ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಿದ್ದಾರೆ. ಬರ್ತಡೇ ಹಿನ್ನೆಲೆಯಲ್ಲಿ ಅಭಿಮಾನಿಗಳು ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ. ದಾಸನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಆನೇಕಲ್ ತಾಲೂಕಿನ ಅತ್ತಿಬೆಲೆ ಗಡಿಭಾಗದಲ್ಲಿ ಡಿಬಾಸ್ ಅಭಿಮಾನಿಗಳ ಸಂಘದಿಂದ 1800 ಮಕ್ಕಳಿಗೆ ಪರೀಕ್ಷಾ ಸಾಮಗ್ರಿಗಳನ್ನು ವಿತರಣೆ ಮಾಡುವುದರ ಮೂಲಕ ಅರ್ಥಪೂರ್ಣವಾಗಿ ದರ್ಶನ್ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ. ಡಿಬಾಸ್ ಅಭಿಮಾನಿಗಳ ಸಂಘದ ಅಧ್ಯಕ್ಷ ಮಂಜುನಾಥ್ ಹಾಗೂ ಸಂಗಡಿಗರ ಸಹಕಾರದಿಂದ ಅತ್ತಿಬೆಲೆಯ ಶಿಡ್ಲಬಸಪ್ಪ ಕಲ್ಯಾಣ ಮಂಟಪದಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಪೆನ್ನು, ಬುಕ್ಸ್ ದರ್ಶನ್ ಫೋಟೋ ಇರುವ ಪರೀಕ್ಷೆಯ ಪ್ಯಾಡ್ ಸೇರಿದಂತೆ ಹಲವು ಕಲಿಕಾ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು. ಮಕ್ಕಳೊಂದಿಗೆ ಡಿಬಾಸ್ ಹೆಸರಿನ ಕೇಕ್ ಕಟ್ ಮಾಡಿ ದರ್ಶನ್ ಅಭಿನಯದ ಚಿತ್ರದ ಹಾಡುಗಳನ್ನು ಹಾಕಿ ಡ್ಯಾನ್ಸ್ ಮಾಡಿ ಎಂಜಾಯ್ ಮಾಡಿದ್ದರು. ಅಲ್ಲದೇ ಕಲ್ಯಾಣ ಮಂಟಪ ಸುತ್ತಲೂ ದರ್ಶನ್ ಫೋಟೋ ಮತ್ತು ಕಟೌಟ್‌ಗಳನ್ನು ಹಾಕಿ ಸಂಭ್ರಮಾಚರಣೆಯನ್ನು ಮಾಡಲಾಯಿತು. ಸುಮಾರು 2000ಕ್ಕೆ ಹೆಚ್ಚು ಮಕ್ಕಳಿಗೆ ಊಟದ ವ್ಯವಸ್ಥೆ ಸಹ ಮಾಡಲಾಗಿತ್ತು.…
Author: Author AIN
ಕಿರುತೆರೆಯ ಖ್ಯಾತ ನಟಿ, ಜಾಹೀರಾತು ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಕವಿತಾ ಚೌಧರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತ ಕವಿತಾ 80-90ರ ದಶಕದಲ್ಲಿ ಡಿಟರ್ಜೆಂಟ್ ಪೌಡರ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು. ಬಳಿಕ ಸರ್ಫ್ ಎಕ್ಸೆಲ್ ಕಂಪೆನಿ ಜಾಹೀರಾತಿನಲ್ಲಿ ನಟಿಸುವ ಮೂಲಕ ಸಾಕಷ್ಟು ಗಮನ ಸೆಳೆದಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕವಿತಾ ಅವರಿಗೆ 67 ವರ್ಷ ವಯಸ್ಸಾಗಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೇ, ಹೃದಯಾಘಾತದಿಂದ ಅಮೃತಸರದಲ್ಲಿ ನಿಧನರಾಗಿದ್ದಾರೆ. ತೊಂಬತ್ತರ ದಶಕದಲ್ಲಿ ಪ್ರಸಾರವಾಗುತ್ತಿದ್ದ ಉಡಾನ್ ಧಾರಾವಾಹಿಯಲ್ಲಿ ಕವಿತಾ ಐಪಿಎಸ್ ಅಧಿಕಾರಿಯಾಗಿ ಅಭಿನಯಿಸುತ್ತಿದ್ದರು. ಈ ಪಾತ್ರ ಅವರಿಗೆ ಸಾಕಷ್ಟು ಹೆಸರು ತಂದು ಕೊಟ್ಟಿತ್ತು. ಐಪಿಎಸ್ ಅಧಿಕಾರಿ ಕಾಂಚನಾ ಚೌಧರಿ ಭಟ್ಟಾಚಾರ್ಯ ಅವರ ಜೀವನವನ್ನು ಆಧರಿಸಿದ ಕಥೆಯಾಗಿತ್ತು.
