೆ ತಡ ರಾತ್ರಿ ನಡೆದ ಬೆಳವಣಿಗೆಗಳು ವ್ಯತಿರಿಕ್ತವಾಗಿದ್ದು, ಪಿಪಿಪಿ, ಎಂಕ್ಯೂಎಂ ಸೇರಿದಂತೆ ಇತರೆ ಪಕ್ಷಗಳ ಬೆಂಬಲ ಪಡೆದು ಸಮ್ಮಿಶ್ರ ಸರಕಾರ ರಚನೆಗೆ ಶೆಹಬಾಜ್ ಷರೀಫ್ ಮುಂದಾಗಿದ್ದಾರೆ. ಪಿಎಂಎನ್‌ಎಲ್‌ ಪಕ್ಷದಿಂದ ಪ್ರಧಾನಿ ಸ್ಥಾನಕ್ಕೆ ನವಾಜ್‌ ಷರೀಫ್‌ ಅವರ ಹೆಸರನ್ನು ಸೋದರ ಹಾಗೂ ಮಾಜಿ ಪ್ರಧಾನಿ ಶೆಹಬಾಜ್‌ ಷರೀಫ್‌ ಘೋಷಣೆ ಮಾಡಿದ್ದರು., ”ಹಳ್ಳಿ ತಪ್ಪಿರುವ ದೇಶದ ಅಭಿವೃದ್ಧಿಗೆ ಮರು ಜೀವ ನೀಡಲು ನವಾಜ್‌ ಅಗತ್ಯ,” ಎಂದು ಪ್ರತಿಪಾದಿಸಿದ್ದರು. ಆದರೆ ಶೆಹಬಾಜ್ ಅವರನ್ನೇ ಎರಡನೇ ಅವಧಿಗೆ ಪ್ರಧಾನಿಯನ್ನಾಗಿ ಮಾಡಲು ನವಾಜ್ ಹೆಸರು ಸೂಚಿಸಿದ್ದಾರೆ.

Read More

ಆಡಳಿತ ವಿರೋಧಿ ದಂಗೆಯನ್ನು ಹತ್ತಿಕ್ಕುವ ಸಲುವಾಗಿ ಯುವ ಜನರನ್ನು ಏಪ್ರಿಲ್‌ನಿಂದ ಕಡ್ಡಾಯವಾಗಿ ಸೇನೆಗೆ ನೇಮಿಸಿಕೊಳ್ಳುವ ಯೋಜನೆಗೆ ಮ್ಯಾನ್ಮಾರ್ ಸೇನಾಡಳಿಗೆ ಮುಂದಾಗಿದೆ. ಇದಕ್ಕಾಗಿ ನಿವೃತ್ತ ಸೇನಾ ಸಿಬ್ಬಂದಿಯ ಆಗತ್ಯ ಇದೆ ಎಂದು ಮೂಲಗಳು ತಿಳಿಸಿವೆ. 2021ರಲ್ಲಿ ಚುನಾಯಿತ ಸರ್ಕಾರದಿಂದ ಸೇನೆಯು ಅಧಿಕಾರ ಕಸಿದುಕೊಂಡ ಬಳಿಕ ದೇಶದಲ್ಲಿ ಪ್ರಕ್ಷುಬ್ಧ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಜನರನ್ನು ಸೇವೆಗೆ ಕರೆಸಿಕೊಳ್ಳಲು ಯೋಜಿಸಿರುವುದು ಸೇನಾಡಳಿತ ಒತ್ತಡದಲ್ಲಿದೆ ಎಂಬುದನ್ನು ಸೂಚಿಸುತ್ತದೆ. 18ರಿಂದ 35 ವಯಸ್ಸಿನ ಪುರುಷರು ಮತ್ತು 18ರಿಂದ 27 ವಯಸ್ಸಿನ ಮಹಿಳೆಯರು ಎರಡು ವರ್ಷದವರೆಗೆ ಸೇನೆಯಲ್ಲಿ ಸೇವೆ ಸಲ್ಲಿಸುವುದನ್ನು ಕಡ್ಡಾಯಗೊಳಿಸುವ ಕಾನೂನನ್ನು ಮ್ಯಾನ್ಮಾರ್ ಆಡಳಿತ ಕಳೆದವಾರ ಘೋಷಿಸಿದೆ. ಇದು ಏಪ್ರಿಲ್‌ನಿಂದ ಜಾರಿಗೆ ಬರಲಿದೆ. ‘ಕಡ್ಡಾಯ ಸೇನಾ ಭರ್ತಿಯನ್ನು ಏಪ್ರಿಲ್‌ನಿಂದ ಆರಂಭಿಸಲು ಕಾರ್ಯಪ್ರವೃತ್ತರಾಗಿದ್ದೇವೆ’ ಎಂದು ಸೇನಾಡಳಿತದ ವಕ್ತಾರ ಜಾ ಮಿನ್‌ ತುನ್‌ ತಿಳಿಸಿರುವುದಾಗಿ ಬಿಬಿಸಿ ವರದಿ ಮಾಡಿದೆ. ಈ ಬಗ್ಗೆ ಅವರು ಹೆಚ್ಚಿನ ವಿವರ ನೀಡಿಲ್ಲ. ಆದರೆ, ಕಳೆದ ಐದು ವರ್ಷಗಳಲ್ಲಿ ನಿವೃತ್ತರಾಗಿರುವವರೂ ಸೇವೆಗೆ ವಾಪಸ್‌ ಆಗುವಂತೆ ತುನ್‌…

