Author: Author AIN

ಬೆಂಗಳೂರು: ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿರವರ ವಿಶೇಷ ಕಾಳಜಿಯ ಪ್ರಯತ್ನದ ಫಲವಾಗಿ ರಾಜ್ಯದ 486 ಅಮೃತ ರೈತ ಉತ್ಪಾದಕ ಸಂಸ್ಥೆಗಳಿಗೆ ಒಟ್ಟು ರೂ.20 ಕೋಟಿ ಅನುದಾನ ಒದಗಿಸಲಾಗಿದೆ. ರೈತ ಉತ್ಪಾದನಾ ಸಂಸ್ಥೆಗಳನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಕೃಷಿ ಸಚಿವರು, ಮೂರು ವರ್ಷಗಳಿಂದ ಬಿಡುಗಡೆಯಾಗದಿದ್ದ ಅನುದಾನವನ್ನು ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಬಿಜೆಪಿ ಸರ್ಕಾರ ಅಮೃತ ರೈತ ಉತ್ಪಾದಕರ ಸಂಸ್ಥೆಗಳ ಸ್ಥಾಪನೆ ಮತ್ತು ಪ್ರೋತ್ಸಾಹಕ್ಕೆ ಅನುದಾನ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿ, ಯಾವುದೇ ಅನುದಾನ ನೀಡದೆ ಸುಳ್ಳು ಭರವಸೆ ನೀಡಿತ್ತು. ಆದರೆ ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿರವರು ಎಫ್.ಪಿ.ಒ ಅನುದಾನ ಒದಗಿಸುವಲ್ಲಿ ಯಶಸ್ವಿಯಾಗಿದ್ದು ರೈತ ಉತ್ಪಾದನಾ ಸಂಸ್ಥೆಗಳು ಕೃಷಿ ಸಚಿವರಿಗೆ ಕೃತಜ್ಞತೆ ಸಲ್ಲಿಸಿವೆ. https://ainlivenews.com/job-seekers-take-note-job-opportunities-at-indian-oil-corporation-for-puc-passers/ ಅಮೃತ ರೈತ ಉತ್ಪಾದಕರ ಸಂಸ್ಥೆಗಳ ಸ್ಥಾಪನೆ ಮತ್ತು ಪ್ರೋತ್ಸಾಹ ಕಾರ್ಯಕ್ರಮ ರಾಜ್ಯದಲ್ಲಿ ರೈತ / ಮೀನುಗಾರರ / ನೇಕಾರರನ್ನು ಸಂಘಟಿಸಿ ಅವರ ಉತ್ಪಾದಕತೆಯನ್ನು ಹೆಚ್ಚಿಸುವುದಲ್ಲದೇ ಅವರು ಬೆಳೆದಂತಹ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ರೈತರನ್ನು ಸಂಘಟಿಸಿ…

