Author: Author AIN

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಸ್ಯಾಂಡಲ್ ವುಡ್ ನ ಕ್ಯೂಟ್ ಕಪಲ್. ಸಿನಿಮಾ ರಂಗದ ಈ ಜೋಡಿ ಪ್ರತಿಯೊಬ್ಬರಿಗೂ ಮಾದರಿ. ರಾಧಿಕಾ ಪಂಡಿತ್ ಅವರು ಯಶ್​ಗೆ ಸದಾ ಬೆಂಬಲವಾಗಿ ನಿಂತಿದ್ದಾರೆ. ಯಶ್ ಎಷ್ಟೇ ಬ್ಯುಸಿ ಇದ್ದರೂ ಕುಟುಂಬಕ್ಕೆ ಸಮಯ ನೀಡುತ್ತಾರೆ. ಈಗ ರಾಧಿಕಾ ಪಂಡಿತ್ ಬಗ್ಗೆ ಯಶ್ ಮಾತನಾಡಿದ್ದು, ಪತ್ನಿಯನ್ನು ಬಾಯ್ತುಂಬ ಹೊಗಳಿದ್ದಾರೆ. ‘ದಿ ಹಾಲಿವುಡ್​ ರಿಪೋರ್ಟರ್​ ಇಂಡಿಯಾ’ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಯಶ್ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪತ್ನಿ ರಾಧಿಕಾ ಬಗ್ಗೆಯೂ ಮಾತನಾಡಿದ್ದು, ‘ಅವರು ನನ್ನ ಶಕ್ತಿ’ ಎಂದಿದ್ದಾರೆ. ‘ರಾಧಿಕಾ ಸಿಕ್ಕಿದ್ದು ನನ್ನ ಅದೃಷ್ಟ. ಅವಳು ಯಾವಾಗಲೂ ನನ್ನ ಬೆಂಬಲಿಸಿದ್ದಾಳೆ. ನನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾಳೆ. ಇಬ್ಬರೂ ಒಟ್ಟಾಗಿ ಬೆಳೆದವರು. ನಾವಿಬ್ಬರೂ ಗೆಳೆಯರಾಗಿ ಪರಿಚಯ ಆದವರು. ನಂತರ ಮದುವೆ ಆದೆವು. ನಾನು ಏನು ಎಂಜಾಯ್ ಮಾಡುತ್ತೇನೆ ಅನ್ನೋದು ಫ್ರೆಂಡ್ ಆಗಿ ಅವಳಿಗೆ ಗೊತ್ತು. ಈ ಚಿತ್ರದಿಂದ ಏನು ಸಿಗುತ್ತದೆ? ಎಷ್ಟು ಹಣ ಸಿಗುತ್ತದೆ…

Read More

ಹಿಜ್ಬುಲ್ಲಾ ಸಂಘಟನೆಯ ಪ್ರಮುಖ ನಾಯಕ ಮತ್ತು ಸಂಘಟನೆಯ ಮುಖ್ಯಸ್ಥ ಹಸನ್ ನಸ್ರಲ್ಲಾ ಅವರ ಉತ್ತರಾಧಿಕಾರಿ ಹಾಶೆಮ್ ಸಫಿಯುದ್ದೀನ್ ಬೈರುತ್ ವೈಮಾನಿಕ ದಾಳಿಯಲ್ಲಿ ನಿಧನರಾಗಿದ್ದಾರೆ ಎಂದು ಇಸ್ರೇಲ್ ಅಧಿಕಾರಿಗಳು ದೃಢಪಡಿಸಿದೆ. ಮೂರು ವಾರಗಳ ಹಿಂದೆ ಬೈರುತ್ ನ ದಕ್ಷಿಣ ಉಪನಗರಗಳಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಸಫಿಯುದ್ದೀನ್ ನನ್ನು ಹತ್ಯೆ ಮಾಡಲಾಗಿದೆ. ಸಫಿಯುದ್ದೀನ್ ನನ್ನು ನಿರ್ಮೂಲನೆ ಮಾಡುವ ಸಾಧ್ಯತೆಯಿದೆ ಎಂದು ಇಸ್ರೇಲ್ ಈ ಹಿಂದೆ ತಿಳಿಸಿತ್ತು. ಆದರೆ ಸಫಿಯುದ್ದೀನ್ ಹತ್ಯೆಯನ್ನು ಹಿಜ್ಬುಲ್ಲಾ ಇನ್ನೂ ದೃಡಪಡಿಸಿಲ್ಲ. ಇಸ್ರೇಲ್ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಹರ್ಜಿ ಹಲೇವಿ ಅವರು ಹಿಜ್ಬುಲ್ಲಾ ನಾಯಕತ್ವವನ್ನು ಗುರಿಯಾಗಿಸುವ ದೇಶದ ಬದ್ಧತೆಯನ್ನು ಒತ್ತಿಹೇಳಿದ್ದಾರೆ. “ನಾವು ಅವರ ಬದಲಿಯಾದ ನಸ್ರಲ್ಲಾ ಮತ್ತು ಹಿಜ್ಬುಲ್ಲಾದ ಹೆಚ್ಚಿನ ಹಿರಿಯ ನಾಯಕತ್ವವನ್ನು ತಲುಪಿದ್ದೇವೆ. ಇಸ್ರೇಲ್ನ ನಾಗರಿಕರ ಸುರಕ್ಷತೆಗೆ ಬೆದರಿಕೆ ಹಾಕುವ ಯಾರನ್ನಾದರೂ ನಾವು ತಲುಪುತ್ತೇವೆ” ಎಂದು ಅವರು ಹೇಳಿದರು.

