Author: Author AIN

ಹಬ್ಬ, ಹರಿದಿನಗಳ ಬಂತು ಅಂದ್ರೆ ಸಾಮಾನ್ಯವಾಗಿ ಮಹಿಳೆಯರು ಚಿನ್ನ ಬೆಳ್ಳಿಯನ್ನು ಖರೀದಿಸಲು ಮುಂದಾಗುತ್ತಾರೆ. ಆದರೆ ಹೆಚ್ಚುತ್ತಿರುವ ಬೆಲೆಯಿಂದಾಗಿ ಮಹಿಳೆಯರ ಆಸೆಗೆ ತಣ್ಣೀರೆರಚಿದಂತಾಗಿದೆ. ಇಂದು ರಾಮನವಮಿ ಹಿನ್ನೆಲೆಯಲ್ಲಿ ಚಿನ್ನ ಬೆಳ್ಳಿ ಕೊಂಡುಕೊಳ್ಳಬೇಕು ಎಂದು  ಕೊಂಡವರಿಗೆ ಬೆಲೆ ಏರಿಕೆ ಮತ್ತೆ ಆಭರಣ ಖರೀದಿಗೆ ತಣ್ಣೀರೆರಚಿದೆ. 22 ಕ್ಯಾರೆಟ್‌ ಚಿನ್ನದ ಬೆಲೆ ಇಂದು 1 ಗ್ರಾಂ ಚಿನ್ನಕ್ಕೆ 6,795 ರೂ. ಇದೆ. ನಿನ್ನೆ 6,705 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 90 ರೂ ಏರಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 54,360 ರೂ. ನೀಡಬೇಕು. ನಿನ್ನೆ 53,640 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 720 ರೂ. ಹೆಚ್ಚಾಗಿದೆ. 10 ಗ್ರಾಂ ಚಿನ್ನಕ್ಕೆ 67,950 ರೂ ಇದೆ. ನಿನ್ನೆ 67,050 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 900 ರೂ. ಏರಿಕೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,79,500 ರೂ. ನೀಡಬೇಕು. ನಿನ್ನೆ 6,70,500 ರೂ. ಇದ್ದು ಈ ದರಕ್ಕೆ…

Read More

ದಕ್ಷಿಣ ಲೆಬನಾನ್ ನಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಇಬ್ಬರು ಕಮಾಂಡರ್ ಗಳು ಸೇರಿದಂತೆ ಮೂವರು ಹಿಜ್ಬುಲ್ಲಾ ಉಗ್ರರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಪಡೆ  ಮಾಹಿತಿ ನೀಡಿದೆ. ಐಡಿಎಫ್ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, “ರಾಡ್ವಾನ್ ಪಡೆಗಳ ಪಶ್ಚಿಮ ವಲಯದ ರಾಕೆಟ್ ಗಳ ಹಾಗೂ ಕ್ಷಿಪಣಿಗಳ ಘಟಕದ ಕಮಾಂಡರ್ ಮುಹಮ್ಮದ್ ಹುಸೇನ್ ಶಹೌರಿ ದಕ್ಷಿಣ ಲೆಬನಾನ್ನ ಕಫರ್ ಡೌನೈನ್ನಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ.” “ತನ್ನ ಪಾತ್ರದ ಭಾಗವಾಗಿ, ಮುಹಮ್ಮದ್ ಲೆಬನಾನ್ನ ಮಧ್ಯ ಮತ್ತು ಪಶ್ಚಿಮ ಪ್ರದೇಶಗಳಿಂದ ಇಸ್ರೇಲಿ ಭೂಪ್ರದೇಶದ ಕಡೆಗೆ ರಾಕೆಟ್ ಮತ್ತು ಕ್ಷಿಪಣಿ ಉಡಾವಣೆಗಳನ್ನು ಯೋಜಿಸಿದರು ಮತ್ತು ಉತ್ತೇಜಿಸಿದರು” ಎಂದು ಐಡಿಎಫ್ ಹೇಳಿಕೆಯಲ್ಲಿ ತಿಳಿಸಲಾಗಿದೆ. ಐಡಿಎಫ್ ಪ್ರಕಾರ, ಹಿಜ್ಬುಲ್ಲಾದ ರಾಕೆಟ್ಸ್ ಮತ್ತು ಕ್ಷಿಪಣಿ ಘಟಕದ ಕಾರ್ಯಕರ್ತ ಮಹಮೂದ್ ಇಬ್ರಾಹಿಂ ಫದ್ಲಲ್ಲಾ ಕೂಡ ಅದೇ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಇದಕ್ಕೂ ಮೊದಲು, ಐಡಿಎಫ್ ಪ್ರತ್ಯೇಕ ಹೇಳಿಕೆಯಲ್ಲಿ, “ಲೆಬನಾನ್ನ ಐನ್ ಎಬೆಲ್ ಪ್ರದೇಶದಲ್ಲಿ ಹಿಜ್ಬುಲ್ಲಾದ ಕರಾವಳಿ ವಲಯದ ಕಮಾಂಡರ್ ಇಸ್ಮಾಯಿಲ್ ಯೂಸುಫ್…