Read More

ಪಾಕಿಸ್ತಾನದ ವೇಗಿ ಶಾಹೀನ್ ಅಫ್ರಿದಿಗೆ ಐಸಿಸಿ ಭಾರಿ ದಂಡ ವಿಧಿಸಿದೆ. ಕರಾಚಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದ ವೇಳೆ ಮೂವರು ಪಾಕಿಸ್ತಾನಿ ಆಟಗಾರರು ದಕ್ಷಿಣ ಆಫ್ರಿಕಾದ ಆಟಗಾರರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಇದರೊಂದಿಗೆ, ಐಸಿಸಿ ಮಧ್ಯಪ್ರವೇಶಿಸಿ ಕ್ರಮ ಕೈಗೊಂಡಿತು. ಶಾಹೀನ್ ಅಫ್ರಿದಿ ಜೊತೆಗೆ, ಸೌದ್ ಶಕೀಲ್ ಮತ್ತು ಕಮ್ರಾನ್ ಗುಲಾಮ್ ಅವರಿಗೂ ಐಸಿಸಿ ದಂಡ ವಿಧಿಸಿದೆ. ಶಾಹೀನ್ ಅಫ್ರಿದಿ ದಕ್ಷಿಣ ಆಫ್ರಿಕಾದ ಯುವ ಬ್ಯಾಟ್ಸ್‌ಮನ್ ಮ್ಯಾಥ್ಯೂ ಬ್ರೀಟ್ಜ್ಕೆ ಜೊತೆ ಜಗಳವಾಡಿದರು. ದಕ್ಷಿಣ ಆಫ್ರಿಕಾದ ನಾಯಕಿ ಟೆಂಬಾ ಬವುಮಾ ಔಟಾದ ನಂತರ ಕಮ್ರಾನ್ ಗುಲಾಮ್ ಮತ್ತು ಸೌದ್ ಶಕೀಲ್ ಆಕ್ರಮಣಕಾರಿಯಾಗಿ ಆಚರಿಸಿದರು. https://ainlivenews.com/job-seekers-take-note-job-opportunities-at-indian-oil-corporation-for-puc-passers/ ದಕ್ಷಿಣ ಆಫ್ರಿಕಾದ ಇನ್ನಿಂಗ್ಸ್‌ನ 28 ನೇ ಓವರ್‌ನಲ್ಲಿ ಆಫ್ರಿದಿ ಮತ್ತು ಮ್ಯಾಥ್ಯೂ ಬ್ರೀಟ್ಜ್ಕೆ ನಡುವೆ ಮಾತಿನ ಚಕಮಕಿ ನಡೆಯಿತು. ಶಾಹೀನ್ ಎಸೆದ ಐದನೇ ಎಸೆತದಲ್ಲಿ, ಮ್ಯಾಥ್ಯೂ ಬ್ರೀಟ್ಜ್ಕೆ ಮಿಡ್-ಆನ್ ಪ್ರದೇಶದಲ್ಲಿ ಶಾಟ್ ಹೊಡೆದರು. ಆಗ ಆಫ್ರಿದಿ ಅವರಿಗೆ ಏನೋ ಹೇಳಿದರು. ಮ್ಯಾಥ್ಯೂ ಒಂದು ಅಥವಾ ಎರಡು ಬಾರಿ ಪಿಚ್…

Read More

ಚಿಕ್ಕಮಗಳೂರು: ಮೂಡಿಗೆರೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಸರ್ವೇ ಅಧಿಕಾರಿ ಶಿವಕುಮಾರ್‌ ಹನಿಟ್ರ್ಯಾಪ್‌ ಕಾರಣ ಎನ್ನಲಾಗುತ್ತಿದೆ. ಶಿವಕುಮಾರ್‌ ಅವರ ಕಚೇರಿಯಲ್ಲಿ ಡೆತ್‌ ನೋಟ್‌ ಸಿಕ್ಕಿದೆ. https://www.youtube.com/watch?v=yeSVK6HfTNU ಸರ್ವೇಗೆ ಹೋಗಿದ್ದ ವೇಳೆ ಶಿವಕುಮಾರ್‌ ಅವರಿಗೆ ಮಹಿಳೆಯೊಬ್ಬರ ಪರಿಚಯವಾಗಿದೆ. ಬಳಿಕ ಫೋನ್‌ನಲ್ಲಿ ಆತ್ಮೀಯವಾಗಿ ಮಾತನಾಡಿದ್ದಾರೆ. ಇದೇ ವಿಚಾರ ಮುಂದಿಟ್ಟುಕೊಂಡು ಮಹಿಳೆ ಹಣಕ್ಕಾಗಿ ಪೀಡಿಸುತ್ತಿದ್ದಳು ಎನ್ನಲಾಗುತ್ತಿದೆ.  ಹಿಂದೆ ಆ ಮಹಿಳೆಗೆ ಶಿವಕುಮಾರ್ ಈಗಾಗಲೇ ಒಂದೂವರೆ ಲಕ್ಷ ರೂ. ಹಣ ನೀಡಿದ್ದರು. ಮತ್ತೆ ಹಣ ಕೇಳಿದ್ದಕ್ಕೆ ಅವರು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಈ ವಿಚಾರ ಎಫ್ಐಆರ್‌ನಲ್ಲಿ ಕೂಡ ಪ್ರಸ್ತಾಪವಾಗಿದೆ. https://ainlivenews.com/survey-officer-surrendered-by-hanging-there-are-many-doubts-surrounding-the-death/ ಅದೂ ಅಲ್ಲದೇ ಶಿವಕುಮಾರ್ ಅಧಿಕಾರದ ವೇಳೆ ಸರಿಯಾಗಿ ಸರ್ವೆ ಮಾಡಿಲ್ಲ ಎಂದು ಇಬ್ಬರು ಅವರ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಅಮಾನತ್ತಾಗುತ್ತೇನೆ ಎಂದು ಆತಂಕಕ್ಕೀಡಾಗಿದ್ದರು. ಹಾಗಾಗಿ, ಕಳೆದ ಎಂಟತ್ತು ತಿಂಗಳಿಂದ ಮನೆಯಲ್ಲಿ ಏಕಾಂಗಿಯಾಗಿದ್ದ ಶಿವಕುಮಾರ್ ಖಿನ್ನತೆಗೆ ಓಳಗಾಗಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಮೂಡಿಗೆರೆ‌ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read More

