ಆಸ್ಟ್ರೇಲಿಯಾದ ಬಿಷಪ್ ಒಬ್ಬರನ್ನು ದುಷ್ಕರ್ಮಿಯೋರ್ವ ಮನಸೋ ಇಚ್ಚೆ ಚಾಕುವಿನಿಂದ ಇರಿದಿದ್ದಾನೆ. ಸಿಡ್ನಿಯ ವೇಕ್ಲಿಯಲ್ಲಿ ಧರ್ಮೋಪದೇಶ ನೀಡುವಾಗ ಬಿಷಪ್ ಮಾರ್ ಮಾರಿ ಮೇಲೆ ಹಲ್ಲೆ ನಡೆಸಲಾಗಿದ್ದು ಸದ್ಯ ಹಲ್ಲೆಗೊಳಗಾದ ಬಿಷಪ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾದ ತುಣುಕಿನಲ್ಲಿ ಬಿಷಪ್ ಮಾತನಾಡುತ್ತಿರುವುದನ್ನು ತೋರಿಸುತ್ತದೆ. ಒಬ್ಬ ವ್ಯಕ್ತಿಯು ಅವನ ಬಳಿಗೆ ಬಂದು ಅವನ ಮುಖ ಮತ್ತು ಕುತ್ತಿಗೆಗೆ ಇರಿದು ಕೊಲ್ಲಲು ಪ್ರಾರಂಭಿಸುತ್ತಾನೆ. ವೀಡಿಯೊ ತುಣುಕಿನಲ್ಲಿ, ಜನಸಮೂಹದಿಂದ ಕಿರುಚಾಟಗಳು ಕೇಳುತ್ತವೆ ಮತ್ತು ಗಾಯಗೊಂಡ ವ್ಯಕ್ತಿಗೆ ಸಹಾಯ ಮಾಡಲು ಅನೇಕರು ಮುಂದೆ ಧಾವಿಸಿದರು. ಸಿಡ್ನಿಯಲ್ಲಿ 3 ದಿನಗಳಲ್ಲಿ ಇದು 2ನೇ ಘಟನೆ ಎಂದು ಹೇಳಲಾಗಿದ್ದು ಘಟನೆ ಸಂಬಂಧ ಎನ್‌ಎಸ್‌ಡಬ್ಲ್ಯೂ ಪೊಲೀಸರು ಓರ್ವನನ್ನ ವಶಕ್ಕೆ ಪಡೆದಿದ್ದಾರೆ. ಎರಡು ದಿನಗಳ ಹಿಂದಷ್ಟೆ ಸಿಡ್ನಿಯ ಮಾಲ್‌ವೊಂದರಲ್ಲಿ ಚಾಕು ಇರಿತದ ಘಟನೆ ನಡೆದಿತ್ತು . ಚರ್ಚ್ ಘಟನೆಯಲ್ಲೂ ಹಲವರಿಗೆ ಗಾಯಗಳಾಗಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
Author: Author AIN
ರಾಜ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಾವು ರಂಗೇರಿದೆ. ಇಂದು ಶಿವಮೊಗ್ಗದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪತ್ನಿ, ದೊಡ್ಮನೆ ಕುಟುಂಬದ ಸೊಸೆ ಗೀತಾ ಶಿವರಾಜ್ಕುಮಾರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಿದ್ದಾರೆ. ಇಂದು ಡಿಸಿ ಕಚೇರಿಯಲ್ಲಿ ಗೀತಾ ಶಿವರಾಜ್ಕುಮಾರ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಗೀತಾಗೆ ಪತಿ ಶಿವರಾಜ್ ಕುಮಾರ್, ಸಚಿವ ಮಧು ಬಂಗಾರಪ್ಪ, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಮಂಜುನಾಥ್ ಭಂಡಾರಿ ಸಾಥ್ ಸಾಥ್ ಕೊಟ್ಟಿದ್ದಾರೆ. ನಿರ್ಮಾಪಕರಾದ ಆರ್ ಚಂದ್ರು ಹಾಗೂ ಕೆಪಿ ಶ್ರೀಕಾಂತ್ ಕೂಡ ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದರು. ಗೀತಾ ಶಿವರಾಜ್ಕುಮಾರ್ ಅವರು ಮಾಜಿ ಸಿಎಂ, ಬಿಜೆಪಿ ಹಿರಿಯ ನಾಯಕ ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರ ವಿರುದ್ಧ ಕಣಕ್ಕೆ ಇಳಿದಿದ್ದಾರೆ. ಪಕ್ಷೇತರವಾಗಿ ಈಶ್ವರಪ್ಪ ನಿಂತಿದ್ದಾರೆ. ಘಟಾನುಘಟಿಗಳ ಸ್ಪರ್ಧಿಯಿಂದಾಗಿ ಶಿವಮೊಗ್ಗ ಹೈವೋಲ್ಟೇಜ್ ಕ್ಷೇತ್ರವಾಗಿದೆ. ಗೀತಾ ಪರ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಈ ಮೊದಲು ಶಿವಮೊಗ್ಗದಿಂದ ಸ್ಪರ್ಧೆ ಮಾಡಿ ಗೀತಾ ಶಿವರಾಜ್ಕುಮಾರ್ ಸೋತಿದ್ದರು. ಈ ಬಾರಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ನಟಿಸುತ್ತಿದ್ದ ನಟಿ ಕೃತಿ ಶೆಟ್ಟಿಗೆ ಅದೃಷ್ಟ ಕೈ ಕೊಟ್ಟಿದೆ. ಕೃತಿ ನಟನೆಯ ಸಾಲು ಸಾಲು ಸಿನಿಮಾಗಳು ಸೋಲನುಭವಿಸುತ್ತಿವೆ. ಕೈತುಂಬಾ ಅವಕಾಶಗಳನ್ನು ಇಟ್ಟುಕೊಂಡು ತಿರುಗಾಡುತ್ತಿದ್ದವರು, ಈಗ ಅವಕಾಶಕ್ಕಾಗಿ ಕಾಯುತ್ತಿದ್ದಾರಂತೆ. ಈ ಹಿಂದೆ ಬಿಕಿನಿ ತೊಡಲ್ಲ, ಬೋಲ್ಡ್ ಆಗಿ ಕಾಣಿಸಿಕೊಳ್ಳುವುದಿಲ್ಲ ಎನ್ನುತ್ತಿದ್ದ ನಟಿ ಈಗ ಅದಕ್ಕೆ ರೆಡಿ ಎಂದಿದ್ದಾರೆ. 10ನೇ ವಯಸ್ಸಿಗೆ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದ ಕೃತಿ ಶೆಟ್ಟಿ, 17ನೇ ವಯಸ್ಸಿಗೆ ಹೃತಿಕ್ ರೋಷನ್ ನಟನೆಯ ‘ಸೂಪರ್ 30’ ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸಿದ್ದರು. ಮೊದಲ ಚಿತ್ರ ‘ಉಪ್ಪೇನ’ ಮತ್ತು ‘ಬಂಗಾರ್‌ರಾಜು’ ಸಿನಿಮಾ ಗೆಲ್ತಿದ್ದಂತೆ ತಮ್ಮ ಸಂಭಾವನೆಯನ್ನ ಏರಿಸಿದ್ದರು. ಆ ನಂತರ ನಟಿಸಿದ ಕೆಲ ಚಿತ್ರಗಳು ಸೈಲೆಂಟ್ ಆಗಿ ಬಿಟ್ಟವು. ತಮಿಳಿನ ಸಿನಿಮಾವೊಂದರಲ್ಲಿ ಕೃತಿ ಶೆಟ್ಟಿಗೆ ಬಿಕಿನಿ ತೊಡುವಂತೆ ಸಲಹೆ ನೀಡಿದ್ದಾಗ, ಹೆಚ್ಚನ ಸಂಭಾವನೆ ಕೇಳಿದ್ದರಂತೆ. ಕೃತಿ ಶೆಟ್ಟಿ ಈವರೆಗೂ ಬಿಕಿನಿ ತೊಟ್ಟಿಲ್ಲ. ಈ ಕಾರಣಕ್ಕೆ ಕೃತಿ ಬಿಕಿನಿ ತೊಟ್ಟರೆ, ಈ ಸಿನಿಮಾ ಮತ್ತಷ್ಟು ಬೂಸ್ಟ್ ಸಿಗುತ್ತೆ ಎಂದು…