Read More

ಖ್ಯಾತ ನಟ ದ್ವಾರಕೀಶ್ ನಿನ್ನೆ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಟ ಕಿಚ್ಚ ಶೂಟಿಂಗ್ ಬ್ರೇಕ್ ಹಾಕಿ ದ್ವಾರಕೀಶ್ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಮ್ಯಾಕ್ಸ್ ಸಿನಿಮಾದ ಶೂಟಿಂಗ್ ಗಾಗಿ ಚೆನ್ನೈನಲ್ಲಿದ್ದ ಸುದೀಪ್, ಇಂದು ಬೆಳಗ್ಗೆ ಬೆಂಗಳೂರಿಗೆ ಆಗಮಿಸಿ ದ್ವಾರಕೀಶ್ ಕುಟುಂಬದ ದುಃಖದಲ್ಲಿ ಭಾಗಿಯಾಗಿದ್ದಾರೆ. ದ್ವಾರಕೀಶ್ ಬ್ಯಾನರ್ ನಲ್ಲಿ ಸುದೀಪ್ ಸಿನಿಮಾ ಮಾಡಿದ್ದರು. ವಿಷ್ಣುವರ್ಧನ್ ಹೆಸರಿನ ಈ ಸಿನಿಮಾ ದ್ವಾರಕೀಶ್ ಅವರ ಆರ್ಥಿಕ ಸ್ಥಿತಿಯನ್ನು ಚೇತರಿಕೆ ಕಾಣುವಂತೆ ಮಾಡಿತ್ತು ರವೀಂದ್ರ ಕಲಾಕ್ಷೇತ್ರದಲ್ಲಿ ಸದ್ಯ ದ್ವಾರಕೀಶ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ದ್ವಾರಕೀಶ್ ಅವರ ಅಂತ್ಯಕ್ರಿಯೆಯನ್ನು ಬೆಂಗಳೂರಿನ ಟಿ.ಆರ್ ಮಿಲ್ ರುದ್ರಭೂಮಿಯಲ್ಲಿ ಮಾಡುವುದಾಗಿ ದ್ವಾರಕೀಶ್ ಅವರ ಪುತ್ರ ಯೋಗೀಶ್ ತಿಳಿಸಿದ್ದಾರೆ. ಬ್ರಾಹ್ಮಣರ ವಿಧಿ ವಿಧಾನದ ರೀತಿಯಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತಿದ್ದು, ದ್ವಾರಕೀಶ್ ಅವರ ಹಿರಿಯ ಪುತ್ರ ವಿಧಿ ವಿಧಾನಗಳನ್ನು ನೆರವೇರಿಸಲಿದ್ದಾರೆ. ಬೆಳಗ್ಗೆ ಎಂಟು ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ…

