ತಮಿಳು ಚಿತ್ರರಂಗದ ಖ್ಯಾತ ಗಾಯಕಿ ಉಮಾ ರಮಣನ್ 69ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ಮೇ 1ರಂದು ಉಮಾ ಚೆನ್ನೈನಲ್ಲಿ ವಿಧಿವಶರಾಗಿದ್ದು, ಅವರ ಸಾವಿನ ಹಿಂದಿನ ಕಾರಣ ತಿಳಿದು ಬಂದಿಲ್ಲ. ತಮಿಳಿನಲ್ಲಿ ಸಾಕಷ್ಟು ಸೂಪರ್ ಹಿಟ್ ಹಾಡುಗಳಿಗೆ ಉಮಾ ಧ್ವನಿ ನೀಡಿದ್ದರು. ಶಾಸ್ತ್ರಿಯ ಸಂಗೀತ ಕಲಿತು ಗಾಯನದಲ್ಲಿ ಹೆಸರು ಮಾಡಿರುವ ಉಮಾ 35 ವರ್ಷಗಳಲ್ಲಿ 6000ಕ್ಕೂ ಹೆಚ್ಚು ಸಂಗೀತ ಕಛೇರಿಗಳನ್ನು ನಡೆಸಿಕೊಟ್ಟಿದ್ದಾರೆ. 1977ರಲ್ಲಿ ಹಿಂದಿ ಸಿನಿಮಾದಲ್ಲಿ ಹಾಡಲು ಅವಕಾಶ ಸಿಕ್ಕಿದರೂ ತಮಿಳು ಚಿತ್ರರಂಗ ಅವರ ಕೆರಿಯರ್‌ಗೆ ದೊಡ್ಡ ಬ್ರೇಕ್ ನೀಡಿತ್ತು. ಇಳಯರಾಜ ಸಂಗೀತದಲ್ಲಿ ಉಮಾ ರಮಣನ್ ಸಾಕಷ್ಟು ಹಿಟ್ ಸಾಂಗ್‌ಗಳನ್ನು ನೀಡಿದ್ದಾರೆ. ಉಮಾ ರಮಣನ್ ನಿಧನಕ್ಕೆ ಆಪ್ತರು, ಅಭಿಮಾನಿಗಳು, ಚಿತ್ರರಂಗದವರು ಸಂತಾಪ ಸೂಚಿಸಿದ್ದಾರೆ.
Author: Author AIN
ಕಾಲಿವುಡ್ ನಟ ರಾಘವ್ ಲಾರೆನ್ಸ್ ಮೇ.1ರಂದು ಕಾರ್ಮಿಕರ ದಿನಾಚರಣೆಯ ಹಿನ್ನೆಲೆಯಲ್ಲಿ ರೈತರಿಗೆ ಉಚಿತ ಟ್ರ್ಯಾಕ್ಟರ್ ನೀಡಿದ್ದಾರೆ. ನಟನ ಜನಪರ ಕೆಲಸಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂದು (ಮೇ 1) ಕಾರ್ಮಿಕರ ದಿನಾಚರಣೆಯ ಸಂದರ್ಭದಲ್ಲಿ ರಾಘವ ಲಾರೆನ್ಸ್ ರೈತರಿಗೆ 10 ಟ್ರ‍್ಯಾಕ್ಟರ್‌ಗಳನ್ನು ವಿತರಣೆ ಮಾಡಿದ್ದಾರೆ. ಈ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಿ ಬೆಂಬಲಿಸಬೇಕಾಗಿ ವಿನಂತಿ ಎಂದು ನಟ ಮನವಿ ಮಾಡಿದ್ದಾರೆ. ಈ ವಿಶೇಷ ಹೊಸ ಪ್ರಯಾಣವನ್ನು ಪ್ರಾರಂಭಿಸಲು ನನಗೆ ತುಂಬಾ ಸಂತೋಷವಾಗಿದೆ. ಆರಂಭದಲ್ಲಿ ನಮ್ಮ ದೇಶದ ಬೆನ್ನೆಲುಬಾಗಿರುವ ರೈತರಿಗೆ ನನ್ನ ಸ್ವಂತ ಹಣದಲ್ಲಿ 10 ಟ್ರ‍್ಯಾಕ್ಟರ್ ನೀಡುತ್ತೇನೆ. ಅಗತ್ಯವಿರುವ ಜನರಿಗೆ ಸೇವೆ ಸಲ್ಲಿಸಲು ಪ್ರತಿಯೊಬ್ಬರೂ ಈ ನಿಸ್ವಾರ್ಥ ಪ್ರಯಾಣವನ್ನು ಬೆಂಬಲಿಸಬೇಕು. ಶಬ್ದಗಳಿಗಿಂತ ಕಾರ್ಯಗಳು ಜೋರಾಗಿ ಮಾತನಾಡುತ್ತವೆ. ನನ್ನ ಪ್ರಯಾಣದಲ್ಲಿ ನನಗೆ ನಿಮ್ಮೆಲ್ಲರ ಬೆಂಬಲ ಮತ್ತು ಆಶೀರ್ವಾದ ಬೇಕು. ಇಂದಿನಿಂದ ಸೇವೆ ಆರಂಭವಾಗಿದೆ ಎಂದು ಲಾರೆನ್ಸ್ ಹೇಳಿರುವ ವಿಡಿಯೋ ಶೇರ್ ಮಾಡಿದ್ದಾರೆ. ಇದರ ಜೊತೆಗೆ ನಟ ಲಾರೆನ್ಸ್ ಇತ್ತೀಚೆಗೆ 150 ಮಕ್ಕಳನ್ನು ದತ್ತು ಪಡೆದಿದ್ದಾರೆ. ಅವರ…
ನಟಿ ಮೃಣಾಲ್ ಠಾಕೂರ್ ಸದ್ಯ ಹಿಂದಿ ಮತ್ತು ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸೀತಾ ರಾಮ ಸಿನಿಮಾದ ಬಳಿಕ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿರುವ ನಟಿ ಇದೀಗ ಸಂದರ್ಶನವೊಂದರಲ್ಲಿ ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ದಾರೆ. ಅನೇಕ ಸಿನಿಮಾಗಳ ಅವಕಾಶ ಕೈತಪ್ಪಿ ಹೋಗಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಕೆರಿಯರ್ ಶುರುವಿನಲ್ಲಿ ಆಡಿಷನ್ ಕೊಡುವಾಗ ಹಳ್ಳಿ ಹುಡುಗಿಯಂತೆ ಕಾಣ್ತಾಳೆ, ನಮ್ಮ ಸಿನಿಮಾಗೆ ಸೂಟ್ ಆಗಲ್ಲ. ಸಿನಿಮಾದಲ್ಲಿ ಮಾಡ್ರರ್ನ್ ಆಗಿ ಕಾಣಿಸಿಕೊಳ್ಳಬೇಕು ಎಂದು ಕಾರಣ ನೀಡಿ ಸೆಲೆಕ್ಟ್ ಮಾಡಲಿಲ್ಲ ಎಂದು ನಟಿ ಹೇಳಿದ್ದಾರೆ. ಟಿವಿ ಕಾರ್ಯಕ್ರಮಗಳೊಂದಿಗೆ ವೃತ್ತಿಜೀವನವನ್ನು ಪ್ರಾರಂಭಿಸಿ ಮೃಣಾಲ್ ಠಾಕೂರ್ ಗೆ ಸೀತಾ ರಾಮಂ ಸಿನಿಮಾ ಬಳಿಕ ಭಾರೀ ಜನಪ್ರಿಯತೆ ಸಿಕ್ಕಿದೆ, ಜರ್ಸಿ, ಘೋಸ್ಟ್ ಸ್ಟೋರೀಸ್, ಹಾಯ್ ನನ್ನಾ, ದಿ ಫ್ಯಾಮಿಲಿ ಸ್ಟಾರ್ ನಂತಹ ಚಲನಚಿತ್ರಗಳೊಂದಿಗೆ ಮೃಣಾಲ್ ಠಾಕೂರ್ ಅಭಿಮಾನಿಗಳ ಮನಗೆದ್ದು, ಆಕೆಯ ಅಭಿನಯಕ್ಕೆ ಪ್ರೇಕ್ಷಕರು ಸೇರಿದಂತೆ ವಿಮರ್ಶಕರು ಫಿದಾ ಆಗಿದ್ದಾರೆ.
