ಸ್ಟಾರ್ ನಟಿ ಸಮಂತಾ ರುತ್ ಪ್ರಭು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಆರೋಗ್ಯದ ಸಮಸ್ಯೆಯ ನಡುವೆಯೂ ಸಮಂತಾ ತಮ್ಮ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರಲು ನಿರಂತರ ಸಾಮಾಜಿಕ ಜಾಲಾ ತಾಣ ಬಳಸುತ್ತಿದ್ದಾರೆ. ಇದರಲ್ಲಿ ತಮ್ಮ ಆರೋಗ್ಯ, ಜೀವನ ಹಾಗೂ ಸಿನಿಮಾಗಳ ಕುರಿತು ಸದಾ ಮಾಹಿತಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಸಮಂತಾ ಬಾತ್ ರೂಮ್ನಲ್ಲಿ ಫೋಟೋಶೂಟ್ ಮಾಡಿಸಿದ್ದು ಅವನ್ನು ಸಾಮಾಜಿಕ ಜಾಲಾ ತಾಣದಲ್ಲಿ ಹಂಚಿಕೊಂಡಿದ್ದಾರೆ. ಸಮಂತಾ ಶೇರ್ ಮಾಡಿರುವ ಫೋಟೋಗಳಿಗೆ ‘ಚಿಂತೆಯಿಲ್ಲದೇ..’ ಎಂದು ಕ್ಯಾಪ್ಷನ್ ನೀಡಿದ್ದಾರೆ. ನಾಗ ಚೈತನ್ಯ ಜೊತೆಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಬಳಿಕ ಸಮಂತಾ ವೃತ್ತಿ ಜೀವನದತ್ತ ಹೆಚ್ಚು ಫೋಕಸ್ ಮಾಡುತ್ತಿದ್ದಾರೆ. ಆರೋಗ್ಯ ಸಮಸ್ಯೆಯ ಕಾರಣದಿಂದ ಎಲ್ಲಾ ಸಿನಿಮಾಗಳಿಗೂ ಗ್ರೀನ್ ಸಿಗ್ನಲ್ ನೀಡದೆ ಅಳೆದು ತೂಕಿ ಕೆಲವು ಸಿನಿಮಾಗಳಿಗಷ್ಟೇ ನಟಿ ಸಹಿ ಮಾಡುತ್ತಿದ್ದಾರೆ. ನಟಿ ಮಯೋಸೈಟಿಸ್ ಕಾಯಿಲೆಗೆ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯಕ್ಕೆ ಚೇತರಿಸಿಕೊಂಡು ಮತ್ತೆ ಸಿನಿಮಾ ಕೆಲಸಗಳತ್ತ ಮುಖ ಮಾಡಿದ್ದಾರೆ. ಸಮಂತಾ ಸಿನಿಮಾದ ಜೊತೆಗೆ ವೆಬ್ ಸಿರೀಸ್ ಕ್ಷೇತ್ರದಲ್ಲೂ ಬ್ಯುಸಿಯಾಗಿದ್ದಾರೆ.…
Author: Author AIN
ಮೊಬೈಲ್ ಕೊಳ್ಳುವವರಿಗೆ ರೆಡ್ಮಿ ಕಡೆಯಿಂದ ಗುಡ್ ನ್ಯೂಸ್ ಸಿಕ್ಕಿದೆ. ಚೀನಾ ಮೂಲದ ಪ್ರಸಿದ್ಧ ಶವೋಮಿ ಕಂಪನಿ ತನ್ನ ರೆಡ್ಮಿ ನೋಟ್ 12 4G ಮತ್ತುರೆಡ್ಮಿ 12 4 G ಬೆಲೆಗಳನ್ನು ಕಡಿತಗೊಳಿಸಿದೆ. ಇದೀಗ ಈ ಎರಡೂ ಸ್ಮಾರ್ಟ್‌ಫೋನ್‌ಗಳನ್ನು ಕೈಗೆಟುಕುವ ಬೆಲೆಯಲ್ಲಿ ಖರೀದಿಸಬಹುದು. ಕಳೆದ ವರ್ಷ ಮಾರ್ಚ್‌ನಲ್ಲಿ ಬಿಡುಗಡೆಯಾದ ನೋಟ್ 12 4G ಸ್ಮಾರ್ಟ್‌ಫೋನ್, 3 ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಎರಡನೇ ಬಾರಿಗೆ ಬೆಲೆ ಕಡಿತವಾಗಿದೆ. ರೆಡ್ಮಿ ನೋಟ್ 12 4G ಬೆಲೆ ಪ್ರಸ್ತುತ 12,999 ರೂ. ಆಗಿದೆ. ಇದಕ್ಕೂ ಮುನ್ನ ರೆಡ್ಮಿ ನೋಟ್ 12 4G ಬೆಲೆ 13,999 ರೂ. ಗಳಿಗೆ ಮಾರಾಟವಾಗುತ್ತಿತ್ತು. ಇದರ ಬೆಲೆಯಲ್ಲಿ 1,000 ರೂಪಾಯಿ ಕಡಿಮೆ ಮಾಡಲಾಗಿದೆ. ರೆಡ್ಮಿ ನೋಟ್ 12 4G ಸ್ಮಾರ್ಟ್‌ಫೋನ್ ಕ್ವಾಲ್ಕಂ ಸ್ನಾಪ್ಡ್ರಾಗನ್ 685 ಪ್ರೊಸೆಸರ್ ಹೊಂದಿದೆ. ಈ ಫೋನ್ 6.67 ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ. ಟ್ರಿಪಲ್ ಕ್ಯಾಮೆರಾ ಸೆಟಪ್ ಈ ಫೋನ್‌ನ ಹಿಂದಿನ ಪ್ಯಾನೆಲ್‌ನಲ್ಲಿ ಲಭ್ಯವಿದೆ. ಇದು 50MP+8MP+2MP ಆಗಿದ್ದು,…
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಸಿನಿಮಾಗಳ ಜೊತೆಗೆ ಮಾಡೆಲಿಂಗ್ ನಲ್ಲೂ ಸಖತ್ ಬ್ಯುಸಿಯಾಗಿದ್ದಾರೆ. ಸದ್ಯ ರಶ್ಮಿಕಾ ಜಪಾನ್ ನಲ್ಲಿದ್ದು ಅಲ್ಲಿನ ಸುಂದರ ಕ್ಷಣಗಳನ್ನು ಎಂಜಾಯ್ ಮಾಡ್ತಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಬಾಲ್ಯದ ಕನಸು ನನಸಾಗಿದೆಯಂತೆ. ಎಷ್ಟೋ ವರ್ಷಗಳ, ಬಾಲ್ಯದಿಂದಲೂ ಆಸೆಪಟ್ಟಂತಹ ಕನಸನ್ನು ನಟಿ ರಶ್ಮಿಕಾ ಮಂದಣ್ಣ ನೆರವೇರಿಸಿಕೊಂಡಿದ್ದು ಆ ಕುರಿತು ರಶ್ಮಿಕಾ ಸಾಮಾಜಿಕ ಜಾಲಾ ತಾಣದಲ್ಲಿ ಬರೆದುಕೊಂಡಿದ್ದಾರೆ. ಹಲವಾರು ವರ್ಷಗಳಿಂದ ನಾನು ಹೋಗಬೇಕೆಂದುಕೊಂಡಿದ್ದ ಸ್ಥಳ ಜಪಾನ್. ನನ್ನ ಬಾಲ್ಯದಿಂದಲೂ ನಾನು ಇದನ್ನು ಆಸೆ ಪಟ್ಟಿದ್ದೆ. ಆದರೆ ಜಪಾನ್ಗೆ ಹೋಗುವ ನನ್ನ ಕನಸು ನನಸಾಗಬಹುದೆಂದು ಅಂದುಕೊಂಡಿರಲಿಲ್ಲ ಎಂದು ಬರೆದುಕೊಂಡಿದ್ದಾರೆ. ಅವಾರ್ಡ್ ಶೋಗೆ ಒಬ್ಬರೇ ಬಂದಿರುವುದು, ಅವಾರ್ಡ್ ನೀಡುವುದು. ಅಂತೂ ಕನಸು ನನಸಾಗಿದೆ ಎಂದು ಬರೆದುಕೊಂಡಿರುವ ರಶ್ಮಿಕಾ ಹಾರ್ಟ್ ಎಮೋಜಿಗಳ ಜೊತೆ ಭಾವುಕ ಕ್ಯಾಪ್ಶನ್ ಬರೆದಿದ್ದಾರೆ. ನಟಿ ಜಪಾನ್ನಲ್ಲಿ ಕ್ಲಿಕ್ಕಿಸಿಕೊಂಡಿರುವ ಕೆಲವೊಂದು ಫೋಟೋಗಳನ್ನು ಇನ್ಸ್ಟಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಎಲ್ಲರನ್ನೂ ಇಲ್ಲಿ ಭೇಟಿಯಾಗುವುದು, ಇಷ್ಟೊಂದು ಪ್ರೀತಿ ಪಡೆಯುವುದು, ವಿಶೇಷವಾದ ಸ್ವಾಗತ ಪಡೆಯುವುದು. ಇಲ್ಲಿನ ಆಹಾರ, ವೆದರ್,…
