ದಕ್ಷಿಣ ಆಫ್ರಿಕಾದಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ ಕನಿಷ್ಠ 45 ಜನರು ಸಾವನ್ನಪ್ಪಿದ್ದಾರೆ. ಬಸ್ಸಿನಲ್ಲಿ ಚಾಲಕ ಸೇರಿದಂತೆ 46 ಪ್ರಯಾಣಿಕರಿದ್ದರು. ಬಸ್ ನಲ್ಲಿದ್ದ ಎಂಟು ವರ್ಷದ ಬಾಲಕ ಮಾತ್ರ ಬದುಕುಳಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಉಳಿದವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈಶಾನ್ಯ ಪ್ರಾಂತ್ಯದ ಲಿಂಪೊಪೊದ ಮಮಟ್ಲಕಲಾ ಬಳಿಯ ಸೇತುವೆಯ ಮೇಲೆ ಚಾಲಕನ ನಿಯಂತ್ರಣ ತಪ್ಪಿ ಬ್ಯಾರಿಕೇಡ್ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಸಾರಿಗೆ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಪ್ರಯಾಣಿಕರ ಬಸ್ ದಕ್ಷಿಣ ಆಫ್ರಿಕಾದ ಭೂ-ಆವೃತ ದೇಶವಾದ ಬೋಟ್ಸ್ವಾನಾದಿಂದ ಲಿಂಪೊಪೊದ ಮೊರಿಯಾ ಎಂಬ ಪಟ್ಟಣಕ್ಕೆ ಜನರನ್ನು ಕರೆದೊಯ್ಯುತ್ತಿತ್ತು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. “ರಕ್ಷಣಾ ಕಾರ್ಯಾಚರಣೆ ಗುರುವಾರ ಸಂಜೆಯವರೆಗೂ ಮುಂದುವರಿಯಿತು, ಕೆಲವು ಶವಗಳು ಗುರುತಿಸಲಾಗದಷ್ಟು ಸುಟ್ಟುಹೋಗಿವೆ, ಇತರರು ಅವಶೇಷಗಳ ಒಳಗೆ ಸಿಕ್ಕಿಬಿದ್ದು ಘಟನಾ ಸ್ಥಳದಲ್ಲಿ ಚದುರಿಹೋಗಿದ್ದಾರೆ” ಎಂದು ಲಿಂಪೊಪೊದ ಸಾರಿಗೆ ಇಲಾಖೆ ಪ್ರತ್ಯೇಕ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.
Author: Author AIN
2022 ರಲ್ಲಿ ಜಗತ್ತು ಪ್ರತಿದಿನ ಒಂದು ಬಿಲಿಯನ್ (100 ಕೋಟಿ) ಊಟವನ್ನು ವ್ಯರ್ಥ ಮಾಡಿದೆ. ಇದು ಜಾಗತಿಕವಾಗಿ ಉತ್ಪಾದಿಸುವ ಆಹಾರದ ಶೇಕಡಾ 19 ರಷ್ಟಿದೆ ಎಂದು ವಿಶ್ವಸಂಸ್ಥೆಯ ಹೊಸ ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಿಶ್ವಾದ್ಯಂತ 783 ಮಿಲಿಯನ್ (78.3 ಕೋಟಿ) ಜನರು ಹಸಿವಿನಿಂದ ಬಳಲುತ್ತಿದ್ದಾರೆ ಎಂದು ಸಂಶೋಧನೆಗಳು ಬಹಿರಂಗಪಡಿಸಿವೆ. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ (ಯುಎನ್‌ಇಪಿ) ಆಹಾರ ತ್ಯಾಜ್ಯ ಸೂಚ್ಯಂಕ ವರದಿಯನ್ನು ಬುಧವಾರ (ಮಾರ್ಚ್ 27) ಪ್ರಕಟಿಸಿದ ನಂತರ ಆತಂಕಕಾರಿ ಅಂಕಿಅಂಶಗಳು ಬೆಳಕಿಗೆ ಬಂದಿವೆ. ಆಹಾರ ತ್ಯಾಜ್ಯವು ಕೇವಲ “ಶ್ರೀಮಂತ ಪ್ರಪಂಚದ” ಸಮಸ್ಯೆಯಲ್ಲ ಎಂದು ವರದಿಯು ಗಮನಸೆಳೆದಿದೆ. ವಿಶ್ವಸಂಸ್ಥೆ ವರದಿ ಏನು ಹೇಳುತ್ತದೆ? ಪ್ರತಿ ವ್ಯಕ್ತಿಯು ವಾರ್ಷಿಕವಾಗಿ ಸುಮಾರು 79 ಕಿಲೋಗ್ರಾಂಗಳಷ್ಟು ಆಹಾರವನ್ನು ವ್ಯರ್ಥ ಮಾಡುತ್ತಾನೆ ಎಂದು ಯುಎನ್ ವರದಿ ತಿಳಿಸಿದೆ. ಇದು ಜಾಗತಿಕವಾಗಿ ಪ್ರತಿದಿನ ವ್ಯರ್ಥವಾಗುವ ಕನಿಷ್ಠ ಒಂದು ಬಿಲಿಯನ್ ಊಟಕ್ಕೆ ಸಮಾನವಾಗಿದೆ ಎಂದು ಅಸೋಸಿಯೇಟೆಡ್ ಪ್ರೆಸ್ (ಎಪಿ) ವರದಿ ಮಾಡಿದೆ. 2022 ರಲ್ಲಿ ಮನೆಗಳು, ರೆಸ್ಟೋರೆಂಟ್ಗಳು ಮತ್ತು ಚಿಲ್ಲರೆ ವಲಯಗಳು ಸುಮಾರು…
ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಖಿ ದಾಂಪತ್ಯ ಜೀವನ ಬೀದಿಗೆ ಬಂದಿತ್ತು. ಸಿದ್ದಿಖಿ ಪತ್ನಿ ಆಲಿಯಾ ಪತಿಯ ವಿರುದ್ಧ ಹತ್ತಾರು ಆರೋಪ ಹೊರಿಸಿದ್ದರು. ವರದಕ್ಷಿಣೆ ಕಿರುಕುಳ ನೀಡಿ ತನ್ನನ್ನು ಪತಿ ಮನೆಯಿಂದ ಹೊರ ಹಾಕಿದ್ದಾರೆ ಎಂದು ಆರೋಪಿಸಿದ್ದರು. ಇದೀಗ ಈ ಜೋಡಿ ಮತ್ತೆ ಒಂದಾಗಿದೆ. ಈ ಮೂಲಕ ಹಳೆಯದೆಲ್ಲವನ್ನು ಮರೆತು ವೆಡ್ಡಿಂಗ್ ಆ್ಯನಿವರ್ಸರಿ ಸೆಲೆಬ್ರೇಟ್ ಮಾಡಿದ್ದಾರೆ. ಅಂದ ಹಾಗೆ ನವಾಜುದ್ದೀನ್ ಸಿದ್ದಿಖಿ ಹಾಗೂ ಆಲಿಯಾ ತಮ್ಮ ಮಕ್ಕಳಿಗಾಗಿ ಮತ್ತೆ ಒಂದಾಗಿದ್ದಾರೆ. ಕೆಲವು ದಿನಗಳ ಹಿಂದೆ ಆಲಿಯಾ ಸಿದ್ದಿಖಿ ಮತ್ತು ನವಾಜುದ್ದೀನ್ ಸಿದ್ದಿಖಿ ಜೊತೆಯಾಗಿ ಕಾಣಿಸಿಕೊಂಡ ಫೋಟೋ ವೈರಲ್ ಆಗಿತ್ತು. ಇಷ್ಟು ದಿನ ಪರಸ್ಪರ ಕಿತ್ತಾಡಿಕೊಂಡು, ಸಂಸಾರದ ಜಗಳವನ್ನು ಬೀದಿಗೆ ತಂದಿದ್ದ ಜೋಡಿ ಈಗ ಮತ್ತೆ ಒಂದಾಗಿದ್ದಾರೆ ಎಂಬುದಕ್ಕೆ ಆ ಫೋಟೋ ಸಾಕ್ಷಿ ಆಗಿತ್ತು. ಆ ಕುರಿತು ಮಾಧ್ಯಮವೊಂದಕ್ಕೆ ಆಲಿಯಾ ಸಿದ್ದಿಖಿ ಪ್ರತಿಕ್ರಿಯೆ ನೀಡಿದ್ದಾರೆ. ‘ಮೂರನೇ ವ್ಯಕ್ತಿಯಿಂದಾಗಿ ನಾವು ಯಾವಾಗಲೂ ಸಮಸ್ಯೆ ಅನುಭವಿಸಿದೆವು ಅನಿಸುತ್ತದೆ. ಈಗ ನಮ್ಮ ಬದುಕಿನಲ್ಲಿ ತಪ್ಪು ತಿಳಿವಳಿಕೆ ಇಲ್ಲ. ನಮ್ಮ ಮಕ್ಕಳ…
