ರಷ್ಯಾದ ಚೆಚೆನ್ಯಾದಲ್ಲಿ ವಿಚಿತ್ರ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇಲ್ಲಿನ ಸರ್ಕಾರ ಅತ್ಯಂತ ಆಧುನಿಕ ನೃತ್ಯ ಸಂಗೀತವನ್ನು ಅಪರಾಧ ಎಂದು ಘೋಷಿಸಿದ್ದು, ಯಾವುದೇ ವ್ಯಕ್ತಿಯು ತುಂಬಾ ವೇಗವಾಗಿ ಅಥವಾ ತುಂಬಾ ನಿಧಾನವಾಗಿ ಸಂಗೀತವನ್ನು ನುಡಿಸುವಾಗ ಸಿಕ್ಕಿಬಿದ್ದರೆ, ಅವನು ಶಿಕ್ಷೆಗೆ ಒಳಗಾಗುತ್ತಾನೆ. ಆದ್ದರಿಂದ ಚೆಚೆನ್ಯಾದಲ್ಲಿ ಪಾಪ್, ಡಿಸ್ಕೋ ಅಥವಾ ರಾಕ್ ಸಂಗೀತವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಚೆಚೆನ್ಯಾ ರಷ್ಯಾದ ಭಾಗವಾಗಿದ್ದರೂ ಅದನ್ನು ಪ್ರತ್ಯೇಕ ದೇಶವನ್ನಾಗಿ ಮಾಡಲು ಹಲವು ಯುದ್ಧಗಳು ನಡೆದಿವೆ. ಆದಾಗ್ಯೂ, ಆಸಕ್ತಿದಾಯಕ ವಿಷಯವೆಂದರೆ ಚೆಚೆನ್ಯಾ ಕೂಡ ರಷ್ಯಾಕ್ಕಿಂತ ಭಿನ್ನವಾದ ಅಧ್ಯಕ್ಷರನ್ನು ಹೊಂದಿದ್ದಾರೆ. ಇದಲ್ಲದೇ ಇಲ್ಲಿ ಪ್ರತ್ಯೇಕ ಸಂವಿಧಾನವೂ ಇದೆ. ಆಡಿಟಿ ಸೆಂಟ್ರಲ್ ಎಂಬ ವೆಬ್‌ಸೈಟ್ ಪ್ರಕಾರ, ಚೆಚೆನ್ಯಾ ಇತ್ತೀಚೆಗೆ ರಷ್ಯಾದ ನೃತ್ಯ ಸಂಗೀತವನ್ನು ನಿಷೇಧಿಸಿತು, ಮಾಲಿನ್ಯದ ವಿರುದ್ಧ ಹೋರಾಡುವ ವಿಚಿತ್ರ ಪ್ರಯತ್ನವಾಗಿ ಈ ನಿಷೇಧ ಹೇರಲಾಗಿದೆ. ಚೆಚೆನ್ಯಾದ ಸಂಸ್ಕೃತಿ ಸಚಿವ ಮೂಸಾ ದಾದಾಯೆವ್ ಅವರು ಇತ್ತೀಚೆಗೆ ಹೇಳಿಕೆಯನ್ನು ನೀಡಿದ್ದಾರೆ, ಇದು ಆಧುನಿಕ ನೃತ್ಯ ಸಂಗೀತವನ್ನು ಪರಿಣಾಮಕಾರಿಯಾಗಿ ಅಪರಾಧ. ಯಾವುದೇ ಸಂಗೀತ ಪ್ರತಿ ನಿಮಿಷಕ್ಕೆ 80-116 ಬೀಟ್‌ಗಳ ಗತಿಗೆ…
Author: Author AIN
ʼಗಲ್ಫ್‌ನಲ್ಲಿರುವ ಜಿಯೋನಿಸ್ಟ್ ಆಡಳಿತಕ್ಕೆ (ಇಸ್ರೇಲ್) ಸಂಬಂಧಿಸಿದʼ ಕಂಟೇನರ್ ಹಡಗನ್ನು ಇರಾನ್‌ನ ರೆವೆಲ್ಯೂಷನ್ ಗಾರ್ಡ್‌ಗಳು ವಶಪಡಿಸಿಕೊಂಡಿದ್ದು, ಘಟನೆ ಬಳಿಕ ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ ಎಂದು ರಾಜ್ಯ ಮಾಧ್ಯಮ ವರದಿ ಮಾಡಿದೆ. ಈ ಪ್ರದೇಶದಲ್ಲಿ ಸಂಘರ್ಷವನ್ನು ಹೆಚ್ಚಿಸುವ ಪರಿಣಾಮಗಳನ್ನು ಇರಾನ್ ಅನುಭವಿಸಲಿದೆ ಎಂದು ಹಡಗನ್ನು ವಶಪಡಿಸಿಕೊಂಡಿರುವುದಾಗಿ ಇರಾನ್ ಘೋಷಿಸಿದ ನಂತರ ಇಸ್ರೇಲ್ ಸೇನೆ ಎಚ್ಚರಿಸಿದೆ. ‘ಎಂಸಿಎಸ್ ಏರೀಸ್’ ಹೆಸರಿನ ಕಂಟೈನರ್ ಹಡಗನ್ನು ಸೆಪಾ (ಗಾರ್ಡ್ಸ್) ನೌಕಾಪಡೆಯ ವಿಶೇಷ ಪಡೆಗಳು ಹೆಲಿಬೋರ್ನ್ ಕಾರ್ಯಾಚರಣೆಯನ್ನು ನಡೆಸುವ ಮೂಲಕ ವಶಪಡಿಸಿಕೊಂಡವು” ಎಂದು ಇರಾನ್ ನ ಅಧಿಕೃತ ಸುದ್ಧಿಸಂಸ್ಥೆಯಾದ IRNA ವರದಿ ಮಾಡಿದೆ. ವಿಶ್ವ ವ್ಯಾಪಾರದಲ್ಲಿ ಪ್ರಮುಖವಾದ ಜಲಮಾರ್ಗವಾದ ಹೋರ್ಮುಜ್ ಜಲಸಂಧಿಯ ಬಳಿ ಕಾರ್ಯಾಚರಣೆ ನಡೆದಿದ್ದು, ಈ ಹಡಗನ್ನು ಸದ್ಯ ಇರಾನ್‌ನ ಪ್ರಾದೇಶಿಕ ನೀರಿನ ಕಡೆಗೆ ತಿರುಗಿಸಲಾಗಿದೆ ಎಂದು IRNA ತಿಳಿಸಿದೆ. ಸುಮಾರು ಎರಡು ವಾರಗಳ ಹಿಂದೆ ಸಿರಿಯಾದಲ್ಲಿನ ಡಮಾಸ್ಕಸ್ ರಾಯಭಾರ ಕಚೇರಿಯ ಕಾನ್ಸುಲರ್ ವಿಭಾಗದ ಮೇಲೆ ಮಾರಣಾಂತಿಕ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಪ್ರತಿಜ್ಞೆ ಮಾಡಿದ ನಂತರ,…
ಯುಟಿಲಿಟಿ ವಾಹನಗಳ ಮೇಲಿನ ಇಂಟ್ರೆಸ್ಟ್ ಭಾರತದಲ್ಲಿ ತೀವ್ರಗೊಳ್ಳುತ್ತಿದೆ, ಏಕೆಂದರೆ ಇವು 2023-24ರಲ್ಲಿ ಒಟ್ಟು ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಶೇಕಡಾ 60 ರಷ್ಟು ಕೊಡುಗೆ ನೀಡಿವೆ. ಕಳೆದ ಹಣಕಾಸು ವರ್ಷದಲ್ಲಿ ಸುಮಾರು 26 ಪ್ರತಿಶತದಷ್ಟು ಅದ್ಭುತ ಬೆಳವಣಿಗೆಯನ್ನು ದಾಖಲಿಸಿದ ಯುವಿಗಳು ದೇಶೀಯ ಪ್ರಯಾಣಿಕ ವಾಹನಗಳ ಮಾರಾಟವನ್ನು ದಾಖಲೆಯ ಗರಿಷ್ಠ ಮಟ್ಟಕ್ಕೆ ತೆಗೆದುಕೊಂಡು ಹೋಗಿವೆ. ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (ಸಿಯಾಮ್) ನ ಇತ್ತೀಚಿನ ಮಾಹಿತಿಯ ಪ್ರಕಾರ, ಪ್ರಯಾಣಿಕ ವಾಹನಗಳ ಮಾರಾಟವು 2023-24ರಲ್ಲಿ ದಾಖಲೆಯ ಗರಿಷ್ಠ 42,18,746 ಯುನಿಟ್ಗಳನ್ನು ತಲುಪಿದೆ. 2022-23ರಲ್ಲಿ ಒಟ್ಟಾರೆ ಪ್ರಯಾಣಿಕ ವಾಹನಗಳ ರವಾನೆ 38,90,114 ಯುನಿಟ್ ಗಳಷ್ಟಿತ್ತು. ಪ್ಯಾಸೆಂಜರ್ ವೆಹಿಕಲ್ ಸೆಗ್ ಮೆಂಟಿನಲ್ಲಿ, ಯುವಿಗಳು ಮತ್ತು ವ್ಯಾನ್ ಗಳು ಮಾರಾಟದಲ್ಲಿ ಆವೇಗವನ್ನು ಕಂಡ ಎರಡು ವಿಭಾಗಗಳಾಗಿವೆ. ಎಂಟ್ರಿ ಲೆವೆಲ್ ನಿಂದ ಪ್ರೀಮಿಯಂ ಹ್ಯಾಚ್ ಬ್ಯಾಕ್ ಮತ್ತು ಸೆಡಾನ್ ಗಳು ಸೇರಿದಂತೆ ಕಾರುಗಳ ಮಾರಾಟವು 2022-23ರಲ್ಲಿ 17,47,376 ಯುನಿಟ್ ಗಳಿಂದ 2023-24ರಲ್ಲಿ 15,48,943 ಯುನಿಟ್ ಗಳಿಗೆ ಶೇಕಡಾ 11.4 ರಷ್ಟು…
