ಗೀತ ಸಾಹಿತಿ ಜಾವೇದ್ ಅಖ್ತರ್ ತಮ್ಮ ಹೇಳಿಕೆಗಳ ಮೂಲಕ ಆಗಾಗ ಸುದ್ದಿ ಆಗುತ್ತಾ ಇರುತ್ತಾರೆ. ಹನಿ ಇರಾನಿ ಅವರನ್ನು 1972ರಲ್ಲಿ ಮದುವೆ ಆದ ಜಾವೇದ್ ಅಖ್ತರ್ 11 ವರ್ಷಗಳ ಬಳಿಕ ದೂರ ಆದರು. ದಶಕಗಳ ಕಾಲ ಒಟ್ಟಾಗಿ ಸಂಸಾರ ನಡೆಸಿದ್ದ ಇವರು ಬೇರೆ ಆದರು. ಈ ಸಂಬಂಧ ಮುರಿದು ಬೀಳಲು ಮದ್ಯ ಪಾನ ವ್ಯಸನವೇ ಕಾರಣ ಎಂದಿರುವ ಜಾವೇದ್ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ನಾನು ಏಕರೂಪ ನಾಗರಿಕ ಸಂಹಿತೆಯನ್ನು ಬೆಂಬಲಿಸುತ್ತೇನೆ ಎಂದು ಜಾವೇದ್ ಅಖ್ತರ್ ಹೇಳಿದ್ದಾರೆ. ‘ನಾನು ಏಕರೂಪ ನಾಗರಿಕ ಸಂಹಿತೆಯನ್ನು ಪಾಲಿಸುತ್ತಿದ್ದೇನೆ. ನಾನು ಒಬ್ಬರನ್ನು ಮದುವೆ ಆದೆ. 11 ವರ್ಷ ಒಟ್ಟಿಗೆ ಸಂಸಾರ ನಡೆಸಿದೆವು. ನಂತರ ವಿಚ್ಛೇದನ ಪಡೆದೆವು. ಮುಸ್ಲಿಂ ಕಾನೂನಿನ ಪ್ರಕಾರ ಅವಳಿಗೆ ಕೇವಲ ನಾಲ್ಕು ತಿಂಗಳ ಜೀವನಾಂಶ ಕೊಡುವ ಜವಾಬ್ದಾರಿ ನನ್ನ ಮೇಲಿತ್ತು. ಆದರೆ ನಾನು ಯೋಚಿಸಲಿಲ್ಲ. ಅವಳು ನನ್ನ ಜವಾಬ್ದಾರಿ. ಅವಳಿಗೆ ನನ್ನ ಬೆಂಬಲ ಬೇಕೋ ಅಥವಾ ಬೇಡವೋ ಎಂದು ನಿರ್ಧರಿಸುವ ಜವಾಬ್ದಾರಿ ಕೂಡ ಅವರದ್ದೇ’ ಎಂದಿದ್ದಾರೆ…
Author: Author AIN
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ, ಶ್ರೀನಿವಾಸರಾಜು ನಿರ್ದೇಶನದ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಚಿತ್ರೀಕರಣ ವಿಯೆಟ್ನಾಂ ನಲ್ಲಿ ಮುಕ್ತಾಯವಾಗಿದೆ. ಅಲ್ಲಿ ಚಿತ್ರದ ಎರಡು ಹಾಡುಗಳು ಹಾಗೂ ಕೆಲವು ಮಾತಿನ ಭಾಗದ ಚಿತ್ರೀಕರಣ ನಡೆದಿದೆ. ಇದರೊಂದಿಗೆ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಕ್ತಾಯವಾಗಿದೆ. ಗಣೇಶ್, ಮಾಳವಿಕ ನಾಯರ್, ಶರಣ್ಯ ಶೆಟ್ಟಿ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಪ್ರಸ್ತುತ ರೀರೆಕಾರ್ಡಿಂಗ್ ನಡೆಯುತ್ತಿದ್ದು, ಸದ್ಯದಲ್ಲೇ ಚಿತ್ರ ತೆರೆಗೆ ಬರಲು ಸಿದ್ದವಾಗಲಿದೆ. ಕೃಷ್ಣಂ ಪ್ರಣಯ ಸಖಿ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 41 ನೇ ಚಿತ್ರವಾಗಿದ್ದು, ಗಣೇಶ್ ಗೆ ಜೋಡಿಯಾಗಿ ಮಾಳವಿಕ ನಾಯರ್ ನಟಿಸಿದ್ದಾರೆ. ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ಶಿವಧ್ವಜ್, ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಮುಂತಾದವರು ನಟಿಸಿದ್ದಾರೆ. ಚಿತ್ರದಲ್ಲಿ ಐದು ಸುಮಧುರ ಹಾಡುಗಳಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ವೆಂಕಟ್ ಪ್ರಸಾದ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ “ಕೃಷ್ಣಂ ಪ್ರಣಯ ಸಖಿ”…
ಅನುಪಮಾ ಪರಮೇಶ್ವರ್ ನಟನೆಯ ‘ಟಿಲ್ಲು ಸ್ಕ್ವೇರ್’ ಚಿತ್ರ ಸಖತ್ ಸದ್ದು ಮಾಡುತ್ತಿದೆ. ಚಿತ್ರದಲ್ಲಿ ನಟಿ ಸಖತ್ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದು ಹಿಂದೆಂದೂ ಕಾಣದಷ್ಟು ಸೆಕ್ಸಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಸಾಕಷ್ಟು ಬೋಲ್ಡ್ ದೃಶ್ಯಗಳು ಹಾಗೂ ಕಿಸ್ಸಿಂಗ್ ದೃಶ್ಯಗಳಿದ್ದು ಇದೇ ಕಾರಣಕ್ಕೆ ಚಿತ್ರ ಮತ್ತಷ್ಟು ಸುದ್ದಿಯಾಗಿದೆ. ಇದೀಗ ಚಿತ್ರತಂಡ ಅಭಿಮಾನಿಗಳ ಜೊತೆ ಚಿತ್ರದ ಕುರಿತು ಚರ್ಚೆ ನಡೆಸಿದೆ. ಟಿಲ್ಲು ಸ್ಕ್ವೇರ್ ಚಿತ್ರದಲ್ಲಿ ಅನುಪಮಾಗೆ ಜೋಡಿಯಾಗಿ ನಟ ಸಿದ್ದು ಜೊನ್ನಲಗಡ್ಡ ಕಾಣಿಸಿಕೊಂಡಿದ್ದಾರೆ. ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಅವರು ಅವರು ‘ಡಿಜೆ ಟಿಲ್ಲು’ಗೆ ಸೀಕ್ವೆಲ್ ಮಾಡಬಹುದು ಎಂದು ಹೇಳಿದ್ದರು. ಈ ಪ್ಲ್ಯಾನ್ ನಿರ್ಮಾಪಕರಿಗೂ ಇಷ್ಟ ಆಗಿತ್ತು. ಮೊದಲು ‘ಟಿಲ್ಲು ರಿಟರ್ನ್’, ‘ಟಿಲ್ಲು 2’ ಎಂದೆಲ್ಲ ಟೈಟಲ್ ಇಡಲಾಗಿತ್ತು. ತ್ರಿವಿಕ್ರಮ್ ಅವರು ‘ಟಿಲ್ಲು ಸ್ಕ್ವೇರ್’ ಟೈಟಲ್ ಫಿಕ್ಸ್ ಮಾಡಿದ್ದರು ಎಂದು ಚಿತ್ರತಂಡ ಹೇಳಿದೆ. ಕಿಸ್ಸಿಂಗ್ ದೃಶ್ಯಗಳು ಇದ್ದರೆ ಇಡೀ ಕುಟುಂಬದವರು ಹೋಗಿ ಸಿನಿಮಾ ನೋಡಲು ಮುಜುಗರ ಆಗುತ್ತದೆ. ಈ ಕಾರಣಕ್ಕೆ ಇದು ಫ್ಯಾಮಿಲಿ ಸಿನಿಮಾ ಆಗಲು ಸಾಧ್ಯವೇ ಎಂದು…
ಬಲ್ಗೇರಿಯನ್ ಹಡಗು ‘ರುಯೆನ್’ ಮತ್ತು ಅದರ ಸಿಬ್ಬಂದಿಯನ್ನು ಸೊಮಾಲಿಯಾದ 35 ಕಡಲ್ಗಳ್ಳರ ಅಪಹರಿಸಿದ್ದು, ಸುದೀರ್ಘ 40 ಗಂಟೆಗಳ ಕಾರ್ಯಾಚರಣೆ ನಡೆಸಿದ್ದ ಭಾರತೀಯ ನೌಕಾಪಡೆ ಕಡಲ್ಗಳ್ಳರನ್ನು ವಶಕ್ಕೆ ಪಡೆದು 17 ಒತ್ತೆಯಾಳುಗಳನ್ನು ರಕ್ಷಿಸಿದ್ದರು. ಈ ಕಾರ್ಯಾಚರಣೆಯನ್ನು ಬಲ್ಗೇರಿಯಾ ಅಧ್ಯಕ್ಷ ಕೊಂಡಾಡಿದ್ದು ಧನ್ಯವಾದ ಹೇಳಿದ್ದಾರೆ. ಭಾರತೀಯ ನೌಕಾಪಡೆಯ ಶೌರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದು, ಅಪಹರಣಕ್ಕೊಳಗಾದ ಹಡಗಿನಿಂದ ತನ್ನ ಏಳು ನಾಗರಿಕರ ಪ್ರಾಣ ಉಳಿಸಿದ್ದಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ಬಲ್ಗೇರಿಯಾದ ಅಧ್ಯಕ್ಷ ರುಮೆನ್ ರಾದೇವ್ ಪ್ರಧಾನಿ ಮೋದಿ ಮತ್ತು ಭಾರತೀಯ ನೌಕಾಪಡೆಗೆ ಧನ್ಯವಾದ ತಿಳಿಸಿದ್ದಾರೆ. ಕಳೆದ ಡಿಸೆಂಬರ್ 14ರಂದು ಎಂವಿ ರೂಯೆನ್ ಅನ್ನು ಸೊಮಾಲಿ ಕಡಲ್ಗಳ್ಳರು ಅಪಹರಿಸಿದ್ದರು. ಭಾರತೀಯ ನೌಕಾಪಡೆಯು ಸತತ 40-ಗಂಟೆಗಳ ಕಾಲ ಕಾರ್ಯಾಚರಣೆಯಲ್ಲಿ ಹಡಗು ರುಯೆನ್ ಅನ್ನು ರಕ್ಷಿಸುವ ಮೂಲಕ ವಾಣಿಜ್ಯ ಹಡಗುಗಳನ್ನು ಹೈಜಾಕ್ ಮಾಡುವ ಸೊಮಾಲಿ ಕಡಲ್ಗಳ್ಳರ ಯೋಜನೆಗಳನ್ನು ವಿಫಲಗೊಳಿಸಿತು. ಐಎನ್ಎಸ್ ಕೊಲ್ಕತ್ತ, ಕಳೆದ 40 ಗಂಟೆಗಳಲ್ಲಿ, ಸಂಘಟಿತ ಕ್ರಮಗಳ ಮೂಲಕ ಯಶಸ್ವಿಯಾಗಿ ಎಲ್ಲಾ 17 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಭಾರತೀಯ ನೌಕಾಪಡೆ…
ಗಾಜಾ ನಗರದ ಅಲ್-ಶಿಫಾ ಆಸ್ಪತ್ರೆಯ ಮೇಲೆ ದಾಳಿ ನಡೆಸಿದ್ದು 20ಕ್ಕೂ ಹೆಚ್ಚು ಪ್ಯಾಲೆಸ್ತೀನ್ ಭಯೋತ್ಪಾದಕ ಹತ್ಯೆ ಮಾಡಲಾಗಿದೆ. ಘಟನೆಯಲ್ಲಿ 12ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಇಸ್ರೇಲ್‌ನ ಸೇನೆ ತಿಳಿಸಿದೆ. ಅಲ್-ಶಿಫಾ ಆಸ್ಪತ್ರೆಯಲ್ಲಿ ನಡೆದ ವಿವಿಧ ಕಾರ್ಯಾಚರಣೆಯಲ್ಲಿ ಇದುವರೆಗೆ ಇಪ್ಪತ್ತು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದ್ದು ಡಜನ್‌ಗಟ್ಟಲೆ ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದೇವೆ ಎಂದು ಸೇನೆಯು ಹೇಳಿಕೆಯಲ್ಲಿ ಮಾಹಿತಿ ನೀಡಿದೆ. ಇಸ್ರೇಲ್ ಈ ಹಿಂದೆ ಹಮಾಸ್ ಆಂತರಿಕ ಭದ್ರತಾ ಅಧಿಕಾರಿ ಎಂದು ಗುರುತಿಸಲಾದ ಫೈಕ್ ಅಲ್-ಮಭೌಹ್ ನನ್ನು ಹತ್ಯೆ ಮಾಡಿದ್ದಾಗಿ ವರದಿ ಮಾಡಿದೆ. ಗಾಜಾ ಪೊಲೀಸ್ ಮೂಲವೊಂದು ಆತನ ಸಾವನ್ನು ದೃಢಪಡಿಸಿದೆ.
