Author: Author AIN

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಬಿಷ್ಣೋಯಿ ಗ್ಯಾಂಗ್ ನಿಂದ ಪದೇ ಪದೇ ಜೀವ ಬೆದರಿಕೆ ಕರೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಸಲ್ಮಾನ್ ಸಾಕಷ್ಟು ಎಚ್ಚರಿಕೆ ವಹಿಸಿದ್ದಾರೆ. ಈಗಾಗಲೇ ಸಲ್ಮಾನ್ ಬಳಿ ಬುಲೆಟ್ ಫ್ರೂವ್ ಕಾರಿದ್ದರು ಕಳೆದ ಕೆಲ ತಿಂಗಳ ಹಿಂದೆ ಮತ್ತಷ್ಟು ಸೆಕ್ಯೂರಿಟಿ ಇರುವ ಬುಲೆಟ್ ಫ್ರೂಫ್ ಕಾರು ಖರೀದಿಸಿದ್ದರು. ಇದೀಗ ಸಲ್ಮಾನ್ ಮನೆಗೆ ಬುಲೆಟ್ ಪ್ರೂವ್ ಗ್ಲಾಸ್ ಗಳನ್ನು ಹಾಕಿಸಿದ್ದಾರೆ. ಸಲ್ಮಾನ್ ಖಾನ್ ಅನ್ನು ಕೊಂದೇ ತೀರುವುದಾಗಿ ಲಾರೆನ್ಸ್ ಬಿಷ್ಣೋಯಿ ಮತ್ತು ಅವನ ಸಹಚರರು ಶಪಥ ತೊಟ್ಟಿದ್ದಾರೆ. ಈಗಾಗಲೇ ಸಲ್ಮಾನ್ ಖಾನ್​ರ ಆಪ್ತ ಮಾಜಿ ಶಾಸಕ ಬಾಬಾ ಸಿದ್ಧಿಖಿಯನ್ನು ಬಿಷ್ಣೋಯಿ ಸಹಚರರು ಕೊಂದಿದ್ದಾಗಿದೆ. ಹೀಗಾಗಿ ಸಲ್ಮಾನ್ ಖಾನ್ ಸಾಕಷ್ಟು ಎಚ್ಚರಿಕೆ ವಹಿಸುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಸಲ್ಮಾನ್ ಖಾನ್ ಅವರ ಗ್ಯಾಲೆಕ್ಸಿ ನಿವಾಸದ ಮೇಲೆ ಕೆಲವು ದುಷ್ಕರ್ಮಿಗಳು ದಾಳಿ ಮಾಡಿದ್ದರು. ಗ್ಯಾಲೆಕ್ಸಿ ಅಪಾರ್ಟ್​ಮೆಂಟ್​ನ ಗಾಜಿನ ಕಿಟಕಿಗಳ ಮೇಲೆ ಶೂಟ್ ಮಾಡಿ ದುಷ್ಕರ್ಮಿಗಳು ಪರಾರಿ ಆಗಿದ್ದರು. ಮತ್ತೊಮ್ಮೆ ಇಂಥಹಾ ದಾಳಿಯ…

Read More

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಮ್ಮ ನೇರ ಮಾತುಗಳಿಂದ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೆ ಇರುತ್ತಾರೆ. ಅದರಲ್ಲೂ ಹಲವು ಭಾರಿ ನಟಿ ಶ್ರೀದೇವಿಯನ್ನು ರಾಮ್ ಗೋಪಾಲ್ ವರ್ಮಾ ಹೊಗಳುತ್ತಿರುತ್ತಾರೆ. ಇದೀಗ ಶ್ರೀದೇವಿ ಪುತ್ರಿ ಜಾನ್ವಿ ಬಗ್ಗೆ ನೇರಾ ನೇರಾ ಮಾತನಾಡಿದ್ದು ‘ನನಗೆ ತಾಯಿ ಇಷ್ಟವೇ ಹೊರತು ಮಗಳಲ್ಲ’ ಎಂದಿದ್ದಾರೆ. ರಾಮ್ ಗೋಪಾಲ್ ವರ್ಮಾಗೆ ಶ್ರೀದೇವಿ ಅವರನ್ನು ಕಂಡರೆ ವಿಶೇಷ ಪ್ರೀತಿ ಇತ್ತು. ಅವರನ್ನು ರಾಮ್ ಗೋಪಾಲ್ ವರ್ಮಾ ಆರಾಧಿಸುತ್ತಾ ಇದ್ದರು. ಈ ಬಗ್ಗೆ ಹಲವು ಬಾರಿ ಹೇಳಿದ್ದಾರೆ. ಕೆಲವರು ಮಕ್ಕಳಲ್ಲಿ ತಾಯಿಯನ್ನು ಕಾಣುತ್ತಾರೆ. ಆದರೆ ರಾಮ್ ಗೋಪಾಲ್ ವರ್ಮಾ ಆ ರೀತಿ ಅಲ್ಲವೇ ಅಲ್ಲ. ‘ನನಗೆ ಜಾನ್ವಿ ಕಪೂರ್ ಅವರಲ್ಲಿ ಶ್ರೀದೇವಿ ಕಾಣುತ್ತಿಲ್ಲ’ ಎಂದು ನೇರವಾಗಿ ಹೇಳಿದ್ದಾರೆ.ಈ ಮೂಲಕ ಇಬ್ಬರೂ ಒಟ್ಟಾಗಿ ಕೆಲಸ ಮಾಡುತ್ತಾರೆ ಎಂಬ ವಿಚಾರ ಸುಳ್ಳಾಗಿದೆ. ಈ ಮೊದಲು ಜೂನಿಯರ್ ಎನ್ ಟಿಆರ್ ಅವರು ಜಾನ್ವಿ ಕಪೂರ್ ಅವರನ್ನು ಶ್ರೀದೇವಿಗೆ ಹೋಲಿಕೆ ಮಾಡಿದ್ದರು. ಆದರೆ, ಹೋಲಿಕೆ ತಪ್ಪು ಎಂದು…

Read More

ಅನೇಕ ಬಾರಿ, ಕಡಿಮೆ ಲಾಭದ ಕಾರಣ, ರೈತರು ಹೊಸ ಬೆಳೆಗಳತ್ತ ಮುಖ ಮಾಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಸಹ ಈ ರೀತಿ ಯೋಚಿಸುತ್ತಿದ್ದರೆ, ನೀವು ಗುಲಾಬಿಗಳನ್ನು ಬೆಳೆಸಬಹುದು. ಗುಲಾಬಿ ಹೂವುಗಳನ್ನು ಅಲಂಕಾರ, ಸುಗಂಧ ಮತ್ತು ಔಷಧಗಳಿಗೆ ಬಳಸಲಾಗುತ್ತದೆ. ಹಸಿರುಮನೆ ತಂತ್ರಜ್ಞಾನದಿಂದ ವರ್ಷವಿಡೀ ಬೇಸಾಯ ಸಾಧ್ಯ. ಲೋಮಿ ಮಣ್ಣು ಈ ಕೃಷಿಗೆ ಸೂಕ್ತವಾಗಿದೆ. ನರ್ಸರಿಯಲ್ಲಿ ಬೀಜಗಳನ್ನು ಬಿತ್ತಿದ ನಂತರ ಹೊಲಗಳಲ್ಲಿ ನಾಟಿ ಮಾಡಲಾಗುತ್ತದೆ. ನಿಯಮಿತ ನೀರಾವರಿ ಮತ್ತು ಪೆನ್ ವಿಧಾನದಿಂದ ಬೇಸಾಯವನ್ನು ಮಾಡಬಹುದು. ಒಂದು ಹೆಕ್ಟೇರ್ ನಲ್ಲಿ 5-7 ಲಕ್ಷ ರೂಪಾಯಿ ಲಾಭ ಸಾಧ್ಯ. ತಜ್ಞರ ಪ್ರಕಾರ, ರೈತರು ಗುಲಾಬಿ ಕೃಷಿಯಿಂದ 8 ರಿಂದ 10 ವರ್ಷಗಳವರೆಗೆ ನಿರಂತರ ಲಾಭ ಗಳಿಸಬಹುದು. ಒಂದು ಸಸ್ಯದಿಂದ ಸುಮಾರು 2 ಕೆಜಿ ಹೂವುಗಳನ್ನು ಪಡೆಯಲಾಗುತ್ತದೆ. ಈಗ ಇದನ್ನು ಹಸಿರುಮನೆ ಮತ್ತು ಪಾಲಿ ಹೌಸ್‌ನಂತಹ ತಂತ್ರಗಳೊಂದಿಗೆ ವರ್ಷವಿಡೀ ಬೆಳೆಸಬಹುದು. ವರದಿಗಳ ಪ್ರಕಾರ, ಗುಲಾಬಿಯನ್ನು ಯಾವುದೇ ರೀತಿಯ ಮಣ್ಣಿನಲ್ಲಿ ಬೆಳೆಸಬಹುದು, ಆದರೆ ಇದು ಲೋಮಿ ಮಣ್ಣಿನಲ್ಲಿ ವೇಗವಾಗಿ ಬೆಳೆಯುತ್ತದೆ.…

Read More

ಮೀನು ಕೇವಲ ರುಚಿಕರವಾದ ಆಹಾರ ಮಾತ್ರವಲ್ಲ ಈ ಆಹಾರ ಸೇವಿಸುವುದರಿಂದ ಹೆಚ್ಚಿನ ಪೌಷ್ಠಿಕಾಂಶ ಸಿಗುತ್ತದೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ.  ಸಂಶೋಧಕರು ಹೇಳುವಂತೆ ಹೃದ್ರೋಗ ಹೊಂದಿರುವವರು ವಾರಕ್ಕೆ ಕನಿಷ್ಠ 2 ಬಾರಿಯಾದರೂ ಮೀನುಗಳನ್ನು ತಿನ್ನಬೇಕು, ಆದರೆ ಎಣ್ಣೆಯುಕ್ತ ಮೀನುಗಳಾದ ಸಾಲ್ಮನ್, ಟುನಾ ಮತ್ತು ಸಾರ್ಡಿನ್ ಮತ್ತು ಕಾಡ್ಗಳು ಒಮೆಗಾ-3 ಕೊಬ್ಬಿನ ಆಮ್ಲಗಳನ್ನು ಸಮೃದ್ಧವಾಗಿ ಹೊಂದಿವೆ. ಎಣ್ಣೆಯ ಅಂಶ ಹೊಂದಿರುವ ಮೀನುಗಳನ್ನು ವಾರಕ್ಕೆ 2 ಬಾರಿ ತಿನ್ನುವ ಮೂಲಕ ಹೃದಯ ಸಂಬಂಧಿ ಕಾಯಿಲೆಗಳಿಂದ ಉಂಟಾಗುವ ಸಾವಿನ ಅಪಾಯವನ್ನು ಸಹ ಕಡಿಮೆ ಮಾಡಬಹುದು. ಒಮೆಗಾ -3 ಕೊಬ್ಬಿನಾಮ್ಲಗಳು ಯಾವುವು ಮತ್ತು ಅವು ಹೃದಯಕ್ಕೆ ಏಕೆ ಒಳ್ಳೆಯದು? ಒಮೆಗಾ -3 ಕೊಬ್ಬಿನಾಮ್ಲಗಳು ಒಂದು ರೀತಿಯ ಅಪರ್ಯಾಪ್ತ ಕೊಬ್ಬಿನಾಮ್ಲಗಳಾಗಿವೆ. ಅವು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಬಹುದು. ದೇಹದಲ್ಲಿನ ಉರಿಯೂತವು ರಕ್ತನಾಳಗಳನ್ನು ನೋಯಿಸಬಹುದು. ರಕ್ತನಾಳದ ಹಾನಿ ಹೃದಯ ಕಾಯಿಲೆ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಒಮೆಗಾ -3 ಕೊಬ್ಬಿನಾಮ್ಲಗಳ ಪ್ರಯೋಜನಗಳು ರಕ್ತದೊತ್ತಡವನ್ನು ಸ್ವಲ್ಪ ಕಡಿಮೆ ಮಾಡುವ ಮೂಲಕ ಹೃದಯವನ್ನು ಆರೋಗ್ಯವಾಗಿರಿಸಿಕೊಳ್ಳುತ್ತದೆ. ರಕ್ತದಲ್ಲಿ…

Read More

ಬೆಂಗಳೂರು: ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್​ ಆದ ಕೆನರಾ ಬ್ಯಾಂಕ್​​ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.  60 ವಿಶೇಷ ಅಧಿಕಾರಿ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿ ತಿಳಿಸಿದೆ. ನಿಮ್ಮ ವಿದ್ಯಾರ್ಹತೆಯ ಆಧಾರದ ಮೇಲೆ ಇತ್ತೀಚಿನ ಕೆನರಾ ಬ್ಯಾಂಕ್ ಉದ್ಯೋಗಗಳನ್ನು ಪರಿಶೀಲಿಸಿ ಮತ್ತು ಅಧಿಕೃತ ವೆಬ್ಸೈಟ್​​ ಮೂಲಕ canarabank.com ಅರ್ಜಿ ಸಲ್ಲಿಸಿ. ಪೋಸ್ಟ್ ಹೆಸರು: ತಜ್ಞ ಅಧಿಕಾರಿಗಳು ಖಾಲಿ ಹುದ್ದೆಗಳ ಸಂಖ್ಯೆ: 60 ಪೋಸ್ಟ್‌ಗಳು ಅರ್ಹತೆ: ಪದವಿ, BCA, BE ಅಥವಾ B.Tech, ಪದವಿ, ಸ್ನಾತಕೋತ್ತರ ಪದವಿ ವಯೋಮಿತಿ: ಕೆನರಾ ಬ್ಯಾಂಕ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಮಾರ್ಚ್​ 1, 2025ಕ್ಕೆ ಗರಿಷ್ಠ 55 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ. ಅರ್ಜಿ ಶುಲ್ಕ: ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ. ವೇತನ: ಆಯ್ಕೆಯಾಗುವ ಅಭ್ಯರ್ಥಿಗಳಿಗೆ ವೇತನ ನಿಗದಿಪಡಿಸಿಲ್ಲ. ಅವರ ಅನುಭವ ಮತ್ತು ಕಾರ್ಯಕ್ಷಮತೆಯ…

Read More

ಸೂರ್ಯೋದಯ – 6:52ಬೆ ಸೂರ್ಯಾಸ್ತ – 5:53 ಸಂ ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ ಅಯಣ, ಶುಕ್ಲ ಪಕ್ಷ, ಹೇಮಂತ್ ಋತು, ಪುಷ್ಯ ಮಾಸ, ತಿಥಿ – ನವಮಿ ನಕ್ಷತ್ರ – ಅಶ್ವಿನಿ ರಾಹು ಕಾಲ – 12:00 ದಿಂದ 01:30 ವರೆಗೆ ಯಮಗಂಡ – 07:30 ದಿಂದ 09:00 ವರೆಗೆ ಗುಳಿಕ ಕಾಲ – 10:30 ದಿಂದ 12:00 ವರೆಗೆ ಬ್ರಹ್ಮ ಮುಹೂರ್ತ – 5:16 ಬೆ ದಿಂದ 6:04 ಬೆ ವರೆಗೆ ಅಮೃತ ಕಾಲ – 9:41 ಬೆ ದಿಂದ 11:11 ಬೆ ವರೆಗೆ ಅಭಿಜಿತ್ ಮುಹುರ್ತ :ಇಲ್ಲ ಮೇಷ: ವಕೀಲರಿಗೆ ಉತ್ತಮ ಸಮಯ, ವಾಣಿಜ್ಯ ಸಂಸ್ಥೆ ನಡೆಸುವವರು ಮತ್ತು ಲೆಕ್ಕ ಪರಿಶೋಧಕರು ಆದಾಯ ಹೆಚ್ಚಿಸಿಕೊಳ್ಳುತ್ತಾರೆ, ಮಕ್ಕಳಿಗೆ ಸರ್ಕಾರಿ ಉದ್ಯೋಗ ದೊರೆಯುವ ಸಾಧ್ಯತೆ, ಪಾಲುದಾರಿಕೆ ವ್ಯವಹಾರಗಳಲ್ಲಿ ವಿಚಾರ ಬೇಡ, ಉಪನ್ಯಾಸಕರಿಗೆ ಸಿಹಿಸುದ್ದಿ, ಆಸ್ತಿ ಮಾರಾಟದ ಅಡಚಣೆ ನಿವಾರಣೆ, ಪಾಲುದಾರಿಕೆ ಸಮಸ್ಯೆಗಳ ಪರಿಹಾರ, ಪತಿ-ಪತ್ನಿ ಭಿನ್ನಾಭಿಪ್ರಾಯದಿಂದ…

Read More

ಕೀನ್ಯಾ: ಅನ್ಯಗ್ರಹ ಜೀವಿಗಳು ಇವೆ ಎಂಬುದನ್ನು ಆಗಾಗ ಕೇಳುತ್ತಲೆ ಇರುತ್ತೆವೆ. ಅವುಗಳು ಭೂಮಿಗೆ ಬಂದಿವೆ ಎಂದು ಕೆಲವೊಂದು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೆ ಇವೆ. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ. ಇದರ ನಡುವೆ ಕೀನ್ಯಾ ಗ್ರಾಮವೊಂದರಲ್ಲಿ ಆಗಸದಿಂದ ಏಕಾಏಕಿ ಬೃಹತ್ ಗಾತ್ರದ ಲೋಹದ ಉಂಗುರದ ಆಕಾರವೊಂದು ಭೂಮಿಗೆ ಬಿದ್ದಿದೆ. ಉಂಗುರದ ಗಾತ್ರದ ವಸ್ತು ಬಿದ್ದ ಸದ್ದು ಕೇಳಿ ಗ್ರಾಮಸ್ಥರು ಓಡೋಡಿ ಬಂದಿದ್ದಾರೆ. ಆದರೆ ಹತ್ತಿರಬರುತ್ತಿದ್ದಂತೆ ಉಂಗುರ ಆಕಾರದಲ್ಲಿರುವ ಲೋಹ ಅನ್ನೋದು ಗೊತ್ತಾಗಿದೆ. ಇದು ಏಲಿಯನ್ ವಿಮಾನ ಇರಬಹುದೇ? ಅಥವಾ ಏಲಿಯನ್ ವಿಮಾನ ಅಪಘಾತದ ಸಂಭವಿಸಿತೆ ಅನ್ನೋ ಆತಂಕ ಜನರಲ್ಲಿ ಕಾಡಿತ್ತು. ಮಾಹಿತಿ ತಿಳಿದು ಹಲವು ಅಧಿಕಾರಿಗಳ ತಂಡ ಕೀನ್ಯಾದ ಮುಕುಕು ಗ್ರಾಮಕ್ಕೆ ದೌಡಾಯಿಸಿದ್ದಾರೆ. ಇದೇ ವೇಳೆ ಕೀನ್ಯಾ ಬಾಹ್ಯಾಕಾಶ ಸಂಸ್ಥೆ ಕೂಡ ಸ್ಥಳಕ್ಕೆ ಧಾವಿಸಿ ಅಧ್ಯಯನ ಆರಂಭಿಸಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಇದು ಬಾಹ್ಯಾಕಾಶ ನೌಕೆಯ ಅವಶೇಷ ಎನ್ನಲಾಗುತ್ತಿದೆ. ಬಾಹ್ಯಾಕಾಶದ ತ್ಯಾಜ್ಯವು ಮಾನವೀಯತೆಗೆ ದೊಡ್ಡ ಅಪಾಯವಾಗಬಹುದು ಎಂಬ…

Read More

ವಾಷಿಂಗ್ಟನ್:  ಕೆನಡಾ ಪ್ರಧಾನಿ ನಕ್ಕೆ ಜಸ್ಟಿನ್ ಟ್ರುಡೊ ರಾಜೀನಾಮೆ ನೀಡಿದ ಕೆಲವೇ ಗಂಟೆಗಳ ಅವಧಿಯಲ್ಲಿ ಅಮೆರಿಕ ನಿಯೋಜಿತ ಅಧ್ಯಕ್ಷ ‘ಕೆನಡಾ-ಅಮೆರಿಕ ವಿಲೀನ’ದ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ಟ್ರುಡೊ ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆನಡಾವನ್ನು ಅಮೆರಿಕದೊಂದಿಗೆ 51 ನೇ ರಾಜ್ಯವನ್ನಾಗಿ ಮಾಡುವ ಪ್ರಸ್ತಾಪ ಮುಂದಿಟ್ಟಿದ್ದಾರೆ. 2017-2021ರ ಮೊದಲ ಅವಧಿಯಲ್ಲಿ ಟ್ರೂಡೊ ಅಮೆರಿಕದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರಲಿಲ್ಲ. ಬಳಿಕ ನವೆಂಬರ್ 5 ರ ಚುನಾವಣಾ ವಿಜಯದ ನಂತರ ಟ್ರುಡೊ ಅವರನ್ನು ಭೇಟಿಯಾದಾಗಿನಿಂದ ಕೆನಡಾವನ್ನು ಅಮೆರಿಕದ 51 ನೇ ರಾಜ್ಯವನ್ನಾಗಿ ಮಾಡುವ ಆಲೋಚನೆ ಟ್ರಂಪ್ ಅವರಲ್ಲಿತ್ತು. ಈ ಬಗ್ಗೆ ಆಗಾಗ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರಂಪ್ ಪೋಸ್ಟ್ ಕೂಡ ಮಾಡುತ್ತಿದ್ದರು. ಇದೀಗ ಅಂತಹುದೇ ಮತ್ತೊಂದು ಟ್ವೀಟ್ ಮಾಡಿದ್ದಾರೆ. “ಕೆನಡಾದಲ್ಲಿ ಅನೇಕ ಜನರು ಕೆನಡಾವನ್ನು ಅಮೆರಿಕದೊಂದಿಗೆ ವಿಲೀನ ಮಾಡಿ ಅದನ್ನು ಅಮೆರಿಕದ 51 ನೇ ರಾಜ್ಯವನ್ನಾಗಿ ಮಾಡಲು ಇಷ್ಟಪಡುತ್ತಾರೆ. ಕೆನಡಾ ವಿಲೀನವಾದರೆ ಅದಕ್ಕೆ ಅಗತ್ಯವಿರುವ ಬೃಹತ್ ವ್ಯಾಪಾರ ಕೊರತೆಗಳು ಮತ್ತು…

