ಆಸ್ಟ್ರೇಲಿಯನ್ ಮೂಲದ ಅಮೇರಿಕನ್ ಉದ್ಯಮಿ, ಹೂಡಿಕೆದಾರ ಮತ್ತು ಮಾಧ್ಯಮ ಮಾಲೀಕ 92ನೇ ವಯಸ್ಸಿನ ಮೊಗಲ್ ರೂಪರ್ಟ್ ಮುರ್ಡೋಕ್ ಅವರು ನಿವೃತ್ತ ಆಣ್ವಿಕ ಜೀವಶಾಸ್ತ್ರಜ್ಞೆ 67 ವರ್ಷದ ಎಲೆನಾ ಝುಕೋವಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮುರ್ಡೋಕ್ ಅವರು ಜೂನ್ 1 ರಂದು ಕ್ಯಾಲಿಫೋರ್ನಿಯಾದ ವೈನ್ಯಾರ್ಡ್ ಮತ್ತು ಎಸ್ಟೇಟ್ ಮೊರಾಗದಲ್ಲಿ 67 ವರ್ಷದ ಝುಕೋವಾ ಅವರನ್ನು ವಿವಾಹವಾಗಲಿದ್ದಾರೆ. ಮುರ್ಡೋಕ್ ಅವರು ತನ್ನ ಮೂರನೇ ಪತ್ನಿ ವೆಂಡಿ ಡೆಂಗ್ ಮೂಲಕ ಝುಕೋವಾರನ್ನು ಭೇಟಿಯಾಗಿ ಪರಿಚಯವಾಗಿದ್ದರು. ಇದೀಗ ಇಬ್ಬರು ಹಸೆಮಣೆ ಏರಲು ಸಜ್ಜಾಗಿದ್ದಾರೆ. ಮುರ್ಡೋಕ್ ಅವರು ಕಳೆದ ಚಳಿಗಾಲದಲ್ಲಿ ನಿವೃತ್ತ ದಂತ ನೈರ್ಮಲ್ಯ ತಜ್ಞೆ ಆನ್ ಲೆಸ್ಲಿ ಸ್ಮಿತ್ ಅವರೊಂದಿಗೆ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದರು. ಆದರೆ ಅದು ಕೆಲವೇ ವಾರಗಳಲ್ಲಿ ಮುರಿದುಬಿತ್ತು. ಮುರ್ಡೋಕ್ ಅವರಿಗೆ ಇದು ಐದನೇ ಮದುವೆಯಾಗಿದೆ. ಈ ಹಿಂದೆ 2016 ರಲ್ಲಿ ಮಾಡೆಲ್ ಜೆರ್ರಿ ಹಾಲ್ ಅವರನ್ನು ವಿವಾಹವಾಗಿ 2022 ರವರೆಗೆ ಸಂಬಂಧ ಹೊಂದಿದ್ದರು. ಬಳಿಕ ಇಬ್ಬರು ದೂರ ದೂರವಾಗಿದ್ದು ಇದೀಗ 5ನೇ ಮದುವೆಗೆ ಸಿದ್ದವಾಗಿದ್ದಾರೆ.
