ಗಾಝಾದಲ್ಲಿ ಆಹಾರದ ಸಹಾಯಕ್ಕಾಗಿ ಕಾಯುತ್ತಿದ್ದ ಶೆಲ್ ಮೇಲೆ ದಾಳಿ ಮಾಡಿದ ಪರಿಣಾಮ ಘಟನೆಯಲ್ಲಿ ಸುಮಾರು 20 ಜನರು ಮೃತಪಟ್ಟಿದ್ದು 155ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪ್ಯಾಲೆಸ್ತೀನ್ ಎನ್ಕ್ಲೇವ್ನಲ್ಲಿರುವ ಆರೋಗ್ಯ ಸಚಿವಾಲಯ ತಿಳಿಸಿದೆ. ಘಟನೆಯು ಭೀಕರವಾಗಿದ್ದು ಶೆಲ್ ದಾಳಿಯಲ್ಲಿ ಇನ್ನಷ್ಟು ಅಧಿಕ ಸಾವು ನೋವುಗಳು ಸಂಭವಿಸಬಹುದು ಎಂದು ಅಲ್ ಶಿಫಾ ಆಸ್ಪತ್ರೆಯ ತುರ್ತು ಘಟಕದಲ್ಲಿ ಕೆಲಸ ಮಾಡುತ್ತಿರುವ ಡಾ.ಮೊಹಮ್ಮದ್ ಘ್ರಾಬ್ ಹೇಳಿದ್ದಾರೆ. ಗಾಝಾದ ಕುವೈತ್ ವೃತ್ತದಲ್ಲಿ ತಮ್ಮ ಹಸಿವನ್ನು ನೀಗಿಸಲು ಮಾನವೀಯ ಸಹಾಯಕ್ಕಾಗಿ ಕಾಯುತ್ತಿರುವ ನಾಗರಿಕರ ಗುಂಪನ್ನು ಗುರಿಯಾಗಿಸಿಕೊಂಡು ಇಸ್ರೇಲಿ ಆಕ್ರಮಿತ ಪಡೆಗಳು ದಾಳಿ ಮಾಡಿದ ಪರಿಣಾಮ ಈ ದುರಂತ ನಡೆದಿದೆ ಎಂದು ಪ್ರತ್ಯಕ್ಷ ದರ್ಶಿಗಳು ಮಾಹಿತಿ ನೀಡಿದ್ದಾರೆ.
Author: Author AIN
ಭಾರತದಲ್ಲಿ ‘ಪೌರತ್ವ ತಿದ್ದುಪಡಿ ಕಾಯ್ದೆ’ ಜಾರಿಗೆ ಬಂದಿದೆ ಎಂಬ ಅಧಿಸೂಚನೆಯ ಬಗ್ಗೆ ಕಳವಳ ಇದೆ ಎಂದು ಅಮೆರಿಕ ತಿಳಿಸಿದೆ. ಮಾರ್ಚ್ 11ರಂದು ‘ಪೌರತ್ವ ತಿದ್ದುಪಡಿ ಕಾಯ್ದೆ’ ಕುರಿತು ಭಾರತ ಸರ್ಕಾರ ಅಧಿಸೂಚನೆ ಹೊರಡಿಸಿರುವ ಕುರಿತು ಕಳವಳ ಹೊಂದಿದ್ದೇವೆ ಎಂದು ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ಮ್ಯಾಥ್ಯೂ ಮಿಲ್ಲರ್ ಹೇಳಿದ್ದಾರೆ. ‘ಪೌರತ್ವ ತಿದ್ದುಪಡಿ ಕಾಯ್ದೆ’ ಕಾಯ್ದೆಯನ್ನು ಹೇಗೆ ಜಾರಿಗೊಳಿಸಲಾಗುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಧಾರ್ಮಿಕ ಸ್ವಾತಂತ್ರ್ಯಕ್ಕೆ ಗೌರವ ಹಾಗೂ ಕಾನೂನಿನ ಅಡಿಯಲ್ಲಿ ಎಲ್ಲ ಧರ್ಮಗಳನ್ನು ಸಮಾನವಾಗಿ ಪರಿಗಣಿಸುವುದು ಪ್ರಜಾಪ್ರಭುತ್ವದ ಮೂಲಭೂತ ತತ್ವಗಳಾಗಿವೆ ಎಂದು ಹೇಳಿದ್ದಾರೆ. ಭಾರತದಲ್ಲಿ ಸಿಎಎ ಜಾರಿಗೊಳಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಈ ಕಾಯ್ದೆಯು ಯಾವುದೇ ದಾಖಲೆಗಳು ಇಲ್ಲದೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದಿಂದ 2014ರ ಡಿಸೆಂಬರ್ 31ಕ್ಕೆ ಮೊದಲು ಭಾರತ ಪ್ರವೇಶಿಸಿದ ಮುಸ್ಲಿಮೇತರರಿಗೆ ಭಾರತದ ಪೌರತ್ವವನ್ನು ನೀಡುತ್ತದೆ. ಈ ಮೂರು ದೇಶಗಳಲ್ಲಿ ದೌರ್ಜನ್ಯಕ್ಕೆ ಗುರಿಯಾಗಿ ಭಾರತಕ್ಕೆ ಬಂದ ಹಿಂದೂ, ಸಿಖ್, ಜೈನ, ಬೌದ್ಧ, ಪಾರ್ಸಿ ಮತ್ತು ಕ್ರೈಸ್ತ ಸಮುದಾಯದವರಿಗೆ ಭಾರತದ…
ಉತ್ತರ ಚೀನಾದ ಶಾಂಕ್ಸಿ ಪ್ರಾಂತ್ಯದ ಕಲ್ಲಿದ್ದಲು ಗಣಿಯ ಭೂಗತ ಗೋದಾಮಿನಲ್ಲಿ ನಡೆದ ಅಪಘಾತದಲ್ಲಿ ಸಿಲುಕಿದ್ದ ಏಳು ಗಣಿ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಝೊಂಗ್ಯಾಂಗ್ ಕೌಂಟಿಯ ಟಾವೊಯುವಾನ್ ಕ್ಸಿನ್ಲಾಂಗ್ ಕಲ್ಲಿದ್ದಲು ಕೈಗಾರಿಕಾ ನಿಗಮದಲ್ಲಿ ಘಟನೆ ನಡೆದಿದ್ದು ಇಂದು ಬೆಳಗ್ಗೆ 6.25ಕ್ಕೆ ಶವಗಳನ್ನು ಹೊರ ತೆಗೆಯಲಾಗಿದೆ. ಉಳಿದ ಕಾರ್ಮಿಕರ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿನ್ನೆ ರಾತ್ರಿ ಗಣಿಗಾರರು ಅಸಮರ್ಪಕ ಕಲ್ಲಿದ್ದಲು ಫೀಡರ್ ಅನ್ನು ದುರಸ್ತಿ ಮಾಡುತ್ತಿದ್ದಾಗ ಗೋದಾಮಿನಲ್ಲಿನ ಕಲ್ಲಿದ್ದಲು ರಾಶಿ ಕುಸಿದು ಏಳು ಜನರು ಸಮಾಧಿಯಾಗಿದ್ದಾರೆ ಎಂದು ಗಣಿಯ ಮುಖ್ಯಸ್ಥ ಗಾವೊ ನೈಚುನ್ ತಿಳಿಸಿದ್ದಾರೆ.
