ಬಾಲಿವುಡ್ ಸೆಲೆಬ್ರಿಟಿಗಳು ಎಲ್ಲೇ ಹೋದರೂ ಪಾಪರಾಜಿಗಳು ಮುತ್ತಿಕೊಳ್ಳುತ್ತಾರೆ. ಅವರ ಫೋಟೋಗಳನ್ನು ತೆಗೆದು ಶೇರ್ ಮಾಡುತ್ತಾರೆ. ಸೆಲೆಬ್ರಿಟಿಗಳು ಯಾವಾಗ ಎಲ್ಲಿ ಹೋಗುತ್ತಾರೆ ಅನ್ನೋದು ಪಾಪರಾಜಿಗಳಿಗೆ ಹೇಗೆ ಗೊತ್ತಾಗುತ್ತೆ ಅನ್ನೋದು ಹಲವರ ಪ್ರಶ್ನೆಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಟ, ನಟಿಯರು ಸಿನಿಮಾಗಳಲ್ಲಿ ನಟಿಸುತ್ತಿಲ್ಲ ಎಂದರೂ ಅವರ ಮಾರ್ಕೆಟ್ ಹಾಗೆಯೇ ಇರಬೇಕು ಎಂದರೆ ಯಾವಾಗಲು ಪ್ರಚಲಿತದಲ್ಲಿ ಇರಬೇಕು. ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಸಲೂನ್ಗೆ ಹೋಗಿದ್ದು ಹೀಗೆ ಪ್ರತಿ ವಿಚಾರ ಸುದ್ದಿ ಆಗಬೇಕು ಎಂದು ಬಯಸುತ್ತಾರೆ. ಈ ರೀತಿ ಆಗುವಂತೆ ಮಾಡೋದು ಪಾಪರಾಜಿಗಳ ಕೆಲಸ. ನಟ, ನಟಿಯರು ಎಲ್ಲಿ ಹೋಗ್ತಿದ್ದಾರೆ? ಏನುನು ಮಾಡ್ತಿದ್ದಾರೆ ಎನ್ನುವುದನ್ನು ಪಾಪರಾಜಿಗಳಿಗೆ ತಿಳಿಸಿ ಅವರು ಅಲ್ಲಿಗೆ ಬರುವಂತೆ ನೋಡಿಕೊಳ್ಳುವುದು ಸೆಲೆಬ್ರಿಟಿಗಳ ಪಿಆರ್ ತಂಡದವರು. ಈ ವಿಚಾರವನ್ನು ಪ್ರಿಯಾಮಣಿ ತಿಳಿಸಿದ್ದಾರೆ. ‘ಜವಾನ್ ಸಿನಿಮಾ ಬಳಿಕ ಎಲ್ಲರೂ ಏರ್ಪೋರ್ಟ್ನಲ್ಲಿ, ಜಿಮ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾನು ಏಕೆ ಕಾಣಿಸುತ್ತಿಲ್ಲ ಎನ್ನುವ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಆಗ ಒಬ್ಬರು ಹೇಳಿದರು ಅವರನ್ನು ನೀವು ಕರೆಯಬೇಕು. ಅವರಿಗೆ ಹಣ ನೀಡಬೇಕು. ಈ…
Author: Author AIN
ಕಾರ್ಯಕ್ರಮವೊಂದರಲ್ಲಿ ಪತ್ರಕರ್ತೆ ಜೊತೆ ಸೌದಿ ಅರೇಬಿಯಾದ ಮೊದಲ ರೋಬೋ ಅನುಚಿತ ವರ್ತನೆ ತೋರಿದ ಆರೋಪ ಕೇಳಿ ಬಂದಿದೆ. ಸದ್ಯ ರೋಬೋ ಪತ್ರಕರ್ತೆ ಜೊತೆ ಅನುಚಿತವಾಗಿ ವರ್ತಿಸಿರುವ ವಿಡಿಯೋ ವೈರಲ್ ಆಗಿದೆ. ರೋಬೋವನ್ನು ಪರಿಚಯಿಸುವ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. 