‘ಅಗ್ನಿಸಾಕ್ಷಿ’ ಧಾರವಾಹಿ ಮೂಲಕ ಖ್ಯಾತಿ ಘಳಿಸಿರುವ ನಟ ವಿಜಯ್ ಸೂರ್ಯ ಸದ್ಯ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಈ ಮಧ್ಯೆ ವಿಜಯ್ ಸಿನಿಮಾವೊಂದಕ್ಕೆ ನಾಯಕನಾಗಿ ಎಂಟ್ರಿಕೊಟ್ಟಿದ್ದಾರೆ. ‘ಸ್ವೀಚ್ ಕೇಸ್ ಎನ್’ ಹೆಸರಿನ ಸಿನಿಮಾದಲ್ಲಿ ವಿಜಯ್ ನಟಿಸುತ್ತಿದ್ದು ಸದ್ಯ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ವಿಜಯ್ ಸೂರ್ಯ ಕನ್ನಡದ ಜೊತೆಗೆ ತೆಲುಗು ಕಿರುತೆರೆಯಲ್ಲೂ ಸಕ್ರಿಯರಾಗಿದ್ದಾರೆ. ಇದರ ಜೊತೆಗೆ ಕನ್ನಡ ಸಿನಿಮಾಗಳಲ್ಲಿ ವಿಜಯ್ ಮಿಂಚ್ತಿದ್ದಾರೆ. ಇದೀಗ ‘ಸ್ವೀಚ್ ಕೇಸ್ ಎನ್’ ಚಿತ್ರದ ಟ್ರೈಲರ್ ಮೂಲಕ ವಿಜಯ್ ಗಮನ ಸೆಳೆದಿದ್ದಾರೆ. ‘ಸ್ವೀಚ್ ಕೇಸ್ ಎನ್’ ಸಿನಿಮಾವು ಐಟಿ ಕಂಪನಿ ನಡೆಯುವ ಒಬ್ಬ ಹುಡುಗನ ಜರ್ನಿಯ ಕಥೆಯಾಗಿದೆ. ಸಿನಿಮಾ ರಿಯಲ್ ಬದುಕಿಗೆ ಕನೆಕ್ಟ್ ಆಗುವ ಹಾಗೇ ನೈಜವಾಗಿ ಮೂಡಿ ಬಂದಿದೆ. ರಿಯಲ್ ಸ್ಟೋರಿ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ. ಐಟಿ ಕಂಪನಿಯಲ್ಲಿ ಮ್ಯಾನೇಜರ್ ಜೊತೆ ನಡೆಯುವ ಮಾತುಕತೆ, ಕೆಲಸದಲ್ಲಿ ಎದುರಿಸುವ ಚಾಲೆಂಜ್ ಇವೆಲ್ಲವನ್ನೂ ಸಿನಿಮಾದಲ್ಲಿ ತೋರಿಸಲಾಗಿದೆ ಎಂದು ವಿಜಯ್ ಸೂರ್ಯ ಹೇಳಿದ್ದಾರೆ. ‘ಸ್ವೀಚ್ ಕೇಸ್ ಎನ್’ ಚಿತ್ರಕ್ಕೆ ಚೇತನ್ ಶೆಟ್ಟಿ…
Author: Author AIN
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಟಿಕೇಟ್ ನೀಡಿದರೆ ಚುನಾವಣೆ ಎದುರಿಸಲು ಸಿದ್ದ ಎಂದು ನಟ ಸಾಧುಕೋಕಿಲಾ ಹೇಳಿದ್ದಾರೆ. ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಲು ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲಾ ಅವರಿಗೆ ಟಿಕೆಟ್ ನೀಡುವಂತೆ ಪಕ್ಷದ ವರಿಷ್ಠರಿಗೆ ಕ್ರಿಶ್ಚಿಯನ್ ಸಮುದಾಯ ಒತ್ತಾಯಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಶ್ಚಿಯನ್ ಸಮುದಾಯ ಈ ಭಾಗದಲ್ಲಿ ಇರುವುದರಿಂದ ಸಾಧು ಕೋಕಿಲಾ ಅವರಿಗೇ ಟಿಕೆಟ್ ನೀಡುವಂತೆ ಮನವಿ ಮಾಡಲಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಪ್ರತಿಕ್ರಿಯಿಸಿರುವ ಸಾಧು ಕೋಕಿಲಾ , ನಾನು ಒಂದು ಧರ್ಮಕ್ಕೆ ಸೀಮಿತಿ ಆಗಿಲ್ಲ. ಬೆಂಗಳೂರಿನಲ್ಲಿ ನಾನು ಜನರಲ್ ಕಂಪಾರ್ಟಮೆಂಟ್. ನನ್ನನ್ನು ಎಲ್ಲಾ ಜಾತಿ ಧರ್ಮದವರು ಗುರುತಿಸುತ್ತಾರೆ. ನನ್ನ ಹಿನ್ನಲೆ ಜನರಿಗೆ ಗೊತ್ತಿದೆ. ನನನ್ನು ಯಾವ ಜಾತಿಗೂ ಸೇರಿಸಬೇಡಿ. ನಾನು ಎಲ್ಲರಿಗೂ ಸೇರಿದವನು. ಬೆಂಗಳೂರು 15 ಲಕ್ಷ ಜನ ಕ್ರಿಶ್ಚಿಯನ್ ಸಮುದಾಯದವರು ಇದ್ದಾರೆ. ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಹೆಚ್ಚು ಕ್ರಿಶ್ಚಿಯನ್ ಸಮುದಾಯದವರು ಇದ್ದಾರೆ. ಕ್ರಿಶ್ಚಿಯನ್ ಸಮುದಾಯದಿಂದ ಸಾಧು ಕೋಕಿಲಗೆ ಟಿಕೆಟ್ ಕೊಡಿ ಅಂತ ಕೇಳಿದ್ದಾರೆ. ನನಗೆ…
ವಿಮಾನವೊಂದರ ಇಬ್ಬರು ಪೈಲಟ್ ಗಳು ನಿದ್ದೆಗೆ ಜಾರಿದ ಪರಿಣಾಮ ವಿಮಾನ ದಿಕ್ಕು ತಪ್ಪಿದ ಘಟನೆ ಇಂಡೋನೇಷ್ಯಾದಲ್ಲಿ ಬಾಟಿಕ್ ನಲ್ಲಿ ನಡೆದಿದ್ದು ತಡವಾಗಿ ಘಟನೆ ಬೆಳಕಿಗೆ ಬಂದಿದೆ. ಈ ವರ್ಷದ ಜನವರಿ ತಿಂಗಳಲ್ಲಿ ಘಟನೆ ನಡೆದಿದ್ದು ಇದೀಗ ಪ್ರಕರಣ ಬೆಳಕಿಗೆ ಬಂದಿದೆ. ಅರ್ಧ ಗಂಟೆಯ ನಂತರ ನಿದ್ರೆಗೆ ಜಾರಿದ ಪೈಲಟ್ ಎಚ್ಚರಗೊಂಡಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಈ ಬಗ್ಗೆ ತನಿಖೆ ನಡೆಸಲಾಗಿದ್ದು, ಪೈಲಟ್ ಮತ್ತು ಸಹ ಪೈಲಟ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ಪೈಲಟ್‌ಗಳು ನಿದ್ರೆಗೆ ಜಾರಿದಾಗ ವಿಮಾನದಲ್ಲಿ ಸುಮಾರು 153 ಪ್ರಯಾಣಿಕರಿದ್ದರು. ಸುಲವೇಸಿಯಿಂದ ಜಕಾರ್ತಕ್ಕೆ ಈ ವಿಮಾನ ಹೊರಡುವ ವೇಳೆ ಈ ಘಟನೆ ನಡೆದಿದೆ. ಆದರೆ, ಈ ಘಟನೆಯ ಹಿಂದಿನ ರಾತ್ರಿ ಕರ್ತವ್ಯದಲ್ಲಿದ್ದ ಸಹ ಪೈಲಟ್ ಸರಿಯಾಗಿ ವಿಶ್ರಾಂತಿ ತೆಗೆದುಕೊಳ್ಳಲಿಲ್ಲ ಎಂದು ಹೇಳಲಾಗುತ್ತಿದೆ. ಮರುದಿನ ಸುಲವೇಸಿ ಏರ್ಪೋರ್ಟ್ ನಿಂದ ವಿಮಾನ ಟೇಕ್ ಆಫ್ ಆದ ಅರ್ಧ ಗಂಟೆಯ ನಂತರ ಫ್ಲೈಟ್ ಕ್ಯಾಪ್ಟನ್ ಸಹ ಪೈಲಟ್ ಬಳಿ ವಿಶ್ರಾಂತಿ ಪಡೆಯಲು ಅನುಮತಿ…
ಕನ್ನಡದ ಹಾಸ್ಯ ನಟ ಕೋಮಲ್ ಇದೀಗ ತಮಿಳು ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ತಮಿಳಿನ ಖ್ಯಾತ ನಟನ ಜೊತೆ ಕೋಮಲ್ ತೆರೆಹಂಚಿಕೊಳ್ಳುತ್ತಿದ್ದು ಈ ಬಗ್ಗೆ ಕೋಮಲ್ ಮಾಹಿತಿ ಹಂಚಿಕೊಂಡಿದ್ದಾರೆ. ಹಾಸ್ಯ ನಟನಾಗಿ ಸ್ಯಾಂಡಲ್ ವುಡ್ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟ ಕೋಮಲ್ ಇದೀಗ ನಾಯಕನಾಗಿ ಸದ್ದು ಮಾಡ್ತಿದ್ದಾರೆ. ಈ ಮಧ್ಯೆ ಕಾಲಿವುಡ್ ಸಿನಿಮಾದಲ್ಲಿ ನಟಿಸುವ ಆಫರ್ ಸಿಕ್ಕಿದೆ. ಚಿತ್ರವೊಂದರಲ್ಲಿ ತಮಿಳು ಲೆಜೆಂಡರಿ ಆ್ಯಕ್ಟರ್ ಶಿವಾಜಿ ಗಣೇಶನ್ ಪುತ್ರ ಪ್ರಭು ಜೊತೆ ಕೋಮಲ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶೂಟಿಂಗ್ ಸೆಟ್‌ನಲ್ಲಿ ನಟ ಪ್ರಭು ಜೊತೆ ಮಾತನಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿ ಪ್ರಭು ಜೊತೆ ತೆರೆಹಂಚಿಕೊಳ್ತಿರೋದು ಖುಷಿ ಕೊಟ್ಟಿದೆ ಎಂದು ಕೋಮಲ್ ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ಇದು ನನ್ನ ಮೊದಲ ತಮಿಳು ಸಿನಿಮಾ ಎಂದು ಕೋಮಲ್ ಹೇಳಿದ್ದಾರೆ. ತಮಿಳು ಸಿನಿಮಾ ಜೊತೆ ಕನ್ನಡದ ‘ಕುಟೀರ’ ಸಿನಿಮಾದಲ್ಲಿ ಕೋಮಲ್ ಬ್ಯುಸಿಯಾಗಿದ್ದಾರೆ. ಕೋಮಲ್‌ಗೆ ನಾಯಕಿಯಾಗಿ ಪ್ರಿಯಾಂಕಾ ತಿಮ್ಮೇಶ್ ನಟಿಸುತ್ತಿದ್ದಾರೆ. ಇದರ ಜೊತೆಗೆ ‘ಗಿಚ್ಚಿ ಗಿಲಿ ಗಿಲಿ’ 3 ಶೋಗೆ ಕೋಮಲ್…