ಬಿಗ್ ಬಾಸ್ ಬೆಡಗಿ ಹಾಗೂ ಕಿರುತೆರೆಯ ನಟಿ ನಮ್ರತಾ ಗೌಡ ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದೇ ಖುಷಿಯಲ್ಲಿ ನಟಿ ಹೊಸ ಕಾರು ಖರೀದಿ ಮಾಡಿದ್ದಾರೆ. ಬರ್ತಡೇ ದಿನವೇ ನಟಿ ಮನೆಗೆ ಹೊಸ ಅತಿಥಿಯನ್ನು ಬರ ಮಾಡಿಕೊಂಡಿದ್ದಾರೆ. MG ಎಲೆಕ್ಟ್ರಿಕಲ್ ಕಾರು ಖರೀದಿಸಿದ್ದಾರೆ. ಇದರ ಬೆಲೆ 6 ರಿಂದ 9 ಲಕ್ಷಗಳವರೆಗೂ ಇದೆ ಎನ್ನಲಾಗ್ತಿದೆ. ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಮ್ರತಾ ಗೌಡ, ಅನೇಕ ಸೀರಿಯಲ್ಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಯಾದ ಬಳಿಕ ನಮೃತ ಖ್ಯಾತಿ ಮತ್ತಷ್ಟು ಹೆಚ್ಚಾಗಿದೆ. ನಟಿ ನಮ್ರತಾ ಗೌಡ ಬರ್ತ್ ಡೇ ಸೆಲೆಬ್ರೇಷನ್ ಮೂಡ್ನಲ್ಲಿದ್ದಾರೆ. ಕೈಯಲ್ಲಿ ಕೇಕ್ ಹಿಡಿದುಕೊಂಡು ಫೋಟೋಗೆ ಕ್ಯೂಟ್ ಆಗಿ ಫೋಸ್ ನೀಡಿದ್ದಾರೆ. ಬಿಗ್ ಬಾಸ್ ಬೆಡಗಿಯ ಹಾಟ್ ಫೋಸ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಬ್ಲ್ಯಾಕ್ ಡ್ರೆಸ್ನಲ್ಲಿ ಮಿಂಚುತ್ತಿರುವ ನಮ್ರತಾ ಗೌಡ, ಯಾವ ಬಾಲಿವುಡ್ ಬ್ಯೂಟಿಗೂ ಕಡಿಮೆ ಇಲ್ಲದಂತೆ ಗ್ಲಾಮರಸ್ ಆಗಿ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ಡಾರ್ಕ್…
31-05-2024ನೇ ತಾರೀಖಿಗೆ ಗರಿಷ್ಠ 5 ವರ್ಷ ಅವಧಿ ಪೂರ್ಣಗೊಂಡು ನಿರ್ದಿಷ್ಟಪಡಿಸಿದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರೌಢ ಶಾಲಾ ಮುಖ್ಯ ಶಿಕ್ಷಕರು/ತತ್ಸಮಾನ ಗ್ರೂಪ್ ‘ಬಿ’ ವೃಂದದ ಶಿಕ್ಷಕರುಗಳ ಕರಡು ಪಟ್ಟಿ ಪ್ರಕಟಿಸುವ ಬಗ್ಗೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಮೇಲಿನ ವಿಷಯ ಮತ್ತು ಉಲ್ಲೇಖಗಳಿಗೆ ಸಂಬಂಧಿಸಿದಂತೆ ದಿನಾಂಕ: 31-05-2024ಕ್ಕೆ ಗರಿಷ್ಠ 05 ವರ್ಷ ಅವಧಿ ಪೂರ್ಣಗೊಂಡು ನಿರ್ದಿಷ್ಟಪಡಿಸಿದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರೌಢ ಶಾಲಾ ಮುಖ್ಯ ಶಿಕ್ಷಕರು/ ತತ್ಸಮಾನ ಗ್ರೂಪ್-‘ಬಿ’ ವೃಂದದ ಶಿಕ್ಷಕರುಗಳ ಕರಡು ಪಟ್ಟಿಯನ್ನು ತಂತ್ರಾಂಶದ್ದಲಿ ಪ್ರಕಟಿಸಿರುತ್ತಾರೆ. ಸದರಿ ಕರಡು ಪಟ್ಟಿಯನ್ನು ಈ ಪತ್ರದೊಂದಿಗೆ ಲಗತ್ತಿಸಿ ಕಳುಹಿಸಿದೆ. ಪ್ರಯುಕ್ತ ಸದರಿ ಪಟ್ಟಿಯನ್ನು ತಮ್ಮ ಕಛೇರಿಯಲ್ಲಿ ಪ್ರಕಟಿಸುವುದು. ಪ್ರಕಟಿತ ಕರಡು ತಾತ್ಕಾಲಿಕ ಪಟ್ಟಿಗೆ ಆಕ್ಷೇಪಣೆಗಳನ್ನು ಹಾಗೂ ಸೆಕ್ಷನ್-10 ರಡಿಯಲ್ಲಿ ಕೌನ್ಸಲಿಂಗ್ ಆಧ್ಯತೆ ಸಲ್ಲಿಸಲು ದಾಖಲೆಗಳನ್ನು ದಿನಾಂಕ: 15-04-2024 ರ ವರೆಗೆ ನೀಡುವುದು.
ಪಾಕಿಸ್ತಾನದಲ್ಲಿ ಜೈಲು ಸೇರಿದ್ದ ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ ನನ್ನು ಹತ್ಯೆ ಮಾಡಿದ್ದ ಹಂತಕ ಅಮೀರ್ ಸರ್ಫರಾಜ್ ಅಲಿಯಾಸ್ ತಾಂಬಾನನ್ನು ಲಾಹೋರ್‌ನಲ್ಲಿ ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಪಾಕಿಸ್ತಾನದ ಲಾಹೋರ್‌ನ ಇಸ್ಲಾಂಪುರ ಪ್ರದೇಶದಲ್ಲಿ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ತಾಂಬಾ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ತಾಂಬಾನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಆತ ಸಾವನ್ನಪ್ಪಿದ್ದಾನೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ 1990ರಲ್ಲಿ ಬಾಂಬ್ ಸ್ಫೋಟ ಘಟನೆ ಸಂಭವಿಸಿ 14 ಮಂದಿ ಬಲಿಯಾಗಿದ್ದರು. ಭಾರತದಿಂದ ಆಕಸ್ಮಿಕವಾಗಿ ಪಾಕಿಸ್ತಾನದ ಗಡಿಭಾಗಕ್ಕೆ ಹೋಗಿದ್ದ ಪಂಜಾಬ್ನ ಸರಬ್ಜಿತ್ ಸಿಂಗ್ರನ್ನು ಪಾಕಿಸ್ತಾನದ ಸೈನಿಕರು ಹಿಡಿದಿದ್ದರು. ಪಂಜಾಬ್ ಬಾಂಬ್ ಸ್ಫೋಟ ಘಟನೆಯಲ್ಲಿ ಸರಬ್ಜಿತ್ ಕೈವಾಡ ಇದೆ ಎಂದು ಪಾಕಿಸ್ತಾನ ಬಗೆಯಿತು. ಭಾರತದ ಅಧಿಕಾರಿಗಳು ಮತ್ತು ಸರಬ್ಜಿತ್ ಸಿಂಗ್ ಕುಟುಂಬ ಈ ಆರೋಪವನ್ನು ನಿರಾಕರಿಸಿದರೂ ಅವರನ್ನು ಜೈಲಿನಲ್ಲಿ ಕೂಡಿ ಹಾಕಲಾಗಿತ್ತು. ಲಾಹೋರ್‌ನ ಕೋಟ ಲಖಪತ್ ಜೈಲಿನಲ್ಲಿ 23 ವರ್ಷ ಕಾಲ ಸರಬಜಿತ್ ಸಿಂಗ್ ಅವರನ್ನು…
