ತಮಿಳು ಚಿತ್ರರಂಗದ ಖ್ಯಾತ ಖಳನಟ, ರಾಜಕಾರಣಿ ಅರುಳ್ ಮಣಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಿರಂತರವಾಗಿ ಚುನಾವಣೆ ಪ್ರಚಾರದಲ್ಲಿದ್ದ ಅರುಳ್ ಮಣಿ ತೀವ್ರ ಬಿಸಿಲಿನ ತಾಪಕ್ಕೆ ಅಸ್ವಸ್ಥಗೊಂಡಿದ್ದು ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಅಷ್ಟರಲ್ಲಾಗಲೆ ಅರುಳ್ ನಿಧನರಾಗಿದ್ದರು ಎಐಎಡಿಎಂಕೆ ಪರ ಪ್ರಚಾರ ಮಾಡುತ್ತಿದ್ದ ಅರುಳ್ ಮಣಿ, ಬಿಸಿಲಿನ ತಾಪಕ್ಕೆ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಸ್ಪತ್ರೆಗೆ ಸೇರುವ ಮುನ್ನವೇ ಅವರು ಹೃದಯಾಘಾತದಿಂದ ನಿಧನರಾಗಿದ್ದರು ಎಂದು ಮೂಲಗಳು ತಿಳಿಸಿವೆ. ಲಿಂಗಾ, ಸಿಂಗಂ 2 ಸೇರಿದಂತೆ ಅನೇಕ ಚಿತ್ರಗಳಲ್ಲಿ ವಿಲನ್ ಆಗಿ ಗುರುತಿಸಿಕೊಂಡಿದ್ದ ಇವರು, ಸಕ್ರಿಯರಾಜಕಾರಣದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಈ ಸಲ ಲೋಕಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಪರ ಪ್ರಚಾರದಲ್ಲೂ ಪಾಲ್ಗೊಂಡಿದ್ದರು. ಏಕಾಏಕಿ ಕುಸಿದು ಬಿದ್ದು ಇಹಲೋಕ ತ್ಯಜಿಸಿದ್ದಾರೆ.
Author: Author AIN
ಟಗರು ಪುಟ್ಟಿ ನಟಿ ಮಾನ್ವಿತಾ ಕಾಮತ್ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಮ್ಯೂಸಿಕ್ ಪ್ರೋಡ್ಯೂಸರ್ ಅರುಣ್ ಕುಮಾರ್ ಜೊತೆ ಮೇ 1ರಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮಾನ್ವಿತಾ ಮತ್ತು ಅರುಣ್ ಅವರದ್ದು ಅರೇಂಜ್ ಮ್ಯಾರೇಜ್ ಆಗಿದ್ದು, ಅಮ್ಮ ನೋಡಿದ ವರನನ್ನೇ ಮಾನ್ವಿತಾ ಮದುವೆಯಾಗುತ್ತಿದ್ದಾರೆ. ನನ್ನ ಮದುವೆ ನೋಡೋದು ಅಮ್ಮನ ಕನಸಾಗಿತ್ತು. ಅದರಂತೆಯೇ ಮದುವೆ ನೆರವೇರುತ್ತಿದೆ ಎನ್ನುತ್ತಾರೆ ಮಾನ್ವಿತಾ. ನನ್ನ ಅಮ್ಮ ನನ್ನ ಮದುವೆ ಪ್ರೊಫೈಲ್ ಅನ್ನು ನಮ್ಮ ಸಮುದಾಯದ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳುತ್ತಿದ್ದರು. ಆಗ ಅರುಣ್ ತಾಯಿಗೆ ನಮ್ಮ ತಾಯಿ ನಿಧನದ ಬಗ್ಗೆ ತಿಳಿದಿರಲಿಲ್ಲ. ಅವರು ನಮ್ಮನ್ನು ತಲುಪಲು ತುಂಬ ಪ್ರಯತ್ನಿಸಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಕೊನೆಗೆ ಅವರು ನನ್ನ ನಂಬರ್ ಪಡೆದುಕೊಂಡು ಕಾಂಟಾಕ್ಟ್ ಮಾಡಿದ್ದಾರೆ. ಈಗ ಇದೆಲ್ಲವೂ ಸಾಧ್ಯವಾಗಿದೆ ಎಂದು ಮಾನ್ವಿತಾ ಹೇಳಿದ್ದಾರೆ. ಮದುವೆ ಸುದ್ದಿ ಸಂಭ್ರಮದ ನಡುವೆ ಮತ್ತೊಂದು ವಿಶೇಷ ಅಂದರೆ, ಮಾನ್ವಿತಾ ತಾಯಿ ಸುಜಾತಾ ಅವರ ಹುಟ್ಟುಹಬ್ಬ ಅಕ್ಟೋಬರ್ 14 ಅದೇ ದಿನ ಅರುಣ್ ಹುಟ್ಟುಹಬ್ಬವಂತೆ.…
