ಕೆನಡಾದಿಂದ ಅಕ್ರಮವಾಗಿ ಅಮೆರಿಕ ಪ್ರವೇಶಿಸಲು ಯತ್ನಿಸುತ್ತಿದ್ದ ಮೂವರು ಭಾರತೀಯರು ಸೇರಿದಂತೆ ನಾಲ್ಕು ಜನರನ್ನು ನ್ಯೂಯಾರ್ಕ್ ಗಡಿಯಲ್ಲಿ ಬಂಧಿಸಲಾಗಿದೆ. ಬಫೆಲೊ ನಗರದ ಬಳಿ ಚಲಿಸುತ್ತಿದ್ದ ರೈಲಿನಿಂದ ಅಂತರರಾಷ್ಟ್ರೀಯ ಗಡಿಗೆ ಧುಮುಕಿದ ಓರ್ವ ಮಹಿಳೆ ಸೇರಿ ನಾಲ್ವರನ್ನು ಅಮೆರಿಕ ಗಡಿ ಭದ್ರತಾ ಪಡೆ ಬಂಧಿಸಿದೆ. ಬಂಧಿತರಲ್ಲಿ ಓರ್ವ ಡೊಮಿನಿಕ್ ರಿಪಬ್ಲಿಕ್ ಮೂಲದವನು ಎಂದು ಗೊತ್ತಾಗಿದೆ. ಗಾಯಗೊಂಡಿದ್ದ ಮಹಿಳೆ ನಡೆಯಲು ಸಾಧ್ಯವಾಗದ್ದರಿಂದ ಆಕೆಯನ್ನು ಅಲ್ಲಿಗೆ ಬಿಟ್ಟು ತೆರಳಾಗಿತ್ತು. ಪೊಲಿಸರು ಆಕೆಯನ್ನು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸ್ವಲ್ಪ ಸಮಯದಲ್ಲೇ ಉಳಿದ ಮೂವರನ್ನೂ ಬಂಧಿಸಲಾಗಿದೆ. ಮಹಿಳೆಗೆ ಪ್ರಥಮ ಚಿಕಿತ್ಸೆ ನೀಡಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಚಾರಣೆ ವೇಳೆ ಈ ನಾಲ್ವರೂ ಅಕ್ರಮವಾಗಿ ಅಮೆರಿಕ ಪ್ರವೇಶಿಸಲು ಯತ್ನಿಸಿದ್ದು ದೃಢಪಟ್ಟಿದೆ. ಉಳಿದ ಮೂವರನ್ನು ವಲಸೆ ಮತ್ತು ರಾಷ್ಟ್ರೀಯತೆ ಕಾಯ್ದೆಯ ಸೆಕ್ಷನ್ 212 ಹಾಗೂ 237 ಅಡಿಯಲ್ಲಿ ಗಡೀಪಾರು ಮಾಡಲು ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ.
Author: Author AIN
ವಾಟರ್ ಕ್ರಾಫ್ಟ್ ಓಡಿಸುತ್ತಿದ್ದ ವೇಳೆ 27 ವರ್ಷದ ಭಾರತೀಯ ವಿದ್ಯಾರ್ಥಿಯೊಬ್ಬರು ಮೃತಪಟ್ಟಿರುವ ಘಟನೆ ಅಮೆರಿಕದ ಫ್ಲೋರಿಡಾ ರಾಜ್ಯದಲ್ಲಿ ನಡೆದಿದೆ. ತೆಲಂಗಾಣದ ವೆಂಕಟರಮಣ ಪಿಟ್ಟಲ ಮೃತ ಭಾರತೀಯ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಪಿಟ್ಟಲ ಬಾಡಿಗೆಗೆ ಪಡೆದ ಯಮಹಾ ಪರ್ಸನಲ್ ವಾಟರ್ ಕ್ರಾಫ್ಟ್ (ಪಿಡಬ್ಲ್ಯೂಸಿ) ಓಡಿಸುತ್ತಿದ್ದರು, ಅದು ಮತ್ತೊಂದು ವಾಟರ್ ಕ್ರಾಫ್ಟ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.ಪಿಟ್ಟಲ ಅವರು ಇಂಡಿಯಾನಾಪೊಲಿಸ್‍ನ ಇಂಡಿಯಾನಾ ಯೂನಿವರ್ಸಿಟಿ ಪಡ್ರ್ಯೂ ವಿಶ್ವವಿದ್ಯಾನಿಲಯದಲ್ಲಿ ಪದವಿ ವಿದ್ಯಾರ್ಥಿಯಾಗಿದ್ದು, ಮೇ ತಿಂಗಳಲ್ಲಿ ಪದವಿ ಪಡೆಯಲು ನಿರ್ಧರಿಸಿದ್ದರು ಎನ್ನಲಾಗಿದೆ.