ಜಿ 7 ರಾಷ್ಟ್ರಗಳ ನಾಯಕರು ಭಾನುವಾರ ಇಸ್ರೇಲ್ ಮೇಲಿನ ಇರಾನ್ ಭಯಾನಕ ದಾಳಿಯನ್ನು ಖಂಡಿಸಿವೆ. ಇಸ್ರೇಲ್ ವಿರುದ್ಧದ ಇರಾನ್ ದಾಳಿಯನ್ನು ನಾವು ಸರ್ವಾನುಮತದಿಂದ ಖಂಡಿಸಿದ್ದೇವೆ ಎಂದು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಚಾರ್ಲ್ಸ್ ಮೈಕೆಲ್ ಆನ್ಲೈನ್ ಸಭೆಯ ನಂತರ ತಿಳಿಸಿದ್ದಾರೆ. ಉದ್ವಿಗ್ನತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಲು ನಾವು ನಮ್ಮ ಎಲ್ಲಾ ಪ್ರಯತ್ನಗಳನ್ನು ಮುಂದುವರಿಸುತ್ತೇವೆ. ಗಾಝಾದಲ್ಲಿನ ಬಿಕ್ಕಟ್ಟನ್ನು ಆದಷ್ಟು ಬೇಗ ಕೊನೆಗೊಳಿಸುವುದು, ವಿಶೇಷವಾಗಿ ತಕ್ಷಣದ ಕದನ ವಿರಾಮದ ಮೂಲಕ, ವ್ಯತ್ಯಾಸವನ್ನುಂಟು ಮಾಡುತ್ತದೆ. ಮತ್ತಷ್ಟು ಅಸ್ಥಿರಗೊಳಿಸುವ ಉಪಕ್ರಮಗಳಿಗೆ ಪ್ರತಿಕ್ರಿಯೆಯಾಗಿ ಮುಂದುವರಿಯಲು ಸಿದ್ಧರಿದ್ದೇವೆ ಎಂದು ನಾಯಕರು ಇಸ್ರೇಲ್ ಗೆ ತಮ್ಮ ಸಂಪೂರ್ಣ ಬೆಂಬಲವನ್ನು ಸೂಚಿಸಿದರು. ಪರಿಸ್ಥಿತಿಯನ್ನು ಸ್ಥಿರಗೊಳಿಸಲು ಮತ್ತು ಮತ್ತಷ್ಟು ಉಲ್ಬಣಗೊಳ್ಳುವುದನ್ನು ತಡೆಯಲು ನಾವು ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ಇಟಲಿಯ ಜಿ 7 ಅಧ್ಯಕ್ಷರು ಸಭೆಯ ನಂತರ ಪ್ರಕಟಿಸಿದ ವೀಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಉತ್ಸಾಹದಲ್ಲಿ, ಇರಾನ್ ಮತ್ತು ಅದರ ಪ್ರತಿನಿಧಿಗಳು ತಮ್ಮ ದಾಳಿಯನ್ನು ನಿಲ್ಲಿಸಬೇಕೆಂದು ನಾವು ಒತ್ತಾಯಿಸುತ್ತೇವೆ ಮತ್ತು ಮತ್ತಷ್ಟು ಅಸ್ಥಿರಗೊಳಿಸುವ…
