Author: Author AIN

ಸ್ಯಾಂಡಲ್ ವುಡ್ ನಿರ್ಮಾಪಕ, ಉದ್ಯಮಿ ಸೌಂದರ್ಯ ಜಗದೀಶ್ ಸಾವು ಇಡೀ ಚಿತ್ರರಂಗಕ್ಕೆ ಆಘಾತ ಉಂಟು ಮಾಡಿದೆ. ದರ್ಶನ್​, ಉಪೇಂದ್ರ, ‘ನೆನಪಿರಲಿ’ ಪ್ರೇಮ್​ ಸೇರಿದಂತೆ ಅನೇಕ ಸೆಲೆಬ್ರಿಟಿಗಳ ಜೊತೆ ಉತ್ತಮವಾದ ಒಡನಾಟ ಹೊಂದಿದ್ದ ಜಗದೀಶ್​ ಅವರು ಏಕಾಏಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದು (ಏಪ್ರಿಲ್​ 11) ಮುಂಜಾನೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಸೌಂದರ್ಯ ಜಗದೀಶ್​ ಅವರ ಸಾವಿನ ಕುರಿತಂತೆ ಎರಡು ಪ್ರಮುಖ ಅನುಮಾನಗಳ ಸೃಷ್ಟಿ ಆಗಿದ್ದವು. ಅವುಗಳಿಗೆ ಸ್ನೇಹಿತ ಶ್ರೇಯಸ್​ ಪ್ರತಿಕ್ರಿಯೆ ನೀಡಿದ್ದಾರೆ. ಆರ್ಥಿಕ ಸಂಕಷ್ಟದಿಂದ ಜಗದೀಶ್​ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬುದು ಕೆಲವರ ಅನುಮಾನ. ಯಾಕೆಂದರೆ, ಕೆಲವು ದಿನಗಳ ಹಿಂದೆ ಬ್ಯಾಂಕ್​ನವರು ಜಗದೀಶ್​ಗೆ ನೋಟಿಸ್​ ನೀಡಿ, ಮನೆಯನ್ನು ಸೀಜ್​ ಮಾಡಲು ಬಂದಿದ್ದರು ಎಂಬ ಮಾಹಿತಿ ಇದೆ. ಆ ಕಾರಣದಿಂದ ಜಗದೀಶ್​ ಆತ್ಮಹತ್ಯೆ ಮಾಡಿಕೊಂಡಿರಬಹುದಾ ಎಂಬ ಶಂಕೆ ಕೆಲವರದ್ದು, ಅದಕ್ಕೆ ಗೆಳೆಯ ಶ್ರೇಯಸ್​ ಉತ್ತರಿಸಿದ್ದಾರೆ. ‘ಬ್ಯಾಂಕ್​ ನೋಟಿಸ್​ಗೂ ಆತ್ಮಹತ್ಯೆಗೂ ಸಂಬಂಧ ಇಲ್ಲ. ನೋಟಿಸ್​ ಇತ್ಯಾದಿ ಎಲ್ಲ ಸುಮಾರು ದಿನದಿಂದ ಇರುವಂಥದ್ದು. ಬಿಸ್ನಿಸ್​ ಬೇರೆ, ಇದು ಬೇರೆ.…

