Author: Author AIN

ಬಾಲಿವುಡ್ ಬ್ಯೂಟಿ ನೋರಾ ಫತೇಹಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಐಟಂ ಡ್ಯಾನ್ಸ್‌ಗಳ ಮೂಲಕ ಮೋಡಿ ಮಾಡಿರುವ ನಟಿ ಇದೀಗ ಸಂದರ್ಶನವೊಂದರಲ್ಲಿ ಬಾಲಿವುಡ್ ನ ಕರಾಳ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಸೆಲೆಬ್ರಿಟಿಗಳು ಲಾಭಕ್ಕಾಗಿ ಮದುವೆಯಾಗ್ತಾರೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಫೇಮಸ್ ಇರುವ ತಮ್ಮ ಹೆಂಡತಿ ಅಥವಾ ಗಂಡನ ಹೆಸರನ್ನು ಈ ಜನರು ಬಳಸಿಕೊಳ್ಳುತ್ತಾರೆ. ಅದರಿಂದ ಚಿತ್ರರಂಗದಲ್ಲಿ ಸಂಪರ್ಕ ಹೆಚ್ಚಿಸಿಕೊಳ್ಳುತ್ತಾರೆ. ಹಣ ಗಳಿಸಲು ಮತ್ತು ಚಾಲ್ತಿಯಲ್ಲಿ ಇರಲು ಮದುವೆ ಆಗುತ್ತಾರೆ. ಆ ವ್ಯಕ್ತಿಯನ್ನು ಮದುವೆ ಆದರೆ ಮುಂದಿನ 3 ವರ್ಷಗಳ ಕಾಲ ತಾನು ಸುದ್ದಿಯಲ್ಲಿ ಇರಬಹುದು ಎಂಬುದು ಅವರ ಲೆಕ್ಕಚಾರ. ಯಾಕೆಂದರೆ, ಆ ವ್ಯಕ್ತಿಯ ಬಳಿ ಸಿನಿಮಾಗಳು ಇವೆ. ಆ ಸಿನಿಮಾ ಸೂಪರ್ ಹಿಟ್ ಆಗಲಿದೆ. ಆ ಅಲೆಯಲ್ಲಿ ಫೇಮಸ್‌ ಆಗಬಹುದು ಎಂಬ ಲೆಕ್ಕಾಚಾರ ಆಗಿರುತ್ತದೆ ಎಂದು ನೋರಾ ಹೇಳಿದ್ದಾರೆ. ದುಡ್ಡಿಗಾಗಿ ಇದನ್ನೆಲ್ಲ ಮಾಡುತ್ತಾರೆ. ಹಣಕ್ಕಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಇಷ್ಟವೇ ಇಲ್ಲದ ವ್ಯಕ್ತಿಯನ್ನು ಮದುವೆ ಆಗಿ ಜೀವನ ಮಾಡುವುದಕ್ಕಿಂತ ಕೆಟ್ಟದ್ದು…

