ಕನ್ನಡ ಸಿನಿಮಾ ರಂಗದ ಖ್ಯಾತ ನಟ ವಿಷ್ಣುವರ್ಧನ್ ಅವರನ್ನು ನೆನಪಿಸುವಂತಹ ಕಿರುಚಿತ್ರವೊಂದು ಸ್ಯಾಂಡಲ್ ವುಡ್ ನಲ್ಲಿ ತಯಾರಾಗಿದೆ. ಡಾ.ವಿಷ್ಣು ಸೇನಾ ಸಮಿತಿಯು ಈ ಕಿರುಚಿತ್ರವನ್ನು ನಿರ್ಮಾಣ ಮಾಡಿದ್ದು, ನಟ ಹುಚ್ಚ ವೆಂಕಟ್ ಕಿರು ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಅಭಿಮಾನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವು ಸಮಯದಿಂದ ಹುಚ್ಚ ವೆಂಕಟ್ ಸಿನಿಮಾ ರಂಗದಿಂದ ದೂರವಾಗಿದ್ದರು. ಅವರನ್ನು ಹುಡುಕಿ ಕರೆತಂದಿರೋ ಕಿರುಚಿತ್ರತಂಡ ಚಿತ್ರದಲ್ಲಿ ನಟಿಸುವಂತೆ ಮಾಡಿದೆ ಚಿತ್ರತಂಡ. ವಿಜಯ್ ಕಿತ್ತೂರ್ ನಿರ್ದೇಶನದ ಈ ಕಿರು ಚಿತ್ರಕ್ಕೆ ವಿಷ್ಣು ಗೋವಿಂದ್ ಸಂಕಲನ ಮಾಡಿದ್ದಾರೆ. ಖ್ಯಾತ ಫೋಟೋಗ್ರಾಫರ್ ಮತ್ತು ಡಿಸೈನರ್ ರಾಜು ವಿಷ್ಣು ಕೂಡ ಈ ಕಿರುಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿದ್ದು ಇತ್ತೀಚೆಗಷ್ಟೇ ಕಿರುಚಿತ್ರದ ಲಿರಿಕಿಲ್ ವಿಡಿಯೋ ರಿಲೀಸ್ ಆಗಿದೆ. ನಿರ್ದೇಶಕ ಮತ್ತು ನಟರಾದ ರಘುರಾಮ್, ನವೀನ್ ಕೃಷ್ಣ, ನಿರ್ದೇಶಕ ಖದರ್ ಕುಮಾರ್ ಹಾಗೂ ಡಾ.ವಿಷ್ಣು ಸೇನಾ ಸಮಿತಿ ರಾಜ್ಯಾಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ್ ಉಪಸ್ಥಿತಿಯಲ್ಲಿ ಲಿರಿಕಲ್ ವಿಡಿಯೋ ರಿಲೀಸ್ ಮಾಡಲಾಗಿದೆ. ವಿಷ್ಣುವರ್ಧನ್ ಅವರ ಕುರಿತಂತೆ ಹಲವಾರು ವಿಚಾರಗಳನ್ನು…
Author: Author AIN
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ನಡುವಿನ ಗಲಾಟೆ ದಿನದಿಂದ ದಿನಕ್ಕೆ ವಿವಿಧ ರೂಪ ಪಡೆದುಕೊಳ್ಳುತ್ತಿದೆ. ಈಗಾಗಲೇ ಗೌಡತಿ ಸೇನೆ ಹೆಸರಿನ ಸಂಘಟನೆಯು ಮಹಿಳಾ ಆಯೋಗಕ್ಕೆ ದರ್ಶನ್ ವಿರುದ್ಧ ದೂರು ನೀಡಿದೆ. ಜೊತೆಗೆ ಈ ಪ್ರಕರಣ ವಾಣಿಜ್ಯ ಮಂಡಳಿಯ ಮೆಟ್ಟಿಲು ಏರಿದೆ. ಇದರ ಜೊತೆಗೆ ದರ್ಶನ್ ವಿರುದ್ಧ ಇನ್ನೂ ಕೆಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಹೆಣ್ಣು ಮಕ್ಕಳ ನಿಂದನೆ ಮತ್ತು ರಾಜ್ಯದ ಪ್ರಭಾವಿ ಸಮುದಾಯದ ನಾಯಕನಿಗೆ ಅವಮಾನ ಮಾಡಿದ ಹಿನ್ನೆಲೆಯಾಗಿಟ್ಟುಕೊಂಡು ದರ್ಶನ್ ವಿರುದ್ಧ ಆರ್.ಆರ್.ನಗರ ಮತ್ತು ಚಂದ್ರಲೇ ಔಟ್ ಠಾಣೆಯಲ್ಲಿ ಗಣೇಶ್ ಗೌಡ ಹಾಗೂ ಜಗದೀಶ್ ಎನ್ನುವರು ಎರಡು ಠಾಣೆಯಲ್ಲಿ ದೂರು ನೀಡಿದ್ದಾರೆ. ರಾಜ್ಯದ ಪ್ರಭಾವಿ ಸಮುದಾಯದ ನಾಯಕರ ಬಗ್ಗೆ ಮತ್ತು ವೇದಿಕೆ ಮೇಲೆ ಹೆಣ್ಣು ಮಕ್ಕಳ ಬಗ್ಗೆ ತುಚ್ಛವಾಗಿ ಮಾತನಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದರ್ಶನ್ ಅವರ ಮಾತು ಒಂದು ಸಮುದಾಯವನ್ನು ಕೆರಳಿಸುವಂತಿದೆ. ದರ್ಶನ್ ಗೆ ಹೆಣ್ಣು ಮಕ್ಕಳೆಂದರೆ ಆಟಿಕೆಯ ವಸ್ತುಗಳ ರೀತಿ ಬಳಸಿ ಬಿಸಾಡುವಂತ…
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಅಮೆರಿಕಾದ ನಾಸಾ ಸಂಸ್ಥೆಯ ಕ್ವಾಡ್‌ಕಾಪ್ಟರ್ ಮಾದರಿಯಲ್ಲಿ ಮಂಗಳ ಗ್ರಹಕ್ಕೆ ರೋಟೋಕಾಪ್ಟರ್ ಕಳುಹಿಸುವ ಕುರಿತು ಚಿಂತನೆ ನಡೆಸುತ್ತಿದೆ. ಮೂರು ವರ್ಷಗಳ ತನ್ನ ಅಭೂತಪೂರ್ವ ಕಾರ್ಯಾಚರಣೆ ವೇಳೆ 72 ಉಪಗ್ರಹ ಹಾರಾಟಗಳನ್ನು ನಾಸಾ ಪೂರ್ಣಗೊಳಿಸಿದೆ. ಇಸ್ರೋದ ರೋಟರ್‌ಕ್ರಾಫ್ಟ್ ಇನ್ನೂ ಪರಿಕಲ್ಪನೆಯ ಹಂತದಲ್ಲಿದ್ದು, ಇದು ತಾಪಮಾನ ಸಂವೇದಕ, ತೇವಾಂಶ ಸಂವೇದಕ, ಒತ್ತಡ ಸಂವೇದಕ, ಗಾಳಿಯ ವೇಗ ಸಂವೇದಕ, ವಿದ್ಯುತ್ ಕ್ಷೇತ್ರ ಸಂವೇದಕ, ಜಾಡಿನ ಜಾತಿಗಳು ಮತ್ತು ಧೂಳಿನ ಸಂವೇದಕ ಸೇರಿದಂತೆ ಹಲವಾರು ಉಪಕರಣಗಳನ್ನು ತೆಗೆದುಕೊಂಡು ಹೋಗಬಹುದಾಗಿದೆ. ವರದಿಗಳ ಪ್ರಕಾರ ಯೋಜಿತ ಡ್ರೋನ್ ಕೆಂಪು ಗ್ರಹ ಮಂಗಳನ ವಾತಾವರಣವನ್ನು ವಿವರಿಸಲು ತೆಳುವಾದ ಮಂಗಳದ ಗಾಳಿಯಲ್ಲಿ 100 ಮೀಟರ್‌ಗಳಷ್ಟು ಎತ್ತರಕ್ಕೆ ಹಾರುವ ನಿರೀಕ್ಷೆಯಿದೆ. ರೆಡ್ ಪ್ಲಾನೆಟ್ ಸುತ್ತ ಸುಮಾರು ಒಂದು ದಶಕವನ್ನು ಕಳೆದ ನಂತರ 2022 ರಲ್ಲಿ ತನ್ನ ಜೀವನದ ಅಂತ್ಯವನ್ನು ತಲುಪಿದ ಮಂಗಳಯಾನ್ ಮಾರ್ಸ್ ಆರ್ಬಿಟರ್ ಮಿಷನ್‌ನ ಅನುಸರಣೆಯಾಗಿ – ಇಸ್ರೋ ತನ್ನ ಮತ್ತೊಂದು ಮಹತ್ವಾಕಾಂಕ್ಷಿ ಮಿಷನ್ ಅನ್ನು ಯೋಜಿಸುತ್ತಿದೆ ಎಂದು…
ಪಾಕಿಸ್ತಾನದಲ್ಲಿ ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಅಕ್ರಮಗಳು ನಡೆದಿರುವುದು ಬೆಳಕಿಗೆ ಬಂದಿದೆ. ಇದೇ ಕಾರಣಕ್ಕೆ ಪಾಕಿಸ್ತಾನಕ್ಕೆ ನೀಡುತ್ತಿರುವ ಧನಸಹಾಯವನ್ನು ನಿಲ್ಲಿಸುವಂತೆ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸ್ಥಾಪಕ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅಂತಾರಾಷ್ಟ್ರೀಯ ಹಣಕಾಸು ನಿಧಿಗೆ (ಐಎಂಎಫ್) ಪತ್ರ ಬರೆಯಲಿದ್ದಾರೆ ಎಂದು ಪಕ್ಷದ ಮುಖಂಡ ಅಲಿ ಜಾಫರ್ ತಿಳಿಸಿದ್ದಾರೆ. “ಉತ್ತಮ ಆಡಳಿತವಿರುವ ದೇಶಗಳಿಗೆ ಮಾತ್ರ ಸಾಲ ನೀಡಬೇಕೆಂಬುದು ಐಎಂಎಫ್, ಇಯು ಮತ್ತು ಇತರ ಸಂಸ್ಥೆಗಳ ಚಾರ್ಟರ್ ಹೇಳುತ್ತದೆ. ಈ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ಇಂದು ಐಎಂಎಫ್ಗೆ ಪತ್ರ ರವಾನಿಸಲಿದ್ದಾರೆ” ಎಂದು ಜಾಫರ್ ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಖಾನ್ ಅವರನ್ನು ಭೇಟಿಯಾದ ನಂತರ ಸುದ್ದಿಗಾರರಿಗೆ ತಿಳಿಸಿದರು. ಪ್ರಜಾಪ್ರಭುತ್ವವಿಲ್ಲದ ದೇಶಗಳಲ್ಲಿ ಐಎಂಎಫ್, ಇಯು ಮತ್ತು ಇತರ ಸಂಸ್ಥೆಗಳು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಹಾಗೂ ಅಂಥ ದೇಶಗಳಲ್ಲಿ ಅವು ಕಾರ್ಯನಿರ್ವಹಿಸಬಾರದು. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳು ಪ್ರಜಾಪ್ರಭುತ್ವದ ಮೂಲಧಾರವಾಗಿವೆ. ಆದಾಗ್ಯೂ, ರಾಷ್ಟ್ರದ ಜನಾದೇಶವನ್ನು ಹೇಗೆ ಕದಿಯಲಾಗಿದೆ ಎಂಬುದನ್ನು ಇಡೀ ಜಗತ್ತು ನೋಡಿದೆ. ಚುನಾವಣಾ…