ಪ್ರತಿಷ್ಠಿತ 2024ನೇ ವರ್ಷದ 96ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಅಮೆರಿಕಾದ ಲಾಸ್ ಏಂಜಲೀಸ್ ನ ಡಾಲ್ಬಿ ಚಿತ್ರಮಂದಿರದಲ್ಲಿ ನಡೆದಿದೆ. ಪ್ರತಿ ಬಾರಿಯೂ ಆಸ್ಕರ್ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿ ಆಗುತ್ತದೆ. ಈ ಬಾರಿ ಆಸ್ಕರ್ ಅವಾರ್ಡ್ ಕಾರ್ಯಕ್ರಮ ಸದ್ದು ಮಾಡುತ್ತಿರುವುದು ಜಾನ್ ಸೀನಾ ಅವರ ಕಾರಣಕ್ಕೆ. ಆಸ್ಕರ್ ಅವಾರ್ಡ್ ಕಾರ್ಯಕ್ರಮಕ್ಕೆ ಜಾನ್ ಸೀನಾ ಸಂಪೂರ್ಣ ಬೆತ್ತಲಾಗಿ ಆಗಮಿಸಿದ್ದರು. ಗುಪ್ತಾಂಗಕ್ಕೆ ಮಾತ್ರ ಒಂದು ಪ್ಲೇಟ್ ರೀತಿಯ ವಸ್ತುವನ್ನು ಹಿಡಿದುಕೊಂಡಿದ್ದರು. ಅವರು ಈ ರೀತಿ ವೇದಿಕೆ ಏರಿದ್ದು ‘ಅತ್ಯುತ್ತಮ ಕಾಸ್ಟ್ಯೂಮ್ ಅವಾರ್ಡ್’ ಪ್ರೆಸೆಂಟ್ ಮಾಡಲು. ಆ್ಯಂಕರ್ ಜಿಮ್ಮಿ ಕಿಮ್ಮೆಲ್ ಅವರು ಈ ರೀತಿ ಮಾಡುವಂತೆ ಜಾನ್ ಸೀನಾಗೆ ಸ್ಫೂರ್ತಿ ನೀಡಿದ್ದರು ಎನ್ನಲಾಗಿದೆ. ಸದ್ಯ ಈ ಫೋಟೋ ವೈರಲ್ ಆಗಿದೆ. ‘ಪೂರ್ ಥಿಂಗ್ಸ್’ ಸಿನಿಮಾಗೆ ಬೆಸ್ಟ್ ಕಾಸ್ಟ್ಯೂಮ್ ಡಿಸೈನ್ ಅವಾರ್ಡ್ ಸಿಕ್ಕಿದೆ. ಈ ಸಿನಿಮಾ ಜೊತೆ ‘ಆಪನ್ ಹೈಮರ್ ಕೂಡ ಹಲವು ಅವಾರ್ಡ್ ಗೆಲ್ಲುವ ನಿರೀಕ್ಷೆ ಇದೆ. ಕಳೆದ ಬಾರಿ ಭಾರತಕ್ಕೆ ಎರಡು ಆಸ್ಕರ್…
ಪ್ರತಿಷ್ಠಿತ 2024ನೇ ವರ್ಷದ 96ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಅಮೆರಿಕಾದ ಲಾಸ್ ಏಂಜಲೀಸ್ ನ ಡಾಲ್ಬಿ ಚಿತ್ರಮಂದಿರದಲ್ಲಿ ನಡೆದಿದೆ. ಈ ಬಾರಿಯ ಅತ್ಯುತ್ತಮ ನಟ ಪ್ರಶಸ್ತಿ ಓಪನ್ ಹೈಮರ್ ಸಿನಿಮಾಗಾಗಿ ಸಿಲಿಯನ್ ಮರ್ಫಿ ಪಾಲಾಗಿದ್ದರೆ, ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪೂರ್ ಥಿಂಗ್ಸ್ ಸಿನಿಮಾಗಾಗಿ ಎಮ್ಮಾ ಸ್ಟೋನ್ ಮುಡಿಗೇರಿಸಿಕೊಂಡಿದ್ದಾರೆ. ಅತ್ಯುತ್ತಮ ಚಿತ್ರ ಓಪನ್ ಹೈಮರ್, ಅತ್ಯುತ್ತಮ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಓಪನ್ ಹೈಮರ್ ಚಿತ್ರಕ್ಕಾಗಿ ಪಡೆದುಕೊಂಡಿದ್ದಾರೆ. ಓಪನ್ ಹೈಮರ್ ಚಿತ್ರದ ನಟನೆಗಾಗಿ ರಾಬರ್ಟ್ ಡೌನಿ ಜ್ಯೂ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಸಂದಿದ್ದರೆ, ದಿ ಹೋಲ್ಡೋವರ್ಸ್ ಸಿನಿಮಾದಲ್ಲಿನ ಅಭಿನಯಕ್ಕಾಗಿ ಡೇವಿನ್ ಜಾಯ್ ರಾಂಡೋಲ್ಫ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಕಳೆದ ಬಾರಿ ಭಾರತಕ್ಕೆ ಎರಡು ಆಸ್ಕರ್ ಪ್ರಶಸ್ತಿ ಬಂದಿದ್ದವು. ಆರ್.ಆರ್.ಆರ್ ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್ ಬಂದಿದ್ದರೆ, ದಿ ಎಲಿಫೆಂಟ್ ವಿಸ್ಪರರ್ಸ್ ಕಿರುಚಿತ್ರವೂ ಆಸ್ಕರ್ ಪ್ರಶಸ್ತಿ ಪಡೆದಿತ್ತು. ಈ ಬಾರಿ ಭಾರತದ ಯಾವುದೇ ಚಿತ್ರಕ್ಕೆ ಅಥವಾ ಡಾಕ್ಯುಮೆಂಟರಿಗೆ ಪ್ರಶಸ್ತಿ…
ಕ್ರಿಕೆಟ್ ಆಟದ ವೇಳೆ ತೆಲುಗು ನಟರಾದ ಪ್ರಭಾಸ್ ಹಾಗೂ ಅಲ್ಲು ಅರ್ಜುನ್ ಅಭಿಮಾನಿಗಳು ಗಲಾಟೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ವೇಳೆ ಪ್ರಭಾಸ್ ಅಭಿಮಾನಿಯೊಬ್ಬನ ಮೇಲೆ ಅಲ್ಲು ಅರ್ಜುನ್ ಫ್ಯಾನ್ಸ್ ಹಿಗ್ಗಾಮುಗ್ಗ ತಳಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಜೈ ಅಲ್ಲು ಅರ್ಜುನ್ ಅಂತ ಹೇಳು ಎನ್ನುವ ಮಾತುಗಳು ಪದೇ ಪದೇ ಕೇಳಿಸಿದೆ. ಪ್ರಭಾಸ್ ಅಭಿಮಾನಿ ಹೇಳದೇ ಇದ್ದಾಗ ರಕ್ತ ಬರುವಂತೆ ಹೊಡೆಯಲಾಗಿದೆ. ಆ ಹುಡುಗನ ಬಟ್ಟೆ ಹರಿದಿದೆ. ಇಂತಹ ಘಟನೆ ಮರುಕಳಿಸದಂತೆ ಕ್ರಮ ತೆಗೆದುಕೊಳ್ಳಲು ಸೋಷಿಯಲ್ ಮೀಡಿಯಾದಲ್ಲಿ ವಿನಂತಿಸಿದ್ದಾರೆ. ಈ ವಿಡಿಯೋವನ್ನು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ, ಸೂಕ್ತ ಕ್ರಮ ತೆಗೆದುಕೊಳ್ಳಲು ಆಗ್ರಹಿಸಲಾಗಿದೆ. ಫ್ಯಾನ್ಸ್ ವಾರ್ ಇಂದು ನಿನ್ನೆಯದಲ್ಲ. ಸಾಕಷ್ಟು ವರ್ಷಗಳಿಂದಲೂ ಈ ರೀತಿಯ ಘಟನೆಗಳು ನಡೆಯುತ್ತಲೆ ಇದೆ.
ಉನ್ನತ ಶಿಕ್ಷಣಕ್ಕಾಗಿ ಆಸ್ಟ್ರೇಲಿಯಾಗಿ ತೆರಳಿದ್ದ ವಿದ್ಯಾರ್ಥಿನಿ ದುರಂತ ಸಾವಿಗೀಡಾಗಿರುವ ಘಟನೆ ವರದಿಯಾಗಿದೆ. ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಗನ್ನವರಂ ಯುವ ವೈದ್ಯೆ ಆಸ್ಟ್ರೇಲಿಯಾದಲ್ಲಿ ದುರಂತ ಸಾವಿಗೀಡಾಗಿದ್ದು ಮೃತಳನ್ನು ಉಜ್ವಲಾ ಎಂದು ಗುರುತಿಸಲಾಗಿದೆ. ಉಜ್ವಲಾ ಸಾವಿಗೀಡಾಗಿರುವುದಾಗಿ ಆಕೆಯ ಫ್ರೆಂಡ್ಸ್ ಕುಟುಂಬಕ್ಕೆ ಮಾಹಿತಿ ನೀಡಿದ್ದು, ವೈದ್ಯೆಯಾಗಿ ಉನ್ನತ ಸ್ಥಾನಕ್ಕೇರಬೇಕು ಅಂದುಕೊಂಡಿದ್ದ ಮಗಳ ಸಾವು ಹೆತ್ತವರನ್ನು ಬೆಚ್ಚಿ ಬೀಳಿಸಿದೆ. ಉಜ್ವಲಾ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನ ಬಾಂಡ್ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ಮುಗಿಸಿ, ರಾಯಲ್ ಬ್ರಿಸ್ಬೇನ್ನ ಮಹಿಳಾ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕೆಲ ದಿನಗಳ ಹಿಂದೆ ಸ್ನೇಹಿತರ ಜೊತೆ ಟ್ರೆಕ್ಕಿಂಗ್ ಹೋಗಿದ್ದ ಏಕಾೇಏಕಿ ನಿಧನರಾಗಿದ್ದಾರೆ. ಮೃತ ಉಜ್ವಲಾ ಅವರ ಪಾರ್ಥಿವ ಶರೀರವನ್ನು ಕೃಷ್ಣಾ ಜಿಲ್ಲೆಯ ಅವರ ಸ್ವಗ್ರಾಮಕ್ಕೆ ಸ್ಥಳಾಂತರಿಸಲಾಗಿದ್ದು, ಉಂಗುತ್ತೂರು ಮಂಡಲದ ಎರ್ಟಕಪಾಡು ಎಂಬಲ್ಲಿ ಆಕೆಯ ಅಂತಿಮ ಸಂಸ್ಕಾರ ನೆರವೇರಿದೆ. ವೈದ್ಯೆಯಾಗಿ ಜೀವನದಲ್ಲಿ ಉನ್ನತ ಸ್ಥಾನಕ್ಕೇರಬೇಕಿದ್ದ ಮಗಳ ಹಠಾತ್ ಸಾವಿನಿಂದ ಪೋಷಕರು ಕಂಗಾಲಾಗಿದ್ದಾರೆ.