Read More

ಬಾಲಿವುಡ್ ನಟಿ ಅಂಕಿತಾ ಲೋಖಂಡೆ ಬಿಗ್ ಬಾಸ್ ಮನೆಗೆ ಹೋಗಿ ಬಂದ ಬಳಿಕ ಬೇಡಿಕೆ ಹೆಚ್ಚಾಗಿದೆ. ಜೋಡಿಯಾಗಿ ದೊಡ್ಮನೆಗೆ ಹೋಗಿ ಬಂದ ಅಂಕಿತಾ ಹಾಗೂ ವಿಕ್ಕಿ ಜೈನ್‌ಗೆ ಅಪಾರ ಅಭಿಮಾನಿಗಳಿದ್ದಾರೆ. ಸದ್ಯ ಮದುವೆಯಾಗಿ 6 ವರ್ಷ ಪೂರೈಸಿದ ಖುಷಿಯಲ್ಲಿರುವ ಅಂಕಿತಾ ದಂಪತಿ ಬೆಡ್‌ರೂಮ್ ಫೋಟೋ ಶೇರ್ ಮಾಡಿದ್ದಾರೆ. ಅಂಕಿತಾ ಮತ್ತು ವಿಕ್ಕಿ ಜೈನ್ ಇತ್ತೀಚೆಗೆ ತಮ್ಮ 6ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದಾರೆ. ತಮ್ಮ ಮದುವೆಯ ದಿನವನ್ನು ಕೇಕ್ ಕತ್ತರಿಸಿ ವಿಶೇಷವಾಗಿ ಸೆಲೆಬ್ರೇಟ್ ಮಾಡಿರುವ ಜೋಡಿ ವೈಟ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಮೊದಲ ರಾತ್ರಿಗೆ ಬೆಡ್ ಸಿಂಗಾರ ಮಾಡುವ ಹಾಗೆಯೇ ಈಗಲೂ ಮಾಡಿದ್ದಾರೆ. ಇಬ್ಬರೂ ಖುಷಿಯಿಂದ ಕುಳಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ವರ್ಷದ ಬಿಗ್ ಬಾಸ್ ಸೀಸನ್ 17ರಲ್ಲಿ ವಿಕ್ಕಿ ಜೈನ್ ಅವರು ಅಂಕಿತಾ ಲೋಖಂಡೆ ಜೊತೆ ಜೋಡಿಯಾಗಿ ಎಂಟ್ರಿ ಕೊಟ್ಟಿದ್ದರು. ಮನೆ ಜಗಳ ಬಿಗ್ ಬಾಸ್ ಮನೆಯಲ್ಲೂ ತಾರಕಕ್ಕೇರಿತ್ತು. ಇಬ್ಬರ ಜಗಳ ದೊಡ್ಮನೆಯಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಈಗ ಮುನಿಸು ಮರೆತು…

Read More

ಇಸ್ರೇಲ್ ದಾಳಿಗೆ ಹಮಾಸ್ ನಾಯಕನ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಇಸ್ಮೈಲ್ ಹನಿಯೆಹ್ ಎಂಬಾತನ ಮಕ್ಕಳು ಸೇನಾ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಐಡಿಎಫ್ ತಿಳಿಸಿದೆ. ಅಮಿರ್ ಹನಿಯೆಹ್ (ಹಮಾಸ್ ನ ಸೆಲ್ ಕಮಾಂಡರ್) ಮೊಹಮ್ಮದ್ ಹಾಗೂ ಹಜೀಮ್ ಹನಿಯೆಹ್ ಇಸ್ರೇಲ್ ದಾಳಿಯಲ್ಲಿ ಮೃತಪಟ್ಟವರಾಗಿದ್ದಾರೆ. ಹನಿಯೆಹ್ ನ ನಾಲ್ವರು ಮೊಮ್ಮಕ್ಕಳೂ ಸಹ ಈ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಐಡಿಎಫ್ ಹೇಳಿದೆ. ಇಸ್ರೇಲ್ ರಕ್ಷಣಾ ಪಡೆ ಈದ್ ನ ಮೊದಲ ದಿನದಂದು ಶತಿ ನಿರಾಶ್ರಿತರ ಕ್ಯಾಂಪ್ ಮೇಲೆ ಸೇನಾ ದಾಳಿ ನಡೆಸಿತ್ತು. ಏತನ್ಮಧ್ಯೆ, ಇಸ್ರೇಲಿ ಸೈನ್ಯದಿಂದ ತಮ್ಮ ಕುಟುಂಬಗಳನ್ನು ಗುರಿಯಾಗಿಸಿಕೊಂಡರೆ ಪ್ಯಾಲೆಸ್ತೀನ್ ನಾಯಕರು ಹಿಂದೆ ಸರಿಯುವುದಿಲ್ಲ ಮತ್ತು ಕದನ ವಿರಾಮದ ಮಾತುಕತೆಗಳಲ್ಲಿ ಹಮಾಸ್‌ನ ಬೇಡಿಕೆಗಳ ಮೇಲೆ ಹತ್ಯೆಗಳು ಪರಿಣಾಮ ಬೀರುವುದಿಲ್ಲ ಎಂದು ಹನಿಯೆಹ್ ಅಲ್ ಜಜೀರಾ ಮಾಧ್ಯಮಕ್ಕೆ ತಿಳಿಸಿದ್ದಾರೆ. ಅಲ್ ಜಜೀರಾಗೆ ನೀಡಿದ ಸಂದರ್ಶನದಲ್ಲಿ, ಹನಿಯೆಹ್ ತನ್ನ ಮಕ್ಕಳಾದ ಹಝೆಮ್, ಅಮೀರ್ ಮತ್ತು ಮೊಹಮ್ಮದ್ ಮತ್ತು ತನ್ನ ಹಲವಾರು ಮೊಮ್ಮಕ್ಕಳನ್ನು ಬುಧವಾರ ಕೊಂದಿದ್ದಾರೆ ಎಂದು ದೃಢಪಡಿಸಿದ್ದಾರೆ.

