Author: Author AIN

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ತನ್ನನ್ನು ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ ವಿರೋಧಿ ಮುಖಂಡ ನೆಲ್ಸನ್ ಮಂಡೇಲಾಗೆ ಹೋಲಿಸಿಕೊಂಡಿದ್ದಾರೆ. 77 ವರ್ಷದ ಟ್ರಂಪ್ ವಿರುದ್ಧ 4 ವಿಭಿನ್ನ ಕ್ರಿಮಿನಲ್ ಪ್ರಕರಣಗಳಲ್ಲಿ ದೋಷಾರೋಪಣೆ ಮಾಡಲಾಗಿದ್ದು ಈ ಪ್ರಕರಣಗಳಲ್ಲಿ ಟ್ರಂಪ್‍ಗೆ ಜೈಲುಶಿಕ್ಷೆಯಾಗುವ ಸಾಧ್ಯತೆಯಿದೆ. ಇದರಲ್ಲಿ ಅಶ್ಲೀಲ ಚಿತ್ರಗಳ ನಟಿಯ ಜತೆಗಿನ ಸಂಬಂಧವನ್ನು ಗುಟ್ಟಾಗಿ ಇಡಲು ಆಕೆಗೆ ಹಣ ಪಾವತಿಸಿದ ಪ್ರಕರಣವೂ ಸೇರಿದ್ದು ಇದರ ವಿಚಾರಣೆ ಎಪ್ರಿಲ್ 15ರಿಂದ ಆರಂಭವಾಗಲಿದೆ. ಈ ಪ್ರಕರಣದ ವಿಚಾರಣೆ ಮುಗಿಯುವವರೆಗೆ ಪ್ರಕರಣದ ಬಗ್ಗೆ ಸಾರ್ವಜನಿಕ ಹೇಳಿಕೆ ನೀಡದಂತೆ ಟ್ರಂಪ್‍ಗೆ ನ್ಯಾಯಾಧೀಶ ಜುವಾನ್ ಮರ್ಚನ್ ಸೂಚಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಟ್ರಂಪ್, ನ್ಯಾಯಾಧೀಶ ಮರ್ಚನ್ ಅವರು ಅಭಿವ್ಯಕ್ತಿ ಸ್ವಾತಂತ್ರ್ಯ, ವಾಕ್‍ಸ್ವಾತಂತ್ರ್ಯ ಮತ್ತು ಕಾನೂನನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ. `ಈ ಪಕ್ಷಪಾತದ ಅಧಿಕಾರಿ ಮುಕ್ತ ಮತ್ತು ಸ್ಪಷ್ಟವಾದ ಸತ್ಯವನ್ನು ಮಾತನಾಡಿದ್ದಕ್ಕೆ ನನ್ನನ್ನು ಜೈಲಿನಲ್ಲಿ ಇರಿಸಲು ಬಯಸಿದರೆ ನಾನು ಸಂತೋಷದಿಂದ ಆಧುನಿಕ ಯುಗದ ನೆಲ್ಸನ್ ಮಂಡೇಲಾ ಆಗುತ್ತೇನೆ. ಅದು ನನ್ನ ದೊಡ್ಡ…

Read More

ವಿದೇಶದ ಉನ್ನತ ಕೌಶಲ್ಯವುಳ್ಳ ವಿಜ್ಞಾನಿಗಳು, ಇಂಜಿನಿಯರ್‍ಗಳು, ವೈದ್ಯರು, ಕಲಾವಿದರು ಹಾಗೂ ತತ್ವಜ್ಞಾನಿಗಳಿಗೆ 5 ಸಾವಿರ ಉಚಿತ ಪಾಸ್‍ಪೋರ್ಟ್ ಒದಗಿಸುವುದಾಗಿ ಎಲ್‍ಸಾಲ್ವದಾರ್ ಅಧ್ಯಕ್ಷ ನಯೀಬ್ ಬುಕೆಲೆ ಘೋಷಿಸಿದ್ದಾರೆ. ನಾವು 5000 ಉಚಿತ ಪಾಸ್‍ಪೋರ್ಟ್‍ಗಳನ್ನು (ನಮ್ಮ ಪಾಸ್‍ಪೋರ್ಟ್ ಯೋಜನೆಯಲ್ಲಿ 5 ಶತಕೋಟಿ ಡಾಲರ್ ಗೆ ಸಮ) ಒದಗಿಸುತ್ತೇವೆ. ಫಲಾನುಭವಿಗಳಿಗೆ ಮತದಾನದ ಅಧಿಕಾರ ಸೇರಿದಂತೆ ಪೂರ್ಣಪ್ರಮಾಣದ ಪೌರತ್ವ ಸ್ಥಾನಮಾನ ನೀಡಲಾಗುವುದು. ಎಲ್‍ಸಾಲ್ವದಾರ್‍ನ ಉಜ್ವಲ ಭವಿಷ್ಯವನ್ನು ಖಾತರಿಪಡಿಸುವುದು ಈ ಉಚಿತ ಪಾಸ್‍ಪೋರ್ಟ್ ಯೋಜನೆಯ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ. ಪಾಸ್‍ಪೋರ್ಟ್ ಯೋಜನೆಯ ಫಲಾನುಭವಿಗಳು ತಮ್ಮ ಕುಟುಂಬ ಮತ್ತು ಆಸ್ತಿಗಳನ್ನು( ಸಾಫ್ಟ್‍ವೇರ್, ಬೌದ್ಧಿಕ ಆಸ್ತಿಗಳು) ಎಲ್‍ಸಾಲ್ವದಾರ್‍ಗೆ ಸ್ಥಳಾಂತರಗೊಳಿಸುವಾಗ ಯಾವುದೇ ತೆರಿಗೆ ಅಥವಾ ಸುಂಕಗಳನ್ನು ವಿಧಿಸುವುದಿಲ್ಲ ಎಂದು ನಯೀಬ್ ಬುಕೆಲೆ ತಿಳಿಸಿದ್ದಾರೆ.

Read More

ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ನಟನೆಯ ದಿ ಫ್ಯಾಮಿಲಿ ಸ್ಟಾರ್ ಸಿನಿಮಾ ಇತ್ತೀಚೆಗೆ ತೆರೆಕಂಡಿದೆ. ಆದರೆ ಅಂದುಕೊಂಡ ಮಟ್ಟಿಗೆ ಚಿತ್ರ ಓಪನಿಂಗ್ಸ್ ಪಡೆದುಕೊಂಡಿಲ್ಲ. ಇದೇ ಕಾರಣದಿಂದಾಗಿ ಚಿತ್ರಕ್ಕೆ ಸಾಕಷ್ಟು ಟ್ರೋಲಿಗರ ಕಾಟ ಶುರುವಾಗಿದೆ . ಟ್ರೋಲ್ ಮಾಡುವವರ ವಿರುದ್ಧ ದಿ ಫ್ಯಾಮಿಲಿ ಸ್ಟಾರ್ ಚಿತ್ರತಂಡ ತಿರುಗಿ ಬಿದ್ದಿದೆ. ಈ ಬಗ್ಗೆ ಸೈಬರ್​ ಪೊಲೀಸರಿಗೆ ದೂರು ನೀಡಲಾಗಿದೆ. ವಿಜಯ್​ ದೇವರಕೊಂಡ ಅವರನ್ನು ಒಂದು ವರ್ಗದ ನೆಟ್ಟಿಗರು ದ್ವೇಷಿಸುತ್ತಾರೆ. ಇದರಿಂದಾಗಿ ಅವರ ಸಿನಿಮಾಗೆ ಪೆಟ್ಟು ಬಿದ್ದಿದೆ. ‘ದಿ ಫ್ಯಾಮಿಲಿ ಸ್ಟಾರ್​’ ಸಿನಿಮಾವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಿಗ್ಗಾಮುಗ್ಗಾ ಟ್ರೋಲ್​ ಮಾಡಿದವರ ವಿರುದ್ಧ ಕಾನೂನಿನ ಮೂಲಕ ಹೋರಾಡಲು ಚಿತ್ರತಂಡ ನಿರ್ಧರಿಸಿದೆ. ವಿಜಯ್​ ದೇವರಕೊಂಡ ಅವರ ಮ್ಯಾನೇಜರ್​ ಹಾಗೂ ಅಭಿಮಾನಿ ಸಂಘದ ಅಧ್ಯಕ್ಷರು ಸೈಬರ್​ ಠಾಣೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ದೂರಿನ ಜೊತೆಗೆ ಅನೇಕ ಸಾಕ್ಷಿಗಳನ್ನು ನೀಡಲಾಗಿದೆ. ಟ್ರೋಲ್​ ಮಾಡಿದ ಸೋಶಿಯಲ್​ ಮೀಡಿಯಾ ಖಾತೆಗಳ ಸ್ಕ್ರೀನ್​ ಶಾಟ್​ಗಳನ್ನು ಪೊಲೀಸರಿಗೆ ನೀಡಲಾಗಿದೆ. ಬಾಕ್ಸ್​ ಆಫೀಸ್​ನಲ್ಲಿ ‘ದಿ ಫ್ಯಾಮಿಲಿ ಸ್ಟಾರ್’ ಸಿನಿಮಾ ನಿರೀಕ್ಷಿತ…

Read More

ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್​ ನಿರ್ಮಾಣದ ‘ಲವ್​ ಸೆ*ಕ್ಸ್​ ಔರ್​ ದೋಖಾ 2’ ಸಿನಿಮಾ ಏಪ್ರಿಲ್​ 19ರಂದು ಬಿಡುಗಡೆ ಆಗಲಿದೆ. ಈ ಸಿನಿಮಾದ ಮೇಕಿಂಗ್​ ವಿಡಿಯೋವೊಂದನ್ನು ನಿರ್ಮಾಪಕರು ಶೇರ್ ಮಾಡಿದ್ದು ಚಿತ್ರದ ಪ್ರಮುಖ ಪಾತ್ರದಲ್ಲಿ ಓರ್ವ ತೃತೀಯ ಲಿಂಗಿ ಕಾಣಿಸಿಕೊಂಡಿದ್ದಾರೆ. ಲವ್ ಸೆಕ್ಸ್ ಔರ್ ದೋಖಾ 2 ಚಿತ್ರದಲ್ಲಿ ಬೋನಿತಾ ರಾಜ್​​​ಪುರೋಹಿತ್​ ಎನ್ನುವ ತೃತೀಯಲಿಂಗಿಗೆ ಅವಕಾಶ ನೀಡಲಾಗಿದೆ. ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ಇದು ಮಹತ್ವದ ಸಂಗತಿಯಾಗಿದೆ. 2010ರಲ್ಲಿ ಬಿಡುಗಡೆ ಆಗಿದ್ದ ‘ಲವ್​ ಸೆ*ಕ್ಸ್​ ಔರ್​ ದೋಖಾ’ ಸಿನಿಮಾದಲ್ಲೂ ನಿರ್ಮಾಪಕಿ ಏಕ್ತಾ ಕಪೂರ್​ ಅನೇಕ ಹೊಸಬರಿಗೆ ಅವಕಾಶ ನೀಡಿದ್ದರು. ಇದೀಗ ಪಾರ್ಟ್​ 2 ನಲ್ಲಿ ಬೋನಿತಾ ರಾಜ್​ಪುರೋಹಿತ್​ ಅವರಿಗೆ ಅವಕಾಶ ನೀಡಲಾಗಿದೆ. ತೃತೀಯಲಿಂಗಿಯನ್ನು ಮುಖ್ಯ ಪಾತ್ರದಲ್ಲಿ ಲಾಂಚ್​ ಮಾಡುತ್ತಿರುವ ಮೊದಲ ನಿರ್ಮಾಪಕಿ ಎಂಬ ಖ್ಯಾತಿಗೆ ಏಕ್ತಾ ಕಪೂರ್​ ಪಾತ್ರರಾಗುತ್ತಿದ್ದಾರೆ. ‘ಲವ್​ ಸೆ*ಕ್ಸ್​ ಔರ್​ ದೋಖಾ 2’ ಸಿನಿಮಾದಲ್ಲಿ ಬೋನಿತಾ ರಾಜ್​ಪುರೋಹಿತ್​ ಅವರು ಕುಲು ಎಂಬ ಪಾತ್ರ ಮಾಡುತ್ತಿದ್ದಾರೆ. ಅವರಿಗೆ ಅವಕಾಶ ಹೇಗೆ ಸಿಕ್ಕಿತು ಎಂಬುದನ್ನು ವಿವರಿಸುವ ವಿಡಿಯೋವನ್ನು…

Read More

ಕಳೆದ ಅಕ್ಟೋಬರ್ 7ರಂದು ಪ್ರಾರಂಭವಾದ ಇಸ್ರೇಲ್ ಮತ್ತು ಗಾಜಾ ನಡುವಿನ ಯುದ್ಧಕ್ಕೆ ಆರು ತಿಂಗಳು ಕಳೆದಿದೆ. ಘಟನೆಯಲ್ಲಿ ಇದುವರೆಗೂ 30 ಸಾವಿರಕ್ಕೂ ಅಧಿಕ ಸಾವುಗಳು ಸಂಭವಿಸಿವೆ. ಅಕ್ಟೋಬರ್ 7ರ ಹಮಾಸ್ ದಾಳಿಯಲ್ಲಿ ಇಸ್ರೇಲ್‍ನ ಸುಮಾರು 1,200 ಪ್ರಜೆಗಳು ಮೃತಪಟ್ಟಿದ್ದು ಹಮಾಸ್ 250ಕ್ಕೂ ಅಧಿಕ ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿದೆ ಎಂದು ಇಸ್ರೇಲ್ ಸೇನೆ ಹೇಳಿದೆ. ಗಾಜಾದ ಹಮಾಸ್ ಆರೋಗ್ಯ ಸಚಿವಾಲಯದ ಪ್ರಕಾರ, ಅಕ್ಟೋಬರ್ 7 ರ ಹಮಾಸ್ ದಾಳಿಗೆ ಇಸ್ರೇಲ್ ಪ್ಯಾಲೇಸ್ಟಿನಿಯನ್ ಭೂಪ್ರದೇಶದಲ್ಲಿ ಕನಿಷ್ಠ 33,175 ಜನರು ಸಾವನ್ನಪ್ಪಿದ್ದಾರೆ. ಈಜಿಪ್ಟ್ ಗಡಿಭಾಗದ ಸನಿಹದಲ್ಲಿರುವ ರಫಾ ನಗರದಲ್ಲಿ 1 ದಶಲಕ್ಷಕ್ಕೂ ಅಧಿಕ ಫೆಲೆಸ್ತೀನೀಯರು ಆಶ್ರಯ ಪಡೆದಿದ್ದು ಇದೀಗ ಈ ನಗರದ ಮೇಲೆ ದಾಳಿ ನಡೆಸಲು ಇಸ್ರೇಲ್ ಸಿದ್ಧತೆ ನಡೆಸುತ್ತಿರುವುದಾಗಿ ವರದಿಯಾಗಿದೆ. ದಕ್ಷಿಣ ಇಸ್ರೇಲಿನಲ್ಲಿ ಹಮಾಸ್ ದಾಳಿಯು 1,170 ಇಸ್ರೇಲಿಗಳು ಮತ್ತು ವಿದೇಶಿಯರನ್ನು ಕೊಂದಿತು, ಅವರಲ್ಲಿ ಹೆಚ್ಚಿನವರು ನಾಗರಿಕರು, ಅಧಿಕೃತ ಇಸ್ರೇಲ್ ಪ್ರದೇಶದವರು ಎಂದು ತಿಳಿದು ಬಂದಿದೆ. ಗಾಝಾದಲ್ಲಿ 6 ತಿಂಗಳಿಂದ ಮುಂದುವರಿದಿರುವ ಸಂಘರ್ಷವು ಇಸ್ರೇಲ್‍ನ…

Read More

ಇಸ್ರೇಲ್‍ನ ಯಾವುದೇ ದೂತಾವಾಸಗಳು ಇನ್ನು ಮುಂದೆ ಸುರಕ್ಷಿತವಾಗಿರುವುದಿಲ್ಲ ಎಂದು ಇರಾನ್‍ನ ಉನ್ನತ ರಕ್ಷಣಾ ಸಲಹೆಗಾರ ರಹೀಮ್ ಸಫಾವಿ ಎಚ್ಚರಿಕೆ ನೀಡಿದ್ದಾರೆ. ಕಳೆದ ವಾರ ದಮಾಸ್ಕಸ್‍ನಲ್ಲಿ ಇರಾನ್ ದೂತಾವಾಸದ ಮೇಲೆ ನಡೆದ ದಾಳಿಯಲ್ಲಿ ಇರಾನ್ ರೆವೊಲ್ಯುಷನರಿ ಗಾಡ್ರ್ಸ್‍ನ ಉನ್ನತ ಕಮಾಂಡರ್‍ಗಳ ಸಹಿತ 12 ಮಂದಿ ಸಾವನ್ನಪ್ಪಿದ್ದರು. ಈ ದಾಳಿಯನ್ನು ಇಸ್ರೇಲ್ ನಡೆಸಿದೆ ಎಂದು ದೂಷಿಸಿರುವ ಇರಾನ್, ಇದಕ್ಕೆ ಪ್ರತೀಕಾರ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿತ್ತು. ನಮಗೆ ಯಾರೆಲ್ಲಾ ಹಾನಿ ಮಾಡುತ್ತಾರೋ ಅಥವಾ ಹಾನಿ ಮಾಡಲು ಪ್ರಯತ್ನಿಸುತ್ತಾರೋ ಅವರಿಗೆ ನಾವು ಹಾನಿ ಮಾಡುತ್ತೇವೆ. ಈ ಸಿದ್ಧಾಂತವನ್ನು ನಾವು ಸದಾಕಾಲ ಪಾಲಿಸುತ್ತಿದ್ದೇವೆ’ ಎಂದು ರಹೀಮ್ ಸಫಾವಿ ಹೇಳಿದ್ದಾರೆ. ಭಾನುವಾರ ರವಿವಾರ ಟೆಹ್ರಾನ್‍ನಲ್ಲಿ ನಡೆದ ಸಂಪುಟ ಸಭೆಯಲ್ಲಿ ಅವರು ಮಾತನಾಡಿದರು. ಇರಾನ್‍ನ ಪರಮೋಚ್ಛ ಮುಖಂಡ ಅಯತೊಲ್ಲ ಆಲಿ ಖಾಮಿನೈ ಅವರ ಮಿಲಿಟರಿ ಸಲಹೆಗಾರರಾಗಿರುವ ಸಫಾವಿ ಅವರ ಹೇಳಿಕೆಯು `ಇರಾನ್‍ನ ದೂತಾವಾಸಕ್ಕೆ ನಡೆದ ದಾಳಿಗೆ ಅದೇ ರೀತಿಯಲ್ಲಿ ಉತ್ತರಿಸುವ’ ಸೂಚನೆಯನ್ನು ನೀಡಿದೆ ಎಂದು ವಿಶ್ಲೇಷಿಸಲಾಗಿದೆ. ಈ ಮಧ್ಯೆ, ಗಾಝಾದ…

Read More

ಬಾಲಿವುಡ್ ನಟಿ ಕಂಗನಾ ರಣಾವತ್​ ಗೆ ಭಾರತೀಯ ಜನತಾ ಪಾರ್ಟಿ ಲೋಕಸಭಾ ಚುನಾವಣಾ ಟಿಕೆಟ್ ನೀಡಿದೆ. ಮಂಡಿ ಕ್ಷೇತ್ರದಿಂದ ಕಣಕ್ಕಿಳಿಯುತ್ತಿರುವ ಕಂಗನಾ ಈಗಾಗಲೇ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಿಸಿಕೊಂಡಿದ್ದಾರೆ. ಈ ಮಧ್ಯೆ ಕಂಗನಾ ಖಾಸಗಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನವೊಂದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ನಟಿ ಕಂಗನಾ ರಣಾವತ್ ಅವರು ಸಂದರ್ಶನವೊಂದರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರನ್ನು ಭಾರತದ ಮೊದಲ ಪ್ರಧಾನಿ ಎಂದು ಹೇಳಿದ್ದಾರೆ. ಈ ಹೇಳಿಕೆಯೇ ಸದ್ಯ ವೈರಲ್ ಆಗಿದೆ. ಕಂಗನಾ ರಣಾವತ್​​ರ ಪ್ರಕಾರ ‘ಭಾರತಕ್ಕೆ 2014 ರಲ್ಲಿ ಸ್ವಾತಂತ್ರ್ಯ ಸಿಕ್ಕಿತು. ನೇತಾಜಿ ಸುಭಾಷ್ ಚಂದ್ರ ಬೋಸ್ ಸ್ವತಂತ್ರ ಭಾರತದ ಮೊದಲ ಪ್ರಧಾನಿ ಆಗಿದ್ದರು. ಸರ್ದಾರ್ ಪಟೇಲ್ ಅವರಿಗೆ ಇಂಗ್ಲಿಷ್ ಮಾತನಾಡಲು ಬಾರದ ಕಾರಣ ಅವರು ಪ್ರಧಾನಿ ಆಗಲಿಲ್ಲ’ ಎಂದು ಹೇಳಿದ್ದಾರೆ. ಭಾರತದ ಮೊದಲ ಪ್ರಧಾನ ಮಂತ್ರಿ ಹೇಳಿಕೆ ನೀಡಿದ ಬಳಿಕ ಕಂಗನಾ ರಣಾವತ್ ಅವರನ್ನು ಸಾಕಷ್ಟು ಟ್ರೋಲ್ ಮಾಡಲಾಗುತ್ತಿದೆ. ಹಲವಾರು ನೆಟಿಗರು ಕಮೆಂಟ್ ಮಾಡುವ ಮೂಲಕ ಕಂಗನಾ ರಣಾವತ್…

Read More

ಚೀನಾದ ದಕ್ಷಿಣ ಕ್ಸಿನ್‌ ಜಿಯಾಂಗ್‌ನಲ್ಲಿ ಭಾನುವಾರ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.5 ತೀವ್ರತೆಯ ಭೂಕಂಪ ದಾಖಲಾಗಿದೆ ಎಂದು ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರ ಮಾಹಿತಿ ನೀಡಿದೆ. ಭೂಮಿಯ ಮೇಲ್ಮೈಯಿಂದ 24 ಕಿ.ಮೀ (14.91 ಮೈಲುಗಳು) ಆಳದಲ್ಲಿ ಭೂಮಿ ಕಂಪಿಸಿದೆ ಎಂದು ಇಎಂಎಸ್‌ಸಿ ತಿಳಿಸಿದೆ.

Read More

ಹಜ್ ಯಾತ್ರೆಗೆ ತೆರಳಿದ್ದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಒಂದೇ ಕುಟುಂಬದ ಮೂವರು ಅಪಘಾತದಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಮುಂಡಗೋಡ ಫಯಾಜ್ ರೋಣ, ಪತ್ನಿ ಆಫ್ರಿನಾ ಬಾನು, ಅಣ್ಣನ ಮಗ ಆಯಾನ್ ರೋಣ ಹಜ್ ಯಾತ್ರೆಗೆಂದು ಮಾ.26ರಂದು ಮಕ್ಕಾ ಮದೀನಾಕ್ಕೆ ತೆರಳಿದ್ದರು. ಏ.6ರ ರಾತ್ರಿ ಮಕ್ಕಾ ಮದೀನಾ ಸಮೀಪ ಸಂಭವಿಸಿದ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಮಕ್ಕಳು ಹಾಗೂ ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ.

Read More

ನಟ ಧ್ರುವ ಸರ್ಜಾ ದಂಪತಿ ಮಕ್ಕಳಿಗೆ ಪಂಚಮುಡಿ ಶಾಸ್ತ್ರ ಮಾಡಿಸಲು ನಂಜನಗೂಡು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಮನೆದೇವರಿಗೆ ಮಕ್ಕಳ ಮೊದಲ ಮುಡಿ ಕೊಡುವ ಶಾಸ್ತ್ರ ಮಾಡಿದ್ದಾರೆ ಧ್ರುವ ಸರ್ಜಾ ದಂಪತಿ. ರುದ್ರಾಕ್ಷಿ ಹಾಗೂ ಹಯಗ್ರೀವನ ಪಂಚಮುಡಿ ಶಾಸ್ತ್ರ ಮಾಡಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಧ್ರುವ ಸರ್ಜಾ ಕಳೆದ ಜನವರಿಯಲ್ಲಿ ತಮ್ಮಿಬ್ಬರು ಮಕ್ಕಳಿಗೆ ನಾಮಕರಣ ಮಾಡಿದ್ದರು. ಪುತ್ರಿಗೆ ರುದ್ರಾಕ್ಷಿ ಪುತ್ರನಿಗೆ ಹಯಗ್ರೀವ ಎಂದು ಹೆಸರಿಟ್ಟಿದ್ದರು. ಇದೀಗ ಇಬ್ಬರೂ ಮಕ್ಕಳಿಗೆ ಒಟ್ಟಿಗೆ ಮುಡಿ ಕೊಡಿಸಿದ್ದಾರೆ. ನಂಜನಗೂಡು ಶ್ರೀಕಂಠೇಶ್ವರ ಧ್ರುವ ಸರ್ಜಾರ ಮನೆ ದೇವರು. ಹೀಗಾಗಿ ಮಕ್ಕಳ ಪ್ರಥಮ ಮುಡಿ ಮನೆದೇವರಿಗೆ ಅರ್ಪಿಸಿದ್ದಾರೆ. ರುದ್ರಾಕ್ಷಿ ಹಯಗ್ರೀವನಿಗೆ ಒಟ್ಟಿಗೆ ಮುಡಿ ಕೊಡುವ ಶಾಸ್ತ್ರ ಮಾಡಿಸಿದ್ದಾರೆ. ಈ ವೇಳೆ ಧ್ರುವ ಸರ್ಜಾರನ್ನು ನೋಡಲು ಸಾಕಷ್ಟು ಮಂದಿ ಆಗಮಿಸಿದ್ದರು.

Read More