ಪತಿಯೋರ್ವ ತನ್ನ ಪತ್ನಿ ಮತ್ತು ಏಳು ಅಪ್ರಾಪ್ತ ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಭೀಕರ ಘಟನೆ ಪಾಕಿಸ್ತಾನದ ಪಂಜಾಬ್ ನಲ್ಲಿ ನಡೆದಿದೆ. ಕೂಲಿ ಕಾರ್ಮಿಕನಾದ ಸಜ್ಜದ್ ಖೋಖರ್ ತನ್ನ 42 ವರ್ಷದ ಪತ್ನಿ ಕೌಸರ್ ಮತ್ತು ಏಳು ಮಕ್ಕಳನ್ನು ಕೊಲೆಗೈದಿದ್ದಾನೆ. 10 ವರ್ಷದೊಳಗಿನ ನಾಲ್ವರು ಪುತ್ರಿಯರು ಮತ್ತು ಮೂವರು ಗಂಡು ಮಕ್ಕಳ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿ, ಎಲ್ಲರನ್ನು ಸ್ಥಳದಲ್ಲೇ ಕೊಂದು ಹಾಕಿದ್ದಾರೆ. ಕೂಲಿ ಕಾರ್ಮಿಕನಾಗಿದ್ದ ಸಜ್ಜದ್ ಮಾನಸಿಕವಾಗಿ ತೊಂದರೆಗೀಡಾಗಿದ್ದಾನೆ. ಆತ ಆಗಾಗ ತನ್ನ ಹೆಂಡತಿ ಜೊತೆಗೆ ಜಗಳ ಮಾಡುತ್ತಿದ್ದನು. ಸದ್ಯ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಪತ್ನಿಯ ಕುಟುಂಬದವರು ಆತನ ಮೇಲೆ ಕೇಸ್ ನೀಡಿದ್ದಾರೆ. ವ್ಯಕ್ತಿಯನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತನ್ನ ಮಕ್ಕಳಿಗೆ ಇನ್ನು ಮುಂದೆ ಆಹಾರ ನೀಡಲು ಸಾಧ್ಯವಾಗದ ಕಾರಣ ಈ ಕೃತ್ಯ ಎಸಗಿರುವುದಾಗಿ ಆರೋಪಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಖ್ಯಮಂತ್ರಿ ಮರ್ಯಮ್ ನವಾಜ್ ಅವರು ಹತ್ಯೆ ಬಗ್ಗೆ ತಮ್ಮ ಸಂತಾಪ ಸೂಚಿಸಿದ್ದು…
ಕಜಕಸ್ತಾನದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಸುಮಾರು ಒಂದು ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ದೇಶದ ತುರ್ತು ನಿರ್ವಹಣೆಯ ಸಚಿವಾಲಯ ಶುಕ್ರವಾರ ತಿಳಿಸಿದೆ. ಕಜಕಸ್ತಾನದ 17 ಪ್ರಾಂತ್ಯಗಳ ಪೈಕಿ 8 ಪ್ರಾಂತ್ಯಗಳಲ್ಲಿ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ ಎಂದೂ ಸಚಿವಾಲಯ ತಿಳಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ದಕ್ಷಿಣ ಕೊರಿಯಾದ ಗಾಯಕಿ ಪಾರ್ಕ್ ಬೋ ರಾಮ್ ತನ್ನ 30ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕೆ-ಪಾಪ್ ಗಾಯಕಿಯ ನಿಧನ ಸುದ್ದಿಯನ್ನು ಕೇಳಿ ದಕ್ಷಿಣ ಕೊರಿಯಾದ ಮ್ಯೂಸಿಕ್ ಇಂಡಸ್ಟ್ರಿಗೆ ಶಾಕ್ ಆಗಿದೆ. ಪಾರ್ಕ್ ಬೋ ರಾಮ್ ಸಾವಿನ ಸುದ್ದಿಯನ್ನು ಆಕೆಯ ಏಜೆನ್ಸಿ ಖಚಿತಪಡಿಸಿದೆ. ಏಪ್ರಿಲ್ 11 ರಂದು ತಡರಾತ್ರಿ ಪಾರ್ಕ್ ಬೋ ರಾಮ್ ಹಠಾತ್ ನಿಧನರಾದರೆಂದು ಹೇಳಲು ನಮಗೆ ಅತೀವ ದುಃಖವಾಗುತ್ತಿದೆ. ಪಾರ್ಕ್ ಬೋ ರಾಮ್ ಅವರನ್ನು ಬೆಂಬಲಿಸುವ ಎಲ್ಲಾ ಅಭಿಮಾನಿಗಳಿಗೆ ನಾವು ಈ ಹಠಾತ್ ಸುದ್ದಿಯನ್ನು ಹೇಳಬೇಕಾಗಿರುವುದು ಇನ್ನಷ್ಟು ದುಃಖಕರವಾಗಿದೆ ಎಂದು ಕ್ಸಾನಾಡು ಎಂಟರ್ಟೈನ್ಮೆಂಟ್ ಹೇಳಿದೆ. ಪಾರ್ಕ್ ಬೋ ರಾಮ್ ಈ ವರ್ಷ ಸಂಗೀತ ಕ್ಷೇತ್ರದಲ್ಲಿ 10 ವರ್ಷಗಳನ್ನು ಪೂರ್ಣಗೊಳಿಸಲಿದ್ದರು. ಈ ಸಂದರ್ಭದಲ್ಲಿ ಹೊಸ ಹಾಡನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದ್ದು ಈ ಮಧ್ಯೆ ಪಾರ್ಕ್ ನಿಧ ಅಘಾತ ಉಂಟುಮಾಡಿದೆ. ಪಾರ್ಕ್ ಬೋ ರಾಮ್ ಅವರು ಸಾಯುವ ಕೆಲ ಗಂಟೆಗಳ ಮೊದಲು ಸ್ನೇಹಿತರೊಂದಿಗೆ ಪಾರ್ಟಿಯಲ್ಲಿದ್ದರು. ಈ ವೇಳೆ ಅವರು ಮದ್ಯಪಾನ ಮಾಡುತ್ತಿದ್ದರು.…
ಸೀಕ್ರೇಟ್ ಆಗಿ ಮದುವೆಯಾದ ಬಾಲಿವುಡ್ ನಟಿ ತಾಪ್ಸಿ ಪನ್ನು ಮದುವೆಯ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ನವ ವಧುವನ್ನು ಕಂಡ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸಿದ್ದಾರೆ. ತಾಪ್ಸಿ ಮದುವೆಗೆ ಆಪ್ತರಿಗಷ್ಟೇ ಆಹ್ವಾನಿಸಿದ್ದು ಮದುವೆಯ ಬಳಿಕವು ಮದುವೆಯ ಫೋಟೋ ಹಾಗೂ ವಿಡಿಯೋವನ್ನು ಶೇರ್ ಮಾಡಲು ನಟಿ ನಿರಾಕರಿಸಿದ್ದಾರೆ. ಬ್ಲರ್ ಆಗಿರುವ ವಿಡಿಯೋವೊಂದು ಲೀಕ್ ಆಗಿ ಮದುವೆ ಸಮಾಚಾರ ತಿಳಿದಿತ್ತು. ಹೀಗಾಗಿ ನಟಿಯ ಮದುವೆಯ ಫೋಟೋಗಾಗಿ ಕಾಯ್ತಿದ್ದವರಿಗೆ ನಟಿ ನಿರಾಸೆ ಮೂಡಿಸಿದ್ದಾರೆ. ತಾಪ್ಸಿ ಉದಯ್ಪುರದಲ್ಲಿ ಅದ್ಧೂರಿಯಾಗಿ ಮದುವೆಯಾಗಿರೋದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಚಾರ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿತ್ತು. ಆದರೆ ತಮ್ಮ ಮದುವೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಅವರು ನೀಡಿರಲಿಲ್ಲ. ಮದುವೆ ಫೋಟೋ ಕೂಡ ಶೇರ್ ಮಾಡಿ ಪತಿ ಬಗ್ಗೆ ಮಾತನಾಡಿಲ್ಲ. ಇದೀಗ ಡ್ಯಾನ್ಸ್ ಮಾಡುತ್ತಾ ವೇದಿಕೆ ಏರಿ ಮಥಾಯಸ್ ಬೋ ಅವರಿಗೆ ಹಾರ ಹಾಕಿ ಖುಷಿಯಿಂದ ಮದುವೆ ಆಗುತ್ತಿರುವ ವಿಡಿಯೋ ವೈರಲ್ ಆಗಿತ್ತು.