Read More

ಇರಾಕ್ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಇಸ್ಲಾಮಿಕ್‌ ಸ್ಟೇಟ್ ಉಗ್ರಗಾಮಿಗಳ ಸಂಘಟನೆಯ ಕಮಾಂಡರ್ ಸೇರಿ ಎಂಟು ಅಧಿಕಾರಿಗಳನ್ನು ಹತ್ಯೆ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ದೇಶದ ಹಮ್ರಿನ್‌ ಶಿಖರ ಪ್ರಾಂತ್ಯದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಜಾಸ್ಸಿಂ ಅಲ್‌ ಮಜ್ರೂಯಿ ಅಬು ಅಬ್ದುಲ್‌ ಖಾದೆರ್ ಹತನಾಗಿದ್ದಾರೆ ಎಂದು ಪ್ರಧಾನಿ ಶಿಯಾ ಅಲ್‌ ಸುದಾನಿ ತಿಳಿಸಿದರು. ‘ಇರಾಕ್‌ನಲ್ಲಿ ಉಗ್ರಗಾಮಿಗಳಿಗೆ ಅವಕಾಶವಿಲ್ಲ. ಅವರ ಅಡಗುತಾಣಗಳಿಗೇ ನುಗ್ಗಿ, ನಿರ್ಮೂಲನೆ ಮಾಡುತ್ತೇವೆ’ ಎಂದು ಸುದಾನಿ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ. ಜಂಟಿ ಕಾರ್ಯಾಚರಣೆ ‌ತಂಡದ ಕಮಾಂಡ್‌ ಈ ಕುರಿತ ಹೇಳಿಕೆಯಲ್ಲಿ, ಗುಪ್ತದಳದ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಲಾಯಿತು. ದಾಳಿಯಲ್ಲಿ ಹತರಾದ ಇತರೆ ಅಧಿಕಾರಿಗಳ ವಿವರಗಳನ್ನು ಡಿಎನ್‌ಎ ಪರೀಕ್ಷೆಯ ಬಳಿಕ ಪ್ರಕಟಿಸಲಾಗುವುದು ಎಂದು ಪ್ರಧಾನಿ ಮಾಹಿತಿ ನೀಡಿದ್ದಾರೆ.