Read More

ಭೀಕರ ರಸ್ತೆ ಅಪಘಾತದಲ್ಲಿ ಬೈಕ್​​ನಲ್ಲಿ ಸಂಚರಿಸುತ್ತಿದ್ದ 19 ವರ್ಷದ ಯುವಕನ ಕಣ್ಣಿನೊಳಗೆ ಬೈಕ್ ನ ಹ್ಯಾಂಡಲ್ ನುಗ್ಗಿದ ಘಟನೆ ಮಲೇಷ್ಯಾದ ಕೌಲಾಲಂಪುರ್‌ ನಲ್ಲಿ ನಡೆದಿದೆ. ಅಪಘಾತ ನಡೆದ ತಕ್ಷಣ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ವೈದ್ಯರ ಸಮಯ ಪ್ರಜ್ಷೆಯಿಂದ ಯುವಕ ಯಾವುದೇ ದೃಷ್ಟಿ ದೋಷದ ಸಮಸ್ಯೆಯಿಲ್ಲದೇ ಚೇತರಿಸಿಕೊಳ್ಳುತ್ತಿದ್ದಾನೆ. ಯುವಕನನ್ನು ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆ ವೈದ್ಯರು ಯುವಕನನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿದ್ದು, ಕಣ್ಣಿನ ಒಳಗೆ ನುಗ್ಗಿದ ಬೈಕ್‌ನ ಬ್ರೇಕ್ ಹ್ಯಾಂಡಲ್​​ ಅನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಸಿಟಿ ಸ್ಕ್ಯಾನ್‌ ಮಾಡಲಾಗಿದ್ದು, ಈವೇಳೆ ಕಣ್ಣಿನ ಗುಡ್ಡೆಗಿಂತ ಕೆಲವೇ ಕೆಲವು ಮಿಲಿ ಮೀಟರ್​​ ಅಂತದಲ್ಲಿ ಬ್ರೇಕ್ ಹ್ಯಾಂಡಲ್ ಸಿಲುಕಿರುವುದು ಕಂಡುಬಂದಿದ್ದು, ಸದ್ಯ ಕಣ್ಣಿನ ಗುಡ್ಡೆಗೆ ಯಾವುದೇ ಹಾನಿಯಾಗಿಲ್ಲ. ಕಣ್ಣುಗುಡ್ಡೆಯ ಕೆಳಗೆ ಭಾಗ ಹಾಗೂ ಮೂಗಿನ ಸುತ್ತಲಿನ ಮೂಳೆಗೆ ಹಾನಿಯಾಗಿದ್ದು, ಮೂಗಿನ ಸುತ್ತಲಿನ ಹಾನಿಗೊಳಗಾದ ಮೂಳೆಯನ್ನು ಎರಡು ಸ್ಕ್ರೂಗಳಿಂದ ಸರಿಪಡಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕೌಲಾಲಂಪುರ್‌ನಲ್ಲಿರುವ ಯೂನಿವರ್ಸಿಟಿಯ ಕಣ್ಣಿನ ಸಂಶೋಧನಾ ಕೇಂದ್ರದಲ್ಲಿ ಆತನ ಕಣ್ಣಿನ ಒಳಗೆ ನುಗ್ಗಿದ್ದ ಬೈಕ್‌ನ ಬ್ರೇಕ್ ಹ್ಯಾಂಡಲ್​​ನ ಸಿಟಿ…

