ಬಾಲಿವುಡ್ ನಟಿ ಆಲಿಯಾ ಭಟ್ ಹಾಗೂ ನಟ ರಣಬೀರ್ ಕಪೂರ್ ಮಗಳು ರಹಾ ಎಲ್ಲರ ಗಮನ ಸೆಳೆಯುತ್ತಿದ್ದಾಳೆ. ಕ್ರಿಸ್ ಮಸ್ ಸಂದರ್ಭದಲ್ಲಿ ಮಗಳ ಮುಖ ರಿವೀಲ್ ಮಾಡಿದ್ದ ದಂಪತಿ ಆ ಬಳಿಕ ಸಾಕಷ್ಟು ಭಾರಿ ಮಗಳ ಜೊತೆ ಸಾರ್ವಜನಿಕರವಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ರಹಾ ಅತಿ ಶ್ರೀಮಂತ ಸ್ಟಾರ್ ಕಿಡ್ ಎನಿಸಿಕೊಂಡಿದ್ದಾಳೆ. ರಣಬೀರ್ ಕಪೂರ್ ಹಾಗೂ ಆಲಿಯಾಗೆ 2022ರಲ್ಲಿ ಮದುವೆ ಆಯಿತು. ಅದೇ ವರ್ಷ ದಂಪತಿಗೆ ರಹಾ ಹಟ್ಟಿದ್ದಾಳೆ. ರಣಬೀರ್ ಹಾಗೂ ಆಲಿಯಾ ಬಾಂದ್ರಾದಲ್ಲಿ ಹೊಸ ಮನೆ ಕಟ್ಟಿಸುತ್ತಿದ್ದು, ಈ ಮನೆಯನ್ನು ಮಗಳು ರಹಾ ಹೆಸರಲ್ಲಿ ನೋಂದಣಿ ಮಾಡಿಸಲು ನಿರ್ಧರಿಸಿದ್ದಾರೆ. ಬಾಂದ್ರಾದಲ್ಲಿ ಜಾಗದ ಬೆಲೆ ಗಗನಕ್ಕೇರಿದೆ. ಇಂಥ ಜಾಗದಲ್ಲಿ ಆಲಿಯಾ-ರಣಬೀರ್ ಮನೆ ನಿರ್ಮಾಣ ಮಾಡುತ್ತಿದ್ದಾರೆ. ವಿಶೇಷ ಎಂದರೆ, ಈ ಮನೆಯನ್ನು ಸಾಕಷ್ಟು ಐಷಾರಾಮಿ ಆಗಿ ನಿರ್ಮಾಣ ಮಾಡುತ್ತಿದ್ದು, ಇದಕ್ಕೆ ಕನಿಷ್ಠ 250 ಕೋಟಿ ರೂಪಾಯಿ ವೆಚ್ಛ ತಗುಲಿದೆ ಎನ್ನಲಾಗುತ್ತಿದೆ. ಈ ಮನೆ ಶಾರುಖ್ ಖಾನ್ ಅವರ ಮನ್ನತ್ ಹಾಗೂ ಅಮಿತಾಭ್ ಬಚ್ಚನ್ ಅವರ…
Author: Author AIN
ಸರಕು ಹಡಗು ಡಿಕ್ಕಿ ಹೊಡೆದು ಬಾಲ್ಟಿಮೋರ್‌ನ ಸೇತುವೆ ಕುಸಿದ ಅವಘಡದಲ್ಲಿ ಆರು ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಭಾವಿಸಲಾಗಿದ್ದು ಇದುವರೆಗೂ ಅವರ ಮೃತದೇಹಗಳು ಪತ್ತೆಯಾಗಿಲ್ಲ ಎಂದು ಮೇರಿಲ್ಯಾಂಡ್ ರಾಜ್ಯದ ಪೊಲೀಸ್ ಸೂಪರಿಂಟೆಂಡೆಂಟ್ ಕರ್ನಲ್ ರೋಲ್ಯಾಂಡ್ ಆರ್. ಬಟ್ಲರ್ ಜೂನಿಯರ್ ತಿಳಿಸಿದರು. ಶ್ರೀಲಂಕಾಕ್ಕೆ ಹೊರಟಿದ್ದ, ಸಿಂಗಪುರ ಧ್ವಜ ಹೊತ್ತಿದ್ದ ‘ಡಾಲಿ’ ಎಂಬ ಹೆಸರಿನ ಸರಕು ಸಾಗಣೆ ಹಡಗು ‘ಫ್ರಾನ್ಸಿಸ್ ಸ್ಕಾಟ್ ಕೀ’ ಸೇತುವೆಯ ಆಧಾರಸ್ತಂಭಕ್ಕೆ ಮಂಗಳವಾರ ಡಿಕ್ಕಿ ಹೊಡೆದಿದೆ. ಈ ವೇಳೆ ಸೇತುವೆ ಮೇಲಿನ ರಸ್ತೆಗುಂಡಿಗಳನ್ನು ಮುಚ್ಚುವ ಕೆಲಸದಲ್ಲಿ ಆರು ಕಾರ್ಮಿಕರು ನಿರತರಾಗಿದ್ದು, ಸೇತುವೆ ಕುಸಿಯುತ್ತಿದ್ದಂತೆ ಅವರೆಲ್ಲಾ ನೀರಿಗೆ ಬಿದ್ದಿದ್ದಾರೆ. ನೀರಿಗೆ ಬಿದ್ದವರ ಯಾರ ದೇಹಗಳನ್ನೂ ಪತ್ತೆಹಚ್ಚಲು ಅಗ್ನಿಶಾಮಕ ದಳದವರೂ ಸೇರಿದಂತೆ ರಕ್ಷಣಾ ಕಾರ್ಯದಲ್ಲಿ ನಿರತರಾದವರಿಗೆ ಸಾಧ್ಯವಾಗಿಲ್ಲ. ‘ದೀರ್ಘ ಕಾಲ ಈಜುಗಾರರು ಸತತವಾಗಿ ಪ್ರಯತ್ನಿಸಿದರೂ ಯಾರ ದೇಹಗಳೂ ಇದುವರೆಗೂ ಪತ್ತೆಯಾಗಿಲ್ಲ. ಹೀಗಾಗಿ ಆರೂ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಭಾವಿಸಿದ್ದೇವೆ. ಕಾರ್ಮಿಕರ ಹೊರತಾಗಿ ಬೇರೆಯವರು ನೀರಿನಲ್ಲಿ ಮುಳುಗಿರುವುದರ ಕುರಿತು ಯಾವುದೇ ಸಾಕ್ಷ್ಯ ದೊರೆತಿಲ್ಲ ಎಂದೂ…
ಮಂಗೋಲಿಯಾದ ಮಾಜಿ ಪ್ರಧಾನಿ ಸುಖ್‍ಬಾತರ್ ಬ್ಯಾಟ್‍ಬೋಲ್ಡ್ ನ್ಯೂಯಾರ್ಕ್‍ನಲ್ಲಿ ಹೊಂದಿರುವ ಎರಡು ಐಷಾರಾಮಿ ಅಪಾರ್ಟ್‍ಮೆಂಟ್ ಅನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಅಮೆರಿಕ ಘೋಷಿಸಿದೆ. ಅಕ್ರಮ ಭ್ರಷ್ಟಾಚಾರ ಪ್ರಕರಣದಿಂದ ಪಡೆದ ಹಣದಿಂದ ಸುಖ್‍ಬಾತರ್ ಬ್ಯಾಟ್‍ಬೋಲ್ಡ್ ನ್ಯಾಯಾರ್ಕ್ ನಲ್ಲಿ ಎರಡು ಐಷಾರಾಮಿ ಅಪಾರ್ಟ್‍ಮೆಂಟ್‍ಗಳನ್ನು ಖರೀದಿಸಿದ್ದಾರೆ. ಪ್ರಧಾನಿಯಾಗಿದ್ದಾಗ ತನ್ನ ಪ್ರಭಾವ ಬಳಸಿಕೊಂಡು ಮಂಗೋಲಿಯಾದ ಗಣಿ ಗುತ್ತಿಗೆಯನ್ನು ತನಗೆ ಬೇಕಾದವರಿಗೆ ವಹಿಸಿಕೊಟ್ಟು ಕೋಟ್ಯಾಂತರ ಡಾಲರ್ ಅಕ್ರಮ ಲಾಭ ಗಳಿಸಿದ್ದಾರೆ. ಈ ಹಣವನ್ನು ಬಳಸಿ ನ್ಯೂಯಾರ್ಕ್‍ನಲ್ಲಿ ಎರಡು ಐಷಾರಾಮಿ ಅಪಾರ್ಟ್‍ಮೆಂಟ್‍ಗಳನ್ನು ಖರೀದಿಸಿದ್ದಾರೆ ಎಂದು ಅಮೆರಿಕದ ನ್ಯಾಯ ಇಲಾಖೆ ಹೇಳಿದೆ. ಈ ಅಪಾರ್ಟ್‍ಮೆಂಟ್‍ಗಳನ್ನು ಹರಾಜು ಹಾಕಿ, ಭ್ರಷ್ಟ ಅಧಿಕಾರಿಗಳು ತಮ್ಮ ಅಪರಾಧ ಕೃತ್ಯಗಳಿಂದ ಪಡೆದ ಲಾಭದ ಹಣವನ್ನು ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ವಿನಿಯೋಗಿಸುವುದಕ್ಕೆ ಅಮೆರಿಕ ಅವಕಾಶ ನೀಡುವುದಿಲ್ಲ ಎಂಬ ಸಂದೇಶವನ್ನು ಪ್ರಸಾರ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ನ್ಯೂಯಾರ್ಕ್ ಪೂರ್ವಜಿಲ್ಲೆಯ ಅಟಾರ್ನಿ ಬ್ರಿಯಾನ್ ಪೀಸ್ ಹೇಳಿದ್ದಾರೆ.