ಸೆಲೆಬ್ರಿಟಿಗಳು ತಮ್ಮ ಫಿಟ್ ನೆಸ್ ಗಾಗಿ ಸಾಕಷ್ಟು ತ್ಯಾಗಗಳನ್ನು ಮಾಡುತ್ತಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ ಬಾಲಿವುಡ್ ನಟ ಜಾನ್ ಅಬ್ರಹಾಂ. ಇವರು ಕಳೆದ 25 ವರ್ಷಗಳಿಂದ ಸಿಹಿ, ಮಾಂಸಾಹಾರ ಹಾಗೂ ಮದ್ಯ ಸಿಗರೇಟ್ ಗಳಿಂದ ದೂರವಿರೋದಾಗಿ ಬ್ರಿಟನ್-ಪಾಕ್ ನಟ ಆ್ಯಲಿ ಖಾನ್ ಅಚ್ಚರಿ ಹೊಹಾಕಿದ್ದಾರೆ. ಜಾನ್ ಅಬ್ರಹಾಂ ಅವರು ಸಂಪೂರ್ಣವಾಗಿ ಸಿಹಿಯಿಂದ ದೂರ ಇದ್ದಾರೆ. ಬ್ರಿಟಿಷ್-ಪಾಕಿಸ್ತಾನಿ ನಟ ಅಲಿ ಖಾನ್ ಅವರು ಜಾನ್ ಅಬ್ರಹಾಂ ಅವರೊಂದಿಗೆ ಕೆಲಸ ಮಾಡಿದ್ದನ್ನು ಇತ್ತೀಚೆಗೆ ನೆನಪಿಸಿಕೊಂಡರು. ಜಾನ್ ಒಬ್ಬ ಸನ್ಯಾಸಿಯಂತೆ ಬದುಕುತ್ತಾರೆ. ಅದು ಚಲನಚಿತ್ರೋದ್ಯಮದಲ್ಲಿ ಅವರ ನಿರಂತರ ಯಶಸ್ಸಿನ ರಹಸ್ಯವಾಗಿದೆ ಎಂದಿದ್ದಾರೆ . ಜೋಯಾ ಅಖ್ತರ್ ನಿರ್ದೇಶನದ ‘ಲಕ್ ಬೈ ಚಾನ್ಸ್’ ಸಿನಿಮಾದಲ್ಲಿ ಅಲಿ ಖಾನ್ ನಟಿಸಿದ್ದರು. ಈ ಚಿತ್ರದಲ್ಲಿ ಜಾನ್ ಅಬ್ರಹಾಂ ಅವರು ಅತಿಥಿ ಪಾತ್ರ ಮಾಡಿದ್ದರು. ಈಗ ‘ತೆಹ್ರಾನ್’ ಸಿನಿಮಾದಲ್ಲಿ ಜಾನ್ ಜೊತೆ ಕೆಲಸ ಮಾಡೋ ಅವಕಾಶ ಆ್ಯಲಿಗೆ ಸಿಕ್ಕಿದೆ. ಜಾನ್ ಅಬ್ರಹಾಂ ಶಿಸ್ತನ್ನು ನೋಡಿ ದಂಗಾಗಿರುವುದಾಗಿ ಅಲಿ ಹೇಳಿದ್ದಾರೆ. ಜಾನ್‌ಗೆ…
ಟಗರು ಪುಟ್ಟಿ ನಟಿ ಮಾನ್ವಿತಾ ಕಾಮತ್ ಚಿಕ್ಕಮಗಳೂರಿನ ಕಳಸದಲ್ಲಿ 500 ವರ್ಷ ಹಳೆಯ ವೆಂಕಟರಮಣ ದೇವಸ್ಥಾನದಲ್ಲಿ ಹಸೆಮಣೆ ಏರಿದ್ದಾರೆ. ಮೈಸೂರು ಮೂಲದ ಹುಡುಗ ಅರುಣ್ ಕುಮಾರ್ ಅವರನ್ನು ನಟಿ ವರಿಸಿದ್ದು, 2 ಕುಟುಂಬದ ಸದಸ್ಯರು ಮತ್ತು ಸಿನಿಮಾ ರಂಗದ ಗಣ್ಯರು ಹಾಗೂ ಆಪ್ತರು ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ಮೇ 1ರಂದು ಮಾನ್ವಿತಾ ,ಅರುಣ್ ಮದುವೆ ಕೊಂಕಣಿ ಸಂಪ್ರದಾಯದಂತೆ ನಡೆದಿದೆ. ಅದಕ್ಕೂ ಮುನ್ನ ಏಪ್ರಿಲ್ 29ರಂದು ಮೆಹೆಂದಿ ಹಾಗೂ 30ರಂದು ಸಂಗೀತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅರುಣ್ ಅವರು ಮ್ಯೂಸಿಕ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮದುವೆಯ ಬಳಿಕವೂ ಮಾನ್ವಿತಾ ಅವರು ಸಿನಿಮಾರಂಗದಲ್ಲಿ ಇರಲಿದ್ದಾರೆ ಎಂದು ಅರುಣ್ ಹೇಳಿದ್ದಾರೆ. ಅರುಣ್ ಹಾಗೂ ಮಾನ್ವಿತಾ ಕಾಮತ್ ಅವರದ್ದು ಅರೇಂಜ್ ಮ್ಯಾರೇಜ್ ಆಗಿದ್ದು ತಾಯಿ ನೋಡಿ ಮೆಚ್ಚಿದ ಹುಡುಗನನ್ನೇ ನಟಿ ವರಿಸಿದ್ದಾರೆ. ಮಾನ್ವಿತಾ ಕಾಮತ್ ಅವರ ಮದುವೆಯನ್ನು ಅವರ ಸೋದರ ಮಾವಂದಿರೇ ಮುನ್ನಡೆಸಿಕೊಟ್ಟಿದ್ದಾರೆ. 2 ಕುಟುಂಬದವರು, ಆಪ್ತರು ಹಾಗೂ ಕನ್ನಡ ಚಿತ್ರರಂಗದ ಗಣ್ಯರು ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು.…
ಪಂಜಾಬಿ ಗಾಯಕ ಸಿಧು ಮೂಸೇವಾಲಾ ಹತ್ಯೆ ಪ್ರಕರಣದ ರೂವಾರಿ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್‌ನನ್ನು ದಲ್ಲಾ ಲಖ್ಬೀರ್ ಗ್ಯಾಂಗ್‌ನ ಪ್ರತಿಸ್ಪರ್ಧಿ ಗ್ಯಾಂಗ್ ಸದಸ್ಯರು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಕ್ಯಾಲಿಫೋರ್ನಿಯಾದ ಹೋಟೆಲ್ ಫೇರ್‌ಮೌಂಟ್‌ನಲ್ಲಿ ಘಟನೆ ನಡೆದಿದೆ. ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಕೆನಡಾದಲ್ಲಿನ 25 ಮೋಸ್ಟ್ ವಾಂಟೆಡ್ ವ್ಯಕ್ತಿಗಳಲ್ಲಿ ಒಬ್ಬನಾಗಿದ್ದ. 2022ರ ಮೇ 29 ರಂದು ಗೋಲ್ಡಿ ಬ್ರಾರ್‌ನ ಸೂಚನೆಯ ಮೇರೆಗೆ ಪಂಜಾಬಿ ಗಾಯಕ ಸಿಧು ಮೂಸೇವಾಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ ಎನ್ನಲಾಗಿದೆ.