8 ಸೆಕೆಂಡ್ ಗಳ ಅವಧಿಯ ಈ ವೀಡಿಯೋದಲ್ಲಿ ಪತ್ರಕರ್ತೆ ರವಿಯಾ ಅಲ್ ಕಾಸಿಮಿ ಹಿಂದೆ ನಿಲ್ಲಿಸಲಾಗಿದ್ದ ರೋಬೋ ಕೈಗಳು ಆಕೆಯನ್ನು ಮುಟ್ಟಲು ಯತ್ನಿಸುತ್ತಿರುವುದು ಸೆರೆಯಾಗಿದೆ. ರೋಬೋ ಕೈಗೆ ಸಿಗದಂತೆ ತಪ್ಪಿಸಿಕೊಳ್ಳುವುದಕ್ಕಾಗಿ ಅಲ್-ಖಾಸಿಮಿ ಕ್ಷಣಕಾಲ ತನ್ನ ಕೈಯನ್ನು ಎತ್ತಬೇಕಾಯಿತು. ಈ ಘಟನೆಯು ಆಕಸ್ಮಿಕ ಸ್ಪರ್ಶಕ್ಕೆ ಕಾರಣವಾಗುವ ಪ್ರೋಗ್ರಾಮ್ ಮಾಡಿದ ಕೈ ಚಲನೆಯ ಪರಿಣಾಮವಾಗಿದೆ ಎಂದು ಕೆಲವರು ವಾದಿಸಿದರೆ, ಇತರರು ರೋಬೋಟ್ನ ಕ್ರಮಗಳು ಕಿರುಕುಳವನ್ನು ತೋರುತ್ತದೆ ಎಂದು ವಾದಿಸಿದ್ದಾರೆ. ಈ ಘಟನೆ ನಡೆದಾಗ ಪತ್ರಕರ್ತೆ ಮುಖದಲ್ಲಿ ವ್ಯಕ್ತವಾದ ಅಹಿತಕರ ಭಾವನೆ ರೋಬೋ ಕಿರುಕುಳ ನೀಡಲು ಯತ್ನಿಸಿತ್ತು ಎಂಬುದಕ್ಕೆ ಸಾಕ್ಷಿ ಎಂದು ಅನೇಕರು ಹೇಳಿದ್ದಾರೆ. ಕ್ಯೂಎಸ್ಎಸ್ ಸಿಸ್ಟಮ್ಸ್ ಸೌದಿ ಅರೇಬಿಯಾದಲ್ಲಿ ಮುಹಮ್ಮದ್ ಎಂಬ…
ಕೆನಡಾದ ರಾಜಧಾನಿ ಒಟ್ಟಾವದಲ್ಲಿನ ಮನೆಯೊಂದರಲ್ಲಿ 19 ವರ್ಷದ ವಿದ್ಯಾರ್ಥಿಯೋರ್ವ 4 ಮಕ್ಕಳ ಸಹಿತ 6 ಮಂದಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಬರ್ಹಾವೆನ್ನ ನೈಋತ್ಯದಲ್ಲಿರುವ ಪ್ರದೇಶದಲ್ಲಿನ ಮನೆಯಲ್ಲಿ ನಡೆದಿದೆ. 19 ವರ್ಷದ ವಿದ್ಯಾರ್ಥಿ ಫೆಬ್ರಿಯೊ ಡಿಝೊಯ್ಸಾ ಆರೋಪಿ ಎಂದು ಗುರುತಿಸಲಾಗಿದೆ. ಈತ ಶ್ರೀಲಂಕಾದ ಪ್ರಜೆಯಾಗಿದ್ದು ಸಂತ್ರಸ್ತ ಕುಟುಂಬದವರು ಇತ್ತೀಚೆಗೆ ಕೆನಡಾಕ್ಕೆ ಆಗಮಿಸಿದ್ದರು ಎನ್ನಲಾಗುತ್ತಿದೆ. ಆರೋಪಿ ಸಂತ್ರಸ್ತ ಕುಟುಂಬದವರ ಪರಿಚಯಸ್ಥನಾಗಿದ್ದು ಅವರ ಮನೆಯಲ್ಲೇ ವಾಸವಿದ್ದ. ಇತ್ತೀಚೆಗೆ ಯಾವುದೋ ಕಾರಣಕ್ಕೆ ಮನೆಯವರೊಂದಿಗೆ ಆರೋಪಿಯು ಜಗಳವಾಡಿದ್ದು ಬಳಿಕ ಈತ ಹರಿತವಾದ ಆಯುಧದಿಂದ ಮನೆಯಲ್ಲಿದ್ದ 6 ಮಂದಿಯನ್ನು ಇರಿದು ಹತ್ಯೆ ಮಾಡಿದ್ದಾನೆ. 