ಕಳೆದ ಶುಕ್ರವಾರ ರಶ್ಯ ರಾಜಧಾನಿ ಮಾಸ್ಕೋದ ಸಭಾಂಗಣದಲ್ಲಿ ನಡೆದಿದ್ದ ಗುಂಡಿನ ದಾಳಿ ಮತ್ತು ಸ್ಫೋಟ ಪ್ರಕರಣದಲ್ಲಿ ಐಸಿಸ್ ಬಂದೂಕುಧಾರಿಗಳಿಗೆ ಮನೆಯನ್ನು ಬಾಡಿಗೆಗೆ ನೀಡಿದ್ದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮೇ 22ರವರೆಗೆ ವಿಚಾರಣೆ ಪೂರ್ವ ಕಸ್ಟಡಿ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಯ ವೇಳೆ ಗಂಭೀರ ಗಾಯಗೊಂಡಿದ್ದ 5 ಮಂದಿಯಲ್ಲಿ ಓರ್ವ ಚಿಕಿತ್ಸೆ ಫಲಿಸದೆ ಬುಧವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಒಟ್ಟು ಮೃತರ ಸಂಖ್ಯೆ 140ಕ್ಕೇರಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಶ್ಯದ ವಿದೇಶಾಂಗ ಇಲಾಖೆಯ ವಕ್ತಾರೆ ಮರಿಯಾ ಝಕರೋವಾ ` ಮಾಸ್ಕೋದಲ್ಲಿ ನಡೆದ ದಾಳಿಯನ್ನು ಐಸಿಸ್ ನಡೆಸಿದೆ ಎಂಬುದನ್ನು ನಂಬಲು ಕಷ್ಟವಾಗಿದೆ’ ಎಂದಿದ್ದಾರೆ. ದಾಳಿಯನ್ನು ಜಾಗತಿಕ ಮಟ್ಟದಲ್ಲಿ ಖಂಡಿಸಿ ಸಂತಾಪ ಸೂಚಿಸಲಾಗಿದೆ. ಆದರೆ ಉಕ್ರೇನ್ ಅಧ್ಯಕ್ಷರು ಮಾತ್ರ ಸಂತಾಪದ ಮಾತನಾಡದೆ, ಈ ದಾಳಿಗೆ ರಶ್ಯವನ್ನೇ ಆರೋಪಿಸುವ ಪ್ರಯತ್ನ ನಡೆಸಿರುವುದು ಸಂಶಯಾಸ್ಪದವಾಗಿದೆ’ ಎಂದು ಅವರು ಹೇಳಿದ್ದಾರೆ.
