ಇಂಡೋನೇಷ್ಯಾದ ಬಾಂದಾ ಸಮುದ್ರದಲ್ಲಿ ಇಂದು ಬೆಳಗ್ಗೆ (ಮಾ.10) 5.0 ತೀವ್ರತೆಯ ಭೂಕಂಪ ದಾಖಲಾಗಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಭೂಕಂಪದ ಕೇಂದ್ರಬಿಂದುವನ್ನು 7.30 ಡಿಗ್ರಿ ದಕ್ಷಿಣ ಅಕ್ಷಾಂಶ ಮತ್ತು 129.27 ಡಿಗ್ರಿ ಪೂರ್ವ ರೇಖಾಂಶದಲ್ಲಿ ಮೇಲ್ವಿಚಾರಣೆ ಮಾಡಲಾಗಿದೆ ಎಂದು ಜಿಎಫ್ಜೆಡ್ ಜರ್ಮನ್ ರಿಸರ್ಚ್ ಸೆಂಟರ್ ಫಾರ್ ಜಿಯೋಸೈನ್ಸ್ ಮಾಹಿತಿ ನೀಡಿದೆ. ದ್ವೀಪಸಮೂಹ ದೇಶ ಇಂಡೋನೇಷ್ಯಾ ‘ಪೆಸಿಫಿಕ್ ರಿಂಗ್ ಆಫ್ ಫೈರ್’ ಎಂದು ಕರೆಯಲ್ಪಡುವ ಸೂಕ್ಷ್ಮ ಭೂಕಂಪನ ವಲಯದಲ್ಲಿದೆ. ಈ ಘಟನೆಯಿಂದ ಯಾವುದೇ ಹಾನಿ ಉಂಟಾಗಿಲ್ಲ. ಇಲ್ಲಿ ಆಗಾಗ ಭೂಕಂಪಗಳು ಸಂಭವಿಸುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Author: Author AIN
ಡೊನಾಲ್ಡ್ ಟ್ರಂಪ್ ಒಳ್ಳೆಯ ವ್ಯಕ್ತಿ ಅಲ್ಲ. ಆತ ಓರ್ವ ರಾಕ್ಷಸ. ಹೀಗಾಗಿ ಅಮೆರಿಕದ ಮತದಾರರು ಮುಂಬರುವ ಅಮೆರಿಕ ಅಧ್ಯಕ್ಷರ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಜೋ ಬಿಡೆನ್‍ಗೆ ಮತ ಚಲಾಯಿಸಬೇಕು.ಯಾವುದೇ ಕಾರಣಕ್ಕೂ ಟ್ರಂಪ್ ಗೆ ಮತ ಹಾಕಬೇಡಿ ಎಂದು ಹಾಲಿವುಡ್ ಖ್ಯಾತ ನಟ ರಾಬರ್ಟ್ ಡಿ ನಿರೋ ತಿಳಿಸಿದ್ದಾರೆ. ಸಂದರ್ಶನವೊಂದರಲ್ಲಿ ಈ ಹೇಳಿಕೆ ನೀಡಿರುವ ನಿರೋ, ನೀವು ಬದುಕಲು ಬಯಸುವ ಜಗತ್ತಿನಲ್ಲಿ ವಾಸಿಸಲು ಮತ್ತು ಆನಂದಿಸಲು ಬಯಸುವಿರಾ ಅಥವಾ ದುಃಸ್ವಪ್ನದಲ್ಲಿ ಬದುಕಲು ಬಯಸುವಿರಾ? ಟ್ರಂಪ್‍ಗೆ ಮತ ನೀಡಿದರೆ ನೀವು ದುಃಸ್ವಪ್ನವನ್ನು ಪಡೆಯುತ್ತೀರಿ, ಬಿಡೆನ್‍ಗೆ ಮತ ಚಲಾಯಿಸಿ ಸಹಜ ಜೀವನ ನಡೆಸಿ ಎಂದಿದ್ದಾರೆ. ಆತ ತುಂಬಾ ನೀಚ, ಅಸಹ್ಯ, ದ್ವೇಷಪೂರಿತ ವ್ಯಕ್ತಿ. ನಾನು ಎಂದಿಗೂ ಟ್ರಂಪ್ ಆಗಿ ನಟಿಸುವುದಿಲ್ಲ ಏಕೆಂದರೆ ನಾನು ಅವನಲ್ಲಿ ಯಾವುದೇ ಒಳ್ಳೆಯದನ್ನು ನೋಡುವುದಿಲ್ಲ ಎಂದಿದ್ದಾರೆ.