ಅಮೆರಿಕದ ಇಲಿನಾಯ್ಸ್ ಅರ್ಬಾನಾ- ಚಾಂಪೇನ್ ವಿಶ್ವವಿದ್ಯಾಲಯದಲ್ಲಿ (ಯುಐಯುಸಿ) ವ್ಯಾಸಂಗ ಮಾಡುತ್ತಿದ್ದ ಭಾರತೀಯ- ಅಮೆರಿಕನ್ ವಿದ್ಯಾರ್ಥಿ ಅಕುಲ್ ಬಿ. ಧವನ್ ಸಾವಿಗೆ ಅತಿಯಾದ ಮದ್ಯಸೇವನೆಯೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಜನವರಿ 26ರಂದು ನಾಪತ್ತೆಯಾಗಿದ್ದ ಅಕುಲ್ ಬಿ. ಧವನ್ ಶವ 10 ಗಂಟೆಗಳ ಬಳಿಕ ವಿಶ್ವವಿದ್ಯಾಲಯ ಬಳಿಯ ಕಟ್ಟಡದ ಹಿಂಬದಿಯಲ್ಲಿ ಪತ್ತೆಯಾಗಿತ್ತು. ವಿದ್ಯಾರ್ಥಿಯ ಸಾವಿನ ನಿಖರ ಕಾರಣದ ಪತ್ತೆಗಾಗಿ ತನಿಖೆ ನಡೆಸಿರುವ ಪೊಲೀಸರು, ಅತಿಯಾಗಿ ಮದ್ಯಸೇವನೆ ಹಾಗೂ ದೇಹದಲ್ಲಿ ಸಾಮಾನ್ಯ ಉಷ್ಣತೆ ಪ್ರಮಾಣಕ್ಕಿಂತ ಕಡಿಮೆ ಉಷ್ಣತೆ ಇದ್ದಿದ್ದರಿಂದ ವಿದ್ಯಾರ್ಥಿ ಧವನ್ ಮೃತಪಟ್ಟಿದ್ದಾರೆ ಎಂದು ಇಲಿನಾಯ್ಸ್ ರಾಜ್ಯದ ಪೊಲೀಸರು ಮತ್ತು ಚಾಂಪೇನ್ ಕೌಂಟಿ ಕಾರ್ನರ್‌ನ ಕಚೇರಿ ಮಾಹಿತಿ ನೀಡಿದೆ. ವಿದ್ಯಾರ್ಥಿಯ ಸಾವಿಗೆ ಸಂಬಂಧಿಸಿದಂತೆ ಯಾವುದೇ ಸಂಚು ನಡೆದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ನನಗೂ ಪ್ರಾಣ ಬೆದರಿಕೆ ಇತ್ತು ಎಂದು ಮಂಡ್ಯ ಸಂಸದೆ, ನಟಿ ಸುಮಲತಾ ಅಂಬರೀಶ್ ಬಹಿರಂಗಪಡಿಸಿದ್ದಾರೆ. ಮಂಡ್ಯದಲ್ಲಿ ನಡೆದ ದಿಶಾ ಸಭೆಯಲ್ಲಿ ಸುಮಲತಾ ಈ ವಿಚಾರವನ್ನು ತಿಳಿಸಿದ್ದರು. ತಮ್ಮ 5 ವರ್ಷದ ಕೆಲಸದ ಬಗ್ಗೆ ಮೆಲುಕು ಹಾಕಿದ ನಟಿ ಈ ಮಧ್ಯೆ ತಮಗೆ ಪ್ರಾಣ ಬೆದರಿಕೆ ಇದ್ದ ಬಗ್ಗೆ ತಿಳಿಸಿದ್ದಾರೆ. ನಾನು ಬೇಬಿ ಬೆಟ್ಟದ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಮಾಡಿದೆ. ಈ ವೇಳೆ ಹೋರಾಟ ನಿಲ್ಲಿಸುವಂತೆ ನನಗೆ ಒತ್ತಡ ಹಾಗೂ ಪ್ರಾಣ ಬೆದರಿಕೆ ಇತ್ತು. ಆದರೆ ಈ ಬೆದರಿಕೆಗೆ ಹೆದರದೆ ಕೆಆರ್‌ಎಸ್ ಅಣೆಕಟ್ಟೆಯ ಉಳಿವಿಗಾಗಿ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಮಾಡಿದೆ. ಹೋರಾಟದ ಫಲವಾಗಿ ಹೈಕೋರ್ಟ್ ಗಣಿಗಾರಿಕೆಯನ್ನು ನಿಲ್ಲಿಸಿದೆ ಎಂದರು. ಸುಮಲತಾ ಅಧ್ಯಕ್ಷತೆಯ ಕೊನೆಯ ದಿಶಾ ಸಭೆಯಾಗಿದ್ದರಿಂದ ಜಿಲ್ಲಾಡಳಿತದಿಂದ ಸಂಸದೆಯನ್ನು ಸನ್ಮಾನಿಸಿ ಗೌರವಿಸಲಾಯಿತು. ಮಂಡ್ಯ ಡಿಸಿ ಡಾ.ಕುಮಾರ್, ಸಿಇಓ ತನ್ವೀರ್ ಆಸೀಫ್, ಎಸ್ ಪಿ ಎನ್.ಯತೀಶ್ ರಿಂದ ಸುಮಲತಾ ಅವರಿಗೆ ಸನ್ಮಾನ ನಡೆಯಿತು. ಶಾಲು ಹೊದಿಸಿ, ಹಾರ ಹಾಕಿ ಗಣಪತಿ ವಿಗ್ರಹ…
ನನಗೂ ಪ್ರಾಣ ಬೆದರಿಕೆ ಇತ್ತು ಎಂದು ಮಂಡ್ಯ ಸಂಸದೆ, ನಟಿ ಸುಮಲತಾ ಅಂಬರೀಶ್ ಬಹಿರಂಗಪಡಿಸಿದ್ದಾರೆ. ಮಂಡ್ಯದಲ್ಲಿ ನಡೆದ ದಿಶಾ ಸಭೆಯಲ್ಲಿ ಸುಮಲತಾ ಈ ವಿಚಾರವನ್ನು ತಿಳಿಸಿದ್ದರು. ತಮ್ಮ 5 ವರ್ಷದ ಕೆಲಸದ ಬಗ್ಗೆ ಮೆಲುಕು ಹಾಕಿದ ನಟಿ ಈ ಮಧ್ಯೆ ತಮಗೆ ಪ್ರಾಣ ಬೆದರಿಕೆ ಇದ್ದ ಬಗ್ಗೆ ತಿಳಿಸಿದ್ದಾರೆ. ನಾನು ಬೇಬಿ ಬೆಟ್ಟದ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಮಾಡಿದೆ. ಈ ವೇಳೆ ಹೋರಾಟ ನಿಲ್ಲಿಸುವಂತೆ ನನಗೆ ಒತ್ತಡ ಹಾಗೂ ಪ್ರಾಣ ಬೆದರಿಕೆ ಇತ್ತು. ಆದರೆ ಈ ಬೆದರಿಕೆಗೆ ಹೆದರದೆ ಕೆಆರ್‌ಎಸ್ ಅಣೆಕಟ್ಟೆಯ ಉಳಿವಿಗಾಗಿ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಮಾಡಿದೆ. ಹೋರಾಟದ ಫಲವಾಗಿ ಹೈಕೋರ್ಟ್ ಗಣಿಗಾರಿಕೆಯನ್ನು ನಿಲ್ಲಿಸಿದೆ ಎಂದರು. ಸುಮಲತಾ ಅಧ್ಯಕ್ಷತೆಯ ಕೊನೆಯ ದಿಶಾ ಸಭೆಯಾಗಿದ್ದರಿಂದ ಜಿಲ್ಲಾಡಳಿತದಿಂದ ಸಂಸದೆಯನ್ನು ಸನ್ಮಾನಿಸಿ ಗೌರವಿಸಲಾಯಿತು. ಮಂಡ್ಯ ಡಿಸಿ ಡಾ.ಕುಮಾರ್, ಸಿಇಓ ತನ್ವೀರ್ ಆಸೀಫ್, ಎಸ್ ಪಿ ಎನ್.ಯತೀಶ್ ರಿಂದ ಸುಮಲತಾ ಅವರಿಗೆ ಸನ್ಮಾನ ನಡೆಯಿತು. ಶಾಲು ಹೊದಿಸಿ, ಹಾರ ಹಾಕಿ ಗಣಪತಿ ವಿಗ್ರಹ…
ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಅವರಿಗೆ ನಟ ದರ್ಶನ್ ತಗಡೆ ಎಂಬ ಪದ ಬಳಸಿದ್ದಾರೆ ಎಂದು ಕನ್ನಡ ಪರ ಸಂಘಟನೆಯ ಕನ್ನಡ ಶಫಿ ಎನ್ನುವವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು. ದರ್ಶನ್ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದ ಶಫಿ ಇದೀಗ ದೂರು ವಾಪಸ್ ಪಡೆದ ದರ್ಶನ್ ಬಳಿ ಕ್ಷಮೆ ಯಾಚಿಸಿದ್ದಾರೆ. ವಾಣಿಜ್ಯ ಮಂಡಳಿಗೆ ದೂರು ನೀಡಿದ್ದ ಶಫಿ ಇದೀಗ ದರ್ಶನ್ ಮತ್ತು ಅವರ ಅಭಿಮಾನಿಗಳಿಗೆ ಕ್ಷಮೆ ಕೇಳಿ ದೂರು ವಾಪಸ್ಸು ಪಡೆದುಕೊಳ್ಳುವುದಾಗಿ ತಿಳಿಸಿದ್ದಾರೆ. ದರ್ಶನ್ ಅವರನ್ನು ಶಫಿ ಬಾಯಿಗೆ ಬಂದಂತೆ ಬೈದಿದ್ದರು. ಆ ವಿಡಿಯೋ ವೈರಲ್ ಕೂಡ ಆಗಿತ್ತು. ಇದೀಗ ಆ ಕುರಿತಂತೆಯೂ ಶಫಿ ಕ್ಷಮೆ ಕೇಳಿದ್ದಾರೆ. ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ. ಜೊತೆಗೆ ತಾನು ನೀಡಿರುವ ದೂರು ಹಿಂಪಡೆಯುತ್ತೇನೆ ಎಂದು ಕನ್ನಡ ಶಫಿ ವಿಡಿಯೋ ಮೂಲಕ ಹೇಳಿದ್ದಾರೆ. ಬೇರೆ ಸಂಘಟನೆಯವರು ಹಾಗೂ ನಾವು ಸೇರಿ ಆತುರದಿಂದ ನಿರ್ಧಾರ…
ತೆಲುಗು ಸಿನಿಮಾರಂಗದಲ್ಲಿ ಹನುಮಾನ್ ಸಿನಿಮಾ ದೊಡ್ಡ ಮಟ್ಟಿಗೆ ಸದ್ದು ಮಾಡಿತ್ತು. ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡಿದ್ದು ಚಿತ್ರದ ನಿರ್ಮಾಪಕ ಸಖತ್ ಖುಷಿಯಾಗಿದ್ದರು. ಇದೀಗ ಹನುಮಾನ್ ಸಿನಿಮಾದ ನಿರ್ಮಾಪಕರ ಜೊತೆ ಕಿಚ್ಚ ಸುದೀಪ್ ಕೈ ಜೋಡಿಸಿದ್ದಾರೆ. ಹನುಮಾನ್ ಸಿನಿಮಾದ ನಿರ್ಮಾಪಕ ನಿರಂಜನ್ ರೆಡ್ಡಿ ಸ್ಯಾಂಡಲ್ ವುಡ್ ನಲ್ಲೂ ಚಿರಪರಿಚಿತರಾಗಿದ್ದಾರೆ. ಇದೇ ನಿರ್ಮಾಪಕ ಇದೀಗ ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವತಿ ಬಾದ್‌ಶಾ ಕಿಚ್ಚ ಸುದೀಪ್ ಜೊತೆಗೆ ಸಿನಿಮಾ ಮಾಡಲು ಅಪ್ರೋಚ್ ಮಾಡಿದ್ದಾರೆ ಎಂ ಸುದ್ದಿ ಹೊರಬಂದಿದೆ. ಸದ್ಯ ಈ ವಿಚಾರ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಹನುಮಾನ್ ಪ್ರೊಡ್ಯೂಸರ್ ಜೊತೆಗೆ ಕಿಚ್ಚ ಸುದೀಪ್ ಸಿನಿಮಾ ಮಾಡುತ್ತಾರೆ ಎಂಬ ಮ್ಯಾಟರ್ ಲೀಕ್ ಆಗಿದೆ. ಹಾಗೆಯೇ ಪ್ರಡ್ಯೂಸರ್ ನಿರಂಜನ್ ರೆಡ್ಡಿ ಸುದೀಪ್ ಜೊತೆಗೆ ಕೌಟುಂಬಿಕ ಹಾಗೂ ಮನರಂಜನಾತ್ಮಕ ಚಿತ್ರ ಮಾಡೋ ಪ್ಲಾನ್ ಹಾಕಿದ್ದಾರೆ ಅನ್ನೋ ಮಾತು ಹರಿದಾಡುತ್ತಿದೆ. ಆದರೆ ಇದರ ಬಗೆ ಸುದೀಪ್ ಆಗಲೀ ಅಥವಾ ನಿರಂಜನ್ ರೆಡ್ಡಿಯಾಗಲಿ ಯಾವುದೇ ಅಧಿಕೃತವಾಗಿ ಯಾವುದೇ…
ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್ ಹಾಗೂ ಜಾಕಿ ಭಗ್ನಾನಿ ಫೆಬ್ರವರಿ 21 ರಂದು ಗೋವಾದಲ್ಲಿ ಅದ್ದೂರಿಯಾಗಿ ಹಸೆಮಣೆ ಏರಿದ್ದಾರೆ. ರಕುಲ್, ಜಾಕಿ ವಿವಾಹಕ್ಕೆ ಆಗಮಿಸಿ ಸಾಕಷ್ಟು ಮಂದಿ ಶುಭ ಹಾರೈಸಿದ್ದಾರೆ. ಇದೀಗ ಪ್ರಧಾನಿ ಮೋದಿ ರಕುಲ್ ಮದುವೆಗೆ ಶುಭ ಹಾರೈಸಿದ್ದಕ್ಕೆ ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ. ರಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ ತಮ್ಮ ಮದುವೆಗೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ಮೋದಿ ವಿವಾಹಕ್ಕೆ ಹೋಗಿರಲಿಲ್ಲ. ಬದಲಾಗಿ ಅವರಿಗೆ ಪತ್ರ ಬರೆದು ಶುಭ ಕೋರಿದ್ದರು. ಈ ಪತ್ರವನ್ನು ರಕುಲ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿ ಖುಷಿ ಹಂಚಿಕೊಂಡಿದ್ದರು. ಆದರೆ ಮೋದಿ ಬರೆದ ಪತ್ರ ನೋಡಿ ಕೆಲವರು ಟೀಕೆ ಮಾಡಿದ್ದಾರೆ. ‘ಜಾಕಿ ಮತ್ತು ರಕುಲ್ ಜೀವನ ಪರ್ಯಂತ ಪ್ರೀತಿ, ವಿಶ್ವಾಸದಿಂದಿರುವ ಪ್ರಮಾಣ ಮಾಡಿದ್ದಾರೆ. ಇವರಿಬ್ಬರ ಮದುವೆಗೆ ಶುಭ ಹಾರೈಕೆಗಳು. ಮದುವೆ ಎನ್ನುವುದು ಒಬ್ಬರೊನ್ನಬ್ಬರು ಅರ್ಥ ಮಾಡಿಕೊಳ್ಳಲು ಇಬ್ಬರಿಗೆ ಸಿಕ್ಕ ಅವಕಾಶವಾಗಿದೆ. ದಂಪತಿ ಕೆಲಸ, ಕಾರ್ಯಗಳು, ದಾರಿ ಎಲ್ಲವೂ ಒಂದೇ ಆಗಿರಲಿ.…