Read More

‘ಬಿಗ್ ಬಾಸ್ ಕನ್ನಡ ಸೀಸನ್ 10’ ರ ವಿನ್ನರ್ ಕಾರ್ತಿಕ್ ಮಹೇಶ್ ಸಖತ್ ಬ್ಯುಸಿಯಾಗಿದ್ದಾರೆ. ಸಾಕಷ್ಟು ಸ್ಥಳಗಳಿಗೆ ತೆರಳಿ ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದಾರೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಸಿಎಂ ನಿವಾಸದಲ್ಲಿ ಕಾರ್ತಿಕ್ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಕಾರ್ತಿಕ್ ಅವರಿಗೆ ಶುಭ ಹಾರೈಸಿದ್ದಾರೆ. ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕಾರ್ತಿಕ್ ಆಶೀರ್ವಾದ ಪಡೆದಿದ್ದಾರೆ. ‘ಒಳ್ಳೆದಾಗಲಿ ಕಣಯ್ಯ. ಸಿನಿಮಾ ರಂಗದಲ್ಲಿ ಒಳ್ಳೆಯ ಹೆಸರು ಮಾಡು’ ಎಂದು ಹಾರೈಸಿದ್ದಾರೆ. ಈ ವೇಳೆ ಉಪ ಮುಖ್ಯಮಂತ್ರಿ  ಡಿ.ಕೆ.ಶಿವಕುಮಾರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಭಾ.ಮ ಹರೀಶ್. ಮತ್ತು ಉಲ್ಲಾಸ್ ಗೌಡ ಹಾಜರಿದ್ದರು.

Read More

ಒಂದು ಕಾಲದಲ್ಲಿ ಬಾಲಿವುಡ್ ಚಿತ್ರರಂಗವನ್ನು ಆಳಿದ ಖಾನ್ ತ್ರಯರು ಇದೀಗ ಕೊಂಚ ಸೈಲೆಂಟ್ ಆಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸೋಲಿನ ಸಿನಿಮಾಗಳನ್ನು ಮಾಡಿದ್ದ ಶಾರುಖ್ ಖಾನ್ ಇದೀಗ ಮತ್ತೆ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಅತ್ತ ಆಮಿರ್ ಖಾನ್ ಸದ್ದಿಲ್ಲದೆ ಸೈಲೆಂಟ್ ಆಗಿದ್ದಾರೆ. ಈ ಮಧ್ಯೆ ನಟ ಸಲ್ಮಾನ್ ಖಾನ್ ಹೇಗಾದ್ರು ಮಾಡಿ ಸ್ಟಾರ್ ಪಟ್ಟಕ್ಕೆ ಏರಬೇಕು ಎಂದು ದಕ್ಷಿಣ ಭಾರತದ ನಿರ್ದೇಶಕರ ಮೊರೆ ಹೋಗಿದ್ದಾರೆ. ಜವಾನ್ ಸಿನಿಮಾದ ಬಳಿಕ ಶಾರುಖ್ ಖಾನ್ ಮತ್ತೆ ಸ್ಟಾರ್ ಪಟ್ಟಕ್ಕೇರಿದ್ದಾರೆ. ಇನ್ನೂ ನಟ ರಣಬೀರ್ ಕಪೂರ್ ಕೂಡ ತಮ್ಮ ವೃತ್ತಿ ಜೀವನದಲ್ಲಿಯೇ ಅತಿ ದೊಡ್ಡ ಹಿಟ್ ಸಿನಿಮಾ ನೀಡಿದ್ದಾರೆ. ಇದೇ ಕಾರಣಕ್ಕೆ ಬಾಲಿವುಡ್​ನ ಸ್ಟಾರ್ ನಟರ ಕಣ್ಣು ದಕ್ಷಿಣ ಭಾರತದತ್ತ ನೆಟ್ಟಿದ್ದೆ. ಇದೀಗ ನಟ ಸಲ್ಮಾನ್ ಖಾನ್ ಕೂಡ ದಕ್ಷಿಣ ಭಾರತದ ಸಿನಿಮಾ ನಿರ್ದೇಶಕರ ಮೊರೆ ಹೋಗಿದ್ದಾರೆ. ತಮಿಳಿನಲ್ಲಿ ‘ಗಜಿನಿ’, ‘ತುಪ್ಪಾಕಿ’, ‘7ತ್ ಸೆನ್ಸ್’, ‘ಕತ್ತಿ’, ತೆಲುಗಿನಲ್ಲಿ ಚಿರಂಜೀವಿ ನಟನೆಯ ‘ಸ್ಟಾಲಿನ್’, ಮಹೇಶ್ ಬಾಬು ನಟನೆಯ…

Read More

ಖ್ಯಾತ ಗಾಯಕಿ ಹಾಗೂ ನಟಿ ವಿಜಯ ಲಕ್ಷ್ಮಿ ಅಲಿಯಾಸ್ ಮಲ್ಲಿಕಾ ರಜಪೂತ್ ಅವರ ಶವ ಫೆ.13ರಂದು ತಮ್ಮ ಸ್ವಗೃಹದಲ್ಲಿ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಗಾಯಕಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದ್ದು, ಅವರ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಸ್ಪಷ್ಟನೆ ಸಿಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. 35 ವರ್ಷದ ಗಾಯಕಿ ಕಮ್ ನಟಿ ಮಲ್ಲಿಕಾ ರಜಪೂರ್ ಸಾಕಷ್ಟು ಸಿನಿಮಾಗಳಿಗೆ ಹಾಡಿ ಖ್ಯಾತಿ ಘಳಿಸಿದ್ದರು. ಅವರ ಮೃತದೇಹ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಸೀತಾಕುಂಡ್ ಪ್ರದೇಶದ ತನ್ನ ಮನೆಯ ಕೋಣೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರ ಸಾವು ಅನುಮಾನಾಸ್ಪದವಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮನೆಯ ಸದಸ್ಯರು ಮಲಗಿದ್ದ ಕಾರಣ ಯಾವಾಗ ಈ ಘಟನೆ ನಡೆದಿದೆ ಎಂಬುದು ಗೊತ್ತಾಗಲಿಲ್ಲ ಎಂದು ಮಲ್ಲಿಕಾ ಅವರ ತಾಯಿ ತಿಳಿಸಿದ್ದಾರೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ತೋರುತ್ತಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಶ್ರೀರಾಮ್ ಪಾಂಡೆ ಹೇಳಿದ್ದಾರೆ.

Read More

ರಾಜಸ್ಥಾನದ ಗುಲಾಬಿ ಮರಳುಗಲ್ಲಿನಿಂದ ನಿರ್ಮಿಸಲಾದ ಅಬುಧಾಬಿಯ ಮೊದಲ ಹಿಂದೂ ದೇವಾಲಯವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಬುಧವಾರ ಉದ್ಘಾಟಿಸಲಿದ್ದು, ಈ ದೇವಸ್ಥಾನವನ್ನು ಬೋಚಸನ್​ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ ಸ್ವಾಮಿನಾರಾಯಣ ದೇವಾಲಯವನ್ನು ನಿರ್ಮಿಸಿದೆ. ಈ ದೇವಸ್ಥಾನವನ್ನು ಅಬುಧಾಬಿಯ ಮುರೇಖಾ ಜಿಲ್ಲೆಯಲ್ಲಿ 27 ಎಕರೆ ಜಾಗದಲ್ಲಿ ನಿರ್ಮಿಸಲಾಗಿದೆ. ಉದ್ಘಾಟನೆ ಹಿನ್ನೆಲೆ ಬಿಎಪಿಎಸ್‌ನ ಆಧ್ಯಾತ್ಮಿಕ ಗುರು ಸ್ವಾಮಿ ಮಹಂತ್ ಸ್ವಾಮಿ ಮಹಾರಾಜ್ ಅವರು ಯುಎಇಗೆ ಆಗಮಿಸಿದ್ದಾರೆ. ಮಂದಿರದ ಉದ್ಘಾಟನೆಯನ್ನು ‘ಸೌಹಾರ್ದತೆಯ ಹಬ್ಬ’ದಂತೆ ಆಚರಿಸಲಾಗುತ್ತದೆ. ನಂಬಿಕೆಯನ್ನು ಬಲಪಡಿಸುವುದು, ಎಲ್ಲಾ ತಲೆಮಾರುಗಳು ಮತ್ತು ಹಿನ್ನೆಲೆಗಳುಳ್ಳ ಜನರ ನಡುವೆ ಸಾಮರಸ್ಯವನ್ನು ಬೆಳೆಸುವುದು ಈ ಉದ್ಘಾಟನಾ ಕಾರ್ಯಕ್ರಮದ ಧ್ಯೇಯವಾಗಿದೆ ಎಂದು ಸ್ವಾಮಿನಾರಾಯಣ ಸಂಸ್ಥೆ (ಬಿಎಪಿಎಸ್) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಈ ಭೇಟಿ ಭಾರತ ಮತ್ತು ಯುಎಇ ನಡುವಿನ ನಿಕಟ ಸಂಬಂಧವನ್ನು ಮತ್ತಷ್ಟು ‌ಹೆಚ್ಚಿಸಲಿದೆ ಎಂದು ವಿಶ್ಲೇಷಿಸಲಾಗಿದೆ. ಈ ದೇವಾಲಯದ ಮೂಲೆ ಮೂಲೆಯಲ್ಲಿ ಭಾರತದ ವೈಭವವಿದೆ. ಇಲ್ಲಿ ವಾರಾಣಸಿಯನ್ನು ಕೂಡ ನೋಡಬಹುದು. ಅಬುಧಾಬಿಯಲ್ಲಿ ನಿರ್ಮಿಸಲಾದ ಹಿಂದೂ ದೇವಾಲಯವು…

