ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ನಡುವಿನ ವಾಕ್ ಸಮರ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದೆ. ಇದೀಗ ಉಮಾಪತಿ ವಿರುದ್ಧ ನಟ ದರ್ಶನ್ ನೀಡಿರುವ ಹೇಳಿಕೆ ಸಂಬಂಧ ನಟ ದರ್ಶನ್ ವಿರುದ್ಧ ಫಿಲಂಚೇಂಬರ್ ಗೆ ದೂರು ನೀಡಲಾಗಿದೆ. ಈ ಸಂಬಂಧ ಪ್ರಜಾಪರ ವೇದಿಕೆ ಕಾರ್ಯಕರ್ಯರು ಫಿಲಂಚೇಂಬರ್ ಗೆ ದೂರು ನೀಡಿದ್ದು, ನಟ ದರ್ಶನ್ ಗುಮ್ಮಿಸ್ಕೊತಿಯಾ ಎಂದು ಹೇಳುವ ಮೂಲಕ ನಿರ್ಮಾಪಕ ಉಮಾಪತಿಗೆ ಬೆದರಿಕೆ ಹಾಕಿದ್ದಾರೆ, ಅವರು ಕ್ಷಮೆಯಾಚಿಸಬೇಕು ಎಂದು ಪ್ರಜಾಪರ ವೇದಿಕೆ ನಟ ದರ್ಶನ್ ವಿರುದ್ಧ ದೂರು ದಾಖಲಿಸಿದೆ. ಅಯ್ಯೋ ತಗಡೇ, ನಿನಗೆ ‘ರಾಬರ್ಟ್’ ಕಥೆ ಕೊಟ್ಟಿದ್ದೇ ನಾವು..ಹೀಗಂತ ನಿರ್ಮಾಪಕ ಉಮಾಪತಿಗೆ ನಟ ದರ್ಶನ್ ಖಡಕ್ ಆಗಿ ತಿರುಗೇಟು ನೀಡಿದ್ದರು .\’ಕಾಟೇರ’ ಚಿತ್ರದ 50ನೇ ದಿನದ ಸಂಭ್ರಮಾಚರಣೆ ವೇಳೆ ನಟ ದರ್ಶನ್ ಉಮಾಪತಿಗೆ ಖಡಕ್ ತಿರುಗೇಟು ನೀಡಿದ್ದಾರೆ. ‘ಕಾಟೇರ’ ಕಥೆ ಹೇಳಿದ್ದು ನಾನು, ಟೈಟಲ್ ಕೊಟ್ಟಿದ್ದು ನಾನು ಎಂದು ಉಮಾಪತಿ ಹೇಳಿದ್ದರು. ಇದಕ್ಕೆ ದರ್ಶನ್ ಖಡಕ್ ಆಗಿ ಉತ್ತರ ನೀಡಿದ್ದಾರೆ. ಕಾರ್ಯಕ್ರಮದಲ್ಲಿ…
Author: Author AIN
ಕನ್ನಡದ ‘ಗಿಲ್ಲಿ’ ಸಿನಿಮಾದ ಮೂಲಕ ಸಿನಿಮಾ ರಂಗ ಪ್ರವೇಶಿಸಿ ಸದ್ಯ ಬಹುಭಾಷ ನಟಿಯಾಗಿ ಗುರುತಿಸಿಕೊಂಡಿರುವ ನಟಿ ರಕುಲ್ ಪ್ರೀತ್ ಸಿಂಗ್ ಬಹುಕಾಲದ ಗೆಳೆಯ ಜಾಕಿ ಭಗ್ನಾನಿ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಗೋವಾದ ಪ್ರತಿಷ್ಟಿತ ಐಟಿಸಿ ಗ್ರ್ಯಾಂಡ್ನಲ್ಲಿ ರಕುಲ್ ಪ್ರೀತ್ ಸಿಂಗ್, ಜಾಕಿ ಭಗ್ನಾನಿ ಅದ್ದೂರಿಯಾಗಿ ಹಸೆಮಣೆ ಏರಿದ್ದಾರೆ. ರಕುಲ್ ಸೋಷಿಯಲ್ ಮೀಡಿಯಾದಲ್ಲಿ ಮದುವೆಯ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದು ‘ನನ್ನದು ಮತ್ತು ಎಂದೆಂದಿಗೂ’ ಎಂದು ಅಡಿಬರಹ ನೀಡಿದ್ದಾರೆ. ಕ್ರೀಮ್- ಗೋಲ್ಡನ್ ಉಡುಗೆಯಲ್ಲಿ ರಾಕುಲ್ ದಂಪತಿ ಮಿಂಚಿದ್ದು ಪತಿ ಜೊತೆಗಿನ ಮದುವೆಯ ಸುಂದರ ಫೋಟೋಗಳನ್ನು ನಟಿ ಶೇರ್ ಮಾಡಿದ್ದಾರೆ. ಹಲವು ವರ್ಷಗಳಿಂದ ಪ್ರೇಮದಲ್ಲಿದ್ದ ರಕುಲ್, ಜಾಕಿ ಗೋವಾದಲ್ಲಿ ಬೆಳಗ್ಗೆ ಸಿಖ್ ಸಂಪ್ರದಾಯದಂತೆ, ಸಂಜೆ ಸಿಂಧಿ ಸಂಪ್ರದಾಯದಂತೆ ವಿವಾಹವಾದರು. ರಕುಲ್, ಜಾಕಿ ವಿವಾಹಕ್ಕೆ ಬಾಲಿವುಡ್ ನ ನಟ, ನಟಿಯರು ಹಾಜರಾಗಿದ್ದರು. ವರುಣ್ ಧವನ್, ಅರ್ಜುನ್ ಕಪೂರ್, ಭೂಮಿ ಪೆಡ್ನೇಕರ್, ಇಶಾ ಡಿಯೋಲ್, ಡೇವಿಡ್ ಧವನ್, ಆಯುಷ್ಮಾನ್ ಖುರಾನಾ ಸೇರಿದಂತೆ ಸ್ಟಾರ್ ನಟ-ನಟಿಯರು ವಿವಾಹದಲ್ಲಿ…
ಬಾಲಿವುಡ್ ಸ್ಟಾರ್ ದಂಪತಿ ರಣ್ವೀರ್ ಸಿಂಗ್- ದೀಪಿಕಾ ಪಡುಕೋಣೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ದೀಪ್ವೀರ್ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ದೀಪಿಕಾ ರಣವೀರ್ ಜೊತೆ ಮದುವೆಯಾಗಿ ಐದು ವರ್ಷಗಳಾಗಿವೆ. ಮಂಗಳವಾರ, ದಿ ವೀಕ್ನ ವರದಿಯೊಂದು ದೀಪಿಕಾ ಪಡುಕೋಣೆ ಅವರು ತಾಯಿಯಾಗಲು ತಯಾರಿ ನಡೆಸುತ್ತಿದ್ದಾರೆ ಎಂದು ವರದಿ ಮಾಡಿದೆ. ದೀಪಿಕಾಗೆ 2 ತಿಂಗಳಾಗಿದೆ ಎಂದು ಹೇಳಲಾಗ್ತಿದ್ದು ಈ ಬಗ್ಗೆ ದೀಪಿಕಾ ಅಥವಾ ರಣವೀರ್ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ದಿ ವೈಟ್ ಲೋಟಸ್ ಸೀಸನ್ 3 ರಿಂದ ದೀಪಿಕಾ ಹೊರಗುಳಿದಿದ್ದು ಈ ಎಲ್ಲ ಸಂಶಯಕ್ಕೆ ಕಾರಣ. ನಟಿ ಇದರಿಂದ ಹೊರಗುಳಿದಿದ್ದಾರೆ ಎಂದು ವರದಿಯಾದ ಕೆಲವೇ ದಿನಗಳಲ್ಲಿ ಅವರ ಪ್ರೆಗ್ನೆನ್ಸಿ ಕುರಿತು ಹೊಸ ಅಪ್ಡೇಟ್ ವೈರಲ್ ಆಯಿತು. ಕಳೆದ ತಿಂಗಳು, ಹಿಟ್ ಶೋ ಎಚ್ಬಿಒ ಕಾರ್ಯಕ್ರಮದ ಮೂರನೇ ಸೀಸನ್ನಲ್ಲಿ ದೀಪಿಕಾ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ವಾರಾಂತ್ಯದಲ್ಲಿ ದೀಪಿಕಾ ಕಾರ್ಯಕ್ರಮದಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ. ನಟಿ ದೀಪಿಕಾ ಕುರಿತು ಪ್ರೆಗ್ನೆನ್ಸಿ ಸುದ್ದಿ,…