Read More

ರಶ್ಯ-ಉಕ್ರೇನ್ ಸಂಘರ್ಷಕ್ಕೆ ಶಾಂತಿಯುತ ಪರಿಹಾರವನ್ನು ಕಂಡುಕೊಳ್ಳುವ ಬಗ್ಗೆ ತನಗೆ ವಿಶ್ವಾಸಿವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ತಿಳಿಸಿದ್ದಾರೆ. ಉಕ್ರೇನ್ ಯುದ್ಧ ಕೊನೆಗೊಳಿಸಲು ಎಲ್ಲಾ ರೀತಿಯ ನೆರವನ್ನು ನೀಡಲು ಭಾರತ ಸದಾ ಸಿದ್ಧವಿದೆಯೆಂದು ಮೋದಿ ಭರವಸೆ ನೀಡಿದ್ದಾರೆ. ಬ್ರಿಕ್ಸ್ ಗುಂಪಿನ ಯಶಸ್ಸನ್ನು ಅಭಿನಂದಿಸಿದ ಅವರು, ”ಹಲವಾರು ರಾಷ್ಟ್ರಗಳು ಅದಕ್ಕೆ ಸೇರ್ಪಡೆಗೊಳ್ಳಲು ಬಯಸುತ್ತಿವೆ. ರಶ್ಯ-ಉಕ್ರೇನ್ ಸಮಸ್ಯೆ ಬಗ್ಗೆ ನಾವು ಎಲ್ಲ ಕಡೆಗಳಿಂದಲೂ ಸಂಪರ್ಕದಲ್ಲಿದ್ದೇವೆ. ಎಲ್ಲಾ ಸಂಘರ್ಷವನ್ನು ಮಾತುಕತೆಯ ಮೂಲಕ ಬಗೆಹರಿಸಬಹುದೆಂಬುದು ನಮ್ಮ ನಿಲುವಾಗಿದೆ. ಸಂಘರ್ಷಗಳಿಗೆ ಶಾಂತಿಯುತ ಪರಿಹಾರವನ್ನು ಕಂಡುಕೊಳ್ಳಬೇಕೆಂದು ನಾವು ನಂಬುತ್ತೇವೆ. ಶಾಂತಿ ಸ್ಥಾಪನೆಗೆ ನೆರವಾಗಲು ಭಾರತವು ಸದಾ ಸಿದ್ಧವಾಗಿದೆ ” ಎಂದು ಮೋದಿ ಅವರು ಪುಟಿನ್ ಜೊತೆಗಿನ ಮಾತುಕತೆಯ ಸಂದರ್ಭ ತಿಳಿಸಿದರು. ಮೋದಿ ಜೊತೆ ಮಾತುಕತೆ ಸಂದರ್ಭ ಪುಟಿನ್ ಅವರು ಭಾರತದ ಜೊತೆ ರಶ್ಯದ ಸುದೀರ್ಘ ಬಾಂಧವ್ಯವನ್ನು ಶ್ಲಾಘಿಸುತ್ತಾ, ” ರಶ್ಯನ್ – ಭಾರತೀಯ ಸಂಬಂಧವು ಒಂದು ನಿರ್ದಿಷ್ಟ ಸೌಭಾಗ್ಯಪೂರ್ಣವಾದ ವ್ಯಹಾತ್ಮಕ ಪಾಲುದಾರಿಕೆಯಾಗಿದೆ ಹಾಗೂ ಅದು…

Read More

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ರೋಚಕ ತಿರುವು ಪಡೆದುಕೊಂಡಿದೆ. ಈ ಬಗ್ಗೆ ಕೆಲವು ದಿನಗಳ ಹಿಂದೆ ಸ್ನೇಹಾ ಅಲಿಯಾಸ್ ಸಂಜನಾ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದರು. ಅಂತೆಯೇ ಇದೀಗ ಎಪಿಸೋಡ್ ನೋಡಿದ್ರೆ ಅವರ ಪಾತ್ರ ಅಂತ್ಯವಾಗುತ್ತಾ ಅನ್ನೋ ಅನುಮಾನ ಶುರುವಾಗಿದೆ. ಕೆಲವೊಂದು ಗುಡ್‌ ಬೈ ಹೇಳೋದು ತುಂಬ ಕಷ್ಟ. ಆದರೆ ಬೆಳವಣಿಗೆಗೆ ಅದು ತುಂಬಾ ಮುಖ್ಯ ಎಂದು ಸಂಜನಾ ಬರೆದುಕೊಂಡಿದ್ದರು. ಆಕೆ ಬರೆದುಕೊಂಡಿದ್ದಕ್ಕೆ ಪೂರಕ ಎಂಬಂತೆ ಸದ್ಯ ಪುಟ್ಟಕ್ಕನ ಮಕ್ಕಳ ಧಾರವಾಹಿಯ ಹೊಸ ಪ್ರೋಮೋ ಔಟ್‌ ಆಗಿದೆ. ಅತ್ತೆ ಪಾಲಿಗೆ ಸೊಸೆ ಸ್ನೇಹಾನೇ ಕಾವಲಾಗಿದ್ದಾಳೆ. ಬಂಗಾರಮ್ಮನಿಗೆ ತೋಡಿದ ಖೆಡ್ಡಾದಲ್ಲಿ ತಾನೇ ಉರುಳಿ ಬೀಳುವಂತಿದೆ ಸಿಂಗಾರಮ್ಮ‌. ಅತ್ತೆಯನ್ನು ಕಾಪಾಡಬೇಕು ಅಂತಿದ್ದ ಸ್ನೇಹಾಗೆ ಸಿಂಗಾರಮ್ಮ ಆಕ್ಸಿಡೆಂಟ್‌ ಮಾಡಿಸಬೇಕು ಎಂದು ಪ್ಲ್ಯಾನ್‌ ಮಾಡ್ತಾಳೆ. ಆದರೆ ಈ ಮಾತನ್ನು ಆಣೆ ಚೌಡವ್ವ ಕದ್ದು ಕೇಳಿಸಿಕೊಳ್ತಾಳೆ. ಆದರೆ ಈಗ ಹೊಸ ಪ್ರೋಮೋ ನೋಡಿದರೆ, ಸ್ನೇಹಾ ಹಾಗೂ ಬಂಗಾರಮ್ಮ ಬರುತ್ತಿದ್ದ ಕಾರು ಆಕ್ಸಿಡೆಂಟ್‌ ಆಗಿದೆ. ಭೀಕರ…