Read More

ಬಿಗ್ ಬಾಸ್ ಸೀಸನ್ 10ರಲ್ಲಿ ಉತ್ತಮ ಸ್ನೇಹಿತರಾಗಿ ಸಂತು, ಪಂತು ಎಂದೇ ಖ್ಯಾತಿ ಘಳಿಸಿರುವ ಹಾಸ್ಯ ಕಲಾವಿನ ತುಕಾಲಿ ಸಂತೋಷ್ ಹಾಗೂ ಹಳ್ಳಿಕಾರ್ ಖ್ಯಾತಿಯ ವರ್ತೂರು ಸಂತೋಷ್ ಇದೀಗ ಸಿನಿಮಾದಲ್ಲಿ ಒಂದಾಗುತ್ತಿದ್ದಾರೆ. ಈ ಇಬ್ಬರ ಕುರಿತಂತೆ ಸಿನಿಮಾವೊಂದು ಮೂಡಿ ಬರಲಿದೆ ಎಂದು ಹೇಳಲಾಗುತ್ತಿದ್ದು ಚಿತ್ರಕ್ಕೆ ಸಂತು ಪಂತು ಎಂದು ಹೆಸರಿಡಲಾಗಿದೆ. ಈ ಬಗ್ಗೆ ತುಕಾಲಿ ಸಂತೋಷ್ ಪ್ರತಿಕ್ರಿಯಿಸಿದ್ದು, ಸಿನಿಮಾದ ಸ್ಕ್ರಿಪ್ಟ್ ರೆಡಿಯಿದೆ. ನಿರ್ಮಾಪಕರೂ ಕೂಡ ಇದ್ದಾರೆ. ಆದರೆ ಈ ಸಿನಿಮಾ ಯಾವಾಗ ಆಗುತ್ತದೆಯೋ ಗೊತ್ತಿಲ್ಲ ಎಂದಿದ್ದಾರೆ. ಸದ್ಯ ತುಕಾಲಿ ಸಂತೋಷ್ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ರೆ, ವರ್ತೂರು ಸಂತೋಷ್, ಹಳ್ಳಿಕಾರ್ ಪಂದ್ಯವನ್ನು ಆಯೋಜಿಸಲು ತಯಾರಿ ನಡೆಸುತ್ತಿದ್ದಾರೆ. ಈ ಇಬ್ಬರೂ ಒಟ್ಟಾಗಿ ಸಿನಿಮಾ ಮಾಡ್ತಾರಾ ಅಥವಾ ಇದೆಲ್ಲಾ ಬರೀ ಗಾಳಿ ಸುದ್ದಿಯಷ್ಟೇಯ ಎಂಬುದನ್ನು ಕಾದು ನೋಡಬೇಕಿದೆ.

Read More

ಬಾಲಿವುಡ್ ನ ತನು ಮತ್ತು ಮನು ಜೋಡಿ ಎಂದೇ ಖ್ಯಾತಿ ಘಳಿಸಿದ್ದ ನಟಿ ಕಂಗನಾ ರಣಾವತ್ ಮತ್ತು ನಟ ಮಾಧವನ್ ಮತ್ತೆ ಒಂದಾಗ್ತಿದ್ದಾರೆ. ತನು ವೆಡ್ಸ್ ಮನು ಸಿನಿಮಾದಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಮೋಡಿ ಮಾಡಿದ್ದ ಜೋಡಿ ಇದೀಗ ಮತ್ತೆ ಸ್ಕ್ರೀನ್ ಮೇಲೆ ಒಂದಾಗ್ತಿದ್ದಾರೆ. ತನು ವೆಡ್ಸ್ ಮನು ರಿಟರ್ನ್ಸ್ ಅನ್ನೋ ಸಿನಿಮಾದ ಬಳಿಕ ಕಂಗನಾ ಹಾಗೂ ಮಾಧವನ್ ಮತ್ತೆ ಒಂದಾಗಿರಲಿಲ್ಲ. ತನು ವೆಡ್ಸ್ ಮನು ಹಾಗೂ ತನು ವೆಡ್ಸ್ ಮನು ರಿಟರ್ನ್ಸ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಘಳಿಸಿತ್ತು. ಈ ಜೋಡಿಯನ್ನು ಮತ್ತೆ ಒಂದಾಗಿ ನೋಡ್ಬೇಕು ಅಂದುಕೊಮಡರು ಅದು ಸಾಧ್ಯವಾಗಿರಲಿಲ್ಲ. ಇದೀಗ ಮತ್ತೆ ಈ ಜೋಡಿಯ ಕಾಂಬಿನೇಷನ್ ನಲ್ಲಿ ಚಿತ್ರವೊಂದು ಮೂಡಿ ಬರಲಿದೆ. ತನು ವೆಡ್ಸ್ ಮನು ಸಿನಿಮಾ ರಿಲೀಸ್ ಆಗಿ ಒಂಬತ್ತು ವರ್ಷಗಳೇ ಕಳೆದಿವೆ. ಒಂಬತ್ತು ವರ್ಷಗಳ ನಂತರ ಮತ್ತೆ ಈ ಜೋಡಿ ತೆರೆಯ ಮೇಲೆ ಬರೋಕೆ ರೆಡಿ ಆಗುತ್ತಿದೆ. ಈ ಮಾಹಿತಿಯನ್ನು ಸ್ವತಃ ಕಂಗನಾ ಬಹಿರಂಗ…

Read More