ಕಾನೂನಿಗೆ ವಿರುದ್ಧವಾಗಿ ಮಗು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿ ಬಿಗ್ ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ಅವರನ್ನು ಬಂಧಿಸಲಾಗಿತ್ತು. ಆರಂಭದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಇದ್ದ ಅವರು ನಂತರ ನ್ಯಾಯಾಂಗ ಬಂಧನಕ್ಕೆ ಒಳಪಟ್ಟರು. ಇತ್ತೀಚೆಗೆ ಸೋನು ಶ್ರೀನಿವಾಸ್ ಗೌಡ ಅವರು ಜಾಮೀನು ಪಡೆದು ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಇದೀಗ ಜೈಲಿನ ಅನುಭವ ಹೇಗಿತ್ತು ಎನ್ನುವುದನ್ನು ಅವರು ವಿವರಿಸಿದ್ದಾರೆ. ‘ನನ್ನನ್ನು ಕಾನೂನಾತ್ಮಕವಾಗಿ ವಿಚಾರಣೆ ಮಾಡಿದರು. ಆ ಬಳಿಕ ನನ್ನನ್ನು ನ್ಯಾಯಾಂಗ ಬಂಧನಕ್ಕೆ ನೀಡಿದರು. ನಾಲ್ಕು ಗೋಡೆ, ಅಲ್ಲಿನ ಜನ ನೋಡಿ ನನಗೆ ಇದೆಲ್ಲ ಬೇಕಿತ್ತಾ ಅನಿಸಿತು. ಬೇರೆ ಬೇರೆ ಪ್ರಕರಣ ಮಾಡಿದವರು ಅಲ್ಲಿದ್ದರು. ಮೂರು ದಿನಕ್ಕೆ ಒಮ್ಮೆ ಫೋನ್ ಕೊಡ್ತಾರೆ. 3-4 ನಿಮಿಷ ಮಾತನಾಡಲು ಮೂರು ದಿನ ಕಾಯಬೇಕು. ಇದರಿಂದ ವ್ಯಕ್ತಿಯ ಬೆಲೆ ಗೊತ್ತಾಗುತ್ತದೆ. ನಾಲ್ಕು ಗೋಡೆ ಮಧ್ಯೆ ಇದ್ದು ಎಲ್ಲವೂ ಕಲಿತೆ’ ಎಂದಿದ್ದಾರೆ ಸೋನು ಗೌಡ. ‘ಜೈಲಿನಲ್ಲಿ ತುಂಬಾನೇ ಸೊಳ್ಳೆ. ಆ ಜೀವನವೇ ಬೇರೆ. 23ನೇ ವಯಸ್ಸಿಗೆ ಜೈಲು ನೋಡಿದ್ನಲ್ಲ ಅನ್ನೋದು ಬೇಸರದ ವಿಚಾರ.…
ಗುರುಗ್ರಾಮ್ ನಲ್ಲಿ ಫುಡ್ ಡೆಲಿವರಿಗೆ ಬಂದ ಸ್ವಿಗ್ಗಿ ಡೆಲಿವರಿ ಬಾಯ್ ಮನೆಗೆ ಹೊರಗಿದ್ದ ಒಂದು ಜತೆ ಶೂವನ್ನು ಕದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು, ಈ ಬಗ್ಗೆ ಅನೇಕರು ಅಕ್ರೋಶ ವ್ಯಕ್ತಪಡಿಸಿದರು. ಇದೀಗ ಈ ವಿಚಾರವಾಗಿ ನಟ ಸೋನು