Read More

ಬಾಲಿವುಡ್ ನಟ ಸಲ್ಮಾನ್ ಖಾನ್ ನಿವಾಸದ ಎದುರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ ಬಳಿಕ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸಲ್ಮಾನ್ ಖಾನ್ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಮುಂಬೈನ ಬಾಂದ್ರಾ ನಿವಾಸದಲ್ಲಿ ಸಲ್ಮಾನ್ ಖಾನ್ ಅವರನ್ನು ಭೇಟಿ ಮಾಡಿದ ಶಿಂಧೆ ಗುಂಡಿನ ದಾಳಿಯ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಈ ವೇಳೆ ಸಲ್ಮಾನ್​ ಖಾನ್​ ತಂದೆ ಸಲೀಂ ಖಾನ್​ ಜೊತೆ ಏಕನಾಥ್​ ಶಿಂಧೆ ಅವರು ಮಾತುಕಥೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಲ್ಮಾನ್ ಖಾನ್ ವಿರೋಧಿಗಳಿಗೆ ಖಡಕ್​ ಎಚ್ಚರಿಗೆ ನೀಡಿದ್ದಾರೆ. ‘ನಾನು ಸಲ್ಮಾನ್​ ಖಾನ್​ ಅವರನ್ನು ಭೇಟಿ ಮಾಡಿದ್ದೇವೆ. ಅವರ ಜೊತೆ ನಮ್ಮ ಸರ್ಕಾರ ಇದೆ ಎಂದು ಭರವಸೆ ನೀಡಿದ್ದೇನೆ. ಈ ಘಟನೆಗೆ ಸಂಬಂಧಿಸಿದಂತೆ ತಕ್ಷಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ತಿಳಿಸಿದ್ದೆ. ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇದು ಮಹಾರಾಷ್ಟ್ರ. ಇಲ್ಲಿ ಯಾವುದೇ ಗ್ಯಾಂಗ್​ ಉಳಿದುಕೊಂಡಿಲ್ಲ. ಎಲ್ಲ ಗ್ಯಾಂಗ್​ ಮತ್ತು ಗೂಂಡಾಗಳನ್ನು ಕಿತ್ತು ಹಾಕುತ್ತೇವೆ. ಇಲ್ಲಿ ಯಾವುದೇ…

Read More

ಸ್ಯಾಂಡಲ್ ವುಡ್ ನ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ತಮ್ಮ 81 ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ದ್ವಾರಕೀಶ್ ಜೊತೆ ಕನ್ನಡ ಚಿತ್ರರಂಗದ ಅನೇಕ ಸ್ಟಾರ್​ ಕಲಾವಿದರು ಕೆಲಸ ಮಾಡಿದ್ದರು. ಅವರು ನಿರ್ಮಾಣ ಮಾಡಿದ್ದ ‘ಆಪ್ತಮಿತ್ರ’ ಚಿತ್ರದಲ್ಲಿ ರಮೇಶ್​ ಅರವಿಂದ್​ ನಟಿಸಿದ್ದರು. ದ್ವಾರಕೀಶ್​ ಅವರ ಅಗಲಿಕೆಯ ವಿಷಯ ತಿಳಿದು ರಮೇಶ್​ ಮರುಗಿದ್ದಾರೆ. ದ್ವಾರಕೀಶ್​ ಅವರ ವ್ಯಕ್ತಿತ್ವ ಎಂಥದ್ದು ಎಂಬುದನ್ನು ರಮೇಶ್​ ಅರವಿಂದ್ ಮೆಲುಕು ಹಾಕಿದ್ದಾರೆ. ‘ನಾವೆಲ್ಲ ವಿದ್ಯಾರ್ಥಿಗಳಾಗಿದ್ದಾಗ ‘ಕಳ್ಳ ಕುಳ್ಳ’, ‘ಸಿಂಗಾಪುರದಲ್ಲಿ ರಾಜಾ ಕುಳ್ಳ’, ‘ಕಿಟ್ಟು ಪುಟ್ಟು’ ಮುಂತಾದ ಸಿನಿಮಾಗಳನ್ನು ನೋಡಿ ಬಹಳ ಇಷ್ಟ ಆಗಿತ್ತು. ದ್ವಾರಕೀಶ್​ ಅವರ ಮನೆ ನಮ್ಮ ಮನೆ ಬಳಿಯೇ ಇತ್ತು. ಎನ್​.ಆರ್​. ಕಾಲೋನಿಯಲ್ಲಿ ಇರುವ ಅವರ ಮನೆಯ ಸುತ್ತ ನಾವು ಸೈಕಲ್​ನಲ್ಲಿ ರೌಂಡ್​ ಹೊಡೆಯುತ್ತಿದ್ದೆವು. ಇದೇ ದ್ವಾರಕೀಶ್​ ಅವರ ಮನೆ ಎಂದು ಹೇಳಿಕೊಂಡು ಹೋಗುತ್ತಿದ್ದೆವು. ಕೆಲವು ವರ್ಷಗಳ ನಂತರ, ನಾವು ಕಾಲೇಜಿಗೆ ಬಂದಾಗ ಆ ಮನೆಯನ್ನು ದ್ವಾರಕೀಶ್​ ಸರ್​ ಮಾರಿಬಿಟ್ಟಿದ್ದರು ಅಂತ ಕೇಳಿದೆವು. ನಮಗೆ ಆಗ ಅಯ್ಯೋ ಎನಿಸಿತು’…

