ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟಿದ ದಿನ ಇಂದು. ಈ ಹಿನ್ನೆಲೆಯಲ್ಲಿ ಇಂದು ಮುಂಜಾನೆಯಿಂದಲೇ ಅಪ್ಪು ಸ್ಮಾರಕದ ಬಳಿ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದು ಅಗಲಿದ ದಿವ್ಯ ಚೇತನಕ್ಕೆ ನಮನ ಸಲ್ಲಿಸಿದ್ದಾರೆ. ಅಪ್ಪು ಬರ್ತಡೇ ಹಿನ್ನೆಲೆಯಲ್ಲಿ ಮಧ್ಯರಾತ್ರಿಯಿಂದಲೇ ಹಲವು ರೀತಿಯ ಕಾರ್ಯಕ್ರಮಗಳು ಕಂಠೀರವ ಸ್ಟುಡಿಯೋನಲ್ಲಿನ ಅಪ್ಪು ಸ್ಮಾರಕ ಬಳಿ ಪ್ರಾರಂಭವಾಗಿವೆ. ರಾತ್ರಿಯೇ ಕೇಕ್ ಕತ್ತರಿಸಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಅಂದಹಾಗೆ ಅಪ್ಪುವಿನ ಈ ಹುಟ್ಟುಹಬ್ಬವನ್ನು ‘ಸ್ಪೂರ್ತಿಯ ಹಬ್ಬ’ವನ್ನಾಗಿ ಆಚರಿಸಲಾಗುತ್ತಿದೆ. ಹುಟ್ಟುಹಬ್ಬದ ಅಂಗವಾಗಿ ಅಪ್ಪುವಿನ ಸಮಾಧಿಯನ್ನು ಕೆಂಪು ಗುಲಾಬಿ ಹೂವುಗಳಿಂದ ಅಲಂಕರಿಸಲಾಗಿದೆ. ಅಭಿಮಾನಿಗಳ ಸುಗಮ ದರ್ಶನಕ್ಕೆ ಸಕಲ ರೀತಿಯ ವ್ಯವಸ್ಥೆ ಮಾಡಿಸಲಾಗಿದೆ. ಒಂದು ಲಕ್ಷಕ್ಕೂ ಹೆಚ್ಚು ಮಂದಿ ಅಭಿಮಾನಿಗಳು ಇಂದು ಒಂದೇ ದಿನ ಆಗಮಿಸುವ ನಿರೀಕ್ಷೆ ಇದ್ದು, ಎಲ್ಲರಿಗೂ ಅನ್ನದಾನ ವ್ಯವಸ್ಥೆಯನ್ನು ದೊಡ್ಮನೆ ಕುಟುಂಬ ಮಾಡಿದೆ. ಬಂದವರಿಗೆಲ್ಲ ಚಿಕನ್ ಬಿರಿಯಾನಿ ನೀಡುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಇದರ ಜವಾಬ್ದಾರಿಯನ್ನು ಯುವ ರಾಜ್ಕುಮಾರ್ ಹೊತ್ತುಕೊಂಡಿದ್ದಾರೆ ಎನ್ನಲಾಗುತ್ತಿದೆ. ಇಂದು ಬೆಳ್ಳಂಬೆಳಿಗ್ಗೆ ದೊಡ್ಮನೆ ಕುಟುಂಬದ ಸದಸ್ಯರೆಲ್ಲ ಸ್ಮಾರಕಕ್ಕೆ…
Author: Author AIN
ತೆಲುಗಿನ ಸ್ಟಾರ್ ನಟ ವಿಕ್ಟರಿ ವೆಂಕಟೇಶ್ ಅವರ 2ನೇ ಮಗಳು ಹಯವಾಹಿನಿಯ ಮದುವೆ ಅದ್ಧೂರಿಯಾಗಿ ನಡೆದಿದೆ. ದಗ್ಗುಬಾಟಿ ಕುಟುಂಬದ ನವಜೋಡಿಗೆ ಶುಭಕೋರಲು ಸ್ಟಾರ್ ಕಲಾವಿದರ ದಂಡೇ ಹರಿದು ಬಂದಿದ್ದು ನವ ಜೋಡಿಗೆ ಶುಭ ಹಾರೈಸಿದ್ದಾರೆ. ಹೈದರಾಬಾದ್ ನಲ್ಲಿ ನಡೆದ ಅದ್ದೂರಿ ವಿವಾಹದಲ್ಲಿ ಹಯವಾಹಿನಿ, ನಿಶಾಂತ್ ಎಂಬುವವರ ಜೊತೆ ಸಪ್ತಪತಿ ತುಳಿದಿದ್ದಾರೆ. ಹಯವಾಹಿನಿ ಎಂಗೇಜ್‌ಮೆಂಟ್ ಕಳೆದ ವರ್ಷ ನೆರವೇರಿದ್ದು, ಇದೀಗ ಅದ್ದೂರಿಯಾಗಿ ಮದುವೆ ನಡೆದಿದೆ. ಮದುವೆಗೆ ನಟರಾದ ಚಿರಂಜೀವಿ ಮಹೇಶ್ ಬಾಬು, ಕಾರ್ತಿ ಸೇರಿದಂತೆ ಸಾಕಷ್ಟು ಕಲಾವಿಧರು ಭಾಗಿಯಾಗಿ ನವ ದಂಪತಿಗೆ ವಿಶ್ ಮಾಡಿದ್ದಾರೆ.
ನಟ ಧ್ರುವ ಸರ್ಜಾ ತಮ್ಮ ಸಿನಿಮಾದ ಕೆಲಸದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಈ ಮಧ್ಯೆಯೇ ಬಿಡುವು ಮಾಡಿಕೊಂಡು ‘ಭುವನಂ ಗಗನಂ’ ಚಿತ್ರದ ಟ್ರೈಲರ್ ರಿಲೀಸ್ ಮಾಡುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಈ ವೇಳೆ, ಅಭಿಮಾನಿಗಳಿಗೆ ಧ್ರುವ ಸರ್ಜಾ ಮನವಿವೊಂದನ್ನು ಮಾಡಿದ್ದಾರೆ. ಪ್ರಮೋದ್, ಪೃಥ್ವಿ ಅಂಬರ್ ನಟನೆಯ ‘ಭುವನಂ ಗಗನಂ’ ಚಿತ್ರದ ಟೀಸರ್ ಲಾಂಚ್ ಇವೆಂಟ್‌ಗೆ ಧ್ರುವ, ಸರ್ಜಾ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಧ್ರುವ ಸರ್ಜಾ, ನಾನು ಅವರ ಫ್ಯಾನು, ಇವರ ಫ್ಯಾನು ಎನ್ನಬೇಡಿ. ಪ್ರತಿ ಸಿನಿಮಾಗೂ ಪ್ರೀತಿ ತೋರಿಸಿ ಎಂದು ಮನವಿ ಮಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಫ್ಯಾನ್ಸ್ ವಾರ್ ಇತ್ತೀಚೆಗೆ ತುಸು ಹೆಚ್ಚಾಗಿದೆ. ಸ್ಟಾರ್ ನಟರ ಅಭಿಮಾನಿಗಳು ಇನ್ನೊಬ್ಬ ನಟನನ್ನು ಸಾಮಾಜಿಕ ಜಾಲತಾಣದಲ್ಲಿ ಹೀಯಾಳಿಸುವುದು, ಇನ್ನೊಬ್ಬ ನಟನ ಅಭಿಮಾನಿಗಳೊಟ್ಟಿಗೆ ಜಗಳ ಮಾಡುವುದು ಸಾಮಾನ್ಯ ಎಂಬಂತಾಗಿದೆ. ಇದಕ್ಕಿಂತಲೂ ಮುಂದೆ ಹೋಗಿ, ಇತರೆ ನಟನ ಸಿನಿಮಾವನ್ನೇ ತುಳಿಯುವ ಪ್ರಯತ್ನಗಳೂ ನಡೆದಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ನಾವೆಲ್ಲರೂ ಒಂದೇ ಎಂದಿದ್ದಾರೆ. ಯಾರ ಫ್ಯಾನ್…
ಬಾಲಿವುಡ್ ನಟಿ ಕೃತಿ ಕರಬಂಧ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ದೆಹಲಿಯಲ್ಲಿ ಅದ್ಧೂರಿಯಾಗಿ ಪುಲ್ಕಿತ್ ಸಾಮ್ರಾಟ್ ಜೊತೆ ಹಸೆಮನೆ ಏರಿರುವ ಕೃತಿ ಕರಬಂಧ ಮದುವೆಯ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬಹುಕಾಲದ ಗೆಳೆಯನ ಜೊತೆ ಮದುವೆ ಆಗಿದ್ದು ಅತ್ಯಂತ ಸಂಭ್ರಮ ತಂದಿದೆ ಎಂದು ಕೃತಿ ಕರಬಂಧ ಸಂತಸ ಹಂಚಿಕೊಂಡಿದ್ದಾರೆ.ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿರುವ ಈ ಜೋಡಿಯನ್ನು ಶುಭ ಹಾರೈಸುವುದಕ್ಕಾಗಿ ಬಾಲಿವುಡ್ ಸ್ಟಾರ್‌ಗಳಾದ ರಿಚಾ ಚಡ್ಡಾ, ಅಲಿ ಫಜಲ್, ಫರ್ಹಾನ್ ಅಖ್ತರ್, ಶಿಬಾನಿ ದಾಂಡೇಕರ್, ಜೋಯಾ ಅಕ್ತರ್, ರಿತೇಶ್ ಸಿದ್ವಾನಿ, ಲವ್ ರಂಜನ್ ಸೇರಿದಂತೆ ಸಾಕಷ್ಟು ಕಲಾವಿದರು ಮತ್ತು ತಂತ್ರಜ್ಞರು ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದ್ದಾರೆ. ಮಾರ್ಚ್ 13ರಂದು ಮೆಹಂದಿ ಕಾರ್ಯಕ್ರಮ ನಡೆದಿದ್ದು, ಮಾರ್ಚ್ 14ರಂದು ಹಳದಿ ಶಾಸ್ತ್ರ ಮತ್ತು ಕಾಕ್‌ಟೈಲ್ ಪಾರ್ಟಿ ಆಯೋಜನೆ ಮಾಡಲಾಗಿತ್ತು. ನಿನ್ನೆ ಸುಮಾರು 300 ಎಕರೆಯಲ್ಲಿ ನಿರ್ಮಾಣಗೊಂಡಿರುವ ರೆಸಾರ್ಟ್‌ನಲ್ಲಿ ಈ ಜೋಡಿ ಹಸಮಣೆ ತುಳಿದಿದೆ. ದೆಹಲಿಯಲ್ಲಿರುವ ಐಟಿಸಿ ಗ್ರ್ಯಾಂಡ್ ಐಷಾರಾಮಿ ರೆಸಾರ್ಟ್‌ನಲ್ಲಿ ಮದುವೆ ನಡೆದಿದ್ದು…
ಟಾಲಿವುಡ್ ಸ್ಟಾರ್ ನಟ ರಾಮ್ ಚರಣ್ ಗೇಮ್ ಚೇಂಜರ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ‘ಆರ್ಆರ್ಆರ್’ ಸಿನಿಮಾದ ಬಳಿಕ ರಾಮ್ ಚರಣ್ ‘ಗೇಮ್ ಚೇಂಜರ್’ ಸಿನಿಮಾ ಒಪ್ಪಿಕೊಂಡಿದ್ದರಿಂದ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಇದೀಗ ಚಿತ್ರದ ಶೂಟಿಂಗ್ ಸೆಟ್ ನಿಂದ ಕೆಲವೊಂದು ಫೋಟೋ ಲೀಕ್ ಆಗಿದ್ದು ಆ ಮೂಲಕ ರಾಮ್ ಚರಣ್ ಅವರ ಪಾತ್ರದ ಲುಕ್ ಬಹಿರಂಗವಾಗಿದೆ. ಗೇಮ್ ಚೇಂಜರ್ ಚಿತ್ರವನ್ನು ಶಂಕರ್ ನಿರ್ದೇಶನ ಮಾಡುತ್ತಿದ್ದು ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಬಹುನಿರೀಕ್ಷಿತ ಸಿನಿಮಾಗಳ ಶೂಟಿಂಗ್ ನಡೆಯುವಾಗ ಚಿತ್ರತಂಡದವರು ಸಖತ್ ಎಚ್ಚರಿಕೆ ವಹಿಸುತ್ತಾರೆ. ಯಾವುದೇ ಫೋಟೋ ಅಥವಾ ವಿಡಿಯೋ ಲೀಕ್ ಆಗದಂತೆ ನೋಡಿಕೊಳ್ಳಲಾಗುತ್ತದೆ. ಆದರೂ ಕೂಡ ಕೆಲವೊಮ್ಮೆ ಇಂಥ ಎಡವಟ್ಟು ನಡೆಯುತ್ತದೆ. ‘ಗೇಮ್ ಚೇಂಜರ್’ ಸಿನಿಮಾದಲ್ಲಿ ರಾಮ್ ಚರಣ್ ಅವರ ಲುಕ್ ಹೇಗಿದೆ ಎಂಬುದು ಬಹಿರಂಗ ಆಗಿರುವುದರಿಂದ ಅಭಿಮಾನಿಗಳ ಕೌತುಕ ಕಡಿಮೆ ಆಗುವ ಸಾಧ್ಯತೆ ಇರುತ್ತದೆ. ಇದು ಚಿತ್ರತಂಡಕ್ಕೆ ತಲೆ ನೋವಾಗಿ ಪರಿಣಮಿಸಿದೆ. ಚುನಾವಣೆಯ ಕುರಿತು ‘ಗೇಮ್ ಚೇಂಜರ್’ ಸಿನಿಮಾ ಮೂಡಿಬರುತ್ತಿದ್ದು…
ಬಾಲಿವುಡ್ ಚಿತ್ರರಂಗದ ಹಿರಿಯ ನಟ ಬಿಗ್ ಬಿ ಅಮಿತಾಭ್ ಬಚ್ಚನ್ ಮಾರ್ಚ್ 15ರಂದು ಮುಂಬೈನ ಕೋಕಿಲಾಬೆನ್ ಧೀರೂಭಾಯ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿದೆ ಎಂದು ಹೇಳಲಾಗಿತ್ತು. ನೆಚ್ಚಿನ ನಟ ಏಕಾಏಕಿ ಆಸ್ಪತ್ರೆಗೆ ದಾಖಲಾದಾಗ ಅಭಿಮಾನಿಗಳಿಗೆ ಆತಂಕ ಉಂಟಾಗಿತ್ತು. ಇದೀಗ ಬಚ್ಚನ್ ಆರೋಗ್ಯ ಸುಧಾರಿಸಿದ್ದು ಮನೆಗೆ ಮರಳಿದ್ದಾರೆ. ಅಮಿತಾಭ್ ಬಚ್ಚನ್ಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿದೆ. ಈ ವಿಚಾರ ತಿಳಿದಾಕ್ಷಣ ಅಮಿತಾಭ್ ಬಚ್ಚನ್ ಅವರಿಗೆ ಹೃದಯ ಸಂಬಂಧಿ ಕಾಯಿಲೆ ಉಂಟಾಗಿರಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅವರಿಗೆ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಉಂಟಾಗಿಲ್ಲ. ನಟನ ಕಾಲಿನ ರಕ್ತನಾಳದ ಸಮಸ್ಯೆ ಉಂಟಾಗಿತ್ತು. ಇದಕ್ಕಾಗಿ ಅವರಿಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿದೆ. ಅಮಿತಾಭ್ ಶುಕ್ರವಾರ ಸಂಜೆಯೇ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದು ಸದ್ಯ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಅಮಿತಾಭ್ ಟ್ವಿಟರ್ನಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಅವರು ಸದಾ ಒಂದಲ್ಲಾ ಒಂದು ವಿಚಾರದ ಬಗ್ಗೆ ಟ್ವೀಟ್ ಮಾಡುತ್ತಾ ಇರುತ್ತಾರೆ. ಆಸ್ಪತ್ರೆಗೆ ಅಡ್ಮಿಟ್ ಆಗುವ ಸುದ್ದಿ ಹೊರ ಬೀಳುವುದಕ್ಕೂ ಮೊದಲು ಟ್ವಿಟರ್ನಲ್ಲಿ,‘ಎಂದೆಂದಿಗೂ ಚಿರಋಣಿ’…
ರಷ್ಯಾ ಅಧ್ಯಕ್ಷರ ಆಯ್ಕೆಗೆ ಶುಕ್ರವಾರ ಚುನಾವಣೆ ಆರಂಭವಾಗಿದ್ದು, ಹಾಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತೊಮ್ಮೆ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ. ರಷ್ಯಾದಲ್ಲಿ ಪ್ರಬಲ ವಿಪಕ್ಷವಿಲ್ಲದೇ ಚುನಾವಣೆ ನಡೆಯುತ್ತಿದೆ. ನಾಳೆ ಅಂದರೆ ಭಾನುವಾರದ ವರೆಗು ಚುನಾವಣೆ ನಡೆಯಲಿದ್ದು, ಇದೇ ಮೊದಲ ಬಾರಿಗೆ ಆನ್ ಲೈನ್‌ನಲ್ಲಿ ಮತಹಾಕಲು ಅವಕಾಶ ನೀಡಲಾಗಿದೆ. ಚುನಾವಣೆ ಆರಂಭವಾಗುತ್ತಿದ್ದಂತೆ ಮಾಸ್ಕೋದಲ್ಲಿ 2 ಲಕ್ಷ ಮಂದಿ ಹಕ್ಕು ಚಲಾಯಿಸಿದ್ದಾರೆ. ರತೀಶ್ ನಾಯರ್, ರಷ್ಯಾ ಒಕ್ಕೂಟದ ಕೇಂದ್ರ ಚುನಾವಣಾ ಆಯೋಗವು ಕೇರಳದಲ್ಲಿರುವ ರಷ್ಯಾದ ನಾಗರಿಕರು ತಮ್ಮ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಮತ ಚಲಾಯಿಸಿದ್ದಾರೆ. ಮತದಾನದಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಎಂದಿದ್ದಾರೆ. ನಾವು ಅಧ್ಯಕ್ಷೀಯ ಚುನಾವಣೆಯ ಚೌಕಟ್ಟಿನಲ್ಲಿ ಪ್ರಾಥಮಿಕ ಮತದಾನ ಆಯೋಜಿಸಿದ್ದೇವೆ. ಭಾರತದಲ್ಲಿ ವಾಸಿಸುವ ರಷ್ಯಾದ ಒಕ್ಕೂಟಗಳ ನಾಗರಿಕರಿಗೆ ಅವಕಾಶ ಒದಗಿಸಲು ನಾವು ಇಲ್ಲಿದ್ದೇವೆ ಎಂದು ಚೆನ್ನೈನ ಹಿರಿಯ ಕಾನ್ಸುಲ್ ಜನರಲ್ ಸೆರ್ಗೆ ಅಜುರೊವ್ ಹೇಳಿದ್ದಾರೆ. ಭಾರತದಲ್ಲಿ ಕೇರಳ ಸಹಿತ 144 ದೇಶಗಳ 288 ಮತಗಟ್ಟೆಗಳಲ್ಲಿ ರಷ್ಯಾ ನಾಗರಿಕರಿಗೆ ಹಕ್ಕು ಚಲಾಯಿಸಲು ಅವಕಾಶ…