ಲಂಡನ್ ನಲ್ಲಿರುವ ನೀರವ್ ಮೋದಿಗೆ ಸೇರಿದ ಐಷಾರಾಮಿ ಫ್ಲ್ಯಾಟ್ ಮಾರಾಟಕ್ಕೆ ಬ್ರಿಟನ್ ನ್ಯಾಯಾಲಯ ಅನುಮತಿ ನೀಡಿದೆ. ಟ್ರಸ್ಟ್ ನ ಹಿಡಿತದಲ್ಲಿರುವ ಈ ಅಪಾರ್ಟ್ ಮೆಂಟ್ ನ್ನು ಮಾರಾಟ ಮಾಡುವುದಕ್ಕೆ ಒಪ್ಪಿಗೆ ಸೂಚಿಸಿರುವ ನ್ಯಾಯಾಲಯ ಅಪಾರ್ಟ್ ಮೆಂಟ್ ಗೆ ಕನಿಷ್ಟ 5.25 ಮಿಲಿಯನ್ ಗ್ರೇಟ್ ಬ್ರಿಟನ್ ಪೌಂಡ್ ಗಳ ಮೌಲ್ಯವನ್ನು ನಿಗದಿಪಡಿಸಲು ಕೋರ್ಟ್ ಸೂಚನೆ ನೀಡಿದೆ. ಈ ಪ್ರಕರಣದಲ್ಲಿ ಟ್ರೈಡೆಂಟ್ ಟ್ರಸ್ಟ್ ಕಂಪನಿ (ಸಿಂಗಪುರ) ಪಿಟಿಇ ಲಿಮಿಟೆಡ್ ಹಕ್ಕುದಾರರಾಗಿದ್ದು, ಮಧ್ಯ ಲಂಡನ್‌ನ ಮೇರಿಲ್‌ಬೋನ್ ಪ್ರದೇಶದಲ್ಲಿ ತನ್ನ ಅಪಾರ್ಟ್‌ಮೆಂಟ್ ಆಸ್ತಿಯನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದೆ ಮತ್ತು ಟ್ರಸ್ಟ್‌ನ ಆಸ್ತಿಗಳು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿನ ಬೃಹತ್ ವಂಚನೆಯ ಆದಾಯವನ್ನು ಪ್ರತಿನಿಧಿಸುತ್ತದೆ ಎಂದು ಜಾರಿ ನಿರ್ದೇಶನಾಲಯ ವಾದಿಸಿದೆ. ಇದಕ್ಕಾಗಿ ನೀರವ್ ಹಸ್ತಾಂತರ ಪ್ರಕ್ರಿಯೆಗಳನ್ನು ಎದುರಿಸುತ್ತಿದ್ದಾರೆ. “ಜಿಬಿಪಿ 5.25 ಮಿಲಿಯನ್ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಆಸ್ತಿಯನ್ನು ಮಾರಾಟ ಮಾಡಲು ಇದು ಸಮಂಜಸವಾದ ನಿರ್ಧಾರವಾಗಿದೆ ಎಂಬುದು ಮನವರಿಕೆಯಾಗಿದೆ ಎಂದು ಮಾಸ್ಟರ್ ಬ್ರೈಟ್‌ವೆಲ್ ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ. ಇ.ಡಿ ಪರವಾಗಿ…
ನಟ ಸಿದ್ದಾರ್ಥ್ ಹಾಗೂ ಅದಿತಿ ರಾವ್ ಹೈದರಿ ಗುಟ್ಟಾಗಿ ದೇವಾಲಯದಲ್ಲಿ ವಿವಾಹವಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸಿದ್ದಾರ್ಥ್ ಹಾಗೂ ಅದಿತಿ ಕಳೆದ ಕೆಲವು ವರ್ಷಗಳಿಂದಲೂ ಪ್ರೀತಿಯಲ್ಲಿದ್ದರು. ಈ ಜೋಡಿ ಲಿವ್ ಇನ್ ರಿಲೇಷನ್ಶೀಪ್ನಲ್ಲಿದೆ, ಆದಷ್ಟು ಬೇಗ ವಿವಾಹವಾಗಲಿದೆ ಎನ್ನಲಾಗಿತ್ತು. ಅದರಂತೆ ಇದೀಗ ತೆಲಂಗಾಣದ ದೇವಾಲಯವೊಂದರಲ್ಲಿ ಸಿದ್ಧಾರ್ಥ್ ಹಾಗೂ ಅದಿತಿ ರಾವ್ ಹೈದರಿ ಅವರುಗಳು ಗುಟ್ಟಾಗಿ ಮದುವೆಯಾಗಿದ್ದಾರೆ ಎನ್ನಲಾಗುತ್ತಿದ್ದು ಮದುವೆಯ ಕೆಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತೆಲಂಗಾಣದ ವಾನಪರ್ತಿ ಜಿಲ್ಲೆಯ ಶ್ರೀರಂಗಾಪುರದಲ್ಲಿನ ರಂಗನಾಯಕ ಸ್ವಾಮಿ ದೇವಾಲಯದಲ್ಲಿ ಬುಧವಾರ ಮುಂಜಾನೆ ಸಿದ್ಧಾರ್ಥ್ ಹಾಗೂ ಅದಿತಿ ರಾವ್ ಹೈದರಿ ಅತ್ಯಂತ ಸರಳವಾಗಿ ವಿವಾಹವಾಗಿದ್ದಾರೆ. ಕೆಲವೇ ಕೆಲವು ಆಪ್ತರು, ಕುಟುಂಬ ಸದಸ್ಯರು ಮಾತ್ರವೇ ಮದುವೆಯಲ್ಲಿ ಹಾಜರಿದ್ದರು ಎನ್ನಲಾಗುತ್ತಿದೆ. ತಮ್ಮ ಮದುವೆ ಕಾರ್ಯಕ್ರಮವನ್ನು ಈ ಜೋಡಿ ಸಾಕಷ್ಟು ಗುಟ್ಟಾಗಿ ಇರಿಸಿದ್ದು ಎಲ್ಲೂ ಮದುವೆಯ ವಿಚಾರ ಪ್ರಸ್ತಾಪ ಮಾಡಿಲ್ಲ. 2021ರಲ್ಲಿ ಬಿಡುಗಡೆ ಆದ ‘ಮಹಾ ಸಮುದ್ರಂ’ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಇವರಿಬ್ಬರು ಪರಸ್ಪರ ಭೇಟಿಯಾಗಿದ್ದರು. ಅಲ್ಲಿಯೇ ಪ್ರೀತಿ…
ಕೆಜಿಎಫ್ ಸಿನಿಮಾದ ಬಳಿಕ ಯಶ್ ನಟನೆಯ ಮುಂದಿನ ಚಿತ್ರ ಟಾಕ್ಸಿಕ್ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಆಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿವೆ. ಈ ಸಿನಿಮಾದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಅಭಿನಯಿಸುತ್ತಾರೆ ಎಂಬ ಸುದ್ದಿ ಕೇಳಿ ಬಂದಿದ್ದು ಅದಕ್ಕೀಗ ಸ್ಪಷ್ಟನೆ ಸಿಕ್ಕಿದೆ. ‘ಟಾಕ್ಸಿಕ್’ ಚಿತ್ರದಲ್ಲಿ ನಟಿ ಕರೀನಾ ಕಪೂರ್ ಖಾನ್ ಅವರು ಯಶ್‌ಗೆ ಸಹೋದರಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ. ಟಾಕ್ಸಿಕ್ ಚಿತ್ರವು ಸಹೋದರ ಮತ್ತು ಸಹೋದರಿ ನಡುವಿನ ಕಥೆಯಾಗಿದ್ದು, ಯಶ್ ಮತ್ತು ಕರೀನಾ ಇಲ್ಲಿ ಒಡಹುಟ್ಟಿದವರಾಗಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕಿ ಗೀತು ಮೋಹನ್‌ದಾಸ್ ಅವರು ಕರೀನಾ ಅವರನ್ನೇ ಈ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಬೇಕು ಎಂದು ಬಹಳ ಆಸಕ್ತಿ ಹೊಂದಿದ್ದರು. ಸದ್ಯ ಮಾತುಕತೆಗಳು ಇನ್ನೂ ಚಾಲ್ತಿಯಲ್ಲಿದ್ದು ಕರೀನಾ ಕಡೆಯಿಂದ ಆಲ್ ಮೋಸ್ಟ್ ಗ್ರೀನ್ ಸಿಗ್ನಲ್ ಸಿಕ್ಕಿದೆಯಂತೆ. ಇನ್ನು, ಯಶ್ ಅವರಿಗೆ ‘ಟಾಕ್ಸಿಕ್’ ಸಿನಿಮಾದಲ್ಲಿ…