ಕೆಜಿಎಫ್ ಚಿತ್ರದ ಬಳಿಕ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ. ಇದುವರೆಗೂ ಚಿತ್ರತಂಡ ಚಿತ್ರದ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. ಇತ್ತೀಚೆಗೆ ನಟ ಯಶ್ ಗೋವಾದಲ್ಲಿ ಕಾಣಿಸಿಕೊಂಡಿದ್ದ ಟಾಕ್ಸಿಕ್ ಚಿತ್ರದ ಶೂಟಿಂಗ್ ನಡೆಯಲಿದೆ ಎಂಬ ಸುದ್ದಿ ಹರಡಿತ್ತು. ಇದೀಗ ಟಾಕ್ಸಿಕ್ ಸೆಟ್ ನಿಂದ ಕೆಲವೊಂದು ಫೋಟೋ ಹಾಗೂ ವಿಡಿಯೋ ಔಟ್ ಆಗಿದೆ. ಸೆಟ್ನ ಫೋಟೋ ಹಾಗೂ ವಿಡಿಯೋಗಳನ್ನು ಕೆಲವರು ಲೀಕ್ ಮಾಡಿದ್ದಾರೆ. ಅಂದಹಾಗೆ ಇದು ಶೂಟಿಂಗ್ ಹೌದೋ ಅಥವಾ ಇಲ್ಲವೋ ಎಂಬುದು ಇನ್ನೂ ಖಚಿತವಾಗಿಲ್ಲ. ಫ್ಯಾನ್ಸ್ ಇದು ಸೆಟ್ನ ವಿಡಿಯೋ ಎಂದೇ ಹೇಳುತ್ತಿದ್ದಾರೆ. ಸದ್ಯ ವೈರಲ್ ಆಗಿರುವ ಫೋಟೋದಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ. ‘ಕೆಜಿಎಫ್ 2’ ಬಳಿಕ ಯಶ್ ಅವರು ದೊಡ್ಡ ಬ್ರೇಕ್ ಪಡೆದರು. ಈ ಬ್ರೇಕ್ನಲ್ಲೂ ತಾವು ಸಿನಿಮಾ ಕೆಲಸದಲ್ಲಿ ಬ್ಯುಸಿ ಇರೋದಾಗಿ ಹೇಳಿದ್ದರು. ನಂತರ ಮಲಯಾಳಂ ನಿರ್ದೇಶಕಿ ಗೀತು ಮೋಹನ್ದಾಸ್ ಜೊತೆ ಸೇರಿ ಅವರು ‘ಟಾಕ್ಸಿಕ್’ ಸಿನಿಮಾ ಘೋಷಣೆ ಮಾಡಿದರು. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು…
ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟು ಅಲ್ಲಿಂದ ಹೊರ ಬಂದ ಬಳಿಕ ತಮ್ಮ ಚಿತ್ರ, ವಿಚಿತ್ರ ಫ್ಯಾಷನ್ ನಿಂದ ಸುದ್ದಿಯಾಗುತ್ತಿರುವ ನಟಿ ಉರ್ಫಿ ಜಾವೇದ್ ಇದೀಗ ಬಾಲಿವುಡ್ ಗೆ ಎಂಟ್ರಿಕೊಟ್ಟಿದ್ದಾರೆ. ನಾಯಕಿಯಾಗಿ ಬೆಳ್ಳಿಪರದೆಯ ಮೇಲೆ ಕಮಾಲ್ ಮಾಡೋಕೆ ಉರ್ಫಿ ಮುಂದಾಗಿದ್ದಾರೆ. ಬಾಲಿವುಡ್ ಚಿತ್ರರಂಗದ ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ಅವರು ‘ಲವ್ ಸೆಕ್ಸ್ ಔರ್ ಧೋಕಾ’ ಸೀಕ್ವೆಲ್ಗೆ ಉರ್ಫಿ ಜಾವೇದ್ ನಾಯಕಿಯಾಗಿದ್ದಾರೆ. ಇಂದಿನ ಪೀಳಿಗೆಯ ಅನುಭವಗಳ ಮೇಲೆ ಈ ಸಿನಿಮಾದ ಕಥೆ ಆಧರಿಸಿದ್ದು, ಕಥೆಯು ಸೋಷಿಯಲ್ ಮೀಡಿಯಾ ಮೇಲೆ ಆಧಾರಿಸಿದೆ. ಈ ಚಿತ್ರಕ್ಕೆ ಉರ್ಫಿನೇ ಸೂಕ್ತ ನಟಿ ಎಂದು ಚಿತ್ರತಂಡ ಆಯ್ಕೆ ಮಾಡಿದೆ. ಈ ಚಿತ್ರಕ್ಕೆ ದಿಬಾಕರ್ ಬ್ಯಾನರ್ಜಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದೇ ಏಪ್ರಿಲ್ 19ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬಕ್ಕೆ ಇನ್ನೂ ಎರಡು ದಿನ ಮಾತ್ರವೇ ಭಾಕಿ ಇದೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಈಗಿನಿಂದಲೇ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಅಪ್ಪು ನಟನೆಯ ಜಾಕಿ ಸಿನಿಮಾ ರಿರೀಲಿಸ್ ಆಗುತ್ತಿದೆ. ಅದಕ್ಕಾಗಿ ಅನೇಕ ಚಿತ್ರಮಂದಿರಗಳು ತಯಾರಾಗಿವೆ. ದುನಿಯಾ ಸೂರಿ ನಿರ್ದೇಶನದಲ್ಲಿ ಜಾಕಿ ಸಿನಿಮಾ ಮೂಡಿ ಬಂದಿದ್ದು, ಬಾಕ್ಸ್ ಆಫೀಸಿನಲ್ಲಿ ಸೂಪರ್ ಹಿಟ್ ಆಗಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಅಲ್ಲದೇ, ಈ ಸಿನಿಮಾದ ಹಾಡುಗಳು ಕೂಡ ಹೊಸ ರೀತಿಯಲ್ಲಿ ಕೇಳಿಸಿದ್ದವು. ಹಾಗಾಗಿ ಅಪ್ಪು ಡಾನ್ಸ್ ಕೂಡ ಅಭಿಮಾನಿಗಳಿಗೆ ಇಷ್ಟವಾಗಿತ್ತು. ಚಿತ್ರದ ಕಥೆ, ಅಪ್ಪು ಡಾನ್ಸ್, ಹಾಡು ಹಾಗೂ ಸಾಹಸ ಸನ್ನಿವೇಶಗಳಿಂದ ಜಾಕಿ ಸಿನಿಮಾ ಗಮನ ಸೆಳೆದಿತ್ತು. ಚಿತ್ರದಲ್ಲಿ ಪುನೀತ್ ಗೆ ಜೋಡಿಯಾಗಿ ನಟಿ ಭಾವನಾ ನಟಿಸಿದ್ದು ಈ ಸಿನಿಮಾ ಭಾವನಾಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಈ ಸೂಪರ್ ಹಿಟ್ ಸಿನಿಮಾಗೆ ಪಾರ್ವತಮ್ಮ ರಾಜ್ ಕುಮಾರ್ ಬಂಡವಾಳ ಹೂಡಿದ್ದರು. ಜಾಕಿ ಚಿತ್ರವನ್ನು ಮತ್ತಷ್ಟು ಅಪ್ ಗ್ರೇಡ್ ಮಾಡಿ ರಿಲೀಸ್…
