ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ‘ಕಾಂತಾರ-ಒಂದು ದಂತಕಥೆ’ಯ ಮೊದಲ ಅಧ್ಯಾಯ ರಿಲೀಸ್ ಗೂ ಮೊದಲೇ ಭರ್ಜರಿ ಕಲೆಕ್ಷನ್ ಮಾಡಿದೆ. ದೊಡ್ಡ ಮೊತ್ತಕ್ಕೆ ಪ್ರೈಂ ವಿಡಿಯೊ ಈ ಸಿನಿಮಾವನ್ನು ಖರೀದಿಸಿದೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾನು ಖರೀದಿಸಿದ 29 ಸಿನಿಮಾಗಳ ಶೀರ್ಷಿಕೆಯನ್ನು ಪ್ರೈಂ ಘೋಷಿಸಿತು. ರಿಷಬ್ ಶೆಟ್ಟಿ ಹಾಗೂ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವರಾಹ ರೂಪಂ ಹಾಡಿಗೆ ಯಕ್ಷಗಾನ ಕಲಾವಿದರು ಪ್ರದರ್ಶನ ನೀಡಿದ ಬಳಿಕ, ಪ್ರೈಂ ತಂಡವು ‘ಕಾಂತಾರ-ಒಂದು ದಂತಕಥೆ’ ಅಧ್ಯಾಯ 1ರ ಬಿಡುಗಡೆಯನ್ನು ಘೋಷಿಸಿತು. ಸಿನಿಮಾದ ಚಿತ್ರೀಕರಣ ಈಗಾಗಲೇ ಆರಂಭವಾಗಿದ್ದು, ಹೊಸ ಸಿನಿಮಾ ‘ಕಾಂತಾರ-ಒಂದು ದಂತಕಥೆ’ಯ ಪ್ರೀಕ್ವೆಲ್ ಆಗಿದ್ದು, ಕದಂಬರ ಕಾಲದಲ್ಲಿ ನಡೆಯುವ ಕಥೆಯನ್ನು ಹೊಂದಿದೆ. ಬಲ್ಲ ಮಾಹಿತಿಗಳ ಪ್ರಕಾರ ‘ಕಾಂತಾರ’: ಚಾಪ್ಟರ್- 1 ಓಟಿಟಿ ರೈಟ್ಸ್ ಅಂದಾಜು 150 ಕೋಟಿ ರೂ.ಗೆ ಮಾರಾಟವಾಗಿದೆ ಎನ್ನಲಾಗುತ್ತಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇದು ದಾಖಲೆ ಎನ್ನಬಹುದು. ಪ್ರೈ ವೀಡಿಯೋ ‘ಕಾಂತಾರ’ ಪ್ರೀಕ್ವೆಲ್ 5 ಭಾಷೆಗಳ ಸ್ಟ್ರೀಮಿಂಗ್ ರೈಟ್ಸ್…
Author: Author AIN
ಕೆಲವೇ ದಿನಗಳ ಅಂತರದಲ್ಲಿ ಮೆಟಾದ ಜನಪ್ರಿಯ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ಗಳಾದ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಸರ್ವರ್ ಮತ್ತೆ ಡೌನ್ ಆಗಿದೆ. ಭಾರತ ಸೇರಿದಂತೆ ವಿಶ್ವದಾದ್ಯಂತ ಅನೇಕ ಜನರಿಗೆ ಈ ಸಮಸ್ಯೆ ಎದುರಾಗಿದ್ದು ಇದರಿಂದ ಜನತೆ ಕೆಲಸ ಹೊತ್ತು ಪರದಾಡುವಂತಾಗಿದೆ. ಕೆಲವರನ್ನ ತಮ್ಮ ಪಾಸ್ ವರ್ಡ್’ಗಳನ್ನ ಬದಲಾಯಿಸಲು ಸಹ ಕೇಳಲಾಯಿತು. ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಸೇರಿದಂತೆ ಹಲವಾರು ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಗಳು ಮತ್ತು ಇತರ ಹಲವಾರು ಫ್ಲ್ಯಾಟ್ ಫಾರ್ಮ್ ಗಳು ಸ್ಥಗಿತಗೊಂಡ ಕೆಲವೇ ವಾರಗಳಲ್ಲಿ ಮತ್ತೆ ಮರುಕಳಿಸಿದೆ. ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಸೇರಿದಂತೆ ಎರಡೂ ಮೆಟಾ ಅಪ್ಲಿಕೇಶನ್ಗಳಲ್ಲಿ ಕ್ರ್ಯಾಶ್ಗಳು ಮತ್ತು ಲಾಗಿನ್ ಸಮಸ್ಯೆಗಳನ್ನು ಅನುಭವಿಸುವ ಬಗ್ಗೆ ತಮ್ಮ ಹತಾಶೆಯನ್ನ ವ್ಯಕ್ತಪಡಿಸಲು ಭಾರತ ಮತ್ತು ಪ್ರಪಂಚದಾದ್ಯಂತದ ಜನರು ಮೈಕ್ರೋ-ಬ್ಲಾಗಿಂಗ್ ಪ್ಲಾಟ್ಫಾರ್ಮ್ ಎಕ್ಸ್ ಕಡೆಗೆ ತಿರುಗಿದರು. ಹೆಚ್ಚುವರಿಯಾಗಿ, ಮೆಸೆಂಜರ್ ಅಪ್ಲಿಕೇಶನ್ ಬಳಸುವಾಗ ಕೆಲವು ಬಳಕೆದಾರರು ತೊಂದರೆಗಳನ್ನು ಎದುರಿಸಿದ್ದಾರೆ.
ಶಸ್ತ್ರಸಜ್ಜಿತ ಬಲೂಚ್ ಭಯೋತ್ಪಾದಕರು ಗ್ವಾದರ್ ಬಂದರು ಕಾಂಪ್ಲೆಕ್ಸ್‌ಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾರೆ. ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನ್ ಪ್ರಾಂತ್ಯದ ಪ್ರದೇಶದಲ್ಲಿ ಹಲವಾರು ಸ್ಫೋಟಗಳು ಸಂಭವಿಸಿವೆ. ತೀವ್ರ ಗುಂಡಿನ ಚಕಮಕಿ ಹಿನ್ನಲೆ ಪೊಲೀಸ್ ಮತ್ತು ಭದ್ರತಾ ಪಡೆಗಳ ದೊಡ್ಡ ತುಕಡಿ ಸ್ಥಳಕ್ಕೆ ತಲುಪಿದೆ ಎಂದು ಮಕ್ರನ್ ಕಮಿಷನರ್ ಸಯೀದ್ ಅಹ್ಮದ್ ಉಮ್ರಾನಿ ಹೇಳಿದ್ದಾರೆ. ಗ್ವಾದರ್ ಪೋರ್ಟ್ ಅಥಾರಿಟಿ ಸಂಕೀರ್ಣದ ಮೇಲಿನ ದಾಳಿಯನ್ನು ಭದ್ರತಾ ಪಡೆಗಳು ವಿಫಲಗೊಳಿಸಿದ್ದು ಎಂಟು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ವರದಿಯಲ್ಲಿ ಉಲ್ಲೇಖಿಸಿದೆ. ಕಾಂಪ್ಲೆಕ್ಸ್‌ಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾಗ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ. ನಿಷೇಧಿತ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ)ದ ಮಜೀದ್ ಬ್ರಿಗೇಡ್ ದಾಳಿಯ ಹೊಣೆ ಹೊತ್ತುಕೊಂಡಿದೆ. ಇರಾನ್ ಮತ್ತು ಅಫ್ಘಾನಿಸ್ತಾನದ ಗಡಿಯಲ್ಲಿರುವ ಬಲೂಚಿಸ್ತಾನ್ ದೀರ್ಘಾವಧಿಯ ಹಿಂಸಾತ್ಮಕ ದಂಗೆಗೆ ನೆಲೆಯಾಗಿದೆ. ಬಲೂಚ್ ದಂಗೆಕೋರ ಗುಂಪುಗಳು ಈ ಹಿಂದೆ ಶತಕೋಟಿ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಯೋಜನೆಗಳನ್ನು ಗುರಿಯಾಗಿಸಿಕೊಂಡು ಹಲವಾರು ದಾಳಿಗಳನ್ನು ನಡೆಸಿದ್ದವು. ಗಡಿಯಾಚೆಗಿನ ಭಯೋತ್ಪಾದನೆಯ…
ಐದು ವರ್ಷದ ಮಗುವನ್ನು ಕೊಲೆ ಮಾಡಿ ಬಳಿಕ ಮಗುವಿನ ದೇಹವನ್ನು ಸೂಟ್ ಕೇಸ್ ನಲ್ಲಿ ತುಂಬಿಸಿ ಸಾಗಿಸಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಅಮೆರಿಕಾದ ಲಾಸ್ ಏಂಜಲೀಸ್ ನಲ್ಲಿ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ. ಘಟನೆ ನಡೆದು ಎರಡು ವರ್ಷಗಳಾಗಿದ್ದು