ಮಂಡ್ಯ: ಬೈಕ್ ಹಾಗೂ ಕೆಎಸ್ಆರ್ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರಿಬ್ಬರು ಮೃತ ಪಟ್ಟಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಪಂಡಿತಹಳ್ಳಿ ಗ್ರಾಮದ ಬಳಿ ನಡೆದಿದೆ. ಮಳವಳ್ಳಿಯ ಮಂಚನಹಳ್ಳಿ ಗ್ರಾಮದ ದೊಡ್ಡಮಾದಯ್ಯ( 64), ನಾಗಸ್ವಾಮಿ (52 )ಮೃತ ದುರ್ದೈವಿಗಳಾಗಿದ್ದು, https://ainlivenews.com/applications-are-invited-for-the-post-at-canara-bank-job-in-bangalore-apply-today/ ಮೃತರಿಬ್ಬರು ಗ್ರಾಮದಿಂದ ಮಳವಳ್ಳಿಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿ, ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಮಳವಳ್ಳಿ ಸಾರ್ವಜನಿಕ ಆಸ್ಪತ್ರೆಗೆ ಮೃತ ದೇಹ ರವಾನೆ ಮಾಡಲಾಗಿದ್ದು, ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Author: Author AIN
ಬೆಂಗಳೂರು: ಹಣವನ್ನು ನೀಡಿ ಶರಣಾಗತಿ ಮಾಡಿಸುವುದನ್ನು ನಾವು ವಿರೋಧಿಸುತ್ತೇವೆ ಎಂದು ಮಾಜಿ ಸಚಿವ ಸುನಿಲ್ ಕುಮಾರ್ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಕ್ಸಲ್ ಚಿಂತನೆಗೆ ಬೆಂಬಲ ಸಿಗದೇ ಇದ್ದಾಗ ಸಿದ್ದರಾಮಯ್ಯ ಸರ್ಕಾರ ಪ್ಯಾಕೇಜ್ ಆಸೆಯ ಚಿಗುರು ಹೊರಡಿಸಿದೆ. ಹಣವನ್ನು ನೀಡಿ ಶರಣಾಗತಿ ಮಾಡಿಸುವುದನ್ನು ನಾವು ವಿರೋಧಿಸುತ್ತೇವೆ. ಬಡವರಿಗೆ ನೆರವು ಕೊಡದೇ ಬಂದೂಕುಗಳು ಹಿಡಿದವರಿಗೆ ನೆರವು ಕೊಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. https://ainlivenews.com/applications-are-invited-for-the-post-at-canara-bank-job-in-bangalore-apply-today/ ರಾಮೇಶ್ವರ ಕಫೆಗೆ ಬಾಂಬ್ ಇಟ್ಟವರನ್ನು ಹಾಗೂ ಪೊಲೀಸ್ ಸ್ಟೇಷನ್ ಗೆ ಬೆಂಕಿ ಇಟ್ಟವರನ್ನ ಶರಣಾಗತಿ ಆದರೆ ಬಿಡ್ತಾರಾ? ಶರಣಾಗತಿಗೂ ಮೊದಲೇ ಎ, ಬಿ,ಸಿ ಎಂದು ಪ್ಯಾಕೇಜ್ ಘೋಷಣೆ ಮಾಡುವುದು ಸರಿಯಲ್ಲ. ಸಿದ್ದರಾಮಯ್ಯನವರ ಮನೆಯಲ್ಲೇ ಶರಣಾಗತಿ ಆಗುತ್ತದೆ ಅಂದ್ರೆ ಅದಕ್ಕಿಂತ ದೊಡ್ಡ ದುರಂತ ಯಾವುದು ಇಲ್ಲ ಎಂದು ಹೇಳಿದರು.
ಮಂಡ್ಯ:ಸಂಸದೆ ಸುಮಲತಾ ಅಂಬರೀಶ್ ಅವರು ಮಂಡ್ಯದಲ್ಲೇ ತಮ್ಮ ಮುಂದಿನ ರಾಜಕೀಯ ನಡೆ ಏನು ಎನ್ನುವುದನ್ನು ಮಹತ್ವದ ನಿರ್ಧಾರವನ್ನು ತಿಳಿಸಿದ್ದಾರೆ. ಹೌದು ಕಳೆದ ಲೋಕಸಭಾ ಚುನಾವಣೆ ನಂತ್ರ ಮಂಡ್ಯ ರಾಜಕಾರಣದಿಂದ ಅಂತರ ಕಾಯ್ದುಕೊಂಡಿದ್ದರು ಸುಮಲತಾ. ಜನವರಿ ನಂತರ ಮಂಡ್ಯ ರಾಜಕಾರಣದಲ್ಲಿ ಸಕ್ರಿಯೆಗೊಳ್ಳುವ ಬಗ್ಗೆ ಕಳೆದ ನವಂಬರ್ ನಲ್ಲಿ ಹೇಳಿಕೆ ನೀಡಿದ್ದರು. ಇದೀಗ ಮಂಡ್ಯಕ್ಕೆ ಮತ್ತೆ ರೆಬಲ್ ಲೇಡಿ ಎಂಟ್ರಿ ಕೊಟ್ಟಿದ್ದಾರೆ. ಮಂಡ್ಯ ನಗರದ ಬಂದಿಗೌಡ ಬಡಾವಣೆಯಲ್ಲಿ ಹೊಸ ಮನೆ ಬಾಡಿಗೆ ಪಡೆದಿದ್ದಾರೆ ಸುಮಲತಾ. https://ainlivenews.com/applications-are-invited-for-the-post-at-canara-bank-job-in-bangalore-apply-today/ ಕೆಲ ದಿನಗಳ ಹಿಂದೆಯೇ ನೂತನ ಬಾಡಿಗೆ ಮನೆಯಲ್ಲಿ ಹಾಲು ಉಕ್ಕಿಸುವ ಕಾರ್ಯ ನೆರವೇರಿದೆ. ಹೇಳಿಕೆಯಂತೆ ಹೊಸ ವರ್ಷದಲ್ಲಿ ಹೊಸ ಮನೆ ಪ್ರವೇಶ ಮಾಡಿದ್ದಾರೆ. ಮುಂಬರುವ MLA ಚುನಾವಣೆ ದೃಷ್ಟಿಯಿಂದ ಸುಮಲತಾ ಪ್ಲ್ಯಾನ್ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ .
ಬೆಂಗಳೂರು: ರಾಜಕಾರಣ ಮಾಡುವುದಾದರೆ ಓಪನ್ ಆಗಿಯೇ ಮಾಡುತ್ತೇವೆ. ಮುಚ್ಚಿಟ್ಟು ಮಾಡುವಂಥದ್ದೇನೂ ಇಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ. ಹೈಕಮಾಂಡ್ಗೆ ಡಿಸಿಎಂ ಡಿಕೆ ಶಿವಕುಮಾರ್ ದೂರು ನೀಡಿದ್ದಾರೆಯೇ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಪರಮೇಶ್ವರ್, ಆ ಬಗ್ಗೆ ನನಗೆ ಗೊತ್ತಿಲ್ಲ. ನಮ್ಮ ಈ ಸಭೆಗೆ ಡಿಸಿಎಂ ಡಿಕೆ ಶಿವಕುಮಾರ್ರನ್ನೂ ಕರೆಯಬೇಕು ಎಂದು ಚರ್ಚೆ ಆಗಿತ್ತು. ರಾಜಕಾರಣ ಮಾಡುವುದಾದರೆ ಓಪನ್ ಆಗಿಯೇ ಮಾಡುತ್ತೇವೆ. ಮುಚ್ಚಿಟ್ಟು ಮಾಡುವಂಥದ್ದೇನೂ ಇಲ್ಲ ಎಂದರು. https://ainlivenews.com/applications-are-invited-for-the-post-at-canara-bank-job-in-bangalore-apply-today/ ದಲಿತ ಸಮುದಾಯದ ಮೇಲಿನ ದೌರ್ಜನ್ಯ ಬಗ್ಗೆ ಚರ್ಚೆ ಆಗಬೇಕಿದೆ. ಯಾರೂ ನಮ್ಮ ಸಭೆಯನ್ನು ಸಹಿಸುವುದಿಲ್ಲ ಎಂದು ಹೇಳಿಲ್ಲ. ನಮ್ಮ ನಮ್ಮ ಸಭೆ ಸಹಿಸಲ್ಲ ಅಂದರೆ ಅದಕ್ಕೆ ತಕ್ಕ ಉತ್ತರ ಕೊಡುತ್ತೇವೆ. ನಮಗೆ ಆ ಶಕ್ತಿ ಇದೆ ಎಂದು ಪರಮೇಶ್ವರ್ ಎಚ್ಚರಿಕೆ ನೀಡಿದರು. ಸದ್ಯದ ಮಟ್ಟಿಗೆ ಸಭೆ ಮುಂದಕ್ಕೆ ಹಾಕಿದ್ದೇವೆ. ಮತ್ತೆ ದಿನಾಂಕ ನಿಗದಿ ಆದಾಗ ತಿಳಿಸುತ್ತೇವೆ. ಏನಾಗಿದೆ ಎಂದು ಎಲ್ಲವನ್ನೂ ಹೇಳಲು ಆಗುವುದಿಲ್ಲವಲ್ಲ ಎಂದು ಪರಮೇಶ್ವರ್ ಹೇಳಿದರು.
ಬೆಂಗಳೂರು: ಪ್ರೀತಿ-ಪ್ರೇಮದ ಹೆಸರಿನಲ್ಲಿ ಟ್ಯೂಷನ್ ಟೀಚರ್‌ನಿಂದಲೇ 10ನೇ ತರಗತಿ ವಿದ್ಯಾರ್ಥಿನಿ ಕಿಡ್ನ್ಯಾಪ್ ಮಾಡಿದ ಪ್ರಕರಣಕ್ಕೆ ಸಂಬಂಧೀಸಿದಂತೆ ಆರೋಪಿ ಶಿಕ್ಷಕನನ್ನು ಬಂದಿಸಿಲಾಗಿದೆ. ಅಭೀಷೆಕ್ ಗೌಡ ಬಂಧಿತ ಆರೋಪಿಯಾಗಿದ್ದು, ತನ್ನ ಮಗಳನ್ನು ಟ್ಯೂಷನ್ ಟೀಚರ್ ಕರೆದೊಯ್ದಿರುವುದಾಗಿ ತಂದೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಳೆದ ನ.23 ರಂದು ಎಂದಿನಂತೆ ಆರೋಪಿ ಬಳಿ ಟ್ಯೂಷನ್‌ಗೆ ವಿದ್ಯಾರ್ಥಿನಿ ಬಂದಿದ್ದಳು. ಟ್ಯೂಷನ್ ಮುಗಿದು ರಾತ್ರಿಯಾದರೂ ಮನೆಗೆ ವಾಪಸ್ ಆಗಿರಲಿಲ್ಲ. ರಾತ್ರಿ ಟ್ಯೂಷನ್ ಸೆಂಟರ್ ಬಳಿ ಹೋದಾಗ ಬಾಲಕಿಯನ್ನ ಟ್ಯೂಷನ್ ಟೀಚರ್ ಕರೆದೊಯ್ದಿರೋದು ಗೊತ್ತಾಗಿದೆ. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು 45 ದಿನಗಳ ಬಳಿಕ ಆರೋಪಿಯನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. https://ainlivenews.com/if-you-raise-sheep-you-can-earn-an-income-of-1-lakh-per-month-do-you-know-how/ ಇನ್ನೂ ಆರೋಪಿಯ ಮನೆ ಜಾಲಾಡಿದಾಗ ಉದ್ದೇಶಪೂರ್ವಕವಾಗಿ ಮೊಬೈಲ್ ಬಿಟ್ಟುಹೋಗಿರುವುದನ್ನು ಕಂಡುಕೊಂಡಿದ್ದರು. ಒಂದು ವರ್ಷದಿಂದ ಬಾಲಕಿಯನ್ನು ಪ್ರೀತಿಸುತ್ತಿರುವುದಾಗಿ ಹಾಗೂ ಮದುವೆಯಾಗಿರುವ ಬಗೆಗಿನ ವಿಡಿಯೋ ಮೊಬೈಲ್‌ನಲ್ಲಿ ಇರುವುದನ್ನು ಪೊಲೀಸರು ಗಮನಿಸಿದ್ದರು. ಆರೋಪಿ ಹಾಗೂ ಬಾಲಕಿ ಬಳಿ ಮೊಬೈಲ್ ಇರದ ಕಾರಣ…
ಬೆಂಗಳೂರು: ಇಂದು ಬಂಗಾರ ಆಚಾರ ಹಾಗೂ ಆಡಂಭರವಾಗಿ ಮಾನ್ಯತೆ ಪಡೆದುಕೊಂಡಿದೆ. ಅಲ್ಪ ಸ್ವಲ್ಪ ಹಣ ಸಿಕ್ಕಿದರೂ ಇದನ್ನು ಬಂಗಾರ ಮಾಡಿಸುವ ಎಂದು ಯೋಚಿಸುವ ಮಧ್ಯಮ ವರ್ಗದವರೇ ಹೆಚ್ಚಿರುವ ಭಾರತದಂತಹ ದೇಶದಲ್ಲಿ ಬಂಗಾರದ ಬೆಲೆ ಏರಿಕೆ ನುಂಗಲಾರದ ಬಿಸಿ ತುಪ್ಪವಾಗಿದೆ. ಒಮ್ಮೆ ಏರಿಕೆ ಒಮ್ಮೆ ಇಳಿಕೆ ಹೀಗೆ ಬೆಳ್ಳಿ ಬಂಗಾರ ಹಾವು ಏಣಿ ಆಟವಾಡುತ್ತಿದೆ. https://ainlivenews.com/if-you-raise-sheep-you-can-earn-an-income-of-1-lakh-per-month-do-you-know-how/ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು(ಡಿ.8) 22 ಕ್ಯಾರಟ್ 1 ಗ್ರಾಂ ಮತ್ತು 24 ಕ್ಯಾರಟ್ 1 ಗ್ರಾಂ ಚಿನ್ನದ ದರ ತಲಾ 10 ರೂ. ಮತ್ತು 11ರೂ ಅಧಿಕವಾಗಿತ್ತು. ಈ ಮೂಲಕ 22 ಕ್ಯಾರಟ್ 1 ಗ್ರಾಂ ಚಿನ್ನದ ದರ 7,225 ರೂ. ಮತ್ತು 24 ಕ್ಯಾರಟ್ 1 ಗ್ರಾಂ ಚಿನ್ನದ ದರ 7,882 ರೂ.ಗೆ ತಲುಪಿದೆ. 22 ಕ್ಯಾರಟ್ ಚಿನ್ನದ ದರಗಳ ವಿವರ 22 ಕ್ಯಾರಟ್‌ನ 8 ಗ್ರಾಂ ಚಿನ್ನ 57,800 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 72,250 ರೂ. ಮತ್ತು 100 ಗ್ರಾಂಗೆ…