15 ವರ್ಷದ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಅಮೆರಿಕದ ಶಿಕ್ಷಕಿಯೊಬ್ಬರನ್ನು ಬಂಧಿಸಲಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. 26 ವರ್ಷ ವಯಸ್ಸಿನ ರೇಗನ್ ಗ್ರೇ ಅವರನ್ನು ಬಂಧಿಸಲಾಗಿದೆ. ಲಿಟ್ಲ್ ರಾಕ್ ಇಮ್ಯಾನ್ಯುಯಲ್ ಬ್ಯಾಪ್ಟಿಸ್ಟ್ ಚರ್ಚ್ ನಲ್ಲಿ ಸ್ವಯಂಸೇವಕಿಯಾಗಿ ಕಾರ್ಯ ನಿರ್ವಹಿಸುವ ವೇಳೆ 2020ರಿಂದೀಚೆಗೆ 15 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಳು ಎನ್ನುವುದು ಸಾಬೀತಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮಗನ ಮೊಬೈಲ್ ಫೋನ್ ನಲ್ಲಿದ್ದ ಮೆಸೇಜ್ ಗಳನ್ನು ನೋಡಿದ ಬಳಿಕ ಬಾಲಕನ ಪೋಷಕರು ಮಹಿಳೆ ಬಗ್ಗೆ ಹಿರಿಯ ಪಾಸ್ಟರ್ ಗೆ ದೂರು ನೀಡಿದ್ದರು. ಬಾಲಕನಿಗೆ ನಗ್ನ ಚಿತ್ರಗಳನ್ನು ಹೇರಳವಾಗಿ ಕಳುಹಿಸುತ್ತಿದ್ದುದು ಕಂಡುಬಂದಿತ್ತು. ಲಿಟ್ಲ್ ರಾಕ್ ಕ್ರಿಶ್ಚಿಯನ್ ಅಕಾಡೆಮಿಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳೆ, ಕೌನ್ಸಿಲಿಂಗ್ ವೇಳೆ ದೈಹಿಕ ಸಂಬಂಧವಾಗಿರಲಿಲ್ಲ ಎಂದು ಚರ್ಚ್ ಅಧಿಕಾರಿಗಳಿಗೆ ತಿಳಿಸಿದ್ದಳು. ಈ ವರ್ಷದ ಫೆಬ್ರುವರಿಯಲ್ಲಿ ಸ್ನ್ಯಾಪ್ ಚಾಟ್ ಮೂಲಕ 15 ವರ್ಷದ ಬಾಲಕನಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದುದು ದೃಢಪಟ್ಟಿದ್ದು ಇದೀಗ ಮಹಿಳೆಯನ್ನು ಬಂಧಿಸಲಾಗಿದೆ.