ಬೆಂಗಳೂರು :ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರು, ದಿ ಆರ್ಟ್ ಆಫ್ ಲಿವಿಂಗ್ ಇಂಟರ್ ನ್ಯಾಷನಲ್ ಸೆಂಟರ್ ವತಿಯಿಂದ ಹಮ್ಮಿಕೊಂಡಿರುವ 10ನೇ ಅಂತರರಾಷ್ಟ್ರೀಯ ಮಹಿಳಾ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವ ಸಲುವಾಗಿ ಇಂದು ಬೆಂಗಳೂರಿನ ಹೆಚ್.ಎ.ಎಲ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ರಾಷ್ಟ್ರಪತಿ ರಾಜ್ಯದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಆತ್ಮೀಯವಾಗಿ ಸ್ವಾಗತಿಸಿದರು. ಕಂದಾಯ ಕೃಷ್ಣಭೈರೇಗೌಡ, ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್,ಏರ್ ಮಾರ್ಷಲ್ ನಾಗೇಶ್ ಕಪೂರ್,ಲೆಫ್ಟಿನೆಂಟ್ ಜನರಲ್ ಜೆ.ಕೆ.ಗೇರಾ, ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕರಾದ ಅಲೋಕ್ ಮೋಹನ್, https://ainlivenews.com/job-seekers-take-note-job-opportunities-at-indian-oil-corporation-for-puc-passers/ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿಗಳಾದ ಸತ್ಯವತಿ.ಜಿ.,ಬೆಂಗಳೂರು ನಗರದ ಪೊಲೀಸ್ ಆಯುಕ್ತರಾದ ಬಿ. ದಯಾನಂದ,ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಗದೀಶ. ಜಿ ಉಪಸ್ಥಿತಿ ರಾಷ್ಟ್ರಪತಿಗಳು ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ದಿ ಆರ್ಟ್ ಆಪ್ ಇಂಟರ್ ನ್ಯಾಷನಲ್ ಲಿವಿಂಗ್ ಸೆಂಟರ್ ಗೆ ತೆರಳಿದರು.

Read More

ಉಡುಪಿ: ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಕರ್ನಾಟ ಪ್ರವಾಸಕೈಗೊಂಡಿದ್ದು, ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದಿದ್ದಾರೆ. ಒಂದು ದಿನದ ಮಟ್ಟಿಗೆ ಉಡುಪಿಗೆ ಭೇಟಿ ನೀಡಿದ್ದ ಪ್ರಮೋದ್‌, ಅವರು ಕೊಲ್ಲರಿನ ಮೂಕಾಂಬಿಕೆ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. https://www.youtube.com/watch?v=1LdsJDdTssY ಇನ್ನೂ ವಿಶೇಷವೆಂದರೆ ಹೆಲಿಕಾಫ್ಟರ್‌ ಬಿಟ್ಟು, ರೈಲಿನ ಮೂಲಕ ಬೈಂದೂರಿಗೆ ಬಂದಿಳಿದ್ದರು. ಈ ವೇಳೆ ಶಾಸಕ ಗುರುರಾಜ್‌ ಗಂಟಿಹಹೊಳೆ ಸಾವಂತ್‌ ಅವರನ್ನು ಸ್ವಾಗತಿಸಿದರು. ಮುಕಾಂಬಿಕೆಯ ದರ್ಶನದ ಬಳಿಕ ಚಂಡಿಕಾ ಹೋಮದಲ್ಲಿ ಭಾಗಿಯಾದರು. ವಿಶೇಷ ಪೂಜೆ ನೆರವೇರಿಸಿ ಇತರೆ ಎರಡು ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಗೋವಾಕ್ಕೆ ವಾಪಸ್ ಆಗಿದ್ದಾರೆ.