ಕುಟುಂಬ ಸದಸ್ಯರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಏಕಾಏಕಿ ದುಷ್ಕರ್ಮಿಗಳು 11 ಮಕ್ಕಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಓರ್ವ ಬಾಲಕಿ ಮೃತಪಟ್ಟಿದ್ದು 10 ಮಕ್ಕಳ ಸ್ಥಿತಿ ಗಂಭೀರವಾಗಿರುವ ಘಟನೆ ಚಿಕಾಗೊದಲ್ಲಿ ನಡೆದಿದೆ. ಅರಿಯಾನಾ ಮೊಲಿನಾ (8) ಮೃತಪಟ್ಟ ಬಾಲಕಿ. ಈಕೆಯ ತಲೆಗೆ ಗುಂಡು ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಗುಂಡಿನ ದಾಳಿಯಲ್ಲಿ 11 ಮಕ್ಕಳ ಪೈಕಿ ನಾಲ್ವರು ಮಕ್ಕಳು, ಒಂದು ವರ್ಷದ ಬಾಲಕ ಮತ್ತು ಎಂಟು ವರ್ಷದ ಬಾಲಕನಿಗೆ ಗುಂಡು ತಗುಲಿದ್ದು ಎಲ್ಲರ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡ ಮಕ್ಕಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕಳೆದ ೩೦ ವರ್ಷಗಳಿಂದ ಇದೇ ಬಡಾವಣೆಯಲ್ಲಿ ಜೀವನ ನಡೆಸುತ್ತಿದ್ದೇವೆ. ಯಾವ ಉದ್ದೇಶದಿಂದ ಗುಂಡಿನ ದಾಳಿ ನಡೆಸಿದ್ದಾರೆಂದು ಗೊತ್ತಿಲ್ಲ. ಆದರೆ ನನ್ನ ಮಗಳು ಮೃತಪಟ್ಟಿರುವುದು ಇನ್ನೂ ನನ್ನ ಹೆಂಡತಿಗೆ ಗೊತ್ತಿಲ್ಲ ಎಂದು ಬಾಲಕಿಯ ತಂದೆ ಪ್ರತಿಕ್ರಿಯಿಸಿದ್ದಾರೆ. ಪೊಲೀಸರು ಗುಂಡು ಹಾರಿಸಿದ ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ. ಈ ಗುಂಡಿನ ದಾಳಿಗೆ ನಿಖರವಾದ…
ಸ್ಯಾಂಡಲ್ ವುಡ್ ನಿರ್ಮಾಪಕ, ಉದ್ಯಮಿ ಸೌಂದರ್ಯ ಜಗದೀಶ್ ಏ.14ರಂದು ಬೆಳಗ್ಗೆ ನೇಣಿಗೆ ಶರಣಾಗಿದ್ದಾರೆ. ಬಳಿಕ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಯಿತು. ಮಧ್ಯಾಹ್ನದ ವೇಳೆಗೆ ಸೌಂದರ್ಯ ಜಗದೀಶ್ ಅವರ ಮೃತದೇಹವನ್ನು ಮನೆಗೆ ತೆಗೆದುಕೊಂಡು ಬರಲಾಗಿದೆ. ಇಂದು ಚೆನ್ನರಾಯಪಟ್ಟಣ ತಾಲೂಕಿನ ಹಿರಿಸಾವೆಯಲ್ಲಿ ಸೌಂದರ್ಯ ಜಗದೀಶ್ ಅವರ ಅಂತ್ಯಕ್ರಿಯೆ ನಡೆಯಲಿದೆ. ಬೆಳಗ್ಗೆ 9 ಗಂಟೆವರೆಗೆ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಮಧ್ಯಾಹ್ನ 12 ಗಂಟೆಯಿಂದ 1 ಗಂಟೆ ಒಳಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಸೌಂದರ್ಯ ಜಗದೀಶ್ ಅವರ ನಿಧನದಿಂದ ಚಿತ್ರರಂಗಕ್ಕೆ ಆಘಾತ ಉಂಟಾಗಿದೆ. ಉದ್ಯಮಿ ಆಗಿದ್ದ ಸೌಂದರ್ಯ ಜಗದೀಶ್ ಅವರು ನಂತರ ಸಿನಿಮಾದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಚಿತ್ರರಂಗದ ಹಲವರ ಜೊತೆ ಅವರು ಒಡನಾಟ ಹೊಂದಿದ್ದರು. ಶ್ರೀಮುರಳಿ, ದರ್ಶನ್, ಉಪೇಂದ್ರ, ಗುರುಕಿರಣ್, ತರುಣ್ ಸುಧೀರ್, ಸಾರಾ ಗೋವಿಂದು, ಕೆ. ಮಂಜು ಮುಂತಾದವರು ಬಂದು ಸೌಂದರ್ಯ ಜಗದೀಶ್ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಜಗದೀಶ್ ಪುತ್ರ ಸ್ನೇಹಿತ್ ಅವರು…
ರಿಷಬ್ ಶೆಟ್ಟಿ ನಟನೆಯ ಕಾಂತಾರ ಸಿನಿಮಾದ ಮೂಲಕ ಖ್ಯಾತಿ ಘಳಿಸಿದ ನಟಿ ಸಪ್ತಮಿ ಗೌಡ ಸದ್ಯ ಪರಭಾಷೆಯಲ್ಲಿ ಮಿಂಚುತ್ತಿದ್ದಾರೆ. ಹಿಂದಿ ಸಿನಿಮಾದಲ್ಲಿ ನಟಿಸಿ ಬಂದಿರುವ ಚೆಲುವೆ ಇದೀಗ ಸ್ಟಾರ್ ನಟನಿಗೆ ಜೋಡಿಯಾಗುವ ಮೂಲಕ ಟಾಲಿವುಡ್ ಗೆ ಎಂಟ್ರಿಕೊಟ್ಟಿದ್ದಾರೆ. ತೆಲುಗು ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಸ್ವತಃ ಸಪ್ತಮಿ ಗೌಡ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘ನಿತಿನ್ ಸಿನಿಮಾದಲ್ಲಿ ನಾನು ನಟಿಸುತ್ತಿದ್ದೇನೆ. ಸಿನಿಮಾ ಶೂಟಿಂಗ್ ಕೂಡ ಶುರುವಾಗಿದೆ. ನಾನು ಹೋಗಿ ಸೆಟ್ ಸೇರಿಕೊಳ್ಳಬೇಕಿದೆ’ ಎಂದಿದ್ದಾರೆ. ಚಿತ್ರಕ್ಕಾಗಿ ಸಪ್ತಮಿ ಗೌಡ ಕುದುರೆ ಸವಾರಿ ಕಲಿಯುತಿದ್ದಾರೆ. ಈ ಬಗ್ಗೆಯೂ ಹೇಳಿಕೊಂಡಿರುವ ನಟಿ, ‘ನಾನು ಕುದುರೆ ಸವಾರಿ ಕಲಿಯುತ್ತಿದ್ದೇನೆ. ಸಂಪೂರ್ಣವಾಗಿ ಕಲಿತಿಲ್ಲ. ಇನ್ನೂ ಕಲಿಯುತ್ತಿದ್ದೇನೆ’ ಎಂದಿದ್ದಾರೆ. ಸದ್ಯ ಪಾತ್ರದ ಬಗ್ಗೆ ಅವರು ಹೆಚ್ಚು ಮಾಹಿತಿ ಬಿಟ್ಟುಕೊಡುವುದಿಲ್ಲ ಎಂದಿದ್ದಾರೆ. ಸಪ್ತಮಿ ಗೌಡ ಅವರು ಮೊದಲು ‘ಪಾಪ್ಕಾರ್ನ್ ಮಂಕಿ ಟೈಗರ್’ ಸಿನಿಮಾದಲ್ಲಿ ನಟಿಸಿದರು. ಈ ಚಿತ್ರದಲ್ಲಿ ರಗಡ್ ಅವತಾರ ತಾಳಿದ್ದರು. ಆ ಬಳಿಕ ‘ಕಾಂತಾರ’ಸಿನಿಮಾದಲ್ಲಿ ಲೀಲಾ ಹೆಸರಿನ ಪಾತ್ರ ಮಾಡಿದರು. ಈ ಪಾತ್ರವೂ…