Read More

ರಷ್ಯಾ ಅಧ್ಯಕ್ಷ ಪುಟಿನ್ ನೇತೃತ್ವದ್ಲಲಿ ರಷ್ಯಾದಲ್ಲಿ ನಡೆದ ಬ್ರಿಕ್ಸ್ ಸಮ್ಮೇಳನದಿಂದ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಶಿ ಜಿನ್‌ಪಿಂಗ್ ನಡುವೆ ದ್ವಿಪಕ್ಷೀಯ ಮಾತುಕತೆ ನಡೆದಿದೆ. 2019, ಅಕ್ಟೋಬ್​​​ನಲ್ಲಿ ಚೀನಾ ಅಧ್ಯಕ್ಷರು ತಮಿಳುನಾಡಿನ ಮಹಾಬಲಿಪುರಮ್​​ ಗೆ ಭೇಟಿ ನೀಡಿದ್ದು ಈ ವೇಳೆ ಮೋದಿ, ಜಿನ್​ಪಿಂಗ್​ರನ್ನು ಭೇಟಿಯಾಗಿದ್ದರು. ಐದು ವರ್ಷಗಳ ಬಳಿಕ ಮತ್ತೆ ಉಭಯ ನಾಯಕರು ದ್ವಿಪಕ್ಷೀಯ ಮಾತುಕತೆ ನಡೆಸುತ್ತಿದ್ದಾರೆ. 2020ರಲ್ಲಿ ಗಾಲ್ವಾನ್‌ನಲ್ಲಿ ಭಾರತ ಮತ್ತು ಚೀನಾ ಸೇನೆಗಳ ನಡುವಿನ ಘರ್ಷಣೆ ನಡೆದಿತ್ತು. ನಂತರ ಉಭಯ ದೇಶಗಳ ನಡುವೆ ಉದ್ವಿಗ್ನಗೊಂಡಿತ್ತು. ಇದೀಗ ಎರಡು ದೇಶಗಳ ಮಾತುಕತೆ ಮತ್ತೆ ಭಾರತ ಹಾಗೂ ಚೀನಾ ಪರಿಸ್ಥಿತಿಯನ್ನು ಸುಧಾರಿಸುವ ಸಾಧ್ಯತೆ ಇದೆ. ಪ್ರಧಾನಿ ಮೋದಿ ಮತ್ತು ಜಿನ್‌ಪಿಂಗ್ ನಡುವೆ ನಡೆಯಲಿರುವ ಸಭೆಯ ಕುರಿತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಮಾಹಿತಿ ನೀಡಿದ್ದಾರೆ. ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ದ್ವಿಪಕ್ಷೀಯ ಸಭೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಪೂರ್ವ ಲಡಾಖ್‌ನಲ್ಲಿ ನಡೆಯುತ್ತಿದ್ದ ಗಡಿ ವಿವಾದ ಇತ್ಯರ್ಥಕ್ಕೆ…

Read More

200 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ​ ಸಂಬಂಧಿಸಿದಂತೆ ತಿಹಾರ್​ ಜೈಲಿನಲ್ಲಿರುವ ಸುಕೇಶ್​​ ಚಂದ್ರಶೇಖರ್​ ಜೈಲಿನಿಂದ ಖ್ಯಾತ ನಿರ್ದೇಶಕರೊಬ್ಬರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಖ್ಯಾತ ನಿರ್ದೇಶಕನ ಕಂಪನಿ ಷೇರುಗಳನ್ನು ತೆಗೆದುಕೊಳ್ಳಲು ಬಯಸುವುದಾಗಿ ತಿಳಿಸಿದ್ದಾರೆ. ಸುಕೇಶ್​​ ಚಂದ್ರಶೇಖರ್​​ರವರು ಜೈಲಿನಿಂದ ನಿರ್ದೇಶಕ ಹಾಗೂ ಖ್ಯಾತ ನಿರ್ಮಾಪಕ ಕಂ ನಟ ಕರಣ್​ ಜೋಹರ್​ ಗೆ ಪತ್ರ ಬರೆದಿದ್ದಾರೆ. ಸದ್ಯ ಕರಣ್ ಜೋಹರ್ ತಮ್ಮ ಧರ್ಮ ಪ್ರೊಡಕ್ಷನ್ ಕಂಪೆನಿಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಆ ಕಂಪೆನಿಯ ಷೇರುಗಳಲ್ಲಿ ಪ್ರಮುಖ ಷೇರುಗಳನ್ನು ತೆಗೆದುಕೊಳ್ಳಲು ಬಯಸುವುದಾಗಿ ಸುಕೇಶ್ ತಿಳಿಸಿದ್ದಾರೆ. ಪತ್ರದಲ್ಲಿ ಸುಕೇಶ್​​ ಚಂದ್ರಶೇಖರ್​,‘ನನ್ನ ಕಂಪನಿ ಎಲ್​ಎಸ್​​ ಹೋಲ್ಡಿಂಗ್ಸ್​​ ಬ್ರಿಟಿಷ್​ ವರ್ಜಿನ್​ ಐಲ್ಯಾಂಡ್ಸ್​ನಲ್ಲಿ ನೋಂದಣಿಯಾಗಿದೆ. ನಾವು ಆನ್​ಲೈನ್​ ಗೇಮಿಂಗ್​​, ಕಾರ್ಪೋರೇಟ್​​ ಸಂಪರ್ಕ ಜೊತೆಗೆ ವ್ಯಾಪಾರದಲ್ಲಿ ಆಸಕ್ತಿಯನ್ನು ಹೊಂದಿದ್ದೇವೆ. ಅಂತರಾಷ್ಟ್ರೀಯ ವ್ಯವಹಾರಗಳನ್ನು ನಡೆಸುತ್ತೇವೆ ಮತ್ತು ಈ ಸೇವೆಗಳನ್ನು ಸುಗಮಗೊಳಿಸುತ್ತೇವೆ. ಇದಲ್ಲದೆ, ಎಲ್​ಎಸ್​​ ಹೋಲ್ಡಿಂಗ್ಸ್​​ ಚಲನಚಿತ್ರ ನಿರ್ಮಾಣ ಮತ್ತು ಹಣಕಾಸು ಕಂಪನಿಯನಗನು ಹೊಂದಿದೆ. ನಮ್ಮ ವಾರ್ಷಿಕ ವಹಿವಾಟು ಸುಮಾರು 6300 ಕೋಟಿ ರೂಪಾಯಿಯನ್ನು ಹೊಂದಿದೆ ಎಂದು…