ಬಾಲಿವುಡ್ ಚಿತ್ರರಂಗದ ಖ್ಯಾತ ನಿರ್ಮಾಪಕ ಬೋನಿ ಕಪೂರ್ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಲಖನೌನಲ್ಲಿ ಬೋನಿ ಕಪೂರ್ ಹಾಗೂ ಯೋಗಿ ಆದಿತ್ಯನಾಥ್ ಭೇಟಿ ನಡೆದಿದ್ದು ಈ ವೇಳೆ ನೋಯ್ಡಾದಲ್ಲಿ ನಿರ್ಮಾಣ ಆಗಲಿರುವ ಫಿಲ್ಮ್ ಸಿಟಿ ಬಗ್ಗೆ ಮಾತನಾಡಿದ್ದಾರೆ. ನೋಯ್ಡಾದಲ್ಲಿ ಸಾವಿರಾರು ಕೋಟಿ ರೂಪಾಯಿ ಬಜೆಟ್ನಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಕಾರ್ಯ ನಡೆಯಲಿದ್ದು ಅದರ ಉಸ್ತುವಾರಿಯನ್ನು ಬೋನಿ ಕಪೂರ್ ಪಡೆದಿದ್ದಾರೆ. ಬೋನಿ ಕಪೂರ್ ಅವರ ಒಡೆತನದ ‘ಬೇವ್ಯೂ ಪ್ರಾಜೆಕ್ಸ್ಟ್’ ಮತ್ತು ಭೂತಾನಿ ಗ್ರೂಪ್ ಸಹಯೋಗದಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಆಗಲಿದೆ. ಮುಂಬರುವ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಬೇಕಾದ ಎಲ್ಲ ಬಗೆಯ ಅನುಮತಿಗಳಿರುವ ಪತ್ರವನ್ನು ಯೋಗಿ ಆದಿತ್ಯನಾಥ್ ಅವರು ಬೋನಿ ಕಪೂರ್ಗೆ ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿ ಅತ್ಯಾಧುನಿಕ ಸೌಕರ್ಯಗಳು ಇರುವ ಫಿಲ್ಮ್ ಸಿಟಿ ನಿರ್ಮಾಣ ಆಗಬೇಕು ಎಂಬುದು ಯೋಗಿ ಆದಿತ್ಯನಾಥ್ ಅವರ ಕನಸು. ಅದನ್ನು ಸಾಕಾರಗೊಳಿಸುವ ಅವಕಾಶವನ್ನು ತಮಗೆ ನೀಡಿದ್ದಕ್ಕಾಗಿ ಬೋನಿ ಕಪೂರ್…
ಬಾಲಿವುಡ್ ಚಿತ್ರರಂಗವನ್ನು ಆಳಿದವರಲ್ಲಿ ಕಪೂರ್ ಕುಟುಂಬ ಕೂಡ ಒಂದು. ಇಂದು ಕೂಡ ಕಪೂರ್ ಕುಟುಂಬದ ಸಾಕಷ್ಟು ಕುಟುಂಬದವರು ಹಿಂದಿ ಚಿತ್ರರಂಗದಲ್ಲಿ ಉತ್ತುಂಗದ ಸ್ಥಾನದಲ್ಲಿದ್ದಾರೆ. ಈ ಕುಟುಂಬದಲ್ಲಿ ಹಲವು ಸ್ಟಾರ್ ನಟ, ನಟಿಯರಿದ್ದಾರೆ. ಇವರ ಸಿನಿಮಾಗಳ ಜೊತೆಗೆ ಖಾಸಗಿ ಜೀವನದ ಬಗ್ಗೆಯೂ ಆಗಾಗ್ಗೆ ಸದ್ದು, ಸುದ್ದಿಗಳು ಆಗುತ್ತಿರುತ್ತವೆ. ಇದೇ ಕುಟುಂಬಕ್ಕೆ ಸೇರಿದ, 90-2000 ಸಮಯದಲ್ಲಿ ಬಾಲಿವುಡ್ ಅನ್ನು ಆಳಿದ ಕರಿಷ್ಮಾ ಕಪೂರ್ ಚಿತ್ರರಂಗದಿಂದ ಬಹುತೇಕ ದೂರಾಗಿದ್ದರು, ಇದೀಗ ಬಾಲಿವುಡ್ಗೆ ಮರಳಿದ್ದಾರೆ. ಒಂದು ಕಾಲದಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ್ದ ಕರಿಷ್ಮಾ ಮದುವೆಯಾದ ಬಳಿಕ ಚಿತ್ರರಂಗದಿಂದ ದೂರ ಸರಿದರು. ನಟಿಯಾಗಿದ್ದಂಗ ಚಿನ್ನದಂಥಹಾ ದಿನಗಳನ್ನು ನೋಡಿದ್ದ ನಟಿಮದುವೆಯಾದ ಬಳಿಕ ನರಕವನ್ನೇ ನೋಡಿದ್ದರು. ತಮ್ಮ ದಾಂಪತ್ಯದ ಬಗ್ಗೆ ಕರಿಷ್ಮಾ ಹಿಂದೊಮ್ಮೆ ಮಾತನಾಡಿದ್ದರು. ಅದೀಗ ಮತ್ತೆ ಸುದ್ದಿಯಾಗಿದೆ. ಕರೀಷ್ಮಾ ಕಪೂರ್, ಸಂಜಯ್ ಕಪೂರ್ ಎಂಬುವರನ್ನು 2003 ರಲ್ಲಿ ವಿವಾಹವಾಗಿದ್ದರು. ಆದರೆ ಮದುವೆಯಾದ ಕೆಲವೇ ದಿನಗಳಿಗೆ ಸಂಜಯ್ನ ನಿಜವಾದ ವ್ಯಕ್ತಿತ್ವದ ಪರಿಚಯವಾಗಿದೆ. ಪತ್ನಿಗೆ ಪತಿ ಸಂಜಯ್ ಕಪೂರ್ ತಮ್ಮ ಗೆಳೆಯರೊಟ್ಟಿಗೆ ಮಲಗುವಂತೆ…
ಜಪಾನಿನ ಕಂಪನಿಯೊಂದು ತಯಾರಿಸಿದ ಖಾಸಗಿ ರಾಕೆಟ್ ಉಡಾವಣೆಯಾದ ಕೆಲವೇ ಹೊತ್ತಿನಲ್ಲಿ ಸ್ಫೋಟಗೊಂಡಿದೆ. ಟೋಕಿಯೋ ಮೂಲದ ಸ್ಟಾರ್ಟ್ ಅಪ್ ಸ್ಪೇಸ್ ಒನ್ ಉಪಗ್ರಹ ಉಡಾವಣೆ ಮಾಡಲಾಗಿತ್ತು. ಉಡಾವಣೆಯಾದ 51 ನಿಮಿಷಯದಲ್ಲಿ ಉಪಗ್ರಹ ಕಕ್ಷೆಗೆ ಸೇರುವ ನಿರೀಕ್ಷೆಯನ್ನು ಸಂಸ್ಥೆ ಮಾಡಿತ್ತು. ಆದರೆ ನಿರೀಕ್ಷೆ ಉಲ್ಟ್ ಹೊಡೆದಿದೆ. ಯಶಸ್ವಿಯಾಗಿ ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಮೊದಲ ಜಪಾನಿನ ಖಾಸಗಿ ಸಂಸ್ಥೆಯ ಪ್ರಯತ್ನ ವಿಫಲವಾಗಿದೆ. ಕೈರೋಸ್ ರಾಕೆಟ್ ಪಶ್ಚಿಮ ಜಪಾನ್‌ನ ವಕಯಾಮಾ ಪ್ರಿಫೆಕ್ಚರ್‌ನಲ್ಲಿರುವ ಸ್ಟಾರ್ಟ್‌ಅಪ್‌ನ ಉಡಾವಣಾ ಕೇಂದ್ರದಿಂದ ಉಪಗ್ರಹ ಉಡಾವಣೆ ಮಾಡಲಾಗಿತ್ತು. ಆದರೆ ಉಡಾವಣೆಯಾದ ಕೆಲವೇ ಸೆಕೆಂಡುಗಳ ನಂತರ, ರಾಕೆಟ್ ಜ್ವಾಲೆಯ ಚೆಂಡಾಯಿತು. ಉಪಗ್ರಹ ಸ್ಫೋಟಗೊಂಡು ಉಡಾವಣಾ ಪ್ಯಾಡ್ ಪ್ರದೇಶದಲ್ಲಿ ಕಪ್ಪು ಹೊಗೆ ತುಂಬಿತ್ತು. ಉಡಾವಣೆಯಾದ ಸುಮಾರು 51 ನಿಮಿಷಗಳ ಹೊತ್ತಿಗೆ ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಭರವಸೆಯನ್ನು ಕೈರೋಸ್ ಹೊಂದಿತ್ತು. ಆದರೆ ಪ್ರಯತ್ನ ವಿಫಲವಾಗಿದೆ. ವಿಫಲತೆ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಸ್ಪೇಸ್ ಒನ್ ಸಂಸ್ಥೆ ತಿಳಿಸಿದೆ.
ಸ್ಯಾಂಡಲ್‌ವುಡ್ ನಟಿ ಪವಿತ್ರಾ ಗೌಡ ಸದ್ಯ ತಮ್ಮ ಕೈಯಲ್ಲಿ ಹಾಕಿಸಿಕೊಂಡಿರುವ ಟ್ಯಾಟೂ ಮೂಲಕ ಸುದ್ದಿಯಾಗ್ತಿದ್ದಾರೆ. ಪವಿತ್ರಾ ತಮ್ಮ ಕೈ ಮೇಲೆ 777 ಎಂದು ಟ್ಯಾಟು ಹಾಕಿಸಿಕೊಂಡಿದ್ದು ಇದನ್ನು ಬಿಗ್ ಬಾಸ್ ಖ್ಯಾತಿಯ ನಟಿ ನೀತು ವನಜಾಕ್ಷಿ ಹಾಕಿದ್ದಾರೆ. ಪವಿತ್ರಾ ಗೌಡ, ನೀತು ವನಜಾಕ್ಷಿ ಬಳಿ ಟ್ಯಾಟೂ ಹಾಕಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನಟಿ ಹಂಚಿಕೊಂಡಿದ್ದಾರೆ. ತಮ್ಮ ಬಲಗೈ ಮಣಿಕಟ್ಟಿನ ಮೇಲೆ ‘777’ ಎಂದು ಟ್ಯಾಟೂ ಹಾಕಿಸಿಕೊಂಡಿರುವ ಪವಿತ್ರಾ ಗೌಡ, ನನ್ನ ಪ್ರೀತಿ ಪಾತ್ರರಿಗೆ ಟ್ಯಾಟೂ ಹಾಕಿದ್ದು ಎಂದು ಬರೆದುಕೊಂಡಿದ್ದಾರೆ. ನೀತು ಅವರ ಟ್ಯಾಟೂ ಸ್ಟುಡಿಯೋಗೆ ಭೇಟಿ ನೀಡಿ ಅವರ ಕೈಯಲ್ಲಿಯೇ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇನ್ನೂ ಪವಿತ್ರಾ ಕೈಗೆ ‘777’ ಎಂದು ಟ್ಯಾಟೂ ಹಾಕಿಸಿಕೊಂಡಿರೋದು ಅಭಿಮಾನಿಗಳ ಗಮನ ಸೆಳೆದಿದೆ. 777 ಅಂದರೆ ಎನು? ಆದರೆ ಈ ಬಗ್ಗೆ ಪವಿತ್ರಾ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.