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪರಭಾಷೆಯಲ್ಲಿ ಮಿಂಚುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸ್ಟಾರ್ ನಟರ ಸಿನಿಮಾಗಳಿಗೆ ಬಣ್ಣ ಹಚ್ಚುತ್ತಿರುವ ಶಿವಣ್ಣ ಇದೀಗ ರಾಮ್ ಚರಣ್ ಜೊತೆ ಸ್ಕ್ರೀನ್ ಶೇರ್ ಮಾಡ್ತಿದ್ದಾರೆ. ರಾಮ್ ಚರಣ್ ಹಾಗೂ ಶಿವರಾಜ್ ಕುಮಾರ್ ಕಾಂಬಿನೇಷನ್ ನ ಚಿತ್ರ ಇದೇ ಮಾರ್ಚ್ 20ರಂದು ಸೆಟ್ಟೇರಲಿದೆ. ರಾಮ್ ಚರಣ್ ಹಾಗೂ ಶಿವಣ್ಣ ಕಾಂಬಿನೇಷನ್ ನ ಸಿನಿಮಾಗೆ ಪೆದ್ದಿ ಎಂದು ಹೆಸರಿಡಲಾಗಿದೆಯಂತೆ. ಪೆದ್ದಿ ಎಂದರೆ ತೆಲುಗಿನಲ್ಲಿ ದೊಡ್ಡದು ಎಂದರ್ಥ. ಈ ಸಿನಿಮಾದ ಕುರಿತಂತೆ ಹಲವಾರು ವಿಚಾರಗಳು ಈಗಾಗಲೇ ತೆಲುಗು ಸಿನಿಮಾ ರಂಗದಲ್ಲಿ ಗಿರಕಿ ಹೊಡೆಯುತ್ತಿವೆ. ಈ ಸಿನಿಮಾದಲ್ಲಿ ಶಿವಣ್ಣ ಪ್ರಮುಖ ಪಾತ್ರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತಂತೆ ಸ್ವತಃ ಶಿವರಾಜ್ ಕುಮಾರ್ ಮಾತನಾಡಿದ್ದಾರೆ. ‘ತೆಲುಗಿನಲ್ಲಿ ಆಫರ್ ಬಂದಿದ್ದು ನಿಜ. ರಾಮ್ ಚರಣ್ ಅವರ ಚಿತ್ರವನ್ನು ನಿರ್ದೇಶನ ಮಾಡುತ್ತಿರುವ ಬುಚ್ಚಿ ಬಾಬು ನನ್ನನ್ನು ಭೇಟಿ ಮಾಡಿದ್ದಾರೆ. ಅವರೊಂದಿಗೆ ಮಾತನಾಡಿದ್ದೇನೆ. ಆದರೆ, ಆ ಸಿನಿಮಾ ಬಗ್ಗೆ ಸದ್ಯ ಏನೂ ಹೇಳಲಾರೆ ಎಂದು ಹೇಳುವ…
ಕಾಟೇರ ಸಿನಿಮಾದ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಡೆವಿಲ್ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಮೊದಲ ಹಂತದ ಚಿತ್ರೀಕರಣವು ಇದೇ ಸೋಮವಾರದಿಂದ ಬೆಂಗಳೂರಿನ ರಾಕ್ ಲೈನ್ ಸ್ಟುಡಿಯೋದಲ್ಲಿ ನಡೆಯಲಿದ್ದು, ಅದಕ್ಕೂ ಮುನ್ನ ಚಿತ್ರತಂಡ ಕುಕ್ಕೆ ಸುಬ್ರಮಣ್ಯಂ ಸ್ವಾಮಿ ದೇವಸ್ಥಾನಕ್ಕೆ ತೆರಳಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದೆ. ಈಗಾಗಲೇ ‘ಡೆವಿಲ್’ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿ ಸಖತ್ ಸದ್ದು ಮಾಡುತ್ತಿದೆ. ದರ್ಶನ್ ಹುಟ್ಟುಹಬ್ಬದ ದಿನ ಫ್ಯಾನ್ಸ್‌ಗೆ ಇದೊಂದು ಸರ್ಪ್ರೈಸ್ ಗಿಫ್ಟ್ ಆಗಿತ್ತು. ದರ್ಶನ್ ‘ಡೆವಿಲ್’ನಲ್ಲಿ ವಿಭಿನ್ನ ಲುಕ್‌ನಲ್ಲಿ ಕಾಣಿಸ್ಕೊಂಡಿದ್ದಾರೆ. ಇದೀಗ ಚಿತ್ರತಂಡ ಕುಕ್ಕೆಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ದರ್ಶನ್ ಹುಟ್ಟುಹಬ್ಬದ ದಿನವೇ ‘ಡೆವಿಲ್’ ಚಿತ್ರದ ಫಸ್ಟ್ ಲುಕ್ ರಿವೀಲ್ ಆಯ್ತು. ಅಬ್ಬರಿಸುವ ಡೈಲಾಗ್ ಮೂಲಕ ದಚ್ಚು ಎಂಟ್ರಿ ಬಹಳ ಕುತೂಹಲಕಾರಿಯಾಗಿತ್ತು. ‘ನಮ್ಮ ಮನೆಯಲೊಂದು ಪುಟ್ಟ ಪಾಪು ಇರುವುದು’ ಎಂಬ ವಿಭಿನ್ನ ಡೈಲಾಗ್ ಹೇಳುವ ಮೂಲಕ ದರ್ಶನ್ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದ್ದು ಇದೀಗ ಚಿತ್ರತಂಡ…
ಸದಾ ವಿವಾದಗಳ ಮೂಲಕವೇ ಸದ್ದು ಮಾಡುವ ಟಾಲಿವುಡ್ ಚಿತ್ರರಂಗದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇದೀಗ ಮತ್ತೊಂದು ಸುದ್ದಿ ನೀಡಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಾವು ಕಣಕ್ಕೆ ಇಳಿಯುವುದಾಗಿ ಘೋಷಣೆ ಮಾಡಿರುವ ವರ್ಮಾ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ರಾಮ್ ಗೋಪಾಲ್ ವರ್ಮಾ ಖ್ಯಾತ ನಟ ಪವನ್ ಕಲ್ಯಾಣ್ ವಿರುದ್ಧ ಚುನಾವಣೆ ಎದುರಿಸಲಿದ್ದಾರೆ. ಪವನ್ ಕಲ್ಯಾಣ್ ಆಂಧ್ರದ ಪಿಠಾಪುರಂ ಕ್ಷೇತ್ರದಿಂದ ಚುನಾವಣೆ ಸ್ಪರ್ಧೆ ಮಾಡಲಿದ್ದು, ಅದೇ ಕ್ಷೇತ್ರದಲ್ಲೇ ತಾವೂ ಸ್ಪರ್ಧೆ ಮಾಡುವುದಾಗಿ ವರ್ಮಾ ಹೇಳಿಕೊಂಡಿದ್ದಾರೆ. ಹಲವು ವರ್ಷಗಳಿಂದ ಪವನ್ ಕಲ್ಯಾಣ್ ಅವರಿಗೂ ವರ್ಮಾ ಅವರಿಗೂ ಶಿತಲ ಸಮರ ನಡೆಯುತ್ತಲೇ ಇದೆ. ಅದು ಸಿನಿಮಾಗಳ ಮೂಲಕ ಮತ್ತಷ್ಟು ಗದ್ದಲಕ್ಕೆ ಕಾರಣವಾಗಿದೆ. ಈ ಬಾರಿ ಚುನಾವಣೆಗೆ ಏನಾದರೂ ವರ್ಮಾ ನಿಂತರೆ, ಅದು ಮತ್ತೊಂದು ದಿಕ್ಕು ಪಡೆದುಕೊಳ್ಳುವುದು ಪಕ್ಕಾ ಆಗಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವರ್ಮಾ ಮಾಡಿರುವ ಫೋಸ್ಟ್ ಸಾಕಷ್ಟು ಕುತೂಹಲ ಮೂಡಿಸಿದೆ. ಸದಾ ಒಂದಲ್ಲ ಒಂದು ಕಾರಣಕ್ಕೆ ವಿವಾದ ಮಾಡಿಕೊಳ್ಳುವ…