Read More

ಕನ್ನಡ ಚಲನಚಿತ್ರ ನಿರ್ಮಾಪಕ, ಜೆಟ್ ಲ್ಯಾಗ್ ಮಾಲೀಕ ಸೌಂದರ್ಯ ಜಗದೀಶ್ ಮಹಾಲಕ್ಷ್ಮಿ ಲೇಔಟ್ ನಿವಾಸದಲ್ಲಿ ಇಂದು (ಏ.14) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬೆನ್ನಲ್ಲೇ ಲವ್ಲಿ ಸ್ಟಾರ್ ಪ್ರೇಮ್ ಜಗದೀಶ್ ನಿವಾಸಕ್ಕೆ ಭೇಟಿ ನೀಡಿದ್ದು, ಸೌಂದರ್ಯ ಜಗದೀಶ್ ಆತ್ಮಹತ್ಯೆ ಸುದ್ದಿ ಕೇಳಿ ಶಾಕ್‌ ಆಯ್ತು ಎಂದಿದ್ದಾರೆ.  ಸೌಂದರ್ಯ ಜಗದೀಶ್‌ಗೆ ಏನಾಯ್ತು ಎಂಬುದು ನನಗೆ ಗೊತ್ತಿಲ್ಲ. ಒಂದು ಅಪರೂಪದ ಸ್ನೇಹ ನಾವು ಕಳೆದುಕೊಂಡು ಬಿಟ್ಟಿದ್ದೇವೆ. ಯಾರೇ ಸಹಾಯ ಕೇಳಿದ್ರು ಇಲ್ಲ ಎಂದು ಹೇಳುತ್ತಿರಲಿಲ್ಲ. ಇತ್ತೀಚೆಗೆ ಅವರ ಮನೆಯ ಡ್ರೈವರ್ ತೀರಿಕೊಂಡಿದ್ದರು. ಅವರ ಅತ್ತೆ ಕೂಡ ಇತ್ತೀಚೆಗೆ ನಿಧನರಾದರು. ಈಗ ಸೌಂದರ್ಯ ಜಗದೀಶ್ ಆತ್ಮಹತ್ಯೆಯ ಸುದ್ದಿ ಕೇಳಿ ಶಾಕ್ ಆಯ್ತು ಎಂದು ನಟ ಪ್ರೇಮ್ ಹೇಳಿದ್ದಾರೆ. ಇತ್ತೀಚೆಗಷ್ಟೇ ಮಗಳ ಮದುವೆ ಅದ್ಧೂರಿಯಾಗಿ ಮಾಡಿದ್ದರು. ಖುಷಿ ಖುಷಿಯಾಗಿ ಇದ್ದರು. ಎಲ್ಲರನ್ನೂ ಕರೆದು ಪಾರ್ಟಿ ಮಾಡಿದ್ದರು. ಅವರಿಗೆ ಆರ್ಥಿಕ ಸಮಸ್ಯೆ ಏನು ಇರಲಿಲ್ಲ. ಒಂದು ಅಪರೂಪದ ಸ್ನೇಹವನ್ನು ನಾವೆಲ್ಲರೂ ಕಳೆದುಕೊಂಡಿದ್ದೇವೆ. ಅವರ ಕುಟುಂಬಕ್ಕೆ ದುಃಖವನ್ನು ತಡೆದುಕೊಳ್ಳುವ ಶಕ್ತಿ ಕೊಡಲಿ.…

Read More

ತಮಿಳು ನಟ ಧನುಷ್ ಅವರ ತಂದೆ ಎಂದು ಹೇಳಿಕೊಂಡು ಕೋರ್ಟ್​ ಮೆಟ್ಟಿಲೇರಿ ಜೀವನಾಂಶ ಕೋರಿದ್ದ ಹಿರಿಯ ವ್ಯಕ್ತಿ ಕದಿರೇಷನ್​ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಹಲವು ಆರೋಗ್ಯ ಸಮಸ್ಯೆಗಳಿಂದ ಅಸ್ವಸ್ಥರಾಗಿದ್ದ ಆರ್.ಕದಿರೇಶ್​ನ್ (72) ಅವರನ್ನು ಇತ್ತೀಚೆಗೆ ಮಧುರೈನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. 2015ರಲ್ಲಿ ಧನುಷ್ ತಮ್ಮ ಮಗ ಎಂದು ಮದುರೈ ಮೂಲದ ಕದಿರೇಶನ್​ ಮತ್ತು ಮೀನಾಕ್ಷಿ ದಂಪತಿ ನ್ಯಾಯಾಲಯದ ಮೊರೆ ಹೋಗಿದ್ದರು. ಆ ಸಮಯದಲ್ಲಿ ಈ ಸಂಗತಿ ಕಾಲಿವುಡ್​ನಲ್ಲಿ ಭಾರಿ ಸಂಚಲನ ಸೃಷ್ಟಿಸಿತು.ಧನುಷ್ ನಾಯಕನಾಗಿ ಯಶಸ್ಸಿನ ಉತ್ತುಂಗದಲ್ಲಿ ಇರುವಾಗ ಕದಿರೇಶನ್ ಮತ್ತು ಮೀನಾಕ್ಷಿಯ ಈ ವಾದ ಚರ್ಚೆಯ ವಿಷಯವಾಗಿತ್ತು. ಮಗ ಧನುಷ್ ನಮಗೆ ಹೇಳದೆ ಶಾಲೆಯಿಂದ ಓಡಿ ಹೋಗಿದ್ದ. ಬಳಿಕ ನಿರ್ದೇಶಕ ಕಸ್ತೂರಿ ರಾಜಾ ಅವರ ಮನೆ ಸೇರಿ ದತ್ತು ಪುತ್ರನಾದ. ತಮ್ಮ ಮಗ ಈಗ ಸುಸ್ಥಿತಿಯಲ್ಲಿದ್ದಾನೆ. ನಮಗೆ ತಿಂಗಳಿಗೆ ಜೀವನಾಂಶ ಕೊಡಿಸಿ ಎಂದು ಕದಿರೇಶನ್ ಮತ್ತು ಮೀನಾಕ್ಷ ದಂಪತಿ ಆಗ್ರಹಿಸಿದ್ದರು. ಆದರೆ, ಸಂಪೂರ್ಣ ಸಾಕ್ಷ್ಯಾಧಾರಗಳಿಲ್ಲದ ಕಾರಣ ಪ್ರಕರಣವನ್ನು…

