Author: Author AIN

ನಿರ್ದೇಶಕ ಆರ್​ ಚಂದ್ರು ಇತ್ತೀಚೆಗೆ ‘ಆರ್ ​ಸಿ ಸ್ಟುಡಿಯೋ’ ಆರಂಭಿಸಿ ಬ್ಯಾಕ್ ಟು ಬ್ಯಾಕ್ ಐದು ಸಿನಿಮಾಗಳನ್ನು ಘೋಷಣೆ ಮಾಡಿದ್ದರು. ಇದೀಗ ಆರನೇ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಈ ಭಾರಿ ಶಿವರಾಜ್ ಕುಮಾರ್ ಜೊತೆ ಸಿನಿಮಾ ಘೋಷಿಸಿರುವ ಚಂದ್ರು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. 2010ರಲ್ಲಿ ಶಿವರಾಜ್​ಕುಮಾರ್ ನಟನೆಯ ‘ಮೈಲಾರಿ’ ಸಿನಿಮಾವನ್ನು ಆರ ಚಂದ್ರ ನಿರ್ದೇಶನ ಮಾಡಿದ್ದರು. ಈ ಸಿನಿಮಾದ ಮುಹೂರ್ತ ನಡೆದು ಇಂದಿಗೆ (ಏಪ್ರಿಲ್ 1) 14 ವರ್ಷಗಳು ಕಳೆದಿವೆ. ಈ ಬಗ್ಗೆ ಆರ್ ಚಂದ್ರು ಅವರು ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ನೀಡಿದ್ದಾರೆ. ಜೊತೆಗೆ ಅವರ ಜೊತೆ ಹೊಸ ಸಿನಿಮಾ ಘೋಷಿಸಿದ್ದಾರೆ. ‘ಕನ್ನಡದ ಸೂಪರ್ ಹಿಟ್ ಚಿತ್ರ ಮೈಲಾರಿ ಮುಹೂರ್ತಕ್ಕೆ 14 ವರ್ಷಗಳು ತುಂಬಿವೆ. ಈ ಶುಭ ಸಂದರ್ಭದಲ್ಲಿ ಕರುನಾಡ ಚಕ್ರವರ್ತಿ ಡಾ. ಶಿವರಾಜ್​ಕುಮಾರ್ ಅವರ ಜೊತೆ ಹೊಸ ಚಿತ್ರ ಆರಂಭಿಸುತ್ತಿರುವುದು ಮತ್ತಷ್ಟು ಖುಷಿ ತಂದಿದೆ. ತಮ್ಮೆಲ್ಲರ ಆಶೀರ್ವಾದ ಇರಲಿ. ಧನ್ಯವಾದಗಳು, ಆರ್ ಸಿ ಸ್ಟುಡಿಯೋಸ್’ ಎಂದು ಅವರು…