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಜಾಪ್ರಭುತ್ವ ಮತ್ತು ಮೂಲಭೂತ ಸ್ವಾತಂತ್ರ್ಯಗಳಿಗೆ ಬೆದರಿಕೆ ಎಂದು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಮಲಾ ಹ್ಯಾರಿಸ್, “ಡೊನಾಲ್ಡ್ ಟ್ರಂಪ್ ನಮ್ಮ ಪ್ರಜಾಪ್ರಭುತ್ವ ಮತ್ತು ಮೂಲಭೂತ ಸ್ವಾತಂತ್ರ್ಯಗಳಿಗೆ ಬೆದರಿಕೆಯಾಗಿದ್ದಾರೆ. ಅಧ್ಯಕ್ಷ ಜೋ ಬೈಡನ್ ಮತ್ತು ನಾನು ರೋ ಅವರನ್ನು ಪುನಃಸ್ಥಾಪಿಸುತ್ತೇವೆ. ಮತದಾನದ ಹಕ್ಕುಗಳನ್ನು ರಕ್ಷಿಸುತ್ತೇವೆ ಮತ್ತು ಅಂತಿಮವಾಗಿ ನಮ್ಮ ಬಂದೂಕು ಹಿಂಸಾಚಾರದ ಸಾಂಕ್ರಾಮಿಕ ರೋಗವನ್ನು ಪರಿಹರಿಸುತ್ತೇವೆ. ಈ ವ್ಯತಿರಿಕ್ತತೆಯು ಇದಕ್ಕಿಂತ ಸ್ಪಷ್ಟವಾಗಿರಲು ಸಾಧ್ಯವಿಲ್ಲ ಎಂದಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಸೋತರೆ ದೇಶದಲ್ಲಿ ರಕ್ತಪಾತವಾಗಲಿದೆ ಎಂದು ಟ್ರಂಪ್ ಹೇಳಿಕೆಯನ್ನು ಖಂಡಿಸಿದ ಜೋ ಬೈಡನ್ ಅವರ ಪ್ರಚಾರ ವಕ್ತಾರ ಜೇಮ್ಸ್ ಸಿಂಗರ್, ಯುಎಸ್ ಜನರು ಅವರನ್ನು ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲುವಂತೆ ಮಾಡುವುದಿಲ್ಲ ಎಂದಿದ್ದಾರೆ. ಅಮೆರಿಕದ ಜನರು ಈ ಟ್ರಂಪ್ ಗೆ ಮತ್ತೊಂದು ಚುನಾವಣಾ ಸೋಲನ್ನು ನೀಡಲಿದ್ದಾರೆ ಏಕೆಂದರೆ ಅವರು ಅವರ ಉಗ್ರವಾದ, ಹಿಂಸಾಚಾರದ ಮೇಲಿನ ಪ್ರೀತಿ ಮತ್ತು ಸೇಡಿನ ದಾಹವನ್ನು ತಿರಸ್ಕರಿಸುತ್ತಲೇ ಇದ್ದಾರೆ…
ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟಿ ಅಂಜು ಕನ್ನಡ, ತೆಲುಗು, ಮಲಯಾಳಂ ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಹೆಚ್ಚಾಗಿ ಬೋಲ್ಡ್ ಪಾತ್ರಗಳಲ್ಲೇ ಕಾಣಿಸಿಕೊಂಡಿದ್ದ ನಟಿ ಸಂದರ್ಶನವೊಂದರಲ್ಲಿ ತಮ್ಮ ಜೀವನದ ಕಹಿ ಘಟನೆಯನ್ನು ಮೆಲುಕು ಹಾಕಿದ್ದಾರೆ. 17 ನೇ ವಯಸ್ಸಿನಲ್ಲಿ ಅಂಜು ತೆಗೆದುಕೊಂಡ ನಿರ್ಧಾರವೊಂದರಿಂದ ತಮ್ಮ ಜೀವನ ತಲೆಕೆಳಗಾಯಿತು ಎಂದು ನಟಿ ಹೇಳಿಕೊಂಡಿದ್ದಾರೆ. ನಾನು ಒಂದೂವರೆ ವರ್ಷದವಳಿದ್ದಾಗ ನಿರ್ದೇಶಕ ಮಹೇಂದ್ರನ್ ಸರ್ ನನ್ನನ್ನು ನೋಡಿ ಚಿತ್ರದಲ್ಲಿ ಬಾಲನಟಿಯಾಗಿ ತೆಗೆದುಕೊಂಡರು. ನನ್ನ ವೃತ್ತಿಜೀವನ ಅಲ್ಲಿಂದ ಶುರುವಾಗಿದ್ದು. ಈಗ ಧಾರಾವಾಹಿ ಮಾಡುತ್ತಿದ್ದೇನೆ. ಆದರೆ ನಾನು ಚಿತ್ರರಂಗಕ್ಕೆ ಬರುವುದು ಅಮ್ಮನಿಗೆ ಇಷ್ಟವಿರಲಿಲ್ಲ. ನನ್ನ ಮದುವೆ ಆಕಸ್ಮಿಕ. ನಂತರ ಕನ್ನಡ ಚಿತ್ರ ಮಾಡಲು ಬೆಂಗಳೂರಿಗೆ ಹೋಗಿದ್ದೆ. ಆಗ ಕನ್ನಡದ ಸ್ಟಾರ್ ಹೀರೋ ಟೈಗರ್ ಪ್ರಭಾಕರ್ ನನ್ನನ್ನು ನೋಡಿ ಇಷ್ಟಪಟ್ಟರು. ನನ್ನ ಮುಂದೆ ಮದುವೆಯ ಪ್ರಸ್ತಾಪವಿಟ್ಟರು. ಅವರಿಗೆ ಈಗಾಗಲೇ ಪತ್ನಿ ಮತ್ತು ಮಕ್ಕಳಿದ್ದರು. ಆದರೆ ಅದನ್ನೆಲ್ಲ ನನ್ನಿಂದ ಮರೆಮಾಚಿದರು ಎಂದು ಅಂಜು ಹೇಳಿಕೊಂಡಿದ್ದಾರೆ. ಆಗ ನನಗೆ ಕೇವಲ…
ಇಂದು ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ಇದ್ದೆ ಇರುತ್ತೆ. ಕೋಟ್ಯಾಂತರ ಮಂದಿ ಸೆಲ್ ಫೋನ್ ಬಳಕೆ ದಾರರಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಆನ್ಲೈನ್ ವಂಚನೆ ಮತ್ತು ಹ್ಯಾಕಿಂಗ್ ಅನ್ನು ತಡೆಗಟ್ಟುವುದು ಉದ್ದೇಶದಿಂದ ಜುಲೈ 1 ರಿಂದ ದೇಶಾದ್ಯಂತ ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಹೊಸ ನಿಯಮಗಳ ಪ್ರಕಾರ, ಇತ್ತೀಚೆಗೆ ತಮ್ಮ ಸಿಮ್ ಕಾರ್ಡ್ ಗಳನ್ನು ಬದಲಾಯಿಸಿದ ಮೊಬೈಲ್ ಬಳಕೆದಾರರು ಇನ್ನು ಮುಂದೆ ತಮ್ಮ ಮೊಬೈಲ್ ಸಂಖ್ಯೆಯನ್ನು