ಕನ್ನಡದ ಹುಡುಗಿ ನಟಿ ಶ್ರೀಲೀಲಾ ಟಾಲಿವುಡ್ನಲ್ಲಿ ಸಖತ್ ಡಿಮ್ಯಾಂಡ್ ಕ್ರಿಯೇಟ್ ಮಾಡಿದ್ದಾರೆ. ಚಿತ್ರರಂಗ್ಕಕೆ ಎಂಟ್ರಿಕೊಟ್ಟ ಕೆಲವೇ ಕೆಲವು ವರ್ಷಗಳಲ್ಲಿ ಸ್ಟಾರ್ ನಟರ ಜೊತೆ ನಟಿಸುವ ಮೂಲಕ ಸಖತ್ ಆಫರ್ ಗಿಟ್ಟಿಸಿಕೊಂಡಿದ್ದಾರೆ. ಹೀಗಿರುವಾಗ ಗೋಲ್ಡನ್ ಚಾನ್ಸ್ವೊಂದನ್ನು ನಟಿ ಮಿಸ್ ಮಾಡಿಕೊಂಡಿದ್ದಾರೆ. ‘ಗುಂಟೂರು ಖಾರಂ’ ಸಿನಿಮಾ ಸಕ್ಸಸ್ ಆದ್ರೂ ಶ್ರೀಲೀಲಾಗೆ ಲಕ್ ಕೈಕೊಟ್ಟಂತಿದೆ, ಮೆಗಾಸ್ಟಾರ್ ಚಿರಂಜೀವಿ ಪುತ್ರ, ಆರ್ ಆರ್ ಆರ್ ಖ್ಯಾತಿಯ ಸ್ಟಾರ್ ನಟ ರಾಮ್ ಚರಣ್ ಜೊತೆ ಡ್ಯುಯೇಟ್ ಹಾಡುವ ಅವಕಾಶವನ್ನು ನಟಿ ಶ್ರೀಲೀಲಾ ಮಿಸ್ ಮಾಡಿಕೊಂಡಿದ್ದಾರೆ. ರಾಮ್ ಚರಣ್ ನಟನೆಯ 16ನೇ ಸಿನಿಮಾವನ್ನು ಬುಚ್ಚಿ ಬಾಬು ಸನಾ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರದಲ್ಲಿ ನಟ ಶಿವರಾಜ್ ಕುಮಾರ್ ಕೂಡ ಕಾಣಿಸಿಕೊಳ್ತಿದ್ದಾರೆ. ಈ ಸಿನಿಮಾದಲ್ಲಿ ರಾಮ್ ಚರಣ್ಗೆ ಜೋಡಿಯಾಗಿ ಶ್ರೀಲೀಲಾ ನಟಿಸ್ತಾರೆ ಎಂದು ಹೇಳಲಾಗಿತ್ತು. ಈ ಬಗ್ಗೆ ನಟಿಯ ಜೊತೆ ಚಿತ್ರತಂಡ ಮಾತುಕತೆ ಕೂಡ ನಡೆಸಿತ್ತು. ಆದರೆ ಏಕಾಏಕಿ ಶ್ರೀಲೀಲಾ ಜಾಗಕ್ಕೆ ನಟಿ ಜಾನ್ವಿ ಕಪೂರ್ ಎಂಟ್ರಿಕೊಟ್ಟಿದ್ದಾರೆ. ಬಾಲಯ್ಯ, ಮಹೇಶ್ ಬಾಬುರಂತಹ…
2024ರ ಲೋಕಸಭಾ ಚುನಾವಣೆಯ ಬಿಸಿ ಜೋರಾಗಿದೆ. ಈಗಾಗ್ಲೆ ಗಟಾನುಘಟಿಗಳನ್ನು ಕಣಕ್ಕಿಳಿಸಲು ಎಲ್ಲಾ ಪಕ್ಷಗಳು ಭರ್ಜರಿ ತಯಾರಿ ಮಾಡಿಕೊಳ್ಳುತ್ತಿವೆ. ಈ ಮಧ್ಯೆ ತೆಲುಗು ನಟ ಕಮ್ ರಾಜಕಾರಣಿ ಪವನ್ ಕಲ್ಯಾಣ್ಗೆ ಜಗನ್ ಬಿಗ್ ಶಾಕ್ ಕೊಟ್ಟಿದ್ದಾರೆ. ವಿಜಯವಾಡ ಲೋಕಸಭಾ ಕ್ಷೇತ್ರದಿಂದ ಅಕ್ಕಿನೇನಿ ನಾಗಾರ್ಜುನ ಕಣಕ್ಕೆ ಇಳಿಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಟಿಡಿಪಿ-ಜನಸೇನಾ ಮೈತ್ರಿ ಎದುರಿಸಲು ಅಕ್ಕಿನೇನಿ ಕುಟುಂಬದ ನಾಗಾರ್ಜುನಗೆ ಮಣೆ ಹಾಕಿದ್ದಾರೆ. ವೈ.