Read More

ಬಾಲಿವುಡ್​ನ ಖ್ಯಾತ ನಿರ್ಮಾಪಕ ಬೋನಿ ಕಪೂರ್ ಪುತ್ರಿ ನಟಿ ಜಾನ್ವಿ ಕಪೂರ್ ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಬಾಲಿವುಡ್ ಬಳಿಕ ದಕ್ಷಿಣ ಭಾರತದ ಸಿನಿಮಾಗಳತ್ತ ಮುಖ ಮಾಡಿರುವ ಜಾನ್ವಿ ಲಕ್ಷಾಂತರ ಅಭಿಮಾನಿಗಳ ನೆಚ್ಚಿನ ನಟಿ. ಆದರೆ ಜಾನ್ವಿ ಮನಸ್ಸು ಗೆದ್ದಿರೋದು ಶಿಖರ್ ಪಹಾರಿಯಾ. ಇದೀಗ ಮಗಳ ಬಾಯ್ ಫ್ರೆಂಡ್ ಬಗ್ಗೆ ಬೋನಿ ಕಪೂರ್ ಪ್ರತಿಕ್ರಿಯೆ ನೀಡಿದ್ದಾರೆ. ಸಂದರ್ಶನದಲ್ಲಿ ಮಾತನಾಡಿದ ಬೋನಿ ಕಪೂರ್, ‘ನನಗೆ ಶಿಖರ್ ಅಂದರೆ ಪ್ರೀತಿ. ಜಾನ್ವಿ ಅವನ ಜೊತೆ ಕಾಣಿಸಿಕೊಳ್ಳದೇ ಇರುವಾಗಲೂ ನನಗೆ ಅವರ ಜೊತೆ ಒಳ್ಳೆಯ ಫ್ರೆಂಡ್​ಶಿಪ್ ಇತ್ತು. ಅವರು ಎಂದಿಗೂ ನನ್ನ ಮಗಳನ್ನು ಬಿಟ್ಟು ಹೋಗಲು ಸಾಧ್ಯವಿಲ್ಲ ಎಂದು ನನಗೆ ಅನಿಸಿತು. ಯಾವುದಾದರೂ ಸಹಾಯ ಬೇಕಾದರೆ ಅವರು ಯಾವಾಗಲೂ ಓಡಿ ಬರುತ್ತಾರೆ. ಅವರು ನನ್ನೊಂದಿಗೆ, ಜಾನ್ವಿ ಮತ್ತು ಅರ್ಜುನ್ ಅವರೊಂದಿಗೆ ಒಳ್ಳೆಯ ಸ್ನೇಹ ಹೊಂದಿದ್ದಾರೆ. ಹಾಗಾಗಿ ಅವರಂತಹ ವ್ಯಕ್ತಿ ನಮ್ಮ ಜೀವನದಲ್ಲಿ ಸಿಕ್ಕಿರುವುದು ನಮ್ಮ ಅದೃಷ್ಟ’ ಎಂದು ಹೇಳಿದ್ದಾರೆ. ಜಾನ್ವಿ ಕಪೂರ್ ಅವರು ಶಿಖರ್ ಜೊತೆಗಿನ…

Read More

ಉತ್ತರ ಸಿರಿಯಾದ ಶಾಪಿಂಗ್ ಪ್ರದೇಶದಲ್ಲಿ ಬಾಂಬ್ ಸ್ಫೋಟಗೊಂಡಿದ್ದು ಪರಿಣಾಮ ಎಂಟು ಮೃತಪಟ್ಟು, 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲೆಪ್ಪೊ ಪ್ರಾಂತ್ಯದ ಅಜಾಜ್ನಲ್ಲಿ ಮಧ್ಯರಾತ್ರಿಯ ವೇಳೆ ಸ್ಫೋಟ ಸಂಭವಿಸಿದ್ದು. ಮುಸ್ಲಿಮರ ಪವಿತ್ರ ರಂಜಾನ್ ಉಪವಾಸದ ಸಮಯದಲ್ಲಿ ಜನ ಶಾಪಿಂಗ್ ಮಾಡುತ್ತಿದ್ದಾಗ ಈ ಸ್ಫೋಟ ಸಂಭವಿಸಿದೆ. ಜನಪ್ರಿಯ ಮಾರುಕಟ್ಟೆಯ ಮಧ್ಯದಲ್ಲಿ ಕಾರ್ ಬಾಂಬ್ ಸ್ಫೋಟಗೊಂಡಾಗ ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು 23 ಜನರು ಗಾಯಗೊಂಡಿದ್ದಾರೆ ಎಂದು ಸಿರಿಯನ್ ಮಾನವ ಹಕ್ಕುಗಳ ವೀಕ್ಷಣಾಲಯ ತಿಳಿಸಿದೆ.

Read More

ಬ್ರಿಟನ್‌ನಲ್ಲಿ ಪ್ರಸಕ್ತ ಆಡಳಿತದಲ್ಲಿರುವ ಕನ್ಸರ್ವೇಟಿವ್‌ ಪಕ್ಷವು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲು ಅನುಭವಿಸುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿದೆ. ಜೊತೆಗೆ ಬ್ರಿಟನ್‌ ಪ್ರಧಾನಿ, ಇನ್ಪಿ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್‌ ಉತ್ತರ ಯಾರ್ಕ್‌ಷೈರ್‌ನ ತಮ್ಮ ಸ್ವಕ್ಷೇತ್ರದಲ್ಲಿ ಗೆಲುವು ಸಾಧಿಸುವುದಕ್ಕೂ ಹೆಣಗಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಚುನಾವಣೆ ಪೂರ್ವ ಸಮೀಕ್ಷೆಯೊಂದು ಹೇಳಿದೆ. ಚುನಾವಣೆ ಪ್ರಚಾರ ಸಂಸ್ಥೆ ಸಿವಿಲ್‌ ಸೊಟೈಟಿಯು 15,029 ವ್ಯಕ್ತಿಗಳ ಅಭಿಪ್ರಾಯ ಸಂಗ್ರಹಿಸಿ ಸಮೀಕ್ಷೆಯ ವರದಿ ನೀಡಿದೆ. ಅದರ ಪ್ರಕಾರ ಬ್ರಿಟನ್‌ನ ಆಡಳಿತಾರೂಢ ಪಕ್ಷ ಕನ್ಸರ್ವೇಟಿವ್‌ಗಿಂತ 19 ಪಾಯಿಂಟ್‌ಗಳಷ್ಟು ಹೆಚ್ಚು ಮತಗಳನ್ನು ವಿಪಕ್ಷ ಲೇಬರ್‌ ಪಕ್ಷ ಪಡೆದುಕೊಳ್ಳಲಿದೆ ಎಂದಿದೆ. ಈ ವರ್ಷಾಂತ್ಯಕ್ಕೆ ಬ್ರಿಟನ್‌ನಲ್ಲಿ ಸಾರ್ವಜನಿಕ ಚುನಾವಣೆ ನಡೆಯುವ ಸಾಧ್ಯತೆ ಇದೆ.

Read More

ಹುಲಿಯೊಂದು ಪಂಜರದಿಂದ ತಪ್ಪಿಸಿಕೊಂಡು ಬಂದು ಇಬ್ಬರು ವ್ಯಕ್ತಿಗಳನ್ನು ಗಾಯಗೊಳಿಸಿರುವ ಘಟನೆ ಪಾಕಿಸ್ತಾನ ಪಂಜಾಬ್ ಪ್ರಾಂತ್ಯದ ಮುಲ್ತಾನ್ ಎಂಬಲ್ಲಿ ನಡೆದಿದೆ. ಹುಲಿಯನ್ನು ಅದರ ಮಾಲೀಕ ವಾಕಸ್ ಅಹ್ಮದ್ ಎನ್ನುವವರು ಲಾಹೋರ್‌ನಿಂದ ಮುಲ್ತಾನ್‌ ನ ಮೃಗಾಲಯಕ್ಕೆ ಸಾಗಿಸುತ್ತಿದ್ದರು. ಮೃಗಾಲಯದ ಹೊರ ವಲಯಲ್ಲಿದ್ದ ಗಾಡಿ ನಿಲ್ಲಿಸಿದ್ದ ವೇಳೆ ಪಂಜರದಲ್ಲಿದ್ದ ಹುಲಿ ಸರಳುಗಳನ್ನು ಮುರಿದು ಹೊರಗೆ ಬಂದಿತ್ತು. ಈ ವೇಳೆ ಹುಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ‍ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪಂಜಾಬ್ ಪ್ರಾಂತ್ಯದ ವನ್ಯಜೀವಿ ಇಲಾಖೆಯ ನಿರ್ದೇಶಕ ಮುದಾಸರ್ ರಿಯಾಜ್ ಮಲೀಕ್ ತಿಳಿಸಿದ್ದಾರೆ ಹುಲಿ ಪಂಜರದಿಂದ ತಪ್ಪಿಸಿಕೊಂಡ ಸುದ್ದಿ ತಿಳಿದು ನಮ್ಮ ತಂಡ ಭಾರಿ ಕಾರ್ಯಾಚರಣೆ ನಡೆಸಿ ಹುಲಿಯನ್ನು ಸೆರೆ ಹಿಡಿದಿದೆ. ಅದನ್ನು ಮುಲ್ತಾನ್‌ನ ಮೃಗಾಲಯಕ್ಕೆ ಬಿಡಲಾಗುವುದು ಎಂದಿದ್ದು, ನಮ್ಮ ಇಲಾಖೆಗೆ ಮೊದಲೇ ಮಾಹಿತಿ ನೀಡದೇ ಹುಲಿಯನ್ನು ಸಾಗಿಸುತ್ತಿದ್ದ ಅದರ ಮಾಲೀಕನಿಗೆ ದಂಡ ವಿಧಿಸಲಾಗಿದೆ ಎಂದು ರಿಯಾಜ್ ಮಲೀಕ್ ತಿಳಿಸಿದ್ದಾರೆ.

Read More

‘ಸೀತಾರಾಮಂ’ ಸಿನಿಮಾದ ಮೂಲಕ ಖ್ಯಾತಿ ಘಳಿಸಿದ ನಟಿ ಮೃಣಾಲ್ ಠಾಕೂರ್ ಸದ್ಯ ವಿಜಯ್ ದೇವರಕೊಂಡ ಜೊತೆಗಿನ ‘ಫ್ಯಾಮಿಲಿ ಸ್ಟಾರ್’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ನನಗೂ ಇಬ್ಬರೂ ಮಕ್ಕಳು ಬೇಕು ಎಂದು ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಿದ ನಟಿ, ನಾನಿನ್ನೂ ಎಂಗೇಜ್‌ ಆಗಿಲ್ಲ. ಆದರೆ ಸಂಬಂಧದಲ್ಲಿರುವವರು ಆ ಪ್ರೀತಿಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಬೇಕು. ಇಬ್ಬರೂ ನಿಷ್ಠಾವಂತರಾಗಿರಬೇಕು. ಆಗ ಆ ಸಂಬಂಧ ಗಟ್ಟಿಯಾಗುತ್ತದೆ ಎಂದು ಹೇಳಿದ್ದಾರೆ. ಸೆಲೆಬ್ರಿಟಿ ಆಗೋದು ತುಂಬಾ  ಕಷ್ಟ. ಶೂಟಿಂಗ್ ಸಮಯದಲ್ಲಿ ಸದಾ ಫ್ಯಾಮಿಲಿಯಿಂದ ದೂರ ಇರಬೇಕಾಗುತ್ತದೆ. ನನಗೆ ಸಹಜ ಜೀವನ ನಡೆಸಲು ಇಷ್ಟ. ನನಗೆ ಇಬ್ಬರು ಮಕ್ಕಳು ಇರಬೇಕು. ಅವರೊಂದಿಗೆ ಊಟಕ್ಕೆ ಹೋದರೆ ಎಷ್ಟು ಚೆನ್ನಾಗಿರುತ್ತದೆ ಎಂದು ತಮ್ಮ ಫ್ಯಾಮಿಲಿ ಬಗ್ಗೆ ಮಾತನಾಡಿದ್ದಾರೆ. ದಿಲ್ ರಾಜು ನಿರ್ಮಾಣದ ಫ್ಯಾಮಿಲಿ ಸ್ಟಾರ್ ಸಿನಿಮಾ ಇದೇ ಏ.5ರಂದು ತೆರೆಗೆ ಬರ್ತಿದೆ. ಸಾಕಷ್ಟು ನಿರೀಕ್ಷೆ ಮೂಡಿಸಿರುವ ಫ್ಯಾಮಿಲಿ ಸ್ಟಾರ್ ಚಿತ್ರ ವಿಜಯ್ ಹಾಗೂ ಮೃಣಾಲ್ ಇಬ್ಬರಿಗೂ ಬ್ರೇಕ್ ನೀಡುತ್ತಾ…

Read More

ಸ್ಯಾಂಡಲ್‌ವುಡ್ ನಟಿ ರಾಧಿಕಾ ಪಂಡಿತ್ ಮಾರ್ಚ್ 7ರಂದು ಅಭಿಮಾನಿಗಳ ಜೊತೆ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ್ದರು. ಅದಾದ ಬಳಿಕ ಕುಟುಂಬದಸ್ಥರ ಜೊತೆ ಬರ್ತಡೇ ಪಾರ್ಟಿ ಮಾಡಿದ್ದು ಇದೀಗ ಪಾರ್ಟಿಯ ವಿಡಿಯೋವನ್ನು ನಟಿ ಶೇರ್ ಮಾಡಿದ್ದಾರೆ. ಮಾರ್ಚ್ 7, ನನ್ನ ಜೀವನದಲ್ಲಿ ಇಂತಹ ವ್ಯಕ್ತಿಗಳನ್ನು ಪಡೆದಿರೋದು ನನಗೆ ಸಿಕ್ಕ ಆಶೀರ್ವಾದ ಎಂದು ನಟಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಕುಟುಂಬದ ಜೊತೆ ಹುಟ್ಟುಹಬ್ಬ ಆಚರಿಸಿದ ವಿಡಿಯೋವನ್ನು ರಾಧಿಕಾ ಶೇರ್ ಮಾಡಿದ್ದಾರೆ. ಪತ್ನಿಯ ಹುಟ್ಟುಹಬ್ಬವನ್ನು ಯಶ್ ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಿದ್ದಾರೆ. ಕಡಲ ತೀರದಲ್ಲಿ ಪತಿ ಯಶ್ ಮತ್ತು ಕುಟುಂಬದ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಬರ್ತಡೇ ಸ್ಟೇಜ್‌ನಲ್ಲಿ ಇಬ್ಬರೂ ಲೈಟ್ ಬಣ್ಣದ ಡ್ರೆಸ್‌ನಲ್ಲಿ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ರಾಧಿಕಾ ಶೇರ್ ಮಾಡಿರುವ ವಿಡಿಯೋದಲ್ಲಿ ಯಶ್‌ನ ಅಪ್ಪಿಕೊಂಡು ಕೇಕ್ ತಿನ್ನಿಸಿದ್ದಾರೆ. ಮದುವೆಯ ಬಳಿಕ ರಾಧಿಕಾ ಪಂಡಿತ್ ಸಿನಿಮಾ ರಂಗದಿಂಧ ದೂರವಿದ್ದು ಮನೆ, ಮಕ್ಕಳು, ಸಂಸಾರ ಎಂದು ಬ್ಯುಸಿಯಾಗಿದ್ದಾರೆ. ಇಂದಿಗೂ ಲಕ್ಷಾಂತರ ಅಭಿಮಾನಿಗಳು ರಾಧಿಕಾ ಮತ್ತೆ ಸಿನಿಮಾ ರಂಗಕ್ಕೆ ಕಂಬ್ಯಾಕ್…

Read More

ಬಿಗ್​ಬಾಸ್​ 10ರ ಸ್ಪರ್ಧಿ, ನಟಿ ತನಿಷಾ ಕುಪ್ಪಂಡ ಇದೀಗ ಹೊಸ ಉದ್ಯಮಕ್ಕೆ ಕೈ ಹಾಕಿದ್ದಾರೆ. ನಟನೆಯ ಜೊತೆಗೆ ಯಶಸ್ವಿ ಉದ್ಯಮಿಯಾಗಿ ಸೈ ಎನಿಸಿಕೊಂಡಿರುವ ತನಿಷಾ ಹೋಟೆಲ್ ಬ್ಯುಸಿನೆಸ್ ಬಳಿಕ ಇದೀಗ ಮತ್ತೊಂದು ಬ್ಯುಸಿನೆಸ್ ಶುರುಮಾಡಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ‘ಅಪ್ಪುಸ್ 93 ಕಿಚನ್’ ಹೆಸರಿನ ಹೋಟೆಲ್​ ಅನ್ನು ತನಿಷಾ ಕುಪ್ಪಂಡ ನಡೆಸುತ್ತಿದ್ದಾರೆ. ಈ ಹೋಟೆಲ್​ನಲ್ಲಿ ರುಚಿಕರವಾದ ವೆನ್ ಹಾಗೂ ನಾನ್​ವೆಜ್ ಖಾದ್ಯಗಳನ್ನು ಸರ್ವ್ ಮಾಡಲಾಗುತ್ತದೆ. ಇದೀಗ ತನಿಷಾ ಕುಪ್ಪಂಡ ಮತ್ತೊಂದು ಹೊಸ ಬ್ಯುಸಿನೆಸ್ ಪ್ರಾರಂಭ ಮಾಡಿದ್ದಾರೆ. ತನಿಷಾ ಕುಪ್ಪಂಡ ತಮ್ಮ ಕುಟುಂಬದ ಹೆಸರಿನಲ್ಲಿ ಆಭರಣಗಳ ಮಳಿಗೆ ಪ್ರಾರಂಭಿಸಿದ್ದಾರೆ. ‘ಕುಪ್ಪಂಡ ಜ್ಯುವೆಲರೀಸ್’ ಹೆಸರಿನ ಆಭರಣ ಮಳಿಗೆಯನ್ನು ತನಿಷಾ ಕುಪ್ಪಂಡ ಪ್ರಾರಂಭ ಮಾಡಿದ್ದಾರೆ. ಇಲ್ಲಿ ಬೆಳ್ಳಿಯ ಆಭರಣಗಳು ಇತರೆ ಲೋಹಗಳಿಂದ ಮಾಡಿದ ಕಡಿಮೆ ಬೆಲೆಯ ಆಭರಣಗಳನ್ನು ಮಾರಾಟ ಮಾಡಲಾಗುತ್ತದೆ. 29ನೇ ತಾರೀಖಿನಂದ ಶಾಸಕ ಪ್ರಿಯಾ ಕೃಷ್ಣ, ನಟ ಲೂಸ್ ಮಾದ ಯೋಗಿ ‘ಕುಪ್ಪಂಡ ಜ್ಯುವೆಲರೀಸ್’ ಉದ್ಘಾಟಿಸಿದ್ದಾರೆ. ‘ಕುಪ್ಪಂಡ ಜ್ಯುವೆಲರೀಸ್​’ಗೆ ತನಿಷಾ ಕುಪ್ಪಂಡರ ಗೆಳೆಯ ಕಾರ್ತಿಕ್…

Read More

ಕಳೆದ ವಾರ ಕಡಲ್ಗಳ್ಳರ ಆಕ್ರಮಣಕ್ಕೆ ಒಳಗಾಗಿದ್ದ ಇರಾನ್​ನ ಮೀನುಗಾರಿಕಾ ದೋಣಿಯನ್ನು ಭಾರತದ ನೌಕಾಪಡೆ ರಕ್ಷಣೆ ಮಾಡಿತ್ತು. ಯೆಮೆನ್​ನ ಸೊಕೋತ್ರ ದ್ವೀಪದ ಸಮುದ್ರದ ಭಾಗದಲ್ಲಿ ಈ ಘಟನೆ ನಡೆದಿತ್ತು. ಭಾರತದ ನೌಕಾಪಡೆಯ ಐಎನ್​ಎಸ್ ಸುಮೇಧಾ ಮಾರ್ಚ್ 29ರಂದು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಈ ದೋಣಿಯನ್ನು ಕಡಲ್ಗಳ್ಳರಿಂದ ರಕ್ಷಿಸಿತ್ತು. ಮೀನುಗಾರಿಕ ದೋಣಿಯಲ್ಲಿ 23 ಮಂದಿ ಪಾಕಿಸ್ತಾನಿ ಮೀನುಗಾರರಿದ್ದು 12 ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಅವರನ್ನು ರಕ್ಷಿಸಲಾಗಿದೆ. ಭಾರತದ ನೌಕಾಪಡೆಯ ಕಾರ್ಯಾಚರಣೆ ಬಳಿಕ ಈ ಪಾಕಿಸ್ತಾನೀಯರು ಭಾರತಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಭಾರತ ಜಿಂದಾಬಾದ್ ಎಂದು ಹೇಳಿ ತಮ್ಮ ಕೃತಜ್ಞತೆ ತೋರ್ಪಡಿಸಿದ್ದಾರೆ. ದೋಣಿಯ ಮುಖ್ಯಸ್ಥರಾದ ಆಮೀರ್ ಖಾನ್ ವಿಡಿಯೋ ರೆಕಾರ್ಡ್​ನಲ್ಲಿ ಮೆಸೇಜ್ ಬಿಡುಗಡೆ ಮಾಡಿದ್ದಾರೆ.

Read More

2024-25ರ ಹಣಕಾಸು ವರ್ಷ ನಾಳೆಯಿಂದ ಅದರೆ ಏಪ್ರಿಲ್ 1ರಿಂದ ಚಾಲನೆಗೆ ಬರಲಿದೆ. ಫೆಬ್ರವರಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅನಾವರಣಗೊಳಿಸಿದ ಕೇಂದ್ರ ಬಜೆಟ್ ನ ಭಾಗವಾಗಿ ಹಲವಾರು ಪ್ರಮುಖ ತೆರಿಗೆ ನಿಯಮ ತಿದ್ದುಪಡಿಗಳ ಆಗಮನದೊಂದಿಗೆ ಏಪ್ರಿಲ್ 1 ರಿಂದ ಹೊಸ ಹಣಕಾಸು ವರ್ಷ ಪ್ರಾರಂಭವಾಗಲಿದೆ. 3 ಲಕ್ಷದಿಂದ 6 ಲಕ್ಷದವರೆಗಿನ ಆದಾಯಕ್ಕೆ ಶೇ.5, 6 ಲಕ್ಷದಿಂದ 9 ಲಕ್ಷದವರೆಗಿನ ಆದಾಯಕ್ಕೆ ಶೇ.10, 9 ಲಕ್ಷದಿಂದ 12 ಲಕ್ಷದವರೆಗಿನ ಆದಾಯಕ್ಕೆ ಶೇ.15, 12 ಲಕ್ಷದಿಂದ 15 ಲಕ್ಷದವರೆಗಿನ ಆದಾಯಕ್ಕೆ ಶೇ.20 ಮತ್ತು 15 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಆದಾಯಕ್ಕೆ ಶೇ.30ರಷ್ಟು ತೆರಿಗೆ ವಿಧಿಸಲಾಗುತ್ತದೆ. 5 ಕೋಟಿ ರೂ.ಗಿಂತ ಹೆಚ್ಚಿನ ಆದಾಯ ಹೊಂದಿರುವ ವ್ಯಕ್ತಿಗಳಿಗೆ ಗರಿಷ್ಠ ಸರ್ಚಾರ್ಜ್ ದರವನ್ನು 37% ರಿಂದ 25% ಕ್ಕೆ ಇಳಿಸಲಾಗಿದೆ, ಇದು ಹೆಚ್ಚಿನ ಗಳಿಕೆದಾರರಿಗೆ ತೆರಿಗೆ ಹೊರೆಯಲ್ಲಿ ಗಮನಾರ್ಹ ಕಡಿತವನ್ನು ಸೂಚಿಸುತ್ತದೆ. ಹೆಚ್ಚುವರಿಯಾಗಿ, ಹೊಸ ಹಣಕಾಸು ಪಾಲಿಸಿಗಳು 2023 ರ ಏಪ್ರಿಲ್ 1 ರಿಂದ ಹೊರಡಿಸಲಾದ ಜೀವ…

Read More