ಆದರೆ ತಾಯಿಯನ್ನು ಈಗ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂಡಿಯಾನದ ಡೆಜಾನೆ ಲೂಡಿ ಆಂಡರ್ಸನ್(38) ಎಂಬಾಕೆಯ ಐದು ವರ್ಷದ ಪುತ್ರ ಕೈರೋ ಅಮ್ಮರ್ ಜೋರ್ಡಾನ್ ಎಂಬಾತ ಎರಡು ವರ್ಷದ ಹಿಂದೆ ಮೃತಪಟ್ಟಿದ್ದ. ಆತನಿಗೆ ಹೊಟ್ಟೆ ನೋವಿಗೆ ಸಂಬಂಧಿಸಿ ನೀಡಿದ್ದ ಎಲೆಕ್ಟ್ರೋಲೈಟ್ ಅನ್ನು ನೀಡಲಾಗಿತ್ತು. ಇದು ಅಡ್ಡಪರಿಣಾಮ ಬೀರಿ ಕೈರೋ ಮೃತಪಟ್ಟಿದ್ದ. ಇದು ಬಹಿರಂಗವಾದರೆ ತೊಂದರೆಯಾಗುತ್ತದೆ ಎನ್ನುವ ಕಾರಣ ನೀಡಿ ಆಕೆ ವಿಶೇಷವಾದ ಸೂಟ್‌ಕೇಸ್‌ನಲ್ಲಿ ದೇಹವನ್ನು ತುಂಬಿ ವಾಷಿಂಗ್ಟನ್ ಗ್ರಾಮೀಣ ಪ್ರದೇಶದಲ್ಲಿ ಎಸೆದಿದ್ದಳು. ವ್ಯಕ್ತಿಯೊಬ್ಬ ಸಮೀಪದಲ್ಲಿಯೇ ಅಣಬೆ ಹುಡುಕಲು ಬಂದಾಗ ಸೂಟ್‌ಕೇಸ್ ಕಂಡು ಬಂದಿತ್ತು. ಇದರಲ್ಲಿ ಮಗುವಿನ ಶವ ಪತ್ತೆಯಾಗಿತ್ತು. ಆನಂತರ ದೇಹವನ್ನು ವಶಕ್ಕೆ ಪಡೆದಿದ್ದ ಪೊಲೀಸರು ಮಗುವಿನ ಪೋಷಕರ ಪತ್ತೆ ಹಾಗೂ ಸಾವಿಗೆ ನಿಖರ…
ಇತ್ತೀಚೆಗೆ ಪಂಜಾಬ್ ನ ಖ್ಯಾತ ಗಾಯಕ ಮೃತ ಸಿಧು ಮೂಸೆವಾಲಾ ಪೋಷಕರು ಐವಿಎಫ್ ಮೂಲಕ ಮಗುವಿಗೆ ಜನ್ಮ ನೀಡಿದ್ದರು. ಆ ಬಳಿಕ ಕೇಂದ್ರವು ಐವಿಎಫ್ ಮೂಲಕ ಗರ್ಭ ಧರಿಸಲು ವಯಸ್ಸಿನ ಮಿತಿಯನ್ನು ನಿಗದಿಪಡಿಸಿದೆ. ಕಳೆದ ವಾರ ಸಿಧು ಮೂಸ್ ವಾಲಾ ಪೋಷಕರು ಗಂಡು ಮಗುವಿಗೆ ಜನ್ಮ ನೀಡಿದ ನಂತರ ಐವಿಎಫ್ ವಿಧಾನದ ಮೂಲಕ ಮಗುವನ್ನು ಗರ್ಭಧರಿಸಲು ವಯಸ್ಸಿನ ಮಿತಿಯನ್ನು ಸರ್ಕಾರ ನಿಗದಿಪಡಿಸಿದೆ. ಮಗುವಿನ ಬಗ್ಗೆ ದಾಖಲೆಗಳಿಗಾಗಿ ಜಿಲ್ಲಾಡಳಿತವು ತನಗೆ ಕಿರುಕುಳ ನೀಡುತ್ತಿದೆ ಎಂದು ಗಾಯಕನ ತಂದೆ ಬಲ್ಕೌರ್ ಸಿಂಗ್ ಆರೋಪಿಸಿದ್ದಾರೆ. ಸಿಧು ಮೂಸೆವಾಲ ಅವರನ್ನು ಗುಂಡಿಕ್ಕಿ ಕೊಂದ ಸುಮಾರು ಎರಡು ವರ್ಷಗಳ ನಂತರ, ದಂಪತಿಗೆ ಕಳೆದ ಶನಿವಾರ ಮಗು ಜನಿಸಿತು. 58 ವರ್ಷದ ಚರಣ್ ಸಿಂಗ್ ಇನ್-ವಿಟ್ರೊ ಫಲೀಕರಣ (ಐವಿಎಫ್) ತಂತ್ರದ ಮೂಲಕ ಮಗುವನ್ನು ಗರ್ಭಧರಿಸಿದ್ದರು ಎಂದು ಸಂಬಂಧಿಕರು ಈ ವರ್ಷದ ಆರಂಭದಲ್ಲಿ ತಿಳಿಸಿದ್ದರು.
