ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ಅಟ್ಲಿ ಕಾಂಬಿನೇಷನ್ ನ ಸಿನಿಮಾ ಆರಂಭಕ್ಕೂ ಮುನ್ನವೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈಗಾಗ್ಲೆ ಚಿತ್ರದಲ್ಲಿ ಸಮಂತಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಈ ಮಧ್ಯೆ ಚಿತ್ರತಂಡಕ್ಕೆ ಮತ್ತೋರ್ವ ನಟಿ ಎಂಟ್ರಿಕೊಟ್ಟಿದ್ದಾರೆ. ಕಳೆದ ಎರಡ್ಮೂರು ದಿನಗಳಿಂದ ಅಲ್ಲು ಅರ್ಜುನ್ ಮುಂದಿನ ಸಿನಿಮಾಗೆ ಸಮಂತಾ ನಾಯಕಿಯಾಗ್ತಾರೆ ಎಂಬ ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಸಲಿಗೆ ಸಮಂತಾ ಅಟ್ಲಿ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಾರಾ? ಎಂಬುದು ಇನ್ನೂ ಖಾತ್ರಿಯಾಗಿಲ್ಲ. ಈ ಬೆನ್ನಲ್ಲೇ ಸ್ಟಾರ್ ನಟಿ ತ್ರಿಶಾ ಹೆಸರು ಕೂಡ ಕೇಳಿ ಬಂದಿದೆ. ಅಲ್ಲು ಅರ್ಜುನ್ ಮುಂಬರುವ ಸಿನಿಮಾದಲ್ಲಿ ಸಮಂತಾ ಮತ್ತು ತ್ರಿಶಾ ಕೃಷನ್ ಇಬ್ಬರೂ ತೆರೆಹಂಚಿಕೊಳ್ತಾರೆ ಎನ್ನಲಾಗುತ್ತಿದೆ. ಇಬ್ಬರ ಜೊತೆ ಅಲ್ಲು ಅರ್ಜುನ್ ಡ್ಯುಯೇಟ್ ಹಾಡೋಕೆ ರೆಡಿಯಾಗುತ್ತಿದ್ದಾರಂತೆ. ತ್ರಿಶಾ ಕೃಷ್ಣನ್ ಅವರಿಗೂ ಕೂಡ ಸಿನಿಮಾದಲ್ಲಿ ಉತ್ತಮ ಪಾತ್ರವಿದೆ ಎನ್ನಲಾಗುತ್ತಿದೆ. ಅಲ್ಲು ಅರ್ಜುನ್ ಜೊತೆ ಸಮಂತಾ, ತ್ರಿಶಾ ನಟಿಸುವ ಸುದ್ದಿಯ ಬಗ್ಗೆ ಚಿತ್ರತಂಡದ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ…
Author: Author AIN
ಸ್ಯಾಂಡಲ್‌ವುಡ್ ನಟಿ, ಬಿಗ್ ಬಾಸ್ ಕನ್ನಡ 7ರ ಸ್ಪರ್ಧಿ ದೀಪಿಕಾ ದಾಸ್ ಇತ್ತೀಚೆಗೆ ದೀಪಕ್ ಎಂಬುವವರ ಜೊತೆ ಮದುವೆಯಾಗಿದ್ದಾರೆ. ಇದೀಗ ಪತಿ ಜೊತೆ ದೀಪಿಕಾ ದಾಸ್ ವೆಕೇಷನ್ ಮೂಡ್‌ನಲ್ಲಿದ್ದಾರೆ. ಟರ್ಕಿಗೆ ತೆರಳಿರುವ ಜೋಡಿ ನಟಿಯ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪತಿ ಜೊತೆ ದೀಪಿಕಾ ಟರ್ಕಿಗೆ ತೆರಳಿದ್ದು, ರೆಕ್ಕೆಯನ್ನು ಬೆನ್ನಿಗೆ ಸಿಕ್ಕಿಸಿ, ಕಲರ್‌ಫುಲ್ ಡ್ರೆಸ್‌ನಲ್ಲಿ ನಟಿ ಮಿಂಚಿದ್ದಾರೆ. ಯಾವಾಗಲೂ ಸೂರ್ಯನ ಕಿರಣಕ್ಕೆ ಮುಖ ಒಡ್ಡಿಕೊಳ್ಳಿ, ಆಗ ನೆರಳು ನಿಮ್ಮ ಹಿಂದೆಯೇ ಉಳಿಯುತ್ತದೆ ಎಂದು ಕ್ಯಾಪ್ಷನ್ ನೀಡಿದ್ದಾರೆ. ದೀಪಿಕಾ ದಾಸ್‌ಗೆ ಗೋವಾದಲ್ಲಿ ಆಪ್ತರ ಸಮ್ಮುಖದಲ್ಲಿ ಹಸೆಮಣೆ ಏರಿದ್ದರು. ಬಳಿಕ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಆರತಕ್ಷತೆ ಹಮ್ಮಿಕೊಳ್ಳಲಾಗಿತ್ತು. ದೀಪಿಕಾ ಉದ್ಯಮಿ ದೀಪಕ್ ಎಂಬವವರ ಜೊತೆ ಹಸೆಮಣೆ ಏರಿದ್ದಾರೆ.
