ಬಿಗ್ ಬಾಸ್ ಸ್ಪರ್ಧಿಗಳು ಮನೆಯಿಂದ ಆಚೆ ಬಂದ ಬಳಿಕವೂ ತಮ್ಮ ಸ್ನೇಹ ಮುಂದುವರೆಸಿದ್ದಾರೆ. ಇದೀಗ ಬಿಗ್ ಬಾಸ್ ಸ್ಪರ್ಧಿ ತನಿಷಾ ಕುಪ್ಪಂಡ ಬಿಗ್ ಬಾಸ್ ವಿನ್ನರ್ ಕಾರ್ತಿಕ್ ತಂಗಿಯ ಮನೆಗೆ ಆಗಮಿಸಿ ಕಾರ್ತಿಕ್ ತಂಗಿಯ ಮಗುವಿಗೆ ಉಡುಗೊರೆ ನೀಡಿದ್ದಾರೆ. ಕಾರ್ತಿಕ್ ಅವರ ತಂಗಿಯ ಮನೆಗೆ ಭೇಟಿ ನೀಡಿರುವ ತನಿಷಾ ಕುಪ್ಪಂಡ ಮಗುವಿಗೆ ಚಿನ್ನದ ಉಂಗುರುವನ್ನು ಉಡುಗೊರೆಯಾಗಿ ನೀಡಿದ್ದಾರೆ. ಕೆಲ ಸಮಯ ಮಗುವಿನೊಂದಿಗೆ ಕಳೆದಿದ್ದು ಅದರ ಸುಂದರ ಕ್ಷಣವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ, ಕಾರ್ತಿಕ್ ಅವರ ಸಹಾಯವನ್ನೂ ಗುಣಗಾನ ಮಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಕಾರ್ತಿಕ್ ಅವರಿಗೆ ತನಿಷಾ ಮತ್ತು ತನಿಷಾಗೆ ಕಾರ್ತಿಕ್ ಸಪೋರ್ಟ್ ಮಾಡಿಕೊಂಡು ಆಟವಾಡಿದ್ದಾರೆ. ಟಾಸ್ಕ್ ವಿಚಾರದಲ್ಲಿ ಜಗಳ ಕೂಡ ಮಾಡಿದ್ದಾರೆ. ಆದರೆ ಅದೇನೆ ಇದ್ದರೂ ಮನೆಯಿಂದ ಹೊರ ಬಂದ ಬಳಿಕ ಸ್ನೇಹವನ್ನು ಮುಂದುವರೆಸಿದ್ದಾರೆ.
Author: Author AIN
ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಸಲಾರ್ ಸಿನಿಮಾ ಹಿಟ್ ಆದ ಖುಷಿಯಲ್ಲಿದ್ದಾರೆ. ಸದ್ಯ ನಟ ಹೊಸ ಸಿನಿಮಾದ ಕೆಲಸದಲ್ಲಿ ತೊಡಗಿಕೊಂಡಿದ್ದು ಈ ಮಧ್ಯೆ ಖ್ಯಾತ ಜ್ಯೋತಿಷಿ ವೇಣುಸ್ವಾಮಿ ಪ್ರಭಾಸ್ ಜೀವನದಲ್ಲಿ ಸಮಸ್ಯೆ ಬರಲಿದೆ ಎಂದಿದ್ದಾರೆ. ಸದ್ಯ ನಟ ಪ್ರಭಾಸ್ ಯುರೋಪ್ ಪ್ರವಾಸದಲ್ಲಿದ್ದಾರೆ. ಹಿಂದೊಮ್ಮೆ ಮಂಡಿ ನೋವಿನ ಆಪರೇಶನ್ ಯುರೋಪ್ ಗೆ ತೆರಳಿದ್ದ ಪ್ರಭಾಸ್ ಇದೀಗ ಮತ್ತೆ ಅದೇ ದೇಶಕ್ಕೆ ಹೋಗಿದ್ದಾರೆ. ಇದೇ ಸಮಯದಲ್ಲಿ ಖ್ಯಾತ ಜ್ಯೋತಿಷಿ ವೇಣುಸ್ವಾಮಿ ಭವಿಷ್ಯ ನುಡಿದಿದ್ದಾರೆ. ಇದನ್ನ ಕೇಳಿ ಫ್ಯಾನ್ಸ್ ಶಾಕ್ ಆಗಿದ್ದಾರೆ. ‘ಸಲಾರ್’ ಸಿನಿಮಾವನ್ನು ಬರೀ ಅವರ ಅಭಿಮಾನಿಗಳು ಮಾತ್ರ ನೋಡುತ್ತಾರೆ ಎಂದು ಹೇಳಿದ್ದೆ. ಅದು ನಿಜವಾಗಿದೆ. ಈಗ ಇನ್ನೊಂದು ಸತ್ಯ ಇದೆ. ಅದೇ ಪ್ರಭಾಸ್ ಆರೋಗ್ಯ. ಅವರ ಆರೋಗ್ಯದಲ್ಲಿ ಏರುಪೇರಾಗಲಿದೆ. ಜೊತೆಗೆ ವೈಯಕ್ತಿಕ ಬದುಕಿನಲ್ಲಿ ಅನೇಕ ಅಡೆತಡೆ ಬರಲಿವೆ. ಇದು ಸತ್ಯವಾಗಲಿದೆ ಎಂದಿದ್ದಾರೆ. ಮೂರು ವರ್ಷಗಳ ಹಿಂದೆಯೇ ವೇಣುಸ್ವಾಮಿ ಇದೇ ರೀತಿ ಪ್ರಭಾಸ್ ಹಿಂದೆ ಬಿದ್ದಿದ್ದರು. ಮೂರು ಸಿನಿಮಾ ಸೋಲಲಿದೆ. ಸಲಾರ್ ಗೆದ್ದರೂ ಅದನ್ನು…
ತೆಲುಗು ಚಿತ್ರ ರಂಗದ ಖ್ಯಾತ ನಟ, ರಾಜಕಾರಣಿ ಮತ್ತು ನಿರ್ಮಾಪಕ ಬಂಡ್ಲ ಗಣೇಶ್ ಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 95 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಗೂಲ್ ನ್ಯಾಯಾಲಯವು ಶಿಕ್ಷೆಯ ಜೊತೆಗೆ 95 ಲಕ್ಷ ರೂಪಾಯಿ ಪಾವಂತಿಸುವಂತೆ ಸೂಚಿಸಿದೆ. ಒಂಗೂಲಿನ ನಿವಾಸಿ ಜೆಟ್ಟಿ ವೆಂಕಟೇಶ್ವರ ಎನ್ನುವವರ ಹತ್ತಿರ ಬಂಡ್ಲ ಗಣೇಶ್ ಹಣಕಾಸು ವ್ಯವಹಾರ ಮಾಡಿದ್ದರು. ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ 95 ಲಕ್ಷ ರೂಪಾಯಿ ಮೊತ್ತದ ಚೆಕ್ ಕೂಡ ನೀಡಿದ್ದರು. ಆದರೆ ಗಣೇಶ್ ನೀಡಿರುವ ಚೆಕ್ ಬೌನ್ಸ್ ಆದ ಕಾರಣ ವೆಂಕಟೇಶ್ವರ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಅದೇ ಪ್ರಕರಣದಲ್ಲಿ ಬಂಡ್ಲ ಗಣೇಶ್ ಅವರಿಗೆ ಜೈಲು ಶಿಕ್ಷೆಯಾಗಿದೆ. ಹಾಸ್ಯ ನಟರಾಗಿ ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಬಂಡ್ಲ ಗಣೇಶ್ ನಟನೆಯ ಜೊತೆಗೆ ನಿರ್ಮಾಪಕರಾಗಿ, ರಿಯಲ್ ಎಸ್ಟೇಟ್ ಉದ್ಯಮಿಯಾಗಿ, ರಾಜಕಾರಣಿಯಾಗಿಯೂ ಗುರುತಿಸಿಕೊಂಡಿದ್ದಾರೆ. ನಿರ್ಮಾಪಕರಾಗಿ ಭಾರೀ ಬಜೆಟ್ ಸಿನಿಮಾಗಳನ್ನೂ ಮಾಡಿದ್ದಾರೆ. ಇದೀಗ ಚೆಕ್ ಬೌನ್ಸ್ ಪ್ರಕರಣದಲ್ಲಿ ಬಂಡ್ಲ ಗಣೇಶ್ ಒಂದು…
ಪಾಕಿಸ್ತಾನದ ಮುಂದಿನ ಪ್ರಧಾನಿಯ ಕುರಿತು ದಿನಕ್ಕೊಂದು ಸುದ್ದಿಗಳು ಕೇಳಿ ಬರುತ್ತಿದೆ. ಇದೀಗ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷದ ಪ್ರಧಾನ ಕಾರ್ಯದರ್ಶಿ ಒಮರ್ ಅಯೂಬ್ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಗುರುವಾರ ಘೋಷಿಸಿದೆ. ರಾವಲ್ಪಿಂಡಿಯ ಅಡಿ/ಯಾಲಾ ಜೈಲಿನ ಹೊರಗೆ ಇಮ್ರಾನ್ ಅವರೊಂದಿಗೆ ಮಾತನಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಿಟಿಐ ನಾಯಕ ಅಸದ್ ಖೈಸರ್ ಅಯೂಬ್ ಅವರ ಉಮೇದುವಾರಿಕೆಯನ್ನು ಘೋಷಿಸಿದರು ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಫೆಬ್ರವರಿ 8ರ ಗುರುವಾರ ನಡೆದ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ದೇಶವ್ಯಾಪಿ ಪ್ರತಿಭಟನಾ ಅಭಿಯಾನಕ್ಕೆ ಇಮ್ರಾನ್ ಖಾನ್ ದಿನಾಂಕವನ್ನು ನೀಡಲಿದ್ದಾರೆ ಎಂದು ಖೈಸರ್ ಹೇಳಿದ್ದಾರೆ. ಜಮಿಯತ್ ಉಲೇಮಾ-ಎ-ಇಸ್ಲಾಂ (ಎಫ್), ಅವಾಮಿ ನ್ಯಾಶನಲ್ ಪಾರ್ಟಿ ಮತ್ತು ಕ್ವಾಮಿ ವತನ್ ಪಾರ್ಟಿಯನ್ನು ಉಲ್ಲೇಖಿಸಿ ಫಲಿತಾಂಶಗಳ ವಿರುದ್ಧ ಪ್ರತಿಭಟಿಸುವ ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ತೊಡಗಿಸಿಕೊಳ್ಳಲು ಪಕ್ಷವು ಪ್ರಯತ್ನಗಳನ್ನು ಮಾಡುತ್ತಿದೆ. ಪಕ್ಷೇತರರು ಬೆಂಬಲ ನೀಡಿದ್ದರಿಂದ ಪಿಟಿಐ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.ಆದಾಗ್ಯೂ,…
ವಾಷಿಂಗ್ಟನ್: ಅಮೆರಿಕದ ಅಲಬಾಮಾ ರಾಜ್ಯದಲ್ಲಿ ಗ್ರಾಹಕನೋರ್ವ ಹೋಟೆಲ್ ಮಾಲಿಕನನ್ನುಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. 76 ವರ್ಷದ ಭಾರತೀಯ ಮೂಲದ ಹೋಟೆಲ್ ಮಾಲಿಕ ಪ್ರವೀಣ್ ಕೊಲೆಯಾದ ವೃದ್ಧ. ಹೋಟೆಲ್ ರೂಮಿನ ವಿಚಾರವಾಗಿ ಗ್ರಾಹಕ ಹಾಗೂ ಪ್ರವೀಣ್ ನಡುವೆ ಜಗಳವಾಗಿದ್ದು ಈ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎನ್ನಲಾಗಿದೆ. ಶೆಫೀಲ್ಡ್‌ನಲ್ಲಿ ಹಿಲ್‌ಕ್ರೆಸ್ಟ್ ಹೋಟೆಲ್ ಮಾಲೀಕರಾಗಿದ್ದ ಪ್ರವೀಣ್ ರಾವ್ಜಿಭಾಯ್ ಪಟೇಲ್ ಅವರನ್ನು ಕಳೆದ ವಾರ ಗುಂಡಿಕ್ಕಿ ಹತ್ಯೆ ಮಾಡಿದ ವಿಲಿಯಂ ಜೆರಮಿ ಮೂರ್ (34) ಎಂಬಾತನನ್ನು ಬಂಧಿಸಲಾಗಿದೆ ಎಂದು ಶೆಫೀಲ್ಡ್ ಪೊಲೀಸ್ ಮುಖ್ಯಸ್ಥ ರಿಕಿ ಟೆರಿ ಹೇಳಿದ್ದಾರೆ.
ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ನೆಚ್ಚಿನ ನಟನ ಜನ್ಮದಿನವನ್ನು ಸೆಲೆಬ್ರೇಟ್ ಮಾಡಲು ಅಭಿಮಾನಿಗಳು ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ. ಈ ಮಧ್ಯೆ ದಾಸನ ಹುಟ್ಟುಹಬ್ಬದ ಪ್ರಯುಕ್ತ ದರ್ಶನ್ ನಟನೆಯ ಡೆವಿಲ್ ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡಲಾಗಿದೆ. ಡೆವಿಲ್ ಚಿತ್ರದ ಟೀಸರ್ ಫಸ್ಟ್ ಲುಕ್ ಹೊಸ ರೀತಿಯಲ್ಲಿ ಮೂಡಿ ಬಂದಿದ್ದು, ಹಿಂದೆಂದೂ ನೋಡಿರದ ಅವತಾರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಈ ಮೂಲಕ ದರ್ಶನ್ ಅಭಿಮಾನಿಗಳಿಗೆ ಡೆವಿಲ್ ಚಿತ್ರತಂಡ ಭರ್ಜರಿಯಾದ ಉಡುಗೊರೆಯನ್ನೇ ನೀಡಿದೆ. ‘ನಮ್ಮ ಮನೆಯಲೊಂದು ಪುಟ್ಟ ಪಾಪು ಇರುವುದು. ಫೋಟೋ ತೆಗೆದರೆ ಅದಕೆ ಬಲು ಕೋಪ ಬರುವುದು. ಫೋಟೋ ತೆಗೆದ ಪಾಪು ಕೈಯ ಮುರಿದು ಬಿಡುವುದು. ಸರ್ಸು ಪಾಪು ಹೆಸರು ಕೇಳಲ್ವ? ಡೆವಿಲ್’ ಎಂದು ಹೇಳಿ ದರ್ಶನ್ ಅವರು ಜೋರಾಗಿ ನಗುತ್ತಾರೆ. ಈ ಟೀಸರ್ ಗಮನ ಸೆಳೆದಿದೆ. ದರ್ಶನ್ ಹಾವ-ಭಾವ ಇಷ್ಟ ಆಗಿದ್ದು, ಅವರ ಲುಕ್ ಕೂಡ ಬೇರೆಯದೇ ರೀತಿಯಲ್ಲಿ ಮೂಡಿ ಬಂದಿದೆ. ಇನ್ನೂ ದರ್ಶನ್ ಹುಟ್ಟುಹಬ್ಬದ…
ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ನೆಚ್ಚಿನ ನಟನ ಜನ್ಮದಿನವನ್ನು ಸೆಲೆಬ್ರೇಟ್ ಮಾಡಲು ಅಭಿಮಾನಿಗಳು ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ. ದಾಸನಿಗೆ ಎಲ್ಲ ಕಡೆಗಳಿಂದ ಶುಭಾಶಯ ಹರಿದು ಬರುತ್ತಿದೆ. ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಅವರು ಕಾಮನ್ ಡಿಪಿ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ. ಈ ಹಿಂದೆಯೇ ದರ್ಶನ್ ಹುಟ್ಟುಹಬ್ಬದಂದು ಹೂವು-ಹಣ್ಣು ಹಾರ ತರದಂತೆ ಅಭಿಮಾನಿಗಳೀಗೆ ಮನವಿ ಮಾಡಿದ್ದರು. ಅದರಂತೆ ಫ್ಯಾನ್ಸ್ ಹೂವು ಹಣ್ಣು ಹಾರ ತರುವುದನ್ನು ಬಿಟ್ಟು ದಾಸನ ಹೆಸರಿನಲ್ಲಿ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಡಿಬಾಸ್ ಹುಟ್ಟುಹಬ್ಬಕ್ಕಾಗಿ ಪ್ರತಿ ವರ್ಷ ಅಪಾರ ಅಭಿಮಾನಿಗಳು ಅವರ ಮನೆಯ ಬಳಿ ಬರುತ್ತಾರೆ. ಅಂತೆಯೇ ಈ ವರ್ಷವು ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಕೋರಲು ರಾಜ್ಯದ ವಿವಿಧೆಡೆಯಿಂದ ಮಧ್ಯರಾತ್ರಿಯೇ ಅಭಿಮಾನಿಗಳು ದರ್ಶನ್ ಮನೆ ಮುಂದೆ ಆಗಮಿಸಿದ್ದಾರೆ. ಹಾಗಾಗಿ ಆರ್‌ಆರ್ ನಗರ ದರ್ಶನ ನಿವಾಸದ ಬಳಿ ಸಾಕಷ್ಟು ಪೊಲೀಸ್ ಬಂದೂಬಸ್ತ್ ನಿಯೋಜಿಸಲಾಗಿದೆ. ಮಧ್ಯರಾತ್ರಿ 12 ಗಂಟೆಯಿಂದಲೇ ದರ್ಶನ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಾಕಷ್ಟು…
ಫೆಬ್ರವರಿ 14ರಂದು ಪ್ರತಿಯೊಬ್ಬ ಪ್ರೇಮಿಗು ವಿಶೇಷ ದಿನ. ಈ ದಿನವನ್ನು ಪ್ರೇಮಿಗಳು ಸಖತ್ ಖುಷಿ ಖುಷಿಯಾಗಿ ಸೆಲೆಬ್ರೇಟ್ ಮಾಡುತ್ತಾರೆ. ಸ್ಯಾಂಡಲ್ ವುಡ್ ಕ್ಯೂಟ್ ಕಪಲ್ ನಟಿ ರಾಧಿಕಾ ಪಂಡಿತ್ ಹಾಗೂ ನಟ ಯಶ್ ಪ್ರೇಮಿಗಳ ದಿನವನ್ನು ವಿಶೇಷವಾಗಿ ಸಂಭ್ರಮಿಸಿದ್ದಾರೆ. ನಟಿ ರಾಧಿಕಾ ಪಂಡಿತ್ ಪತಿ ಯಶ್ ಹಾಗೂ ಮಕ್ಕಳ ಜೊತೆ ವ್ಯಾಲೆಂಟೈನ್ಸ್ ಡೇ ಆಚರಿಸಿಕೊಂಡಿದ್ದಾರೆ. ಹ್ಯಾಪಿ ವ್ಯಾಲೆಂಟೈನ್ಸ್ ಡೇ ಎಂದು ಪತಿಗೆ ಪ್ರೇಮಿಗಳ ದಿನದ ಶುಭಾಶಯಗಳನ್ನು ರಾಧಿಕಾ ಪಂಡಿತ್ ತಿಳಿಸಿದ್ದಾರೆ. ಬ್ಲ್ಯಾಕ್ ಔಟ್ಫಿಟ್ ಧರಿಸಿ ಪತಿಯೊಂದಿಗೆ ನಿಂತಿರುವ ಒಂದು ಕಪಲ್ ಫೋಟೋವನ್ನು ರಾಧಿಕಾ ಶೇರ್ ಮಾಡಿದ್ದಾರೆ. ನನ್ನ ವ್ಯಾಲೆಂಟೈನ್ಸ್ ಜೊತೆ ವ್ಯಾಲೆಂಟೈನ್ಸ್ ಡೇ ಲಂಚ್ ಎಂದು ರಾಧಿಕಾ ಪಂಡಿತ್ ಅವರು ಮಗಳು, ಮಗ ಹಾಗೂ ಪತಿಯೊಂದಿಗಿರುವ ಫೋಟೋವನ್ನು ಕೂಡಾ ಶೇರ್ ಮಾಡಿದ್ದಾರೆ. ಈ ಫೋಟೋಗಳಿಗೆ 3 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ರಾಧಿಕಾ ಶೇರ್ ಮಾಡಿರುವ ಫೋಟೋದಲ್ಲಿ ಯಶ್ ಹಾಗೂ ರಾಧಿಕಾ ಗಾಗಲ್ಸ್ ಧರಿಸಿದ್ದರೆ ಮಕ್ಕಳಿಬ್ಬರು ಮುದ್ದಾಗಿ ನಗುತ್ತಾ ಫೋಟೋಗೆ ಪೋಸ್…
ಸೆಲೆಬ್ರಿಟಿಗಳ ಬಗ್ಗೆ ಜನಸಾಮಾನ್ಯರಿಗೆ ಸಾಕಷ್ಟು ಕುತೂಹಲ ಇರುತ್ತೆ. ಅವರು ಧರಿಸೋ ಬಟ್ಟೆಯಿಂದ ಹಿಡಿದು ಅವರ ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ ಎಂದು ತಿಳಿದುಕೊಳ್ಳುವ ಇಂಟ್ರೆಸ್ಟ್ ಇರುತ್ತೆ. ಇದೀಗ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಆಸ್ತಿ ಮೌಲ್ಯ ಎಷ್ಟು ಎಂಬುದು ರಿವೀಲ್ ಆಗಿದೆ. ಅಮಿತಾಬ್ ಬಚ್ಚನ್ ಪತ್ನಿ ಜಯಾ ಬಚ್ಚನ್ ನಟನೆಯ ಜೊತೆಗೆ ರಾಜಕೀಯದಲ್ಲೂ ಬ್ಯುಸಿ ಇದ್ದಾರೆ. ಸಮಾಜವಾದಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ಜಯಾ ಬಚ್ಚನ್ ಸಮಾಜವಾದಿ ಪಾರ್ಟಿಯಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದಾರೆ. ಈ ವೇಳೆ ಅವರು ತಮ್ಮ ಆಸ್ತಿ ವಿವರ ನೀಡಿದ್ದಾರೆ. ನಾಮನಿರ್ದೇಶನದ ವೇಳೆ ನೀಡಿರುವ ಆಸ್ತಿ ವಿವರ ಪ್ರಕಾರ, ಬಚ್ಚನ್ ಕುಟುಂಬ 1,578 ಕೋಟಿ ರೂಪಾಯಿ ಸ್ವತ್ತುಗಳನ್ನು ಹೊಂದಿದ್ದಾರೆ. 2022-23ರ ಅವಧಿಯಲ್ಲಿ ವೈಯಕ್ತಿವಾಗಿ ಅವರು 1.63 ಕೋಟಿ ರೂಪಾಯಿ ಸಂಪಾದಿಸಿದ್ದಾರೆ. ಅಮಿತಾಭ್ ಬಚ್ಚನ್ ಅವರ ವೈಯಕ್ತಿಕ ನೆಟ್ವರ್ತ್ 273 ಕೋಟಿ ರೂಪಾಯಿ ಇದೆ. ಅವರ ಬಳಿ 54 ಕೋಟಿ ರೂಪಾಯಿಯ ಜ್ಯುವೆಲರಿ ಇದೆ. 16 ವಾಹನಗಳು ಇದ್ದು ಇದರಬೆಲೆ 17.66 ಕೋಟಿ…
ಐಟಿಎಫ್ ಜೂನಿಯರ್ ಪಂದ್ಯಾವಳಿಗೆ ಮುಂಚಿತವಾಗಿ ಅಭ್ಯಾಸ ನಡೆಸುತ್ತಿದ್ದ ವೇಳೆ ಕುಸಿದು ಬಿದ್ದು ಪಾಕಿಸ್ತಾನದ ಯುವ ಟೆನಿಸ್ ಆಟಗಾರ್ತಿ ಝೈನಬ್ ಅಲಿ ನಖ್ವಿ ಮೃತಪಟ್ಟಿದ್ದಾರೆ. ಟೆನ್ನಿಸ್ ಅಭ್ಯಾಸ ಮಾಡುತ್ತಿದ್ದ ವೇಳೆ 17 ವರ್ಷದ ಝೈನಬ್ ಅಲಿ ನಖ್ವಿಗೆ ಹೃದಯಾಘಾತ ಸಂಭವಿಸಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರಾದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತ ಝುನಬ್ ಮಹಿಳಾ ಸರ್ಕ್ಯೂಟ್ನಲ್ಲಿ ಬಹಳ ಭರವಸೆಯ ಆಟಗಾರ್ತಿಯಾಗಿದ್ದರು ಮತ್ತು ಐಟಿಎಫ್ ಜೂನಿಯರ್ ಸ್ಪರ್ಧೆಗಳನ್ನು ಗೆಲ್ಲಲು ಉತ್ಸಾಹದಿಂದ ಶ್ರಮಿಸುತ್ತಿದ್ದರು” ಎಂದು ಪಾಕಿಸ್ತಾನ ಟೆನಿಸ್ ಫೆಡರೇಶನ್ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.