ಬಿಗ್ ಬಾಸ್ ಸೀಸನ್ 10ಕ್ಕೆ ಹೋಗಿ ಬಂದ ಬಳಿಕ ವರ್ತೂರು ಸಂತೋಷ್ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಅವರು ಹೋದಲ್ಲಿ ಬಂದಲ್ಲೆಲ್ಲಾ ಅಭಿಮಾನಿಗಳು ಮುತ್ತಿಕೊಳ್ಳುತ್ತಿದ್ದಾರೆ. ಇದೀಗ ನಟ ಜಗ್ಗೇಶ್ ಕಾರ್ಯಕ್ರಮವೊಂದರಲ್ಲಿ ಸಂತೋಷ್ ಹೆಸರು ಹೇಳದೆ ಟೀಕಿಸಿದ್ದು ಈ ಬಗ್ಗೆ ವರ್ತೂರು ಸಂತೋಷ್ ಪ್ರತಿಕ್ರಿಯೆ ನೀಡಿದ್ದಾರೆ. ‘ರಂಗನಾಯಕ’ ಸಿನಿಮಾದ ಕಾರ್ಯಕ್ರಮದಲ್ಲಿ ಹುಲಿ ಉಗುರು ಪ್ರಕರಣದ ಬಗ್ಗೆ ಮಾತನಾಡಿದ್ದ ನಟ ಜಗ್ಗೇಶ್, ‘ನಾನು ಹುಲಿ ಥರಹ ಬದುಕಬೇಕು ಅಂತ ನಮ್ಮಮ್ಮ ಹುಲಿ ಉಗುರಿನ ಪೆಂಡೆಂಟ್ ಕೊಟ್ಟರು, ಆದರೆ ಯಾವನೋ ಕಿತ್ತೋದ್ ನನ್ ಮಗ ನಿಜವಾದ ಹುಲಿ ಉಗುರು ಹಾಕ್ಕೊಂಡು ಟಿವಿಗೆ ಹೋಗಿ ಅಲ್ಲಿ ತಗಲಾಕ್ಕೊಂಡ’ ಎಂದಿದ್ದರು. ಜಗ್ಗೇಶ್ ಸಹ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದು ಅವರ ಮನೆ ಮೇಲೆ ಅರಣ್ಯಾಧಿಕಾರಿಗಳು ದಾಳಿ ಮಾಡಿ ಹುಲಿ ಉಗುರು ವಶಪಡಿಸಿಕೊಂಡಿದ್ದರು. ಇದರ ಬಗ್ಗೆ ಜಗ್ಗೇಶ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಗ್ಗೇಶ್ ಅವರು ವರ್ತೂರು ಸಂತೋಷ್ಗೆ ‘ಕಿತ್ತೋದ್ ನನ್ನ ಮಗ’ ಎಂಬ ಪದ ಬಳಸಬಾರದಿತ್ತು ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದರು. ಜಗ್ಗೇಶ್ರ…
Author: Author AIN
ನಟಿಯರಾದ ರಶ್ಮಿಕಾ ಮಂದಣ್ಣ ಹಾಗೂ ಶ್ರದ್ಧಾ ದಾಸ್ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತುರ್ತು ಭೂಸ್ಪರ್ಷ ಮಾಡಲಾಗಿದೆ. ಘಟನೆ ಕುರಿತು ನಟಿ ರಶ್ಮಿಕಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು ಸ್ಪಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾದುದಾಗಿ ಹೇಳಿಕೊಂಡಿದ್ದಾರೆ. ರಶ್ಮಿಕಾ ಹಾಗೂ ಶ್ರದ್ಧಾದಾಸ್ ಒಟ್ಟಿಗೆ ಪ್ರಯಾಣ ಮಾಡುತ್ತಿದ್ದು, ಈ ವೇಳೆ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ರಶ್ಮಿಕಾ ಹಾಗೂ ಶ್ರದ್ಧಾದಾಸ್ ಅವರುಗಳು ಮುಂಬೈ ವಿಮಾನ ನಿಲ್ದಾಣದಿಂದ ಹೈದರಾಬಾದ್ಗೆ ಪ್ರಯಾಣ ಬೆಳೆಸಿದ್ದರು. ವಿಮಾನ ಟೇಕ್ ಆಫ್ ಆದ ಬಳಿಕ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಕೂಡಲೇ ವಿಮಾನ ನಿಲ್ದಾಣವನ್ನು ತುರ್ತು ಭೂಸ್ಪರ್ಷ ಮಾಡಲಾಗಿದೆ. ತಮ್ಮ ಹಾಗೂ ಶ್ರದ್ಧಾದಾಸ್ರ ಕೆಲವು ಚಿತ್ರಗಳನ್ನು ರಶ್ಮಿಕಾ ಮಂದಣ್ಣ ಹಂಚಿಕೊಂಡಿದ್ದು, ‘ಇಂದು ಹೀಗೆ ಮಾಡಿ ನಾವು ಪ್ರಾಣಾಪಾಯದಿಂದ ಪಾರಾದೆವು’ ಎಂದಿದ್ದಾರೆ. ತುರ್ತು ಭೂಸ್ಪರ್ಷದ ವೇಳೆ ವಿಮಾನ ಸಿಬ್ಬಂದಿ ನೀಡಿದ ಸೂಚನೆಯಂತೆ, ರಶ್ಮಿಕಾ ಹಾಗೂ ಶ್ರದ್ಧಾ ತಮ್ಮ ಕಾಲುಗಳಿಂದ ಎದುರಿನ ಸೀಟ್ನ ಹಿಂಬದಿಯನ್ನು ಜೋರಾಗಿ ಒತ್ತಿ ಹಿಡಿದುಕೊಂಡಿದ್ದಾರೆ. ಈ ಚಿತ್ರವನ್ನು ರಶ್ಮಿಕಾ ಸಾಮಾಜಿಕ…
ಬಾಲಿವುಡ್ ನಟಿ ಇಶಾ ಡಿಯೋಲ್ ಇತ್ತೀಚೆಗೆ ಪತಿ ಭರತ್ ರಿಂದ ದೂರವಾಗಿದ್ದಾರೆ. ಈ ವಿಷಯವನ್ನು ಸ್ವತಃ ಇಶಾ ಹಾಗೂ ಭರತ್ ಸೋಷಿಯಲ್ ಮೀಡಿಯಾ ಮೂಲಕ ಸ್ಪಷ್ಟಪಡಿಸಿದ್ದಾರೆ. ಇದೀಗ ಇಶಾ ಡಿಯೋಲ್ ರಾಜಕೀಯದತ್ತ ಮುಖ ಮಾಡಿದ್ದಾರೆ. ಉದ್ಯಮಿ ಭರತ್ ಜೊತೆ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಮೇಲೆ ಇಶಾ ರಾಜಕೀಯಕ್ಕೆ ಎಂಟ್ರಿಕೊಡ್ತಾರೆ ಎಂಬ ಸುದ್ದಿ ಕೇಳಿ ಬರ್ತಿದೆ. ಇಷ್ಟೇಲ್ಲಾ ಸುದ್ದಿಯಾಗಲು ಹೇಮಾ ಮಾಲಿನಿ ನೀಡಿರುವ ಹೇಳಿಕೆ ಕಾರಣವಾಗಿದೆ. ಮಗಳಿಗೆ ರಾಜಕೀಯಕ್ಕೆ ಬರಲು ಆಸಕ್ತಿಯಿದೆ ಎಂದು ಹೇಮಾ ಮಾಲಿನಿ ಹೇಳಿದ್ದಾರೆ. ಮಥುರಾದಿಂದ ಬಿಜೆಪಿಯ ಲೋಕಸಭೆ ಸದಸ್ಯೆಯಾಗಿರುವ ಹೇಮಾ ಮಾಲಿನಿ ಅವರು ಸಂದರ್ಶನವೊಂದರಲ್ಲಿ ನಾನು ರಾಜಕೀಯದಲ್ಲಿ ಬೆಳೆಯಲು ಕುಟುಂಬದ ಬೆಂಬಲವಿದೆ. ಅವರ ಸಾಥ್‌ನಿಂದಲೇ ನಾನು ಆರಾಮ ಆಗಿ ಇಲ್ಲಿ ಕೆಲಸ ಮಾಡಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಮಕ್ಕಳು ಕೂಡ ರಾಜಕೀಯಕ್ಕೆ ಬರುವ ಆಸಕ್ತಿ ತೋರಿಸಿದರೆ ಬರಲಿ ಎಂದಿದ್ದಾರೆ. ಈ ಮೂಲಕ ಇಶಾ ರಾಜಕೀಯ ಎಂಟ್ರಿಕೊಡುವ ಸುಳಿವನ್ನು ನೀಡಿದ್ದಾರೆ.
ಪಬ್‌ಜಿ ಆಟದ ವೇಳೆ ಸಿಕ್ಕ ಪ್ರೇಮಿಗಾಗಿ ವೀಸಾ ಇಲ್ಲದೇ ಭಾರತ ಪ್ರವೇಶಿಸಿದ್ದ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಳ ಮೊದಲ ಪತಿ ಗುಲಾಮ್ ಹೈದರ್ ತನ್ನ ಮಕ್ಕಳನ್ನು ಭಾರತದಿಂದ ಪಾಕ್ ಗೆ ವಾಪಸ್ ಕರೆದುಕೊಂಡು ಹೋಗಲು ನಿರ್ಧಾರ ಮಾಡಿದ್ದಾರೆ. ತನ್ನ ಅಪ್ರಾಪ್ತ ಮಕ್ಕಳನ್ನು ಭಾರತದಿಂದ ವಾಪಸ್ ಪಾಕಿಸ್ತಾನಕ್ಕೆ ಕರೆದುಕೊಂಡು ಹೋಗಲು ಕಾನೂನು ಹೋರಾಟಕ್ಕೆ ಗುಲಾಮ್ ಹೈದರ್ ಮುಂದಾಗಿದ್ದಾರೆ. ಅದಕ್ಕಾಗಿ ಭಾರತೀಯ ವಕೀಲನನ್ನು ನೇಮಿಸಿಕೊಂಡಿದ್ದಾರೆ ಎಂದು ಪಾಕ್ ವಕೀಲ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ ಅನ್ಸಾರ್ ಬರ್ನಿ ಹೇಳಿದ್ದಾರೆ. ಅಲಿ ಮೊಮಿನ್ ಎಂಬ ಭಾರತೀಯ ವಕೀಲರನ್ನು ನೇಮಿಸಿಕೊಂಡಿದ್ದು, ಭಾರತದಲ್ಲಿ ಕಾನೂನು ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಪವರ್ ಆಫ್ ಅಟಾರ್ನಿ ಕಳುಹಿಸಲಾಗಿದೆ ಎಂದು ಬರ್ನಿ ತಿಳಿಸಿದ್ದಾರೆ. ಗುಲಾಮ್ ಹೈದರ್ ಮಕ್ಕಳು ಇನ್ನೂ ಅಪ್ರಾಪ್ತ ವಯಸ್ಸಿನವರು ಆಗಿರುವುದರಿಂದ ಹಾಗೂ ಅಂತಾರಾಷ್ಟ್ರೀಯ ಕಾನೂನುಗಳ ಪ್ರಕಾರ ಧಾರ್ಮಿಕ ಮತಾಂತರ ನಿಷೇಧ ಇರೋದ್ರಿಂದ ಮಕ್ಕಳನ್ನು ಕರೆತರಲು ಮುಂದಾಗಿದ್ದಾರೆ. ಅಲ್ಲದೇ ಸೀಮಾ ನೋಯ್ಡಾದಲ್ಲಿ ನೆಲೆಸಿದ್ದರೂ ಅವರಿನ್ನೂ ಪಾಕಿಸ್ತಾನಿ ಪ್ರಜೆಯೇ ಆಗಿರುವುದರಿಂದ ಮೊದಲ ಪತಿ…
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮೇಲಿಂದ ಮೇಲೆ ಹೊಡೆತಗಳು ಬೀಳುತ್ತಿವೆ. ಅವರ ರಿಯಲ್ ಎಸ್ಟೇಟ್ ಸಾಮ್ರಾಜ್ಯವನ್ನು ನಾಶಪಡಿಸಿದ ಸಿವಿಲ್ ಪ್ರಕರಣದಲ್ಲಿ ಯುಎಸ್ ಎ ಮಾಜಿ ಅಧ್ಯಕ್ಷರು ಮತ್ತೊಂದು ಕಾನೂನು ಹಿನ್ನಡೆ ಅನುಭವಿಸಿದ್ದಾರೆ. ಟ್ರಂಪ್ತಮ್ಮ ಆಸ್ತಿ ಮೌಲ್ಯವನ್ನು ಕೃತ್ರಿಮವಾಗಿ ಹೆಚ್ಚಿಸಿದ್ದಕ್ಕಾಗಿ 3 ಸಾವಿರ ಕೋಟಿ ರೂ ದಂಡವನ್ನು