ಕನ್ನಡದ ‘ಗಿಲ್ಲಿ’ ಸಿನಿಮಾದ ಮೂಲಕ ಸಿನಿಮಾ ರಂಗ ಪ್ರವೇಶಿಸಿ ಸದ್ಯ ಬಹುಭಾಷ ನಟಿಯಾಗಿ ಗುರುತಿಸಿಕೊಂಡಿರುವ ನಟಿ ರಕುಲ್ ಪ್ರೀತ್ ಸಿಂಗ್ ಬಹುಕಾಲದ ಗೆಳೆಯ ಜಾಕಿ ಭಗ್ನಾನಿ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಗೋವಾದಲ್ಲಿ ರಕುಲ್ ಹಾಗೂ ಜಾಕಿ ಸಖತ್ ಅದ್ದೂರಿಯಾಗಿ ಹಸೆಮಣೆ ಏರಿದ್ದಾರೆ. ರಕುಲ್ ಸೋಷಿಯಲ್ ಮೀಡಿಯಾದಲ್ಲಿ ಮದುವೆಯ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದು ‘ನನ್ನದು ಮತ್ತು ಎಂದೆಂದಿಗೂ’ ಎಂದು ಅಡಿಬರಹ ನೀಡಿದ್ದಾರೆ. ಕ್ರೀಮ್- ಗೋಲ್ಡನ್ ಉಡುಗೆಯಲ್ಲಿ ರಾಕುಲ್ ದಂಪತಿ ಮಿಂಚಿದ್ದು ಪತಿ ಜೊತೆಗಿನ ಮದುವೆಯ ಸುಂದರ ಫೋಟೋಗಳನ್ನು ನಟಿ ಶೇರ್ ಮಾಡಿದ್ದಾರೆ. ಹಲವು ವರ್ಷಗಳಿಂದ ಪ್ರೇಮದಲ್ಲಿದ್ದ ರಕುಲ್, ಜಾಕಿ ಗೋವಾದಲ್ಲಿ ಬೆಳಗ್ಗೆ ಸಿಖ್ ಸಂಪ್ರದಾಯದಂತೆ, ಸಂಜೆ ಸಿಂಧಿ ಸಂಪ್ರದಾಯದಂತೆ ವಿವಾಹವಾದರು. ಗೋವಾದ ಪ್ರತಿಷ್ಟಿತ ಐಟಿಸಿ ಗ್ರ್ಯಾಂಡ್ನಲ್ಲಿ ರಕುಲ್ ಪ್ರೀತ್ ಸಿಂಗ್, ಜಾಕಿ ಭಗ್ನಾನಿ ಮದುವೆ ಸಮಾರಂಭ ನೆರವೇರಿದ್ದು ಮದುವೆಗೆ ಆಪ್ತರು, ಸಂಬಂಧಿಕರು ಮತ್ತು ಸ್ನೇಹಿತರಿಗೆ ಮಾತ್ರ ಆಹ್ವಾನಿಸಲಾಗಿತ್ತು. ಮೂರು ದಿನಗಳ ಕಾಲ ಸ್ಟಾರ್ ಜೋಡಿಯ ವಿವಾಹ ನಡೆದಿದೆ. ರಕುಲ್, ಜಾಕಿ…
ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ಮಧ್ಯಸ್ಥಿಕೆ ಪಾತ್ರವನ್ನು ವಹಿಸಲು ಭಾರತ ಸಿದ್ಧವಾಗಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. ಜರ್ಮನ್ ಆರ್ಥಿಕ ಪತ್ರಿಕೆ ಹ್ಯಾಂಡೆಲ್ಸ್ಬ್ಲಾಟ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಜೈಶಂಕರ್, ಮಧ್ಯಪ್ರಾಚ್ಯದಲ್ಲಿ ಭಾರತದ ಇಂಧನ ಪೂರೈಕೆದಾರರು ಯುರೋಪಿಗೆ ಪೆಟ್ರೋಲಿಯಂ ಉತ್ಪನ್ನಗಳನ್ನು ಒದಗಿಸಲು ಆದ್ಯತೆ ನೀಡುತ್ತಾರೆ ಎಂದಿದ್ದಾರೆ. ಇದು ಉಕ್ರೇನ್ ಯುದ್ಧದ ನಂತರ ಹೆಚ್ಚಿನ ಬೆಲೆಯನ್ನು ಪಾವತಿಸಿತು ಮತ್ತು ಭಾರತಕ್ಕೆ ರಷ್ಯಾದ ಕಚ್ಚಾತೈಲವನ್ನು ಖರೀದಿಸುವುದನ್ನು ಬಿಟ್ಟು ಬೇರೆ ಆಯ್ಕೆಯಿಲ್ಲ. ಚೀನಾವನ್ನು ಭಾರತದಂತೆಯೇ ಯುರೋಪ್ ನೋಡಬೇಕೆಂದು ಭಾರತ ನಿರೀಕ್ಷಿಸದಂತೆಯೇ, ರಷ್ಯಾದ ಬಗ್ಗೆ ಭಾರತದ ವಿಧಾನವು ಯುರೋಪಿನಂತೆಯೇ ಇರಲು ಸಾಧ್ಯವಿಲ್ಲ ಎಂದು ಯುರೋಪ್ ಸಹ ಅರ್ಥಮಾಡಿಕೊಳ್ಳಬೇಕು ಎಂದು ಅವರು ಹೇಳಿದರು. ಭಾರತವು ರಷ್ಯಾದೊಂದಿಗೆ “ಸ್ಥಿರ” ಮತ್ತು “ತುಂಬಾ ಸ್ನೇಹಪರ” ಸಂಬಂಧವನ್ನು ಹೊಂದಿದೆ ಮತ್ತು ಮಾಸ್ಕೋ ಎಂದಿಗೂ ನವದೆಹಲಿಯ ಹಿತಾಸಕ್ತಿಗಳಿಗೆ ಧಕ್ಕೆ ತಂದಿಲ್ಲ ಎಂದು ವಿದೇಶಾಂಗ ಮತ್ತೊಂದೆಡೆ, ಉದಾಹರಣೆಗೆ, ಚೀನಾದೊಂದಿಗಿನ ನಮ್ಮ ರಾಜಕೀಯ ಮತ್ತು ಮಿಲಿಟರಿ ಸಂಬಂಧವು ತುಂಬಾ ಜಟಿಲವಾಗಿದೆ” ಎಂದು ಅವರು ಪ್ರತಿಪಾದಿಸಿದರು. ಉಕ್ರೇನ್ ಯುದ್ಧದ…
ಖ್ಯಾತ ರಿಯಲ್ ಮಿ ಕಂಪನಿ ಹೊಸ ಸ್ಮಾರ್ಟ್ಫೋನ್ ರಿಯಲ್ ಮಿ 12+ 5G ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಆರಂಭದಲ್ಲಿ ಈ ಫೋನ್ ತಿಂಗಳ ಕೊನೆಯಲ್ಲಿ ಫೆಬ್ರವರಿ 29 ರಂದು ಮಲೇಷ್ಯಾದಲ್ಲಿ ಬಿಡುಗಡೆ ಆಗಲಿದೆ. ಬಳಿಕ ಮಾರ್ಚ್ 6 ರಂದು ಮಧ್ಯಾಹ್ನ 12 ಗಂಟೆಗೆ ದೇಶದಲ್ಲಿ ರಿಲೀಸ್ ಆಗಲಿದೆ ಎಂದು ಹೇಳಲಾಗಿದೆ. ರಿಯಲ್ ಮಿ ಭಾರತದಲ್ಲಿ ರಿಯಲ್ ಮಿ 12+ 5G ಮತ್ತು ರಿಯಲ್ ಮಿ 12 ಮಾಡೆಲ್ಗಳನ್ನು ಮಾರ್ಚ್ 6 ರಂದು ಮಧ್ಯಾಹ್ನ 12 ಗಂಟೆಗೆ IST ಬಿಡುಗಡೆ ಮಾಡುವ ಸಾಧ್ಯತೆಯಿದೆ Tipster Sudhanshu Ambhore (@Sudhanshu1414) X ನಲ್ಲಿ ಮಾಡಿದ ಪೋಸ್ಟ್ನಲ್ಲಿ ಹೇಳಿಕೊಂಡಿದ್ದಾರೆ. ಟಿಪ್ಸ್ಟರ್ ಪೋಸ್ಟ್ನಲ್ಲಿ ಹಂಚಿಕೊಂಡ ಚಿತ್ರದಲ್ಲಿ, ರಿಯಲ್ ಮಿ 12 ಪ್ಲಸ್ ಫೋನ್ ಬೀಜ್ ಮತ್ತು ಹಸಿರು ಫಾಕ್ಸ್ ಲೆದರ್ ಫಿನಿಶ್ಗಳಲ್ಲಿ ಕಾಣಿಸಿಕೊಂಡಿದೆ. ಈ ಹ್ಯಾಂಡ್ಸೆಟ್ ಮೀಡಿಯಾ ಟೆಕ್ ಡೈಮೆನ್ಸಿಟಿ 7050 SoC, Sony LYT-600 OIS ಪೋರ್ಟ್ರೇಟ್ ಕ್ಯಾಮೆರಾ ಮತ್ತು 120Hz ಮೃದುವಾದ AMOLED…
ಉಕ್ರೈನ್ ವಿರುದ್ಧ ಹೋರಾಟ ಮಾಡಲು ರಷ್ಯಾ ಖಾಸಗಿ ಸೈನಿಕರು ಮತ್ತು ಕೈದಿಗಳನ್ನು ಬಳಸಿಕೊಂಡಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ. ಅಲ್ಲದೆ ರಷ್ಯಾ ಹಲವು ಭಾರತೀಯ ಕಾರ್ಮಿಕರನ್ನು ಬಳಸಿಕೊಂಡಿರುವ ಆಘಾತಕಾರಿ ಅಂಶ ಕೂಡಾ ವರದಿಯಲ್ಲಿ ಬಹಿರಂಗಗೊಂಡಿದೆ. ರಷ್ಯಾವು ಸೇನಾ ಭದ್ರತಾ ಸಹಾಯಕ ಹುದ್ದೆ ಎಂದು ನಂಬಿಸಿ ಭಾರತೀಯ ಏಜೆಂಟ್ ಮೂವರು ಭಾರತೀಯರನ್ನು ರಷ್ಯಾಕ್ಕೆ ಕಳುಹಿಸಿ ವಂಚಿಸಲಾಗಿತ್ತು. ಈ ಮೂವರನ್ನು ರಷ್ಯಾ ಉಕ್ರೈನ್ ವಿರುದ್ಧ ಯುದ್ಧದಲ್ಲಿ ಹೋರಾಡಲು ಬಳಸಿಕೊಂಡಿರುವುದಾಗಿ ತಿಳಿಸಿದೆ. 2023ರ ನವೆಂಬರ್ ಹೊತ್ತಿಗೆ ಅಂದಾಜು 18 ಮಂದಿ ಭಾರತೀಯರನ್ನು ರಷ್ಯಾ ಮತ್ತು ಉಕ್ರೈನ್ ಗಡಿಯ ವಿವಿಧ ಭಾಗಗಳಲ್ಲಿ ನಿಯೋಜಿಸಲಾಗಿತ್ತು. ಅವರಲ್ಲಿ ಒಬ್ಬರು ಯುದ್ಧದಲ್ಲಿ ಸಾವನ್ನಪ್ಪಿರುವುದಾಗಿ ವರದಿಯಲ್ಲಿ ಉಲ್ಲೇಖಿಸಿದೆ. ವಂಚನೆಗೊಳಗಾಗಿರುವ ಹೈದರಾಬಾದ್ ನ ವ್ಯಕ್ತಿಯ ಕುಟುಂಬ ಸದಸ್ಯರೊಬ್ಬರು ಇದೀಗ ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿಯ ಮೊರೆ ಹೋಗಿದ್ದು, ಈ ನಿಟ್ಟಿನಲ್ಲಿ ಓವೈಸಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹಾಗೂ ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಪತ್ರ ಬರೆದು, ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಭಾರತೀಯರು ವಾಪಸ್…