Read More

ಸ್ಯಾಂಡಲ್‌ವುಡ್ ನಟ ಕಮ್ ನಿರ್ದೇಶಕ ದ್ವಾರಕೀಶ್ ತಮ್ಮ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ದ್ವಾರಕೀಶ್ ನೇತ್ರದಾನ ಮಾಡುವ ಮೂಲಕ ಯುವಜನತೆಗೆ ಮಾದರಿಯಾಗಿದ್ದಾರೆ. ಡಾ.ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ನೇತ್ರದಾನ ಮಾಡಿದ್ದರು. ಈಗ ದ್ವಾರಕೀಶ್ ಕೂಡ ತಮ್ಮ ಸಾವಿನ ನಂತರ ನೇತ್ರ ದಾನ ಮಾಡುವ ಮೂಲಕ ಇತರರ ಬಾಳಿಗೆ ಬೆಳಕಾಗಿದ್ದಾರೆ. ದ್ವಾರಕೀಶ್ ಕಣ್ಣನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಿದ್ದಾರೆ. ಕುಟುಂಬದ ಸಮ್ಮತಿಯ ಮೇರೆಗೆ ಡಾ.ಶೈಲಜಾ ನೇತೃತ್ವದಲ್ಲಿ ನೇತ್ರ ಕಸಿ ಕಾರ್ಯ ನಡೆದಿದೆ. ಈ ಬಗ್ಗೆ ವೈದ್ಯೆ ಶೈಲಜಾ ಮಾತನಾಡಿದ್ದಾರೆ.  ದ್ವಾರಕೀಶ್ ಅವರ ಕಣ್ಣನ್ನು ಇಂದು ಪರೀಕ್ಷೆ ಮಾಡಲಾಗುತ್ತದೆ. ಆ ನಂತರ ಇಂದೆ ಇನ್ನೊಬ್ಬರಿಗೆ ಕಣ್ಣು ಹಾಕಲಾಗುತ್ತದೆ.  ಕಣ್ಣು ದಾನದಿಂದ ಸಮಾಜಕ್ಕೆ ಕೊಟ್ಟಿರುವ ಕೊಡುಗೆಯಾಗಿದೆ. ಇದರಿಂದ ಇಬ್ಬರಿಗೆ ಕಣ್ಣು ಬರುತ್ತದೆ ಎಂದು ಡಾ.ಶೈಲಜಾ ಪ್ರತಿಕ್ರಿಯೆ ನೀಡಿದ್ದಾರೆ. ದ್ವಾರಕೀಶ್ ಅವರ ಮರಣದ ನಂತರ ಕುಟುಂಬಸ್ಥರಿಗೆ ಕರೆ ಮಾಡಿದಾಗ 10 ನಿಮಿಷದಲ್ಲಿ ನೇತ್ರದಾನ ಮಾಡಲು ಅನುಮತಿ ನೀಡಿದರು. ಮೃತಪಟ್ಟ 14 ಘಂಟೆಯೊಳಗೆ ಕಣ್ಣು ದಾನ ಮಾಡಬಹುದು. ಸಂಪೂರ್ಣ ಕಣ್ಣುನ್ನು ನಾವು…