ಪಾಕಿಸ್ತಾನದಲ್ಲಿ ಮತ್ತೋರ್ವ ಭಯೋತ್ಪಾದಕ ಉಗ್ರ ನಿಗೂಢವಾಗಿ ಸಾವನ್ನಪ್ಪಿದ್ದಾನೆ. ಭಯೋತ್ಪಾದಕರಿಗೆ ಸುರಕ್ಷಿತ ತಾಣವಾಗಿರುವ ಪಾಕಿಸ್ತಾನ ಇತ್ತೀಚಿನ ದಿನಗಳಲ್ಲಿ ಉದ್ವಿಗ್ನ ಸ್ಥಿತಿಯಲ್ಲಿದ್ದು, ಭಯೋತ್ಪಾದಕರು ಒಬ್ಬೊಬ್ಬರಾಗಿ ನಿಗೂಢವಾಗಿ ಸಾಯುತ್ತಿದ್ದಾರೆ ಎಂಬ ಆತಂಕಕಾರಿ ವಿಷಯ ವರದಿಯಾಗಿದೆ. ಪಾಕ್ ನ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಶೇಖ್ ಜಮೀಲ್ ಉರ್ ರೆಹಮಾನ್ ನಿಗೂಢವಾಗಿ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಈತನ ಸಾವಿಗೆ ಕಾರಣ ತಿಳಿದಿಲ್ಲ. ವರದಿಯ ಪ್ರಕಾರ, ಭಯೋತ್ಪಾದಕ ಶೇಖ್ ಜಮೀಲ್ ಉರ್ ರೆಹಮಾನ್ ಪಾಕಿಸ್ತಾನದ ಖೈಬರ್ ಪಖ್ತುಂಕ್ವಾದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಶೇಖ್ ಜಮೀಲ್ ಉರ್ ರೆಹಮಾನ್ ಯುನೈಟೆಡ್ ಜಿಹಾದ್ ಕೌನ್ಸಿಲ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಇದಲ್ಲದೆ, ಶೇಖ್ ಜಮೀಲ್ ಉರ್ ರೆಹಮಾನ್ ತೆಹ್ರೀಕ್-ಉಲ್-ಮಜಾಹಿದೀನ್‌ನ ಅಮೀರ್ ಆಗಿದ್ದರು. ಅಕ್ಟೋಬರ್ 2022 ರಲ್ಲಿ, ಭಾರತವು ಶೇಖ್ ಜಮೀಲ್ ಉರ್ ರೆಹಮಾನ್ ಅವರನ್ನು ಭಯೋತ್ಪಾದಕ ಎಂದು ಘೋಷಿಸಿತು. ಕಾಶ್ಮೀರದಲ್ಲಿ ನಡೆದ ಹಲವು ದಾಳಿಗಳಿಗೆ ಭಯೋತ್ಪಾದಕ ಶೇಖ್ ಜಮೀಲ್ ಉರ್ ರೆಹಮಾನ್ ಕಾರಣ ಎಂದು ಹೇಳಲಾಗಿದೆ. ಹಲವು ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿದ್ದ. ಭಯೋತ್ಪಾದಕ ಶೇಖ್…
ಚೀನಾದತ್ತ ವಾಲುತ್ತಿದ್ದ ಶ್ರೀಲಂಕಾವನ್ನು ತನ್ನತ್ತ ಸೆಳೆಯುವ ನಿಟ್ಟಿನಲ್ಲಿ ಭಾರತ ನಡೆಸುತ್ತಿರುವ ಪ್ರಯತ್ನದಲ್ಲಿ ಮೊದಲ ಯಶಸ್ಸು ಲಭಿಸಿದ್ದು, ಚೀನಾ ಪಾಲಾಗಿದ್ದ ಟೆಂಡರ್ ಅನ್ನು ರದ್ದು ಮಾಡಿರುವ ಶ್ರೀಲಂಕಾ ಇದೀಗ ಅದನ್ನು ಭಾರತಕ್ಕೆ ನೀಡಿದೆ. ಚೀನಾಗೆ ನೀಡಿದ್ದ ನಾಲ್ಕು ಇಂಧನ ಯೋಜನೆಗಳನ್ನು ಶ್ರೀಲಂಕಾ ದೇಶವು ಚೀನಾದಿಂದ ವಾಪಸ್ ಪಡೆದು ಭಾರತಕ್ಕೆ ನೀಡಿದೆ. ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಮೂರು ಸೌರ ವಿದ್ಯುತ್ ಉತ್ಪಾದನೆ ಘಟಕ ಹಾಗೂ ಒಂದು ಹೈಬ್ರಿಡ್ ವಿದ್ಯುತ್ ಉತ್ಪಾದನೆ ಘಟಕಗಳ ನಿರ್ಮಾಣದ ಗುತ್ತಿಗೆಯನ್ನು ಭಾರತದ ಕಂಪನಿಗಳಿಗೆ ನೀಡಿದೆ. ಇದು ಭಾರತಕ್ಕೆ ಸಿಕ್ಕ ರಾಜತಾಂತ್ರಿಕ ಮುನ್ನಡೆಯಾಗಿದೆ. ಇದಕ್ಕೂ ಮೊದಲು ಯೋಜನೆಗಳಿಗೆ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಅನುದಾನ ನೀಡಲಾಗಿತ್ತು. ಅಷ್ಟೇ ಅಲ್ಲ, ನಾಲ್ಕೂ ಘಟಕಗಳ ನಿರ್ಮಾಣದ ಗುತ್ತಿಗೆಯನ್ನು ಚೀನಾದ ಕಂಪನಿಗೆ ನೀಡಲಾಗಿತ್ತು. ಈಗ ಚೀನಾ ಕಂಪನಿಯನ್ನು ಬಿಟ್ಟು, ಭಾರತದ ಕಂಪನಿಗೆ ದ್ವೀಪರಾಷ್ಟ್ರವು ಗುತ್ತಿಗೆ ನೀಡಿದೆ. ಒಪ್ಪಂದ ಮಾಡಿಕೊಂಡಿರುವ ಕುರಿತು ಶ್ರೀಲಂಕಾದಲ್ಲಿರುವ ಭಾರತದ ರಾಯಭಾರ ಕಚೇರಿಯು ಫೋಟೊಗಳ ಸಮೇತ ಪೋಸ್ಟ್ ಮಾಡಿದ್ದು, ಶ್ರೀಲಂಕಾದಲ್ಲಿರುವ ಭಾರತದ ಹೈಕಮಿಷನರ್ ಸಂತೋಷ್ ಝಾ…
ಸುದೀಪ್ ನಟನೆಯ ಮಾಣಿಕ್ಯ ಸಿನಿಮಾದಲ್ಲಿ ನಟಿಸಿದ್ದ ನಟಿ ವರಲಕ್ಷ್ಮಿ ಶರತ್‌ಕುಮಾರ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ವರಲಕ್ಷ್ಮೀ ತಮ್ಮ ಬಹುಕಾಲದ ಗೆಳೆಯನ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಎಂಗೇಜ್‌ಮೆಂಟ್‌ನ ಫೋಟೋಗಳನ್ನ ನಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವರಲಕ್ಷ್ಮಿ ಆರ್ಟ್ ಗ್ಯಾಲರಿ ಮಾಲೀಕ ನಿಕೋಲಾಯ್ ಸಚ್‌ದೇವ್ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಕಳೆದ 14 ವರ್ಷದಿಂದ ನಿಕೋಲಾಯ್ ಜೊತೆ ಡೇಟಿಂಗ್ ನಲ್ಲಿದ್ದ ನಟಿ ಇದೀಗ ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮಾರ್ಚ್ 1ರಂದು ಮುಂಬೈನ ಖಾಸಗಿ ರೆಸಾರ್ಟ್‌ವೊಂದರಲ್ಲಿ ವರಲಕ್ಷ್ಮಿ ನಿಶ್ಚಿತಾರ್ಥ ಸಮಾರಂಭ ನಡೆದಿದೆ. ತಮಿಳಿನ ಹಿರಿಯ ನಟ ಶರತ್ ಕುಮಾರ್ ಅವರ ಪುತ್ರಿಯಾಗಿರುವ ವರಲಕ್ಷ್ಮೀ ತಮಿಳು, ತೆಲುಗು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ವರ್ಷದ ಅಂತ್ಯದಲ್ಲಿ ವರಲಕ್ಷ್ಮಿ ಮದುವೆ ಸಮಾರಂಭ ನಡೆಯಲಿದೆ.