Read More

69 ವರ್ಷದ ಸ್ಪೇನ್ ನ ನಟಿ ಅನಾ ಒಬ್ರೆಗಾನ್ ನ 27 ವರ್ಷದ ಮಗ ಅಲೆಸ್ ಲೆಕ್ವಿಯೊ ಕ್ಯಾನ್ಸರ್ ನಿಂದ ಬಳಲುತ್ತಿದ್ದ. ಸಾಯುವ ಮೊದಲು ತಂದೆಯಾಗಬೇಕೆಂದು ಕನಸು ಕಂಡಿದ್ದ. ಅದರಂತೆ ಆತನ ಮರಣಕ್ಕೂ ಮೊದಲು ಆರೋಗ್ಯ ಕೇಂದ್ರದಲ್ಲಿ ವೀರ್ಯವನ್ನು ಸಂಗ್ರಹಿಸಲಾಗಿತ್ತು. ಅಲೆಸ್ ಲೆಕ್ವಿಯೊ ಮರಣದ ನಂತರ ಬಹಳ ಸಮಯದವರೆಗೆ ಅವನ ತಾಯಿಗೆ ಮಗನ ಕೊನೆಯ ಆಸೆ ತಿಳಿದಿರಲಿಲ್ಲ. ಇದರೊಂದಿಗೆ ಅಲೆಸ್ ಲೆಕ್ವಿಯೊ ವೀರ್ಯ ಸಂಗ್ರಹದ ಬಗ್ಗೆ ಅವಳು ತಿಳಿದುಕೊಂಡು, ಬಳಿಕ ತನ್ನ ಮಗನ ಆಸೆ ಪೂರೈಸಲು ನಿರ್ಧರಿಸಿದಳು. ಅದರಂತೆ ಹಲವು ವೈದ್ಯರನ್ನು ಸಂಪರ್ಕಿಸಿ, ಮಗನ ವೀರ್ಯದ ಮೂಲಕ ಮಗುವಿಗೆ ಜನ್ಮ ನೀಡಬೇಕೆಂದುಕೊಂಡಳು. ಕಳೆದ ವರ್ಷ ವೈದ್ಯರ ಬಳಿಗೆ ಹೋಗಿ ಎಲ್ಲಾ ಅಗತ್ಯ ಔಪಚಾರಿಕತೆ ಪೂರ್ಣಗೊಳಿಸಿದರು. ತನ್ನ ಜೀವಕ್ಕೆ ಅಪಾಯವಿದ್ದರೂ ಮಗನ ವೀರ್ಯಾಣುನೊಂದಿಗೆ ಗರ್ಭ ಧರಿಸಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ಅನಿತಾ ಎಂದು ಹೆಸರಿಟ್ಟಿದ್ದಾಳೆ ಅನಾ ಒಬ್ರೆಗಾನ್. ಮಗುವಿನ ಮೊದಲ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ.…