ಪೋರ್ಟ್ ಮಾಡಲು ಸಾಧ್ಯವಿಲ್ಲ. ಸಿಮ್ ಸ್ವಾಪಿಂಗ್ ಅನ್ನು ಸಿಮ್ ಸ್ವೈಪಿಂಗ್ ಎಂದು ಕರೆಯಲಾಗುತ್ತದೆ. ನಿಮ್ಮ ಸಿಮ್ ಕಾರ್ಡ್ ಕಳೆದುಹೋದಾಗ ಅಥವಾ ಮುರಿದಾಗ ಸಿಮ್ ವಿನಿಮಯ ನಡೆಯುತ್ತದೆ. ಈ ಸಂದರ್ಭದಲ್ಲಿ, ನೀವು ನಿಮ್ಮ ಟೆಲಿಕಾಂ ಆಪರೇಟರ್ನೊಂದಿಗೆ ಮಾತನಾಡಬೇಕಾಗುತ್ತದೆ ಮತ್ತು ನಿಮ್ಮ ಹಳೆಯ ಸಿಮ್ ಅನ್ನು ಬದಲಾಯಿಸಲು ಮತ್ತು ಹೊಸ ಸಿಮ್ ನೀಡುವಂತೆ ಕೇಳಬೇಕಾಗುತ್ತದೆ. ಆನ್ಲೈನ್ ವಂಚನೆ ಮತ್ತು ಹ್ಯಾಕಿಂಗ್ ಘಟನೆಗಳನ್ನು ತಡೆಗಟ್ಟಲು ಈ ನಿಯಮವನ್ನು ಜಾರಿಗೆ ತರುವ ಉದ್ದೇಶವನ್ನು ತೆಗೆದುಕೊಳ್ಳಲಾಗಿದೆ, ವಿಶೇಷವಾಗಿ ವಂಚನೆ ಮಾಡುವವರು, ಮೊಬೈಲ್ ಸಂಪರ್ಕವನ್ನು…
‘ಸ್ವಾತಂತ್ರ್ಯ ವೀರ ಸಾವರ್ಕರ್’ ಸಿನಿಮಾ ಪ್ರಮೋಷನ್ನಲ್ಲಿ ನಟ ರಣದೀಪ್ ಹೂಡಾ ಬ್ಯುಸಿ ಆಗಿದ್ದಾರೆ. ಈ ಸಿನಿಮಾವನ್ನು ನಿರ್ದೇಶನ ಮಾಡುವುದರ ಜೊತೆಗೆ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದು ವಿನಾಯಕ್ ದಾಮೋದರ್ ಸಾವರ್ಕರ್ಅವರ ಬದುಕಿನ ವಿವರವನ್ನು ಆಧರಿಸಿ ತಯಾರಾದ ಸಿನಿಮಾ. ಸಿನಿಮಾದಲ್ಲಿ ಸಾವರ್ಕರ್ ಪಾತ್ರದಲ್ಲಿ ರಣದೀಪ್ ಹೂಡಾ ಕಾಣಿಸಿಕೊಂಡಿದ್ದು, ಪಾತ್ರದ ಮೇಲಿನ ಗೌರವ ಹಾಗೂ ಬದ್ಧತೆಗಾಗಿ ರಣದೀಪ್ ಹೂಡಾ ಅಚ್ಚರಿಯ ರೀತಿಯಲ್ಲಿ ಬಾಡಿ ಟ್ರಾನ್ಸ್ಫಾರ್ಮೇಷನ್ ಮಾಡಿಕೊಂಡಿದ್ದಾರೆ. ‘ಸ್ವಾತಂತ್ರ್ಯ ವೀರ ಸಾವರ್ಕರ್’ ಸಿನಿಮಾ ಮಾರ್ಚ್ 22ರಂದು ಬಿಡುಗಡೆ ಆಗಲಿದೆ. ಸಿನಿಮಾದ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಇರುವಾಗ ರಣದೀಪ್ ಹೂಡಾ ಅವರು ಒಂದು ಫೋಟೋ ಹಂಚಿಕೊಂಡಿದ್ದಾರೆ. ಹೂಡಾ ಹಂಚಿಕೊಂಡಿರುವ ಫೋಟೋದಲ್ಲಿ ಗುರುತೇ ಸಿಗದಷ್ಟು ಬದಲಾಗಿದ್ದಾರೆ. ಕಟ್ಟುಮಸ್ತಾದ ಬಾಡಿ ಹೊಂದಿದ್ದ ರಣದೀಪ್ ಹೂಡಾ ಅವರು ಸಾವರ್ಕರ್ ಪಾತ್ರಕ್ಕಾಗಿ ಸಿಕ್ಕಾಪಟ್ಟೆ ತೆಳ್ಳಗಾಗಿದ್ದಾರೆ. ಅಂದಾಜು 30 ಕೆಜಿ ದೇಹದ ತೂಕವನ್ನು ಅವರು ಕಡಿಮೆ ಮಾಡಿಕೊಂಡಿದ್ದು, ಎದೆಗೂಡಿನ ಮೂಳೆಗಳು ಕಾಣುವ ರೀತಿಯಲ್ಲಿ ಬದಲಾಗಿದ್ದಾರೆ. ಇವರಿಗೆ ಸಿನಿಮಾದ ಮೇಲಿನ ಪ್ರೀತಿ ನೋಡಿ ಅಭಿಮಾನಿಗಳು ಮೆಚ್ಚುಗೆ…
ರಿಷಬ್ ಶೆಟ್ಟಿ ನಟನೆಯ ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿರೋದು ಗೊತ್ತೆ ಇದೆ. ಇದೀಗ ಅಭಿಮಾನಿಗಳು ಕಾಂತಾರ 2 ನೋಡಲು ಕಾಯುತ್ತಿದ್ದಾರೆ. ಸದ್ಯ ಈ ಚಿತ್ರದ ನಾಯಕಿ ಯಾರು? ಎಂಬ ಪ್ರಶ್ನೆ ಹುಟ್ಟುಕೊಂಡಿದ್ದು, ನಾಯಕಿಯ ಕುರಿತು ಅಚ್ಚರಿಯ ಹೆಸರು ಕೇಳಿ ಬಂದಿದೆ. ‘ಕಾಂತಾರ’ ಪಾರ್ಟ್ 1ನಲ್ಲಿ ರಿಷಬ್ ಶೆಟ್ಟಿ ಜೊತೆ ನಟಿ ಸಪ್ತಮಿ ಗೌಡ ಕಾಣಿಸಿಕೊಂಡಿದ್ದರು. ಈ ಸಿನಿಮಾ ಸಪ್ತಮಿ ಗೌಡ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಇಬ್ಬರ ಕೆಮಿಸ್ಟ್ರಿಗೆ ಅಭಿಮಾನಿಗಳು ಫಿದಾ ಆಗಿದ್ದರು. ಹೀಗಾಗಿ ಕಾಂತಾರ ಪ್ರಿಕ್ವೆಲ್ ನಲ್ಲಿ ರಿಷಬ್ ಶೆಟ್ಟಿಗೆ ಯಾರು ನಾಯಕಿಯಾಗ್ತಾರೆ ಎಂಬ ಕುತೂಹಲ ಶುರುವಾಗಿದ್ದು ಅದಕ್ಕೀಗ ಉತ್ತರ ಸಿಕ್ಕಿದೆ. ‘ಕಾಂತಾರ’ ಪ್ರೀಕ್ವೆಲ್ ನಲ್ಲಿ ರಿಷಬ್ ಶೆಟ್ಟಿಗೆ ಜೋಡಿಯಾಗಿ ನಟಿ ರುಕ್ಮಿಣಿ ವಸಂತ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಕನ್ನಡ ಮತ್ತು ಸೌತ್ ಸಿನಿಮಾ ರಂಗದಲ್ಲಿ ಮೋಡಿ ಮಾಡುತ್ತಿರುವ ರುಕ್ಮಿಣಿ ಇದೀಗ ಕಾಂತಾರ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಕಾಂತಾರ ಪ್ರೀಕ್ವೆಲ್ ನಲ್ಲಿ…