ಡೆವಿಲ್ ಸಿನಿಮಾದ ಶೂಟಿಂಗ್ ವೇಳೆ ನಟ ದರ್ಶನ್ ಕೈಗೆ ಪೆಟ್ಟಾಗಿದ್ದು, ಇಂದು ಆಪರೇಷನ್ ನಡೆಯಲಿದೆ. ಈ ಮಾಹಿತಿಯನ್ನು ಸ್ವತಃ ದರ್ಶನ್ ಅವರೇ ಹೇಳಿಕೊಂಡಿದ್ದಾರೆ. ಮಂಡ್ಯದಲ್ಲಿ ನಡೆದ ಸುಮಲತಾ ಅಂಬರೀಶ್ ಅವರ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವುದಾಗಿ ಹೇಳಿದ್ದಾರೆ. ಡೆವಿಲ್ ಸಿನಿಮಾದ ಸಾಹಸ ಸನ್ನಿವೇಶ ಶೂಟಿಂಗ್ ಸಮಯದಲ್ಲಿ ದರ್ಶನ್ ಕೈಗೆ ಏಟು ಬಿದ್ದಿದೆ ಎಂದು ಹೇಳಲಾಗುತ್ತಿದೆ. ಕೈಗೆ ಬೆಲ್ಟ್ ಕಟ್ಟಿಕೊಂಡು ಈವರೆಗೂ ಓಡಾಡುತ್ತಿದ್ದ ದರ್ಶನ್ ವೈದ್ಯರ ಸಲಹೆ ಮೇರೆಗೆ ಇದೀಗ ಆಪರೇಷನ್ ಗೆ ಒಳಗಾಗುತ್ತಿದ್ದಾರೆ. ಆಪರೇಷನ್ ಒಳಗಾಗುವ ಮುನ್ನ ಹಲವಾರು ಕಾರ್ಯಕ್ರಮಗಳಲ್ಲೂ ದರ್ಶನ್ ಭಾಗಿ ಆಗಿದ್ದಾರೆ. ನೀನಾಸಂ ಸತೀಶ್ ನಟನೆಯ ಮ್ಯಾಟ್ನಿ ಸಿನಿಮಾದ ಇವೆಂಟ್, ನಿನ್ನ ಜಾಜಿ ಹೆಸರಿನ ಕಾರ್ಯಕ್ರಮ ವೇಳೆಯೂ ದರ್ಶನ್ ಕೈಗೆ ಬೆಲ್ಟ್ ಕಟ್ಟಿಕೊಂಡೇ ಇದ್ದರು.
ಕಳೆದ ಕೆಲವು ದಿನಗಳ ಹಿಂದೆ ಬಾಲಿವುಡ್ ನಟಿ ತಾಪ್ಸಿ ಪನ್ನು ಮದುವೆಯಾಗಿದ್ದಾರೆ ಎಂದು ಸಾಕಷ್ಟು ಸುದ್ದಿಯಾಗಿತ್ತು. ಆದರೆ ನಟಿಯ ಮದುವೆಯ ಫೋಟೋ ಅಥವಾ ವಿಡಿಯೋವಾಗಲಿ ಸಿಕ್ಕಿರಲಿಲ್ಲ. ಿದೀಗ ತಾಪ್ಸಿ ಮದುವೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ತಾಪ್ಸಿ ಪನ್ನು ಮಾರ್ಚ್ 25 ರಂದು ಗುಟ್ಟಾಗಿ ಮದುವೆ ಆಗಿದ್ದಾರೆ. ತಾಪ್ಸಿ ತನ್ನ ಬಹುಕಾಲದ ಗೆಳೆಯ ಮಥಿಯಾಸ್ ಜೊತೆ ಹಸೆ ಮಣೆ ಏರಿದ್ದಾರೆ. 10 ವರ್ಷಗಳ ಡೇಟಿಂಗ್ ಬಳಿಕ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ನಟಿ ,ಮದುವೆಯ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಇದೀಗ ತಾಪ್ಸಿ ಮದುವೆಯ ಮೊದಲ ವಿಡಿಯೋ ಹೊರಬಿದ್ದಿದೆ. ಇಬ್ಬರ ಮದುವೆಗೆ ಆಪ್ತರು ಮತ್ತು ಕುಟುಂಬದವರು ಸಾಕ್ಷಿಯಾಗಿದ್ರು. ತಾಪ್ಸಿ, ಮಥಿಯಾಸ್ ಮದುವೆ ಉದಯಪುರದ ಪರಿಣಯ ಸೂತ್ರದಲ್ಲಿ ನಡೆದಿದೆ. ತಾಪ್ಸಿ ಅವರ ಪತಿ ಒಲಿಂಪಿಕ್ ಪದಕ ವಿಜೇತರಾಗಿದ್ದಾರೆ. ಮದುವೆಯ ಕುರಿತು ಇವರಿಬ್ಬರೂ ಇನ್ನೂ ಅಧಿಕೃತವಾಗಿ ಅನೌನ್ಸ್ ಮಾಡಿಲ್ಲ. ತಾಪ್ಸಿಯ ಮದುವೆಯ ಫೋಟೋಗಳನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.
ಬಾಲಿವುಡ್ ನಟ ರಣಬೀರ್ ಕಪೂರ್ ಬಳಿಕ ಈಗಾಗಲೇ ದುಬಾರಿ ಬೆಲೆಯ ಕಾರುಗಳ ಸಂಗ್ರಹವೇ ಇದೆ. ಇದೀಗ ನಟ 8 ಕೋಟಿ ಬೆಲೆಯ ಕಾರನ್ನು ಖರೀದಿಸಿ ಮತ್ತೆ ಸುದ್ದಿಯಾಗಿದ್ದಾರೆ. ಕಳೆದ ವರ್ಷ ನಟ ರಣಬೀರ್ ಕಫೂರ್ ನಟನೆಯ ‘ಅನಿಮಲ್’ ಸಿನಿಮಾ 900 ಕೋಟಿ ರೂಪಾಯಿ ಬಾಚಿಕೊಂಡಿದ್ದಷ್ಟೇ ತಡ ರಣಬೀರ್ ರೇಂಜ್ ಬದಲಾಗಿ ಹೋಗಿದೆ. ಒಂದು ಸಮಯದಲ್ಲಿ ಒಂದರ ಹಿಂದೊಂದು ಸೋಲುಗಳನ್ನು ಕಂಡಿದ್ದ ನಟನಿಗೆ ಇದೀಗ ಶುಕ್ರದೆಸೆ ಶುರುವಾಗಿದ್ದು ಬಾಲಿವುಡ್ ನಲ್ಲಿ ಸಖತ್ ಡಿಮ್ಯಾಂಡ್ ಕ್ರಿಯೇಟ್ ಮಾಡಿದ್ದಾರೆ. ಸದ್ಯ ರಾಮಾಯಣ ಸಿನಿಮಾದ ಕೆಲಸದಲ್ಲಿ ತೊಡಗಿಕೊಂಡಿರುವ ನಟ ರಣಬೀರ್ ಇದೀಗ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಕಾರನ್ನು ಖರೀದಿಸಿದ್ದಾರೆ. ರಣ್‌ಬೀರ್ ಕಪೂರ್ ಖರೀದಿಸಿದ ಕಾರು ಇಷ್ಟೊಂದು ಚರ್ಚೆಯಾಗುವುದಕ್ಕೆ ಕಾರಣ ಆ ಕಾರಿನ ಬೆಲೆ. ಬೆಂಟ್ಲಿ ಕಾಂಟಿನೆಂಟಲ್ ಜಿಟಿ ವಿ8 ಕಾರಿನ ಬೆಲೆ ಬರೋಬ್ಬರಿ 8 ಕೋಟಿ ರೂಪಾಯಿ. ಬೆಂಟ್ಲಿ ತಯಾರಿಸುವ ಕಾರುಗಳಲ್ಲೇ ಇದು ಅತೀ ದುಬಾರಿ ಎಂದು ಹೇಳಲಾಗುತ್ತಿದೆ. ರಣ್‌ಬೀರ್ ಕಪೂರ್ ಈ ಕಾರಿನಲ್ಲಿ ಪ್ರಯಾಣ ಮಾಡುತ್ತಿರುವ…
ಬಿಗ್ ಬಾಸ್ ಸ್ಪರ್ಧಿ, ಸೋಷಿಯಲ್ ಮೀಡಿಯಾದಲ್ಲಿ ಖ್ಯಾತಿ ಘಳಿಸಿದ್ದ ಸೋನು ಶ್ರೀನಿವಾಸ್ ಗೌಡ ಅಕ್ರಮವಾಗಿ ಮಗು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ತಂದೆ ತಾಯಿಯನ್ನು ಕೌನ್ಸಿಲಿಂಗ್ ಗೆ ಒಳಪಡಿಸಲು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮುಂದಾಗಿದೆ. ಕೌನ್ಸಿಲಿಂಗ್‌ನಲ್ಲಿ ಹಲವು ಅಂಶಗಳನ್ನು ಚರ್ಚಿಸಲಿದ್ದು, ತಂದೆ ತಾಯಿ ತಪ್ಪು ಮಾಡಿದ್ದರೆ ಕ್ರಮ, ಇಲ್ಲವಾದಲ್ಲಿ ತಂದೆ ತಾಯಿಗೆ ಮಗುವನ್ನ ವಾಪಸ್ ಕೊಡಿಸಲು ರಕ್ಷಣಾ ಆಯೋಗ ಮುಂದಾಗಿದೆ. ಮಗುವನ್ನು ಅಕ್ರಮವಾಗಿ ದತ್ತು ಪಡೆದ ಪ್ರಕರಣದಲ್ಲಿ ಸೋನು ಶ್ರೀನಿವಾಸ್ ಗೌಡ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಮಧ್ಯೆ ಮಗುವಿನ ತಂದೆ ತಾಯಿಯನ್ನು ಕೌನ್ಸಿಲಿಂಗ್ ಮಾಡಲು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗ ಮುಂದಾಗಿದೆ. ಮಗುವನ್ನು ಸೋನು ಶ್ರೀನಿವಾಸ್ ಗೌಡ ಕರೆದುಕೊಂಡು ಹೋದ ಮೇಲೆ ಪೋಷಕರು ಯಾಕೆ ದೂರು ನೀಡಲಿಲ್ಲ? ಅವರಿಂದ ಆಮಿಷಕ್ಕೆ ಒಳಗಾಗಿದ್ರಾ ಎಂಬ ಆಯಾಮದಲ್ಲಿ ಕೌನ್ಸಿಲಿಂಗ್ ಮಾಡಿ ಮಗುವನ್ನು ರಕ್ಷಣೆ ಮಾಡೋಕೆ ಮುಂದಾಗಿದ್ದಾರೆ. ಸದ್ಯ ಮಗು ಬಾಲಿಕ ಆಶ್ರಮದಲ್ಲಿ ಮಕ್ಕಳ ಕಲ್ಯಾಣ ಸಮಿತಿ ನಿಗಾದಲ್ಲಿದೆ. ದತ್ತು ಪಡೆಯುವಾಗ…
ನಟಿ ಪೂಜಾ ಹೆಗ್ಡೆ ಟಾಲಿವುಡ್ ಚಿತ್ರರಂಗಕ್ಕೆ ಮತ್ತೆ ಮರಳಿದ್ದಾರೆ. ಬಾಲಿವುಡ್ ಗೆ ಹೋಗಿದ್ದ ಪೂಜಾ ಹೆಗ್ಡೆ ಅಲ್ಲಿ ಸಕ್ಸಸ್ ಕಾಣದ ಕಾರಣ ಮತ್ತೆ ಟಾಲಿವುಡ್ ಚಿತ್ರರಂಗಕ್ಕೆ ಮರಳಿದ್ದ ನಟಿ ನಾಗಚೈತನ್ಯ ಜೊತೆ ಡ್ಯೂಯೆಟ್ ಹಾಡಲಿದ್ದಾರೆ. ಸಿನಿಮಾ ಕೆರಿಯರ್ ಶುರು ಮಾಡಿದ ನಟನ ಜೊತೆಯೇ ಪೂಜಾ ಹೆಗ್ಡೆ ರೊಮ್ಯಾನ್ಸ್ ಮಾಡೋಕೆ ಮುಂದಾಗಿದ್ದಾರೆ. ಈ ಹಿಂದೆ ತೆರೆಕಂಡಿದ್ದ ‘ಒಕಾ ಲೈಲಾ ಕೋಸಂ’ ಚಿತ್ರದಲ್ಲಿ ನಾಗಚೈತನ್ಯಗೆ ಜೋಡಿಯಾಗುವ ಮೂಲಕ ಪೂಜಾ ಹೆಗ್ಡೆ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಇದೀಗ 10 ವರ್ಷಗಳ ನಂತರ ನಾಗಚೈತನ್ಯ ನಟನೆಯ ಹೊಸ ಚಿತ್ರಕ್ಕೆ ಪೂಜಾ ಹೆಗ್ಡೆ ನಾಯಕಿಯಾಗಿದ್ದಾರೆ. ‘ವಿರೂಪಾಕ್ಷ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ನಿರ್ದೇಶಕ ಕಾರ್ತಿಕ್ ವರ್ಮಾ ದಂಡು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಆ್ಯಕ್ಷನ್ ಜೊತೆ ಲವ್ ಸ್ಟೋರಿ ಸಿನಿಮಾ ತೋರಿಸೋಕೆ ನಿರ್ದೇಶಕರು ಮುಂದಾಗಿದ್ದು, ಸದ್ಯದಲ್ಲೇ ಸಿನಿಮಾ ಶೂಟಿಂಗ್ ಶುರುವಾಗಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡಲು ಯೋಚಿಸಿದ್ದಾರೆ.
ನೈಟ್ ಕ್ಲಬ್ ನವೀಕರಣದ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಪರಿಣಾಮ 25 ಮಂದಿ ಸಜೀವ ದಹನವಾಗಿ ಹಲವರು ಗಾಯಗೊಂಡಿರುವ ಘಟನೆ ಇಸ್ತಾಂಬುಲ್ ಸಂಭವಿಸಿದೆ. ಬೆಂಕಿಯಿಂದ ಕನಿಷ್ಠ ಎಂಟು ಜನರು ಗಾಯಗೊಂಡಿದ್ದು, ಅವರಲ್ಲಿ ಏಳು ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಅನಾಡೋಲು ಏಜೆನ್ಸಿ ವರದಿ ಮಾಡಿದೆ. ನವೀಕರಣಕ್ಕಾಗಿ ಮುಚ್ಚಲ್ಪಟ್ಟ ನೈಟ್ ಕ್ಲಬ್, ನಗರದ ಯುರೋಪಿಯನ್ ಬದಿಯಲ್ಲಿರುವ ಬೆಸಿಕ್ಟಾಸ್ ಜಿಲ್ಲೆಯ 16 ಅಂತಸ್ತಿನ ವಸತಿ ಕಟ್ಟಡದ ನೆಲ ಮಹಡಿಯಲ್ಲಿತ್ತು. ಇಸ್ತಾಂಬುಲ್ ಮೇಯರ್ ಎಕ್ರೆಮ್ ಇಮಾಮೊಗ್ಲು ಅವರು ಬೆಂಕಿಯನ್ನು ನಂದಿಸಲಾಗಿದೆ ಮತ್ತು ಗಾಯಗೊಂಡವರಿಗೆ ಹತ್ತಿರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು. ಘಟನೆಯ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ನಗರದ ರಾಜ್ಯಪಾಲರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ಸುರಕ್ಷತಾ ಮುನ್ನೆಚ್ಚರಿಕೆಯಾಗಿ ನೆರೆಹೊರೆಯವರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂಬ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಪೊಲೀಸರು ಪ್ರದೇಶವನ್ನು ನಿರ್ಬಂಧಿಸಿದ್ದು, ಕ್ಲಬ್‌ನ ವ್ಯವಸ್ಥಾಪಕರು ಸೇರಿದಂತೆ ಹಲವರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಬೆಂಕಿಯಲ್ಲಿ ಕನಿಷ್ಠ 29 ಜನರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬ…
ತೈವಾನ್ ನ ಕರಾವಳಿ ಪ್ರದೇಶದಲ್ಲಿ ಇಂದು ಬೆಳಗ್ಗೆ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು ಯಾವುದೇ ಸಾವು ನೋವುಗಳಾದ ಬಗ್ಗೆ ವರದಿಯಾಗಿಲ್ಲ. ರಾಜಧಾನಿ ತೈಪೆ ಸೇರಿದಂತೆ ಪೂರ್ವ ತೈವಾನ್‌ನ ಹಲವು ಭಾಗಗಳಲ್ಲಿ ಭೂಕಂಪನ ಸಂಭವಿಸಿದೆ. ಪೂರ್ವ ತೈವಾನ್, ತೈಪೆ, ಓಕಿನಾವಾ ಸೇರಿದಂತೆ ಹಲವಾರು ಪ್ರದೇಶಗಳ ಕಟ್ಟಡಗಳು ಕುಸಿದಿದ್ದು, ಯಾವುದೇ ಅನಾಹುತದ ಬಗ್ಗೆ ವರದಿಗಳು ಲಭ್ಯವಾಗಿಲ್ಲ. ಕಟ್ಟಡ ಕುಸಿದಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಭೂಮಿಯ ಮೇಲ್ಮೈಯಿಂದ ಸುಮಾರು 16 ಕಿ.ಮೀ ಆಳದಲ್ಲಿ ತೈಪೆಯ ಸಮೀಪ ಕಂಪನದ ಕೇಂದ್ರ ಬಿಂದು ದಾಖಲಾಗಿದೆ ಎಂದು ತೈವಾನ್ ಹವಮಾನ ಇಲಾಖೆ ವರದಿ ಮಾಡಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ದಕ್ಷಿಣ ಜಪಾನ್ ಮತ್ತು ಫಿಲಿಪೈನ್ಸ್ ದ್ವೀಪಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ.
ಬಿಗ್ ಬಾಸ್ ಸೀಸನ್ 10ರಲ್ಲಿ ಕಾಣಿಸಿಕೊಂಡಿದ್ದ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬುಲೆಟ್ ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಧ್ಯಾಯ ಶುರು ಮಾಡಲು ಸಜ್ಜಾಗಿದ್ದಾರೆ. ಬುಲೆಟ್ ಪ್ರಕಾಶ್ ಪುತ್ರ ಹೀರೋ ಆಗಿ ಬೆಳ್ಳಿಪರದೆಯಲ್ಲಿ ಮಿಂಚಲು ರೆಡಿಯಾಗಿದ್ದು, ಬುಲೆಟ್ ಪ್ರಕಾಶ್ ಅವರ 47ನೇ ವರ್ಷದ ಹುಟ್ಟುಹಬ್ಬದ ದಿನವೇ ರಕ್ಷಕ್ ತಮ್ಮ ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಎಲ್ಲಾ ನನ್ನ ಆತ್ಮೀಯರೇ, ಇಂದು (ಏ.2) ನನ್ನ ಪೂಜ್ಯ ತಂದೆ ದಿವಂಗತ ‘ಬುಲೆಟ್’ ಪ್ರಕಾಶ್ ಅವರ 47ನೇ ಜನ್ಮದಿನ. ಇಂದಿನ ವಿಶೇಷವೇನೆಂದರೆ, ನಾನು ನಾಯಕ ನಟನಾಗಿ ನಟಿಸುತ್ತಿರುವ ನನ್ನ ಚೊಚ್ಚಲ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುತ್ತಿರುವುದು. ನಿಜಕ್ಕೂ ನನಗೆ ಸಂತಸ ತಂದಿದೆ. ನನ್ನ ತಂದೆಯ ಆಶೀರ್ವಾದದೊಂದಿಗೆ ನಿಮ್ಮೆಲ್ಲರ ಆಶೀರ್ವಾದ ಕೂಡ ಸದಾ ನನ್ನ ಮೇಲಿರಲಿ ಎಂದು ಬಯಸುತ್ತೇನೆ. ನನಗೂ ಹಾಗೂ ನನ್ನ ಇಡೀ ಚಿತ್ರತಂಡಕ್ಕೂ ಹರಸಿ, ಹಾರೈಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ರಕ್ಷಕ್ ಬರೆದುಕೊಂಡಿದ್ದಾರೆ. ತಮ್ಮ ಮೊದಲ ಸಿನಿಮಾದ ಮೂಲಕ ರಕ್ಷಕ್ ಮಾಸ್ ಆಗಿ ಸ್ಯಾಂಡಲ್ ವುಡ್ ಗೆ…