ಹರಿತವಾದ ಖಡ್ಗದಿಂದ ಅಪ್ರಾಪ್ತನನ್ನು ಕೊಂದು, ಹಲವರನ್ನು ಗಾಯಗೊಳಿಸಿದ್ದ 36 ವರ್ಷದ ವ್ಯಕ್ತಿಯನ್ನು ಕೊನೆಗೂ ಲಂಡನ್ ಮೆಟ್ರೋ ಪಾಲಿಟನ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಗಿನ ಹೊತ್ತು ಕಚೇರಿಗೆ ತೆರಳುವ ಒತ್ತಡದಲ್ಲಿದ್ದ ಜನರಿಗೆ ಈ ಘಟನೆ ಆಘಾತ ತಂದಿದೆ. ಕೂಡಲೇ ಪೊಲೀಸರಿಗೆ ಕರೆ ಮಾಡಿದ ಸಾರ್ವಜನಿಕರು ವ್ಯಕ್ತಿಯ ಬಗ್ಗೆ ಮಾಹಿತಿ ನೀಡಿದ್ದು ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಬಂಧಿಸುವ ಹೊತ್ತಿಗಾಗಲೇ ಆತ ತನ್ನ ಕತ್ತಿಯಿಂದ ಹಲವರ ಮೇಲೆ ದಾಳಿ ನಡೆಸಿದ್ದಷ್ಟೇ ಅಲ್ಲ, ತನ್ನನ್ನು ಬಂಧಿಸಲು ಬಂದಿದ್ದ ಇಬ್ಬರು ಪೊಲೀಸರ ಮೇಲೂ ದಾಳಿ ಮಾಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಈ ಘಟನೆಯಲ್ಲಿ ಒಟ್ಟು ಎಷ್ಟು ಮಂದಿಗೆ ಗಾಯವಾಗಿದೆ ಅನ್ನೋದ್ರ ಕುರಿತಾಗಿ ಇನ್ನಷ್ಟೇ ನಿಖರ ಮಾಹಿತಿ ಹೊರ ಬೀಳಬೇಕಿದೆ. ಈ ಘಟನೆ ಕುರಿತಾಗಿ ಮಾಹಿತಿ ನೀಡಿರುವ ಲಂಡನ್ ಆಂಬುಲೆನ್ಸ್ ಸೇವೆ, ತಾನು ಐವರು ಗಾಯಾಳುಗಳಿಗೆ ಚಿಕಿತ್ಸೆ ನೀಡಿರೋದಾಗಿ ಹೇಳಿದೆ. ಎಲ್ಲರನ್ನೂ ಆಸ್ಪತ್ರೆಗೆ ರವಾನಿಸಲಾಗಿದ್ದು, ಗಾಯಾಳಗಳ ಆರೋಗ್ಯ ಸ್ಥಿತಿ ಕುರಿತಾಗಿ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ…
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾ ತಂಡಕ್ಕೆ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ನೋಟಿಸ್ ನೀಡಿದ್ದಾರೆ. ಕೂಲಿ ಸಿನಿಮಾದಲ್ಲಿ ತಮ್ಮ ಸಂಗೀತ ಸಂಯೋಜನೆಯನ್ನು ಅನುಮತಿ ಇಲ್ಲದೇ ಬಳಸಿದ್ದಾರೆ ಎಂದು ನೋಟಿಸ್ ನಲ್ಲಿ ಉಲ್ಲೇಖಿಸಿದ್ದಾರೆ. ಕೂಲಿ ಸಿನಿಮಾಗೆ ಅನಿರುದ್ಧ ಸಂಗೀತ ಸಂಯೋಜನೆ ಮಾಡಿದ್ದು, ಇದರಲ್ಲಿ ಇಳಯರಾಜ ಅವರ ವಾ ವಾ ಪಾಕಂ ವಾ ಹಾಡನ್ನು ಮರುಸೃಷ್ಟಿಸಲಾಗಿದೆ. ಇದಕ್ಕೆ ತಮ್ಮ ಅನುಮತಿ ಪಡೆದುಕೊಂಡಿಲ್ಲ ಎಂದು ಇಳಯರಾಜ ಹೇಳಿಕೊಂಡಿದ್ದಾರೆ. ಹಾಗಾಗಿ ನಿರ್ಮಾಣ ಸಂಸ್ಥೆಗೆ ನೋಟಿಸ್ ನೀಡಲಾಗಿದೆ. ಕೂಲಿ ಚಿತ್ರದ ನಿರ್ದೇಶಕ ಲೋಕೇಶ್ ಕನಕರಾಜ್ ಪದೇ ಪದೇ ಇಂತಹ ತಪ್ಪುಗಳನ್ನು ಮಾಡುತ್ತಾರೆ ಎನ್ನುವ ಆರೋಪ ಹಿಂದಿನಿಂದಲೂ ಕೂಡ ಇದೆ. ಈ ಹಿಂದೆ ವಿಕ್ರಮ್ ಸಿನಿಮಾದಲ್ಲೂ ಅವರು ಇಳಯರಾಜ ಅವರು ಹಾಡನ್ನು ಬಳಸಿಕೊಂಡಿದ್ದರು. ಆಗಲೂ ಇಳಯರಾಜ ಗರಂ ಆಗಿದ್ದರು. ಈಗ ಮತ್ತೆ ಲೋಕೇಶ್ ಹಿಂದಿನ ತಪ್ಪನ್ನೇ ಮಾಡಿದ್ದಾರೆ.
ಅಂಗಮಾಲಿ ಡೈರೀಸ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟಿ ಅನ್ನಾ ರಾಜನ್, ಇತ್ತೀಚೆಗೆ ಆವೇಶಂ ಚಿತ್ರದ ಹಾಡೊಂದಕ್ಕೆ ಹೆಜ್ಜೆ ಹಾಕಿ ಸದ್ದು ಮಾಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ನಟಿ ಈ ವಿಡಿಯೋವನ್ನು ಹಂಚಿಕೊಂಡಿದ್ದರು. ವಿಡಿಯೋ ಹಂಚಿಕೊಂಡ ನಟಿ, ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಎಲ್ಲ ಜನರಿಗೆ, ನಿಮ್ಮ ಕಾಳಜಿ ಮತ್ತು ವಿಶೇಷ ಪ್ರೀತಿಗೆ ಧನ್ಯವಾದ ಎಂದು ಹೇಳಿದ್ದ ಅನ್ನಾ, ಧಗಧಗಿಸುವ ಬಿಸಿಲಿನ ಕಾರಣಕ್ಕೆ, ಮನ ಬಿಚ್ಚಿ ಕುಣಿಯಲು ಸಾಧ್ಯವಾಗಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನನಗೆ ಡ್ಯಾನ್ಸ್ ಅಂದರೆ ಅಷ್ಟಕಷ್ಟೇ ಎಂದಿದ್ದರು. ಮುಂದಿನ ಬಾರಿ ಇನ್ನೂ ಚೆನ್ನಾಗಿ ತಮ್ಮ ನೃತ್ಯ ಕಲೆಯನ್ನ ಪ್ರದರ್ಶಿಸುವುದಾಗಿಯೂ ಹೇಳಿದ್ದರು. ಅನ್ನಾ ಅವರನ್ನು ಸಾಕಷ್ಟು ಮಂದಿ ಟ್ರೋಲ್ ಮಾಡಿದ್ದಾರೆ.ಕುಣಿಯೋಕೆ ಬಾರದವರು ನೆಲ ಡೊಂಕು ಅಂದರಂತೆ, ಹಾಗಾಯಿತು ನಿಮ್ಮ ಕಥೆ ಅಂದಿದ್ದಾರೆ. ಇಷ್ಟ್ಯಾಕೇ ದಪ್ಪ ಆಗಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ದಪ್ಪ ಆಗುವುದು ಮಹಾ ಅಪರಾಧ ಎಂಬಂತೆ ಅನ್ನಾ ಅವರನ್ನ ಟೀಕಿಸಿದ್ದಾರೆ. ವ್ಯಂಗ್ಯ ಮಾಡಿದ್ದಾರೆ. ಈ ಕಾಮೆಂಟ್ ಗಳನ್ನು ನೋಡಿ ಕುಗ್ಗಿ…