Read More

ಧಾರವಾಡ: ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಧಾರವಾಡ ಜಿಲ್ಲೆ ಗಣನೀಯ ಸಾಧನೆ ಮಾಡಬೇಕು ಎಂಬ  ಉದ್ದೇಶದಿಂದ ಮಿಷನ್ ವಿದ್ಯಾಕಾಶಿ ಎಂಬ ಹೆಸರಿನಡಿ ಕಾರ್ಯಕ್ರಮ ರೂಪಿಸಲಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಧಾರವಾಡ ಜಿಲ್ಲೆಯ ಮಕ್ಕಳು ಉತ್ತಮ ಫಲಿತಾಂಶ ಪಡೆದು ರಾಜ್ಯದಲ್ಲಿ ಧಾರವಾಡ ಜಿಲ್ಲೆ ಟಾಪ್ 10ರ ಪಟ್ಟಿಯಲ್ಲಿ ಬರಬೇಕು, ಕಲಿಕಾ ಗುಣಮಟ್ಟ ಸುಧಾರಿಸಿ ಆ ಮೂಲಕ ವಿದ್ಯಾಕಾಶಿ ಎಂಬ ಹೆಸರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎಂಬ ಉದ್ದೇಶ ಈ ಮಿಷನ್ ವಿದ್ಯಾಕಾಶಿಯದ್ದಾಗಿದೆ. https://www.youtube.com/watch?v=ErOLal3rG0c ಇನ್ನೇನು ಮಾರ್ಚ್ ತಿಂಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿವೆ. ಪರೀಕ್ಷೆ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಸ್ವತಃ ಧಾರವಾಡ ಜಿಲ್ಲೆಯ ವಿವಿಧ ಹೈಸ್ಕೂಲ್‌ಗಳಿಗೆ ಭೇಟಿ ನೀಡಿ ಎಸ್‌ಎಸ್‌ಎಲ್‌ಸಿ ಮಕ್ಕಳೊಂದಿಗಷ್ಟೇ ಅಲ್ಲದೇ ಪಾಲಕರ ಜೊತೆಯೂ ಸಂವಾದ ಮಾಡುತ್ತಿದ್ದಾರೆ. ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಎಸ್‌ಜಿವಿ ಹೈಸ್ಕೂಲ್‌ಗೆ ಭೇಟಿ ನೀಡಿದ ಡಿಸಿ ದಿವ್ಯ ಪ್ರಭು, ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ಅನೇಕ ಮಕ್ಕಳು ತಮಗಿರುವ ಸಂದೇಹಳನ್ನು ಡಿಸಿ ಅವರಿಗೆ…

Read More

ಶಿವಮೊಗ್ಗ :  ಭದ್ರಾವತಿಯಲ್ಲಿ ಮಹಿಳಾ ಅಧಿಕಾರಿಗೆ ನಿಂದನೆ ಪ್ರಕರಣ ಖಂಡಿಸಿ ಜೆಡಿಎಸ್‌ ಬೃಹತ್‌ ಪ್ರತಿಭಟನೆ ನಡೆಸಿದೆ. ಭದ್ರಾವತಿಯ ಮಾಧವಾಚಾರ್ ಸರ್ಕಲ್ ನಿಂದ ಶುರುವಾದ ಪ್ರತಿಭಟನಾ ರ್ಯಾಲಿ ತಾಲ್ಲೂಕು ಕಚೇರಿ ಕಡೆಗಗೆ ಹೊರಟಿದೆ. ಭದ್ರಾವತಿ ಶಾಸಕ ಸಂಗಮೇಶ್  ಮಗನ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. https://ainlivenews.com/fed-up-with-the-family-feud-the-police-personnel-hanged-themselves/ ಇನ್ನೂ ಜೆಡಿಎಸ್‌ ಯುವ ನಾಯಕ ನಿಖಿಲ್‌ ಕುಮಾರಸ್ವಾಮಿ ಸಹ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಭದ್ರಾವತಿ ಉಳಿಸುವಂತೆ ಘೋಷಣೆ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಜೆಡಿಎಸ್ ಉಪಾಧ್ಯಕ್ಷ, ಕೆ.ಬಿ ಪ್ರಸನ್ನ ಕುಮಾರ್, ಶಾಸಕಿ ಶಾರದಾ ಪೂರ್ಯನಾಯ್ಕ, ಜೆಡಿಎಸ್ ನಾಯಕಿ ಶಾರದಾ ಅಪ್ಪಾಜಿಗೌಡ ಭಾಗಿಯಾಗಿದ್ದರು.