ಗಾಝಾ ಯುದ್ಧಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕ್ರಮಗಳು ಇಸ್ರೇಲಿಗೆ ನೆರವಾಗುವ ಬದಲಾಗಿ ಇಸ್ರೇಲನ್ನೇ ಘಾಸಿಗೊಳಿಸುತ್ತಿವೆ ಎಂದು ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ ಬೈಡನ್, ಇಸ್ರೇಲ್ ನಾಯಕತ್ವದ ಬಗ್ಗೆ ಅಮೆರಿಕದ ಮುಖಂಡರ ಅಸಹನೆ ಹೆಚ್ಚುತ್ತಿರುವುದರ ಪ್ರತೀಕ ಇದಾಗಿದೆ. ಗಾಝಾದಲ್ಲಿ ಮಾನವೀಯ ಸಂಘರ್ಷ ಹೆಚ್ಚುತ್ತಿದ್ದು, ಅಮೆರಿಕದ ಮೇಲಿನ ಒತ್ತಡವೂ ಹೆಚ್ಚುತ್ತಿದೆ. ದಕ್ಷಿಣ ಗಾಝಾದ ರಫಾ ಮೇಲೆ ದಾಳಿ ನಡೆಸುವುದಾಗಿ ಇಸ್ರೇಲ್ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ಹೇಳಿಕೆ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ನೆತನ್ಯಾಹು ಅವರಿಗೆ ಇಸ್ರೇಲ್ ದೇಶವನ್ನು ರಕ್ಷಿಸಿಕೊಳ್ಳುವ ಎಲ್ಲ ಹಕ್ಕೂ ಇದೆ. ಆದರೆ ಕ್ರಮ ಕೈಗೊಂಡ ಪರಿಣಾಮ ಜೀವ ಕಳೆದುಕೊಂಡ ಅಮಾಯಕ ಜೀವಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದಿದ್ದಾರೆ. “ನನ್ನ ಪ್ರಕಾರ ಅವರ ಕ್ರಮಗಳು ಇಸ್ರೇಲ್‍ಗೆ ನೆರವಾಗುವ ಬದಲು ಇಸ್ರೇಲ್‍ಗೆ ಘಾಸಿಯಾಗುತ್ತಿವೆ” ಎಂದು ಬೈಡನ್ ಹೇಳಿದ್ದಾರೆ.
ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಹೆಸರು ಘೋಷಣೆಯಾಗುತ್ತಿದ್ದಂತೆ ಗೀತಾ ಶಿವರಾಜ್‌ಕುಮಾರ್ ಶಿವಮೊಗ್ಗದಲ್ಲಿ ಚುನಾವಣಾ ಕಾರ್ಯಗಳಿಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗೀತಾ ಶಿವರಾಜ್ ಕುಮಾರ್ ಶಿವಮೊಗ್ಗದಲ್ಲಿ ಬಾಡಿಗೆ ಮನೆ ಪಡೆದಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಪಕ್ಷ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 9 ರಾಜ್ಯಗಳ 39 ಕ್ಷೇತ್ರಗಳಿಗೆ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಮೊದಲ ಪಟ್ಟಿಯಲ್ಲೇ ಗೀತಾ ಶಿವರಾಜ್‌ಕುಮಾರ್ ಹೆಸರು ಸೇರಿಕೊಂಡಿದೆ. ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಗೀತಾ ಶಿವರಾಜ್‌ಕುಮಾರ್ ಚುನಾವಣಾ ಕಾರ್ಯಗಳಿಗಾಗಿ ಶಿವಮೊಗ್ಗದಲ್ಲಿ ಬಾಡಿಗೆಮನೆ ಪಡೆದಿದ್ದಾರೆ. ಚುನಾವಣಾ ಪ್ರಚಾರ ಕಾರ್ಯಗಳಿಗೆ ಸಚಿವ ಮಧು ಬಂಗಾರಪ್ಪ ಮತ್ತು ಗೀತಾ ಶಿವರಾಜ್‌ಕುಮಾರ್ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಶಿವಮೊಗ್ಗದ ಕಲ್ಲಹಳ್ಳಿ ಬಡಾವಣೆಯಲ್ಲಿ ಮಧು ಬಂಗಾರಪ್ಪ ನಿವಾಸದ ಪಕ್ಕದಲ್ಲೇ ಮನೆಯೊಂದನ್ನ ಬಾಡಿಗೆಗೆ ಪಡೆದುಕೊಂಡಿದ್ದಾರೆ. ಇಲ್ಲಿಯೇ ಚುನಾವಣಾ ಪ್ರಚಾರ ಕಾರ್ಯಗಳ ಕುರಿತು ಮಹತ್ವದ ಸಿದ್ಧತೆಗಳನ್ನು ಇಲ್ಲಿಯೇ ಮಾಡಿಕೊಳ್ಳಲಾಗುತ್ತದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಸ್ಯಾಂಡಲ್‌ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊಂಚ ಬಿಡುವು ಮಾಡಿಕೊಂಡು ಸ್ನೇಹಿತರ ಜೊತೆ ಮಂಗಳೂರಿನ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ದರ್ಶನ್ ಗೆ ನಟರಾದ ಯಶಸ್ ಸೂರ್ಯ ಹಾಗೂ ಚಿಕ್ಕಣ್ಣ ಸಾಥ್ ನೀಡಿದ್ದಾರೆ. ಕೊರಗಜ್ಜನ ಸನ್ನಿಧಾನಕ್ಕೆ ಭೇಟಿ ನೀಡಿದ ದರ್ಶನ್ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ದರ್ಶನ್ ಅವರಿಗೆ ಕ್ಷೇತ್ಎದ ವತಿಯಿಂದ ಗೌರವ ಸಲ್ಲಿಸಲಾಯಿತು. ಪೂಜೆಯ ಬಳಿಕ ದರ್ಶನ್ ಮಾತನಾಡಿದ ದರ್ಶನ್, ಮೊದಲ ಬಾರಿಗೆ ಕುತ್ತಾರು ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿದ್ದೇನೆ ಎಂದಿದ್ದಾರೆ. ಈ ಹಿಂದೆ ಮಂಗಳೂರಿಗೆ ಸಾಕಷ್ಟು ಬಾರಿ ಬಂದಿದ್ದೇನೆ. ಆದರೆ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿರಲಿಲ್ಲ. ಹಾಗೆ ನೋಡಿಕೊಂಡು ಹೋಗೋಣ ಅಂತ ಬಂದಿದ್ದೀನಿ. ಇಲ್ಲಿಗೆ ಬಂದಿರುವುದಕ್ಕೆ ಬೇರೆ ಯಾವುದೇ ನಿರ್ದಿಷ್ಟ ಕಾರಣ ಇಲ್ಲ ಎಂದು ದರ್ಶನ್ ಹೇಳಿದ್ದಾರೆ