ನಟಿ ಹಾಗೂ ಸಂಸದೆ ಸುಮಲತಾ ಟಿಕೆಟ್ ಘೋಷನೆಗೂ ಮುನ್ನ ಆದಿಚುಂಚನಗಿರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಾದ ಪಡೆದಿದ್ದಾರೆ. ಲೋಕಸಭಾ ಚುನಾವಣೆ ಅಖಾಡ ಕಾವೇರುತ್ತಿದ್ದಂತೆ, ಸುಮಲತಾ ಅವರು ಮಂಡ್ಯ ಕ್ಷೇತ್ರದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗಲು ಮುಂದಾಗಿದ್ದಾರೆ. ನಿರ್ಮಲಾನಂದನಾಥ ಸ್ವಾಮೀಜಿಗಳ ಆಶೀರ್ವಾದ ಪಡೆದು ಪ್ರಚಾರ ಆರಂಭಿಸುವುದಾಗಿ ಈ ಹಿಂದೆ ಸುಮಲತಾ ಹೇಳಿದ್ದರು. ಅದರಂತೆ ಇದೀಗ ಕಾಲಭೈರವೇಶ್ವರನಿಗೆ ಪೂಜೆ ಸಲ್ಲಿಸಿ, ಬಳಿಕ ಆದಿಚುಂಚನಗಿರಿಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಲೋಕಸಭಾ ಚುನಾವಣೆಗೆ ಅಖಾಡ ಸಜ್ಜಾಗಿದೆ. ಮೈತ್ರಿ ಟಿಕೆಟ್ ಜಟಾಪಟಿ ನಡುವೆ ಸುಮಲತಾ ಮತ್ತಷ್ಟು ಆ್ಯಕ್ಟೀವ್ ಆಗಿದ್ದಾರೆ. ಈ ಮೂಲಕ ಜೆಡಿಎಸ್ ನಾಯಕರಿಗೆ ಠಕ್ಕರ್ ಕೊಡಲು ಸುಮಲತಾ ಮುಂದಾಗಿದ್ದಾರೆ. ಲೋಕಸಭೆ ಚುನಾವಣೆಗೆ ಸುಮಲತಾ ಭರ್ಜರಿ ತಯಾರಿ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇತ್ತೀಚಿನ ದಿನಗಳಲ್ಲಿ ವೈದ್ಯರು ಒಂದಲ್ಲ ಒಂದು ಎಡವಟ್ಟುಗಳನ್ನು ಮಾಡುತ್ತಲೇ ಇರುತ್ತಾರೆ. ಏನೋ ಮಾಡಲು ಹೋಗಿ ಏನೋ ಮಾಡಿ ರೋಗಿಯನ್ನು ಪೇಚಿಗೆ ಸಿಲುಕಿಸಿ ಬಿಡ್ತಾರೆ. ಅಂಥದ್ದೇ ಒಂದು ಘಟನೆ ಅರ್ಜೆಂಟೀನಾದಲ್ಲಿ ನಡೆದಿದೆ. ಪಿತ್ತಕೋಶದ ಅಪರೇಶನ್ ಗೆ ಅಂತ ಹೋಗಿದ್ದ ವ್ಯಕ್ತಿಗೆ ವೈದ್ಯರು ಪಿತ್ತಕೋಶದ ಶಸ್ತ್ರಚಿಕಿತ್ಸೆ ಮಾಡುವ ಬದಲು ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಇದರಿಂದ ವ್ಯಕ್ತಿ ಕಂಗಲಾಗಿದ್ದು ಮುಂದೇನು ಗತಿ ಎನ್ನುವ ಆತಂಕದಲ್ಲಿದ್ದಾನೆ. ಆದರೆ ವೈದ್ಯರು ಮಾತ್ರ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದ್ರೂ ಮಕ್ಕಳನ್ನು ಪಡೆಯಬಹುದು ಎಂದು ಸಮಾಧಾನ ಮಾಡಿ ಆತನನ್ನು ಮನೆಗೆ ಕಳುಹಿಸಿದ್ದಾರೆ. 