35 ವರ್ಷದ ಮಹಿಳೆ, 7 ವರ್ಷದ ಬಾಲಕ, 4 ವರ್ಷದ ಬಾಲಕಿ, ಎರಡೂವರೆ ವರ್ಷದ ಹೆಣ್ಣು ಮಗು ಮತ್ತು ಕುಟುಂಬದ ಪರಿಚಯಸ್ಥನಾಗಿರುವ 40 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಕುಟುಂಬದ ಯಜಮಾನ ಚೂರಿ ಇರಿತದಿಂದ ಗಾಯಗೊಂಡಿದ್ದರೂ ಹೊರಗೆ ಓಡಿ ತಪ್ಪಿಸಿಕೊಂಡಿದ್ದು ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ವರದಿಯಾಗಿದೆ. ಆರೋಪಿಯನ್ನು ಬಂಧಿಸಲಾಗಿದ್ದು ಕೊಲೆ ಮತ್ತು…
ಪಾಕಿಸ್ತಾನದ ಅಡಿಯಾಲ ಜೈಲಿನ ಮೇಲೆ ದಾಳಿ ನಡೆಸುವ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದ್ದಾರೆ ಎಂಬ ವರದಿಯ ಬಗ್ಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷ, ಪಕ್ಷದ ಸ್ಥಾಪಕ(ಇಮ್ರಾನ್)ರಿಗೆ ಏನಾದರೂ ಸಂಭವಿಸಿದರೆ ಅದಕ್ಕೆ ಸರಕಾರ ಮತ್ತು ಪ್ರಬಲ ಮಿಲಿಟರಿ ವ್ಯವಸ್ಥೆಯೇ ಹೊಣೆಯಾಗಲಿದೆ ಎಂದಿದ್ದಾರೆ `ತನ್ನ ಸಿದ್ಧಾಂತಗಳು ಹಾಗೂ ನಿಲುವಿನ ಜತೆಗೆ ಎಂದಿಗೂ ರಾಜಿ ಮಾಡಿಕೊಳ್ಳದ ಇಮ್ರಾನ್ ಖಾನ್ ಅವರನ್ನು ಸೇನಾಪಡೆ ಅಪಾಯಕಾರಿ ಎಂದು ಭಾವಿಸಿದೆ. ಇದು ಕೇವಲ ಮೂವರು ಶಂಕಿತ ಅಫ್ಘಾನ್ ಭಯೋತ್ಪಾದಕರಿಗೆ ಸಂಬಂಧಿಸಿದ ವಿಷಯವಲ್ಲ. ಇನ್ನೂ ಹಲವು ಉಗ್ರರನ್ನು ಜೈಲಿನೊಳಗೆ ರವಾನಿಸಿರುವ ಭೀತಿಯಿದೆ. ಇಮ್ರಾನ್ ಪ್ರಾಣ ಯಾವಾಗಲೂ ಅಪಾಯದಲ್ಲಿದ್ದು, ಇದು ಇಮ್ರಾನ್ರನ್ನು ಹತ್ಯೆ ಮಾಡಲು ನಡೆದ ಐಎಸ್ಐ ಪ್ರಾಯೋಜಿತ ಕೃತ್ಯವಾಗಿದೆ ಎಂದು ಪಿಟಿಐ ಆರೋಪಿಸಿದೆ. ಜೈಲಿನ ಮೇಲೆ ಭಯೋತ್ಪಾದಕರ ದಾಳಿ ಎಂದು ಹೇಳುತ್ತಿದ್ದಾರೆ. ಆದರೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ರನ್ನು ಬಂಧನದಲ್ಲಿ ಇಟ್ಟಿರುವ ಜೈಲನ್ನು ಹೊರತುಪಡಿಸಿ ದೇಶದಲ್ಲಿ ಬೇರೆ ಜೈಲುಗಳಿಲ್ಲವೇ ? ಎಂದು ಪಿಟಿಐ ವಕ್ತಾರ ಶೋಯಬ್ ಶಹೀನ್ ಸುದ್ಧಿಗೋಷ್ಠಿ ಯಲ್ಲಿ ಪ್ರಶ್ನೆ…