ತೆಲುಗು ನಟ ರಾಮ್ ಚರಣ್ ಪತ್ನಿ ಉಪಾಸನಾ ತಮ್ಮ ತಾತನ ಜೊತೆ ಅಯೋಧ್ಯೆಗೆ ತೆರಳಿ ರಾಮಲಲ್ಲಾ ದರ್ಶನ ಪಡೆದಿದ್ದಾರೆ. ರಾಮಲಲ್ಲಾ ಪ್ರತಿಷ್ಠಾಪನೆ ದಿನ ಪತಿ ರಾಮ್ ಚರಣ್ ಮತ್ತು ಮಾವ ಚಿರಂಜೀವಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಉಪಾಸನಾ ಹೋಗಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ತಾತಾನ ಜೊತೆ ತೆರಳಿ ರಾಮನ ದರ್ಶನ ಪಡೆದಿದ್ದಾರೆ. ತಾತ ಹಾಗೂ ಕುಟುಂಬದ ಕೆಲ ಸದಸ್ಯರ ಜೊತೆ ಅಯೋಧ್ಯೆಗೆ ತೆರಳಿದ್ದ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಆ ಬಳಿಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿ ಹಲವು ವಿಚಾರಗಳ ಕುರಿತು ಮಾತುಕತೆ ನಡೆಸಿದ್ದಾರೆ. ಅಯೋಧ್ಯೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಬೇಕು ಎನ್ನುವುದು ಉಪಾಸನಾ ಕನಸಾಗಿದೆ. ಅದಕ್ಕಾಗಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ್ದ ಆ ಬಗ್ಗೆ ಉಪಾಸನ ಮಾತುಕತೆ ನಡೆಸಿದ್ದಾರೆ. ಸದ್ಯದಲ್ಲೇ ಆಸ್ಪತ್ರೆಯ ಕೆಲಸವನ್ನು ಶುರು ಕೂಡ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
‘ಬಿಗ್ ಬಾಸ್’ ಖ್ಯಾತಿಯ ತುಕಾಲಿ ಸಂತೋಷ್ ಅವರ ಕಾರು ಅಪಘಾತವಾಗಿದೆ. ತುಮಕೂರಿನಲ್ಲಿ ತುಕಾಲಿ ಸಂತೋಷ್ ಅವರ ಕಾರು ಆಟೋಗೆ ಡಿಕ್ಕಿ ಹೊಡೆದಿದ್ದು, ಕುಣಿಗಲ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತುಕಾಲಿ ಸಂತೋಷ್ ಕೆಲ ದಿನಗಳ ಹಿಂದೆ ಕಿಯಾ ಕಂಪನಿಯ ಹೊಸ ಕಾರು ಖರೀದಿಸಿದ್ದರು. ಆದರೆ ಅವರ ಕಾರಿಗೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಬಳಿ ಆಟೋ ರಿಕ್ಷಾ ಡಿಕ್ಕಿ ಹೊಡೆದಿದ್ದು ಕಾರೂ ಹಾಗೂ ಆಟೋ ಜಖಂಗೊಂಡಿದೆ. ಘಟನೆಯಲ್ಲಿ ಯಾವುದೇ ಪ್ರಣಾಪಾಯ ಸಂಭವಿಸಿಲ್ಲ. ಘಟನೆಯ ವೇಳೆ ತುಕಾಲಿ ಸಂತೋಷ್ ಜೊತೆ ಪತ್ನಿ ಮಾನಸ ಪ್ರಯಾಣಿಸುತ್ತಿದ್ದರು. ಘಟನೆಯಲ್ಲಿ ಆಟೋ ಚಾಲಕ ಜಗದೀಶ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ದೂರು ಪ್ರತಿದೂರು ದಾಖಲಿಸಲು ಕುಣಿಗಲ್ ಗ್ರಾಮಾಂತರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆಟೋ ಡ್ರೈವರ್ ಕಾರ್‌ಗೆ ಡಿಕ್ಕಿ ಹೊಡೆದಿದ್ದಾರೆ ಅಂತಾ ತುಕಾಲಿ ಸಂತು ಕೂಡ ಆರೋಪಿಸುತ್ತಿದ್ದಾರೆ. ಈ ಬಗ್ಗೆ ಕುಣಿಗಲ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು…
ವಾಟ್ಸಾಪ್ ಸಂದೇಶಗಳ ಮೂಲಕ ಧರ್ಮನಿಂದನೆ: ವಿದ್ಯಾರ್ಥಿಗೆ ಮರಣದಂಡನೆ, ವಿದ್ಯಾರ್ಥಿನಿಗೆ ಜೀವಾವಧಿ ಶಿಕ್ಷೆ ಪ್ರವಾದಿ ಮೊಹಮ್ಮದ್ ಹಾಗೂ ಆತನ ಪತ್ನಿಯರ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಸಿ ಫೋಟೋ ಹಾಗೂ ವೀಡಿಯೊಗಳನ್ನು ಸಿದ್ಧಪಡಿಸಿದ್ದ 22 ವರ್ಷದ ವಿದ್ಯಾರ್ಥಿಗೆ ಮರಣದಂಡನೆ ಮತ್ತು ವಿದ್ಯಾರ್ಥಿಗೆ ಮರಣದಂಡನೆ ವಿಧಿಸಿದೆ. ಇಬ್ಬರ ವಿದ್ಯಾರ್ಥಿಗಳ ಜೊತೆಗೆ ವಾಟ್ಸಾಪ್ ಸಂದೇಶಗಳ ಮೂಲಕ ಧರ್ಮನಿಂದೆಯ ಆರೋಪದ ಮೇಲೆ 17 ವರ್ಷದ ಯುವತಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನ್ಯಾಯಾಲಯದ ನ್ಯಾಯಾಧೀಶರ ಆದೇಶವನ್ನು ಉಲ್ಲೇಖಿಸಿ, ಬಿಬಿಸಿ ಸುದ್ದಿಸಂಸ್ಥೆ ವರದಿ ಮಾಡಿದೆ. ಮುಸ್ಲಿಮರ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ 22 ವರ್ಷದ ವಿದ್ಯಾರ್ಥಿಯು ಧರ್ಮನಿಂದೆಯ ವಿಷಯವನ್ನು ಹಂಚಿಕೊಂಡಿದ್ದಾನೆ. ಹಾಗಾಗಿ ಮರಣದಂಡನೆ ವಿಧಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ಧರ್ಮನಿಂದನೆ ವಿಷಯವನ್ನು ಹಂಚಿಕೊಂಡಿದ್ದಕ್ಕಾಗಿ ಹದಿಹರೆಯದ ವಿದ್ಯಾರ್ಥಿನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಆದರೆ ಇಬ್ಬರೂ ಆರೋಪಗಳನ್ನು ನಿರಾಕರಿಸಿದ್ದು ಅವರು ವಕೀಲರು ಇಬ್ಬರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ವಾದಿಸಿದರು. ಲಾಹೋರ್‌ನಲ್ಲಿರುವ ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಯ ಸೈಬರ್…
ಬಹು ಸಿಡಿತಲೆಗಳನ್ನು ನಿಯೋಜಿಸುವ ಸಾಮರ್ಥ್ಯವಿರುವ ದೇಶೀಯವಾಗಿ ಅಭಿವೃದ್ಧಿಪಡಿಸಿದ ಅಗ್ನಿ-5 ಕ್ಷಿಪಣಿಯ ಮೊದಲ ಪರೀಕ್ಷೆ ಯಶಸ್ವಿಯಾಗಿದೆ. ಒಡಿಶಾ ಕರಾವಳಿ ಪ್ರದೇಶದಲ್ಲಿರುವ ಡಾ. ಎಪಿಜೆ ಅಬ್ದುಲ್ ಕಲಾಂ ದ್ವೀಪದಲ್ಲಿ ಸೋಮವಾರ ನಡೆದ ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿದೆ.ಈ ಯಶಸ್ಸಿನ ಹಿಂದೆ ಕ್ಷಿಪಣಿ ತಜ್ಞೆ ಆರ್. ಶೀನಾ ರಾಣಿ ಹೆಸರು ಸಾಕಷ್ಟು ಕೇಳಿ ಬಂದಿದೆ. ಅಗ್ನಿ-5 ಕ್ಷಿಪಣಿ ಅಭಿವೃದ್ಧಿಪಡಿಸಿದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ)ಯ ತಂಡದ ಮುಂದಾಳತ್ವವನ್ನು ವಹಿಸಿದವರು ಈ ಶೀನಾ ರಾಣೀ. 57 ವರ್ಷದ ಶೀನಾ ರಾಣಿ ಅವರು ಡಿಆರ್ಡಿಒದ ಹೈದರಾಬಾದ್ ಮೂಲದ ಅಡ್ವಾನ್ಸ್ಡ್ ಸಿಸ್ಟಮ್ಸ್ ಲ್ಯಾಬೋರೇಟರಿ (ಎಎಸ್ಎಲ್)ಯಲ್ಲಿ ಪ್ರೋಗ್ರಾಮ್ ಡೈರೆಕ್ಟರ್ ಆಗಿ ಕ್ಷಿಪಣಿ ಪ್ರಾಜೆಕ್ಟ್ನ ಮುನ್ನಡೆಸಿದರು. ಒಂದೇ ಕ್ಷಿಪಣಿಯು ವಿವಿಧ ಸ್ಥಳಗಳಲ್ಲಿ ಅನೇಕ ಸಿಡಿತಲೆಗಳಿಂದ ಟಾರ್ಗೆಟ್ಗಳನ್ನು ಧ್ವಂಸ ಮಾಡುವ ಸಾಮರ್ಥ್ಯ ಹೊಂದಿದೆ. 5000 ಕಿಮೀ ವ್ಯಾಪ್ತಿಯನ್ನು ಹೊಂದಿರುವ ಅಗ್ನಿ-5 ಕ್ಷಿಪಣಿಯನ್ನು ದೇಶದ ದೀರ್ಘಾವಧಿಯ ಭದ್ರತಾ ಅಗತ್ಯಗಳನ್ನು ಪರಿಗಣಿಸಿ ಅಭಿವೃದ್ಧಿಪಡಿಸಲಾಗಿದೆ. ಕ್ಷಿಪಣಿಯು ಚೀನಾದ ಉತ್ತರದ ಭಾಗ ಮತ್ತು ಯುರೋಪಿನ ಕೆಲವು ಪ್ರದೇಶಗಳನ್ನು ಒಳಗೊಂಡಂತೆ…