ಇಂದು ವರನಟ ಡಾ.ರಾಜ್ ಕುಮಾರ್ ಅವರ 18ನೇ ಪುಣ್ಯ ಸ್ಮರಣೆ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ರಾಜ್ ಕುಮಾರ್ ಸಮಾಧಿಗೆ ಆಗಮಿಸಿ ಪೂಜೆ ಸಲ್ಲಿಸಿದರು. ಅಣ್ಣಾವ್ರ ಮಕ್ಕಳಾದ ರಾಘವೇಂದ್ರ ರಾಜಕುಮಾರ್, ಪೂರ್ಣಿಮಾ, ಲಕ್ಷ್ಮಿ ಸೇರಿದಂತೆ ಕುಟುಂಬದ ಸದಸ್ಯರು ಆಗಮಿಸಿ ಪೂಜೆ ಸಲ್ಲಿಸಿದರು. ಪ್ರತಿ ವರ್ಷದಂತೆ ಈ ವರ್ಷವೂ ಡಾ.ರಾಜ್ ಕುಮಾರ್ ಅಭಿಮಾನಿಗಳು ಸಮಾಧಿ ಬಳಿ ರಕ್ತದಾನ ಶಿಬಿರ, ಅನ್ನ ಸಂತರ್ಪಣೆ, ಕಣ್ಣುದಾನ ಸೇರಿದಂತೆ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡಿದರು. ಅಣ್ಣಾವ್ರ ಸಮಾಧಿ ದರ್ಶನಕ್ಕಾಗಿ ಸಾಲುಗಟ್ಟಿ ಅಭಿಮಾನಿಗಳು ನಿಂತು ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್, ಸಮಾಧಿ ಹತ್ತಿರ ಬಂದಾಗಷ್ಟೇ ಅಪ್ಪಾಜಿ ನಮ್ಮೊಂದಿಗೆ ಇಲ್ಲ ಅಂತ ಅನಿಸತ್ತೆ. ಅದರಾಚೆ ಅವರು ನಮ್ಮೊಂದಿಗೆ ಸದಾ ಇದ್ದಾರೆ, ಇರುತ್ತಾರೆ ಎಂದರು. ಅಭಿಮಾನಿಗಳ ಜೊತೆ ಒಂದಷ್ಟು ಹೊತ್ತು ರಾಘಣ್ಣ ಸಮಯ ಕಳೆದರು.
ಟಾಲಿವುಡ್ ನ ಖ್ಯಾತ ನಟ ರಾಮ್ ಚರಣ್ ಗೆ ಚೆನ್ನೈನ ವೇಲ್ಸ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಘೋಷಣೆ ಮಾಡಿದೆ. ರಾಮ್ ಚರನ್ ಸಿನಿಮಾ ರಂಗದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಈ ಗೌರವ ನೀಡಲಾಗುತ್ತಿದೆ. ಆರ್ ಆರ್ ಆರ್ ಸಿನಿಮಾದ ಬಳಿಕ ರಾಮ್ ಚರಣ್ ಗೋಬಲ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಸದ್ಯ ರಾಮ್ ಚರಣ್ ಹೊಸ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದು, ಚಿತ್ರಕ್ಕೆ RC 16 ಎಂದು ಟೈಟಲ್ ಇಡಲಾಗಿದೆ. ಈ ಚಿತ್ರದಲ್ಲಿ ನಾಯಕಿಯಾಗಿ ಜಾನ್ವಿ ಕಪೂರ್ ಕಾಣಿಸಿಕೊಳ್ತಿದ್ದು, ಚಿತ್ರೀಕರಣದ ಫೋಟೋಗಳನ್ನು ರಾಮ್ ಚರಣ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ರಾಮ್ ಚರಣ್- ಜಾನ್ವಿ ಕಪೂರ್ ನಟನೆಯ ಹೊಸ ಚಿತ್ರಕ್ಕೆ ಅದ್ಧೂರಿಯಾಗಿ ಮುಹೂರ್ತ ಕಾರ್ಯಕ್ರಮ ಹೈದರಾಬಾದ್ನಲ್ಲಿ ನೆರವೇರಿತ್ತು. ಈ ಇವೆಂಟ್ಗೆ ಮೆಗಾಸ್ಟಾರ್ ಚಿರಂಜೀವಿ, ಬೋನಿ ಕಪೂರ್, ಸುಕುಮಾರ್ ಸೇರಿದಂತೆ ಅನೇಕರು ಭಾಗವಹಿಸಿ ಚಿತ್ರತಂಡಕ್ಕೆ ಶುಭಕೋರಿದ್ದರು.
ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಿನಿಮಾದಲ್ಲಿ ನಟಿಸುವ ಆಫರ್ ನೀಡುವುದಾಗಿ ಆಮಿಷವೊಡ್ಡಿದ ವ್ಯಕ್ತಿಯೋರ್ವ ಯುವತಿಯಿಂದ ಲಕ್ಷ ಲಕ್ಷ ಪೀಕಲು ಮುಂದಾದ ಘಟನೆ ನಡೆದಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಸಿನಿಮಾದಲ್ಲಿ ನಟಿಸುವ ಅವಕಾಶ ನೀಡುವುದಾಗಿ ಹೇಳಿದ ರೋಹನ್ ಎಂಬಾತ ಯುವತಿಯಿಂದ ಬರೋಬ್ಬರಿ ಆರು ಲಕ್ಷ ರೂಪಾಯಿ ವಂಚಿಸಲು ಮುಂದಾಗಿದ್ದಾನೆ. ಮುಂಬೈನ ಪೂಜಾ ಎನ್ನುವ ಯುವತಿಗೆ ಕಾಲ್ ಮಾಡಿದ್ದ ವ್ಯಕ್ತಿಯು ತಾನು ರೋಹನ್ ಎಂದು ಪರಿಚಯ ಮಾಡಿಕೊಂಡಿದ್ದಾನೆ. ಅಕ್ಷಯ್ ಕುಮಾರ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಕೇಪ್ ಆಫ್ ಗುಡ್ ಫಿಲ್ಮ್ಸ್ ಕಡೆಯಿಂದ ಸಿನಿಮಾ ಆಗುತ್ತಿದ್ದು, ಅದರಲ್ಲಿ ನೀವು ಶಾರ್ಟ್ ಲಿಸ್ಟ್ ಆಗಿದ್ದೀರಿ ಎಂದು ಹೇಳಿದ್ದಾನೆ. ಪ್ರೊಫೈಲ್ ಬಿಲ್ಡ್ ಮಾಡಲು ಆರು ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾನೆ. ರೋಹನ್ ಮಾತಿನಿಂದ ಅನುಮಾನಗೊಂಡ ಹುಡುಗಿ ನೇರವಾಗಿ ಅಕ್ಷಯ್ ಕುಮಾರ್ ಮ್ಯಾನೇಜರ್ ಗೆ ಕಾಲ್ ಮಾಡಿದ್ದಾಳೆ. ಆಗ ತಾನು ಮೋಸ ಹೋಗುತ್ತಿರುವ ವಿಚಾರ ಗೊತ್ತಾಗಿದೆ. ಕೂಡಲೇ ಮುಂಬೈನ ಜುಹು ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು…
ಬಿಗ್ ಬಾಸ್ ಸೀಸನ್ 17ರ ವಿಜೇತ ಹಾಗೂ ಖ್ಯಾತ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಮುನಾವರ್ ಫಾರೂಖಿ ಮೇಲೆ ಮೊಟ್ಟೆ ಎಸೆದಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮೊಟ್ಟೆ ಎಸೆದಿರುವ ರೆಸ್ಟೊರೆಂಟ್ ಮಾಲೀಕನ ಮೇಲೆ ಕೇಸು ದಾಖಲಾಗಿದೆ. ಮುಂಬೈನ ಮೊಹಮ್ಮದ್ ಅಲಿ ರಸ್ತೆಯಲ್ಲಿರುವ ಮಿನಾರಾ ಮಸೀದಿ ಪ್ರದೇಶದಲ್ಲಿದ್ದ ರೆಸ್ಟೋರೆಂಟ್ ವೊಂದಕ್ಕೆ ಮುನಾವರ್ ಫಾರೂಖಿ ಅವರನ್ನು ಇಫ್ತಾರಿಗೆ ಆಹ್ವಾನಿಸಿದ್ದರು. ಆದರೆ ಬಳಿಕ ಬೇರೊಂದು ಹೋಟೆಲ್ ಅನ್ನು ಆಯ್ಕೆ ಮಾಡಿಕೊಂಡರಂತೆ. ಇದರಿಂದ ಕುಪಿತಗೊಂಡ ರೆಸ್ಟೋರೆಂಟ್ ಮಾಲೀಕ ಮುನಾವರ್ ಮೇಲೆ ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾನೆ. ಮುನಾವರ್ ಮೇಲೆ ರೆಸ್ಟೋರೆಂಟ್ ಮಾಲೀಕ ಮೊಟ್ಟೆ ಎಸೆದಿರುವ ದೃಶ್ಯ ಮೊಬೈಲ್ ಕ್ಯಾಮಾರಾದಲ್ಲಿ ಸೆರೆಯಾಗಿದೆ. ಘಟನೆಯ ಹಿನ್ನೆಲೆಯಲ್ಲಿ ಆರು ಮಂದಿ ವಿರುದ್ಧ ಪೈದೋನಿ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ.