ತಮಿಳು ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ನಯನತಾರಾ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಒಂದು ಕೇಳಿ ಬಂದಿದೆ. ಪ್ರೀತಿಸಿ ಮದುವೆಯಾಗಿದ್ದ ನಯನತಾರಾ ಹಾಗೂ ವಿಘ್ನೇಶ್ ಮಧ್ಯೆ ಮನಸ್ಥಾಪ ಶುರುವಾಗಿದ್ದು ಈ ಕಾರಣಕ್ಕೆ ಡಿವೋರ್ಸ್ ಪಡೆದುಕೊಳ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ತಮಿಳಿನ ಬೆಸ್ಟ್ ಕಪಲ್ ಅಂತಾನೇ ಫೇಮಸ್ ಆಗಿರುವ ನಯನತಾರಾ ಮತ್ತು ವಿಘ್ನೇಶ್ ಶಿವನ್ ಬಾಳಲ್ಲಿ ಬಿರುಗಾಳಿ ಬೀಸಿದ್ಯಾ ಎಂಬ ಅನುಮಾನ ಶುರುವಾಗಿದೆ. ಇದಕ್ಕೆಲ್ಲ ಕಾರಣ ನಯನತಾರಾ ಪತಿ ವಿಘ್ನೇಶ್‌ರನ್ನು ಅನ್‌ಫಾಲೋ ಮಾಡಿರೋದು. ಪತ್ನಿಯನ್ನು ವಿಘ್ನೇಶ್ ಫಾಲೋ ಮಾಡ್ತಿದ್ದಾರೆ. ಆದರೆ ನಯನತಾರಾ ಅನ್‌ಫಾಲೋ ಮಾಡಿ ಫುಲ್ ಸೈಲೆಂಟ್ ಆಗಿದ್ದಾರೆ. ಬಳಿಕ ಸೋಷಿಯಲ್ ಮೀಡಿಯಾದಲ್ಲಿ ನಟಿ ಅಳಲು ತೋಡಿಕೊಂಡಿದ್ದಾರೆ. ‘ಕಣ್ಣಲ್ಲಿ ನೀರು ಬರುತ್ತಿದ್ದರೂ ಇದು ನನಗೆ ಸಿಕ್ಕಿತು’ ಎಂದು ಬರೆದುಕೊಂಡಿದ್ದಾರೆ. ಇಬ್ಬರ ನಡುವೆ ಇದೀಗ ಬಿರುಕು ಮೂಡಿದೆ ಎನ್ನಲಾಗುತ್ತಿದೆ. ಡಿವೋರ್ಸ್‌ಗೆ ಈ ಜೋಡಿ ಮುಂದಾಗಿದೆ ಎಂದೇ ಹೇಳಲಾಗುತ್ತಿದೆ. ಆದರೆ ಈ ಸುದ್ದಿ ಅದೆಷ್ಟು ನಿಜ ಅನ್ನೋದನ್ನ ಕಾಲವೇ ಉತ್ತರಿಸಬೇಕಿದೆ.