ವಿಶ್ವದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಹಾಲಿವುಡ್ ನ ಖ್ಯಾತ ಡಿ ಜೆ ಅಲೆನ್ ವಾಕರ್ ಮಾಸ್ಕ್ ಧರಿಸದೆ ಮನೆಯಿಂದ ಹೊರಗೆ ಕಾಲಿಡುವುದಿಲ್ಲ. ಸದಾ ಮಾಸ್ಕ್ ಧರಿಸಿ ಮುಖ ಮುಚ್ಚಿಕೊಂಡೆ ಇರುವ ಅಲೆನ್ ತಮ್ಮನ್ನು ಯಾರು ಗುರುತಿಸದಿರಲಿ ಎಂಬ ಕಾರಣಕ್ಕೆ ಮಾಸ್ಕ್ ಧರಿಸುವುದಾಗಿ ಹೇಳಿದ್ದಾರೆ. ಅಷ್ಟಕ್ಕೂ ಅಲೆನ್ ಮಾಸ್ಕ್ ಹಾಕಿಕೊಂಡೇ ಇರುವುದು ಯಾಕೆ? ಕೋವಿಡ್ ನಂತರವೂ ಅವರು ಮಾಸ್ಕ್ ಹಾಕಿಕೊಳ್ಳುವುದು ಯಾಕೆ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಅಂದ ಹಾಗೆ ಸಂಗತಿ ಕೋವಿಡ್ ಗಿಂತ ಮುಂಚೆಯೇ ಅವರು ಮಾಸ್ಕ್ ಧರಿಸಿಕೊಂಡೇ ಓಡಾಡುತ್ತಿದ್ದರಂತೆ. ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಂತೆ 2015ರಿಂದ ನಿರಂತವಾಗಿ ಮಾಸ್ಕ್ ಧರಿಸುತ್ತಿದ್ದಾರಂತೆ. ಬೆಂಗಳೂರಿನಲ್ಲಿ ನಡೆದ ಆರ್.ಸಿ.ಬಿ ಅನ್ ಬಾಕ್ಸ್ ಕಾರ್ಯಕ್ರಮಕ್ಕೂ ಅಲೆನ್ ಆಗಮಿಸಿದ್ದರು. ಆಗಲೂ ಅವರು ಮಾಸ್ಕ್ ಧರಿಸಿಕೊಂಡೇ ಇದ್ದರು. ಕಾರ್ಯಕ್ರಮದಲ್ಲಾದರೂ ಅವರು ಮಾಸ್ಕ್ ತೆಗೆಯುತ್ತಾರೆ ಎನ್ನುವ ನಂಬಿಕೆ ಇತ್ತು. ಆದರೆ, ಅವರು ಕೊನೆಗೂ ಮಾಸ್ಕ್ ತಗೆಯಲಿಲ್ಲ. ಹಾಗೆಯೇ ಕಾರ್ಯಕ್ರಮ ನಡೆಸಿಕೊಟ್ಟು ಮತ್ತಷ್ಟು ಕುತೂಹಲ ಮೂಡಿಸಿದರು. ಮಾಸ್ಕ್ ಇಲ್ಲದೇ ಓಡಾಡಿದರೆ, ಜನರು ತಮ್ಮನ್ನು…
ಬನಾರಸ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ನಟ ಝೈದ್ ಖಾನ್ ಸದ್ಯ ಸಖತ್ ಬ್ಯುಸಿಯಾಗಿದ್ದಾರೆ. ‘ಉಪಾಧ್ಯಕ್ಷ’ ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ಜೊತೆ ಝೈದ್ ಖಾನ್ ಕೈ ಜೋಡಿಸಿದ್ದು ಇದೀಗ ಚಿತ್ರದ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಝೈದ್ ಖಾನ್ ಹಾಗೂ ಅನಿಲ್ ಕುಮಾರ್ ಕಾಂಬಿನೇಷನ್ ನ ಚಿತ್ರದ ಪೋಸ್ಟರ್ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನು ಈ ನೂತನ ಚಿತ್ರದ ಫಸ್ಟ್ ಲುಕ್ ಹೇಗಿರಬಹುದೆಂಬ? ಕುತೂಹಲ ಅಭಿಮಾನಿ ವಲಯದಲ್ಲಿದೆ. ಫಸ್ಟ್ ಲುಕ್ ನಲ್ಲೇ ಚಿತ್ರದ ಶೀರ್ಷಿಕೆ ಸಹ ಅನಾವರಣವಾಗಲಿದೆ. ಝೈದ್ ಖಾನ್ ನಾಯಕರಾಗಿ ನಟಿಸುತ್ತಿರುವ ಎರಡನೇ ಚಿತ್ರವಿದು. ಆಶ್ರಿತ್ ಸಿನಿಮಾಸ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣವಾಗಲಿದ್ದು, ರಚನೆ ಹಾಗೂ ನಿರ್ದೇಶನ ಅನಿಲ್ ಕುಮಾರ್ ಅವರದು. ಜೆ.ಎಸ್ ವಾಲಿ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ.
ಟಾಲಿವುಡ್ ಸ್ಟಾರ್ ರಾಮ್‌ಚರಣ್ ಹಾಗೂ ಸ್ಯಾಂಡಲ್ ವುಡ್ ಸ್ಟಾರ್ ಶಿವರಾಜ್‌ಕುಮಾರ್, ಬಿಟೌನ್ ಬ್ಯೂಟಿ ಜಾನ್ವಿ ಕಪೂರ್ ನಟನೆಯ ಹೊಸ ಸಿನಿಮಾಗೆ ಇಂದು (ಮಾ.20) ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಮುಹೂರ್ತ ಕಾರ್ಯಕ್ರಮಕ್ಕೆ ರಾಮ್ ಚರಣ್, ಜಾನ್ವಿ, ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ಅನೇಕರು ಭಾಗಿಯಾಗಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ನಟಿ ಜಾನ್ವಿ ಕಪೂರ್ ಈಗಾಗಲೇ ತೆಲುಗಿನತ್ತ ಮುಖ ಮಾಡಿದ್ದಾರೆ. ಜ್ಯೂ.ಎನ್‌ಟಿಆರ್ ಜೊತೆ ಡ್ಯುಯೇಟ್ ಹಾಡಿದ ಮೇಲೆ ರಾಮ್‌ಚರಣ್ ಜೊತೆ ರೊಮ್ಯಾನ್ಸ್ ಮಾಡೋದಕ್ಕೆ ರೆಡಿಯಾಗಿದ್ದಾರೆ. ರಾಮ್ ಚರಣ್ ನಟನೆಯ 16ನೇ ಚಿತ್ರಕ್ಕೆ ಇದೀಗ ಅದ್ಧೂರಿಯಾಗಿ ಮುಹೂರ್ತ ನಡೆದಿದೆ. ಸಿನಿಮಾದ ಮುಹೂರ್ತ ಕಾರ್ಯಕ್ರಮಕ್ಕೆ ರಾಮ್‌ಚರಣ್-ಉಪಾಸನಾ, ಬುಚ್ಚಿಬಾಬು ಜೊತೆ ಡೈರೆಕ್ಟರ್ ಶಂಕರ್, ಎ.ಆರ್ ರೆಹಮಾನ್, ಪುಷ್ಪ ಡೈರೆಕ್ಟರ್ ಸುಕುಮಾರ್, ಮೆಗಾಸ್ಟಾರ್ ಚಿರಂಜೀವಿ, ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಮೊದಲ ಬಾರಿಗೆ ರಾಮ್- ಜಾನ್ವಿ ಕಪೂರ್ ಜೋಡಿಯಾಗಿ ನಟಿಸುತ್ತಿರೋದ್ರಿಂದ ಚಿತ್ರದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕೂಡ ಚಿತ್ರದಲ್ಲಿ ಬಹುಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.…