Read More

ಬ್ರಿಟನ್ ಪ್ರಧಾನಿ ರಿಷಿ ಸುನಕ್ ತಮ್ಮ ಅಧಿಕೃತ ನಿವಾಸದಲ್ಲಿ ಸಂದರ್ಶನ ನೀಡಲು ಅಡಿದಾಸ್ ಸಂಬಾ ಟ್ರೈನರ್ಸ್ ಶೂ ಧರಿಸಿದ್ದು ಈಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ತಾವು ಅಡಿದಾಸ್ ಬ್ರಾಂಡ್ ನ್ನು ದೀರ್ಘಾವಧಿಯಿಂದ ಇಷ್ಟಪಡುತ್ತಿರುವುದಾಗಿ ಸುನಕ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದು ಅಡಿದಾಸ್ ಸಂಬಾ ಸಮುದಾಯದ ಕ್ಷಮೆ ಕೋರಿದ್ದಾರೆ. ಸಂದರ್ಶನದಲ್ಲಿ ಅಡಿದಾಸ್ ಬ್ರಾಂಡ್ ನ ಟ್ರೈನರ್ಸ್ ಶೂ ಧರಿಸುವ ಮೂಲಕ ಈ ನಿರ್ದಿಷ್ಟ ಶೂ ಆಕರ್ಷಣೆ, ಅದನ್ನು ನೋಡುವ ದೃಷ್ಟಿಯನ್ನೇ ಸುನಕ್ ಹಾಳುಗೆಡವಿದ್ದಾರೆ ಎಂಬ ಆಕ್ರೋಶ ಸಾಮಾಜಿಕ ಜಾಲತಣದಲ್ಲಿ ವ್ಯಕ್ತವಾಗಿತ್ತು. ಸುನಕ್ ಬಿಳಿ ಶರ್ಟ್ ಹಾಗೂ ಚಿನೋಸ್ ಪ್ಯಾಂಟ್, ಕಪ್ಪು ಬಣ್ಣದ ಸಾಕ್ಸ್ ಜೊತೆಗೆ ಬೂದು, ಬಿಳಿ ಮತ್ತು ಕಪ್ಪು ಮಿಶ್ರಿತ ಸ್ನೀಕರ್ಸ್ ಧರಿಸಿದ್ದರು. ಇದಕ್ಕೆ ಕೆಂಡಾಮಂಡಲವಾಗಿರುವ ಅಡಿದಾಸ್ ಸಂಬಾ ಸಮುದಾಯ. ಈ ಶೂ ಗೆ ಶ್ರೀಮಂತ ಇತಿಹಾಸವಿದೆ ಮತ್ತು ಟ್ರೆಂಡ್‌ನಲ್ಲಿ ಪರಿಗಣಿಸಲ್ಪಟ್ಟಿರುವ ವ್ಯತ್ಯಾಸವನ್ನು ಹೊಂದಿದೆ. ಆದರೆ ಇವೆಲ್ಲವನ್ನೂ ಟ್ರೆಂಡಿಯಾಗಿ ಕಾಣಿಸಿಕೊಳ್ಳುವ ಯತ್ನದಲ್ಲಿ ಸುನಕ್ ಹಾಳುಗೆಡವಿದ್ದಾರೆ ಎಂಬ ಆಕ್ಷೇಪ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ…

Read More

ಬಾಲಿವುಡ್ ನಟಿ, ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಮಹಾರಾಷ್ಟ್ರದ ಮಾಜಿ ಸಿಎಂ ಸುಶಿಲ್ ಕುಮಾರ್ ಶಿಂದೆ ಮೊಮ್ಮಗ ಶಿಖರ್ ಪಹರಿಯಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಜಾನ್ವಿ ಹಾಗೂ ಶಿಖರ್ ಜೋಡಿ ಆಗಾಗ ಸಾರ್ವಜನಿಕವಾಗಿ ಸುತ್ತಾಟ ನಡೆಸುತ್ತಾರೆ. ಆದರೆ, ಇಷ್ಟು ದಿನ ಈ ವಿಚಾರದಲ್ಲಿ ಜಾನ್ವಿ ಮೌನ ತಾಳಿದ್ದ ಜಾನ್ವಿ ಇದೀಗ ಸಾರ್ವಜನಿಕವಾಗಿ ತಮ್ಮ ಪ್ರೀತಿಯನ್ನು ಹೇಳಿಕೊಂಡಿದ್ದಾರೆ. ಶಿಖರ್ ಜೊತೆಗಿನ ಪ್ರೀತಿಯ ಬಗ್ಗೆ ಜಾನ್ವಿ ಕಪೂರ್ ಅವರ ಮೌನ ಅನೇಕರಿಗೆ ಬೇಸರ ತರಿಸಿತ್ತು. ಅವರು ಸಾರ್ವಜನಿಕವಾಗಿ ಈ ಬಗ್ಗೆ ಮಾತನಾಡಲಿ ಎಂದು ಎಲ್ಲರೂ ಅಂದುಕೊಂಡಿದ್ದರು. ಕೊನೆಗೂ ಜಾನ್ವಿ ಈ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ ಬೋನಿ ಕಪೂರ್ ನಿರ್ಮಾಣದ, ಅಜಯ್ ದೇವಗನ್ ನಟನೆಯ ‘ಮೈದಾನ್’ ಸಿನಿಮಾ ರಿಲೀಸ್ ಆಗಿದೆ. ಇದರ ಸ್ಪೆಷಲ್ ಶೋಗೆ ಜಾನ್ವಿ ಕಪೂರ್ ತೆರಳಿದ್ದರು. ಈ ವೇಳೆ ಜಾನ್ವಿ ಧರಿಸಿದ್ದ ಚೈನ್ ಗಮನ ಸೆಳೆದಿದೆ. ಕತ್ತಿನಲ್ಲಿರುವ ಚೈನ್​ ಮೇಲೆ ‘ಶಿಖು’ ಎಂದು ಬರೆದುಕೊಂಡಿದೆ. ಇದನ್ನು ನೋಡಿದ ಅನೇಕರು ಜಾನ್ವಿ ಪ್ರೀತಿ ವಿಚಾರ…

Read More

ಎಲೋನ್ ಮಸ್ಕ್ ಮಾಲೀಕತ್ವದ ಎಕ್ಸ್ ಸರ್ವರ್ ಡೌನ್ ಆಗಿದೆ. ಇದರಿಂದ ಬಳಕೆದಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು ಕೆಲ ಸಮಯದ ಬಳಿಕ ಸಮಸ್ಯೆ ಸರಿಹೋಗಿದೆ. ಆನ್ಲೈನ್ ಸ್ಥಗಿತಗಳು ಮತ್ತು ಸಮಸ್ಯೆಗಳನ್ನು ಟ್ರ್ಯಾಕ್ ಮಾಡುವ ಮತ್ತು ಮೇಲ್ವಿಚಾರಣೆ ಮಾಡುವ ಡೌನ್ಡೆಟೆಕ್ಟರ್ ಪ್ರಕಾರ, ಬಳಕೆದಾರರು ಪ್ಲಾಟ್ಫಾರ್ಮ್ ಅನ್ನು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ ಎಂದು ವರದಿ ಮಾಡಿದ್ದಾರೆ. ಬಳಕೆದಾರರು ಸೇರಿದಂತೆ ಹಲವಾರು ಮೂಲಗಳಿಂದ ಸ್ಥಿತಿ ವರದಿಗಳನ್ನು ಒಟ್ಟುಗೂಡಿಸುವ ಮೂಲಕ ಡೌನ್ಡೆಟೆಕ್ಟರ್ ಸ್ಥಗಿತಗಳನ್ನು ಟ್ರ್ಯಾಕ್ ಮಾಡುತ್ತದೆ. ಮೆಟಾ ಒಡೆತನದ ಪ್ಲಾಟ್ಫಾರ್ಮ್ಗಳಾದ ವಾಟ್ಸಾಪ್ ಮತ್ತು ಇನ್ಸ್ಟಾಗ್ರಾಮ್ ಈ ತಿಂಗಳ ಆರಂಭದಲ್ಲಿ ಒಂದು ಗಂಟೆ ಕಾಲ ಸ್ಥಗಿತಗೊಂಡ ಬಳಿಕ ಮತ್ತೆ ಅದೇ ಸಮಸ್ಯೆ ಎದುರಾಗಿದೆ. ಮಾರ್ಚ್ ತಿಂಗಳಲ್ಲಿ ಬಳಕೆದಾರರು ಸುಮಾರು ಎರಡು ಗಂಟೆಗಳ ಕಾಲ ಅಪ್ಲಿಕೇಶನ್ಗಳನ್ನು ಪ್ರವೇಶಿಸಲು ಅಸಮರ್ಥರಾಗಿದ್ದಾರೆ ಎಂದು ವರದಿ ಮಾಡಿದಾಗ ಫೇಸ್ಬುಕ್, ಇನ್ಸ್ಟಾಗ್ರಾಮ್, ಮೆಸೆಂಜರ್ ಮತ್ತು ಥ್ರೆಡ್ಸ್ ಪ್ರಮುಖ ಸರ್ವರ್ ಗಳು ಸಮಸ್ಯೆ ಎದುರಿಸಿವೆ.