ಬಾಲಿವುಡ್ ಬ್ಯೂಟಿ ನಟಿ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಮದುವೆಯಾಗಿ 15 ವರ್ಷ ಕಳೆದಿದೆ. 2021 ರಲ್ಲಿ ನೀಲಿ ಚಿತ್ರ ನಿರ್ಮಾಣ ಹಾಗೂ ವಿತರಣೆ ಪ್ರಕರಣದಲ್ಲಿ ರಾಜ್ ಕುಂದ್ರಾ ಬಂಧನವಾಗಿದ್ದು ಸದ್ಯ ಅವುಗಳಿಂದ ಹೊರ ಬಂದಿರುವ ದಂಪತಿ ನೆಮ್ಮದಿಯಾಗಿದ್ದಾರೆ. ಶಿಲ್ಪಾ ಶೆಟ್ಟಿ, ಹಣಕ್ಕಾಗಿ ರಾಜ್ ಕುಂದ್ರಾ ಅವರನ್ನು ವಿವಾಹವಾಗಿದ್ದಾರೆ ಎಂಬ ಮಾತು ಆಗಾಗ ಕೇಳಿ ಬರುತ್ತಲೆ ಇರುತ್ತದೆ. ಈ ರೀತಿ ಆರೋಪ ಮಾಡುವವರಿಗೆ ನಟಿ ಖಡಕ್ ಆಗಿಯೇ ಉತ್ತರ ನೀಡಿದ್ದಾರೆ. ಇತ್ತೀಚೆಗೆ ಬಾಲಿವುಡ್ ಮ್ಯಾಗಜೀನ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಮ್ಮ ಹಾಗೂ ರಾಜ್ ಕುಂದ್ರಾ ಬಗ್ಗೆ ಮಾತನಾಡಿರುವ ಶಿಲ್ಪಾ ಶೆಟ್ಟಿ, ‘ನಾನು ರಾಜ್ ಕುಂದ್ರಾ ಅವರನ್ನು ವಿವಾಹವಾದಾಗ ಕುಂದ್ರಾ 108ನೇ ಶ್ರೀಮಂತ ಬ್ರಿಟೀಷ್ ಭಾರತೀಯ ಎನಿಸಿಕೊಂಡಿದ್ದರು. ಆದರೆ ಕೆಲವರು ನನ್ನ ಬಗ್ಗೆ ಗೂಗಲ್ ಮಾಡುವುದು ಮರೆತು ಬಿಡುತ್ತಾರೆ. ಶಿಲ್ಪಾ ಶೆಟ್ಟಿ ಆದ ನಾನು ಈ ಹಿಂದೆಯೂ ಶ್ರೀಮಂತಳಾಗಿದ್ದೆ, ಈಗಲೂ ಶ್ರೀಮಂತಳಾಗಿದ್ದೇನೆ. ನನ್ನ ಎಲ್ಲ ಅವಶ್ಯಕತೆಗಳನ್ನು ನಾನೇ ಪೂರೈಸಿಕೊಳ್ಳುತ್ತೇನೆ. ಎಲ್ಲ ತೆರಿಗೆಗಳನ್ನು…
90ರ ದಶಕದಲ್ಲಿ ಬಹುಭಾಷಾ ನಟಿಯಾಗಿ ಸಾಕಷ್ಟು ಬೇಡಿಕೆ ಇರಿಸಿಕೊಂಡಿದ್ದ ನಟಿ ಮೀನಾ ಇಂದಿಗೂ ಅದೇ ಚಾರ್ಮ್ ಉಳಿಸಿಕೊಂಡಿದ್ದಾರೆ. ಆದರೆ ಕಳೆದೊಂದು ವರ್ಷದಿಂದ ನಟಿ ಎರಡನೇ ಮದುವೆಯ ಕುರಿತು ಸುದ್ದಿಯಾಗ್ತಿದ್ದಾರೆ. ಪತಿಯ ನಿಧನದ ಬಳಿಕ ಮೀನಾ ಎರಡನೇ ಮದುವೆಗೆ ಸಿದ್ದವಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರ ಜೊತೆಗೆ ಈಕೆಯ ಹೆಸರು ನಟ ಧನುಷ್ ಜೊತೆಯೂ ಕೇಳಿ ಬಂದಿತ್ತು. ಈ ಮಧ್ಯೆ ಮೀನಾ 15ನೇ ವಯಸ್ಸಿಗೆ ಗರ್ಭಿಣಿಯಾಗಿದ್ದರು ಎನ್ನುವ ವಿಷಯ ಸಖತ್ ಸದ್ದು ಮಾಡುತ್ತಿದೆ. ಹೌದು. ನಟಿ ಮೀನಾ ಅವರ 40ನೇ ಹುಟ್ಟುಹಬ್ಬದಂದು ಆಯೋಜಿಸಲಾಗಿದ್ದ ಮೀನಾ@40 ವಿಶೇಷ ಅಭಿನಂದನಾ ಕಾರ್ಯಕ್ರಮದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಹಿರಿಯ ನಟ ರವಿ ಕಿರಣ್, ಮೀನಾ ಅವರ ಕುರಿತು ಈ ಸಂದರ್ಭದಲ್ಲಿ ಹೇಳಿದ್ದಾರೆ. ಅಷ್ಟಕ್ಕೂ ಅವರು ಹೇಳಿದ್ದು 15ನೇ ವಯಸ್ಸಿನಲ್ಲಿ ಮೀನಾ ಗರ್ಭಿಣಿಯ ಪಾತ್ರ ಮಾಡಿದ್ದರು ಎನ್ನುವುದು. 1991ರಲ್ಲಿ ಕಾಲಿವುಡ್ನಲ್ಲಿ ಕಸ್ತೂರಿ ರಾಜ ನಿರ್ದೇಶನದಲ್ಲಿ ಎನ್ ರಾಸವಿನ್ ಮನಸಿಲೇ ಸಿನಿಮಾಕ್ಕೆ ನಾಯಕಿಯ ಹುಡುಕಾಟ ನಡೆದಿತ್ತು. ಈ ವೇಳೆ…
ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ಸ್ ಅವರ ವಿವಾಹ ಪೂರ್ವ ಸಮಾರಂಭ ಇತ್ತೀಚೆಗಷ್ಟೇ ಗುಜರಾತ್ ನ ಜಾಮ್ ನಗರ ಅದ್ಧೂರಿಯಾಗಿ ನಡೆದಿದೆ. ಈ ವೇಳೆ ಅಂಬಾನಿ ಕುಟುಂಬಸ್ಥರು ಧರಿಸಿದ್ದ ವಸ್ತ್ರ ಸಾಕಷ್ಟು ಸುದ್ದಿಯಾಗಿದೆ. ಅಂಬಾನಿ ಕುಟುಂಬದ ಮಹಿಳೆಯರು ಧರಿಸಿದ ವಸ್ತ್ರಗಳು ಹಾಗೂ ಆಭರಣಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಮುಖೇಶ್ ಅಂಬಾನಿಯ ಏಕೈಕ ಪುತ್ರಿ ಇಶಾ ಅಂಬಾನಿ ವಿವಾಹ ಪೂರ್ವ ಸಮಾರಂಭದಲ್ಲಿ ರೆಡ್ ಮತ್ತು ಗೋಲ್ಡನ್ ಮಿಶ್ರಿತ ಗ್ರ್ಯಾಂಡ್ ಲೆಹಂಗಾ ತೊಟ್ಟು ಮಿಂಚಿದ್ದು ಸೆಲೆಬ್ರೆಟಿಗಳು ಸೇರಿದಂತೆ ಎಲ್ಲರ ಗಮನ ಸೆಳೆದಿದೆ. ಇಶಾ ಧರಿಸಿದ್ದ ಈ ಗ್ರ್ಯಾಂಡ್ ಲೆಹಾಂಗದ ಬ್ಲೌಸ್ ಅನ್ನು ಸಂಪೂರ್ಣವಾಗಿ ಚಿನ್ನ, ವಜ್ರದಿಂದ ವಿನ್ಯಾಸಗೊಳಿಸಲಾಗಿದ್ದು, ಸದ್ಯ ಈ ಬ್ಲೌಸ್ ವಿನ್ಯಾಸಗೊಳಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಅದ್ಧೂರಿ ಬ್ಲೌಸ್ ಅನ್ನು ಸೆಲೆಬ್ರೆಟಿ ಕಾಸ್ಟೂಮ್ ಡಿಸೈನರ್ ಅಬು ಜಾನಿ ಸಂದೀಪ್ ಖೋಸ್ಲಾ ಅವರ ತಂಡ…
