ಪಾಕಿಸ್ತಾನದಲ್ಲಿ ಫೆ.8ರಂದು ನಡೆದ ಚುನಾವಣೆಯ 3 ಕ್ಷೇತ್ರಗಳ ಫಲಿತಾಂಶವನ್ನು ಇಸ್ಲಮಾಬಾದ್ ಹೈಕೋರ್ಟ್ ಅಮಾನತುಗೊಳಿಸಿದೆ. ಮಾಜಿ ಪ್ರಧಾನಿ ಇಮ್ರಾನ್‍ಖಾನ್ ಅವರ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ ಪಕ್ಷ ಬೆಂಬಲಿತ ಅಭ್ಯರ್ಥಿಗಳಾದ ಅಮೀರ್ ಮುಘಲ್, ಶೋಯಬ್ ಶಹೀನ್ ಮತ್ತು ಮುಹಮ್ಮದ್ ಆಲಿ ಬುಖಾರಿ ಚುನಾವಣೆಯಲ್ಲಿ ಸೋತಿರುವುದಾಗಿ ಚುನಾವಣಾ ಆಯೋಗ ಘೋಷಿಸಿತ್ತು. ಆದರೆ ಮತ ಎಣಿಕೆಯಲ್ಲಿ ವ್ಯಾಪಕ ಅಕ್ರಮ ನಡೆದಿರುವುದಾಗಿ ಆರೋಪಿಸಿದ್ದ ಈ ಮೂವರು ಅಭ್ಯರ್ಥಿಗಳು ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ಎನ್‍ಎ-46, ಎನ್‍ಎ-47 ಮತ್ತು ಎನ್‍ಎ-48 ಕ್ಷೇತ್ರಗಳ ಫಲಿತಾಂಶಕ್ಕೆ ಸಂಬಂಧಿಸಿ ಪಾಕಿಸ್ತಾನ ಚುನಾವಣಾ ಆಯೋಗ ಹೊರಡಿಸಿದ್ದ ಅಧಿಸೂಚನೆಯನ್ನು ಅಮಾನತುಗೊಳಿಸಿದ್ದು, ಈ ಮೂರು ಕ್ಷೇತ್ರಗಳಲ್ಲಿ ಕ್ರಮವಾಗಿ ಅಂಜುಮ್ ಅಖೀಲ್‍ಖಾನ್, ತಾರಿಖ್ ಫಝಲ್ ಚೌಧರಿ ಮತ್ತು ರಾಜಾ ಖುರ್ರಮ್ ನವಾಝ್ ಗೆದ್ದಿದ್ದಾರೆ ಎಂಬ ಘೋಷಣೆಗೆ ತಡೆ ಹಿಡಿದಿದೆ.
Author: Author AIN
ಸ್ಯಾಂಡಲ್ ವುಡ್ ನಟ ಡಾಲಿ ಧನಂಜಯ್ ಈ ಬಾರಿ ಲೋಕಸಭಾ ಚುನಾವಣೆಯ ಆಖಾಡಕ್ಕೆ ಇಳಿಯಲಿದ್ದಾರೆ ಎಂಬ ಸುದ್ದಿ ಸಖತ್ ವೈರಲ್ ಆಗಿತ್ತು. ಮೈಸೂರು-ಕೊಡಗು ಕ್ಷೇತ್ರದಲ್ಲಿ ಪ್ರತಾಪ್ ಸಿಂಹ ವಿರುದ್ಧ ಧನಂಜಯ್ ಅವರನ್ನು ಕಾಂಗ್ರೆಸ್ ಕಣಕ್ಕೆ ಇಳಿಸಲಿದೆ ಎಂದು ಹೇಳಲಾಗಿತ್ತು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಧನಂಜಯ್ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತಂತೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, ಕಾಂಗ್ರೆಸ್ ಪಕ್ಷದಲ್ಲಿ ಆ ರೀತಿ ಯಾವುದೇ ಚರ್ಚೆ ಆಗಿಲ್ಲ. ನನಗೆ ಮಾಹಿತಿ ಇಲ್ಲ ಎಂದು ಹೇಳುವ ಮೂಲಕ ಗಾಳಿ ಸುದ್ದಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಕರ್ನಾಟಕ ಸರಕಾರ ಧನಂಜಯ್ ಅವರನ್ನು ಲಿಡ್ಕರ್ ಸಂಸ್ಥೆಗೆ ರಾಯಭಾರಿಯನ್ನಾಗಿ ನೇಮಿಸಿಕೊಂಡಿದೆ. ಜೊತೆಗೆ ಧನಂಜಯ್ ನಿರ್ಮಾಣದ ಡೇರ್ ಡೆವಿಲ್ ಮುಸ್ತಾಫಾಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರಶಂಸೆ ವ್ಯಕ್ತ ಪಡಿಸಿದ್ದರು. ಅಲ್ಲದೇ, ಕಾಂಗ್ರೆಸ್ ಮೆಚ್ಚುವಂತಹ ಸಿದ್ಧಾಂತಕ್ಕೆ ಬದ್ಧರಾಗಿದ್ದಾರೆ. ಇವೆಲ್ಲ ಕಾರಣದಿಂದಾಗಿ ಕಾಂಗ್ರೆಸ್ ಪಕ್ಷದಿಂದ ಡಾಲಿ ಕಣಕ್ಕೆ ಇಳಿಯಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಸ್ಪತಃ ಮುಖ್ಯಮಂತ್ರಿಗಳು ಗಾಳಿ ಸುದ್ದಿಗೆ…
ನಟ ಕಮ್ ಫಿಟ್‌ನೆಸ್ ಟ್ರೈನರ್ ಸಾಹಿಲ್ ಖಾನ್ ತಮ್ಮ 50ನೇ ವಯಸ್ಸಿನಲ್ಲಿ 21 ವರ್ಷ ವಯಸ್ಸಿನ ಯುವತಿಯನ್ನು ಎರಡನೇ ಮದುವೆಯಾಗುವ ಮೂಲಕ ಸುದ್ದಿಯಾಗಿದ್ದಾರೆ. 50ರ ಅಂಚಿನಲ್ಲಿರುವ ಸಾಹಿಲ್ ಇದೀಗ ಸಾಮಾಜಿಕ ಜಾಲತಾಣದಲ್ಲಿ 2ನೇ ಪತ್ನಿಯ ಪರಿಚಯ ಬಗ್ಗೆ ಮಾಡಿಕೊಟ್ಟಿದ್ದಾರೆ. ಎರಡನೇ ಪತ್ನಿಯ ಜೊತೆಗಿರುವ ಫೋಟೋ ಹಂಚಿಕೊಂಡಿರುವ ನಟ ಈಕೆ ನನ್ನ ಗೊಂಬೆ ಎಂದು ಬರೆದುಕೊಂಡಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಇಬ್ಬರೂ ಜೊತೆಯಾಗಿ ಇರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಈ ಮೂಲಕ ತಾವು ಎರಡನೇ ಮದುವೆ ಮಾಡಿಕೊಂಡಿರುವುದನ್ನು ರಿವೀಲ್ ಮಾಡಿದ್ದಾರೆ. ಶಾಹಿಲ್ ಎರಡನೇ ಪತ್ನಿಯ ಹೆಸರಾಗಲಿ ಆಕೆಯ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. 2003ರಲ್ಲಿ ನಿಗರ್ ಖಾನ್ ಎಂಬುವವರನ್ನು ಸಾಹಿಲ್ ಖಾನ್ ಮದುವೆಯಾಗಿದ್ದರು. ಕೆಲ ಮನಸ್ತಾಪಗಳಿಂದ 2005ರಲ್ಲಿ ಮೊದಲ ಪತ್ನಿಗೆ ನಟ ಡಿವೋರ್ಸ್ ನೀಡಿದರು. ಅಂದಹಾಗೆ, ಸಾಹಿಲ್ ಅವರು, ಬಾಲಿವುಡ್‌ನ ಸ್ಟೈಲ್, ಎಕ್ಸ್‌ಕ್ಯೂಸ್ ಮಿ ಚಿತ್ರಗಳಲ್ಲಿ ನಟಿಸಿದ್ದಾರೆ.
ಟಾಲಿವುಡ್ ಬ್ಯೂಟಿ, ಕರಾವಳಿ ಸುಂದರಿ ಪೂಜಾ ಹೆಗ್ಡೆ ಇತ್ತೀಚೆಗೆ ಕೊಂಚ ಮಟ್ಟಿಗೆ ಸೈಲೆಂಟ್ ಆಗಿದ್ದಾರೆ. ಪೂಜಾ ನಟನೆಯ ಸಿನಿಮಾಗಳು ಹೇಳಿಕೊಳ್ಳುವ ಮಟ್ಟಿಗೆ ಸದ್ದು ಮಾಡುತ್ತಿಲ್ಲ. ಬಾಲಿವುಡ್ ಗೆ ಎಂಟ್ರಿಕೊಟ್ಟರು ಅಲ್ಲೂ ಸೈ ಎನಿಸಿಕೊಳ್ಳಲಿಲ್ಲ. ಪೂಜಾ ಸಿನಿಮಾಗಳು ಸದ್ದು ಮಾಡದೇ ಹೋದ್ರು ಆಕೆಗೆ ಬರ್ತಿರೋ ಆಫರ್ ಗಳು ಮಾತ್ರ ಕೊಂಚವೂ ಕಮ್ಮಿಯಾಗುತ್ತಿಲ್ಲ. ಪೂಜಾ ಹೆಗ್ಡೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಈ ಮಧ್ಯೆ ಪೂಜಾ ಮದುವೆಯ ಸುದ್ದಿಗಳು ಹರಿದಾಡುತ್ತಿದೆ. ಇದೀಗ ನಟಿ ಸುಂದರವಾದ ಹಳದಿ ಬಣ್ಣದ ಸೀರೆ ಉಟ್ಟು, ಮಂಗಳೂರು ಮಲ್ಲಿಗ ಮುಡಿದು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಆಕರ್ಷಕವಾದ ಬ್ಲೌಸ್, ಸೀರೆ ಉಟ್ಟು ಆಭರಣಗಳನ್ನು ಧರಿಸಿಕೊಂಡು ಪಕ್ಕಾ ಮಂಗಳೂರಿನ ಚೆಲುವೆಯಾಗಿ ಮಿಂಚುತ್ತಿದ್ದಾರೆ. ಪೂಜಾ ಹೆಗ್ಡೆ ಹಳದಿ ಬಣ್ಣದ ಸೀರೆಗೆ ಹಸಿರು ಸ್ಟೋನ್ ಇರುವಂತಹ ಆಕರ್ಷಕವಾದ ಆಭರಣಗಳನ್ನು ಧರಿಸಿದ್ದರು. ನಟಿ ಪೂಜಾ ಹೆಗ್ಡೆ ಅವರಿಗೆ ಮಂಗಳೂರು ಮಲ್ಲಿಗೆ ಎಂದರೆ ಭಾರೀ ಇಷ್ಟ. ನಟಿ ಈ ಹಿಂದೆಯೂ ಹಲವಾರು ಸಲ ಮಂಗಳೂರು ಮಲ್ಲಿಗೆ ಮುಡಿದು…
ಭೂಗತ ಪಾತಕಿಯನ್ನ ಮದುವೆ ಮೆರವಣಿಗೆ ಸಂದರ್ಭದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿರುವ ಘಟನೆ ಪಾಕಿಸ್ತಾನದ ಲಾಹೋರ್ ನಲ್ಲಿ ನಡೆದಿದೆ. ಅಮೀರ್ ಬಾಲಾಜ್ ಟಿಪ್ಪು ಮೃತ ಭೂಗತ ಪಾತಕಿ. ಘಟನೆಯ ವೇಳೆ ಮದುವೆಗೆ ಬಂದಿರುವ ಅತಿಥಿಗಳಲ್ಲಿ ಮೂವರಿಗೆ ಗಾಯಗಳಾಗಿವೆ. ದಾಳಿಯಿಂದ ಗಾಯಗೊಂಡವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಮೀರ್ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಡಪಡಿಸಿದ್ದಾರೆ. ಮೃತ ಅಮೀರ್ ಎದೆಗೆ ನಾಲ್ಕು ಗುಂಡುಗಳು