ಬಿಗ್ ಬಾಸ್ ನ ಮಾಜಿ ಸ್ಪರ್ಧಿಗಳು ಒಬ್ಬರ ಹಿಂದೊಬ್ಬರಂತೆ ಸಮಸ್ಯೆಗೆ ಸಿಲುಕಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ನ ಮಾಜಿ ಸ್ಪರ್ಧಿಗಳಾದ ಎಲ್ವಿಶ್ ಯಾದವ್ ಹಾಗೂ ವಿಜೇತ ಮುನಾವತ್ ಈಗಾಗಲೇ ಜೈಲಿಗೆ ಹೋಗಿ ಬಂದಿದ್ದಾರೆ. ಇದೀಗ ಬಿಗ್ ಬಾಸ್ ನ ಮತ್ತೋರ್ವ ಸ್ಪರ್ಧಿ ಖ್ಯಾತ ಯುಟ್ಯೂಬರ್ ಅನುರಾಗ್ ದೋಬಲ್ ಕೂಡ ಪೊಲೀಸರಿಂದ ಸಮಸ್ಯೆ ಎದುರಿಸಿದ್ದಾರೆ. ಅನುರಾಗ್ ಅವರ ಅತ್ಯಂತ ದುಬಾರಿ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು ಮೂರು ಕೋಟಿ ದಂಡ ವಿಧಿಸಿದ್ದಾರೆ. ಯೂಟ್ಯೂಬರ್ ಅನುರಾಗ್ ದೋಬಲ್, ಯುಕೆ 07 ರೈಡರ್ ಹೆಸರಿನ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದು ಐಶಾರಾಮಿ ಕಾರು, ಬೈಕ್ಗಳನ್ನು ಖರೀದಿ ಮಾಡಿ ಚಲಾಯಿಸುತ್ತಾರೆ. ಸೆಲೆಬ್ರಿಟಿಗಳೊಟ್ಟಿಗೆ ಕಾರ್ನಲ್ಲಿ ರೈಡ್ ಸಹ ಹೋಗುತ್ತಾರೆ. ಐಪಿಎಲ್ ಸಮಯವಾದ್ದರಿಂದ ಐಪಿಎಲ್ನ ಸೆಲೆಬ್ರಿಟಿಗಳೊಟ್ಟಿಗೆ ವಿಡಿಯೋ ಮಾಡಲು ಚೆನ್ನೈಗೆ ತಮ್ಮ ದುಬಾರಿ ಲ್ಯಾಂಬೊರ್ಗಿನಿ ಕಾರನ್ನು ಅನುರಾಗ್ ದೋಬಲ್ ತಂದಿದ್ದರು. ಇಲ್ಲಿ ಕ್ರಿಕೆಟಿಗ ಸುರೇಶ್ ರೈನಾ ಜೊತೆ ವಿಡಿಯೋ ಮಾಡಿ ಇನ್ನೇನು ಹೊರಡಬೇಕಾದರೆ ಅವರ ಕಾರನ್ನು ಚೆನ್ನೈ ಪೊಲೀಸರು ಸೀಜ್ ಮಾಡಿದ್ದಾರೆ. ಸುಮಾರು 4…
ದಕ್ಷಿಣ ಅಮೆರಿಕ ಖಂಡದ ಎರಡನೇ ಅತಿದೊಡ್ಡ ಆರ್ಥಿಕತೆ ಎನಿಸಿದ ಅರ್ಜೆಂಟೀನಾ ಈಗ ಹಣದುಬ್ಬರದ ಸುಳಿಗೆ ಸಿಲುಕಿ ವಿಲವಿಲ ಒದ್ದಾಡುತ್ತಿದೆ. ಬೆಲೆ ಏರಿಕೆ ಅಲ್ಲಿನ ಜನರನ್ನು ಹೈರಾಣಗೊಳಿಸುತ್ತಿದೆ. ಇಂಥ ಸ್ಥಿತಿಯಲ್ಲಿ ಅರ್ಜೆಂಟೀನಾದ ಜನರು ಸಾಮಾನ್ಯ ಜೀವನ ನಡೆಸುವುದೇ ದುಬಾರಿಯಾಗಿದೆ. ಆರ್ಥಿಕ ಸ್ಥಿತಿಯಿಂದ ಹೈರಾಣಾಗಿರುವ ಸರ್ಕಾರ ಇದೀಗ ಹೊಸ ನಿರ್ಧರವೊಂದನ್ನು ತೆಗೆದುಕೊಂಡಿದೆ. ಆರ್ಥಿಕವಾಗಿ ಸ್ಥಿರವಾಗಿಲ್ಲದ ಅರ್ಜೆಂಟೀನಾ ಸರ್ಕಾರ ಆರ್ಥಿಕ ಸ್ಥಿತಿ ಸುಧಾರಿಸಲು ಸದ್ಯದಲ್ಲೇ 70 ಸಾವಿರ ಸರ್ಕಾರಿ ನೌಕರರನ್ನು ವಜಾಗೊಳಿಸಲು ನಿರ್ಧರಿಸಿದೆ. ಈ ಬಗ್ಗೆ ಬ್ಲೂಮ್ಬರ್ಗ್ ವರದಿ ಮಾಡಿದ್ದು, ಅಧ್ಯಕ್ಷ ಜೇವಿಯರ್ ಮಿಲೀ ಈ ಬಗ್ಗೆ ಸುಳಿವು ನೀಡಿದ್ದಾರೆ. ಸರ್ಕಾರಿ ನೌಕರರನ್ನು ವಜಾ ಗೊಳಿಸುವ ಮೂಲಕ ತಮ್ಮ ಆಕ್ರಮಣಕಾರಿ ಕಾರ್ಯತಂತ್ರವನ್ನು ಪ್ರದರ್ಶಿಸಿದ್ದಾರೆ ಎಂದು ಹೇಳಿದೆ. ಮಿಲೀ ಈ ಹೆಜ್ಜೆ ಪ್ರಭಾವಿ ಕಾರ್ಮಿಕ ಸಂಘಗಳಿಂದ ತೀವ್ರ ಪ್ರತಿರೋಧ ಎದುರಿಸುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.
ಫ್ಲೋರಿಡ ದೇಶದಲ್ಲಿ 14 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳು ಸಾಮಾಜಿಕ ಜಾಲತಾಣ ಬಳಸದಂತೆ ಹೊಸ ಕಾನೂನು ಜಾರಿಗೊಳಿಸಲಾಗಿದೆ. ಜೊತೆಗೆ 14 ಮತ್ತು 15 ವರ್ಷ ವಯಸ್ಸಿನ ಮಕ್ಕಳು ಸೋಶಿಯಲ್ ಮೀಡಿಯಾ ಬಳಸಲು ಪೋಷಕರ ಒಪ್ಪಿಗೆ ಪಡೆಯಬೇಕು ಎಂಬ ಕಾನೂನು ಜಾರಿಯಾಗಿದೆ. ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್ 14 ವರ್ಷದೊಳಗಿನ ಅಪ್ರಾಪ್ತರಿಗೆ ಸೋಶಿಯಲ್ ಮೀಡಿಯಾ ಬಳಕೆ ನಿಷೇಧದ ಮಸೂದೆಗೆ ಸಹಿ ಹಾಕಿದ್ದಾರೆ. ಸಾಮಾಜಿಕ ಜಾಲತಾಣಗಳ ಬಳಕೆ ಅಪ್ರಾಪ್ತ ವಯಸ್ಸಿನ ಮಾನಸಿಕ ಆರೋಗ್ಯದ ಮೇಲೆ ನೇರ ಪ್ರಭಾವ ಬೀರುತ್ತದೆ. ಇದರಿಂದಲೇ ಈ ಹೊಸ ಕಾನುನೂ ಜಾರಿಗೊಳಿಸಲಾಗಿದೆ ಎಂದು ಡಿಸಾಂಟಿಸ್ ಹೇಳಿಕೆ ನೀಡಿರುವುದು ವರದಿಯಾಗಿದೆ. ನೂತನ ಕಾಯ್ದೆ ಪ್ರಕಾರ, ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ 14 ವರ್ಷದೊಳಗಿನ ಎಲ್ಲಾ ಮಕ್ಕಳ ಖಾತೆಗಳನ್ನು ಡಿಲೀಟ್ ಮಾಡುವಂತೆ ಸೂಚನೆ ನೀಡಲಾಗಿದೆ. NetChoice, Facebook ಮೆಟಾ ಪ್ಲಾಟ್‌ಫಾರ್ಮ್‌ಗಳು, TikTok ಮತ್ತು Snap ಅನ್ನು ಒಳಗೊಂಡಿರುವ ಟೆಕ್-ಇಂಡಸ್ಟ್ರಿ ಟ್ರೇಡ್ ಅಸೋಸಿಯೇಷನ್, ಕಳೆದ ಜೂನ್‌ನಲ್ಲಿ ಅರ್ಕಾನ್ಸಾಸ್ ಕಾನೂನನ್ನು ನಿಲ್ಲಿಸಲು ಮೊಕದ್ದಮೆ ಹೂಡಿತ್ತು. 40 ಕ್ಕೂ ಹೆಚ್ಚು…