ನಟಿ ನಯನತಾರಾ ಇತ್ತೀಚೆಗೆ ಡಿವೋರ್ಸ್ ಕಾರಣದಿಂದ ಸಖತ್ ಸುದ್ದಿಯಾಗ್ತಿದ್ದಾರೆ. ನಯನತಾರಾ ಹಾಗೂ ವಿಘ್ನೇಶ್ ಶಿವನ್ ಮಧ್ಯೆ ಎಲ್ಲವು ಸರಿ ಇಲ್ಲ ಎಂಬ ಸುದ್ದಿ ಹರಿದಾಡಿತ್ತು. ಇದೀಗ ನಯನತಾರಾ ಫೋಟೋವೊಂದನ್ನು ಶೇರ್ ಮಾಡುವ ಮೂಲಕ ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ. ನಯನತಾರಾ ಹಾಗೂ ವಿಘ್ನೇಶ್ ಮಕ್ಕಳೊಂದಿಗೆ ವಿದೇಶ ಪ್ರಯಾಣ ಬೆಳೆಸಿದ್ದಾರೆ.ಸದ್ಯ ನಯನತಾರಾ ಶೇರ್ ಮಾಡಿರುವ ಫೋಟೋ ನೋಡಿದ ಅಭಿಮಾನಿಗಳು ಜೋಡಿಯ ಮಧ್ಯೆ ಎಲ್ಲವು ಸರಿ ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ನಯಾನತಾರಾ ಅವರು ವಿಘ್ನೇಶ್ ಶಿವನ್ ಅವರನ್ನು ಇನ್ಸ್ಟಾಗ್ರಾಮ್ನಲ್ಲಿ ಅನ್ಫಾಲೋ ಮಾಡಿದ್ದರು. ಇದರಿಂದ ಇವರ ವಿಚ್ಛೇದನ ವದಂತಿ ಹುಟ್ಟಿತ್ತು. ಇದಾದ ಬಳಿಕ ಅವರು ಮತ್ತೆ ಪತಿಯನ್ನು ಫಾಲೋ ಮಾಡೋಕೆ ಆರಂಭಿಸಿದ್ದರು. ನಂತರ ಅವರು ಹಾಕಿದ್ದ ಸ್ಟೇಟಸ್ ವಿಚ್ಛೇದನ ವದಂತಿಯನ್ನು ಹೆಚ್ಚಿಸಿತ್ತು. ‘ಹೌದು ನಾನು ಕಳೆದು ಹೋಗಿದ್ದೇನೆ’ ಎಂದು ಬರೆದುಕೊಂಡಿದ್ದರು. ಈ ವಿಚಾರದಿಂದ ಫ್ಯಾನ್ಸ್ ಆತಂಕಗೊಂಡಿದ್ದರು. ಇದೀಗ ಗಾಳಿ ಸುದ್ದಿಗೆ ನಯನತಾರಾ ಫೋಟೋದ ಮೂಲಕ ಬ್ರೇಕ್ ಹಾಕಿದ್ದಾರೆ.
ಹಿಂದಿ ಕಿರುತೆರೆ ಲೋಕದಲ್ಲಿ ಸಕ್ರಿಯರಾಗಿದ್ದ ಡಾಲಿ ಸೋಹಿ ಹಾಗೂ ಅಮನ್ದೀಪ್ ಸೋಹಿ ಸಹೋಧರಿಯರು ಕೆಲವೇ ಗಂಟೆಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ. ಒಬ್ಬರು ಜಾಂಡಿಸ್ಗೆ ಮೃತಪಟ್ಟರೆ ಮತ್ತೊಬ್ಬರು ಗರ್ಭಕಂಠ ಕ್ಯಾನ್ಸರ್ ನಿಂದ ಮೃತಪಟ್ಟಿದ್ದಾರೆ. ನಟಿ ಅಮನ್ದೀಪ್ ಅವರಿಗೆ ಹಲವು ದಿನಗಳ ಹಿಂದೆ ಜಾಂಡಿಸ್ ಆಗಿತ್ತು. ಚಿಕಿತ್ಸೆ ನೀಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಅಮನ್ ದೀಪ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅವರ ಸಹೋದರಿ ಸೋಹಿ ಕ್ಯಾನ್ಸರ್ನಿಂದ ಬಳಲುತ್ತಿದ್ದು ಕೊನೆಯುಸಿರು ಎಳೆದಿದ್ದಾರೆ. ಸಹೋದರಿಯರ ಸಾವಿಗೆ ಅನೇಕರು ಸಂತಾಪ ಸೂಚಿಸಿದ್ದಾರೆ. ‘ನಮ್ಮ ಪ್ರೀತಿಯ ಅಮನ್ದೀಪ್ ಸೋಹಿ ಅವರು ಇಂದು ಸ್ವರ್ಗಸ್ಥರಾಗಿದ್ದಾರೆ. ನಾವು ಅವರನ್ನು