ತಗುಲಿದ್ದು, ಗುಂಡಿನ ದಾಳಿಯಿಂದಾಗಿ ತೀವ್ರ ರಕ್ತಸ್ರಾವವಾಗಿ ಅಮೀರ್ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಅಮೀರ್ ಸಾವಿನ ಸುದ್ದಿ ಬೆಂಬಲಿಗರನ್ನು ಕೆರಳಿಸಿದೆ. ಕೂಡಲೇ ಆಸ್ಪತ್ರೆಯ ಹೊರಗೆ ಅಮೀರ್ ಬೆಂಬಲಿಗರು ಜಮಾಯಿಸಿದರು. ಮಹಿಳೆಯರಂತೂ ತಮ್ಮ ಎದೆಗೆ ಹೊಡೆದುಕೊಂಡು ದುಷ್ಕರ್ಮಿಗಳ ಕೃತ್ಯ ಖಂಡಿಸಿದರು. ಈ ದಾಳಿಗೆ ಕಾರಣವೇನು..? ಹಾಗೂ ದಾಳಿಯ ಹಿಂದಿನ ಉದ್ದೇಶವೇನು..?, ಯಾರು ಈ ದಾಳಿಯನ್ನು ಮಾಡಿದ್ದಾರೆ ಎಂಬುದರ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲು ಅವಕಾಶ ಕೊಡಿಸುವುದಾಗಿ ಹೇಳಿ ಮೋಸ ಮಾಡಿರುವ ಆರೋಪದಡಿ ಸ್ಯಾಂಡಲ್‌ವುಡ್ ಸಹ ನಟನ ವಿರುದ್ಧ ದೂರು ದಾಖಲಾಗಿದೆ. ಯುವತಿ ನೀಡಿದ ಮಾಹಿತಿ ಆಧರಿಸಿ ಸಂತೋಷ್ ಎಂಬಾತನ ವಿರುದ್ಧ ಜ್ಞಾನಭಾರತಿ ರಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆರೋಪಿ ಸಂತೋಷ್ ಕೆಲವು ಕನ್ನಡ ಹಾಗೂ ತಮಿಳು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದಾನೆ. ತನಗೆ ಸಿನಿಮಾ ಚಾನ್ಸ್ ಕೊಡಿಸುವುದಾಗಿ ಹೇಳಿ ಪ್ರೀತಿಯ ನಾಟಕವಾಡಿ ವಂಚಿಸಿರುವುದಾಗಿ ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ರಾಯಚೂರು ಮೂಲದ ಯುವತಿ ಕುಟುಂಬಸ್ಥರ ಜೊತೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು ಕಳೆದ 5 ವರ್ಷಗಳ ಹಿಂದೆ ಯುವತಿಗೆ ಆರೋಪಿಯ ಪರಿಚಯವಾಗಿದೆ. ತಾನು ಸಿನಿಮಾ ನಟ ಎಂದು ತನ್ನನ್ನು ಆತ ಪರಿಚಯಿಕೊಂಡಿದ್ದ. ಬಳಿಕ ಪ್ರೀತಿಯ ನಾಟಕ ಶುರು ಮಾಡಿದ್ದಾನೆ. ನೀನು ನೋಡಲು ಚೆನ್ನಾಗಿದ್ದೀಯಾ, ಸಿನಿಮಾ ಹೀರೊಯಿನ್ ಆಗಬಹುದು. ನಿನಗೆ ಹೀರೊಯಿನ್ ಚಾನ್ಸ್ ಕೊಡಿಸುತ್ತೇನೆ ಎಂದು ಮರಳು ಮಾತುಗಳನ್ನು ಆಡಿದ್ದಾನೆ. ಯುವತಿ ಆತನ ಮಾತುಗಳನ್ನು ನಂಬಿದ್ದಳು. ಬಳಿಕ ಆತ ಯುವತಿಯನ್ನು ಮೈಸೂರು, ಗೋವಾಗೆ ಕರೆದೊಯ್ದು…