Read More

ನವದೆಹಲಿ: ನಾನು ಎಸ್​ಟಿ ಸಮುದಾಯದ ಮತಗಳಿಂದ ಮಾತ್ರ ಗೆದ್ದಿಲ್ಲ ಎಂದು ಸಹಕಾರ ಇಲಾಖೆ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ. ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದಲಿತ ಸಚಿವರಿಂದ ಪ್ರತ್ಯೇಕ ಸಮಾವೇಶದ ಅಗತ್ಯವನ್ನು ನಾಯಕರ ಗಮನಕ್ಕೆ ತಂದಿದ್ದೇವೆ. ನಾನು ಎಸ್​ಟಿ ಸಮುದಾಯದ ಮತಗಳಿಂದ ಮಾತ್ರ ಗೆದ್ದಿಲ್ಲ. ಎಲ್ಲ ಸಮುದಾಯದ ಆಶೀರ್ವಾದ ಬೇಕು. ಕಾಂಗ್ರೆಸ್​ಗೆ ಯಾವ ಸಮಾವೇಶ ಮಾಡಿದರೆ ಒಳ್ಳೆಯದೋ, ಆ ಸಮಾವೇಶ ಮಾಡಬೇಕು. ಮತ್ತೆ ಕಾಂಗ್ರೆಸ್​ ಅಧಿಕಾರಕ್ಕೆ ಬರಲು ಜಾಗೃತಿ ಮೂಡಿಸಬೇಕಿದೆ ಎಂದರು. https://ainlivenews.com/do-you-know-okra-definitely-helps-to-get-rid-of-diabetes/ ಸಮಾವೇಶದ ಅಗತ್ಯವನ್ನು ಕೇಂದ್ರ ನಾಯಕರ ಗಮನಕ್ಕೆ ತಂದಿದ್ದೇವೆ. ಕೇಂದ್ರದ ನಾಯಕರನ್ನು ಸಮಾವೇಶಕ್ಕೆ ಕರೆಸುತ್ತೇವೆ. ಮುಂದಿನ ದಿನಗಳಲ್ಲಿ ಸಮಾವೇಶಕ್ಕೆ ಬರುತ್ತೇವೆ ಎಂದು ಹೇಳಿದ್ದಾರೆ. ಪಕ್ಷದ ವೇದಿಕೆಯಲ್ಲಿಯೇ ಸಮಾವೇಶ ಮಾಡುತ್ತೇವೆ. ಚಿತ್ರದುರ್ಗ, ದಾವಣಗರೆ ಅಥವಾ ಹುಬ್ಬಳ್ಳಿಯಲ್ಲಿ ಸಮಾವೇಶ ನಡೆಯುತ್ತದೆ. ಪಕ್ಷ ಗಟ್ಟಿಯಾದರೆ ಸಿದ್ದರಾಮಯ್ಯನವರು ಇರುತ್ತಾರೆ ಎಂದು ಹೇಳಿದರು.