ಆಮ್‌ಸ್ಟರ್‌ಡಾಂ: ನೆದರ್‌ಲ್ಯಾಂಡ್ಸ್ ನ ಮಾಜಿ ಪ್ರಧಾನಿ ಡ್ರೀಸ್ ವಾನ್ ಆಗ್ಟ್ ಹಾಗೂ ಅವರ ಪತ್ನಿ ಯುಜೀನ್ ಒಟ್ಟಿಗೆ ದಯಾಮರಣದ ಮೂಲಕ ಜೀವನ ಅಂತ್ಯಗೊಳಿಸುವ ಆಯ್ಕೆ ಅನುಸರಿಸಿದ್ದಾರೆ. 93 ವರ್ಷದ ದಂಪತಿ ತಮ್ಮ ಹುಟ್ಟೂರು ನಿಜ್ಮೆಗೆನ್‌ನಲ್ಲಿ ಕೈ ಕೈ ಹಿಡಿದುಕೊಂಡು ‘ಸುಖಮರಣ’ ಅಪ್ಪಿದ್ದಾರೆ. 1977 ರಿಂದ 1982ರ ಅವಧಿಯಲ್ಲಿ ಡ್ರೀಸ್ ವಾನ್ ಆಗ್ಟ್ ಅವರು ನೆದರ್‌ಲ್ಯಾಂಡ್ಸ್ ಪ್ರಧಾನಿಯಾಗಿದ್ದರು. ಕ್ರಿಶ್ಚಿಯನ್ ಡೆಮಾಕ್ರಟಿಕ್ ಅಪೀಲ್ ಪಕ್ಷದ ಮುಂಚೂಣಿ ನಾಯಕರಾಗಿದ್ದರು. ಅವರ ರಾಜಕೀಯ ಜೀವನ ಪಯಣ ತತ್ವಾದರ್ಶ ಹಾಗೂ ಮೌಲ್ಯಗಳಿಂದ ಕೂಡಿತ್ತು ಎನ್ನಲಾಗಿದೆ. ತಮ್ಮ ರಾಜಕೀಯ ಜೀವನ ಮುಗಿದ ಬಳಿಕವೂ ಅವರು ಅವುಗಳಿಗೆ ಬದ್ಧರಾಗಿದ್ದು, 2009ರಲ್ಲಿ ಪ್ಯಾಲೆಸ್ತೀನಿಯನ್ನರ ಹಕ್ಕುಗಳ ಪರವಾಗಿ ಧ್ವನಿ ಎತ್ತುವ ದಿ ರೈಟ್ಸ್ ಫೋರಮ್ ಅನ್ನು ಸ್ಥಾಪಿಸಿದ್ದರು. ನೆದರ್‌ಲ್ಯಾಂಡ್ಸ್‌ನಲ್ಲಿ ಜನತೆ ತಮಗೆ ಬದುಕುವ ಇಚ್ಛೆ ಇಲ್ಲದಿರುವಾಗ ದಯಾಮರಣ ವ್ಯವಸ್ಥೆಯನ್ನು ಅನುಸರಿಸುವ ಅವಕಾಶವಿದೆ. ಅದರಂತೆ ಈ ದಂಪತಿ ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ದಿ ರೈಟ್ಸ್ ಫೋರಂ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಗಂಡ ಹೆಂಡತಿ ಇಬ್ಬರೂ…
ವಾಷಿಂಗ್ಟನ್: ಭಾರತೀಯರು ಮತ್ತು ಭಾರತೀಯ ಅಮೆರಿಕನ್ ವಿದ್ಯಾರ್ಥಿಗಳ ಮೇಲಿನ ದಾಳಿಗಳನ್ನು ತಡೆಯಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಅವರ ಆಡಳಿತವು ಶ್ರಮಿಸುತ್ತಿದೆ ಎಂದು ಶ್ವೇತಭವನ ತಿಳಿಸಿದೆ. ದೇಶದ ವಿವಿಧ ಭಾಗಗಳಲ್ಲಿ ಭಾರತೀಯರು ಮತ್ತು ಭಾರತೀಯ ಅಮೆರಿಕನ್ ವಿದ್ಯಾರ್ಥಿಗಳ ಮೇಲೆ ನಡೆದಿರುವ ದಾಳಿಗಳ ನಡುವೆಯೇ ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯತಂತ್ರದ ಸಂವಹನಗಳ ಸಂಯೋಜಕ ಜಾನ್ ಕಿರ್ಬಿ ಈ ಹೇಳಿಕೆ ನೀಡಿದ್ದಾರೆ. ‘ಹಿಂಸಾಚಾರಿಗಳಿಗೆ ಯಾವುದೇ ಕ್ಷಮೆ ರೀತಿಯ ಇಲ್ಲ. ಅದರಲ್ಲೂ ಜನಾಂಗ, ಲಿಂಗ, ಧರ್ಮ ಅಥವಾ ಯಾವುದೇ ಇತರ ಅಂಶಗಳ ಆಧಾರದ ಮೇಲೆ ನಡೆಯುವ ಹಿಂಸಾಚಾರಗಳನ್ನು ನಾವು ಸಹಿಸಲ್ಲ. ಇಂತಹ ಘಟನೆಗಳು ಅಮೆರಿಕದಲ್ಲಿ ಸ್ವೀಕಾರಾರ್ಹವಲ್ಲ ಎಂದಿದ್ದಾರೆ. ‘ಅಧ್ಯಕ್ಷ ಜೋ ಬೈಡನ್ ಮತ್ತು ನಮ್ಮ ಆಡಳಿತವು ಆ ರೀತಿಯ ದಾಳಿಗಳನ್ನು ತಡೆಯಲು ಶ್ರಮಿಸುತ್ತಿದೆ. ಈ ಸಂಬಂಧ ರಾಜ್ಯ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ’ ಎಂದು ಹೇಳಿದ್ದಾರೆ.
ಪಾಕಿಸ್ತಾನ ಮಾಜಿ ಪ್ರಧಾನಿ, ಕ್ರಿಕೆಟಿಗ ಇಮ್ರಾನ್ ಖಾನ್ ಪತ್ನಿ ಜೈಲಿನಲ್ಲಿ ಅಸ್ವಸ್ಥರಾಗಿದ್ದಾರೆ ಎಂದು ಆಕೆಯ ಸಹೋದರಿ ದೂರು ನೀಡಿದ್ದಾರೆ. ನನ್ನ ಸಹೋದರಿಗೆ ಜೈಲಿನಲ್ಲಿ ವಿಷಾಹಾರ ನೀಡಲಾಗುತ್ತಿದೆ. ಇದೇ ಕಾರಣಕ್ಕೆ ಆಕೆ ಅಸ್ವಸ್ಥಳಾಗಿದ್ದಾಳೆ ಎಂದು ದೂರಿದ್ದಾರೆ. ಅಧಿಕಾರಿಗಳು ನಮ್ಮ ಅಳಲು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಆಕೆಯನ್ನು ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಸಹೋದರಿ ಮರ್ಯಮ್ ರಿಯಾಝ್ ಆರೋಪಿಸಿದ್ದಾರೆ. ಇಮ್ರಾನ್ ಅವರ ಮೂರನೇ ಪತ್ನಿ ಬುಶ್ರಾ ಬೀಬಿಗೆ ಅಕ್ರಮ ವಿವಾಹಕ್ಕಾಗಿ 14 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಸಂಬಂಧ ಅವರು ಅಡಿಯಾಲ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಇದೀಗ ಜೈಲಿನಲ್ಲಿ ಆಕೆಗೆ ಸಮರ್ಪಕವಲ್ಲದ ಆಹಾರ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ನನ್ನ ಸಹೋದರಿಗೆ ಸಮರ್ಪಕವಲ್ಲದ ಆಹಾರ ನೀಡಲಾಗುತ್ತಿದೆ. ಆಕೆ ಕೆಲವು ದಿನಗಳಿಂದ ನೋವಿನಲ್ಲಿದ್ದಾಳೆ. ಕಳೆದ ಆರು ದಿನಗಳಿಂದ ಏನೂ ತಿನ್ನಲಾಗದ ಸ್ಥಿತಿಯಲ್ಲಿದ್ದಾಳೆ. ಆಕೆಗೆ ಮನೆ ಆಹಾರ ನೀಡಲೂ ನಿರಾಕರಿಸಲಾಗುತ್ತಿದೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಮರ್ಯಮ್ ಆಗ್ರಹಿಸಿದ್ದಾರೆ. ನನ್ನ ಸಹೋದರಿ ಯಾವತ್ತೂ ಖಾನ್ ಸಾಹಿಬ್ (ಇಮ್ರಾನ್ ಖಾನ್)…
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ – ಪಾಲಕ್ಕಾಡ್ ಸಂಶೋಧಕರು ಮಾನವ ಮೂತ್ರದಿಂದ ವಿದ್ಯುತ್ ಉತ್ಪಾದಿಸುವ ಹೊಸ ವಿಧಾನವನ್ನು ಕಂಡುಹಿಡಿದಿದ್ದಾರೆ. ವಿಶ್ವಾದ್ಯಂತ ಇಂಧನ ಹೆಚ್ಚುತ್ತಿರುವ ಬೇಡಿಕೆಗೆ ಉತ್ತವಾಗಿ ಐಐಟಿ ತಂಡ ಈ ಹೊಸ ಆವಿಷ್ಕಾರವನ್ನು ಕಂಡು ಹಿಡಿದಿದೆ. ಇದರ ಭಾಗವಾಗಿ, ಎಲೆಕ್ಟ್ರೋಕೆಮಿಕಲ್ ರಿಸೋರ್ಸ್ ರಿಕವರಿ ರಿಯಾಕ್ಟರ್ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ವಿಧಾನದಲ್ಲಿ ವಿದ್ಯುತ್ ಜೊತೆಗೆ ಜೈವಿಕ ಗೊಬ್ಬರವನ್ನು ಉತ್ಪಾದಿಸಲಿದೆ. ಈ ಹೊಸ ತಂತ್ರಜ್ಞಾನದೊಂದಿಗೆ ಮೂತ್ರದ ಅಯಾನಿಕ್ ಬಲವನ್ನು ಬಳಸಲಾಗುತ್ತದೆ. ವಿದ್ಯುತ್ ಉತ್ಪಾದಿಸಲು ಎಲೆಕ್ಟ್ರೋಕೆಮಿಕಲ್ ಪ್ರತಿಕ್ರಿಯೆಗಳನ್ನು ಉತ್ತೇಜಿಸುತ್ತದೆ. ಅಲ್ಲದೆ ಸಾರಜನಕ, ರಂಜಕ ಮತ್ತು ಮೆಗ್ನೀಸಿಯಮ್ ಜೈವಿಕ ಗೊಬ್ಬರವನ್ನು ತಯಾರಿಸಲು ಉಪಯುಕ್ತವಾಗಿದೆ. ಈ ಸಂಯೋಜಿತ ತಂತ್ರಜ್ಞಾನವು ಎಲೆಕ್ಟ್ರೋಕೆಮಿಕಲ್ ರಿಯಾಕ್ಟರ್, ಅಮೋನಿಯಾ ಆಡ್ಸೋರ್ಪ್ಶನ್ ಕಾಲಮ್, ಡಿಕಲೋರೈಸೇಶನ್, ಕ್ಲೋರಿನೇಶನ್ ಚೇಂಬರ್, ಪ್ಲಂಬಿಂಗ್, ಎಲೆಕ್ಟ್ರಿಕಲ್ ಮ್ಯಾನಿಫೋಲ್ಡ್ಗಳನ್ನು ಒಳಗೊಂಡಿದೆ. ಮೂತ್ರವನ್ನು ಇಆರ್ ಆರ್ ಗೆ ನೀಡಲಾಗುತ್ತದೆ ಇವು ಎಲೆಕ್ಟ್ರೋಕೆಮಿಕಲ್ ಪ್ರತಿಕ್ರಿಯೆಗಳನ್ನು ಉತ್ತೇಜಿಸುತ್ತದೆ. ಅದು ಏಕಕಾಲದಲ್ಲಿ ವಿದ್ಯುತ್ ಮತ್ತು ಜೈವಿಕ ಗೊಬ್ಬರವನ್ನು ಉತ್ಪಾದಿಸುತ್ತದೆ. ಇದರಿಂದ ವಿದ್ಯುತ್ ಜತೆಗೆ ಜೈವಿಕ ಗೊಬ್ಬರ ಉತ್ಪಾದನೆಯಾಗುತ್ತದೆ. ಇದು…
ಮಲಯಾಳಂ ಚಿತ್ರಗಳ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟ ನಟಿ ಅನುಪಮಾ ಪರಮೇಶ್ವರನ್ ಇದೀಗ ಬಹುಭಾಷಾ ನಟಿಯಾಗಿ ಖ್ಯಾತಿ ಘಳಿಸಿದ್ದಾರೆ. ನವಿನ್ ಪೌಲಿ ನಟನೆಯ ಪ್ರೇಮಂ ಚಿತ್ರದ ಮೂಲಕ ನಟನೆ ಆರಂಭಿಸಿದ ನಟಿಗೆ ಈ ಸಿನಿಮಾ ಸಖತ್ ಜಯಪ್ರಿಯತೆ ನೀಡಿತು. ನಟಿ ಅನುಪಮಾ ಪರಮೇಶ್ವರನ್ ತೆರೆಮೇಲೆ ಕಿಸ್ ಮಾಡುವ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದು ಕಡಿಮೆ. ಇದೇ ಮೊದಲ ಬಾರಿಗೆ ಲಿಪ್ ಕಿಸ್ ಮಾಡುವ ಪಾತ್ರದಲ್ಲಿ ನಟಿಸು ಮೂಲಕ ಸಖತ್ ಸದ್ದು ಮಾಡ್ತಿದ್ದಾರೆ. ಸದ್ಯ ಅನುಪಮಾ ಪರಮೇಶ್ವರನ್ ನಟನೆಯ ‘ಟಿಲ್ಲು ಸ್ಕ್ವೇರ್’ ಸಿನಿಮಾ ಟ್ರೇಲರ್ ರಿಲೀಸ್ ಆಗಿದ್ದು ಟ್ರೈಲರ್ ನಲ್ಲಿ ನಟಿ ಸಖತ್ ಹಾಟ್ ಅಗಿ ಕಾಣಿಸಿಕೊಂಡಿದ್ದಾರೆ. ‘ಡಿಜೆ ಟಿಲ್ಲು’ ಚಿತ್ರದ ಸೀಕ್ವೆಲ್ ‘ಟಿಲ್ಲು ಸ್ಕ್ವೇರ್’. ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸಿದ್ದು ಜೊನ್ನಲಗಡ್ಡ ಅವರು ‘ಟಿಲ್ಲು ಸ್ಕ್ವೇರ್’ ಚಿತ್ರಕ್ಕೆ ಹೀರೋ. ಅನುಪಮಾ ಅವರು ಪಕ್ಕದ ಮನೆ ಹುಡುಗಿ ರೀತಿಯ ಪಾತ್ರಗ ಮೂಲಕ ಹೆಚ್ಚು ಗಮನ ಸೆಳೆದರು. ಇತ್ತೀಚೆಗೆ ಅವರು…
ಕಠ್ಮಂಡು: ಅಮೆರಿಕಕ್ಕೆ ತೆರಳಲು ನೆರವು ನೀಡುವುದಾಗಿ ಭರವಸೆ ನೀಡಿ ಕಳೆದ ಎರಡು ವಾರಗಳಿಂದ ಗೃಹಬಂಧನದಲ್ಲಿ ಇರಿಸಲಾಗಿದ್ದ ಭಾರತದ 11 ಮಂದಿಯನ್ನು ನೇಪಾಳದಲ್ಲಿ ರಕ್ಷಿಸಲಾಗಿದೆ. ಮಾನವ ಕಳ್ಳಸಾಗಣೆ ಜಾಲವನ್ನು ಭೇದಿಸಿರುವ ನೇಪಾಳ ಪೊಲೀಸರು, ಈ ಜಾಲದಲ್ಲಿ ಶಾಮೀಲಾಗಿದ್ದ ಒರ್ವ ನೇಪಾಳಿ ಹಾಗೂ ಎಂಟು ಮಂದಿ ಭಾರತೀಯರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣವು ಬಾಲಿವುಡ್ ನಟ ಶಾರುಕ್ ಖಾನ್ ನಟನೆಯ ‘ಡಂಕಿ’ ಸಿನಿಮಾ ಕಥೆಗೆ ಹೋಲಿಕೆಯಾಗುತ್ತಿದ್ದ ಕಾರಣ, ನೇಪಾಳ ಪೊಲೀಸರು ಕಾರ್ಯಾಚರಣೆಯನ್ನು ‘ಆಪರೇಷನ್ ಡಂಕಿ’ ಎಂದು ಹೆಸರಿಸಿದ್ದಾರೆ. ಸಂತ್ರಸ್ತರು ಮತ್ತು ಮಾಫಿಯಾದಲ್ಲಿ ಸಕ್ರಿಯವಾಗಿದ್ದ ಆರೋಪಿಗಳು ಭಾರತದ ಪಂಜಾಬ್ ಮತ್ತು ಹರಿಯಾಣ ರಾಜ್ಯದವರಾಗಿರಬಹುದು ಎನ್ನಲಾಗಿದೆ. ಮೆಕ್ಸಿಕೊ ಮಾರ್ಗವಾಗಿ ಅಮೆರಿಕಕ್ಕೆ ಕಳುಹಿಸಿಕೊಡುವುದಾಗಿ ಆಮಿಷವೊಡ್ಡಿ ಸಂತ್ರಸ್ತರನ್ನು ಕಠ್ಮಂಡು ಹೊರವಲಯದ ಬಾಡಿಗೆ ಮನೆಯೊಂದರಲ್ಲಿ ಎರಡು ವಾರಗಳಿಗೂ ಹೆಚ್ಚು ಸಮಯದಿಂದ ಬಂಧಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಕಠ್ಮಂಡು ಜಿಲ್ಲಾ ಪೊಲೀಸ್ ತಂಡ, ಧೋಬಿಖೊಲಾ ಕಾರಿಡಾರ್‌ನಲ್ಲಿರುವ ರಾತೊಪುಲ್‌ನಲ್ಲಿ ಬುಧವಾರ ರಾತ್ರಿ ಆರಂಭಿಸಿದ ಕಾರ್ಯಾಚರಣೆಯು ಗುರುವಾರ ನಸುಕಿನವರೆಗೂ ನಡೆಯಿತು. ಅಮೆರಿಕಕ್ಕೆ ಕಳುಹಿಸುವುದಾಗಿ ಸುಳ್ಳು ಭರವಸೆ…
ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬರ್ತಡೇ ಸಂಭ್ರಮ. ಮಧ್ಯರಾತ್ರಿಯಿಂದಲೇ ದಾಸನ ಹುಟ್ಟುಹಬ್ಬದ ಸೆಲೆಬ್ರೇಷನ್ ಜೋರಾಗಿದ್ದು ಸಿನಿಮಾ ತಂಡದವರು ಅಭಿಮಾನಿಗಳಿಗೆ ಭರ್ಜರಿ ಉಡುಗೊರೆಯನ್ನೇ ನೀಡಿದ್ದಾರೆ. ಸಾಮಾನ್ಯವಾಗಿ ದರ್ಶನ್ ಒಂದು ಸಿನಿಮಾ ಆದ ಬಳಿಕವೇ ಮತ್ತೊಂದು ಸಿನಿಮಾ ಒಪ್ಪಿಕೊಳ್ಳುವುದು ವಾಡಿಕೆ. ಸಿನಿಮಾ ಅನೌನ್ಸ್ ಕೂಡ ಹಾಗೆಯೇ ಆಗುತ್ತವೆ. ಆದರೆ, ಈ ಬಾರಿ ಆ ನಿಯಮವನ್ನು ದರ್ಶನ್ ಮುರಿದಿದ್ದಾರೆ. ದರ್ಶನ್ ಸಿನಿಮಾ ರಂಗಕ್ಕೆ ಬಂದು 25 ವರ್ಷಗಳು ಸಂದಿರುವ ಸಂದರ್ಭದಲ್ಲಿ ಹಾಗೂ ಹುಟ್ಟುಹಬ್ಬದ ಪ್ರಯುಕ್ತ ಒಟ್ಟು ಒಂಬತ್ತು ಸಿನಿಮಾಗಳನ್ನು ಘೋಷಣೆ ಮಾಡಲಾಗಿದೆ. ಸದ್ಯ ದರ್ಶನ್ ಡೆವಿಲ್ ಸಿನಿಮಾದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಈ ಸಿನಿಮಾವನ್ನು ಸೇರಿಸಿದರೆ ಒಟ್ಟು 10 ಚಿತ್ರದಲ್ಲಿ ದಾಸನ ಕೈಯಲ್ಲಿವೆ. ಡೆವಿಲ್ ಸಿನಿಮಾವನ್ನು ಮಿಲನ ಚಿತ್ರ ಖ್ಯಾತಿಯ ಪ್ರಕಾಶ್ ನಿರ್ದೇಶನ ಮಾಡುತ್ತಿದ್ದರೆ, ಇನ್ನೆರಡು ಚಿತ್ರಗಳನ್ನು ತರುಣ್ ಸುಧೀರ್ ನಿರ್ದೇಶನ ಮಾಡುತ್ತಿದ್ದಾರೆ. ರಮೇಶ್ ಪಿಳ್ಳೈ, ಶೈಲಜಾ ನಾಗ್ ಮತ್ತು ಬಿ.ಸುರೇಶ, ಮೋಹನ್ ನಟರಾಜನ್, ಸೂರಪ್ಪ ಬಾಬು, ಸಚ್ಚಿದಾನಂದ ಇಂಡುವಾಳ, ಕೆ.ಮಂಜುನಾಥ್, ರಘುನಾಥ್ ಸೋಗಿ, ಮಹೇಶ್…
ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟ ನಟಿ ರಶ್ಮಿಕಾ ಮಂದಣ್ಣ ಸಖತ್ ಸದ್ದು ಮಾಡ್ತಿದ್ದಾರೆ. ಪರಭಾಷೆಯಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಟಾಲಿವುಡ್ನ ಟಾಪ್ ನಟಿ ಎನಿಸಿಕೊಂಡು ಈಗ ಬಾಲಿವುಡ್ನಲ್ಲಿಯೂ ಹವಾ ಎಬ್ಬಿಸಿದ್ದಾರೆ. ಬಾಲಿವುಡ್ನ ಸ್ಟಾರ್ ನಟರುಗಳೊಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದೆಲ್ಲದರ ನಡುವೆ ಗೌರವವೊಂದಕ್ಕೆ ರಶ್ಮಿಕಾ ಮಂದಣ್ಣ ಪಾತ್ರರಾಗಿದ್ದಾರೆ. ಪ್ರತಿಷ್ಠಿತ ಫೋರ್ಬ್ಸ್ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣ ಹೆಸರು ಸೇರ್ಪಡೆಗೊಂಡಿದೆ. ಅಂತರಾಷ್ಟ್ರೀಯ ಮನ್ನಣೆಯುಳ್ಳ ಫೋರ್ಬ್ಸ್ ಪ್ರತಿವರ್ಷದಂತೆ ಈ ವರ್ಷವೂ ಭಾರತದ ಸಾಧಕರ ಪಟ್ಟಿ ಬಿಡುಗಡೆ ಮಾಡಿದೆ. ಆ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣ ಸ್ಥಾನ ಪಡೆದುಕೊಂಡಿದ್ದಾರೆ. ಫೋರ್ಬ್ಸ್ ಇಂಡಿಯಾ ಕಳೆದ ವರ್ಷ ಭಾರತದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 30 ವರ್ಷದ ಒಳಗಿನ 30 ಜನರ ಪಟ್ಟಿಯನ್ನು ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮನೊರಂಜನಾ ಕ್ಷೇತ್ರದಲ್ಲಿ ರಶ್ಮಿಕಾ ಮಂದಣ್ಣರ ಹೆಸರಿದೆ. 27 ವರ್ಷದ ರಶ್ಮಿಕಾ ಮಂದಣ್ಣ ಮನೊರಂಜನಾ ಕ್ಷೇತ್ರದಲ್ಲಿ ಮಾಡುತ್ತಿರುವ ಸಾಧನೆ ಗುರುತಿಸಿ ಫೋರ್ಬ್ಸ್ ಇಂಡಿಯಾ ಭಾರತದ 30ರ…