Author: Author AIN
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ರಾಜಕೀಯಕ್ಕೆ ಎಂಟ್ರಿಕೊಡ್ಬೇಕು ಅನ್ನೋದು ಅವರ ಲಕ್ಷಾಂತರ ಅಭಿಮಾನಿಗಳ ಆಸೆ. ಆದರೆ ಶಿವಣ್ಣ ಮಾತ್ರ ರಾಜಕೀಯಕ್ಕೆ ಎಂಟ್ರಿಕೊಡದೆ ಸಿನಿಮಾಗಳ ಮೂಲಕ ಮಾತ್ರವೇ ಅಭಿಮಾನಿಗಳ ಹೃದಯಕ್ಕೆ ಹತ್ತಿರವಾಗಿದ್ದಾರೆ. ಆದರೆ ಪತ್ನಿ ರಾಜಕೀಯ ಜೀವನಕ್ಕೆ ಶಿವಣ್ಣ ಸದಾ ಬೆನ್ನುಲುಭಾಗಿ ನಿಂತಿದ್ದಾರೆ. ಸದ್ಯ ಶಿವರಾಜ್ ಕುಮಾರ್ ಪತ್ನಿಯ ರಾಜಕೀಯ ಜೀವನದ ಕುರಿತು ಮಾತನಾಡಿದ್ದು ಪತ್ನಿ ಗೀತಾ ರಾಜಕೀಯವಾಗಿ ಬೆಳೆಯಬೇಕು, ಸಂಸದೆ ಆಗಬೇಕು ಎಂದಿದ್ದಾರೆ. ಸಚಿವ ಮಧು ಬಂಗಾರಪ್ಪ ಹುಟ್ಟುಹಬ್ಬದ ಹಿನ್ನೆಲೆ ಶಿವರಾಜ್‌ಕುಮಾರ್ ದಂಪತಿ ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸುದ್ದಿಗೋಷ್ಠಿಯಲ್ಲಿ ಹಲವು ವಿಚಾರಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು ರಾಜಕೀಯಕ್ಕೆ ಬರುವುದಿಲ್ಲ. ಆದರೆ ನನ್ನ ಪತ್ನಿ ಎಂಪಿ ಆಗಲಿ, ಎಂಎಲ್‌ಎ ಆಗಲಿ ಎಂಬ ಆಸೆಯಿದೆ. ಈ ಮೂಲಕ ಮಹಿಳೆಯರಿಗೆ ಪತ್ನಿ ಗೀತಾ ಮಾದರಿಯಾಗಲಿ ಎಂದಿದ್ದಾರೆ. ಒಬ್ಬ ಗಂಡನಾಗಿ ಗೀತಾಗೆ ಬೆಂಬಲಿಸುತ್ತೇನೆ. ಶಿವಮೊಗ್ಗದಲ್ಲಿ ಗೀತಾ ಸಾಕಷ್ಟು ಕೆಲಸ ಮಾಡಿದ್ದಾರೆ. ಆದರೆ ಪ್ರಚಾರದ ಕಡೆ ಗಮನ ನೀಡಿಲ್ಲ. ಉತ್ತಮ ಕೆಲಸಗಳ ಮೂಲಕ ಜನರೊಂದಿಗೆ ಇದ್ದರೆ…
ಸ್ಯಾಂಡಲ್ ವುಡ್ ನಟ ವಸಿಷ್ಠ ಸಿಂಹ ಕನ್ನಡದ ಜೊತೆಗೆ ಪರಭಾಷೆಗಳ ಸಿನಿಮಾಗಳಲ್ಲೂ ಕಾಣಿಸಿಕೊಳ್ತಿದ್ದಾರೆ. ತಮ್ಮ ಅದ್ಭುತ ನಟನೆಯಿಂದಲೇ ಸಖತ್ ಆಫರ್ ಭಾಚಿಕೊಳ್ಳುತ್ತಿರುವ ವಸಿಷ್ಠ ಸಿಂಹ ಇದೀಗ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿಕಾಣಿಸಿಕೊಳ್ತಿದ್ದಾರೆ. ತಮನ್ನಾ ಭಾಟಿಯ ನಟನೆಯ ‘ಒಡೆಲಾ 2’ ಚಿತ್ರದ ಮುಹೂರ್ತ ವಾರಣಾಸಿ ಕಾಶಿಯಲ್ಲಿ ಅದ್ಧೂರಿಯಾಗಿ ನಡೆದಿದೆ. ಈ ಚಿತ್ರದಲ್ಲಿ ವಸಿಷ್ಠ ಸಿಂಹ ಕೂಡ ಭಾಗವಾಗಿದ್ದಾರೆ. ಒಡೆಲಾ 2ಗೆ ಕಾಂತಾರ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದ ಕನ್ನಡದ ಪ್ರತಿಭೆ ಅಜನೀಶ್ ಲೋಕನಾಥ್ ಅವರು ಈ ಸಿನಿಮಾಗೂ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಅಂದಹಾಗೆ ಈ ಸಿನಿಮಾ ಬಹುಭಾಷೆಯಲ್ಲಿ ಮೂಡಿ ಬರಲಿದೆ. ಸದ್ಯ ‘ಒಡೆಲಾ 2’ ಚಿತ್ರದ ಮುಹೂರ್ತ ಕಾರ್ಯಕ್ರಮದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ವಸಿಷ್ಠ ಸಿಂಹ ನಟಿಸುತ್ತಿರುವ ‘ಒಡೆಲಾ 2’ ಮುಹೂರ್ತ ಕಾರ್ಯಕ್ರಮದಲ್ಲಿ ಪತ್ನಿ ಹರಿಪ್ರಿಯಾ ಕೂಡ ಭಾಗಿಯಾಗಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ತಮನ್ನಾ ಭಾಟಿಯಾ ಜೊತೆ ಮೊದಲ ಬಾರಿಗೆ ವಸಿಷ್ಠ ನಟಿಸುತ್ತಿರುವ ಕಾರಣ ಅಭಿಮಾನಿಗಳಿಗೆ ಚಿತ್ರದ…
26/11 ಮುಂಬೈ ಭಯೋತ್ಪಾದನಾ ದಾಳಿಯ ಮಾಸ್ಟರ್ ಮೈಂಡ್ ಅಜಮ್ ಚೀಮಾ ಪಾಕಿಸ್ತಾನದಲ್ಲಿ ಸಾವನ್ನಪ್ಪಿದ್ದಾನೆ. ಲಷ್ಕರ್’ನ ಗುಪ್ತಚರ ಮುಖ್ಯಸ್ಥ ಅಜಮ್ ಚೀಮಾ ಫೈಸಲಾಬಾದ್‌ನಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾನೆ. 70 ವರ್ಷದ ಅಜಮ್ ಚೀಮಾ ಸಾವಿನ ಹಿಂದೆ ಭಾರತೀಯ ಏಜೆನ್ಸಿಗಳ ಕೈವಾಡವಿದೆ ಎಂದು ಪಾಕಿಸ್ತಾನ ಆರೋಪಿಸಿದೆ, ಆದರೆ ಭಾರತ ಈ ಆರೋಪವನ್ನ ನಿರಾಕರಿಸಿದೆ. ಅಜಮ್ ಚೀಮಾ 26/11 ಭಯೋತ್ಪಾದಕ ದಾಳಿಗಳು ಮತ್ತು ಜುಲೈ 2006 ರ ಮುಂಬೈ ರೈಲು ಬಾಂಬ್ ಸ್ಫೋಟಗಳ ಪ್ರಮುಖ ಸಂಚುಕೋರರಲ್ಲಿ ಒಬ್ಬನಾಗಿದ್ದ. ಜೊತೆಗೆ ಭಾರತದಲ್ಲಿನ ಹಲವಾರು ಭಯೋತ್ಪಾದಕ ದಾಳಿಗಳು ನಡೆಸಿದ್ದಾನೆ. ಭಾರತೀಯ ಏಜೆನ್ಸಿಗಳಿಗೆ, ಅವನ ಸಾವಿನ ಸುದ್ದಿಯು ಪಾಕಿಸ್ತಾನದ ನೆಲದಲ್ಲಿ ಗೊತ್ತುಪಡಿಸಿದ ಭಯೋತ್ಪಾದಕನ ಉಪಸ್ಥಿತಿಯನ್ನ ಮತ್ತು ಇಸ್ಲಾಮಾಬಾದ್ನ ಪುನರಾವರ್ತಿತ ನಿರಾಕರಣೆಗಳನ್ನ ಮಾತ್ರ ಖಚಿತಪಡಿಸುತ್ತದೆ.
ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಮದುವೆ ಸಂಭ್ರಮ ಸಖತ್ ಜೋರಾಗಿ ನಡೆಯುತ್ತಿದೆ. ಮದುವೆಗೂ ಮುನ್ನ ಅದ್ದೂರಿಯಾಗಿ ಕಾರ್ಯಕ್ರಮಗಳು ಜರುಗುತ್ತಿದ್ದು ದೇಶ, ವಿದೇಶಗಳಿಂದ ಸೆಲೆಬ್ರಿಟಿಗಳು ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಅಂಬಾನಿ ಕುಟುಂಬದ ಮದುವೆ ಕಾರ್ಯಕ್ರಮದಲ್ಲಿ ಇಂಗ್ಲಿಷ್ ಗಾಯಕಿ ರಿಯಾನಾ ಹಾಡಿದ್ದು ಆಕೆಗೆ ಬರೋಬ್ಬರಿ 74 ಕೋಟಿ ಸಂಭಾವನೆ ನೀಡಲಾಗಿದೆ. ಇದೀಗ ಗಾಯಕಿ ಅಂಬಾನಿ ಕುಟುಂಬಕ್ಕೆ ಧನ್ಯವಾದ ಹೇಳಿದ್ದಾರೆ. ‘ಎಲ್ಲರಿಗೂ ಶುಭಸಂಜೆ. ಇಂದು ಇಲ್ಲಿರೋದಕ್ಕೆ ಖುಷಿ ಆಗುತ್ತಿದೆ. ನಾನು ಈವರೆಗೆ ಭಾರತಕ್ಕೆ ಬಂದಿರಲಿಲ್ಲ. ಅಂಬಾನಿ ಕುಟುಂಬಕ್ಕೆ ಧನ್ಯವಾದ. ಅನಂತ್ ಹಾಗೂ ರಾಧಿಕಾಗೆ ಧನ್ಯವಾದ. ಅವರಿಗೆ ಅಭಿನಂದನೆ’ ಎಂದು ವಿಡಿಯೋದಲ್ಲಿದೆ. ಬಾರ್ಬೆಡೋಸ್ ದೇಶದವರಾದ ರಿಯಾನಾಗೆ ವಿಶ್ವಾದ್ಯಂತ ದೊಡ್ಡ ಅಭಿಮಾನಿ ಬಳಗ ಇದೆ. ಅವರ ಸಾಂಗ್ ಸೂಪರ್ ಹಿಟ್ ಆಗಿವೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಯಲ್ಲಿ ರಿಯಾನಾ ಮನರಂಜನಾ ಕಾರ್ಯಕ್ರಮ ನೀಡಿದ್ದಾರೆ. ಈ ಸಂದರ್ಭದ ವಿಡಿಯೋಗಳು ಸೋಶೀಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಶ್ರೀಮಂತರ ಮದುವೆಗಳಲ್ಲಿ ಸ್ಟಾರ್ ಸಿಂಗರ್ಗಳು…
ಸ್ಯಾಂಡಲ್‌ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕುಟುಂಬದಲ್ಲಿ ಸಂಭ್ರಮ ಸಡಗರ ತುಂಬಿಕೊಂಡಿದೆ. ಮಗಳು ಈಗ ತಾನೆ ನಡೆಯಲು ಶುರುಮಾಡಿದ್ದು ಈ ಮಧ್ಯೆ ಮುದ್ದು ಕಂದ ತನ್ನ ತಮ್ಮನಿಗೆ ತೊಟ್ಟಿಲು ತೂಗಿ ಲಾಲಿ ಹಾಡಿದ್ದಾಳೆ. ಹೌದು, ಧ್ರುವ ಸರ್ಜಾ ಮಗಳು ರುದ್ರಕ್ಷಿ ತನ್ನ ತಮ್ಮ ಮಲಗಿರುವ ವೇಳೆ ತೊಟ್ಟಿಲು ತೂಗಿ ಲಾಲಿ ಹಾಡಿದ್ದಾಳೆ. ಈ ವೀಡಿಯೋವನ್ನು ಧ್ರುವ ಸರ್ಜಾ ಪತ್ನಿ ಪ್ರೇರಣಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗಿದೆ. ಸೆಪ್ಟೆಂಬರ್ 18 ರಂದು ಗಣೇಶ ಹಬ್ಬದಂದು ಪ್ರೇರಣಾ ಎರಡನೇ ಮಗುವಿಗೆ ಜನ್ಮ ನೀಡಿದ್ದರು. ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಮತ್ತು ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆದ ದಿನವೇ ‘ಆ್ಯಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ಅವರು ತಮ್ಮ ಮಕ್ಕಳ ನಾಮಕರಣವನ್ನು ನೆರವೇರಿಸಿದ್ದರು. ಮಗಳಿಗೆ ‘ರುದ್ರಾಕ್ಷಿ ಡಿ ಸರ್ಜಾ’ ಹಾಗೂ ಮಗನಿಗೆ ‘ಹಯಗ್ರೀವ ಡಿ ಸರ್ಜಾ’ ಎಂದು ನಾಮಕರಣ ಮಾಡಿದ್ದಾರೆ. ಇದೀಗಾ ರುದ್ರಾಕ್ಷಿ ತನ್ನ ತಮ್ಮ…
‘ನಾಗಿಣಿ’ ಖ್ಯಾತಿಯ ನಟಿ ದೀಪಿಕಾ ದಾಸ್ ಸದ್ದಿಲ್ಲದೆ ಗೋವಾದಲ್ಲಿ ಮದುವೆಯಾಗಿದ್ದಾರೆ. ಮದುವೆಯಾಗಿರುವ ಫೋಟೋವನ್ನು ಸೋಷಿಯಲ್ ಮೀಡಯಾದಲ್ಲಿ ಹಂಚಿಕೊಳ್ಳುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ. ಸ್ಯಾಂಡಲ್‌ವುಡ್ ನಟಿ, ಬಿಗ್ಬಾಸ್ ಖ್ಯಾತಿಯ ದೀಪಿಕಾ ದಾಸ್ ಗೋವಾದ ಕಡಲ ತೀರದಲ್ಲಿ ಮದುವೆಯಾಗಿದ್ದಾರೆ. ಬೀಚ್ ಸೈಡ್ ವೆಡ್ಡಿಂಗ್ ಫೊಟೋ ಶೇರ್ ಮಾಡಿ ಮದುವೆಯಾಗಿರುವುದನ್ನು ತಿಳಿಸಿದ್ದಾರೆ. ನಟಿಯ ದಿಢೀರ್ ಮದುವೆ ಫೋಟೋಸ್ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಇದು ಮದುವೆಯಾ? ಅಥವಾ ಆ್ಯಡ್ ಶೂಟಿಂಗ್ ಫೋಟೋಗಳಾ ಎಂದು ಕನ್ಫ್ಯೂಸ್ ಆಗಿದ್ದಾರೆ. ಆದರೆ ಸಾಕಷ್ಟು ಮಂದಿ ಇದು ರಿಯಲ್ ಮದುವೆ ಎನ್ನುತ್ತಿದ್ದಾರೆ. ಮೂರು ಫೋಟೋಸ್ ಶೇರ್ ಮಾಡಿದ ದೀಪಿಕಾ ದಾಸ್ ಅವರು ಮಿಸ್ಟರ್ & ಮಿಸಸ್ ಡಿ ಎಂದು ಬರೆದು ರೆಡ್ ಹಾರ್ಟ್ ಎಮೋಜಿಯನ್ನು ಹಾಕಿದ್ದಾರೆ. ಫೋಟೋ ನೋಡಿದ ನೆಟ್ಟಿಗರು ಮದುವೆ ಆಯ್ತಾ ಎಂದು ಪ್ರಶ್ನೆ ಮಾಡಿದ್ದಾರೆ. ದೀಪಿಕಾ ದಾಸ್ ಬಿಳಿ ಬಣ್ಣದ ಕೇಸರಿ ಅಂಚಿನ ಸೀರೆಯನ್ನು ಉಟ್ಟಿದ್ದರು. ಆಕರ್ಷಕವಾದ ವರಮಾಲೆ ಧರಿಸಿ ಸುಂದರವಾಗಿ ವಧುವಾಗಿ ಕಂಗೊಳಿಸಿದ್ದಾರೆ. ವರನ ಕೈ…