ಬಾಲಿವುಡ್ ನಟಿ ಕಂಗನಾ ರಣಾವತ್ ಇತ್ತೀಚೆಗೆ ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದಾರೆ. ಆ ಬಳಿಕ ಕಾಂಗ್ರೆಸ್ ಪಕ್ಷದ ವಿರುದ್ಧ ಪದೇ ಪದೇ ಗುಡುಗಲು ಆರಂಭಿಸಿದ್ದಾರೆ. ಇಷ್ಟು ದಿನ ಬಾಲಿವುಡ್ ನಟ,ನಟಿಯರನ್ನು ಟೀಕಿಸುತ್ತಿದ್ದ ನಟಿ ಇದೀಗ ಕಾಂಗ್ರೆಸ್ ಪಕ್ಷದವರ ಹಿಂದೆ ಬಿದ್ದಿದ್ದಾರೆ. ಕಂಗನಾ ರಣಾವತ್ ಅವರಿಗೆ ನೆಪೋಟಿಸಂ ಎಂದರೆ ಆಗುವುದಿಲ್ಲ. ಅವಕಾಶಗಳು ಕೇವಲ ವಂಶ ಪಾರಂಪರ್ಯವಾಗಿ ಸಿಗುವುದನ್ನು ಅವರು ವಿರೋಧಿಸುತ್ತಾ ಬಂದಿದ್ದಾರೆ. ಈಗ ಅವರು ರಾಹುಲ್ ಗಾಂಧಿ ಬಗ್ಗೆ ಅಭಿಪ್ರಾಯ ತಿಳಿಸಿದ್ದಾರೆ. ರಾಹುಲ್ ಗಾಂಧಿಯನ್ನು ನೆಪೋಟಿಸಂ ಮಗು ಎಂದು ಕಂಗನಾ ಟೀಕಿಸಿದ್ದಾರೆ. ಸಂದರ್ಶನದಲ್ಲಿ ಭಾಗಿಯಾಗಿದ್ದ ಕಂಗನಾ ರಣಾವತ್ ಈ ವಿಚಾರ ಮಾತನಾಡಿದ್ದಾರೆ. ‘ನನ್ನ ಪಾಲಿಗೆ ಕಾಂಗ್ರೆಸ್ ಯಾವಾಗಲೂ ಕೆಟ್ಟ ಪಕ್ಷ ಆಗಿತ್ತು. ಆ ಪಕ್ಷದಲ್ಲಿ ಇರುವ ನೆಪೋಟಿಸಂ ನನಗೆ ಬಹಳ ತೊಂದರೆ ಎನಿಸುತ್ತಿತ್ತು. ಯಾಕೆಂದರೆ ಚಿತ್ರರಂಗದಲ್ಲಿ ನೆಪೋಟಿಸಂ ಕಾರಣದಿಂದಲೇ ನಾನು ಟಾರ್ಗೆಟ್ ಆಗಿದ್ದೆ. ಅದನ್ನು ನಾನು ನೇರವಾಗಿಯೇ ವಿರೋಧಿಸಿದೆ. ಅದು ನನ್ನನ್ನು ಶೋಷಣೆ ಮಾಡುತ್ತಿತ್ತು. ನೆಪೋಟಿಸಂ, ಗುಂಪುಗಾರಿಕೆ, ವಂಶ ಪಾರಂಪರ್ಯ ರಾಜಕೀಯ. ಈ ಕಾರಣದಿಂದಲೇ ನಾನು…
ಡಾಲಿ ಧನಂಜಯ್ ನಟನೆಯ ಉತ್ತರಕಾಂಡ ಚಿತ್ರದ ಚಿತ್ರೀಕರಣ ಮುಂದಿನ ವಾರದಲ್ಲಿ ಆರಂಭಗೊಳ್ಳಲಿದೆ. ಅದಕ್ಕೂ ಮೊದಲು ನಟ ಡಾಲಿ ಧನಂಜಯ್, ನಿರ್ದೇಶಕ ರೋಹಿತ್ ಪದಕಿ ಹಾಗೂ ನಿರ್ಮಾಪಕ ಕಾರ್ತಿಕ್ ಗೌಡ ಧಾರವಾಡದ ನುಗ್ಗೇಕೇರಿಯ ಶ್ರೀ ಹನುಮಂತ ದೇವಾಲಯಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದಿದ್ದಾರೆ. ನುಗ್ಗೇಕೇರಿ ಶ್ರೀ ಹನುಮಂತ ದೇವಾಲಯ ಧಾರವಾಡದ ಪುರಾತನ ಮತ್ತು ಪ್ರಖ್ಯಾತ ದೇವಾಲಯವಾಗಿದೆ. ಉತ್ತರಕಾಂಡ ಒಂದು ಆಕ್ಷನ್ ಡ್ರಾಮಾ ಚಿತ್ರವಾಗಿದ್ದು ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ಡಾಲಿ ಧನಂಜಯ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಹಾಗೂ ಕೆ ಆರ್ ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಮೂಡಿ ಬರಲಿದೆ. ಉತ್ತರಕಾಂಡ ಸಿನಿಮಾದ ಮೂಲಕ ನಟಿ ರಮ್ಯಾ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇತ್ತೀಚೆಗೆ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಹೇಳುವ ಮೂಲಕ ರಮ್ಯಾ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು. ಡೇಟ್ಸ್ ಹೊಂದಾಣಿಕೆ ಆಗದ ಕಾರಣ, ನಾನು ಉತ್ತರಕಾಂಡ ಸಿನಿಮಾದಲ್ಲಿ ನಟಿಸುತ್ತಿಲ್ಲ. ನನ್ನ ಸಿನಿಮಾ ಮತ್ತು ರಾಜಕೀಯ ಕೆಲಸಗಳನ್ನು ಸದ್ಯ ಕಾಯ್ದಿರಿಸಿದ್ದೇನೆ.…
ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸಿನಿಮಾ ರಂಗದ ನಟ, ನಟಿಯರು ಕೆಲವು ಪಕ್ಷಕ್ಕೆ ಎಂಟ್ರಿಕೊಡ್ತಿದ್ದಾರೆ. ಅಂತೆಯೇ ಇದೀಗ ಬಾಲಿವುಡ್ ನಟ ಗೋವಿಂದ್ ಶಿಂಧೆ ಪಕ್ಷ ಸೇರಿಕೊಂಡಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿ, ಕೆಲ ವರ್ಷಗಳಿಂದ ದೂರವಿದ್ದ ಬಾಲಿವುಡ್ ನಟ ಗೋವಿಂದ್ ಮತ್ತೆ ರಾಜಕಾರಣಕ್ಕೆ ವಾಪಸ್ಸಾಗಿದ್ದಾರೆ. ಲೋಕಸಮರಕ್ಕೆ ಇಳಿಯುವುದಕ್ಕಾಗಿಯೇ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಶಿವಸೇನೆ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಕೆಲವು ದಿನಗಳ ಹಿಂದೆಯೇ ಗೋವಿಂದ್ ಶಿವಸೇನೆ ಸೇರಲಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿತ್ತು. ಏಕನಾಥ ಶಿಂಧೆ ಅವರನ್ನೂ ಗೋವಿಂದ್ ಭೇಟಿ ಮಾಡಿದ್ದರು. ವಾಯವ್ಯ ಕ್ಷೇತ್ರದಿಂದ ಲೋಕಸಭೆ ಸ್ಪರ್ಧೆಗೆ ಇಳಿಯುವ ಕುರಿತು ಚರ್ಚೆ ಮಾಡಿದ್ದರು. ಆದರೆ ಈಗ ಅದು ಅಧಿಕೃತವಾಗಿದೆ. ಶಿವಸೇನೆ ಸೇರ್ಪಡೆಗೊಂಡನಂತರ ಚುನಾವಣೆಗೆ ಸ್ಪರ್ಧಿಸುವುದು ಖಚಿತವಾಗಿದೆ. 2004ರಲ್ಲಿ ಉತ್ತರ ಮುಂಬೈ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಗೋವಿಂದ್ ಬಿಜೆಪಿಯ ಅಭ್ಯರ್ಥಿ ರಾಮ್ ನಾಯ್ಕ್ ಅವರನ್ನು ಸಾಕಷ್ಟು ಅಂತರದಿಂದ…
ಬಾಲಿವುಡ್ ನಟಿ ಅದಿತಿ ರಾವ್ ಹೈದರಿ ಹಾಗೂ ಕಾಲಿವುಡ್ ನಟ ಸಿದ್ಧಾರ್ಥ್ ಸದ್ದಿಲ್ಲದೇ ಹಸೆಮಣೆ ಏರಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ತೆಲಂಗಾಣದ ವನಪರ್ತಿ ಜಿಲ್ಲೆಯಲ್ಲಿರುವ ಶ್ರೀರಂಗಪುರಂನಲ್ಲಿರುವ ಶ್ರೀ ರಂಗನಾಯಕ ಸ್ವಾಮಿ ದೇವಸ್ಥಾನದಲ್ಲಿ ಸಿಂಪಲ್ ಆಗಿ ಈ ಜೋಡಿ ಮದುವೆಯಾಗಿದೆ ಎಂದು ಹೇಳಲಾಗಿತ್ತು. ಇದೀಗ ಮದುವೆಗೆ ಸುದ್ದಿಗೆ ನಟಿ ಸ್ಪಷ್ಟನೆ ನೀಡಿದ್ದಾರೆ. ಅಮಿರ್ ಖಾನ್ ಪುತ್ರಿ ಇರಾ ಖಾನ್ ಮದುವೆಯಲ್ಲಿ ಕಾಣಿಸಿಕೊಂಡಿದ್ದ ಅದಿತಿ ಮತ್ತು ಸಿದ್ಧಾರ್ಥ ಅವರ ಫೋಟೋವನ್ನೇ ಮದುವೆ ಫೋಟೋ ಎಂದು ವೈರಲ್ ಮಾಡಲಾಗಿತ್ತು. ಶೂಟಿಂಗ್ ಎಂದು ಸುಳ್ಳು ಹೇಳಿ ಇಬ್ಬರೂ ಮದುವೆ ಆಗಿದ್ದಾರೆ ಎಂದು ಆರೋಪಿಸಲಾಗಿತ್ತು. ಎಲ್ಲದಕ್ಕೂ ಅದಿತಿ ಉತ್ತರ ನೀಡಿದ್ದಾರೆ. ಸಿದ್ದಾರ್ಥ್ ಜೊತೆಗಿನ ಫೋಟೋ ಹಂಚಿಕೊಂಡ ನಟಿ ಎಂಗೇಜ್ಮೆಂಟ್ ಮಾಡಿಕೊಂಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಎಂಗೇಜ್ ಮೆಂಟ್ ನಲ್ಲಿ ತೊಡಿಸಿರುವ ಉಂಗುರವನ್ನು ಫೋಟೋದಲ್ಲಿ ಹೈಲೈಟ್ ಮಾಡಲಾಗಿದೆ. ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು, ಈ ಬಗ್ಗೆ ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಆದರೆ ಸಿದ್ಧಾರ್ಥ್ ಜೊತೆಗಿನ ಖಾಸಗಿ ಫೋಟೋ ಹಂಚಿಕೊಂಡು ಹೊಸ…
ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಮೇಘಾ ಶೆಟ್ಟಿ ಕನ್ನಡ ಚಿತ್ರರಂಗದ ಭರವಸೆಯ ನಾಯಕಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಇದೀಗ ಮಸ್ತ್ ಫೋಟೋಶೂಟ್ ಮೂಲಕ ಮಿಂಚುತ್ತಿದ್ದಾರೆ. ಜೊತೆ ಜೊತೆಯಲಿ ಅನು ಸಿರಿಮನೆ ಎಂದೇ ಖ್ಯಾತಿ ಪಡೆದಿರುವ ಮೇಘಾ ಶೆಟ್ಟಿ ಹೊಸ ಫೋಟೋಶೂಟ್ ಮಾಡಿಸಿದ್ದು, ಆ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಮೇಘಾ ಶೆಟ್ಟಿ, ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟಿವ್ ಆಗಿದ್ದಾರೆ. ಆಗಾಗ ಲೇಟೆಸ್ಟ್ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ಬ್ಲ್ಯಾಕ್ ಡ್ರಸ್ ನಲ್ಲಿ ಮೇಘಾ ಫೋಟೋ ಶೂಟ್ ಮಾಡಿಸಿದ್ದಾರೆ. ಕನ್ನಡದ ಮುದ್ದು ಮುಖದ ಚೆಲುವೆ ಮೇಘಾ ಶೆಟ್ಟಿ, ಸಿನಿಮಾಗಳಲ್ಲಿ ಬ್ಯುಸಿ ಆಗಿದ್ರು. ಜಾಹೀರಾತಿನಲ್ಲೂ ಆಗಾಗ ಮಿಂಚುತ್ತಿರುತ್ತಾರೆ. ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ತ್ರಿಬಲ್ ರೈಡಿಂಗ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಮೇಘಾ ಚಂದನವನ ಪ್ರವೇಶಿಸಿದರು. ನಂತರ ಡಾರ್ಲಿಂಗ್ ಕೃಷ್ಣ ಜೊತೆ ದಿಲ್ ಪಸಂದ್ ಚಿತ್ರದಲ್ಲಿ ನಟಿಸಿದರು. ಇತ್ತೀಚಿಗಷ್ಟೇ ಕೈವ ಸಿನಿಮಾ ಮೂಲಕ…
ನವದೆಹಲಿ:- ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ನನ್ನ ಸಿಲುಕಿಸುವುದೇ ಇಡಿಯ ಏಕೈಕ ಉದ್ದೇಶ ಎಂದು ಅರವಿಂದ್ ಕೇಜ್ರಿವಾಲ್ ಕಿಡಿಕಾರಿದ್ದಾರೆ. ಹೊಸ ಅಬಕಾರಿ ನೀತಿ ಹಗರಣದಲ್ಲಿ ಬಂಧನಕ್ಕೊಳಪಟ್ಟಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಇಡಿ ಕಸ್ಟಡಿಯನ್ನು ನಾಲ್ಕು ದಿನಗಳಿಗೆ ವಿಸ್ತರಿಸಿ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಆದೇಶ ನೀಡಿದೆ. ಇದಕ್ಕೂ ಮುನ್ನ ಕಸ್ಟಡಿ ಅಂತ್ಯವಾದ ಹಿನ್ನಲೆ ಅರವಿಂದ್ ಕೇಜ್ರಿವಾಲ್ ಅವರನ್ನು ನ್ಯಾಯಲಯದ (Court) ಮುಂದೆ ಹಾಜರುಪಡಿಸಲಾಯಿತು. ಕೋರ್ಟ್ ಪ್ರವೇಶ ಮಾಡುವ ವೇಳೆ “ಉದ್ದೇಶಪೂರ್ವಕವಾಗಿ ಸಿಕ್ಕಿಹಾಕಿಸುವ ಪ್ರಯತ್ನ ಮಾಡಲಾಗುತ್ತಿದೆ ಜನರು ಇದಕ್ಕೆ ಉತ್ತರಿಸಲಿದ್ದಾರೆ” ಎಂದು ಅಲ್ಲಿದ್ದ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ವಿಚಾರಣೆ ಆರಂಭವಾಗುತ್ತಿದ್ದಂತೆ ತಮ್ಮ ಪರವಾಗಿ ತಾವೇ ವಾದ ಮಂಡಿಸಿದ ಅರವಿಂದ್ ಕೇಜ್ರಿವಾಲ್, ನನ್ನನ್ನು ಸಿಕ್ಕಿ ಹಾಕಿಸುವುದು ಇಡಿಯ ಏಕೈಕ ಉದ್ದೇಶವಾಗಿದೆ ಎಂದು ಆರೋಪಿಸಿದರು. ನಾನು ರಿಮಾಂಡ್ ಅನ್ನು ವಿರೋಧಿಸುತ್ತಿಲ್ಲ ಇಡಿ ಅವರು ಎಲ್ಲಿಯವರೆಗೆ ನನ್ನನ್ನು ಕಸ್ಟಡಿಯಲ್ಲಿ ಇರಿಸಬಹುದು? ಆದರೆ ಇಡಿ ತನಿಖೆಯ ಹೆಸರಿನಲ್ಲಿ ಸುಲಿಗೆ ದಂಧೆ ನಡೆಸುತ್ತಿರುವುದು ನಿಜವಾದ ಹಗರಣ ಎಂದು ವಾದಿಸಿದರು. ಕೆಲವು ಆರೋಪಿಗಳು…
ಹಲವು ವರ್ಷಗಳ ಕಾಲ ಪ್ರೀತಿ ಮದುವೆಯಾದ ಕೆಲವೇ ವರ್ಷಗಳಲ್ಲಿ ಡಿವೋರ್ಸ್ ಪಡೆದುಕೊಂಡ ನಾಗ ಚೈತನ್ಯ ಹಾಗೂ ಸಮಂತಾ ಸದ್ಯ ತಮ್ಮ ಕೆರಿಯರ್ ಮೇಲೆ ಗಮನ ಹರಿಸಿದ್ದಾರೆ. ಈ ಜೋಡಿ ದೂರವಾಗಲು ಕಾರಣವೇನು ಎಂಬುದು ಮಾತ್ರ ನಿಗೂಡವಾಗಿಯೇ ಉಳಿದಿತ್ತು. ಇದೀಗ ಈ ಜೋಡಿ ದೂರವಾದ ನಾಲ್ಕು ವರ್ಷಗಳ ಬಳಿಕ ಸಮಂತಾ ಹಾಗೂ ನಾಗಚೈತನ್ಯ ಡಿವೋರ್ಸ್ ಗೆ ಕಾರಣವೇನು ಎಂಬುದು ತಿಳಿದು ಬಂದಿದೆ. ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನದ ಕಾರಣವನ್ನು ಬಹಿರಂಗಪಡಿಸದೆ ಅಧಿಕೃತವಾಗಿ ವಿಚ್ಛೇದನವನ್ನು ಘೋಷಿಸಿದ್ದರು. ಅಂದಿನಿಂದ ಅವರು ಪ್ರತ್ಯೇಕವಾಗಿದ್ದು ತಮ್ಮ ತಮ್ಮ ವೃತ್ತಿಯನ್ನು ಮುಂದುವರೆಸಿದ್ದಾರೆ. ಹೀಗಾಗಿ ಸಮಂತಾ ಮತ್ತು ನಾಗ ಚೈತನ್ಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಲವು ವದಂತಿಗಳಿಗೆ ತೆರೆ ಬಿದ್ದಿತ್ತು.. ಸದ್ಯ ಸುದ್ದಿಯಲ್ಲಿರೋ ಫೋನ್ ಕದ್ದಾಲಿಕೆ ವಿಚಾರ ದೇಶವನ್ನೇ ನಡುಗಿಸಿದೆ. ಇದರಲ್ಲಿ ನಾಗ ಚೈತನ್ಯ ಹಾಗೂ ಸಮಂತಾ ಹೆಸರುಗಳು ಮುನ್ನೆಲೆಗೆ ಬಂದಿದೆ. ಟೆಲಿಫೋನ್ ಕದ್ದಾಲಿಕೆಯಲ್ಲಿ ತೊಡಗಿದ್ದ ತೆಲಂಗಾಣ ಸರ್ಕಾರಿ ಅಧಿಕಾರಿ ಪ್ರಣೀತ್ ರಾವ್ ಅವರನ್ನು ಬಂಧಿಸಿ ತನಿಖೆ ನಡೆಸಿದ…