ಕಳೆದುಕೊಂಡು ಶಾಕ್ಗೆ ಒಳಗಾಗಿದ್ದೇವೆ. ಇಂದು (ಮಾರ್ಚ್ 8) ಮಧ್ಯಾಹ್ನ ಅಂತಿಮ ಸಂಸ್ಕಾರ ನಡೆಯಲಿದೆ’ ಎಂದು ಡಾಲಿ ಸೋಹಿ ಅವರ ಸಹೋದರ ಮನು ಗುರುವಾರ ಹೇಳಿದ್ದರು. ಇದಾದ ಬೆನ್ನಲ್ಲೇ ಡಾಲಿ ಸಾವನಪ್ಪಿದ್ದಾರೆ. ಡಾಲಿ ಸೋಹಿ ಅವರು ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. 2000ರಲ್ಲಿ ಪ್ರಸಾರ ಆರಂಭಿಸಿದ ‘ಕಲಾಶ್’ ಧಾರಾವಾಹಿ ಮೂಲಕ ಬಣ್ಣದ ಬದುಕು ಆರಂಭಿಸಿದರು. 2022ರಲ್ಲಿ ಪ್ರಸಾರ…
ಸ್ಯಾನ್ ಫ್ರಾನ್ಸಿಸ್ಕೋದಿಂದ ಹೊರಟಿದ್ದ ಯುನೈಟೆಡ್ ಏರ್ಲೈನ್ಸ್ ಜೆಟ್ಲೈನರ್ ಟೈರ್ ಟೈರ್ ಕಳೆದುಕೊಂಡಿದ್ದು ಬಳಿಕ ಲಾಸ್ ಏಂಜಲೀಸ್ನಲ್ಲಿ ಇಳಿದಿದೆ. ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ವಿಮಾನವು ತನ್ನ ಟೈರ್ ಒಂದನ್ನು ಕಳೆದುಕೊಂಡ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ವರದಿಯ ಪ್ರಕಾರ ವಿಮಾನದಲ್ಲಿ 235 ಪ್ರಯಾಣಿಕರು ಮತ್ತು 14 ಸಿಬ್ಬಂದಿ ಇದ್ದರು. ವಿಮಾನವು ತನ್ನ ಎಡಭಾಗದ ಮುಖ್ಯ ಲ್ಯಾಂಡಿಂಗ್ ಗೇರ್ ಜೋಡಣೆಯಲ್ಲಿ ತನ್ನ ಆರು ಟೈರ್ಗಳಲ್ಲಿ ಒಂದನ್ನು ಕಳೆದುಕೊಂಡಿದೆ. ಸ್ಯಾನ್ ಫ್ರಾನ್ಸಿಸ್ಕೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಯೋಗಿಗಳ ಪಾರ್ಕಿಂಗ್ ಸ್ಥಳದಲ್ಲಿ ಟೈರ್ ಇಳಿದಿದ್ದರೂ, ಅಲ್ಲಿ ಅದು ಕಾರಿಗೆ ಡಿಕ್ಕಿ ಹೊಡೆದು ಅದರ ಹಿಂಭಾಗದ ಕಿಟಕಿಯನ್ನು ಒಡೆದು ಬೇಲಿಯನ್ನು ಮುರಿದು ಪಕ್ಕದ ಸ್ಥಳದಲ್ಲಿ ನಿಂತಿದೆ. ಘಟನೆಯಲ್ಲಿ ಯಾವುದೇ ಗಾಯಗಳಾದ ವರದಿ ದಾಖಲಾಗಿಲ್ಲ. ಸ್ಯಾನ್ ಫ್ರಾನ್ಸಿಸ್ಕೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೋಯಿಂಗ್ 777 ವಿಮಾನದ ಟೈರ್ ಅವಶೇಷಗಳು ಬಿದ್ದ ಪರಿಣಾಮ ವಿಮಾನ ನಿಲ್ದಾಣದ ಉದ್ಯೋಗಿಗಳ ಪಾರ್ಕಿಂಗ್ ಸ್ಥಳದಲ್ಲಿ ಕಾರುಗಳು ಹಾನಿಗೊಳಗಾಗಿವೆ . ಘಟನೆಯ ನಂತರ,…