Read More

ರೇಣುಕಾಸ್ವಾಮಿ ಕೊಲೆ ಪ್ರಕರಣದ  ಆರೋಪ ನಟ ದರ್ಶನ್ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ಪದೇ ಪದೇ ಮುಂದೂಡಲಾಗುತ್ತಿದೆ. ಇದೀಗ ಹೈಕೋರ್ಟ್ ಜಾಮೀನು ಅರ್ಜಿ ವಿಚಾರಣೆಯನ್ನು ಅ.28ಕ್ಕೆ ಮುಂದೂಡಿದೆ. ದರ್ಶನ್ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ರವರ ಏಕಸದಸ್ಯ ಪೀಠದಲ್ಲಿ ನಡೆಯಿತು. ದರ್ಶನ್‌ ಪರ ವಾದ ಮಂಡಿಸಿದ ಹಿರಿಯ ವಕೀಲ ನಾಗೇಶ್‌, ತೀವ್ರವಾದ ಬೆನ್ನು ನೋಬಿನಿಂದ ಬಳಲುತ್ತಿರುವ ದರ್ಶನ್‌ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಬೇಕಿದೆ. ಹೀಗಾಗಿ ಜಾಮೀನು ಅರ್ಜಿ ಮಂಜೂರು ಮಾಡಬೇಕೆಂದು ಮನವಿ ಮಾಡಿದರು. ದರ್ಶನ್‌ ಅವರಿಗೆ ಈಗಾಗಲೇ ಚಿಕಿತ್ಸೆ ನೀಡಲಾಗುತ್ತಿದೆ. ಅವರಿಗೆ ಅದಷ್ಟು ಬೇಗ ಸರ್ಜಿಕಲ್ ಅಪರೇಶನ್ ಅವಶ್ಯಕತೆ ಇರುವದರಿಂದ ಜಾಮೀನನ್ನು ಶೀಘ್ರವಾಗಿ ನೀಡಬೇಕು ಎಂದು ಕೇಳಿಕೊಂಡರು. ಈ ವೇಳೆ ನ್ಯಾಯಾಧೀಶರು, ಕೂಡಲೇ ವೈದ್ಯಕೀಯ ವರದಿಗಳ ಸಲ್ಲಿಕೆ ಮಾಡುವಂತೆ ಸೂಚಿಸಿ ಮುಂದಿನ ವಿಚಾರಣೆಯನ್ನು ಅ.28ಕ್ಕೆ ಮುಂದೂಡಿದರು.

Read More

ಸಮಂತಾ ಮಾಜಿ ಪತಿ ನಾಗಚೈತನ್ಯ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಶೋಭಿತ ಮನೆಯಲ್ಲಿ ಮದುವೆ ಶಾಸ್ತ್ರ ಶುರು ಆರಂಭವಾಗಿದ್ದು, ಅವುಗಳ ಸಂಭ್ರಮದ ಫೋಟೋಗಳನ್ನು ಶೋಭಿತಾ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇತ್ತೀಚೆಗಷ್ಟೇ ನಾಗಚೈತನ್ಯ ಮನೆಯಲ್ಲಿ ನಾಗಚೈತನ್ಯ ಹಾಗೂ ಶೋಭಿತಾ ಎಂಗೇಜ್ ಮೆಂಟ್ ಮಾಡಲಾಗಿತ್ತು. ಇದೀಗ ಅದ್ದೂರಿಯಾಗಿ ಮದುವೆ ಸಿದ್ದತೆ ನಡೆಯುತ್ತಿದೆ. ಸದ್ದಿಲ್ಲದೆ ಹೆಣ್ಣಿನ ಮನೆಯಲ್ಲಿ ಮದುವೆ ಶಾಸ್ತ್ರ ಆರಂಭವಾಗಿದೆ. ಕೆಂಪು ಬಣ್ಣದ ಸೀರೆಯುಟ್ಟು ನಗುತ್ತಾ ಅರಿಶಿಣವನ್ನು ಕಟ್ಟುವ ಶಾಸ್ತ್ರದಲ್ಲಿ ಶೋಭಿತಾ ಭಾಗಿಯಾಗಿದ್ದಾರೆ. ನಾಗಚೈತನ್ಯ ಹಾಗೂ ಶೋಭಿತಾ ಮದುವೆ ಯಾವಾಗ? ಎಲ್ಲಿ ಎಂಬುದನ್ನು ಎಲ್ಲೂ ರಿವೀಲ್ ಮಾಡಿಲ್ಲ. ಸದ್ಯದ ಮಾಹಿತಿ ಪ್ರಕಾರ ರಾಜಸ್ಥಾನದಲ್ಲಿ ನಾಗಚೈತನ್ಯ ಮತ್ತು ಶೋಭಿತಾ ಮದುವೆ ನಡೆಯಲಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಕುಟುಂಬದಿಂದ ಯಾವುದೇ ಮಾಹಿತಿ ಹೊರ ಬಿದ್ದಿಲ್ಲ. ನಾಗಚೈತನ್ಯ 2017ರಲ್ಲಿ ನಟಿ ಸಮಂತಾ ಜೊತೆ ಮದುವೆಯಾಗಿದ್ದರು. ಆದರೆ 2021ರಲ್ಲಿ ಕೆಲ ಮನಸ್ತಾಪಗಳಿಂದ ಇಬ್ಬರೂ ಬೇರೆಯಾದರು. 4 ವರ್ಷಗಳ ದಾಂಪತ್ಯಕ್ಕೆ ಇಬ್ಬರೂ ಅಂತ್ಯ ಹಾಡಿದರು. ಇದೀಗ ನಾಗಚೈತನ್ಯ…

Read More

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಗೆ ಬೆನ್ನು ನೋವಿನ ಸಮಸ್ಯೆ ಉಲ್ಬಣಗೊಂಡಿದೆ. ಇದರಿಂದ ಬೆಂಗಳೂರಿನಲ್ಲಿ ಟ್ರೀಟ್ ಮೆಂಟ್ ತೆಗೆದುಕೊಳ್ಳಲು ನಟ ಸಾಕಷ್ಟು ಪ್ರಯತ್ನಿಸಿದ್ದರು. ಆದರೆ ಅದು ಸಾಧ್ಯವಾಗದ ಕಾರಣಕ್ಕೆ ಬಳ್ಳಾರಿಯಲ್ಲೇ ಟ್ರೀಟ್ ಮೆಂಟ್ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಈ ಸಂಬಂಧ ಹೈಕೋರ್ಟ್ ವೈದ್ಯಕೀಯ​ ವರದಿ ಕೇಳಿದ ಬೆನ್ನಲ್ಲೇ ವಿಮ್ಸ್​ನಲ್ಲಿ ದಾಸನಿಗೆ ಸ್ಕ್ಯಾನಿಂಗ್ ಮಾಡಲಾಗಿದೆ. ಬಳ್ಳಾರಿ ಜೈಲಿನಲ್ಲಿ ಬೆನ್ನು ನೋವಿನಿಂದ ದರ್ಶನ್​ ಪರದಾಡುತ್ತಿದ್ದಾರೆ ಎನ್ನಲಾಗಿದೆ. ಇಷ್ಟಿದ್ರೂ ಬಳ್ಳಾರಿಯಲ್ಲಿ ಸ್ಕ್ಯಾನಿಂಗ್ ಬೇಡ, ನಾನು ಬೆಂಗಳೂರಲ್ಲೇ ವೈದ್ಯರನ್ನು ಭೇಟಿ ಮಾಡುತ್ತೇನೆ ಎಂದು ದರ್ಶನ್ ಹೇಳುತ್ತಿದ್ದರು. ಆದ್ರೆ ಬೆನ್ನು ನೋವು ಹೆಚ್ಚಾದ ಕಾರಣಕ್ಕೆ ಚಿಕಿತ್ಸೆ ಅತ್ಯಗತ್ಯ ಅನ್ನೋದು ಅರಿವಾಗಿದೆ. ಹೈಕೋರ್ಟ್ ಕೂಡ ಮೆಡಿಕಲ್ ರಿಪೋರ್ಟ್ ಕೇಳಿರೋದ್ರಿಂದ ಬಳ್ಳಾರಿಯಲ್ಲಿ ದರ್ಶನ್ ಚಿಕಿತ್ಸೆ ಆರಂಭವಾಗಿದೆ. ಮಂಗಳವಾರ ರಾತ್ರಿ 9.10ಕ್ಕೆ ಆ್ಯಂಬುಲೆನ್ಸ್​ನಲ್ಲಿ ದರ್ಶನ್​ನ ಜೈಲಿನಿಂದ ವಿಮ್ಸ್‌‌ಗೆ ಕರದೊಯ್ಯಲಾಯ್ತು. ದರ್ಶನ್ ಆಸ್ಪತ್ರೆ ಬಳಿ ಬರ್ತಿದಂತೆ ಅಭಿಮಾನಿಗಳು ಶಿಳ್ಳೆ ಹೊಡೆದು ಹರ್ಷೋದ್ಘಾರ ಕೂಗಿದರು. ಪೊಲೀಸ್ ಭದ್ರತೆಯಲ್ಲಿ ವಿಮ್ಸ್‌ನಲ್ಲಿ ದರ್ಶನ್ ಗೆ…

Read More