Read More

ಸ್ಯಾಂಡಲ್‌ವುಡ್ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಫೆ.16ರಂದು ತಮ್ಮ ಸ್ವಗ್ರಹದಲ್ಲಿ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಚಿತ್ರರಂಗಕ್ಕೆ ದ್ವಾರಕೀಶ್ ಕೊಡಗೆ ಅಪಾರವಾಗಿದ್ದು, ಅವರ ನಿಧನದಿಂದ ಬೇಸರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ. ಚಿತ್ರೋದ್ಯಮಕ್ಕೆ ದ್ವಾರಕೀಶ್ ಕೊಡುಗೆ ಅಪಾರವಾಗಿದೆ. ದಶಕಗಳ ಕಾಲ ಮರೆಯಲಾಗದ ಸಿನಿಮಾಗಳು ಮತ್ತು ನಟನೆಯ ಮೂಲಕ ತಲುಪಿದ್ದಾರೆ. ಪ್ರೇಕ್ಷಕರನ್ನು ರಂಜಿಸಿ, ಹೊಸಬರನ್ನು ಬೆಂಬಲಿಸುವುದರ ಜೊತೆಗೆ ಚಿತ್ರರಂಗವನ್ನು ರೂಪಿಸುವಲ್ಲಿ ಅವರ ಪಾತ್ರ ಕೂಡ ದೊಡ್ಡದು ಎಂದಿದ್ದಾರೆ. ಅವರ ನಿಧನದಿಂದ ದುಃಖವಾಗಿದೆ. ಅವರನ್ನು ಸದಾ ಸ್ಮರಿಸುತ್ತೇವೆ. ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಮೋದಿ ಬರೆದುಕೊಂಡಿದ್ದಾರೆ. ಹಿರಿಯ ನಟ ದ್ವಾರಕೀಶ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಇಂದು ಬೆಳಗ್ಗೆ 7 ಗಂಟೆಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗಿದರ. ನಂತರ ಚಾಮರಾಜಪೇಟೆಯ ಟಿಆರ್ ಮಿಲ್ ನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತಿದೆ.