Read More

ನಟ, ಹಿಂದೂಪುರಂ ಶಾಸಕ ನಂದಮೂರಿ ಬಾಲಕೃಷ್ಣ ಮತ್ತೊಮ್ಮೆ ಅಭಿಮಾನಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಅರಾಧಿಸುತ್ತಾರೆ. ಅವರ ಸಿನಿಮಾಗಳು ತೆರೆಗೆ ಬಂದರೆ ಹಬ್ಬದಂತೆ ಸಂಭ್ರಮಿಸುತ್ತಾರೆ. ಆದರೆ ಅದೆಷ್ಟೋ ಭಾರಿ ಕೆಲ ನಟ, ನಟಿಯರು ತಮ್ಮ ಅಭಿಮಾನಿಗಳ ಮೇಲೆ ಗರಂ ಆಗುತ್ತಾರೆ. ಅಂತೆಯೇ ತೆಲುಗು ನಟ ನಂದಮೂರಿ ಬಾಲಕೃಷ್ಣ ಸಾಕಷ್ಟು ಭಾರಿ ಅಭಿಮಾನಿಗಳ ಮೇಲೆ ಗರಂ ಆಗಿದ್ದು ಅಂತೆಯೇ ಈ ಭಾರಿಯೂ ಅಭಿಮಾನಿಗಳ ಮೇಲೆ ತಿರುಗಿ ಬಿದ್ದಿದ್ದಾರೆ. ಬಾಲಕೃಷ್ಣ ಅವರು ತಮ್ಮ ಸಿನಿಮಾ ಬಿಡುಗಡೆ ಕಾರ್ಯಕ್ರಮಗಳು, ರಾಜಕೀಯ ರ್ಯಾಲಿಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಅನುಚಿತವಾಗಿ ವರ್ತಿಸುವ ಅನೇಕ ಘಟನೆಗಳು ಆಗಾಗ್ಗೆ ಸುದ್ದಿಯಾಗುತ್ತವೆ. ಕೆಲವರು ಮಾಡುವ ಕಿಡಿಗೇಡಿತ ಬಾಲಯ್ಯ ಅವರ ಸಿಟ್ಟಿಗೆ ಕಾರಣವಾಗುತ್ತೆ. ಬಾಲಕೃಷ್ಣ ಅವರು ಎರಡು ದಿನಗಳ ಕಾಲ ಅನಂತಪುರ ಜಿಲ್ಲೆಯಲ್ಲಿ ಟಿಡಿಪಿ, ಜನಸೇನೆ ಮತ್ತು ಬಿಜೆಪಿ ಮೈತ್ರಿಕೂಟದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ. ಸ್ವರ್ಣಾಂಧ್ರ ಸರ್ಕಾರ ಯಾತ್ರೆ…

Read More

ಭಾರತೀಯ ಮೂಲದ ಡೆಲಿವರಿ ಡ್ರೈವರ್‌ ನ ಹತ್ಯೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಬ್ರಿಟನ್ ಕೋರ್ಟ್ ಇದೀಗ ಭಾರತ ಮೂಲದ ನಾಲ್ವರಿಗೆ 122 ವರ್ಷಗಳವರೆಗಿನ ಜೈಲು ಶಿಕ್ಷೆ ವಿಧಿಸಿದೆ. ಆರೋಪಿಗಳಾದ ಅರ್ಶದೀಪ್‌ ಸಿಂಗ್‌, ಜಗದೀಪ್‌ ಸಿಂಗ್‌, ಶಿವದೀಪ್‌ ಸಿಂಗ್ರ , ಮನ್‌ಜೋತ್‌ ಸಿಂಗ್‌ಗೆ ತಲಾ ಕನಿಷ್ಠ 28 ವರ್ಷಗಳ ಜೀವಾವಧಿ ಶಿಕ್ಷೆ ವಿಧಿಸಿದೆ. ಕಳೆದ ವರ್ಷ ಆಗಸ್ಟ್‌ ನಲ್ಲಿ ಔರ್ಮನ್‌ ಸಿಂಗ್‌ ಎಂಬ ಚಾಲಕನನ್ನು ಪಶ್ಚಿಮ ಇಂಗ್ಲೆಂಡ್‌ನ‌ಲ್ಲಿ ಹತ್ಯೆ ಮಾಡಲಾಗಿತ್ತು. ಕೊಡಲಿ, ಹಾಕಿ ಸ್ಟಿಕ್‌ ಸೇರಿದಂತೆ ಅಪಾಯಕಾರಿ ಶಸ್ತ್ರಗಳನ್ನು ಬಳಸಿ ಡ್ರೈವರ್ ನನ್ನು ದಾರುಣವಾಗಿ ಕೊಂದಿದ್ದರು. ವಿಚಾರಣೆ ನಡೆಸಿದ ಬ್ರಿಟನ್ ಕೋರ್ಟ್ ಅಪರಾಧ ಸಾಭಿತಾದ ಹಿನ್ನೆಲೆಯಲ್ಲಿ ಜೈಲು ಶಿಕ್ಷೆ ವಿಧಿಸಿದೆ.

Read More

ಇಂದು ಮುಂಜಾನೆ ಅಮೆರಿಕದ ಇಲಿನಾಯ್ಸ್ ನ ಚಿಕಾಗೋದಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಮೂವರು ಮಕ್ಕಳು ಸೇರಿ ಒಟ್ಟು ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಚಿಕಾಗೋ ಪೊಲೀಸ್ ಇಲಾಖೆಯ ಪ್ರಕಾರ, ಐದು ವಯಸ್ಕರು ಮತ್ತು ಮೂವರು ಮಕ್ಕಳು ಸೇರಿದಂತೆ ಒಟ್ಟು ಎಂಟು ಜನರ ಮೇಲೆ ಗುಂಡು ಹಾರಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶಂಕಿತ ಶೂಟರ್ ಅನ್ನು ಭದ್ರತಾ ಪಡೆಗಳು ಹಿಡಿದಿವೆಯೇ ಎಂಬುದು ತಿಳಿದಿಲ್ಲ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

Read More

ಇಸ್ರೇಲ್ ಮೇಲೆ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ ಕ್ರೂಸ್​ ಕ್ಷಿಪಣಿಗಳು ಸೇರಿದಂತೆ 200ಕ್ಕೂ ಹೆಚ್ಚು ಬಗೆಯ ಡ್ರೋನ್​ ಹಾಗೂ ಕ್ಷಿಪಣಿಗಳ ದಾಳಿಗಳನ್ನು ನಡೆಸಿದೆ. ಸಿರಿಯಾದ ರಾಜಧಾನಿ ಡಮಾಸ್ಕಸ್​ನಲ್ಲಿರುವ ತನ್ನ ರಾಯಭಾರ ಕಚೇರಿ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗೆ ಪ್ರತಿಯಾಗಿ ಇರಾನ್ ಈ ದಾಳಿಯನ್ನು ನಡೆಸಿದೆ. ಇಸ್ರೇಲಿ ಮಿಲಿಟರಿಯ ವಕ್ತಾರ, ರಿಯರ್ ಅಡ್ಮ್. ಡೇನಿಯಲ್ ಹಗರಿ ಮಾತನಾಡಿ, ಇರಾನ್ ಹಲವಾರು ಡ್ರೋನ್‌ಗಳು, ಕ್ರೂಸ್ ಕ್ಷಿಪಣಿಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದ್ದು, ಬಹುಪಾಲು ಕ್ಷಿಪಣಿ ಹಾಗೂ ಡ್ರೋಣ್ ಗಳನ್ನು ಇಸ್ರೇಲ್‌ನ ಗಡಿಯ ಹೊರಗೆ ತಡೆಹಿಡಿಯಲಾಗಿದೆ ಎಂದಿದ್ದಾರೆ. ಡ್ರೋನ್​ಗಳು ಹಾಗೂ ಕ್ಷಿಪಣಿಗಳನ್ನು ಗಾಳಿಯಲ್ಲಿ ಹೊಡೆದುರುಳಿಸುವಲ್ಲಿ ಅಮೆರಿಕ ಹಾಗೂ ಬ್ರಿಟಿಷ್ ವಾಯುಪಡೆಗಳು ಇಸ್ರೇಲ್​ಗೆ ಸಹಾಯ ಮಾಡಿವೆ. ಇಸ್ರೇಲ್ ದಕ್ಷಿಣ ಭಾಗದಲ್ಲಿರುವ ಸೇನಾ ನೆಲೆಯಲ್ಲಿ ಸಣ್ಣಪುಟ್ಟ ಹಾನಿಗಳಾಗಿವೆ. ಈ ದಾಳಿಯಿಂದ ಯಾವುದೇ ಸಾವು, ನೋವು ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ. ಇದೇ ವೇಳೆ ದಾಳಿಗೆ ಇಸ್ರೇಲ್ ಪ್ರತಿಕ್ರಿಯೆ ನೀಡುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ದೇಶದ ಭದ್ರತೆ ರಕ್ಷಣೆಗೆ ಸೇನೆ…

Read More

ಬಾಲಿವುಡ್ ನಟ ಸಲ್ಮಾನ್​ ಖಾನ್ ಮನೆ ಮುಂದೆ ಇಂದು ಮುಂಜಾನೆ 5ಗಂಟೆಗೆ ಗುಂಡಿನ ದಾಳಿ ನಡೆದಿದೆ. ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಹೊರಗೆ ನಾಲ್ಕು ಸುತ್ತಿನ ಗುಂಡಿನ ದಾಳಿ ನಡೆಸಲಾಗಿದ್ದು, ಇಬ್ಬರು ಅಪರಿಚಿತರು ಈ ಈ ಗುಂಡಿನ ದಾಳಿ ನಡೆಸಿದ್ದಾರೆ. ಇಬ್ಬರು ಶೂಟರ್‌ಗಳು ಬೈಕ್‌ನಲ್ಲಿ ಬಂದು ನಾಲ್ಕು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಸದ್ಯಕ್ಕೆ ಗಾಯಗೊಂಡಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸಲ್ಮಾನ್ ಖಾನ್ ನಿವಾಸಕ್ಕೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಈ ಗುಂಡಿನ ದಾಳಿಯ ನಂತರ ಮುಂಬೈ ಕ್ರೈಂ ಬ್ರಾಂಚ್ ಜೊತೆಗೆ ಬಾಂದ್ರಾ ಪೊಲೀಸ್ ತಂಡವು ಸ್ಥಳಕ್ಕೆ ತಲುಪಿದೆ. ಅಲ್ಲದೆ ವಿಧಿವಿಜ್ಞಾನ ತಂಡವೂ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ. ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ರಸ್ತೆಯ ಎರಡೂ ಬದಿಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಡಿಸಿಪಿ ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರು ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಅನೇಕ…

Read More

ಟಾಲಿವುಡ್ ನಟಿ ಶೋಭಿತಾ ಧುಲಿಪಾಲ ಸದ್ಯ ಹಾಲಿವುಡ್ ನ ಮಂಕಿ ಮ್ಯಾನ್ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಈಗಾಗಲೇ ಬೇರೆ ಬೇರೆ ದೇಶಗಳಲ್ಲಿ ಬಿಡುಗಡೆ ಆಗಿದ್ದು, ಭಾರತದಲ್ಲಿ ಇದೇ 26ರಂದು ತೆರೆಗೆ ಬರಲಿದೆ. ಚಿತ್ರದಲ್ಲಿ ಶೋಭಿತಾ ವೇಶ್ಯೆಯ ಪಾತ್ರ ಮಾಡಿದ್ದು, ಈ ಪಾತ್ರ ಮಾಡಿದ್ದಕ್ಕೆ ಹೆಮ್ಮೆ ಇದೆ ಎಂದು ನಟಿ ಹೇಳಿಕೊಂಡಿದ್ದಾರೆ. ನಟಿ ಶೋಭಿತಾ ಹೆಸರು ನಟ ನಾಗಚೈತನ್ಯ ಜೊತೆ ಕೇಳಿ ಬಂದಿತ್ತು. ಇಬ್ಬರು ಡೇಟಿಂಗ್ ಮಾಡುತ್ತಿದ್ದು ಸದ್ಯದಲ್ಲೇ ಮದುವೆ ಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡಿದೆ. ಇದೇ ವಿಚಾರದಲ್ಲಿ ಅನಗತ್ಯವಾಗಿ ಸಮಂತಾ ಅವರನ್ನು ನಾಗ ಚೈತನ್ಯ ಫ್ಯಾನ್ಸ್ ಎಳೆದು ತಂದಿದ್ದರು. ಇವರೆಲ್ಲರಿಗೂ ಸಮಂತಾ ಖಡಕ್ ಉತ್ತರ ನೀಡಿದ್ದರು. ಸಮಂತಾ ಜತೆಗಿನ ವಿಚ್ಛೇದನ ನಂತರ ನಾಗಚೈತನ್ಯ ನಟಿ ಶೋಭಿತಾ ಧುಲಿಪಾಲ ಜತೆ ಪ್ರೀತಿಯಲ್ಲಿದ್ದಾರಂತೆ. ಸಾಕಷ್ಟು ದಿನಗಳಿಂದ ನಾಗ ಚೈತನ್ಯ ಶೋಭಿತಾ ಜತೆ ಡೇಟಿಂಗ್‌ನಲ್ಲಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಈ ವಿಷ್ಯಕ್ಕೆ ಸಮಂತಾ ಅವರನ್ನು ಎಳೆದಿದ್ದಾರೆ. ಅದಕ್ಕೆ…

Read More