ಬಿಗ್ ಬಾಸ್ ಕನ್ನಡ ಸೀಸನ್ನಲ್ಲಿ ಇನ್ನು 20ಕ್ಕೂ ಕಡಿಮೆ ದಿನಗಳು ಉಳಿದಿವೆ. ಸ್ಪರ್ಧಿಗಳ ಮಧ್ಯೆ ಕಾಂಪಿಟೇಷನ್ ಜೋರಾಗಿದೆ. ಯಾವ ಸ್ಪರ್ಧಿ ಗೆಲ್ಲುತ್ತಾರೆ, ಯಾವ ಸ್ಪರ್ಧಿ ಮನೆಗೆ ಹೋಗುತ್ತಾರೆ ಎನ್ನುವ ಚರ್ಚೆ ಜೋರಾಗಿದೆ. ಪ್ರತಿ ವಾರವೂ ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರತಿಕ್ರಿಯೆ ಬೇರೆ ಬೇರೆ ರೀತಿ ನಡೆಯುತ್ತದೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ ರಿಯಾಲಿಟಿ ಶೋ ಕೊನೆ ಹಂತವನ್ನು ತಲುಪುತ್ತಿದೆ. ಬಿಗ್ ಬಾಸ್ ಇಂದಿನ ಟಾಸ್ಕ್ನಲ್ಲಿ ಒಂದು ಸಂಖ್ಯೆಯನ್ನು ಸೂಚಿಸುತ್ತಾರೆ. ಆ ಸಂಖ್ಯೆಗೆ ಮೀಸಲಿರುವ ಚೆಂಡುಗಳನ್ನು ತೆಗೆದುಕೊಂಡು ಸ್ಪರ್ಧಿಗಳು ತಮ್ಮ ಟೀಮ್ನ ಬಾಸ್ಕೆಟ್ನಲ್ಲಿ ಹಾಕಬೇಕಾಗಿದೆ. ಒಂದು ತಂಡದಲ್ಲಿ ಮೂವರು ಎನ್ನುವಂತೆ 2 ಟೀಮ್ಗಳನ್ನು ರೆಡಿ ಮಾಡಿದ್ದು ಅವರ ಕಾಲಿಗೆ ಹಗ್ಗಗಳನ್ನು ಕಟ್ಟಲಾಗಿದೆ. ಈ ಗೇಮ್ ಆಡುವಾಗ ಭವ್ಯ ಅವರನ್ನು ಮಂಜು ತಳ್ಳಿದ್ದು ಇದಕ್ಕೆ ಭವ್ಯ ಕೋಪಗೊಂಡಿದ್ದಾರೆ. https://ainlivenews.com/if-you-raise-sheep-you-can-earn-an-income-of-1-lakh-per-month-do-you-know-how/ ಮೂಗಿಗೆ ಭವ್ಯ ಹೊಡೆದಿರುವುದನ್ನ ಮಂಜು ಪ್ರಶ್ನೆ ಮಾಡಿದ್ದಕ್ಕೆ ಬೇರೆಯವರಿಗೆ ಹೇಳುವುದಕ್ಕೂ ಮುಂಚೆ, ನೀವು ಮೊದಲು ಕರೆಕ್ಟ್ ಆಗಿ ಆಟ ಆಡಿ ಎಂದು ಗಟ್ಟಿ ಧ್ವನಿಯಲ್ಲೇ…
ಬೆಂಗಳೂರು: ಕಚ್ಚಾ ತೈಲಗಳಾದ ಪೆಟ್ರೋಲ್ ಡೀಸೆಲ್ ಕೂಡ ಬೆಲೆಗಳಲ್ಲಿ ಏರಿಳಿತಕ್ಕೊಳಗಾಗುತ್ತಿದ್ದು, ದಿನಂಪ್ರತಿ ಬಳಕೆಯಾಗುವ ಈ ಇಂಧನಗಳು ಒಮ್ಮೊಮ್ಮೆ ಬೆಲೆ ಏರಿಸಿಕೊಂಡಿರುವುದು ವಾಹನ ಚಾಲಕರಿಗೆ ತಲೆನೋವಿನ ಸಮಸ್ಯೆಯಾಗಿದೆ. ನವೀಕರಿಸಲಾಗದೇ ಇರುವ ಇಂಧನಗಳಾಗಿ ಗುರುತಿಸಿಕೊಂಡಿರುವ ಪೆಟ್ರೋಲ್, ಡೀಸೆಲ್ ಅನ್ನು ಹಲವಾರು ಪ್ರಕ್ರಿಯೆಗಳ ಮೂಲಕ ಶುದ್ಧೀಕರಿಸಿ ಬಳಕೆಗೆ ಲಭ್ಯವಾಗಿಸಲಾಗುತ್ತದೆ. ಇಂದು ಅನೇಕ ನಗರಗಳಲ್ಲಿ ತೈಲದ ಚಿಲ್ಲರೆ ಬೆಲೆಗಳು