ಅತ್ಯುತ್ತಮ ಸಿನಿಮಾಗಳು ತೆರೆಗೆ ಬಂದಾಗ ಅದನ್ನು ಹೊಗಳಿ ಚಿತ್ರತಂಡದವರಿಗೆ ಪ್ರಧಾನಿ ಮೋದಿ ಆಗಾಗೆ ಪ್ರಶಂಸೆ ಮಾಡುತ್ತಲೆ ಬಂದಿದ್ದಾರೆ. ಈ ಬಾರಿ ಮೋದಿ ಆರ್ಟಿಕಲ್ 370 ಚಿತ್ರದ ಬಗ್ಗೆ ತಮ್ಮ ಭಾಷಣದಲ್ಲಿ ಉಲ್ಲೇಖ ಮಾಡಿದ್ದಾರೆ. ಕಾಶ್ಮೀರದಲ್ಲಿ ನಡೆದ ಕಾರ್ಯಕ್ರದಲ್ಲಿ ಮಾತನಾಡಿದ ಮೋದಿ, ‘ಆರ್ಟಿಕಲ್ 370 ಸಿನಿಮಾ ಜಮ್ಮು ಕಾಶ್ಮೀರದ ವಿಶೇಷ ಅಧಿಕಾರವನ್ನು ಯಾಕೆ ತಗೆಯಲಾಯಿತು ಎನ್ನುವುದನ್ನು ಸ್ಪಷ್ಟವಾಗಿ ತಿಳಿಸುತ್ತದೆ ಎಂದು ಹೇಳಿದ್ದಾರೆ. ಮೋದಿಯ ಭಾಷಣ ಕೇಳಿದ ಆರ್ಟಿಕಲ್ 370 ಸಿನಿಮಾದ ನಾಯಕಿ ಯಾಮಿನಿ ಗೌತಮ್ ಮೋದಿ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಈ ನೈಜ ಕಥೆಯನ್ನು ನಿಮಗೆ ಮತ್ತು ಎಲ್ಲರಿಗೂ ಒಪ್ಪುವಂತೆ ಸಿನಿಮಾ ಮಾಡಿದ್ದೇವೆ ಎನ್ನುವ ಭರವಸೆಯನ್ನು ನಾನು ಮತ್ತು ನನ್ನ ತಂಡ ನೀಡಲಿದೆ ಎಂದು ಯಾಮಿನಿ ಪ್ರತಿಕ್ರಿಯಿಸಿದ್ದಾರೆ. ಕನ್ನಡತಿ ಪ್ರಿಯಾ ಮಣಿ ಹಾಗೂ ಬಾಲಿವುಡ್ ಹೆಸರಾಂತ ನಟಿ ಯಾಮಿನಿ ಗೌತಮ್ ಕಾಂಬಿನೇಷನ್ ನ ‘ಆರ್ಟಿಕಲ್ 370’ ಚಿತ್ರದ ಟ್ರೈಲರ್ ಮೊನ್ನೆಯಷ್ಟೇ ರಿಲೀಸ್ ಆಗಿದ್ದು, ನೋಡುಗರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಟ್ರೈಲರ್ ನಲ್ಲಿ…
ಬಾಲಿವುಡ್ ಬ್ಯೂಟಿ ನಟಿ ದೀಪಿಕಾ ಪಡುಕೋಣೆ ಯಾವುದೇ ರೀತಿಯ ವಸ್ತ್ರ ಧರಿಸಿದ್ರು ಸಖತ್ ಮುದ್ದಾಗಿ ಕಾಣಿಸುತ್ತಾರೆ. ಸೀರೆಯುಟ್ಟು ಸುಂದರಿಯಾಗಿ ಕಾಣಿಸಿಕೊಂಡಿರುವ ನಟಿಯ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಲಂಡನ್ನಲ್ಲಿ ನಡೆದ 77th BAFTA ರೆಡ್ ಕಾರ್ಪೆಟ್ನಲ್ಲಿ ದೀಪಿಕಾ ಪಡುಕೋಣೆ ಸೀರೆಯುಟ್ಟುಕೊಂಡು ಭಾಗವಹಿಸಿದ್ದು ದೀಪಿಕಾ ಲುಕ್ ಗೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ಬ್ರಿಟೀಷ್ ಅಕಾಡೆಮಿ ಫಿಲ್ಮ್ ಅವಾರ್ಡ್ 2024 ಕಾರ್ಯಕ್ರಮದಲ್ಲಿ ಹಾಲಿವುಡ್ ನ ಖ್ಯಾತ ನಟ,ನಟಿಯರು