Author: Author AIN
ಸದಾ ವಿವಾದಗಳ ಮೂಲಕವೇ ಸುದ್ದಿಯಾಗುವ ವಿವಾದಿತ ನಟಿ ರಾಖಿ ಸಾವಂತ್ ಮತ್ತೆ ತಮ್ಮ ಬಾಯನ್ನು ಹರಿ ಬಿಟ್ಟಿದ್ದಾರೆ. ಇತ್ತೀಚೆಗೆ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಅವರ ಮದುವೆಯ ಮುನ್ನ ದಿನದ ಕಾರ್ಯಕ್ರಮಗಳು ಅದ್ದೂರಿಯಾಗಿ ನೆರವೇರಿದೆ. ಈ ಬೆನ್ನಲ್ಲೇ ಅನಂತ್ ಅಂಬಾನಿ ತೂಕದ ವಿಚಾರವಾಗಿ ರಾಖಿ ಟೀಕೆ ಮಾಡಿದ್ದು, ಮುಖೇಶ್ ಅಂಬಾನಿಗೆ ಬಿಗ್ ಆಫರ್ ಕೂಡ ನೀಡಿದ್ದಾರೆ. ಅನಂತ್ ಅಂಬಾನಿ ತೂಕದ ಮೇಲೆ ರಾಖಿ ಸಾವಂತ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ‘ಡಿಯರ್ ಅಂಬಾನಿ ಅವರೇ ನಿಮ್ಮ ಮಗ ಅನಂತ್ ಅಂಬಾನಿ ಚೆನ್ನಾಗಿ ತೂಕ ಬೆಳೆಸಿಕೊಂಡಿದ್ದಾರೆ. ಆತನನ್ನು ನನ್ನ ಬಳಿ 5 ದಿನ ಕಳುಹಿಸಿ. ಸಣ್ಣಗೆ ಮಾಡಿ ಕಳುಹಿಸುತ್ತೇನೆ ಎಂದಿದ್ದಾರೆ. ಸುಮ್ಮನೆ ಕಳುಹಿಸಿಬೇಡಿ, ಸ್ವಲ್ಪ ಹಣ ಕೊಟ್ಟು ನನ್ನನ್ನು ಕೊಂಡುಕೊಳ್ಳಿ, ಆತನೊಂದಿಗೆ ಕಸರತ್ತುಗಳನ್ನು ಮಾಡುವುದಲ್ಲದೆ, ತೃಪ್ತಿ ಮಾಡಿ ಕಳುಹಿಸುತ್ತೇನೆ. ಅನಂತ್ ಅಂಬಾನಿಯನ್ನು ಜೀರೋ ಸೈಜ್ ಮಾಡಿ ನಿಮ್ಮ ಬಳಿ ಕಳುಹಿಸುವ ಜವಾಬ್ದಾರಿ ನನ್ನದು ಎಂದು ಮುಖೇಶ್ ಅಂಬಾನಿಗೆ ರಾಖಿ ಸಾವಂತ್ ಆಫರ್ ನೀಡಿದ್ದಾರೆ.…
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಕಳೆದ ವರ್ಷ ರಾಜಕಾರಣಿ ರಾಘವ್ ಚಡ್ಡಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ಆರು ತಿಂಗಳೊಳಗೆ ಒಂದು ವರ್ಷದಲ್ಲೇ ಪರಿಣಿತಿ ಗುಡ್ ನ್ಯೂಸ್ ಕೊಡಲು ಮುಂದಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಪರಿಣಿತಿ ಚೋಪ್ರಾ ಗರ್ಭಿಣಿಯಾಗಿದ್ದು ನಟಿಯ ಬೇಬಿ ಬಂಪ್ ಲುಕ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯಾಮಿ ಗೌತಮಿ, ದೀಪಿಕಾ ಪಡುಕೋಣೆ, ವರುಣ್ ಧವನ್ ಪತ್ನಿ ನತಾಶಾ ಪ್ರೆಗ್ನೆನ್ಸಿ ಬಗ್ಗೆ ಗುಡ್ ನ್ಯೂಸ್ ಕೊಟ್ಟಿದ್ದರು. ಅಲ್ಲದೆ ನಟಿ ಕತ್ರಿನಾ ಕೈಫ್ ಕೂಡ ಗರ್ಭಿಣಿ ಎಂದು ಹೇಳಲಾಗುತ್ತಿದೆ. ಇದೀಗ ನಟಿ ಪರಿಣಿತಿ ಕೂಡ ಗರ್ಭಿಣಿ ಎನ್ನಲಾಗುತ್ತಿದ್ದು ಸದ್ಯ ನಟಿಯ ಪ್ರೆಗ್ನೆನ್ಸಿ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ನಟಿ ವಿಮಾನ ನಿಲ್ದಾಣಕ್ಕೆ ಎಂಟ್ರಿ ಕೊಟ್ಟಾಗ ಬಿಳಿ ಶರ್ಟ್ಸ್ ಮತ್ತು ಶಾಟ್ಸ್ ಧರಿಸಿದ್ದರು. ಡ್ರೆಸ್ ತುಂಬಾ ಲೂಸ್ ಆಗಿತ್ತು. ನಿಧಾನವಾಗಿ ನಡೆಯುತ್ತಾ ಪಾಪರಾಜಿಗಳಿಗೆ ನಟಿ ಸ್ಮೈಲ್ ಮಾಡಿದ್ದರು. ಪರಿಣಿತಿ ಲುಕ್ ನೋಡಿದ್ರೆ ಪ್ರೆಗ್ನೆಂಟ್ ಎಂದೇ ಹೇಳಲಾಗುತ್ತಿದೆ. ನಟಿ ಪ್ರೆಗ್ನೆಂಟ್…
ಒಂದು ಕಾಲದಲ್ಲಿ ಬಾಲಿವುಡ್ ಚಿತ್ರರಂಗವನ್ನೇ ಆಳುತ್ತಿದ್ದ ನಟ ಅಮಿರ್ ಖಾನ್ ಇತ್ತೀಚೆಗೆ ಸೈಲೆಂಟ್ ಆಗಿದ್ದಾರೆ. ಅವರ ಯಾವುದೇ ಸಿನಿಮಾಗಳು ಹೇಳಿಕೊಳ್ಳುವ ಮಟ್ಟಿಗೆ ಸದ್ದು ಮಾಡುತ್ತಿಲ್ಲ. ಸಿನಿಮಾಗೆ ಹಾಕಿದ ಬಂಡವಾಳವೆಲ್ಲಾ ನೀರಿನಲ್ಲಿ ಹೋಮ ಮಾಡಿದಂತಿದೆ. ಲಾಲ್ ಸಿಂಗ್ ಚಡ್ಡಾ ಸಿನಿಮಾದ ಸೋಲಿನಿಂದ ಕಂಗಾಲಾಗಿದ್ ಆಮಿರ್ ಖಾನ್ ಕೊಂಚ ದಿನಗಳ ಕಾಲ ಚಿತ್ರರಂಗದಿಂದ ದೂರವೇ ಉಳಿದಿದ್ದರು. ಇದೀಗ ‘ಸಿತಾರೆ ಜಮೀನ್ ಪರ್’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇದರ ನಡುವೆ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರಲು ಸೋಶಿಯಲ್ ಮೀಡಿಯಾ ಮೂಲಕ ಪ್ರಶ್ನೋತ್ತರ ನಡೆಸಿದ್ದಾರೆ. ಈ ವೇಳೆ ಅವರಿಗೆ ಅನೇಕ ಪ್ರಶ್ನೆಗಳು ಎದುರಾಗಿವೆ. ಕೆಲವರು ಟ್ರೋಲ್ ಮಾಡಿದ್ದಾರೆ. ಡ್ರಗ್ಸ್ ಬಗ್ಗೆಯೂ ಆಮಿರ್ ಖಾನ್ಗೆ ಪ್ರಶ್ನೆ ಕೇಳಲಾಗಿದ್ದು, ಅದಕ್ಕೆ ಆಮಿರ್ ಖಾನ್ ಉತ್ತರ ನೀಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಆಮಿರ್ ಖಾನ್ ಅವರು ಲೈವ್ ಬಂದಿದ್ದಾರೆ. ಈ ವೇಳೆ ಅಭಿಮಾನಿಗಳು ಮಾಡಿದ ಕಮೆಂಟ್ಗಳಿಗೆ ಅವರು ಉತ್ತರಿಸಿದ್ದಾರೆ. ಲೈವ್ನಲ್ಲಿ ಮಾತನಾಡುವಾಗ ಆಮಿರ್ ಖಾನ್ ಅವರ ಮುಖ ಬಾಡಿದ ಹಾಗೆ ಕಾಣಿಸಿದೆ. ಇದನ್ನು ಗಮನಿಸಿದ ವ್ಯಕ್ತಿಯೋರ್ವ ‘ಸರ್, ನೀವು ಡ್ರಗ್ಸ್…
ಬಾಲಿವುಡ್ ಚಿತ್ರರಂಗದ ಖ್ಯಾತ ನಿರ್ದೇಶಕ, ನಿರ್ಮಪಕ, ನಿರೂಪಕ ಹಾಗೂ ನಟ ಕರಣ್ ಜೋಹರ್ ಎಲ್ಲರಿಗೂ ಚಿರಪರಿಚಿತ. ಯಾವುದೇ ಸೆಲೆಬ್ರಿಟಿಗಳ ವಿವಾಹವಾದರೂ ಕರಣ್ ಜೋಹರ್ ಇದ್ದೇ ಇರುತ್ತಾರೆ. ಅಷ್ಟರ ಮಟ್ಟಿಗೆ ಕರಣ್ ಎಲ್ಲರೊಂದಿಗೆ ಆಪ್ತತೆ ಹೊಂದಿದ್ದಾರೆ. ಆದರೆ ಇತ್ತೀಚೆಗೆ ನಡೆದ ಅನಂತ್ ಅಂಬಾನಿ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಕರಣ್ ಎಲ್ಲಿಯೂ ಕಾಣದೆ ಅಚ್ಚರಿ ಮೂಡಿಸಿದ್ರು. ಅಷ್ಟಕ್ಕೂ ಕರಣ್ ಅನಂತ್ ಅಂಬಾನಿ ಮದುವೆಯಲ್ಲಿ ಭಾಗಿಯಾಗದೆ ಇರಲು ಕಾರಣವೇನು ಗೊತ್ತಾ? ಕರಣ್ ಜೋಹರ್ಗೆ ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಪ್ರೀ ವೆಡ್ಡಿಂಗ್ಗೆ ಆಹ್ವಾನ ನೀಡಲಾಗಿತ್ತು. ಕರಣ್ ಜೋಹರ್ ಸಹ ಉತ್ಸುಕತೆಯಿಂದ ಪ್ರೀ ವೆಡ್ಡಿಂಗ್ಗೆ ಹಾಜರಾಗಲು ತಯಾರಿ ಆರಂಭಿಸಿದ್ದರು. ಪ್ರೀ ವೆಡ್ಡಿಂಗ್ಗಾಗಿ ವಿಶೇಷ ಧಿರಿಸುಗಳನ್ನು ಗೆಳೆಯ ಮನೀಷ್ ಮಲ್ಹೋತ್ರಾ ಅವರಿಂದ ಡಿಸೈನ್ ಮಾಡಿಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಕರಣ್ ಜೋಹರ್ಗೆ ಅನಾರೋಗ್ಯ ಉಂಟಾದ ಕಾರಣ ಅವರು ಪ್ರೀ ವೆಡ್ಡಿಂಗ್ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ. ಕರಣ್ ಜೋಹರ್ಗೆ ವೈರಲ್ ಜ್ವರ, ನೆಗಡಿ ಮತ್ತು ಗಂಟಲು ನೋವುಗಳು ಕಾಣಿಸಿಕೊಂಡ ಕಾರಣ,…
ತಮಿಳು ಚಿತ್ರರಂಗದ ಖ್ಯಾತ ನಟ ಅಜಿತ್ ಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅಜಿತ್ ಅವರನ್ನು ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಅಜಿತ್ ಆಸ್ಪತ್ರೆಗೆ ದಾಖಲಾಗಲು ಕಾರಣವೇನು? ಅಜಿತ್ ಗೆ ಎದುರಾದ ಆರೋಗ್ಯ ಸಮಸ್ಯೆ ಏನು ಎಂಬುದು ತಿಳಿದು ಬಂದಿಲ್ಲ. ಅಜಿತ್ ಆಸ್ಪತ್ರೆಗೆ ದಾಖಲಾಗಿರುವ ವಿಷಯವನ್ನು ಅವರ ಆಪ್ತ ಮೂಲಗಳು ಮಾಧ್ಯಮಗಳಿಗೆ ಖಚಿತಪಡಿಸಿವೆ. ಕೆಲವು ಅಭಿಮಾನಿ ಪೇಜ್ಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮಾಹಿತಿಯಂತೆ ಅಜಿತ್ ಅವರು ಸಾಮಾನ್ಯ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಆಸ್ಪತ್ರೆಯ ವೈದ್ಯರಾಗಲಿ, ಅಜಿತ್ ಕುಟುಂಬಸ್ಥರಾಗಲಿ ಯಾವುದೇ ಮಾಹಿತಿ ನೀಡಿಲ್ಲ. ಅಜಿತ್ ಆಸ್ಪತ್ರೆಗೆ ದಾಖಲಾಗಿರುವುದು ನಿಜ ಆದರೆ ಈ ಬಗ್ಗೆ ಯಾವುದೇ ಊಹಾಪೋಹಗಳನ್ನು ಹರಿಬಿಡುವುದು ಬೇಡ, ಆಸ್ಪತ್ರೆಯಿಂದಲೇ ಖಚಿತ ಮಾಹಿತಿ ಹೊರಬೀಳಲಿದೆ ಎಂದು ಅಜಿತ್ರ ಆಪ್ತರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ ಏಕಾಏಕಿ ಅಜಿತ್ ಆಸ್ಪತ್ರೆಗೆ ದಾಖಲಾಗಿರುವುದು ಅವರ ಅಭಿಮಾನಿಗಳಿಗೆ ಆತಂಕ ಮೂಡಿಸಿದೆ.