ಹೆಚ್ಚಾಗುತ್ತಿವೆ. ಆದರೆ, ಇಂದಿಗೂ ದೇಶದ ನಾಲ್ಕೂ ಮಹಾನಗರಗಳಲ್ಲಿ ತೈಲ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. https://ainlivenews.com/if-you-raise-sheep-you-can-earn-an-income-of-1-lakh-per-month-do-you-know-how/ ಇಂದು ಪೆಟ್ರೋಲ್ ಲೀಟರ್‌ಗೆ 19 ಪೈಸೆ ಇಳಿಕೆಯಾಗಿ 94.42 ರೂ.ಗೆ ಮತ್ತು ಡೀಸೆಲ್ ಲೀಟರ್‌ಗೆ 22 ಪೈಸೆ ಇಳಿಕೆಯಾಗಿ 87.47 ರೂ. ಅದೇ ಸಮಯದಲ್ಲಿ, ಮಹಾರಾಷ್ಟ್ರದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 32 ಪೈಸೆ ಇಳಿಕೆಯಾಗಿ 104.27 ರೂ.ಗೆ ಮತ್ತು ಡೀಸೆಲ್ ಲೀಟರ್‌ಗೆ 32 ಪೈಸೆ ಇಳಿಕೆಯಾಗಿ 90.80 ರೂ.ಗೆ ತಲುಪಿದೆ. ಛತ್ತೀಸ್‌ಗಢ, ಗೋವಾ, ಗುಜರಾತ್, ಹರಿಯಾಣ, ರಾಜಸ್ಥಾನ, ತಮಿಳುನಾಡು ಮತ್ತು ತ್ರಿಪುರಾದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆಯಾಗಿದೆ. ಮತ್ತೊಂದೆಡೆ, ಹಿಮಾಚಲ ಪ್ರದೇಶ, ಜಮ್ಮು…
ಉತ್ತರ ಪ್ರದೇಶ: ಇತ್ತೀಚೆಗೆ ವಿವಾಹೇತರ ಸಂಬಂಧಗಳ ಪ್ರಕರಣಗಳು ಜಾಸ್ತಿ ಆಗ್ತಿದ್ದು, ವಿವಾಹಿತ ಪುರುಷ-ಮಹಿಳೆಯರು ಮತ್ತೊಂದು ಸಂಬಂಧ ಹೊಂದಿರುವುದು ಒಂದು ಕಡೆಯಾದ್ರೆ ಮತ್ತೊಂದೆಡೆ ತಮ್ಮ ಪ್ರೇಮಿಗಳ ಜೊತೆ ಓಡಿ ಹೋಗ್ತಿರುವ ಘಟನೆಗಳು ಸಹ ಆಗಾಗ ನಡೆಯುತ್ತಿದೆ. ಇದೀಗ ಇಂತಹುದೇ ಘಟನೆಯೊಂದು ನಡೆದಿದೆ. ಗಂಡ ಮತ್ತು 6 ಮಕ್ಕಳೊಂದಿಗೆ ಸಂಸಾರ ಮಾಡುತ್ತಿದ್ದ ಮಹಾತಾಯಿಯೊಬ್ಬಳು ಭಿಕ್ಷುಕನೊಂದಿಗೆ ಪರಾರಿಯಾದ ಘಟನೆ ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ನಡೆದಿದೆ. ಸುಮಾರು 36 ವರ್ಷದ ಮಹಿಳೆ ರಾಜೇಶ್ವರಿ ಗಂಡ ಮತ್ತು ಮಕ್ಕಳೊಂದಿಗೆ ಸುಖೀ ಜೀವನ ನಡೆಸುತ್ತಿದ್ದಳು. ಆದರೆ ಭಿಕ್ಷೆ ಕೇಳುವ ನೆಪದಲ್ಲಿ ಆಗಾಗ ಮನೆ ಬಳಿ ಬರುತ್ತಿದ್ದ ಭಿಕ್ಷುಕನ ಮೇಲೆ ಪ್ರೇಮಾಂಕುರವಾಗಿ ಗಂಡ ಮತ್ತು ಮಕ್ಕಳನ್ನು ಬಿಟ್ಟು ಭಿಕ್ಷುಕನೊಂದಿಗೆ ಮಹಿಳೆ ಪರಾರಿಯಾಗಿದ್ದಾಳೆ. https://ainlivenews.com/if-you-raise-sheep-you-can-earn-an-income-of-1-lakh-per-month-do-you-know-how/ ಮಗಳಿಗೆ ಬಟ್ಟೆ ಹಾಗೂ ತರಕಾರಿ ತರುತ್ತೇನೆ ಎಂದು ಹೇಳಿ ಪತಿ ಎಮ್ಮೆ ಮಾರಿ ಗಳಿಸಿದ್ದ ಹಣವನ್ನು ತೆಗೆದುಕೊಂಡು ಮಾರ್ಕೆಟ್‌ಗೆ ತೆರಳಿದ ರಾಜೇಶ್ವರಿ ಏಕಾಏಕಿ ನಾಪತ್ತೆಯಾಗಿದ್ದಳು. ಪತ್ನಿ ಕಾಣಿಸದೇ ಆತಂಕಗೊಂಡ ಪತಿ ರಾಜು ಪೊಲೀಸ್ ಮೊರೆ ಹೋಗಿದ್ದಾರೆ.…
ಬೆಂಗಳೂರು: ನೀವು ನೌಕರಿ ( Job ) ಹುಡುಕತಾ ಇದ್ದಿರಾ. SSLC / PUC ಯಾವುದೇ ಪದವಿ ಆಗಿದ್ರೆ ಕೂಡಲೆ ಇಲ್ಲಿ ಭೇಟಿ ಕೊಡಿ. ಇಲ್ಲಿ ವಾಕ್ ಇನ್ ಸಂದರ್ಶನವಿದ್ದು, ಪುರುಷರು ಮತ್ತು ಮಹಿಳೆಯರಿಗೆ ನೇಮಕಾತಿ ಆರಂಭವಾಗಿದೆ. ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ನಲ್ಲಿ ಬ್ರ್ಯಾಂಚ್ ಮ್ಯಾನೆಜರ್, ಮ್ಯಾನೆಜರ್, ಅಸಿಸ್ಟೆಂಟ್ ಸೇಲ್ಸ್ ಎಕ್ಸಿಕ್ಯೂಟಿವ್, ಬಿಲ್ಲಿಂಗ್ ಎಕ್ಸಿಕ್ಯೂಟಿವ್, ಕ್ಯಾಶಿಯರ್ , ಸುಪರವೈಸರ್ ಸೇರಿದಂತೆ ಅನೇಕ ಹುದ್ದೆಗಳಿಗೆ ಇಲ್ಲಿ ಅವಕಾಶವಿದೆ. SSLC /PUC ಯಾವುದೇ ಪದವಿ ಮಾಡಿದ್ರು ಇಲ್ಲಿ ಕೆಲಸವಿದ್ದು. ಜೊತೆಗೆ ವಸತಿ + ಸ್ಥಿರ ಮತ್ತು ಆಕರ್ಷಕ ಸಂಬಳ + PF + ಪ್ರೋತ್ಸಾಹ ಧನ ಕೊಡಲಾಗುತ್ತದೆ. (Job alert – contact – 97406 26853 ) ದಿನಾಂಕ- 16-01-2025 ರಂದು ಮಧ್ಯಾಹ್ನ 3 ಗಂಟೆಯಿಂದ 5 ಗಂಟೆವರೆಗೆ ಸಂದರ್ಶನವಿದ್ದು, ನೌಕರಿ ಹುಡುಕುತ್ತಿರುವವರು ಸಂದರ್ಶನಕ್ಕೆ ಹಾಜರಾಗಬಹುದು. ಸಂದರ್ಶನ ನಡೆಯುವ ಸ್ಥಳ: #41 ಡಿ.ವಿ.ಜಿ ರಸ್ತೆ ಬಸವನಗುಡಿ, ಬೆಂಗಳೂರು- 04 ಹೆಚ್ಚಿನ ಮಾಹಿತಿಗಾಗಿ ಇಲ್ಲಿರುವ…