10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹೆಚ್ಚಾಗಿ ಸ್ಮಾರ್ಟ್ ಫೋನ್ ಬಳಸುವುದು ಕಣ್ಣಿಗೆ ಹಾನಿಕಾರಕ ಜೊತೆಗೆ ದೈಹಿಕ ಆರೋಗ್ಯವು ಹದಗೆಡುತ್ತದೆ ಹಾಗೂ ಇತರ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿಗಳ ಪ್ರಕಾರ, ಐದು ವರ್ಷದೊಳಗಿನ ಮಕ್ಕಳು ಮೊಬೈಲ್ ಪರದೆಗಳನ್ನು ವೀಕ್ಷಿಸಲು ಕಡಿಮೆ ಸಮಯವನ್ನು ಕಳೆಯಬೇಕು. ಯುಎನ್ ಆರೋಗ್ಯ ಸಂಸ್ಥೆ ಶಿಶುಗಳು ಮತ್ತು 1 ವರ್ಷದ ಮಗುವಿಗೆ ಪರದೆಯ ಸಮಯವನ್ನು ಶಿಫಾರಸು ಮಾಡದಿದ್ದರೂ, 2 ವರ್ಷ ವಯಸ್ಸಿನವರು ಒಂದು ಗಂಟೆಗಿಂತ ಹೆಚ್ಚು ಕಾಲ ಮೊಬೈಲ್ ನೋಡಬಾರದು ಎಂದು ತಿಳಿಸಿದೆ. ಒಂದೂವರೆ ವರ್ಷ ವಯಸ್ಸಿನ ಮಕ್ಕಳಿಗೆ ಸಹ ಪೋಷಕರು ಸ್ಮಾರ್ಟ್ ಫೋನ್ ಗಳನ್ನು ನೀಡುತ್ತಿದ್ದಾರೆ ಎಂದು ಗುರುಗ್ರಾಮದ ಮೇದಾಂತ ದಿ ಮೆಡಿಸಿಟಿಯ ಪೀಡಿಯಾಟ್ರಿಕ್ ಕೇರ್ನ ಪೀಡಿಯಾಟ್ರಿಕ್ ಪಲ್ಮೊನಾಲಜಿ, ಕ್ರಿಟಿಕಲ್ ಕೇರ್ ಪೀಡಿಯಾಟ್ರಿಕ್ಸ್ (ಪಿಐಸಿಯು) ನಿರ್ದೇಶಕ ಡಾ.ರಾಜೀವ್ ಉತ್ತಮ್ ಹೇಳಿದರು. “ಅತಿಸಾರ, ಜ್ವರ ಮತ್ತು ಇತರ ಆರೋಗ್ಯ ಸಮಸ್ಯೆಗಳಂತಹ ಕಾಯಿಲೆಗಳು ತಮ್ಮ ಮೊಬೈಲ್ ಸಾಧನಗಳಲ್ಲಿ ಹೆಚ್ಚು ಸಮಯ ಕಳೆಯುವ…
ಇಟಲಿಯ ಲೇಕ್ ಗಾರ್ಡಾ ಬಳಿಯ ಖ್ಯಾತ ಪ್ರದರ್ಶನದಿಂದ ಶಿಲ್ಪಿ ಉಂಬರ್ಟೊ ಮಾಸ್ಟ್ರೊಯಾನಿ ರಚಿಸಿದ ಸುಮಾರು 50 ಚಿನ್ನದ ಕಲಾಕೃತಿಗಳನ್ನು ಕಳವು ಮಾಡಲಾಗಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ. ಡಿಸೆಂಬರ್ ಅಂತ್ಯದಲ್ಲಿ ತೆರೆಯಲಾದ ಮತ್ತು ಶುಕ್ರವಾರ ಮುಕ್ತಾಯಗೊಳ್ಳಲಿರುವ ” ಚಿನ್ನದ” ಪ್ರದರ್ಶನದಿಂದ 1.2 ಮಿಲಿಯನ್ ಯುರೋ (1.3 ಮಿಲಿಯನ್ ಯುಎಸ್ಡಿಗಿಂತ ಹೆಚ್ಚು) ಮೌಲ್ಯದ ನಲವತ್ತೊಂಬತ್ತು ಕಲಾಕೃತಿಗಳನ್ನು ಕಳವು ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ವಕ್ತಾರರು ತಿಳಿಸಿದ್ದಾರೆ. ಇದು ವಿಶೇಷ ಗ್ಯಾಂಗ್ ನಡೆಸಿರುವ ಕಳ್ಳತನವಾಗಿದೆ ಎಂದು ವಸ್ತು ಸಂಗ್ರಹಾಲಯದ ಮುಖ್ಯಸ್ಥ ಗಿಯೋರ್ಡಾನೊ ಬ್ರೂನೋ ಗೆರಿ ಹೇಳಿದ್ದಾರೆ.
2024ನೇ ವರ್ಷದ 71ನೇ ಸಾಲಿನ ಮಿಸ್ ವರ್ಲ್ಡ್ ಕಿರೀಟವನ್ನು ಚೆಕ್ ರಿಪಬ್ಲಿಕ್ನ ಕ್ರಿಸ್ಟಿನಾ ಅವರು ಮುಡಿಗೇರಿಸಿಕೊಂಡಿದ್ದಾರೆ. ಈ ಬಾರಿ ಕರ್ನಾಟಕ ಮೂಲಕ ಸಿನಿ ಶೆಟ್ಟಿ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾಗಿಯಾಗಿದ್ದು ಅವರಿಗೆ ಪ್ರಶಸ್ತಿ ಸಿಕ್ಕಿಲ್ಲ. ವಿವಿಧ ದೇಶಗಳ ಪ್ರತಿಭಾವಂತ ಮತ್ತು ಸುಂದರ ಮಹಿಳೆಯರು ಪ್ರತಿ ವರ್ಷ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆ ‘ಮಿಸ್ ವರ್ಲ್ಡ್’ನಲ್ಲಿ ಭಾಗವಹಿಸುತ್ತಾರೆ. ಇದರಲ್ಲಿ ಗೆದ್ದವರಿಗೆ ಸಾಕಷ್ಟು ಜನಪ್ರಿಯತೆ ಸಿಗುವುದರ ಜೊತೆಗೆ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಾರೆ. ಅದರಲ್ಲೂ ಹೆಚ್ಚಾಗಿ ಸಿನಿಮಾ ರಂಗದಲ್ಲಿ ಖ್ಯಾತಿ ಘಳಿಸುತ್ತಾರೆ. ಅಂತೆಯೇ ಈ ಭಾರಿ ಮುಂಬೈನ ಜಿಯೋ ವರ್ಲ್ಡ್ ಸೆಂಟರ್ನಲ್ಲಿ 71ನೇ ಸಾಲಿನ ಮಿಸ್ ವರ್ಲ್ಡ್ ಕಾರ್ಯಕ್ರಮ ನಡೆದಿದ್ದು ಚೆಕ್ ರಿಪಬ್ಲಿಕ್ನ ಕ್ರಿಸ್ಟಿನಾ ಅವರಿಗೆ ಮಿಸ್ ವರ್ಲ್ಡ್ ಕಿರೀಟ ಒಲಿದಿದೆ. . 28 ವರ್ಷಗಳ ಬಳಿಕ ಭಾರತದಲ್ಲಿ ಕಾರ್ಯಕ್ರಮ ನಡೆದಿದೆ ಅನ್ನೋದು ವಿಶೇಷವಾಗಿದೆ. ‘ಮಿಸ್ ವರ್ಲ್ಡ್ 2024’ ಕಾರ್ಯಕ್ರಮದಲ್ಲಿ 115 ರಾಷ್ಟ್ರಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದರು. ಭಾರತೀಯ ಕಾಲಮಾನ ರಾತ್ರಿ 7:30ಕ್ಕೆ ಈ ಕಾರ್ಯಕ್ರಮ ಆರಂಭ ಆಯಿತು. ಸೋನಿ…
ಕನ್ನಡ ಸಿನಿಮಾ ರಂಗಕ್ಕೆ ಆಗಾಗ ಹೊಸ ಹೊಸ ಪ್ರತಿಭೆಗಳು ಎಂಟ್ರಿಕೊಡ್ತಾನೆ ಇರ್ತಾರೆ. ಆ ಸಾಲಿಗೆ ಇದೀಗ ಜಿಮ್ ಟ್ರೈನರ್ ಕೂಡ ಸೇರ್ಪಡೆಯಾಗಿದ್ದಾರೆ. ಖದೀಮ ಚಿತ್ರದ ಮೂಲಕ ಜಿಮ್ ಟ್ರೈಲರ್ ನಾಯಕನಾಗಿದ್ದು ಇದೀಗ ಖದೀಮ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಶಿವೇಶು ಪ್ರೊಡಕ್ಷನ್ ಚೊಚ್ಚಲ ಹೆಜ್ಜೆ ಖದೀಮ ಸಿನಿಮಾ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸ ಮುಗಿಸಿ ಬಿಡುಗಡೆಗೆ ಹಂತಕ್ಕೆ ಬಂದು ನಿಂತಿದೆ. ಯುವ ಸಿನಿ ಸಿನಿಮೋತ್ಸಾಹಿಗಳೇ ಸೇರಿಕೊಂಡು ತಯಾರಿಸಿರುವ ಈ ಚಿತ್ರಕ್ಕೆ ಟಿ ಶಿವಕುಮಾರನ್ ಹಣ ಹಾಕಿದ್ದು ಇವರಿಗೆ ಸಹ ನಿರ್ಮಾಪಕಿಯಾಗಿ ಯಶಸ್ವಿನಿ ಸಾಥ್ ನೀಡಿದ್ದಾರೆ. ಚಿತ್ರರಂಗದ ಮೇಲಿನ ಅಪಾರ ಅಭಿಮಾನ ಹಾಗೂ ಆಸಕ್ತಿಯಿಂದಾಗಿ ಶಿವಕುಮಾರನ್ ಸಿನಿಮಾ ನಿರ್ಮಾಣಕ್ಕಿಳಿದಿದ್ದಾರೆ. ಈ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ನೋಡುಗರ ಗಮನಸೆಳೆಯುತ್ತಿದೆ. ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಸಾಯಿ ಪ್ರದೀಪ್, ಟೀಸರ್ ನೋಡಿದ್ದೀರ. ಅತಿ ಶೀಘ್ರದಲ್ಲೇ ಆಡಿಯೋ ಲಾಂಚ್, ಟ್ರೇಲರ್ ಲಾಂಚ್ ಆಗಲಿದೆ. ಅತಿ ಶೀಘ್ರದಲ್ಲಿ ಬೆಳ್ಳಿ ಪರದೆಗೆ ಬರಬೇಕೆಂದು ಪ್ರಯತ್ನ ಮಾಡುತ್ತಿದ್ದೇವೆ. ಖದೀಮ ಒಳ್ಳೆ ಸಿನಿಮಾ.…
ಅಭಿನಯ ಚಕ್ರವತಿ ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಸಿನಿಮಾದ ಬಳಿಕ ಯಾವುದೇ ಸಿನಿಮಾದಲ್ಲೂ ಕಾಣಿಸಿಕೊಂಡಿಲ್ಲ. ಸುದೀಪ್ ನಟನೆ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಸುದೀಪ್ ನಟನೆಯ ಮ್ಯಾಕ್ಸ್ ಚಿತ್ರ ನೋಡೋಕೆ ಫ್ಯಾನ್ಸ್ ಕಾಯ್ತಿದ್ದು ಇದೀಗ ಕಿಚ್ಚ ಮ್ಯಾಕ್ಸ್ ಚಿತ್ರದ ಅಪ್ ಡೇಟ್ ನೀಡಿದ್ದಾರೆ. ಈ ಹಿಂದೆ ಮ್ಯಾಕ್ಸ್ ಸಿನಿಮಾದ ಕುರಿತು ಮಾಹಿತಿ ಹಂಚಿಕೊಂಡಿದ್ದ ಕಿಚ್ಚ ಸುದೀಪ್, “ನಿಮ್ಮ ಪ್ರೀತಿ, ಕ್ಯೂರಿಯಾಸಿಟಿ ನನಗೆ ಅರ್ಥವಾಗುತ್ತದೆ. ಆದರೆ, ಸಿನಿಮಾ ಶೂಟ್ ಪೂರ್ಣಗೊಳ್ಳದೆ ಆ ಬಗ್ಗೆ ಅಪ್‌ಡೇಟ್ ನೀಡೋದು ಹೇಗೆ” ಎಂದು ಪ್ರಶ್ನಿಸಿದ್ದರು. ಮ್ಯಾಕ್ಸ್ ಸಿನಿಮಾ ಶೂಟಿಂಗ್ ನವೆಂಬರ್ ತಿಂಗಳಲ್ಲಿ ಮಳೆಯಿಂದ ಸಾಧ್ಯವಾಗಿರಲಿಲ್ಲ. ಆದೇ ರೀತಿ ಡಿಸೆಂಬರ್‌ನಲ್ಲಿ ಅಡೆತಡೆಗಳು ಎದುರಾಗಿದ್ದವು. ಸಂಕ್ರಾಂತಿಯ ಬಳಿಕ ಈ ನಟ ‘ಮ್ಯಾಕ್ಸ್’ ಶೂಟಿಂಗ್ ಶುರು ಆಗಿದೆ ಎಂದಿದ್ದರು. ಇದೀಗ ಸುದೀಪ್ ಮ್ಯಾಕ್ಸ್ ಚಿತ್ರದ ಬಗ್ಗೆ ಮತ್ತೊಂದು ಅಪ್‌ಡೇಟ್ ಕೊಟ್ಟಿದ್ದಾರೆ. ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ನಟ, ಮ್ಯಾಕ್ಸ್ ಸಿನಿಮಾದ ಪ್ರಮುಖ ದೃಶ್ಯವನ್ನು ಶೂಟ್ ಮಾಡಿ ಮುಗಿಸಿದ್ದೇವೆ. ಅದೊಂದು ಪ್ರಮುಖ ಘಟ್ಟ. ಜೊತೆಗೆ…