ಸೂದ್ ಮಾತನಾಡಿದ್ದಾರೆ. ಕಳ್ಳತನ ಮಾಡಿದ ಡೆಲಿವರಿ ಬಾಯ್ ಪರ ನಿಂತಿರುವ ಸೋನು ಸೂದ್ ಈ ಬಗ್ಗೆ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ದಯೆಯಿಂದಿರಿ ಮತ್ತು ಆತನ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ. ಈ ಪೋಸ್ಟ್ ಇದೀಗ ಭಾರೀ ಚರ್ಚೆಯಾಗುತ್ತಿದೆ. ಡೆಲಿವರಿ ಬಾಯ್ ಮಾಡಿರುವುದನ್ನು ಸಮರ್ಥಿಸಿಕೊಂಡ ಅವರು ಅವನನ್ನು ಶಿಕ್ಷಿಸುವ ಬದಲು ಅವನಿಗೆ ಹೊಸ ಜೋಡಿ ಶೂಗಳನ್ನು ನೀಡಿ ಎಂದು ಹೇಳಿದ್ದಾರೆ. ಇದೀಗ ಈ ಹೇಳಿಕೆ ಅಕ್ರೋಶಕ್ಕೆ ಕಾರಣವಾಗಿದೆ. ಸೋನು ಸೂದ್ ಅವರ ಈ ಹೇಳಿಕೆಯನ್ನು ಅನೇಕರು ವಿರೋಧಿಸಿದ್ದಾರೆ. ಕಳ್ಳತನಕ್ಕೆ ನಟ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇದೊಂದು ವಿಚಿತ್ರ ಹೇಳಿಕೆ ಎಂದು ಅನೇಕರು ಸೋನು ಸೂದ್ ಅವರ ಪೋಸ್ಟ್ಗೆ…
ತೆಲುಗಿನ ಖ್ಯಾತ ನಟ ಸಯಾಜಿ ಶಿಂಧೆ ಎದೆನೋವಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಏಪ್ರಿಲ್ 11ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ನಟನಿಗೆ ಎಲ್ಲಾ ರೀತಿಯ ಪರೀಕ್ಷೆಗಳನ್ನು ಮಾಡಲಾಗಿದ್ದು, ಅವರ ಹೃದಯದಲ್ಲಿ ಬ್ಲಾಕೇಜ್ ಇದೆ ಎನ್ನುವ ವಿಚಾರ ಗೊತ್ತಾಗಿದೆ. ವೈದ್ಯರು ಆ್ಯಂಜಿಯೋಪ್ಲಾಸ್ಟಿ ಮಾಡಿದ್ದು, ಸಯಾಜಿ ಚೇತರಿಸಿಕೊಳ್ಳುತ್ತಿದ್ದಾರೆ. ಸಯಾಜಿ ಆಸ್ಪತ್ರೆಗೆ ದಾಖಲಾದ ವಿಚಾರ ಕೇಳಿ ಫ್ಯಾನ್ಸ್ ಆತಂಕಕ್ಕೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ವಿಡಿಯೋ ಒಂದನ್ನು ಮಾಡಿ ಪೋಸ್ಟ್ ಮಾಡಿದ್ದರು. ‘ನಾನು ಆರೋಗ್ಯವಾಗಿದ್ದೇನೆ. ನನ್ನ ಬಗ್ಗೆ ಕಾಳಜಿವಹಿಸುವ ಎಲ್ಲಾ ಅಭಿಮಾನಿಗಳು ಚಿಂತಿಸೋದು ಬೇಡ. ನಾನು ಶೀಘ್ರವೇ ನಿಮ್ಮನ್ನು ಮನರಂಜಿಸುತ್ತೇನೆ’ ಎಂದಿದ್ದಾರೆ ಸಯಾಜಿ. ಇತ್ತೀಚೆಗೆ ಸಯಾಜಿ ಅವರಿಗೆ ಅನಾರೋಗ್ಯ ಕಾಡಿತ್ತು. ಈಗ ಅವರಿಗೆ ಎದೆನೋವು ಕೂಡ ಕಾಣಿಸಿಕೊಂಡಿರುವುದರಿಂದ ಕುಟುಂಬದವರು ಆತಂಕಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ಹೃದಯಕ್ಕೆ ಸಂಬಂಧಿಸಿದ ವಿವಿಧ ಪರೀಕ್ಷೆಗಳನ್ನು ಮಾಡಲಾಗಿದೆ. ಅವರ ಹೃದಯ ರಕ್ತನಾಳದಲ್ಲಿ ಶೇ.99 ಬ್ಲಾಕೇಜ್ ಇರುವ ವಿಚಾರ ಗೊತ್ತಾಗಿದೆ. ಸದ್ಯ ಅವರ ಆರೋಗ್ಯ ಸುಧಾರಿಸಿದೆ. ಅವರನ್ನು…
ಕಿಲಾಡಿ ಕಿಟ್ಟು ಸಿನಿಮಾದ ಮೂಲಕ ಬಾಲ ನಟಿಯಾಗಿ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟ ನಟಿ ಸುಧಾರಾಣಿ ಆ ಬಳಿಕ ಸ್ಟಾರ್ ನಟಿಯಾಗಿ ಮಿಂಚಿದ್ದರು. ಪುನೀತ್ ರಾಜ್ ಕುಮಾರ್ ನಟನೆಯ ಆನಂದ್ ಸಿನಿಮಾದಲ್ಲಿ ಅಪ್ಪುಗೆ ಜೋಡಿಇಯಾಗುವ ಮೂಲಕ ಚಂದನವನಕ್ಕೆ ಕಾಲಿಟ್ಟ ಚೆಲುವೆ ನಟಿ ಸುಧಾರಾಣಿ. ಸಂಪ್ರದಾಯಸ್ಥ ಬ್ರಹ್ಮಣ ಕುಟುಂಬದಲ್ಲಿ ಹುಟ್ಟಿ ಬೆಳೆದ ನಟಿ ಸುಧಾರಾಣಿ ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಅರಿವಳಿಕೆ ತಜ್ಞ ಡಾ.ಸಂಜಯ್ ಎಂಬುವವರನ್ನು ಮದುವೆಯಾದರು. ಡಾ.ಸಂಜಯ್ ಜೊತೆ ಅಮೆರಿಕಾದಲ್ಲಿ ವಾಸವಾಗಿದ್ದು ಸುಧಾರಾಣಿ ಅವರಿಗೆ ಪತಿಯಿಂದಲೇ ಜೀವ ಭಯವಿತ್ತು. ಕೆಮಿಕಲ್ ಜೀವದೊಳಗೆ ಇಂಜೆಕ್ಟ್ ಮಾಡ್ತೀನಿ ಎಂದು ಸುಧಾರಾಣಿಗೆ ಪತಿಯೇ ಹೆದರಿಸಿದ್ದರು. ಜೊತೆಗೆ ಸುಧಾರಾಣಿ ಅವರಿಗೆ ಸಂಜಯ್ ಸಾಕಷ್ಟು ಚಿತ್ರಹಿಂಸೆಯನ್ನು ನೀಡುತ್ತಿದ್ದರು. ಕೈಯಲ್ಲಿ ದುಡ್ಡಿಲ್ಲದೆ, ತಿನ್ನೋಕೆ ಏನೂ ಸಿಗದೆ ಅದೆಷ್ಟೋ ಭಾರಿ ಸುಧಾರಾಣಿ ಹಸಿವಿನಿಂದ ನರಳಿದ್ದರು. ಅಲ್ಲದೆ ನಟಿಯ ಪಾಸ್ ಪೋರ್ಟ್ ಕೂಡ ಪತಿ ಕಿತ್ತಿಟ್ಟುಕೊಂಡಿದ್ದರು. ಹಾಗೋ ಹೋಗೋ ಮಾಡಿ ಅಮೆರಿಕಾದಿಂದ ವಾಪಸ್ ಆದ ಸುಧಾರಾಣಿ ಅವರಿಗೆ ಮದುವೆಯ ಬಗ್ಗೆ ಆಸಕ್ತಿಯೇ ಹೊರಟು ಹೋಗಿತ್ತು. ಈ ವೇಳೆ…