ಚೀನಾದಲ್ಲಿ ಮತ್ತೆ ಭೂಮಿ ಕಂಪಿಸಿದ್ದು. ಕಳೆದ 48 ಗಂಟೆಗಳಲ್ಲಿ 2 ಭಾರಿ ಭೂಮಿ ಕಂಪಿಸಿದ್ದು ಇದರಿಂದ ವಾಯುವ್ಯ ಚೀನಾ ಭಾಗದಲ್ಲಿ ಆತಂಕ ಹೆಚ್ಚಿದೆ. ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರಈ ಬಗ್ಗೆ ಮಾಹಿತಿ ನೀಡಿದ್ದು ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5 ರಷ್ಟು ದಾಖಲಾಗಿದೆ ಎಂದಿದೆ. ಚೀನಾದ ಕಿಂಗೈ ಎಂಬಲ್ಲಿ ಈ ಭೂಕಂಪನ ಸಂಭವಿಸಿದ್ದು ಅಲ್ಲಿನ ಸಮಯದ ಪ್ರಕಾರ ಗುರುವಾರ ಬೆಳಿಗ್ಗೆ 7.30 ರ ಸಂದರ್ಭದಲ್ಲಿ ಭೂಮಿ ನಡುಗಿದೆ. ಸದ್ಯ ಯಾವುದೇ ಸಾವು ನೋವುಗಳು ಬರದಿಯಾಗಿಲ್ಲ. ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗಿದೆ. ಸಾರ್ವಜನಿಕರೆಲ್ಲರೂ ಸುರಕ್ಷಿತವಾಗಿ ಇರುವಂತೆ ಸೂಚಿಸಲಾಗಿದ್ದು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಖಾರಿಗಳು ತಿಳಿಸಿದ್ದಾರೆ.
ನನ್ನರಸಿ ರಾಧೆ ಹಾಗೂ ಗೌರಿ ಶಂಕರ ಧಾರವಾಹಿಯಲ್ಲಿ ನಟಿಸಿದ್ದ ನಟಿ ಕೌಸ್ತುಭ ಮಣಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆಯೇ ಈ ನಿಶ್ಚಿತಾರ್ಥ ನಡೆದಿದ್ದು ಇದೀಗ ನಿಶ್ಚಿತಾರ್ಥದ ಸುಂದರ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೌಸ್ತುಭ ಮಣಿ ಸಾಫ್ಟ್ ವೇರ್ ಡೆವಲಪರ್ ಸಿದ್ದಾಂತ್ ಸತೀಶ್ ಎಂಬುವವರ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಕೌಸ್ತುಭ ಎಂಗೇಜ್ ಮೆಂಟ್ ಮಾಡಿಕೊಂಡಿರುವ ಸಿದ್ದಾಂತ್ ಸತೀಶ್ ಕೆನಾಡದ ವಿಶ್ವ ವಿದ್ಯಾಲಯದಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಕೌಸ್ತುಭ ಮಣಿ ಮದುವೆಯ ಬಳಿಕ ವಿದೇಶದಲ್ಲಿ ನೆಲೆಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಇತ್ತೀಚೆಗೆ ಕೌಸ್ತುಭ ಮಣಿ ಗೌರಿ ಶಂಕರ್ ಧಾರವಾಹಿಯಿಂದ ಹೊರ ಬಂದಿದ್ದರು. ಸೀರಿಯಲ್ ಆರಂಭವಾದ ಕೆಲವೇ ತಿಂಗಳಲ್ಲಿ ಹೊರ ಬಂದಿದ್ದು ಮದುವೆಯ ಕಾರಣದಿಂದ ಹೊರ ಬಂದಿದ್ದಾಗಿ ನಟಿ ಹೇಳಿಕೊಂಡಿದ್ದಾರೆ. ಕೌಸ್ತುಭ ಮಣಿ ನಟನೆ ಆರಂಭಿಸುವ ಮುನ್ನ ಖಾಸತಿ ಕಂಪನೆಯಲ್ಲಿ ಕೆಲಸ ಮಾಡುತ್ತಿದ್ದರು. ಕೌಸ್ತುಭ ಮಣಿ ಕನ್ನಡದ ಜೊತೆಗೆ ತೆಲುಗು ಸೀರಿಯಲ್ ನಲ್ಲೂ ನಟಿಸಿದ್ದಾರೆ. ನಟಿಯಾಗಬೇಕು ಎಂಬ ಕನಸು,…
ಮಹಾಶಿವರಾತ್ರಿ ಯನ್ನು ಭಾರತದ ಜೊತೆಗೆ ದೇಶ, ವಿದೇಶದಲ್ಲೂ ಆಚರಣೆ ಮಾಡುತ್ತಾರೆ. ಭಾರತದಲ್ಲಿ ಮಹಾಶಿವರಾತ್ರಿಗೆ ಇನ್ನೂ ಕೆಲವೇ ಗಂಟೆಗಳು ಮಾತ್ರವೇ ಭಾಕಿ ಇದೆ. ಇದೀಗ ಈ ಬಾರಿಯ ಮಹಾಶಿವರಾತ್ರಿಯನ್ನು ಬಹಳ ಅದ್ಧೂರಿಯಾಗಿ ನ್ಯೂಯಾರ್ಕ್ನ ಜನರು ಆಚರಿಸಿದ್ದಾರೆ. ಹೀಗಾಗಿ ಸೋಮವಾರ ಸಂಜೆ ನ್ಯೂಯಾರ್ಕ್ನ ಪ್ರಸಿದ್ಧ ಟೈಮ್ಸ್ ಸ್ಕ್ವೇರ್ನಲ್ಲಿ “ಶಿವ” ಮತ್ತು “ಶಂಭೋ” ಗೀತೆಗಳನ್ನು ಪ್ರಸಾರ ಮಾಡಲಾಗಿದೆ. ಜೊತೆಗೆ ಸದ್ಗುರು ಅವರ ಮಹಾಶಿವರಾತ್ರಿ ಕಾರ್ಯಕ್ರಮವನ್ನು ಸಹ ಪ್ರಸಾರ ಮಾಡಲಾಗಿದೆ. ನ್ಯೂಯಾರ್ಕ್ ನಲ್ಲಿ ಶಿವರಾತ್ರಿಯ ವಿಡಿಯೋ ಹಂಚಿಕೊಂಡಿರುವ ಇಶಾ ಫೌಂಡೇಷನ್ ಸಂಸ್ಥಾಪಕ ಜಗ್ಗಿ ವಾಸುದೇವ್ ಸದ್ಗುರು ಅವರು, ‘ನ್ಯೂಯಾರ್ಕ್ ಜನರು ಮಹಾಶಿವರಾತ್ರಿಯನ್ನು ಸ್ವಾಗತಿಸಿದ್ದಾರೆ. ಶಿವನ ಮಹಾರಾತ್ರಿಯ ಮಹತ್ವವನ್ನು ಜಗತ್ತು ಅರಿತುಕೊಳ್ಳುತ್ತಿದೆ. ಇದು ಮಾನವನ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ಪರಿವರ್ತನೆಯ ಅವಕಾಶವಾಗಿದೆ. ನಾವು ಅದನ್ನು ಸಾಕಾರಗೊಳಿಸೋಣ. ಇದು ಆಚರಣೆಯ ರಾತ್ರಿ. ಆಧ್ಯಾತ್ಮಿಕ ಅನುಭವಗಳು ಟೈಮ್ಸ್ ಸ್ಕ್ವೇರ್ ಎಲ್ಲಿಯಾದರೂ ಕಾಣಬಹುದಾಗಿದೆ’ ಎಂದಿದ್ದಾರೆ. ಇನ್ನು ಪ್ರತಿ ವರ್ಷದಂತೆ ಈ ವರ್ಷವೂ ಸಹ ಮಾರ್ಚ್ 8ರ ಸಂಜೆ 6 ರಿಂದ ಮಾರ್ಚ್ 9ರ ಬೆಳಿಗ್ಗೆ…
ಕಳೆದ ಕೆಲವು ದಿನಗಳಿಂದ ನಟಿ ನಯನತಾರಾ ಹಾಗೂ ವಿಘ್ನೇಶ್ ವಿವೋರ್ಸ್ ಸುದ್ದಿ ಜೋರಾಗಿಯೇ ಕೇಳಿ ಬರ್ತಿದೆ. ನಯನತಾರಾ ಹಾಗೂ ಪತಿ ವಿಘ್ನೇಶ್ ಶಿವನ್ ಜೊತೆ ಯಾವುದೂ ಸರಿ ಇಲ್ಲ ಎನ್ನುವ ಸುದ್ದಿ ಹರಿದಾಡುತ್ತಿದೆ. ನಯನತಾರಾ ಅವರು ಪತಿ ವಿಘ್ನೇಶ್ ಶಿವನ್ ಅವರನ್ನು ಇನ್ಸ್ಟಾಗ್ರಾಮ್ನಲ್ಲಿ ಅನ್ಫಾಲೋ ಮಾಡಿದ್ದೇ ಇದಕ್ಕೆ ಕಾರಣ ಆಗಿತ್ತು. ಬಳಿಕ ಮರಳಿ ಅವರು ವಿಘ್ನೇಶ್ ಅವರನ್ನ ಫಾಲೋ ಮಾಡೋಕೆ ಆರಂಭಿಸಿದರು. ಈ ಮಧ್ಯೆ ಅವರು ಇನ್ಸ್ಟಾಗ್ರಾಮ್ ಸ್ಟೇಟಸ್ಗೆ ಹಾಕಿದ ಪೋಸ್ಟ್ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ನಯನತಾರಾ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ‘ಹೌದು, ಕಳೆದು ಹೋಗಿದ್ದೇನೆ’ ಎಂದು ಪೋಸ್ಟ್ ಮಾಡಿದ್ದಾರೆ. ಇದು ವಿಘ್ನೇಶ್ ಹಾಗೂ ನಯನತಾರಾ ಮಧ್ಯೆ ಎಲ್ಲವು ಸರಿ ಎನ್ನುವುದನ್ನು ಚರ್ಚಿಸುವಂತೆ ಮಾಡಿದೆ. ನಯನತಾರಾ ಅವರು ಇತ್ತೀಚೆಗಷ್ಟೇ ಇನ್ಸ್ಟಾಗ್ರಾಮ್ನಲ್ಲಿ ಸ್ಟೇಟಸ್ ಒಂದನ್ನು ಪೋಸ್ಟ್ ಮಾಡಿದ್ದರು. ಇದರಲ್ಲಿ ನಯನತಾರಾ ಹಾಗೂ ವಿಘ್ನೇಶ್ ಒಟ್ಟಿಗೆ ಇರುವ ವಿಡಿಯೋ ಇದಾಗಿತ್ತು. ಕೊಳಲು ವಾದಕರೊಬ್ಬರು ಹಂಚಿಕೊಂಡಿದ್ದ ವಿಡಿಯೋನ ನಯನತಾರಾ ಶೇರ್ ಮಾಡಿಕೊಂಡಿದ್ದರು. ಈ ಮೂಲಕ…