Read More

ಅಗಲಿದ ಹಿರಿಯ ನಟ ದ್ವಾರಕೀಶ್ ಅವರಿಗೆ ಇಬ್ಬರು ಪತ್ನಿಯರು. ಇದನ್ನು ಸ್ವತಃ ನಟ ದ್ವಾರಕೀಶ್ ಬಹಿರಂಗ ಪಡಿಸಿದ್ದರು. ಮೊದಲು ಕೈ ಹಿಡಿದಿದ್ದು ಅಂಬುಜಾ ಅವರನ್ನು ಬಳಿಕ ಮದುವೆಯಾಗಿದ್ದು ಶೈಲಜಾ ಅವರನ್ನು. ಎರಡನೇ ಮದುವೆ ಆದಾಗ ದ್ವಾರಕೀಶ್ ಅವರಿಗೆ 51 ವರ್ಷ. ಈ ಸಮಯದಲ್ಲಿ ದ್ವಾರಕೀಶ್ ಗೌರಿ ಕಲ್ಯಾಣ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದರು. ಇವರದ್ದೇ ಬ್ಯಾನರ್ ನಲ್ಲಿ ಮೂಡಿ ಬಂದಿದ್ದ ಶ್ರುತಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ದ್ವಾರಕೀಶ್ ಅವರ ನಿರ್ಮಾಣದಲ್ಲಿ ಮತ್ತೊಂದು ಸಿನಿಮಾ ಬರುತ್ತಿದೆ ಎಂದಾಗ, ಆ ಸಿನಿಮಾದಲ್ಲಿ ತನ್ನ ತಂಗಿಗೆ ಅವಕಾಶ ಕೇಳಲು ಬಂದವರು ಈ ಶೈಲಜಾ. ಈ ಭೇಟಿಯೇ ಮುಂದೆ ಪ್ರೀತಿಯಾಗಿ, ಮದುವೆಯೂ ಆಯಿತು. ಪ್ರತಿಷ್ಠಿಯ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಶೈಲಜಾ, ತಂಗಿಗಾಗಿ ಪಾತ್ರ ಕೇಳಲು ಬಂದವರು ಬಳಿಕ ದ್ವಾರಕೀಶ್ ಪ್ರೀತಿಗೆ ಮನಸೋತು ಎರಡನೇ ಮದುವೆ ಅಂತ ಗೊತ್ತಿದ್ದರೂ ಗ್ರೀನ್ ಸಿಗ್ನಲ್ ನೀಡಿದರು. ಶೈಲಜಾ ಹಾಗೂ ದ್ವಾರಕೀಶ್ ಇಷ್ಟ ಪಡುತ್ತಿರುವ ಮತ್ತು ದ್ವಾರಕೀಶ್ ಮತ್ತೊಂದು ಮದುವೆ ಆಗುವ…

Read More

ಸ್ಯಾಂಡಲ್‌ವುಡ್ ನ ಹಿರಿಯ ನಟ ದ್ವಾರಕೀಶ್ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಫೆ.15ರಂದು ದ್ವಾರಕೀಶ್ ಸ್ವಗ್ರಹದಲ್ಲಿ ನಿಧನರಾಗಿದ್ದು ದ್ವಾರಕೀಶ್ ಅಗಲಿಕೆಯಿಂದ ಶಾಕ್ ಆಗಿದೆ ಎಂದು ಪತ್ನಿ ಶೈಲಜಾ ಹೇಳಿದ್ದಾರೆ. ದ್ವಾರಕೀಶ್ ಅವರನ್ನು ನಮ್ಮ ಕುಟುಂಬದವರು ತುಂಬಾ ಮಿಸ್ ಮಾಡಿಕೊಳ್ತಿದ್ದೀವಿ. ಯುಗಾದಿ ಹಬ್ಬಕ್ಕೆ ಊರಿಗೆ ಹೋಗ್ತಿದ್ದೆ, ಆದರೆ ಅವರಿಗೆ ಕಳುಹಿಸೋಕೆ ಮನಸ್ಸು ಇರಲಿಲ್ಲ. ಅಂದು ಸುಮಾರು ವರ್ಷಗಳಿಂದ ಅವರು ಮಾತಾಡದೇ ಇರುವ ಮಾತುಗಳನ್ನಾಡಿದ್ದರು. ಅದೇ ನನಗೆ ಇವತ್ತು ಶಾಕ್ ಆಗ್ತಿದೆ. ನನ್ನನ್ನು ಪ್ರೀತಿಯಿಂದ ಪುಟ್ಟ ಅಂತ ಕರೆಯುತ್ತಿದ್ದರು ಎಂದು ಶೈಲಜಾ ಭಾವುಕರಾಗಿ ನುಡಿದಿದ್ದಾರೆ. ಅಂಬುಜಾ ಅಕ್ಕ ಮತ್ತು ಅವರ ಮಕ್ಕಳು ನನ್ನ ಯಾವತ್ತೂ ಬೇರೆಯವರ ಥರ ನೋಡ್ಲಿಲ್ಲ. ಅವರಿಗೆ ನಾನು ಚಿರಋಣಿ. ಪ್ರತಿದಿನ ಬೆಳಗ್ಗೆ 11 ಗಂಟೆಗೆ ಏಳ್ತಿದ್ದವ್ರು ನಿನ್ನೆ 7 ಗಂಟೆಗೆ ಎದ್ದಿದ್ದೇ ಸೋಜಿಗ. ಅವರನ್ನು ತುಂಬಾ ಮಿಸ್ ಮಾಡಿಕೊಳ್ತಿನಿ ಎಂದು ಪತ್ನಿ ಶೈಲಜಾ ಭಾವುಕರಾಗಿದ್ದಾರೆ. ಇಂದು ಬೆಳಗ್ಗೆ 7 ಗಂಟೆಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ದ್ವಾರಕೀಶ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ…

Read More

ಸ್ಯಾಂಡಲ್ ವುಡ್ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಇಂದು ಕೊನೆಯುಸಿರೆಳೆದಿದ್ದಾರೆ. ದ್ವಾರಕೀಶ್ ಅವರನ್ನು ಕಳೆದುಕೊಂಡಿದ್ದು ಚಿತ್ರರಂಗಕ್ಕೆ ತುಂಬಲಾರದ ನಷ್ಟ ಆಗಿದೆ. ರಾಜ್​ಕುಮಾರ್, ವಿಷ್ಣುವರ್ಧನ್ ಸೇರಿ ಹಲವು ಕಲಾವಿದರ ಜೊತೆ ದ್ವಾರಕೀಶ್ ನಟಿಸಿ ಖ್ಯಾತಿ ಘಳಿಸಿದ್ದರು. ನಟ ಸಾಹಸಸಿಂಹ ವಿಷ್ಣುವರ್ಧನ್ ಅವರ ಜೊತೆ ದ್ವಾರಕೀಶ್ ಅವರಿಗೆ ಉತ್ತಮ ಬಾಂಧವ್ಯ ಇತ್ತು. ಆದರೆ, ನಂತರ ಇಬ್ಬರೂ ಬೇರೆ ಆಗುವಂತಾಯಿತು. 1975ರಲ್ಲಿ ರಿಲೀಸ್ ಆದ ‘ಕಳ್ಳ ಕುಳ್ಳ’ ಸಿನಿಮಾದಲ್ಲಿ ದ್ವಾರಕೀಶ್ ಹಾಗೂ ವಿಷ್ಣುವರ್ಧನ್ ಒಟ್ಟಾಗಿ ನಟಿಸಿದರು. ಇವರ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಬೆಳೆಯಲು ಈ ಸಿನಿಮಾ ಸಹಕಾರಿ ಆಯಿತು. 1977ರ ‘ಕಿಟ್ಟು ಪುಟ್ಟು’, ‘ಸಿಂಗಾಪುರದಲ್ಲಿ ರಾಜ ಕುಳ್ಳ’, ‘ಗುರು ಶಿಷ್ಯರು’, ‘ಪ್ರಚಂಡ ಕುಳ್ಳ’, ‘ಆಪ್ತಮಿತ್ರರು’ ಸಿನಿಮಾಗಳಲ್ಲಿ ವಿಷ್ಣು, ದ್ವಾರಕೀಶ್ ಒಟ್ಟಾಗಿ ನಟಿಸಿದ್ದರು. ಈ ಪೈಕಿ ಕೆಲವು ಸಿನಿಮಾಗಳನ್ನು ದ್ವಾರಕೀಶ್ ಅವರೇ ನಿರ್ಮಾಣ ಮಾಡಿದ್ದರು. ದ್ವಾರಕೀಶ್ ಮಾಡಿದ 50 ಚಿತ್ರಗಳಲ್ಲಿ 19 ಸಿನಿಮಾಗಳಲ್ಲಿ ವಿಷ್ಣುವರ್ಧನ್ ನಟಿಸಿದ್ದರು. ‘ರಾಯರು ಬಂದರು ಮಾವನ ಮನೆಗೆ’ ಸಿನಿಮಾ ಮಾಡಲು ವಿಷ್ಣುವರ್ಧನ್ ಡೇಟ್ಸ್​​​ಗಾಗಿ ನಾಲ್ಕು…

Read More