ತಮಿಳು ಸ್ಟಾರ್ ನಟ ಸೂರ್ಯ ನಟನೆಯ ‘ಕಂಗುವ’ ಚಿತ್ರದ ಟೀಸರ್ ರಿಲೀಸ್ ಆಗಿದೆ. ಅದ್ಧೂರಿ ಮೇಕಿಂಗ್, ಕಲಾವಿದ ಆರ್ಭಟ. ದೃಶ್ಯ ವೈಭವ ಹಾಗೂ ಹಿನ್ನೆಲೆ ಸಂಗೀತದಿಂದಾಗಿ ಟೀಸರ್ ಸಾಕಷ್ಟು ಹೈಲೈಟ್ ಆಗಿದೆ. ಹೊಡೆದಾಟ, ರಕ್ತದೋಕುಳಿ, ಹೊಸ ಬಗೆಯ ಆಯುಧ, ರಾಕ್ಷಸರು ಹೀಗೆ ನಾನಾ ರೀತಿಯ ದೃಶ್ಯಗಳು ಟೀಸರ್ ನಲ್ಲಿದೆ. ಇತ್ತೀಚೆಗಷ್ಟೇ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿತ್ತು. ಈ ಪೋಸ್ಟರ್ ನಲ್ಲಿ ಸೂರ್ಯ ಸಖತ್ ಮಿಂಚಿದ್ದರು. ಪೋಸ್ಟರ್ ಕಂಡು ಅಭಿಮಾನಿಗಳು ಫಿದಾ ಆಗಿದ್ದರು. ಜೊತೆಗೆ ಈ ಸಿನಿಮಾವನ್ನು ಬರೋಬ್ಬರಿ 38 ಭಾಷೆಗಳಲ್ಲಿ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಜೊತೆಗೆ 3 ಡಿ ತಂತ್ರಜ್ಞಾನದಲ್ಲೂ ಈ ಸಿನಿಮಾವನ್ನು ನೋಡಬಹುದಾಗಿದೆ. ಸಿನಮಾ ಬಿಡುಗಡೆಗೂ ಮುನ್ನವೇ ಭರ್ಜರಿ ವ್ಯಾಪಾರ ಕೂಡ ಆರಂಭಿಸಿದೆ. ಭಾರೀ ಮೊತ್ತಕ್ಕೆ ಓಟಿಟಿಗೆ ಸೇಲ್ ಆಗಿದ್ದು ಚಿತ್ರತಂಡಕ್ಕೆ ಮತ್ತಷ್ಟು ಖುಷಿ ನೀಡಿದೆ. ಅಮೆಜಾನ್ ಪ್ರೈಮ್ ಸಂಸ್ಥೆಯು ಕಂಗುವ ಸಿನಿಮಾದ ಓಟಿಟಿ \ಹಕ್ಕನ್ನು ಬರೋಬ್ಬರಿ 80 ಕೋಟಿಗೆ ಖರೀದಿ ಮಾಡಿದೆ ಎಂಬ ಸುದ್ದಿ…
ಪಾಕಿಸ್ತಾನದಲ್ಲಿ ಇಂದು ಮುಂಜಾನೆ 5.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ. ಭಾರತೀಯ ಕಾಲಮಾನದ ಪ್ರಕಾರ ಮುಂಜಾನೆ 2:57 ಕ್ಕೆ ಭೂಕಂಪ ಸಂಭವಿಸಿದ್ದು, ಅದರ ಆಳವನ್ನು 105 ಕಿ.ಮೀ ಎಂದು ಅಳೆಯಲಾಗಿದೆ. 5.5 ತೀವ್ರತೆಯ ಭೂಕಂಪವು 20-03-2024, 02:57:11 ಭಾರತೀಯ ಕಾಲಮಾನ, ಲಾಟ್: 29.74 ಮತ್ತು ಉದ್ದ: 65.93, ಆಳ: 105 ಕಿ.ಮೀ, ಸ್ಥಳ: ಪಾಕಿಸ್ತಾನ” ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಸಾಮಾಜಿಕ ಮಾಧ್ಯಮದಲ್ಲಿ ಬರೆದಕೊಂಡಿದೆ.