ಕಳೆದ ಎರಡು ದಿನಗಳ ಹಿಂದೆ ರಷ್ಯಾ ಅಧ್ಯಕ್ಷ ಪುಟಿನ್ ವಿರೋಧಿ ಅಲೆಕ್ಸಿ ನವಲ್ನಿ ಜೈಲಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಆ ಬಳಿಕ ರಷ್ಯಾದಲ್ಲಿ ಭಾರೀ ಕೋಲಾಹಲ ಉಂಟಾಗಿದ್ದು, ನವಲ್ನಿಗೆ ಗೌರವ ಸಲ್ಲಿಸಲು ಬೀದಿಗಿಳಿದ ಸುಮಾರು 400 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ರಷ್ಯಾದ ವಿವಿಧ ನಗರಗಳಲ್ಲಿ ನವಲ್ನಿಗೆ ಶ್ರದ್ಧಾಂಜಲಿ ಸಲ್ಲಿಸಲು ಜನರು ಬೀದಿಗಿಳಿದರು. ಜೊತೆಗೆ ಕೈಯಲ್ಲಿ ಮೇಣದ ಬತ್ತಿ, ಬ್ಯಾನರ್, ಕರಪತ್ರಗಳನ್ನು ಹಿಡಿದುಕೊಂಡು ನವಲ್ನಿಯವರನ್ನು ಕೊಲೆ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿ ಪುಟಿನ್ ವಿರುದ್ಧ ಪ್ರತಿಭಟನೆ ಆರಂಭಿಸಿದರು. ರಸ್ತೆಯಲ್ಲಿ ಹೆಚ್ಚುತ್ತಿರುವ ಪ್ರತಿಭಟನಾಕಾರರ ಗುಂಪನ್ನು ಕಂಡು ರಷ್ಯಾದ ಪೊಲೀಸರು ಪ್ರತಿಭಟನಕಾರರನ್ನು ಬಂಧಿಸುವ ಪ್ರಕ್ರಿಯೆ ಆರಂಭವಾಗಿದೆ. ಸುಮಾರು 12 ಕ್ಕೂ ಹೆಚ್ಚು ನಗರಗಳಲ್ಲಿ ಪೊಲೀಸರು ಶನಿವಾರ ರಾತ್ರಿಯವರೆಗೆ 401 ಜನರನ್ನು ಬಂಧಿಸಿದ್ದಾರೆ. ರಷ್ಯಾದ ಎರಡನೇ ಅತಿದೊಡ್ಡ ನಗರವಾದ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ 200 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.
ಸಾಮಾನ್ಯವಾಗಿ ಒಂದು ಕಂಪೆನಿಯಲ್ಲಿ ಕೆಲಸ ಮಾಡುವವರು ಹೆಚ್ಚಾಗಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಫೋನ್ ಗಳನ್ನು ಬಳಸುತ್ತಾರೆ. ಅದರ ಜೊತೆಗೆ ಕೈಯಲ್ಲೊಂದು ಲ್ಯಾಪ್ ಟಾಪ್ ಇದ್ದೆ ಇರುತ್ತದೆ. ಆದರೆ ಗೂಗಲ್ ಸಿಇಒ ಸುಂದರ್ ಪಿಚೈ ಎಷ್ಟು ಫೋನ್ ಗಳನ್ನು ಬಳಸುತ್ತಾರೆ ಎಂದು ತಿಳಿದರೆ ಶಾಕ್ ಆಗ್ತೀರಾ. ಗೂಗಲ್ ಮತ್ತು ಆಲ್ಫಾಬೆಟ್‌ನ ಸಿಇಒ ಸುಂದರ್ ಪಿಚೈ ಇತ್ತೀಚೆಗೆ ಸಂದರ್ಶನದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ತಮ್ಮ ಟೆಕ್ ಅಭ್ಯಾಸಗಳ ಬಗ್ಗೆ ಮಾತನಾಡಿದ ಸುಂದರ್ ಪಿಚೈ ವಿವಿಧ ಕಾರಣಗಳಿಗಾಗಿ ಒಂದೇ ಬಾರಿಗೆ 20 ಕ್ಕೂ ಹೆಚ್ಚು ಫೋನ್‌ಗಳನ್ನು ಬಳಸುವುದಾಗಿ ತಿಳಿಸಿದ್ದಾರೆ. ಹೆಚ್ಚಿನ ಜನರು ಕೇವಲ ಒಂದು ಮೊಬೈಲ್ ಫೋನ್ ಅನ್ನು ನಿರ್ವಹಿಸಲು ಹೆಣಗಾಡುತ್ತಿರುವ ಸಮಯದಲ್ಲಿ, ಪಿಚೈ ಅವರು ಬಹಿರಂಗಪಡಿಸಿದ ಮಾತು ಬಹಳಷ್ಟು ಮಂದಿಗೆ ತುಂಬಾನೇ ಅದ್ಭುತ ಅಂತ ಅನ್ನಿಸಬಹುದು. ನಿಜವಾಗಿಯೂ ಅವರು ಇಷ್ಟೊಂದು ಫೋನ್‌ಗಳನ್ನು ಬಳಸುತ್ತಾರಂತೆ, ತನ್ನ ಕೆಲಸದ ಭಾಗವಾಗಿ ಅವರು ಎಲ್ಲಾ ಸಾಧನಗಳಲ್ಲಿ ಗೂಗಲ್ ಉತ್ಪನ್ನಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತವೆ ಎಂದು ಖಚಿತಪಡಿಸಿಕೊಳ್ಳಲು ವಿವಿಧ…
ಕನ್ನಡ ಕಿರುತೆರೆಯಲ್ಲಿ ಹಾಗೂ ಹಿರಿತೆರೆಯಲ್ಲಿ ಮಿಂಚಿದ ನಟಿ ಜ್ಯೋತಿ ರೈ ಸದ್ಯ ಪರಭಾಷೆಯಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ತಮ್ಮ ನಟನೆಯ ಮೂಲಕವೇ ಆಫರ್ ಗಿಟ್ಟಿಸಿಕೊಂಡ ಚೆಲುವೆ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಮಿಂಚು ಹರಿಸುತ್ತಿದ್ದಾರೆ. ಇತ್ತೀಚೆಗೆ ಜ್ಯೋತಿರೈ ಸಾಮಾಜಿಕ ಜಾಲಾ ತಾಣದಲ್ಲಿ ತಮ್ಮ 2ನೇ ಮದುವೆ ವಿಚಾರ ರಿವೀಲ್ ಮಾಡಿದ್ದರು. ತೆಲುಗು ನಿರ್ದೇಶಕ ಸುಕು ಪೂರ್ವಜ್ ಜೊತೆ ಮದುವೆ ಆಗಿರುವ ವಿಚಾರವನ್ನು ನಟಿ ಬಹಿರಂಗಪಡಿಸಿದ್ದರು. ಈ ಮಧ್ಯೆ ನಟಿ ಮತ್ತಷ್ಟು ಹಾಟ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದಾರೆ. ಜ್ಯೋತಿ ರೈ ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್ ಬೋಲ್ಡ್ ಆಗಿರುವ ಫೋಟೋಗಳನ್ನು ಆಗಾಗ ಶೇರ್ ಮಾಡುತ್ತಲೇ ಇರುತ್ತಾರೆ. ಹಾಗೆಯೇ ನಟಿಯ ಫೋಟೋಗೆ ಸಖತ್ ಲೈಕ್ ಕಾಮೆಂಟ್ ಬರುತ್ತಿದೆ. ಒಂದು ಮಗುವಿನ ತಾಯಿ ಆಗಿದ್ದರೂ ಸಿಕ್ಕಾಪಟ್ಟೆ ಗ್ಲಾಮರಸ್ ಆಗಿ ಕಾಣಿಸಿಕೊಂಡು ಗಮನ ಸೆಳೆಯುತ್ತಾರೆ. ವಯಸ್ಸು 38 ಆಗಿದ್ದರೂ ಇಪ್ಪತ್ತರ ಹುಡುಗಿಯರನ್ನು ನಾಚಿಸುವಂತೆ ಕ್ಯಾಮರಾ ಮುಂದೆ ಜ್ಯೋತಿ ರೈ ಕಾಣಿಸಿಕೊಳ್ಳುತ್ತಾರೆ. ಸಣ್ಣ ಫ್ರಾಕ್, ಟಾಪ್ ಧರಿಸಿ ಹೊಸ ಫೋಟೊಗಳನ್ನು ಇದೀಗ…
ಜಪಾನ್‌ನಲ್ಲಿ ವಯಸ್ಸಾಗುತ್ತಿರುವವರ ಜನಸಂಖ್ಯೆ ಹೆಚ್ಚುತ್ತಿದ್ದು ಜನನ ಪ್ರಮಾಣ ತೀರಾ ಕಡಿಮೆಯಾಗುತ್ತಿದೆ. ಮತ್ತೊಂದೆಡೆ ಈಗಾಗಲೇ ಆರ್ಥಿಕ ಸಮಸ್ಯೆಗಳು ತಲೆದೋರಿದೆ. ಜಪಾನ್ ನ ಜನಸಂಖ್ಯಾ ಅಸಮತೋಲನವು ಅಲ್ಲಿನ ಸಾಂಸ್ಕೃತಿಕ ಪರಂಪರೆ ಮೇಲೂ ಪ್ರಭಾವ ಬೀರಿದೆ. ಈ ಹಿನ್ನೆಲೆಯಲ್ಲಿ ಪುರಾತನಕಾಲದಿಂದಲೂ ಜಪಾನ್‌ನಲ್ಲಿ ಆಚರಿಸಲಾಗುತ್ತಿದ್ದ ಸೋಮಿನ್ ಹಬ್ಬವು (ಪುರುಷರ ಅರೆಬೆತ್ತಲೆ ಹಬ್ಬ) ಈ ವರ್ಷ ಶಾಶ್ವತವಾಗಿ ಕೊನೆಗೊಂಡಿದೆ. ಜಪಾನ್ನ ಪುರುಷರು ಜಗಳದಲ್ಲಿ ತೊಡಗುವ ವಿಲಕ್ಷಣ ಉತ್ಸವಕ್ಕೆ ಸೊಮಿನ್-ಸಾಯಿ ಎಂದು ಕರೆಯಲಾಗುತ್ತಿದೆ. ಈ ಉತ್ಸವದಲ್ಲಿ ಸಾವಿರಾರು ಪುರುಷರು ತಮ್ಮ ಸೊಂಟಕ್ಕೆ ಮಾತ್ರ ಬಟ್ಟೆ ಕಟ್ಟಿಕೊಂಡು ಬಹುತೇಕ ಬೆತ್ತಲಾಗಿ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಈ ಉತ್ಸವದಲ್ಲಿ ಭಾಗವಹಿಸುತ್ತಿರುವ ಜನರಿಗೆ ತುಂಬಾ ವಯಸ್ಸಾಗುತ್ತಿರುವ ಕಾರಣ 1000 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಈ ಉತ್ಸವವನ್ನು ಕೊನೆಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೊಕುಸೆಕಿಜಿ ದೇವಾಲಯ ತಿಳಿಸಿದೆ. ಈ ದೇವಾಲಯದ ಹೇಳಿಕೆಯನ್ನು ಉಲ್ಲೇಖಿಸಿದ ಅಸಾಹಿ ಶಿಂಬುನ್ ಪತ್ರಿಕೆಯು ವರದಿ ಮಾಡಿದೆ. ಈ ಸಂಪ್ರದಾಯವನ್ನು ಮುಂದುವರಿಸಲು ಉತ್ತರಾಧಿಕಾರಿಗಳ ಕೊರತೆಯೂ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಶನಿವಾರ ಕೊನೆಯ ಬಾರಿಗೆ…