Read More

ಸ್ಯಾಂಡಲ್ ವುಡ್ ನಟ ದಿಗಂತ್ ಹಾಗೂ ಐಂದ್ರಿತಾ ರೇ ದಂಪತಿ ಸುತ್ತೂರು ಮಠಕ್ಕೆ ಎಲೆಕ್ಟ್ರಿಕಲ್ ಆನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಸುತ್ತೂರು ಮಠಕ್ಕೆ ಭೇಟಿ ನೀಡಿ ಎಲೆಕ್ಟ್ರಿಕಲ್ ಆನೆಯನ್ನು ದೇಣಿಗೆ ನೀಡಿದ್ದು, ದಿಗಂತ್ ದಂಪತಿಯ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ದಿಗಂತ್ ದಂಪತಿಯ ಕಾರ್ಯಕ್ಕೆ ಬಿಗ್ ಬಾಸ್ ಬೆಡಗಿ ಸಂಗೀತಾ ಶೃಂಗೇರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನಟ ದಿಗಂತ್ ಕನ್ನಡದ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಟಿ ಐಂದ್ರಿತಾ ರೇ ಕನ್ನಡದ ಜೊತೆ ಪರಭಾಷೆಯ ಸಿನಿಮಾಗಳಲ್ಲೂ ಆ್ಯಕ್ಟೀವ್ ಆಗಿದ್ದಾರೆ. ಇತ್ತೀಚೆಗೆ ಕೇರಳದ ದೇವಸ್ಥಾನವೊಂದಕ್ಕೆ ಕನ್ನಡತಿ ಪ್ರಿಯಾಮಣಿ ಎಲೆಕ್ಟ್ರಿಕಲ್ ಆನೆಯೊಂದನ್ನು ದೇಣಿಗೆ ನೀಡಿದ್ದರು.

Read More

ನಟ ಶಿವರಾಜ್ ಕುಮಾರ್ ಪತ್ನಿ, ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್ ವಿರುದ್ಧ ಚುನಾವಣೆ ಆಯೋಗಕ್ಕೆ ಬಿಜೆಪಿ ದೂರು ನೀಡಿದೆ. ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಗೀತಾ ಶಿವರಾಜ್ ಕುಮಾರ್ ಅವರು ಚುನಾವಣೆ ಸಮಯದಲ್ಲಿ ತಮ್ಮ ಸಿನಿಮಾದ ಜಾಹೀರಾತನ್ನು ನೀಡಿರುವುದರಿಂದ ಅದನ್ನು ಚುನಾವಣೆ ವೆಚ್ಚಕ್ಕೆ ಸೇರಿಸುವಂತೆ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಗೀತಾ, ಶಿವರಾಜ್ ಕುಮಾರ್ ನಟನೆಯ ಭೈರತಿ ರಣಗಲ್ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಯುಗಾದಿ ಸಂದರ್ಭದಲ್ಲಿ ಈ ಸಿನಿಮಾದ ಜಾಹೀರಾತು ಅನ್ನು ಎಲ್ಲ ದಿನಪತ್ರಿಕೆಗಳಿಗೆ ನೀಡಲಾಗಿತ್ತು. ಜಾಹೀರಾತಿಗೆ ನೀಡಿದ ಹಣದ ಖರ್ಚನ್ನು ಚುನಾವಣೆ ವೆಚ್ಚದಲ್ಲಿ ಸೇರಿಸುವಂತೆ ಶಿಫಾರಸ್ಸು ಮಾಡಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಹಿಂದೆ ಶಿವರಾಜ್ ಕುಮಾರ್ ಚಿತ್ರಗಳನ್ನು ಮತ್ತು ಜಾಹೀರಾತುಗಳನ್ನು ತಡೆ ಹಿಡಿಯುವಂತೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿತ್ತು. ಆದರೆ ತಡೆಹಿಡಿಯಲು ಆಯೋಗ ನಿರಾಕರಿಸಿತ್ತು. ಈಗ ಮತ್ತೊಂದು ದೂರನ್ನು ನೀಡಲಾಗಿದೆ.

Read More

ಸ್ಯಾಂಡಲ್‌ವುಡ್ ನಟ ದುನಿಯಾ ವಿಜಯ್ ಪುತ್ರಿ ಮೋನಿಕಾ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಾರೆ ಎಂಬ ಸುದ್ದಿ ಕೆಲದಿನಗಳಿಂದ ಹರಿದಾಡಿತ್ತು. ಆದರೆ ಯಾವಾಗ, ಯಾವ ಸಿನಿಮಾ ಎಂದು ಸ್ಪಷ್ಟನೆ ಸಿಕ್ಕಿರಲಿಲ್ಲ. ಅದಕ್ಕೀಗ ಉತ್ತರ ಸಿಕ್ಕಿದ್ದು ದುನಿಯಾ ವಿಜಯ್ ನಟನೆಯ 29ನೇ ಸಿನಿಮಾದಲ್ಲಿ ಮೋನಿಕಾ ನಟಿಸುತ್ತಿದ್ದಾರೆ. ಇಂದು ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಚಿತ್ರದ ಮುಹೂರ್ತ ಕಾರ್ಯಕ್ರಮ ನಡೆಯಲಿದ್ದು, ಚಿತ್ರಕ್ಕೆ ಕೆ.ವಿ ಸತ್ಯಪ್ರಕಾಶ್ ಬಂಡವಾಳ ಹೂಡುತ್ತಿದ್ದಾರೆ. ಜಡೇಶ್ ಕೆ. ಹಂಪಿ ನಿರ್ದೇಶನದ ಈ ಸಿನಿಮಾದ ಮುಹೂರ್ತ ಕಾರ್ಯಕ್ರಮದಲ್ಲಿ ದುನಿಯಾ ವಿಜಯ್, ರಚಿತಾ ರಾಮ್, ಮೋನಿಕಾ ವಿಜಯ್, ಶಿಶಿರ್ ಮುಂತಾದವರು ಭಾಗಿಯಾಗಲಿದ್ದಾರೆ. ದುನಿಯಾ ವಿಜಯ್ ಮತ್ತು ರಚಿತಾ ರಾಮ್ ಕಾಂಬಿನೇಷನ್ ನ ಹೊಸ ಚಿತ್ರದಲ್ಲಿ ವಿಜಯ್ ಪುತ್ರಿ ಮೋನಿಕಾಗೂ ಉತ್ತಮ ಪಾತ್ರವಿದೆ. ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಮೋನಿಕಾ ಎಂಟ್ರಿಕೊಡ್ತಿದ್ದು ಭರವಸೆ ಮೂಡಿಸಿದ್ದಾರೆ. ಈ ಹಿಂದೆ ‘ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್’ ಎಂಬ ಚಿತ್ರದಲ್ಲಿ ದುನಿಯಾ ವಿಜಯ್ ಮತ್ತು ರಚಿತಾ ರಾಮ್ ನಟಿಸಿದ್ದರು. ಈಗ ಹಲವು…

Read More