ಎಸ್.ಆರ್ ಕಾಂಗ್ರೆಸ್ ಪಕ್ಷಕ್ಕೆ ತೆಲುಗು ನಟ ನಾಗಾರ್ಜುನ ಸಾಥ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಆಂಧ್ರಪ್ರದೇಶದಲ್ಲಿ ಅತಿ ಹೆಚ್ಚಿನ ಕ್ಷೇತ್ರಗಳು ಗೆಲ್ಲಲೇಬೇಕು. ಜನಸೇನಾ, ಟಿಡಿಪಿ ಮೈತ್ರಿಯನ್ನು ಸೋಲಿಸಲೇಬೇಕು ಎಂಬುದು ಜಗನ್ ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾಗಾರ್ಜುನ್ ಅವರನ್ನು ಕಣಕ್ಕಿಳಿಸಲು ಮುಂದಾಗಿದ್ದಾರೆ. ಈ ಮೂಲಕ ಪವನ್ ಕಲ್ಯಾಣ್ಗೆ ಬಿಗ್ ಕಾಂಪೀಟ್ ನೀಡಲು ಮುಂದಾಗಿದ್ದಾರೆ. ವಿಜಯವಾಡ ಲೋಕಸಭಾ ಕ್ಷೇತ್ರದಿಂದ ಅಕ್ಕಿನೇನಿ ನಾಗಾರ್ಜುನ ಅವರನ್ನು ಕಣಕ್ಕಿಳಿಸಲು ವೈಎಸ್ಆರ್ ಕಾಂಗ್ರೆಸ್ ನಿರ್ಧರಿಸಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದ್ರೆ ಈ ಬಗ್ಗೆ ಯಾವುದೇ ಅಧಿಕೃತ…
ಬಿಗ್ ಬಾಸ್ ಖ್ಯಾತಿಯ ತುಕಾಲಿ ಸಂತೋಷ್ ಇತ್ತೀಚೆಗೆ ದುಬಾರಿ ಕಾರು ಖರೀದಿಸಿದ್ದರು. ಆದರೆ ಕಾರು ಖರೀದಿಸಿದ ಕೆಲವೇ ದಿನಗಳಲ್ಲಿ ಅಪಘಾತ ಸಂಭವಿಸಿತ್ತು. ನಿನ್ನೆ ಅಂದರೆ ಮಾರ್ಚ್ 13ರ ಸಂಜೆ ತುಕಾಲಿ ಸಂತೋಷ್ ಅವರ ಕಾರು ಹಾಗೂ ಆಟೋ ಮಧ್ಯೆ ಅಪಘಾತ ಸಂಭವಿಸಿತ್ತು. ತೀವ್ರವಾಗಿ ಗಾಯಗೊಂಡ ಆಟೋ ಚಾಲಕ ಜಗದೀಶ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ನಿನ್ನೆ ಸಂಜೆ ತುಕಾಲಿ ಸಂತೋಷ್ ಪತ್ನಿ ಮಾನಸ ಜೊತೆ ಕಾರಿನಲ್ಲಿ ತುಮಕೂರು ಕಡೆಯಿಂದ ಕುಣಿಗಲ್ ಮಾರ್ಗವಾಗಿ ಹೊಳೆನರಸೀಪುರ ಕಡೆ ಹೋಗುತ್ತಿದ್ದರು. ಅದೇ ವೇಳೆ ಕುಣಿಗಲ್ನಿಂದ ಕುರುಡಿಹಳ್ಳಿಗೆ ಆಟೋ ತೆರಳುತ್ತಿತ್ತು. ತುಕಾಲಿ ಸಂತೋಷ್ ಕಾರಿನ ಬಲ ಭಾಗಕ್ಕೆ ಆಟೋ ಡಿಕ್ಕಿ ಹೊಡೆದಿದೆ. ಆಟೋ ಬಹುತೇಕ ನಜ್ಜುಗುಜ್ಜಾಗಿತ್ತು. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಬಳಿ ಈ ಅಪಘಾತ ನಡೆದಿದೆ. ಗಾಯಗೊಂಡಿದ್ದ ಆಟೋ ಚಾಲಕ ಜಗದೀಶ್ ಅವರನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಅವರು ಇಂದು…
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆಗೆ ಕರೆ ನೀಡಿರುವ ಬೆಲಾರಸ್ ನ ವಿದೇಶಾಂಗ ಸಚಿವ ಸೆರ್ಗೆಯ್ ಅಲೆನಿಕ್ ಅವರು ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸ್ಥಾನ ನೀಡುವುದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಭಾರತಕ್ಕೆ ಭೇಟಿ ನೀಡಿದ ವೇಳೆ ಈ ವಿಷಯ ಪ್ರಸ್ತಾಪಿಸಿರುವ ಅವರು, ಬೆಲರೂಸಿಯನ್ ವಿದೇಶಾಂಗ ಸಚಿವರು ವಿಶ್ವಸಂಸ್ಥೆಯ ಸುಧಾರಣೆಗಳ ತುರ್ತುಸ್ಥಿತಿಯನ್ನು ಒತ್ತಿ ಹೇಳಿದರು. ನಾವು ಸಾಮಾನ್ಯ ಸಭೆಯ 78 ನೇ ಅಧಿವೇಶನದಲ್ಲಿ ನಮ್ಮ ನಿಲುವನ್ನು ವ್ಯಕ್ತಪಡಿಸಿದ್ದೇವೆ ಮತ್ತು ಸಾಮಾನ್ಯ ಅಸೆಂಬ್ಲಿಯ 78 ನೇ ಅಧಿವೇಶನದಲ್ಲಿ ನಮ್ಮ ಅ„ಕೃತ ಹೇಳಿಕೆಯಲ್ಲಿ, ನಾವು ಭದ್ರತಾ ಮಂಡಳಿಗೆ ಭಾರತದ ಪ್ರವೇಶವನ್ನು ಬೆಂಬಲಿಸುತ್ತೇವೆ ಎಂದು ನಾವು ಸ್ಪಷ್ಟವಾಗಿ ಹೇಳಿದ್ದೇವೆ ಎಂದಿದ್ದಾರೆ. ಎಸ್ ಜೈಶಂಕರ್ ಅವರೊಂದಿಗಿನ ಭೇಟಿಯ ಕುರಿತು ಮಾತನಾಡಿದ ಅಲೆನಿಕ್ ಅವರು, ನಾವು ಹೆಚ್ಚು ನ್ಯಾಯಯುತ, ನ್ಯಾಯೋಚಿತ ಮತ್ತು ಬಹುಧ್ರುವೀಯ ವಿಶ್ವ ಕ್ರಮವನ್ನು ರಚಿಸುವ ದೃಷ್ಟಿಕೋನವನ್ನು ಹಂಚಿಕೊಳ್ಳುತ್ತೇವೆ. ಅಂತರಾಷ್ಟ್ರೀಯ ಸಂಬಂಧಗಳ ತತ್ವಗಳ ಬಗ್ಗೆ ನಾವು ಅದೇ ಅಭಿಪ್ರಾಯಗಳನ್ನು ಹೊಂದಿದ್ದೇವೆ. ಆದ್ದರಿಂದ ಮುಖ್ಯ ತತ್ವಗಳು ಸಮಾನತೆಗಳಾಗಿವೆ ಎಂದಿದ್ದಾರೆ. ಎಸ್ಸಿಒಗೆ ಬೆಲಾರಸ್ನ ಪ್ರವೇಶದ…