Read More

ಧಾರವಾಡ: ರಾಜ್ಯ ಸರಕಾರ ಬಸ್ ದರ ಏರಿಕೆ ಹಿನ್ನೆಲೆಯಲ್ಲಿ ದರ ಏರಿಕೆ ಖಂಡಿಸಿ ಧಾರವಾಡದಲ್ಲಿ ಎಬಿವಿಪಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತ ಪಡಿಸಿದರು. ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು. https://ainlivenews.com/do-you-know-how-many-times-you-can-change-your-name-and-address-in-aadhaar-new-rules/ ಬಸ್ ದರ ಏರಿಕೆ ಹಿಂಪಡೆಯುವಂತೆ ಆಗ್ರಹ ಮಾಡಿದರು. ಬಡ ಮಧ್ಯಮ ವರ್ಗದ ಜನರಿಗೆ ಹೊರೆಯಾಗಿದೆ ಹೀಗಾಗಿ ಸರ್ಕಾರ ಬಸ್ ದರ ಇಳಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು..

Read More

ಸಚಿವ ಸಂಪುಟ ಸಭೆಯನ್ನು ಫೆಬ್ರವರಿ 15ರಂದು ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಹೇಳಿದರು. ಚಾಮರಾಜನಗರದ ಜಿಲ್ಲಾ ಪಂಚಾಯತ್ ಕೆಡಿಪಿ ಸಭಾಂಗಣದಲ್ಲಿಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಚಿವ ಸಂಪುಟ ಸಂಬಂಧ ಪೂರ್ವಭಾವಿ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಜಿಲ್ಲಾ ಉಸ್ತುವಾರಿ ಸಚಿವರು ಈ ವಿಷಯ ತಿಳಿಸಿದರು. ಈ ಮೊದಲು ಫೆಬ್ರವರಿ 13ರಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸಲು ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ 13, 14ರಂದು ಬೆಂಗಳೂರಿನಲ್ಲಿ ಗ್ಲೋಬಲ್ ಇನ್ವೆಸ್ಟ್ ರ್ ಮೀಟ್ ಇರುವುದರಿಂದ ಸಚಿವ ಸಂಪುಟ ಸಭೆಯನ್ನು ಫೆಬ್ರವರಿ 15ಕ್ಕೆ ನಿಗದಿ ಮಾಡಲಾಗಿದೆ ಎಂದರು. https://ainlivenews.com/if-these-documents-are-enough-you-can-earn-up-to-rs-60000-every-month/ ಸಚಿವ ಸಂಪುಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಂದು ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಲಾಗಿದೆ. ಇಲಾಖಾವಾರು ಅಧಿಕಾರಿಗಳು ಅಭಿವೃದ್ದಿ ಕೆಲಸಗಳ ಸಂಬಂಧ ಮಾಹಿತಿ ವಿವರಗಳನ್ನು ನೀಡಿದ್ದಾರೆ. ಈ ಕುರಿತು ಸಾಧಕ ಬಾಧಕಗಳ…

Read More