ಭಾಗಿಯಾಗಿದ್ದರು. ಯಾವಾಗಲು ಫ್ಯಾಷನ್ ಟ್ರೆಂಡ್ ಆಗಿರುವ ನಟಿ 77th BAFTA ಕಾರ್ಯಕ್ರಮದಲ್ಲಿ ಮಿನುಗುವ ಕ್ರೀಮ್ ಕಲರ್ ಸೀರೆಯಲ್ಲಿ ಮಿಂಚಿದ್ದಾರೆ. ಅಂದಹಾಗೆ ದೀಪಿಕಾ ಗರ್ಭೀಣಿಯಾಗಿದ್ದು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಕಳೆದ ಜನವರಿಯಲ್ಲಿ ಮಗು ಬಗ್ಗೆ ಮಾತನಾಡಿದ್ದ ದೀಪಿಕಾ ಪಡುಕೋಣೆ ಅವರು, “ನನಗೂ ತಾಯಿ ಆಗಬೇಕಿದೆ. ನನಗೂ, ರಣವೀರ್ಗೂ ಮಗು ಅಂದರೆ ತುಂಬ ಇಷ್ಟ. ಹೊಸ ಕುಟುಂಬ ಶುರು ಮಾಡಲು ನಾವು ಉತ್ಸುಕರಾಗಿದ್ದೇವೆ ಎಂದು ದೀಪಿಕಾ ಹೇಳಿಕೊಂಡಿದ್ದರು. ಚಿತ್ರರಂಗದಲ್ಲಿ ಹೆಸರು…
ಅಮೆರಿಕದ ಪೊಲೀಸ್ ಅಧಿಕಾರಿಯೊಬ್ಬರು ತಾವು ಮೊಟ್ಟ ಮೊದಲು ವ್ಯಕ್ತಿಯೋರ್ವನನ್ನು ಬಂಧಿಸಿದ್ದರು. ಈ ಖುಷಿಯಲ್ಲಿ ಪತ್ನಿಗೆ ಮೆಸೇಜ್ ತಿಳಿಸಿದ್ದ ಅಧಿಕಾರಿಯ ಶವ ಮರುದಿನ ನದಿಯಲ್ಲಿ ಪತ್ತೆಯಾಗಿದೆ. 35 ವರ್ಷದ ಪೊಲೀಸ್ ಅಧಿಕಾರಿ ರಾಬರ್ಟ್ ಜಾನ್ ಲಿಯೊನಾರ್ಡ್ ಟೆನ್ನೆಸ್ಸೀ ರಾಜ್ಯದಲ್ಲಿ ಹೊಸದಾಗಿ ಕರ್ತವ್ಯಕ್ಕೆ ನೇಮಕಗೊಂಡಿದ್ದರು. ಪ್ರೇಮಿಗಳ ದಿನದಂದು ರಾತ್ರಿ 10 ಗಂಟೆ ಸುಮಾರಿಗೆ ಓರ್ವ ಪುರುಷ ಹಾಗೂ ಓರ್ವ ಮಹಿಳೆ ಸೇತುವೆ ಮೇಲೆ ಜಗಳವಾಡುತ್ತಿದ್ದಾರೆ ಎನ್ನುವ ಮಾಹಿತಿ 911 ಮೂಲಕ ಪೊಲೀಸರಿಗೆ ತಲುಪಿತ್ತು. ಈ ವೇಳೆ ಮಹಿಳೆಯನ್ನು ಜಾನ್ ಲಿಯೋನಾರ್ಡ್ ಬಂಧಿಸಿದ್ದರು.ಇದು ಅವರ ಮೊದಲ ಬಂಧನವಾಗಿದ್ದು, ಪತ್ನಿಗೆ ಈ ಕುರಿತು ಸಂದೇಶ ಕಳುಹಿಸಿದ್ದರು. ಆದರೆ ಆ ಬಳಿಕ ಲಿಯೋನಾರ್ಡ್ ಮೊಬೈಲ್ ಸ್ಪಿಚ್ ಆಫ್ ಆಗಿದೆ. ಬಳಿಕ ಶೋಧ ತಂಡ ಹುಡುಕಾಟ ಆರಂಭಿಸಿತ್ತು. ಪೊಲೀಸರು ಕಾರನ್ನು ಪತ್ತೆ ಹಚ್ಚಲು ಉಪಗ್ರಹ ಟ್ರ್ಯಾಕಿಂಗ್ ಬಳಸಿದ್ದಾರೆ, ಗುರುವಾರ ಟೆನ್ನೆಸ್ಸೀ ನದಿಯಲ್ಲಿ ಪೊಲೀಸ್ ಅಧಿಕಾರಿ ಹಾಗೂ ಆತ ಬಂಧಿಸಿದ್ದ ಮಹಿಳೆ ಇಬ್ಬರ ಶವವು ಪತ್ತೆಯಾಗಿದೆ. ಕಾರು ನದಿಗೆ ಹೇಗೆ ಬಿದ್ದಿದೆ…