ತೆಲಂಗಾಣದ ಹೈದರಾಬಾದ್ ಮೂಲದ ಶ್ವೇತಾ ಮಧಗಾನಿ ಎಂಬ ಮಹಿಳೆಯ ಶವ ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯ ಪತ್ತೆಯಾಗಿದೆ. ಈಕೆಯನ್ನು ದುಷ್ಕರ್ಮಿಗಳು ಕೊಲೆ ಮಾಡಿ ರಸ್ತೆ ಬದಿಯಲ್ಲಿ ಎಸೆದು ಹೋಗಿದ್ದು ಆಕೆಯ ಪತಿಯ ಮೇಲೆ ಅನುಮಾನ ಮೂಡಿದೆ. ಶ್ವೇತಾ ಮಧಗಾನಿ ಶವ ಶನಿವಾರ (ಮಾರ್ಚ್ 9) ಬಕ್ಲಿಯಲ್ಲಿ ರಸ್ತೆ ಬದಿಯ ತೊಟ್ಟಿಯಲ್ಲಿ ಪತ್ತೆಯಾಗಿದೆ, ಕೊಲೆಯಲ್ಲಿ ಆಕೆಯ ಪತಿ ಅಶೋಕ್ ರಾಜ್ ಭಾಗಿಯಾಗಿರಬಹುದೆಂದು ಶಂಕಿಸಲಾಗಿದೆ. ಕೊಲೆಯ ನಂತರ ಅಶೋಕ್ ತಮ್ಮ ಮೂರು ವರ್ಷದ ಮಗನೊಂದಿಗೆ ಭಾರತಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದೆ.
ಅಡಲ್ಟ್ ಸಿನಿಮಾಗಳ ನಟಿ ಸೋಫಿಯಾ ಲಿಯೋನಿ ಅವರ ಶವ ಅಪಾರ್ಟ್ ಮೆಂಟ್ ನಲ್ಲಿ ಪತ್ತೆಯಾಗಿದೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಅಥವಾ ಆಕಸ್ಮಿಕ ಸಾವೋ ಎನ್ನುವುದು ತನಿಖೆಯಿಂದ ದೃಡಪಟ್ಟಿದೆ. 26 ವಯಸ್ಸಿನ ಸೋಫಿಯಾ ಲಿಯೋನಿ ಇತ್ತೀಚೆಗೆ ಮನೆಯವರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಕುಟುಂಬದವರಿಗೆ ಅನುಮಾನ ಬಂದಿದೆ. ಆ ಬಳಿಕ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮನೆಯ ಬಾಗಿಲು ತೆಗೆದು ನೋಡಿದಾಗ ಸೋಫಿಯಾ ಶವ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸೋಫಿಯಾ ಮಲತಂದೆ ಮೈಕ್ ರೋಮೆರೋ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಸೋಫಿಯಾ ತಾಯಿ ಹಾಗೂ ಕುಟುಂಬದ ಪರವಾಗಿ ಈ ವಿಚಾರವನ್ನು ತಿಳಿಸುತ್ತಿದ್ದೇನೆ. ಸೋಫಿಯಾ ಇನ್ನಿಲ್ಲ ಎನ್ನುವ ವಿಚಾರವನ್ನು ನಾನು ಹೇಳುತ್ತಿದ್ದೇನೆ. ಈ ಘಟನೆ ನಮ್ಮ ಕುಟುಂಬ ಹಾಗೂ ಗೆಳೆಯರಿಗೆ ಶಾಕ್ ನೀಡಿದೆ. ಸೋಫಿಯಾ ಅವರ ಅಂತ್ಯ ಸಂಸ್ಕಾರಕ್ಕೆ ಹಣ ಕಳುಹಿಸುವಂತೆ ಹಾಗೂ ಈ ಸಂಬಂಧ ತನಿಖೆ ನಡೆಸುವಂತೆ ಮೈಕ್ ಮನವಿ ಮಾಡಿದ್ದು ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ‘ಸೋಫಿಯಾ ಅವರು ಸದಾ ಪ್ರಯಾಣ…