41 ವರ್ಷದ ಜಾರ್ಜ್ ಬಾಸ್ಟೊ ಎಂಬಾತ ಪಿತ್ತಕೋಶದ ಶಸ್ತ್ರಚಿಕಿತ್ಸೆಗಾಗಿ ಅರ್ಜೆಂಟೀನಾದ ಕಾರ್ಡೋಬಾದಲ್ಲಿರುವ ಫ್ಲೋರೆನ್ಸಿಯೊ ಡಯಾಜ್ ಪ್ರಾಂತೀಯ ಆಸ್ಪತ್ರೆಗೆ ದಾಖಲಾಗಿದ್ದ. ಫೆಬ್ರವರಿ 28ರಂದು ಶಸ್ತ್ರಚಿಕಿತ್ಸೆ ಮಾಡೋದಾಗಿ ವೈದ್ಯರು ಹೇಳಿದ್ದರು. ಆದ್ರೆ ಯಾವುದೋ ಕಾರಣಕ್ಕೆ ಅದನ್ನು ಬದಲಿಸಿ 29ಕ್ಕೆ ನಿಗದಿಪಡಿಸಲಾಗಿತ್ತು. ಈ ಬದಲಾವಣೆಯಾ ಆತನನ್ನು ಸಂಕಷ್ಟಕ್ಕೆ ದೂಡಿದೆ. ಜಾರ್ಜ್ ರೂಮಿಗೆ ಬಂದ ಆಸ್ಪತ್ರೆ ಸಿಬ್ಬಂದಿ ಆತನನ್ನು ಸ್ಟ್ರೆಚ್ಚರ್ ನಲ್ಲಿ ಹಾಕಿಕೊಂಡು ಆಪರೇಷನ್…
ಕೋಟ್ಯಾಧಿಪತಿ ಅಂಬಾನಿ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಹಸೆಮಣೆ ಏರಲಿದ್ದಾರೆ. ಈಗಾಗಲೇ ಮದುವೆಯ ಮುನ್ನದ ಕಾರ್ಯಕ್ರಮಗಳು ಆರಂಭವಾಗಿದ್ದು ದೇಶ, ವಿದೇಶದಿಂದ ಸೆಲೆಬ್ರಿಟಿಗಳು ಭಾಗಿಯಾಗಿದ್ದಾರೆ. ಗುಜರಾತ್‌ನ ಜಾಮ್‌ನಗರದಲ್ಲಿ ನಡೆದ ಪ್ರೀ-ವೆಡ್ಡಿಂಗ್ ಸಮಾರಂಭದಲ್ಲಿ ಪುತ್ರ ಅನಂತ್ ಅಂಬಾನಿ ತಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದಂತೆ ಮುಖೇಶ್ ಅಂಬಾನಿ ಭಾವುಕರಾಗಿದ್ದಾರೆ. ಬಾಲ್ಯದಲ್ಲಿ ಎದುರಾದ ಆರೋಗ್ಯದ ಸಮಸ್ಯೆಗಳ ಬಗ್ಗೆ ಮಾತನಾಡಿದ ಅವರು, ‘ಈ ಮೂಲಕ ನನ್ನ ಕುಟುಂಬವು ನನಗೆ ತುಂಬ ವಿಶೇಷ ಭಾವನೆ ಕೊಟ್ಟಿದೆ. ಆದರೆ ನನ್ನ ಜೀವನವು ಗುಲಾಬಿಗಳ ಹಾಸಿಗೆಯಂತಿಲ್ಲ. ನಾನು ಮುಳ್ಳಿನಿಂದ ಉಂಟಾಗುವಂತ ನೋವನ್ನು ಅನುಭವಿಸಿದ್ದೇನೆ. ನಾನು ಬಾಲ್ಯದಿಂದಲೂ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದೇನೆ, ಆದರೆ ನನ್ನ ತಂದೆ-ತಾಯಿ ಮಾತ್ರ ಎಂದಿಗೂ ನನ್ನ ಕೈ ಬಿಡಲಿಲ್ಲ’ ಎಂದಿದ್ದಾರೆ. ‘ನಾನು ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಅನುಭವಿಸಿದ್ದೇನೆ. ಆಗ ಸದಾ ನನ್ನ ಬೆಂಬಲಕ್ಕೆ ನಿಂತಿದ್ದು ನನ್ನ ಕುಟುಂಬದವರು’ ಎಂದು ಅನಂತ್ ಹೇಳಿದರು. ಈ ಮಾತುಗಳನ್ನು ಕೇಳುತ್ತಿದ್ದಂತೆ ಭಾವೋದ್ವೇಗಕ್ಕೆ ಒಳಗಾದ ಮುಖೇಶ್…
ಕಳೆದ ಕೆಲವು ದಿನಗಳ ಹಿಂದಷ್ಟೆ ರಾಕಿಂಗ್ ಸ್ಟಾರ್ ಯಶ್ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಬಳ್ಳಾರಿಗೆ ತೆರಳಿದ್ದರು. ಈ ವೇಳೆ ಯಶ್ ಹಿಂಬಾಲಕರ ಕಾರು ಹರಿದು ಯುವಕನೊಬ್ಬ ಗಾಯಗೊಂಡಿದ್ದ. ಇದೀಗ ಗಾಯಗೊಂಡಿದ್ದ ಯುವಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ನ್ಯಾಯಕ್ಕೆ ಒತ್ತಾಯಿಸಿದ್ದಾನೆ. ಫೆಬ್ರವರಿ 29 ರಂದು ಅಮೃತೇಶ್ವರ ದೇವಾಲಯ ಉದ್ಘಾಟನೆಗೆ ನಟ ಯಶ್ ಆಗಮಿಸಿದ್ದರು. ಈ ವೇಳೆ ಯಶ್ರ ಹಿಂಬಾಲಕರ ಕಾರು ಸಿರಗುಪ್ಪ ತಾಲೂಕಿನ ಮುದ್ದೇನೂರು ಗ್ರಾಮದ ಯುವಕ ಉಮೇಶ್ ಎಂಬುವರ ಕಾಲಿನ ಮೇಲೆ ಹರಿದಿದ್ದು, ಇದರಿಂದ ಯುವಕ ಗಾಯಗೊಂಡಿದ್ದ. ಇದೀಗ ಯುವಕ ಉಮೇಶ್ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತಮ್ಮ ಕಾಲ ಮೇಲೆ ಹರಿದ ಕಾರನ್ನು ಚಲಾಯಿಸುತ್ತಿದ್ದ ಚಾಲಕನ ಪತ್ತೆಗೆ ಒತ್ತಾಯಿಸಿದ್ದು, ಚಾಲಕನಿಗೆ ಕಾನೂನು ರೀತಿಯಲ್ಲಿ ಶಿಕ್ಷೆ ನೀಡಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಫೆಬ್ರವರಿ 29 ರಂದು ಅಮೃತೇಶ್ವರ ದೇವಸ್ಥಾನ ಉದ್ಘಾಟನೆಗೆ ಯಶ್ ಬಳ್ಳಾರಿಗೆ ಆಗಮಿಸಿದ್ದರು. ಯಶ್ರನ್ನು ನೋಡಲು ಸಾವಿರಾರು ಮಂದಿ ಜನ ಸ್ಥಳದಲ್ಲಿ ಸೇರಿದ್ದರು. ಪ್ರಾಣ ಪ್ರತಿಷ್ಠಾನಪನೆ ಕಾರ್ಯಕ್ರಮ…