Read More

ಮಂಡ್ಯ : ಹೆಚ್‌ಡಿ ರೇವಣ್ಣಗೆ ಮಂಡ್ಯದ ವೋಟ್‌ ಬೇಕು ಅಷ್ಟೇ, ಮಂಡ್ಯಕ್ಕೆ ಏನು ಮಾಡಲು ಇಷ್ಟ ಇಲ್ಲ, ವೋಟ್‌ಗೆ ಮಾತ್ರ ಹಾಸನ- ಮಂಡ್ಯ ಕಣ್ಣು ಅಂತಾ ಸಚಿವ ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ. ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ವಿವಿಗೆ ಇತಿಹಾಸ, ಕ್ವಾಲಿಟಿ ಇದೆ. ಮೈಸೂರು ವಿವಿ ದೇಶಾದ್ಯಂತ ಒಳ್ಳೆಯ ಹೆಸರಿದೆ. ಯುನಿವರ್ಸಿಟಿ ಗಂಭೀರತೆ ಕಡಿಮೆಯಾಗಿದೆ ಅಂತ ಚರ್ಚೆಯಾಗಿದೆ. ಎರಡೂ ಸದನದಲ್ಲಿ ಚರ್ಚೆಯಾಗಿ ಮೈಸೂರು ವಿವಿಗೆ ಕೊಡಲು ಒತ್ತಾಯ ಇದೆ. ಹಾಗಾಗಿ ಈಗಾಗಲೇ ಅದನ್ನು ವರದಿ ನೀಡಲು ಸೂಚನೆ ಕೊಟ್ಟಿದ್ದಾರೆ. ವರದಿ ಬಂದ ನಂತರ ತೀರ್ಮಾನವಾಗುತ್ತದೆ ಎಂದರು. https://www.youtube.com/watch?v=jYb5vWiqGHY ಇನ್ನೂ ಬೆಂಗಳೂರಿಗೆ 6ನೇ ಹಂತದ ಕುಡಿಯುವ ನೀರಿನ ಯೋಜನೆಗೆ ಜೆಡಿಎಸ್ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿ, ಬೆಂಗಳೂರಿಗೆ ಕುಡಿಯುವ ನೀರು ಕೊಡುವುದು ನಮ್ಮ ಕರ್ತವ್ಯ. ಎಲ್ಲರು ನಮ್ಮವರೆ, ಬೆಂಗಳೂರು ವಿಖ್ಯಾತಿ ಪಡೆದಿದೆ. ಸಂಗ್ರಹವಾಗಿರುವ ನೀರನ್ನ ಕುಡಿಯುವ ನೀರಿನ ಯೋಜನೆ ಮಾಡಿದ್ದೇವೆ. ಕೊಡಲೇ ಬೇಕಾಗುತ್ತೆ, ರೈತರಿಗೂ ತೊಂದರೆ ಆಗದ ರೀತಿ ಕೊಡುತ್ತೇವೆ. ತಮ್ಮಣ್ಣ ಅವರು ರಾಜಕಾರಣ…

Read More

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ  ಜೈಲು ಸೇರಿದ್ದ ನಟ ದರ್ಶನ್ ಗೆಳತಿ ಹಾಗೂ ನಟಿ ಪವಿತ್ರಾ ಗೌಡ 6 ತಿಂಗಳ ಬಳಿಕ ಪರಪ್ಪನ ಅಗ್ರಹಾರದಿಂದ ಹೊರಗೆ ಬಂದ್ರು. ಹೊರಗೆ ಐಷಾರಾಮಿ ಜೀವನ ನೋಡಿದ್ದ ಪವಿತ್ರಾಗೆ ಸೆಂಟ್ರಲ್ ಜೈಲು ನರಕ ದರ್ಶನ  ಮಾಡಿಸಿತ್ತು. ಬೇಲ್ ಸಿಗ್ತಿದ್ದಂತೆ ಜೈಲಿನಲ್ಲೇ ಕಣ್ಣೀರಿಟ್ಟಿದ್ದ ಪವಿತ್ರಾ ಗೌಡ, ಹೊರಗೆ ಬರ್ತಿದ್ದಂತೆ ನಗು ನಗುತ್ತಾ ಅಮ್ಮನ ಮನೆ ಸೇರಿಕೊಂಡ್ರು. ಇದೀಗ ಕಳೆದ 8 ತಿಂಗಳಿಂದ ಮುಚ್ಚಿದ್ದ ತಮ್ಮ ರೆಡ್ ಕಾರ್ಪೆಟ್ ಸ್ಟುಡಿಯೋವನ್ನು ರೀಲಾಂಚ್ ಮಾಡಿದ್ದಾರೆ. ನಟ ದರ್ಶನ್ ಗೆಳತಿ ಪವಿತ್ರಾ ಗೌಡ, ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದರು. ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ಬಳಿಕ ವ್ಯವಹಾರಗಳತ್ತ ಗಮನ ಹರಿಸಿದ್ದಾರೆ. ಪವಿತ್ರಾ ಗೌಡ ರೆಡ್ ಕಾರ್ಪೆಟ್ ಸ್ಟುಡಿಯೋ ಪ್ರಾರಂಭಿಸಿದ್ದರು. ಕಳೆದ ಎಂಟು ತಿಂಗಳಿಂದ ಮುಚ್ಚಿದ್ದ ಸ್ಟುಡಿಯೋಗೆ ಇಂದು ಮರುಚಾಲನೆ ನೀಡಲಾಗಿದೆ. https://ainlivenews.com/do-you-know-okra-definitely-helps-to-get-rid-of-diabetes/ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಜೈಲು ಸೇರಿದ್ದರು. ಜೈಲಿಗೆ ಹೋದ ಬಳಿಕ ಸ್ಟುಡಿಯೋ ಕ್ಲೋಸ್ ಆಗಿತ್ತು.…

Read More