ಖ್ಯಾತ ನಟಿ ತ್ರಿಷಾ ರಾಜಕಾರಣಿಯೊಬ್ಬರ ಜೊತೆ ಮಲಗಲು 25 ಲಕ್ಷ ರೂಪಾಯಿ ಪಡೆದುಕೊಂಡಿದ್ದರು ಎಂದು ಇತ್ತೀಚೆಗೆ ರಾಜಕೀಯ ನಾಯಕನೊಬ್ಬ ಆರೋಪ ಮಾಡಿದ್ದ. ಈ ಹೇಳಿಕೆ ತಮಿಳುನಾಡಿನಲ್ಲಿ ದೊಡ್ಡ ಸಂಚಲನ ಮೂಡಿಸಿತ್ತು. ಇದರ ಬೆನ್ನಲ್ಲೇ ಮತ್ತೊಬ್ಬ ನಟಿಯ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ಈ ಬಾರಿ ತಮಿಳುನಾಡು ಸಿಎಂ ಸ್ಟಾಲಿನ್ ಪುತ್ರ ಹಾಗೂ ಸಚಿವ ಉದಯನಿಧಿ ಹೆಸರು ಕೇಳಿ ಬಂದಿದೆ. ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್, ಯೂಟ್ಯೂಬರ್ ಹಾಗೂ ಪತ್ರಕರ್ತ ಸುವುಕ್ಕು ಶಂಕರ್ ಇತ್ತೀಚೆಗೆ ಹೇಳಿಕೆಯೊಂದು ದೊಡ್ಡ ಮಟ್ಟಿಗೆ ಸದ್ದು ಮಾಡುತ್ತಿದೆ. ತಮ್ಮ ಯುಟ್ಯೂಬರ್ ನಲ್ಲಿ ಸುವುಕ್ಕು ಶಂಕರ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು ಈ ವೀಡಿಯೋ ತುಣುಕೊಂದು ತಮಿಳುನಾಡಿನಲ್ಲಿ ವಿವಾದದ ಕಿಡಿ ಹೊತ್ತಿಸಿದೆ. ಸದಾ ತಮ್ಮ ಯೂಟ್ಯೂಬ್ ಮೂಲಕ ಸೆಲೆಬ್ರಿಟಿಗಳು ಹಾಗೂ ರಾಜಕೀಯ ನಾಯಕರನ್ನು ಟೀಕಿಸುವ ಶಂಕರ್, ಇದೀಗ ನಟಿ ನಿವೇತಾ ಪೇತುರಾಜ್ ಮತ್ತು ಉದಯನಿಧಿ ಬಗ್ಗೆ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಶಂಕರ್ ಆರೋಪಕ್ಕೆ ನಿವೇತಾ ತಿರುಗೇಟು ನೀಡಿದ್ದಾರೆ. ಉದಯನಿಧಿ ಸ್ಟಾಲಿನ್ ಅವರು ನಟಿ…
Author: Author AIN
ಜಾಮ್ ನಗರದಲ್ಲಿ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾಣಿ ಮಗನ ಮದುವೆ ಪೂರ್ವ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದಿದೆ. ಕಾರ್ಯಕ್ರಮದಲ್ಲಿ ದೇಶ, ವಿದೇಶದ ಸೆಲೆಬ್ರಿಟಿಗಳು ಭಾಗಿಯಾಗಿದ್ದ ಸ್ಪರ್ಗವೇ ಧರೆಗಿಳಿದಿದೆಯೆನೋ ಅನ್ನೋ ಅಷ್ಟರ ಮಟ್ಟಿಗೆ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ಮೂಡಿ ಬಂದಿದೆ. ಈ ವಿವಾಹದಲ್ಲಿ ಅಂಬಾನಿ ಕುಟುಂಬದವರು ಧರಿಸಿದ್ದ ಸೀರೆ, ಒಡವೆಗಳು ಸಖತ್ ಹೈಲೈಟ್ ಆಗಿದೆ. ಇದೀಗ ಬೆಂಗಳೂರಿನ ಮಹಿಳೆಯೊಬ್ಬರು ಅಂಬಾನಿಯ ಭಾವಿ ಸೊಸೆಗೆ ಸೀರೆ ಉಡಿಸಿ ಬರೋಬ್ಬರಿ 2ಲಕ್ಷ ರೂ ಸಂಭಾವನೆಯನ್ನು ಪಡೆದಿದ್ದಾರೆ ಎನ್ನಲಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ಸ್ ಅವರ ವಿವಾಹ ಪೂರ್ವ ಸಮಾರಂಭ ಮಾರ್ಚ್ 1 ರಿಂದ 3ರ ವರೆಗೆ ಅದ್ಧೂರಿಯಾಗಿ ನಡೆದಿದೆ. ಅಂಬಾನಿಯ ಭಾವಿ ಸೊಸೆ ಸೀರೆಯಲ್ಲಿ ಮಿಂಚಿದ್ದು,ರಾಧಿಕಾಗೆ ಸೀರೆ ಉಡಿಸಿದ ಸ್ಟೈಲಿಸ್ಟ್ಗೆ ಬರೋಬ್ಬರಿ 2 ಲಕ್ಷ ರೂ ಸಂಭಾವಣೆ ನೀಡಲಾಗಿದೆ ಎಂಬ ಸುದ್ದಿ ಕೇಳಿ ಬಂದಿದೆ. ಅಂದಹಾಗೆ ಅಂಬಾನಿಯ ಭಾವಿ ಸೊಸೆಗೆ ಸೀರೆ ಉಡಿಸಿರೋದು ಬೆಂಗಳೂರಿನ…
ಇಸ್ರೇಲ್‍ನ ಗೂಢಚಾರ ಸಂಸ್ಥೆ ಮೊಸಾದ್‍ಗೆ ರಹಸ್ಯ ಮಾಹಿತಿ ಒದಗಿಸುತ್ತಿದ್ದ ಆರೋಪದಲ್ಲಿ 7 ಮಂದಿಯನ್ನು ಬಂಧಿಸಿರುವುದಾಗಿ ಟರ್ಕಿ ಪೊಲೀಸರು ಮಾಹಿತಿ ನೀಡಿದ್ದಾರೆ. ಏಳು ಮಂದಿ ಆರೋಪಿಗಳು ಟರ್ಕಿಯ ಕೆಲವು ಪ್ರಮುಖ ವ್ಯಕ್ತಿಗಳು ಮತ್ತು ಸಂಸ್ಥೆಗಳ ಕುರಿತಾದ ಗೌಪ್ಯ ಮಾಹಿತಿಯನ್ನು ಮೊಸಾದ್‍ಗೆ ರವಾನಿಸುತ್ತಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಕಾರ್ಯಾಚರಣೆ ನಡೆಸಿ ಏಳು ಮಂದಿ ಶಂಕಿತರನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ದೇಶದ ಗಡಿಯೊಳಗೆ ರಾಷ್ಟ್ರದ್ರೋಹಿ ಕೃತ್ಯ ನಡೆಸಲು ನಾವು ಆಸ್ಪದ ನೀಡುವುದಿಲ್ಲ ಎಂದು ಟರ್ಕಿಯ ಆಂತರಿಕ ಇಲಾಖೆ ತಿಳಿಸಿದೆ.
ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ವಿಶ್ವದಾದ್ಯಂತ ಅಭಿಮಾನಿಗಳನ್ನು ಪಡೆದಿರುವ ಬಾಲಿವುಡ್ ಬಾದ್ ಶಾ ಎಂದಿಗೂ ಎಲ್ಲೆ ಮೀರಿ ನಡೆದುಕೊಂಡಿದ್ದೇ ಇಲ್ಲ. ಆದರೆ, ಇತ್ತೀಚೆಗೆ ಅವರು ಮಾತನಾಡಿದ ರೀತಿ ಅನೇಕರಿಗೆ ಇಷ್ಟ ಆಗಿಲ್ಲ. ರಾಮ್ ಚರಣ್ ಅವರನ್ನು ‘ಇಡ್ಲಿ ವಡಾ’ ಎಂದು ಕರೆಯುವ ಮೂಲಕ ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ. ರಾಮ್ ಚರಣ್ ಆಪ್ತ ಬಳಗದವರೇ ಈ ಬಗ್ಗೆ ಅಪಸ್ವರ ಎತ್ತಿದ್ದಾರೆ. ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರ ವಿವಾಹ ಪೂರ್ವ ಕಾರ್ಯಕ್ರಮಕ್ಕೆ ಶಾರುಖ್ ಖಾನ್, ಆಮಿರ್ ಖಾನ್ ಹಾಗೂ ಸಲ್ಮಾನ್ ಖಾನ್ ಆಗಮಿಸಿದ್ದರು. ಇವರು ಒಟ್ಟಾಗಿ ‘ಆರ್ಆರ್ಆರ್’ ಸಿನಿಮಾದ ‘ನಾಟು ನಾಟು..’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಆದರೆ, ಅಂದುಕೊಂಡಂತೆ ಹೆಜ್ಜೆ ಹಾಕೋಕೆ ಸಾಧ್ಯವಾಗಿಲ್ಲ. ಹೀಗಾಗಿ, ಶಾರುಖ್ ಖಾನ್ ರಾಮ್ ಚರಣ್ ಅವರನ್ನು ಕರೆಯಲು ಪ್ರಯತ್ನಿಸಿದರು. ಶಾರುಖ್ ಖಾನ್ ಅವರು ತಮಿಳಿನಲ್ಲಿ ಏನೇನೋ ಮಾತನಾಡಿದಂತೆ ಆಯಕ್ಟ್ ಮಾಡಿ ‘ಇಡ್ಲಿ ವಡಾ ರಾಮ್ ಚರಣ್ ಎಲ್ಲಿದ್ದೀರಿ’ ಎಂದು ಕೂಗಿದ್ದಾರೆ.…
ಸಂಸತ್‍ನಲ್ಲಿ ಮಹಿಳೆಯರಿಗೆ ಮತ್ತು ಅಲ್ಪಸಂಖ್ಯಾತರಿಗೆ ಮೀಸಲಿಟ್ಟಿರುವ ಸ್ಥಾನಗಳಲ್ಲಿ ಮಾಜಿ ಪ್ರಧಾನಿ ಇಮ್ರಾನ್‍ಖಾನ್‍ಗೆ ನಿಷ್ಟರಿರುವ ಸಂಸದರು ಪಾಲು ಪಡೆಯುವಂತಿಲ್ಲ ಎಂದು ಪಾಕಿಸ್ತಾನದ ಚುನಾವಣಾ ಆಯೋಗ ಸೂಚನೆ ನೀಡಿದೆ. ಪಿಎಂಎಲ್-ಎನ್ ಮುಖಂಡ ಶೆಹಬಾಝ್ ಷರೀಫ್ ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಚುನಾವಣಾ ಆಯೋಗ ಈ ನಿರ್ಧಾರ ಪ್ರಕಟಿಸಿದೆ. 336 ಸದಸ್ಯಬಲದ ಪಾಕಿಸ್ತಾನ ಸಂಸತ್‍ನಲ್ಲಿ 70 ಸ್ಥಾನಗಳನ್ನು ಮಹಿಳೆಯರಿಗೆ ಮತ್ತು ಅಲ್ಪಸಂಖ್ಯಾತರಿಗೆ ಮೀಸಲಿರಿಸಲಾಗಿದೆ. ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಗೆದ್ದ ಸ್ಥಾನಗಳ ಅನುಪಾತದಲ್ಲಿ ಮೀಸಲು ಸ್ಥಾನ ದೊರಕಲಿದೆ. ಆದರೆ ಫೆಬ್ರವರಿ 8ರಂದು ಪಾಕಿಸ್ತಾನದಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಇಮ್ರಾನ್‍ಖಾನ್ ಅವರ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ (ಪಿಟಿಐ) ಪಕ್ಷಕ್ಕೆ ಚಿಹ್ನೆ ನಿರಾಕರಿಸಿದ್ದರಿಂದ ಪಕ್ಷದ ಅಭ್ಯರ್ಥಿಗಳು ಪಕ್ಷೇತರರಾಗಿ ಸ್ಪರ್ಧಿಸಿ ಇತರ ಪಕ್ಷಗಳಿಗಿಂತ ಹೆಚ್ಚಿನ (93 ಸ್ಥಾನ) ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರು. ಬಳಿಕ ಸುನ್ನಿ ಇತ್ತೆಹಾದ್ ಕೌನ್ಸಿಲ್(ಎಸ್‍ಐಸಿ) ಪಕ್ಷದ ಜತೆ ಗುರುತಿಸಿಕೊಂಡು ಮೀಸಲು ಸ್ಥಾನಕ್ಕೆ ಹಕ್ಕು ಮಂಡಿಸಿದ್ದರು. `ಪಕ್ಷೇತರ ಅಭ್ಯರ್ಥಿಗಳು ರಾಜಕೀಯ ಪಕ್ಷದ ಜತೆ ಗುರುತಿಸಿಕೊಂಡ ಅಥವಾ…
ಇಂದು ಕೋಟ್ಯಾಂತರ ಮಂದಿ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ಅಕೌಂಟ್ ಹೊಂದಿದ್ದು ದಿನದ 24 ಗಂಟೆಯು ಅದನ್ನು ಬಳಕೆ ಮಾಡುತ್ತಾರೆ. ಆದ್ರೆ ಇತ್ತೀಚೆಗೆ ಸಾಮಾಜಿಕ ಮಾಧ್ಯಮ ದೈತ್ಯ ಫೇಸ್ಬುಕ್ ಭಾರತ ಸೇರಿ ವಿಶ್ವದ್ಯಾಂತ ಸರ್ವರ್ ಡೌನ್ ಆಗಿದ್ದು, ಲಕ್ಷಾಂತರ ಬಳಕೆದಾರರು ತಮ್ಮ ಖಾತೆಗಳನ್ನು ಪ್ರವೇಶಿಸಲು ಸಾಧ್ಯವಾಗದೆ ಪರದಾಡಿದ್ದಾರೆ.. ಪ್ರಪಂಚದಾದ್ಯಂತದ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ಬಳಕೆದಾರರು ತಮ್ಮ ಪ್ರೊಫೈಲ್ಗಳನ್ನು ಲಾಗ್ ಇನ್ ಮಾಡುವಲ್ಲಿ ಮತ್ತು ಪ್ರವೇಶಿಸುವಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಬಳಕೆದಾರರು ತಮ್ಮ ಫೇಸ್ಬುಕ್ ಖಾತೆಗಳನ್ನು ಲಾಗ್ ಇನ್ ಹಾಗೂ ಲಾಗ್ ಔಟ್ ಮಾಡಲು ಸಾಧ್ಯವಾಗದೆ ತೊಂದರೆ ಅನುಭವಿಸಿದ್ದಾರೆ. ಕೆಲವು ವ್ಯಕ್ತಿಗಳು ಸ್ಟೋರಿ ಮತ್ತು ಕಾಮೆಂಟ್ ಗಳನ್ನು ಹಾಕಲು ಸಾಧ್ಯವಾಗದೆ ಸಮಸ್ಯೆ ಎದುರಿಸಿದ್ದಾರೆ. ಮೆಟಾ ಅಭಿವೃದ್ಧಿಪಡಿಸಿದ ಥ್ರೆಡ್ಸ್ ಅಪ್ಲಿಕೇಶನ್ ಸಹ ಸಂಪೂರ್ಣ ಸ್ಥಗಿತವನ್ನ ಅನುಭವಿಸಿದೆ. ಇಂಟರ್ನೆಟ್ ಸೇವಾ ಸ್ಥಗಿತಗಳನ್ನ ಪತ್ತೆಹಚ್ಚುವ ವೆಬ್ಸೈಟ್ ಡೌನ್ಡೆಟೆಕ್ಟರ್’ನಲ್ಲಿನ ವರದಿಗಳು ಸಮಸ್ಯೆಯ ಪ್ರಾರಂಭದ ನಂತ್ರ ಎಲ್ಲಾ ಮೂರು ಪ್ಲಾಟ್ಫಾರ್ಮ್ಗಳಿಗೆ ವೇಗವಾಗಿ ಏರಿತು. ವ್ಯಾಪಕ ಬಳಕೆದಾರರ ದೂರುಗಳ ಹೊರತಾಗಿಯೂ, ಮೆಟಾ ಇನ್ನೂ ಸಮಸ್ಯೆಯನ್ನ…
ಕ್ರೇಜಿಸ್ಟಾರ್ ರವಿಚಂದ್ರನ್ ಕೊಪ್ಪಳದ ಕನಕಗಿರಿ ಉತ್ಸವದಲ್ಲಿ ಭಾಗಿಯಾಗಿದ್ದಾರೆ. ವೇದಿಕೆಯ ಮೇಲೆ ರವಿಚಂದ್ರನ್ ಸಾಕಷ್ಟು ಘಟನೆಗಳನ್ನು ಮೆಲುಕು ಹಾಕಿದ್ದಾರೆ. ತಾವು ಕಷ್ಟದಲ್ಲಿದ್ದ ಸಂದರ್ಭವನ್ನು ನೆನೆದು ರವಿಚಂದ್ರನ್ ಭಾವುಕರಾಗಿದ್ದಾರೆ. ಅಲ್ಲದೆ 80ರ ದಶಕದಲ್ಲೇ ಸೂಪರ್ಡೂಪರ್ ಹಿಟ್ ಆದ ‘ಪ್ರೇಮಲೋಕ’ ಸಿನಿಮಾದ ಮುಂದುವರಿದ ಭಾಗದ ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭ ಮಾಡುವುದಾಗಿ ತಿಳಿಸಿದರು. ತಮ್ಮ ಸಿನಿ ಜರ್ನಿಯ ಕುರಿತು ಮಾತನಾಡಿದ ಕ್ರೇಜಿಸ್ಟಾರ್ ‘1886ರಲ್ಲಿ ನನ್ನ ವೇಗವನ್ನು ತಡೆಯಲು ಆಗ್ತಿರಲಿಲ್ಲ. 86ರಲ್ಲಿ ಪ್ರೇಮಲೋಕ ಪ್ರಾರಂಭಿಸಿ, 87ರಲ್ಲಿ ಮುಗಿಸಿದೆ. ಇದರ ಹಿಂದೆಯೇ ಶಾಂತಿ-ಕ್ರಾಂತಿ ಮಾಡಿದೆ. ನಾಲ್ಕು ಭಾಷೆಯಲ್ಲಿ ರಿಲೀಸ್ ಮಾಡಿದ ಈ ಚಿತ್ರಕ್ಕಾಗಿ 10 ದಿನಗಳ ಚಿತ್ರೀಕರಣ ಮುಗಿಸಿದೆ. ಯಾಕೋ ಮಧ್ಯೆದಲ್ಲಿ ಅನಿಸಿತು ಇದು ಕೈತಪ್ತಿದೆ, ಸರಿಹೋಗುತ್ತಿಲ್ಲ ಎಂದು ನನ್ನ ತಂದೆಗೆ ತಿಳಿಸಿದೆ. ಆಗ ಅವರು ಯಾವುದೇ ಕಾರಣಕ್ಕೂ ನಿಲ್ಲಿಸಬೇಡ, ಮುಂದುವರೆಸು’ ಎಂದರು. ‘ಜನರಿಗೆ ಮೋಸ ಮಾಡಬಾರದು. ಸಿನಿಮಾ ಶುರು ಮಾಡಿದ್ಯಾ, ಮುಗಿಸು. ನಿನ್ನ ನಂಬಿ ರಜನಿಕಾಂತ್, ನಾಗುರ್ಜನ್ ಡೇಟ್ ಕೊಟ್ಟಿದ್ದಾರೆ. ಯಾವುದೇ ಕಾರಣಕ್ಕೂ ಇಟ್ಟ ಹೆಜ್ಜೆ ಹಿಂದೆ ಇಡಬೇಡ’…
ಬಾಲಿವುಡ್ ಬ್ಯೂಟಿಸ್ ಮಮ್ಮಿಸ್ ಆಗ್ತಿದ್ದಾರೆ. ಒಬ್ಬರ ಹಿಂದೊಬ್ಬರಂತೆ ನಟಿ ಮಣಿಯರು ಗುಡ್ ನ್ಯೂಸ್ ಕೊಡ್ತಿದ್ದಾರೆ. ಅನುಷ್ಕಾ ಗಂಡು ಮಗುವಿಗೆ ಜನ್ಮ ನೀಡಿದ್ದು ನಟಿ ದೀಪಿಕಾ ಪಡುಕೋಣೆ ಸದ್ಯದಲ್ಲೇ ಹೊಸ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಈ ಮಧ್ಯೆ ನಟಿ ಕತ್ರಿನಾ ಕೈಫ್ ಪ್ರೆಗ್ನೆಂಟ್ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇತ್ತೀಚೆಗೆ ಕತ್ರಿನಾ ಕೈಫ್ ಶೇರ್ ಮಾಡಿರುವ ಫೋಟೋಗಳಲ್ಲಿ ತಮ್ಮ ಹೊಟ್ಟೆಯನ್ನು ದುಪ್ಪಟ್ಟಾದಿಂದ ಮರೆಮಚಿದ್ದಾರೆ. ಈ ಲುಕ್ ಎಲ್ಲರ ಗಮನ ಸೆಳೆಯುತ್ತಿದ್ದಂತೆ ಕತ್ರಿನಾ, ವಿಕ್ಕಿ ದಂಪತಿ ಪೋಷಕರಾಗುತ್ತಿದ್ದಾರೆ ಎಂದೇ ಹೇಳಲಾಗುತ್ತಿದೆ. ಆದ್ರೆ ಈ ಬಗ್ಗೆ ಕತ್ರಿನಾ ಅಥವಾ ವಿಕ್ಕಿ ಯಾವುದೇ ಕನ್ಫಾರ್ಮೇಷನ್ ನೀಡಿಲ್ಲ. ಕತ್ರಿನಾ ಹಾಗೂ ವಿಕ್ಕಿ ಕೌಶಲ್ ಇತ್ತೀಚೆಗೆ ಅಂಬಾನಿ ಮನೆ ಮಗನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ವಿಕ್ಕಿ, ಪತ್ನಿಯನ್ನು ಜೋಪಾನ ಮಾಡ್ತಿರೋದನ್ನು ನೋಡಿ ಗುಡ್ ನ್ಯೂಸ್ ಇದೆ ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ. ಅದಷ್ಟೇ ಅಲ್ಲ, ಪ್ರೆಗ್ನೆಂಟ್ ಕಳೆ ಕತ್ರಿನಾ ಮುಖದಲ್ಲಿ ಕಾಣ್ತಿದೆ. ಗ್ಲೋ ಆಗಿದ್ದಾರೆ ಅಂತ ಫ್ಯಾನ್ಸ್…
ಟ್ವಿಟರ್ (ಎಕ್ಸ್ ) ಮಾಲಿಕ ಎಲೋನ್ ಮಸ್ಕ್ ಅವರನ್ನು ಹಿಂದಿಕ್ಕಿ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಜೆಫ್ ಬೆಜೋಸ್ ತಮ್ಮ ಸ್ಥಾನವನ್ನು ಮರಳಿ ಪಡೆದಿದ್ದಾರೆ. ಬ್ಲೂಮ್ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಅಮೆಜಾನ್ ಸಂಸ್ಥಾಪಕರ ಮೌಲ್ಯವು ಈಗ 200 ಬಿಲಿಯನ್ ಡಾಲರ್ ಆಗಿದ್ದು, ಮಸ್ಕ್ ಅವರು 198 ಬಿಲಿಯನ್ ಡಾಲರ್ ಹೊಂದಿದ್ದಾರೆ. ವಿಶ್ವದ ಅತಿದೊಡ್ಡ ಸಂಸ್ಥೆಗಳಲ್ಲಿ ಒಂದನ್ನು ನಡೆಸುತ್ತಿರುವ ಎಲ್ವಿಎಂಎಚ್ ಮುಖ್ಯಸ್ಥ ಬರ್ನಾರ್ಡ್ ಅರ್ನಾಲ್ಟ್ ಅವರನ್ನು ಹಿಂದಿಕ್ಕಿ ಮೇ 2023 ರಲ್ಲಿ ಮಸ್ಕ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಬಿರುದನ್ನು ಪಡೆದರು. 2021 ರ ನಂತರ ಬೆಜೋಸ್ ಮೊದಲ ಬಾರಿಗೆ ಅಗ್ರಸ್ಥಾನಕ್ಕೆ ಮರಳಿದ್ದಾರೆ. ಫೆಬ್ರವರಿ 2024 ರ ಫಾರ್ಮ್ 4 ಫೈಲಿಂಗ್ ಪ್ರಕಾರ, ಅವರು ಪ್ರಸ್ತುತ ವಿಶ್ವದ ಅತಿದೊಡ್ಡ ಆನ್ಲೈನ್ ಚಿಲ್ಲರೆ ವ್ಯಾಪಾರಿ ಅಮೆಜಾನ್ನಲ್ಲಿ ಸುಮಾರು ಒಂಬತ್ತು ಪ್ರತಿಶತದಷ್ಟು ಹೊಂದಿದ್ದಾರೆ. ಇನ್ನು ಮುಂದೆ ಅಮೆಜಾನ್ ಅನ್ನು ನಡೆಸದಿದ್ದರೂ, ಇ-ಕಾಮರ್ಸ್ ದೈತ್ಯನ ಹೆಚ್ಚುತ್ತಿರುವ ಷೇರು ಬೆಲೆಯಿಂದ ಅವರು ಪ್ರಯೋಜನ ಪಡೆದಿದ್ದಾರೆ. ಏಪ್ರಿಲ್ 2017 ರಲ್ಲಿ…
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಆರಂಭವಾಗಿ ಎರಡು ವರ್ಷ ಕಳೆದಿದೆ. ಈ ಮಧ್ಯೆ ಉಕ್ರೇನ್ ಹೈಟೆಕ್ ಸಮುದ್ರ ಡ್ರೋನ್ ಗಳನ್ನು ಬಳಸಿಕೊಂಡು ರಷ್ಯಾದ ಮತ್ತೊಂದು ಯುದ್ಧನೌಕೆಯನ್ನು ಕಪ್ಪು ಸಮುದ್ರದಲ್ಲಿ ಮುಳುಗಿಸಲಾಗಿದೆ ಎಂದು ಹೇಳಿಕೊಂಡಿದೆ. ವಿಶೇಷ ಕಾರ್ಯಾಚರಣೆ ಘಟಕವು ದೊಡ್ಡ ಗಸ್ತು ಹಡಗು ಸೆರ್ಗೆಯ್ ಕೊಟೊವ್ ಅನ್ನು ರಾತ್ರೋರಾತ್ರಿ ನಾಶಪಡಿಸಿದೆ ಎಂದು ಉಕ್ರೇನ್ ಮಿಲಿಟರಿ ಗುಪ್ತಚರ ಸಂಸ್ಥೆ ತಿಳಿಸಿದೆ. 2021 ರಲ್ಲಿ ನಿಯೋಜಿಸಲಾಗಿದ್ದ ಈ ಹಡಗನ್ನು ಕೆರ್ಚ್ ಜಲಸಂಧಿಯ ಬಳಿ ಡ್ರೋನ್ ದಾಳಿಯಿಂದ ನಾಶವಾಯಿತು ಎಂದು ಉಕ್ರೇನ್ ಹೇಳಿದೆ. ಸುದ್ದಿ ಸಂಸ್ಥೆ ಎಪಿಯ ವರದಿಯ ಪ್ರಕಾರ, ಅಂತಹ ಆಧುನಿಕ ಹಡಗು ಮುಳುಗಿರುವುದು ರಷ್ಯಾಕ್ಕೆ ಗಮನಾರ್ಹ ನಷ್ಟ ಮತ್ತು ನಾಚಿಕೆಗೇಡಿನ ಸಂಗತಿಯಾಗಿದೆ. ಉಕ್ರೇನ್ ಮೇಲಿನ ರಷ್ಯಾದ ಕ್ಷಿಪಣಿ ದಾಳಿಗಳಲ್ಲಿ ಸುಮಾರು 20% ಕಪ್ಪು ಸಮುದ್ರದಿಂದ ಉಕ್ರೇನ್ ನಿಂದ ಉಡಾಯಿಸಲ್ಪಟ್ಟಿವೆ ಮತ್ತು ಯಶಸ್ವಿ ಉಕ್ರೇನ್ ದಾಳಿಗಳು ರಷ್ಯಾದ ಸಾಮರ್ಥ್ಯವನ್ನು ಹಾನಿಗೊಳಿಸಿವೆ ಎಂದು ಉಕ್ರೇನ್ ಅಧಿಕಾರಿಗಳು ಹೇಳುತ್ತಾರೆ. ಕಳೆದ ಎರಡು ವರ್ಷಗಳಲ್ಲಿ ಮಾಸ್ಕೋದ ನೌಕಾ ಸಾಮರ್ಥ್ಯ…