ನವದೆಹಲಿ : ಇಸ್ರೇಲ್-ಹಮಾಸ್ ನಡುವೆ ನಡೆಯುತ್ತಿರುವ ಯದ್ಧ ಮುಂದುವರೆದಿದ್ದು ಕದನ ವಿರಾಮ ಘೋಷಣೆಯ ಕುರಿತು ಮಾತುಕತೆ ನಡೆಯುತ್ತಿದೆ. ಈ ಮಧ್ಯೆ ಗಾಝಾದಲ್ಲಿ ನೆರವಿಗಾಗಿ ಕಾಯುತ್ತಿದ್ದ ಜನರ ಮೇಲೆ ನಡೆದ ದಾಳಿಯನ್ನು ಭಾರತ ಖಂಡಿಸಿದ್ದು, ಸಹಾಯಕ್ಕಾಗಿ ಕಾಯುತ್ತಿದ್ದ 112 ಜನರ ಸಾವು ದುರಂತ ಎಂದು ಭಾರತ ವಿಷಾಯ ವ್ಯಕ್ತಪಡಿಸಿದೆ. ಜೆರುಸಲೇಂ. ಗಾಝಾದಲ್ಲಿ ಮಾನವೀಯ ನೆರವಿನ ನಿರೀಕ್ಷೆಯಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ 112 ಕ್ಕೂ ಹೆಚ್ಚು ಫೆಲೆಸ್ತೀನೀಯರು ಸಾವನ್ನಪ್ಪಿದ ಘಟನೆಯ ಬಗ್ಗೆ ವಿಶ್ವಸಂಸ್ಥೆ ಮತ್ತು ಅಂತರರಾಷ್ಟ್ರೀಯ ಸಮುದಾಯ ತೀವ್ರ ದುಃಖ ವ್ಯಕ್ತಪಡಿಸಿದೆ. ಮಾನವೀಯ ನೆರವಿಗಾಗಿ ಕಾಯುತ್ತಿದ್ದ 112 ಜನರು ಗುರುವಾರ ಮೃತಪಟ್ಟಿರುವುದು ದುರಂತ ಎಂದು ಭಾರತದ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ. “ಗಾಝಾದಲ್ಲಿ ಮುಂದುವರಿದ ನಾಗರಿಕ ಸಾವುಗಳು ಮತ್ತು ಮಾನವೀಯ ಪರಿಸ್ಥಿತಿ ಕಳವಳಕಾರಿಯಾಗಿದೆ” ಎಂದಿದ್ದಾರೆ. ಈ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಅಮೆರಿಕ ಮತ್ತು ಜರ್ಮನಿ ಆಗ್ರಹಿಸಿವೆ. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇಸ್ರೇಲಿ ಸೈನಿಕರ…
ಕಳೆದ ಕೆಲವು ದಿನಗಳಿಂದ ಹೆಚ್ಚಾಗಿರುವ ಭಾರೀ ಹಿಮಪಾತದಿಂದ ಇದುವರೆಗೂ 15 ಜನರು ಪ್ರಾಣ ಕಳೆದುಕೊಂಡಿದ್ದು 30ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. “ಹಿಮವು ಮುಂದುವರಿದಿದೆ ಮತ್ತು ತುಂಬಾ ಭಾರವಾಗಿದೆ . ಭಾರೀ ಹಿಮಪಾತದಿಂದ ಜಾನುವಾರುಗಳನ್ನು ಕಳೆದುಕೊಳ್ಳುವಂತಾಗಿದೆ. ಇದರಿಂದ ಜನರು ಆತಂಕಕ್ಕೊಳಗಾಗಿದ್ದಾರೆ. ಅನೇಕ ರಸ್ತೆಗಳನ್ನು ನಿರ್ಬಂಧಿಸಲಾಗಿದೆ ಆದ್ದರಿಂದ ಯಾವುದೇ ಕೆಲಸಗಳು ನಡೆಯದೆ ಸಮಸ್ಯೆ ಎದುರಾಗಿದೆ ಎಂದು ಸಾರ್-ಇ-ಪುಲ್ ನಿವಾಸಿ ಅಬ್ದುಲ್ ಖಾದಿರ್ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಬಿಕ್ಕಟ್ಟಿಗೆ ಪ್ರತಿಕ್ರಿಯೆಯಾಗಿ, ಅಫ್ಘಾನಿಸ್ತಾನವು ವಿಶೇಷವಾಗಿ ಜಾನುವಾರು ಮಾಲೀಕರಿಗೆ ಹಾನಿಯನ್ನು ಪರಿಹರಿಸಲು ವಿವಿಧ ಸಚಿವಾಲಯಗಳನ್ನು ಒಳಗೊಂಡ ಸಮಿತಿಯ ರಚನೆಯನ್ನು ಘೋಷಿಸಿದೆ. ಬಾಲ್ಖ್, ಜಾವ್ಜಾನ್, ಬದ್ಘಿಸ್, ಫರಿಯಾಬ್ ಮತ್ತು ಹೆರಾತ್ ಪ್ರಾಂತ್ಯಗಳಲ್ಲಿ ಜಾನುವಾರು ಮಾಲೀಕರನ್ನು ಬೆಂಬಲಿಸಲು ಅಧಿಕಾರಿಗಳು ಐವತ್ತು ಮಿಲಿಯನ್ ಅಫ್ಘಾನಿಗಳನ್ನು ನಿಯೋಜಿಸಿದ್ದಾರೆ. ಕೃಷಿ, ನೀರಾವರಿ ಮತ್ತು ಜಾನುವಾರು ಸಚಿವಾಲಯದ ತಾಲಿಬಾನ್-ನೇಮಕ ವಕ್ತಾರ ಮಿಸ್ಬಾಹುದ್ದೀನ್ ಮುಸ್ತೀನ್, ಎಲ್ಲಾ ಪ್ರಾಂತ್ಯಗಳಲ್ಲಿ ರಚಿಸಲಾದ ಸಮಿತಿಗಳ ತ್ವರಿತ ಪ್ರತಿಕ್ರಿಯೆಯನ್ನು ಎತ್ತಿ ತೋರಿಸಿದರು. ಈ ಸಮಿತಿಗಳು ನಿರ್ಬಂಧಿತ ರಸ್ತೆಗಳನ್ನು ತೆರೆಯಲು, ಪೀಡಿತ ಸಮುದಾಯಗಳಿಗೆ ಆಹಾರ…
ಗಾಜಾದಲ್ಲಿ ನಡೆಯುತ್ತಿರುವ ಇಸ್ರೇಲ್ ಮತ್ತು ಹಮಾಸ್ ಯುದ್ಧಕ್ಕೆ ತಾತ್ಕಾಲಿಕ ಕದನ ವಿರಾಮಕ್ಕಾಗಿ ಮಧ್ಯಸ್ಥಿಕೆಯ ಮಾತುಕತೆಗಳು ಸ್ಥಗಿತಗೊಂಡಿದ್ದು, ಇಸ್ರೇಲ್ ಜೀವಂತವಾಗಿರುವ ಅಪಹರಿಸಿದ ಒತ್ತೆಯಾಳುಗಳ ಪಟ್ಟಿಯನ್ನು ಒತ್ತಾಯಿಸಿದ ನಂತರ ಸ್ಥಗಿತಗೊಂಡಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಅಧ್ಯಕ್ಷತೆಯಲ್ಲಿ ನಡೆದ ಯುದ್ಧ ಸಚಿವ ಸಂಪುಟದ ತುರ್ತು ಸಭೆಯ ನಂತರ ಈ ಸಂದೇಶವನ್ನು ಸಂಧಾನಕಾರರಿಗೆ ತಿಳಿಸಲಾಗಿದೆ ಎಂದು ಇಸ್ರೇಲಿ ಪ್ರಧಾನ ಮಂತ್ರಿ ಕಚೇರಿ ಮಾಹಿತಿ ಹಂಚಿಕೊಂಡಿದೆ. ಅಕ್ಟೋಬರ್ 7, 2023 ರಿಂದ ಹಮಾಸ್ ವಶದಲ್ಲಿರುವ 134 ಒತ್ತೆಯಾಳುಗಳಲ್ಲಿ ಸುಮಾರು 31 ಮಂದಿ ಸಾವನ್ನಪ್ಪಿದ್ದಾರೆ ಎಂದು ಕ್ರಮವಾಗಿ ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮತ್ತು ಮಿಲಿಟರಿ ಗುಪ್ತಚರ ಸಂಸ್ಥೆ ಮೊಸಾದ್ ಮತ್ತು ಶಿನ್ ಬೆಟ್ ಈ ಹಿಂದೆ ಬಹಿರಂಗಪಡಿಸಿದ್ದಾರೆ. ಅಮೆರಿಕಾ, ಕತಾರ್ ಮತ್ತು ಈಜಿಪ್ಟ್ ಸೇರಿದಂತೆ ಅಂತರರಾಷ್ಟ್ರೀಯ ಸಮಾಲೋಚಕರು ಮಾರ್ಚ್ 4 ರಿಂದ ನಡೆಯುತ್ತಿರುವ ಯುದ್ಧಕ್ಕಾಗಿ ಕದನ ವಿರಾಮವನ್ನು ನಿರೀಕ್ಷಿಸುತ್ತಿದ್ದರು. ಆದಾಗ್ಯೂ, ಇಸ್ರೇಲಿ ಸರ್ಕಾರದ ನಿರ್ಧಾರವು ಮಾತುಕತೆಗಳಿಗೆ ತಡೆ ಹಿಡಿದಿದೆ. ಇಸ್ರೇಲ್ ಮತ್ತು ಹಮಾಸ್ ಎರಡೂ ಆರು ವಾರಗಳ…