ಇಸ್ರೇಲ್ ಮೇಲೆ ಇರಾನ್ ಸದ್ಯದಲ್ಲೇ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದು, ಯುದ್ಧಕ್ಕೆ ಮುಂದಾಗದಂತೆ ಇರಾನ್‌ಗೆ ಬೈಡನ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ‘ಇಸ್ರೇಲ್‌ನ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ. ಯುದ್ಧದಲ್ಲಿ ಇಸ್ರೇಲ್ ದೇಶವನ್ನು ಬೆಂಬಲಿಸುತ್ತೇವೆ. ಇಸ್ರೇಲ್‌ಗೆ ಬೇಕಾದ ಎಲ್ಲ ಸಹಾಯವನ್ನು ಮಾಡಲಿದ್ದೇವೆ. ಯುದ್ಧ ನಡೆಸಿದರೆ ಇರಾನ್ ಯಶ ಕಾಣುವುದಿಲ್ಲ’ ಎಂದು ಅವರು ಹೇಳಿದ್ದಾರೆ. ಡಮಾಸ್ಕಸ್‌ನ ಇರಾನ್ ರಾಯಭಾರ ಕಚೇರಿ ಮೇಲೆ ಇಸ್ರೇಲ್ ದಾಳಿ ನಡೆಸಿ, ಕಾನ್ಸುಲರ್ ಅನೆಕ್ಸ್ ಅನ್ನು ನೆಲಸಮಗೊಳಿಸಿದೆ ಎಂದು ಇರಾನ್ ಆರೋಪಿಸಿತ್ತು. ದಾಳಿಯಿಂದಾಗಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕೋರ್‌ನ (ಐಆರ್‌ಜಿಸಿ) ಏಳು ಸಿಬ್ಬಂದಿ ಮತ್ತು ಇಬ್ಬರು ಸಾರ್ವಜನಿಕರು ಮೃತಪಟ್ಟಿದ್ದರು. ಇದಕ್ಕೆ ಸೇಡು ತೀರಿಸಿಕೊಳ್ಳುವುದಾಗಿ ಟೆಹ್ರಾನ್ ಶಪಥ ಮಾಡಿತ್ತು. ಏಪ್ರಿಲ್ 1ರಂದು ನಡೆದ ವೈಮಾನಿಕ ದಾಳಿಯ ಹೊಣೆಯನ್ನು ಇಸ್ರೇಲ್ ಹೊತ್ತುಕೊಂಡಿಲ್ಲ. ಆದರೆ ಇರಾನ್‌ನ ನೆಲದ ಮೇಲಿನ ದಾಳಿಗೆ ಪ್ರತಿದಾಳಿ ನಡೆಸಿ ತಕ್ಕ ಶಿಕ್ಷೆ ನೀಡುವುದಾಗಿ ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಎಚ್ಚರಿಸಿದ್ದಾರೆ. ಸಂಭವನೀಯ…
ಬುಲ್ ಬುಲ್ ಬೆಡಗಿ ನಟಿ ರಚಿತಾ ರಾಮ್ ಸದ್ಯ ಸಿನಿಮಾಗಳ ಜೊತೆಗೆ ರಿಯಾಲಿಟಿ ಶೋ ಜರ್ಡ್ ಆಗಿಯೂ ಸದ್ದು ಮಾಡ್ತಿದ್ದಾರೆ. ಸದ್ಯ ರಚಿತಾ ಸಂಜು ವೆಡ್ಸ್ ಗೀತಾ 2 ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು ಈ ಮಧ್ಯೆ ದುನಿಯಾ ವಿಜಯ್ ನಟನೆಯ ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರದಲ್ಲಿ ರಚಿತಾ ರಾಮ್ ನಲವತ್ತರ ವಯಸ್ಸಿನ ಪಾತ್ರ ಮಾಡಲಿದ್ದಾರೆ. ಸದಾ ಗ್ಲಾಮರಸ್ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ತಿದ್ದ ರಚಿತಾ ಇದೀಗ 40ರ ಹರೆಯದ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಜಂಟಲ್ ಮ್ಯಾನ್, ಗುರುಶಿಷ್ಯರು ಚಿತ್ರಗಳ ನಿರ್ದೇಶಕ ಹಾಗೂ ಕಾಟೇರ ಚಿತ್ರದ ಲೇಖಕ ಜಡೇಶ ಕೆ ಹಂಪಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಚಿತ್ರದ ಮುಹೂರ್ತ ಸಮಾರಂಭ ಇತ್ತೀಚಿಗೆ ಮಹಾಲಕ್ಷ್ಮೀಪುರದ ಶ್ರೀವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ನಡೆಯಿತು. ರಚಿತಾರಾಮ್ ಈ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದು, ದುನಿಯಾ ವಿಜಯ್ ಪುತ್ರಿ ರಿತನ್ಯ(ಮೋನಿಕಾ) ಈ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. “ಡೇರ್ ಡೆವಿಲ್ ಮುಸ್ತಫಾ” ಖ್ಯಾತಿಯ ಶಿಶಿರ್ ಸಹ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.…
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಕರಿಮಣಿ ಮಾಲೀಕ ನೀನಲ್ಲ ಹಾಡಿನ ಸಾಲು ಇದೀಗ ಸಿನಿಮಾದ ಟೈಟಲ್ ಆಗಿ ಇಡಲಾಗಿದೆ. ಇತ್ತೀಚೆಗೆ ಚಿತ್ರದ ಟೈಟಲ್ ಅನ್ನು ಅನಾವರಣ ಮಾಡಲಾಗಿದೆ. ಸ್ಯಾಂಡಲ್ವುಡ್ನಲ್ಲಿ ಯು ಟರ್ನ್ 2 ಚಿತ್ರದ ಮೂಲಕ ಗಮನ ಸೆಳೆದ ನಿರ್ದೇಶಕ ಚಂದ್ರು ಓಬಯ್ಯ ಈಗ ಮತ್ತೊಂದು ಕ್ಯಾಚೀ ಟೈಟಲ್ನೊಂದಿಗೆ ಈ ಬಾರಿ ಪ್ರೇಕ್ಷಕರ ಮುಂದೆ ಬರ್ತಾ ಇದ್ದಾರೆ. ಕೆಲವು ದಿನಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೇ ವೈರಲ್ ಆಗಿದ್ದ ಹಾಡಿನ ಟೈಟಲ್ ಇಟ್ಟುಕೊಂಡು ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಹೊಸ ಈ ಸಿನಿಮಾದ ಶೀರ್ಷಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಮ್ಯೂಸಿಕ್ ಅಡ್ಡಾದ ಲೋಕೇಶ್ ಟೈಟಲ್ ಲಾಂಚ್ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಚಂದ್ರು ಓಬಯ್ಯ ಯುಟರ್ನ್ 2 ಆದ ನಂತರ ರಾಮು ಅಂಡ್ ರಾಮು ಚಿತ್ರ ಮಾಡಿದ್ದೆ. ಅದು ಸೆನ್ಸಾರ್ ಹಂತದಲ್ಲಿದೆ. ಅಲ್ಲದೇ ಪ್ಯಾಟಿ ಹುಡ್ಗಿ ಹಳ್ಳಿ ಲೈಫು ಇನ್ನೂ ಚಿತ್ರೀಕರಣ ಹಂತದಲ್ಲಿದೆ. ಈಗ ಕರಿಮಣಿ ಮಾಲಿಕ ನೀನಲ್ಲ ಟೈಟಲ್ ಇಟ್ಟುಕೊಂಡು…