ಪಾವತಿಸಬೇಕು ಎಂದು ನ್ಯೂಯಾರ್ಕ್ ಕೋರ್ಟ್ ತೀರ್ಪು ಪ್ರಕಟಿಸಿದೆ. ಮೂರು ತಿಂಗಳ ವಿವಾದಾಸ್ಪದ ವಿಚಾರಣೆಯ ನಂತರ, ನ್ಯಾಯಮೂರ್ತಿ ಆರ್ಥರ್ ಎಂಗೊರಾನ್ ತಮ್ಮ ತೀರ್ಪನ್ನು ಪ್ರಕಟಿಸಿದರು. ಈ ವರ್ಷ ಅಧ್ಯಕ್ಷ ಸ್ಥಾನವನ್ನು ಮರಳಿ ಪಡೆಯಲು ಹವಣಿಸುತ್ತಿರುವ ಟ್ರಂಪ್, ಮೂರು ವರ್ಷಗಳ ಕಾಲ ಯಾವುದೇ ನ್ಯೂಯಾರ್ಕ್ ಕಾರ್ಪೊರೇಷನ್ ಅಧಿಕಾರಿ ಅಥವಾ ನಿರ್ದೇಶಕರಾಗಿ ಸೇವೆ ಸಲ್ಲಿಸುವುದನ್ನು ಸಹ ನಿಷೇಧಿಸಲಾಗಿದೆ. ಈ ಬೆಳವಣಿಗೆಗಳ ಮಧ್ಯೆ, ಟ್ರಂಪ್ ಅವರ ವಕೀಲರಾದ ಅಲೀನಾ ಹಬ್ಬಾ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ. ನ್ಯಾಯಾಲಯವು ಈ ಹಿಂದೆ ಸೆಪ್ಟೆಂಬರ್‌ನಲ್ಲಿ ತಾನು ನೀಡಿದ್ದ ತೀರ್ಪನ್ನು ರದ್ದುಗೊಳಿಸುತ್ತಾ ಟ್ರಂಪ್‌ರ ರಿಯಲ್ ಎಸ್ಟೇಟ್ ಸಾಮ್ರಾಜ್ಯವನ್ನು ನಿಯಂತ್ರಿಸುವ ಆಧಾರ ಕಂಪನಿಗಳನ್ನು ಮುಚ್ಚುವಂತೆ…
ಫೆ.8ರಂದು ಪಾಕಿಸ್ತಾನದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕರೆ ನೀಡಿದ್ದಾರೆ. ಈ ಬೆನ್ನಲ್ಲೇ ಚುನಾವಣೆಯ ಫಲಿತಾಂಶಗಳನ್ನು ತಿರುಚಲಾಗಿದೆ ಎಂದು ಆರೋಪಿಸಿ ರಾವಲ್ಪಿಂಡಿ ಕಮಿಷನರ್ ಲಿಯಾಖತ್ ಅಲಿ ಚಟ್ಟಾ ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. “ನಾವು ಸೋತವರನ್ನು 50,000 ಮತಗಳ ಅಂತರದಿಂದ ವಿಜೇತರನ್ನಾಗಿ ಪರಿವರ್ತಿಸುತ್ತೇವೆ. ನಾನು ರಾವಲ್ಪಿಂಡಿ ವಿಭಾಗದ ಜನರಿಗೆ ಅನ್ಯಾಯ ಮಾಡಿದ್ದೇನೆ ಎಂದು ಚಟ್ಟಾ ಪೊಲೀಸರಿಗೆ ಶರಣಾಗಿದ್ದಾರೆ. ಒತ್ತಡಕ್ಕೆ ಒಳಗಾಗಬೇಕಾಗಿ ಬಂತು ಎಂದು ರಾವಲ್ಪಿಂಡಿ ಕಮಿಷನರ್ ಹೇಳಿದ್ದಾರೆ. ನನ್ನ ವಿಭಾಗದ ಚುನಾವಣಾಧಿಕಾರಿಗಳಲ್ಲಿ ಕ್ಷಮೆಯಾಚಿಸುತ್ತೇನೆ. ಈ ಎಲ್ಲಾ ರಾಜಕಾರಣಿಗಳು ಯಾವುದೇ ತಪ್ಪು ಮಾಡಬಾರದು ಎಂದು ಇಡೀ ಅಧಿಕಾರಿಗಳಲ್ಲಿ ನನ್ನ ವಿನಂತಿಯಾಗಿದೆ ಎಂದು ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಾತನಾಡಿದ ಚಟ್ಟಾ ಹೇಳಿದ್ದಾರೆ.
ಬಿಗ್ ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಸಿದ್ದ ವರ್ತೂರು ಸಂತೋಷ್ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದು ಸಾಕಷ್ಟು ಸುದ್ದಿಯಾಗಿತ್ತು. ಹುಲಿ ಉಗುರಿನ ಪೆಂಡೆಂಟ್ ಧರಿಸೋದು ಕಾನೂನು ಅಡಿಯಲ್ಲಿ ಶಿಕ್ಷಾರ್ಹಪರಾಧ ಎಂದು ಗೊತ್ತಿದ್ದರೂ ಪೆಂಡೆಂಟ್ ಹಾಕಿಕೊಂಡಿದ್ದು ದೊಡ್ಡ ಚರ್ಚೆಯನ್ನೇ ಹುಟ್ಟು ಹಾಕಿದ್ದರು. ವರ್ತೂರು ಜೈಲಿಗೆ ಹೋಗುತ್ತಿದ್ದಂತೆಯೇ ಸಾಕಷ್ಟು ಸೆಲೆಬ್ರಿಟಿಗಳು ಕೂಡ ಈ ಹುಲಿ ಉಗುರಿನ ಚೈನು ಧರಿಸಿರೋದು ಬೆಳಕಿಗೆ ಬಂದಿದ್ದು, ಅದರಲ್ಲಿ ಜಗ್ಗೇಶ್ ಕೂಡ ಸೇರಿಕೊಂಡಿದ್ದರು. ನಟ ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ, ದರ್ಶನ್, ಆರ್ಯವರ್ಧನ್ ಗುರೂಜಿ, ನಟಿ ಅಮೂಲ್ಯ ಮಕ್ಕಳು ಹೀಗೆ ಅನೇಕರು ಹುಲಿ ಉಗುರಿನ ಪೆಂಡೆಂಟ್ ಧರಿಸಿ ಸಂಕಷ್ಟಕ್ಕೆ ಸಿಲುಕಿದ್ದರು. ಅದರಲ್ಲೂ ಜಗ್ಗೇಶ್ ಈ ಪ್ರಕರಣದಲ್ಲಿ ಇನ್ನೇನು ಬಂಧನವಾಗುತ್ತಾರೆ ಅಂತೆಲ್ಲ ಸುದ್ದಿ ಹರಿದಾಡಿತ್ತು. ಇಂತಹ ಸುದ್ದಿಯಿಂದ ಬೇಸತ್ತಿದ್ದ ಜಗ್ಗೇಶ್, ಮಾಧ್ಯಮಗಳಲ್ಲಿ ಸುದ್ದಿ ಬಾರದಂತೆ ತಡೆಗಟ್ಟುವುದಾಗಿ ಕೋರ್ಟ್ ಮೆಟ್ಟಿಲು ಏರಿದ್ದರು. ಇದಕ್ಕೆ ಸಹಾಯ ಮಾಡಿದ್ದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಂದು ಜಗೇಶ್ ಇದೀಗ ತಿಳಿಸಿದ್ದಾರೆ. ರಂಗನಾಯಕ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ ಈ…
ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು 25 ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಶ್ರೀರಂಗಪಟ್ಟಣದಲ್ಲಿ ಬೆಳ್ಳಿ ಪರ್ವ D-25 ಕಾರ್ಯಕ್ರಮ ಆಯೋಜಿಸಿದ್ದು ಈ ವೇಳೆ ಸಾಕಷ್ಟು ಮಂದಿ ಹಾಜರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷ ಪೂರೈಸಿದ ದರ್ಶನ್‌ಗೆ ಮೈಸೂರು ಪೇಟಾ ತೊಡಿಸಿ, ಶಾಲು ಹೊದಿಸಿ ಸುತ್ತೂರು ಶ್ರೀಗಳು ಅಭಿನಂದಿಸಿದರು. ಚಾಮುಂಡೇಶ್ವರಿ ವಿಗ್ರಹ ನೀಡಿ ಶುಭ ಹಾರೈಸಿ, ರಜತ ಮಹೋತ್ಸವದಂತೆ ಸುವರ್ಣ ಮಹೋತ್ಸವ ಪೂರೈಸಲಿ ಎಂದು ಹಾರೈಸಿದರು ಡಿ-25 ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಮಾತನಾಡಿ, ಕಲಾಕ್ಷೇತ್ರಕ್ಕೆ ಕಲಾವಿದರ ಕೊಡುಗೆ ಅಪಾರ. ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್ ಮನೆ ಮಾತಾಗಿದ್ದರು. ಮೇರು ಕಲಾವಿದ ದರ್ಶನ್ ಮೈಸೂರಿನಲ್ಲಿ ಹುಟ್ಟಿ ಬೆಳೆದಿದ್ದಾರೆ. ಅದು ಸಂತೋಷ ತಂದಿದೆ. ಸುವರ್ಣ ಮಹೋತ್ಸವ ಕೂಡ ಆಚರಿಸಿ ದರ್ಶನ್. ಭಗವಂತನ ಆಶೀರ್ವಾದ ಅವರ ಮೇಲೆ ಇರಲಿ ಎಂದು ಹರಸಿದರು. ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಮಾತನಾಡಿ, ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ಕಲೆಗೆ ಸಾಕಷ್ಟು…
ದರ್ಶನ್ ನನ್ನ ಪ್ರೀತಿಯ ಹಿರಿಯ ಮಗ. ಅಂಬರೀಶ್ ಗೆ ಇದ್ದ ಆ ಒಂದು ಗುಣ ದರ್ಶನ್ ನಲ್ಲೂ ಇದೆ ಎಂದು ಸಂಸದೆ ಸುಮಲತಾ ಅಂಬರೀಶ್ ಮೆಚ್ಚುಗೆ ಸೂಚಿಸಿದ್ದಾರೆ. ದರ್ಶನ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟು 25 ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದಲ್ಲಿ ಬೆಳ್ಳಿ ಪರ್ವ ಡಿ-25 ಸಮಾರಂಭದಲ್ಲಿ ಸುಮಲತಾ ಅಂಬರೀಶ್ ಪಾಲ್ಗೊಂಡು ಮಾತನಾಡಿದ್ದಾರೆ. ‘ನನ್ನ ಪ್ರೀತಿಯ ಹಿರಿಯ ಮಗ ದರ್ಶನ್, ನಿನ್ನೆಯಷ್ಟೇ ಹುಟ್ಟು ಆಚರಿಸಿಕೊಂಡಿದ್ದಾರೆ, ಕಾಟೇರ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಮಂಡ್ಯದಲ್ಲಿ ಮಾಡಿದ್ದೆವು. ಆಗಲೇ ಹೇಳಿದ್ದೆ ಈ ಸಿನೆಮಾ ದೊಡ್ಡ ಹಿಟ್ ಆಗುತ್ತೆ ಎಂದು, ಅದರ ಸಂಭ್ರಮವೂ ಮಂಡ್ಯದಲ್ಲೇ ಮಾಡ್ತೀವಿ ಅಂದಿದ್ದೆ. ‘ಕಾಟೇರ’ ಸಿನಿಮಾ ಈಗ ದೊಡ್ಡ ಹಿಟ್ ಆಗಿದೆ. ‘ಕಾಟೇರ’ ದರ್ಶನ್ ಅವರನ್ನು ಎಲ್ಲಗೋ ಕರೆದುಕೊಂಡು ಹೋಗಿ ಕೂರಿಸಿದೆ. ಅವರು ಚಿತ್ರರಂಗದಲ್ಲಿ 25 ವರ್ಷ ಕಳೆದಿದ್ದಾರೆ. ಅದು ಸಣ್ಣ ಸಾಧನೆಯಲ್ಲ’ ಎಂದು ಮೆಚ್ಚುಗೆ ಸೂಚಿಸಿದರು. ‘25 ವರ್ಷಗಳ ಹಿಂದೆ ದರ್ಶನ್ ಮೊದಲ ಸಿನಿಮಾ ‘ಮೆಜೆಸ್ಟಿಕ್’ ಮುಹೂರ್ತಕ್ಕೆ ನಾನು ಹಾಗೂ…
ಬಾಲಿವುಡ್ ಚಿತ್ರರಂಗದ ಹಾಟ್ ಬ್ಯೂಟಿ, ಪಡ್ಡೆ ಹುಡುಗರ ನೆಚ್ಚಿನ ನಟಿ ಸನ್ನಿಲಿಯೋನ್ ಒಂದಲ್ಲ ಒಂದು ಕಾರಣಕ್ಕೆ ಸುದ್ದ ಮಾಡುತ್ತಲೆ ಇರುತ್ತದೆ. ಇದೀಗ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಸನ್ನಿ ಲಿಯೋನ್ ಫೋಟೋ ಕಂಡುಬಂದಿದ್ದು ನೆಚ್ಚಿನ ನಟಿಯ ಫೋಟೋ ನೋಡಿ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ಉತ್ತರ ಪ್ರದೇಶ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯ ಪ್ರವೇಶ ಪತ್ರದಲ್ಲಿ ಸನ್ನಿ ಫೋಟೋ ಕಾಣಿಸಿಕೊಂಡಿದೆ. ಸದ್ಯ ಪತ್ರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಫೇ. 17 ರಂದು ಉತ್ತರ ಪ್ರದೇಶ ಪೊಲೀಸ್ ನೇಮಕಾತಿ ಮತ್ತು ಪ್ರಚಾರ ಮಂಡಳಿ ಯು ರಾಜ್ಯದ 2,385 ಪರೀಕ್ಷಾ ಕೇಂದ್ರಗಳೊಂದಿಗೆ 75 ಜಿಲ್ಲೆಗಳಲ್ಲಿ ಪರೀಕ್ಷೆಗಳನ್ನು ನಡೆಸಿತು. ಇದರಲ್ಲಿ ಕನೌಜ್‌ನ ತಿರ್ವಾ ತಹಸಿಲ್‌ನಲ್ಲಿರುವ ಶ್ರೀಮತಿ ಸೋನೆಶ್ರೀ ಸ್ಮಾರಕ ಬಾಲಕಿಯರ ಕಾಲೇಜು ಕೂಡ ಒಂದು ಪರೀಕ್ಷಾ ಕೇಂದ್ರವಾಗಿತ್ತು. ಇಲ್ಲಿ ಸನ್ನಿಲಿಯೋನ್ ಅವರ ಫೋಟೋದೊಂದಿಗೆ ಉತ್ತರ ಪ್ರದೇಶ ಪೊಲೀಸ್ ನೇಮಕಾತಿ ಮತ್ತು ಪ್ರಚಾರ ಮಂಡಳಿಯ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಲಾಗಿದೆ.