ಎಲಾನ್ ಮಸ್ಕ್ ಒಡೆತನದ ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್) ಗೆ ಪಾಕಿಸ್ತಾನ ಸರ್ಕಾರ ನಿಷೇಧ ಹೇರಿದೆ. ಪಾಕಿಸ್ತಾನದ ಆಂತರಿಕ ಸಚಿವಾಲಯವು ದೇಶದ ಸಾರ್ವಭೌಮತ್ವವನ್ನು ಗೌರವಿಸುವಲ್ಲಿ ಎಕ್ಸ್ (X) ವಿಫಲವಾಗಿದೆ ಮತ್ತು ಮೈಕ್ರೋಬ್ಲಾಗಿಂಗ್ ಸೈಟ್ ದುರುಪಯೋಗವಾಗುತ್ತಿದೆ ಎಂದು ಆರೋಪಿಸಿ ನಿಷೇಧ ಹೇರಿದೆ. ಪಾಕಿಸ್ತಾನದಲ್ಲಿ ಎಕ್ಸ್ ನೋಂದಣಿಯಾಗಿಲ್ಲ ಅಥವಾ ಸ್ಥಳೀಯ ಕಾನೂನುಗಳಿಗೆ ಬದ್ಧವಾಗಿರಲು ಯಾವುದೇ ಒಪ್ಪಂದಕ್ಕೆ ಸಹಿ ಮಾಡಿಲ್ಲ ಎಂದು ಸಿಂಧ್ ಹೈಕೋರ್ಟ್‌ಗೆ ತಿಳಿಸಿದೆ. ದೇಶದ ಭದ್ರತೆಯ ದೃಷ್ಟಿಯಿಂದ ನಿರ್ಧಾರ ಕೈಗೊಳ್ಳಲಾಗಿದೆ. ಈ ಹಿಂದೆ ಹಲವು ದೇಶಗಳು ಎಕ್ಸ್ ಮೇಲೆ ತಾತ್ಕಾಲಿಕವಾಗಿ ನಿರ್ಬಂಧ ಹೇರಿದ್ದವು ಎಂದು ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಪಾಕ್ ಇಲ್ಲಿಯವರೆಗೆ ಅಧಿಕೃತವಾಗಿ ಎಕ್ಸ್ ಅನ್ನು ನಿಷೇಧ ಮಾಡಿರುವುದಾಗಿ ತಿಳಿಸಿಲ್ಲ. ಆದರೆ ಕಳೆದ ಫೆಬ್ರವರಿ 17 ರಿಂದ ಪಾಕ್ ಜನತೆ ಎಕ್ಸ್ ಅನ್ನು ಸರಿಯಾಗಿ ಬಳಕೆ ಮಾಡಲು ಅಸಮರ್ಥರಾಗಿದ್ದಾರೆ.
Author: Author AIN
ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಅವರ ಅಂತ್ಯಕ್ರಿಯೆ ಏ.17ರಂದು ಬೆಂಗಳೂರಿನ ಟಿ ಆರ್ ಮಿಲ್ ಹಿಂದೂ ರುದ್ರಭೂಮಿಯಲ್ಲಿ ನಡೆದಿದೆ. ಬ್ರಾಹ್ಮಣರ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ದ್ವಾರಕೀಶ್ ಹಿರಿಯ ಪುತ್ರ ಸಂತೋಷ್ ಅವರು ಚಿತೆಗೆ ಅಗ್ನಿಸ್ಪರ್ಷ ಮಾಡಿದರು. ಇಂದು ದ್ವಾರಕೀಶ್ ಕುಟುಂಬಸ್ಥರಿಂದ ಶ್ರೀರಂಗಪಟ್ಟಣದಲ್ಲಿ ಅಸ್ಥಿ ವಿಸರ್ಜನೆ ಮಾಡಲಿದ್ದಾರೆ. ಬೆಳಗ್ಗೆ 7 ಗಂಟೆಗೆ ರುದ್ರಭೂಮಿಯಲ್ಲಿ ಕುಟುಂಬಸ್ಥರು ಪೂಜೆ ಪೂಜೆ ಸಲ್ಲಿಸಿದ್ದು, 9ಕ್ಕೆ ಶ್ರೀರಂಗಪಟ್ಟಣದಲ್ಲಿ ಅಸ್ಥಿ ವಿಸರ್ಜನೆ ಮಾಡಲಿದ್ದಾರೆ. ಏ.16 ಬೆಳಗ್ಗೆ ದ್ವಾರಕೀಶ್ ಅವರು ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದರು. ಕನ್ನಡ ಚಿತ್ರೋದ್ಯಮದ ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದರು. ಅಲ್ಲದೇ, ಪ್ರಧಾನಿ ನರೇಂದ್ರ ಮೋದಿ, ಸೂಪರ್ ಸ್ಟಾರ್ ರಜನಿಕಾಂತ್, ಸುದೀಪ್, ಯಶ್ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ದ್ವಾರಕೀಶ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಕಲಾವಿದರು, ಅಭಿಮಾನಿಗಳು, ಗಣ್ಯರ ಅಂತಿಮ ದರ್ಶನದ ಬಳಿಕ ಪಾರ್ಥಿವ ಶರೀರವನ್ನ ಚಾಮರಾಜ ಪೇಟೆಯಲ್ಲಿರುವ ಹಿಂದೂರುದ್ರಭೂಮಿಗೆ ರವಾನಿಸಲಾಯಿತು. ಮಧ್ಯಾಹ್ನ 1 ಗಂಟೆ ಹೊತ್ತಿಗೆ ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು. ಐವರು ಪುತ್ರರೂ ಸೇರಿ ತಂದೆಯ…
ಮಲಯಾಳಂ ಚಿತ್ರರಂಗದ ಖ್ಯಾತ ನಟ ಮೋಹನ್‌ಲಾಲ್ ಕೊಲ್ಲೂರು ಮೂಕಾಂಬಿಕೆ ದೇವಿಯ ದರ್ಶನ ಪಡೆದಿದ್ದಾರೆ. ಶೂಟಿಂಗ್‌ಗೆ ಬ್ರೇಕ್ ಹಾಕಿ ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದು ಮೋಹನ್‌ಲಾಲ್ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಆಗಾಗ ಸೆಲೆಬ್ರಿಟಿಗಳು ಭೇಟಿ ನೀಡುತ್ತಲೇ ಇರುತ್ತಾರೆ. ಯುಗಾದಿ ಹಬ್ಬದ ಸಂದರ್ಭದಲ್ಲಿ ನಟಿ ಹರ್ಷಿಕಾ ಪೂಣಚ್ಚ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಇದೀಗ ಮೋಹನ್ ಲಾಲ್ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಮೋಹನ್‌ಲಾಲ್ ಮೂಕಾಂಬಿಕೆಯ ಸನ್ನಿಧಿಗೆ ಭೇಟಿ ನೀಡಿ ಮುಂಜಾನೆ ಮಹಾಮಂಗಳಾರತಿಯಲ್ಲಿ ಪಾಲ್ಗೊಂಡಿದ್ದಾರೆ. ಬಳಿಕ ದೇಗುಲದಲ್ಲಿ ಕೆಲ ಕಾಲ ಧ್ಯಾನ ಮಾಡಿದ್ರು. ಈ ವೇಳೆ, ಅಭಿಮಾನಿಗಳು ಮೋಹನ್‌ಲಾಲ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದಾರೆ. ಮಲಯಾಳಂ ನಟ ಮೋಹನ್ ಲಾಲ್, ನಟರಲ್ಲದೆ, ನಿರ್ಮಾಪಕ, ಹಿನ್ನೆಲೆ ಗಾಯಕ, ಚಲನಚಿತ್ರ ವಿತರಕ ಮತ್ತು ನಿರ್ದೇಶಕರಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿದ್ದಾರೆ. ತಮಿಳು, ಹಿಂದಿ, ತೆಲುಗು ಮತ್ತು ಕನ್ನಡ ಭಾಷೆಯ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಮೋಹನ್ ಲಾಲ್ 4…
ಖ್ಯಾತ ಯೂಟ್ಯೂಬರ್ ಅಭ್ರದೀಪ್ ಸಹಾ ಅಲಿಯಾಸ್ ಆಂಗ್ರಿ ರಾಂಟ್‌ಮ್ಯಾನ್ ನಿಧನರಾಗಿದ್ದಾರೆ. ಕ್ರಿಕೆಟ್, ಫುಟ್ಬಾಲ್ ಕ್ರೀಡೆ ಹಾಗೂ ಸಿನಿಮಾ ವಿಶ್ಲೇಷಕರಾಗಿ ಕನ್ನಡಿಗರ ಮನ ಗೆದ್ದಿದ್ದ ಯುವ ಯೂಟ್ಯೂಬರ್ ಅಭ್ರದೀಪ್ ಸಾಹಾ ತಮ್ಮ 27ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ, ಆಂಗ್ರಿ ರಾಂಟ್‌ಮ್ಯಾನ್, ಯಶ್ ನಟನೆಯ ‘ಕೆಜಿಎಫ್’ ಸಿನಿಮಾವನ್ನು ಕಿರುಚಾಡುತ್ತಲೇ ರಿವ್ಯೂ ಮಾಡಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಯೂಟ್ಯೂಬ್‌ನಲ್ಲಿ 4.8 ಲಕ್ಷ ಫಾಲೋವರ್ಸ್ ಹೊಂದಿರುವ ರಾಂಟ್ ಮ್ಯಾನ್ ನಿಧನದ ಸುದ್ದಿ ಕೇಳಿ ಅನೇಕರು ಶಾಕ್ ಆಗಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅಭ್ರದೀಪ್ ಸಾಹಾ, ಚಿಕಿತ್ಸೆ ಫಲಕಾರಿಯಾಗದೆ ಏಪ್ರಿಲ್ 16ರ ಮಧ್ಯರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ. ಇತ್ತೀಚೆಗೆ ಸಾಹಾ ಅವರಿಗೆ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಇತ್ತೀಚೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಶಸ್ತ್ರಚಿಕಿತ್ಸೆಯ ನಂತರ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿರಲಿಲ್ಲ. ಜೊತೆಗೆ, ನಿಧಾನವಾಗಿ ಅವರಲ್ಲಿ ಬಹು ಅಂಗಾಂಗ ವೈಫಲ್ಯದ ಸಮಸ್ಯೆಯೂ ಕಾಣಿಸಿಕೊಂಡಿತ್ತು. ಹೀಗಾಗಿ ಮಗನ ಆರೋಗ್ಯದ ಬಗ್ಗೆ ಏ. 15ರಂದು ತಂದೆ ಟ್ವೀಟ್ ಮಾಡಿ, ಅಭ್ರದೀಪ್…
ಶೀತ, ಕೆಮ್ಮು ಬಂತು ಅಂದ್ರೆ ಸಾಕು ಜನ ಸಾಮಾನ್ಯವಾಗಿ ಮೆಡಿಕಲ್ ನಲ್ಲಿ ಔಷಧಿ ಪಡೆದುಕೊಳ್ಳುತ್ತಾರೆ.ಆದರೆ ವೈದ್ಯರ ಸಲಹೆ ಇಲ್ಲದೆ ಜ್ವರ ಎಂದು ಇಂಗ್ಲಿಷ್ ಮೆಡಿಸಿನ್ ತೆಗೆದುಕೊಂಡರೆ ಏನಾಗಬಹುದು ಎನ್ನುವುದಕ್ಕೆ ಈ ಮಹಿಳೆಯೇ ಸಾಕ್ಷಿ. ಜ್ವರ, ಮೈಕೈ ನೋವು ಬಂದ ಹಿನ್ನೆಲೆಯಲ್ಲಿ ಮಹಿಳೆ ನೋವು ನಿವಾರಕ ಇಬುಪ್ರೊಫೇನ್ ಎನ್ನುವ ಮಾತ್ರೆಯನ್ನು ನುಂಗಿದ್ದಾರೆ. ಮಾತ್ರೆ ತಿಂದ ಸ್ವಲ್ಪ ಹೊತ್ತಿನ ಬಳಿಕ ಕಣ್ಣು ಕೆಂಪಾಗಿ, ಮುಖ ಸುಕ್ಕುಗಟ್ಟಿದಂತಾಗಿ ಹಾವಿನ ಚರ್ಮದಂತಾಗಿದೆ. ತುಟಿಗಳ ಮೇಲೆ ಹಳದಿ ಪದರವು ರೂಪುಗೊಂಡಿತ್ತು, ಹಾಗೆಯೇ ಕಣ್ಣಿನಿಂದ ರಕ್ತದ ಕೋಡಿಯೇ ಹರಿಯಲು ಪ್ರಾರಂಭವಾಗಿತ್ತು. ಪ್ರತಿ ಮಾತ್ರೆ, ಔಷಧಿಗಳ ಮೇಲೆ ವೈದ್ಯರ ಸಲಹೆ ಇಲ್ಲದೆ ನೀವು ಇದನ್ನು ತೆಗೆದುಕೊಳ್ಳಬೇಡಿ ಎಂದು ಬರೆದಿರುತ್ತದೆ. ಇಬುಪ್ರೊಫೇನ್ ಸಾಮಾನ್ಯವಾಗಿ ಸುರಕ್ಷಿತವಾಗಿದೆ, ಆದರೆ ವೈದ್ಯರ ಸಲಹೆಯಿಲ್ಲದೆ ಅದನ್ನು ತೆಗೆದುಕೊಳ್ಳಬಾರದು ಎಂದು ವೈದ್ಯರು ಹೇಳಿದ್ದಾರೆ. ಆದರೆ ಇರಾಕ್ ಮಹಿಳೆ ಇದೇ ತಪ್ಪನ್ನು ಮಾಡಿದ್ದಳು. ಮೈ-ಕೈ ನೋವು ಶೀತವೆಂದು ಈ ಔಷಧಗಳನ್ನು ತೆಗೆದುಕೊಂಡ ಬಳಿಕ ಈ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭವಾಗಿದೆ. ದೇಹದ ಪ್ರತಿರಕ್ಷಣಾ…
ಭಯೋತ್ಪಾದನೆ ನಿಗ್ರಹಕ್ಕೆ ಮನೆಯೊಳಗೆ ನುಗ್ಗಿ ಹೊಡೆಯುತ್ತೇವೆ ಎಂದು ಪಾಕಿಸ್ತಾನಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಅಮೇರಿಕಾ ಪ್ರತಿಕ್ರಿಯೆ ನೀಡಿದೆ. ಪರಿಸ್ಥಿತಿ ಉಲ್ಬಣಗೊಳ್ಳುವುದನ್ನು ತಪ್ಪಿಸಲು ಅಮೇರಿಕಾ ಪಾಕ್ ಹಾಗೂ ಭಾರತಕ್ಕೆ ಸಲಹೆ ನೀಡಿದೆ. ಮಾತುಕತೆ ಮೂಲಕ ಭಾರತ-ಪಾಕ್ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಅಮೇರಿಕಾದ ವಕ್ತಾರ ಮ್ಯಾಥ್ಯೂ ಮಿಲ್ಲರ್ ಹೇಳಿದ್ದಾರೆ. ಭಯೋತ್ಪಾದಕರನ್ನು ಅವರ ಮನೆಗಳಲ್ಲಿ ಕೊಲ್ಲಲು ಭಾರತ ಹಿಂಜರಿಯುವುದಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆಗಳ ಬಗ್ಗೆ ಬಿಡೆನ್ ಆಡಳಿತಕ್ಕೆ ಆತಂಕ ಇದೆಯೇ ಎಂಬ ಪ್ರಶ್ನೆಗೆ ಮಿಲ್ಲರ್, “ನಾನು ಮೊದಲೇ ಹೇಳಿದಂತೆ, ಯುನೈಟೆಡ್ ಸ್ಟೇಟ್ಸ್ ಮಧ್ಯಪ್ರವೇಶಿಸಲು ಹೋಗುವುದಿಲ್ಲ. ಆದರೆ ಭಾರತ-ಪಾಕ್ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದನ್ನು ಉತ್ತೇಜಿಸುತ್ತೇವೆ ಎಂದು ಮಿಲ್ಲರ್ ಹೇಳಿದ್ದಾರೆ. ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಯ ಸಂಚಿನ ಕುರಿತು ಅಮೆರಿಕವು ಭಾರತದ ಮೇಲೆ ಏಕೆ ಯಾವುದೇ ನಿರ್ಬಂಧಗಳನ್ನು ವಿಧಿಸಿಲ್ಲ ಎಂದು ಕೇಳಿದಾಗ, ಮಿಲ್ಲರ್, “ನಾನು ಯಾವುದೇ ನಿರ್ಬಂಧದ…
ಸಕ್ಕರೆ ಮುಕ್ತ ಶ್ವೆಪ್ಪಸ್ ಜಿಂಜರ್ ಮದ್ಯದಲ್ಲಿ ಸಂಪೂರ್ಣ ಸಕ್ಕರೆ ಅಂಶ ಇದ್ದ ಕಾರಣದಿಂದ ಇಡೀ ಉತ್ಪನ್ನವನ್ನೆ ಪೆಪ್ಸಿಕೋ ಹಿಂಪಡೆದಿದೆ. ಸಂಸ್ಥೆ ಸ್ವಯಂ ಪ್ರೇರಿತವಾಗಿ ಈ ಉತ್ಪನ್ನವನ್ನು ಹಿಂಪಡೆದಿದೆ ಎಂದು ಆಹಾರ ಮತ್ತು ಔಷಧ ನಿಯಂತ್ರಕ ತಿಳಿಸಿದೆ. ಶ್ವೆಪ್ಪಸ್ ಜಿಂಜರ್ ಮದ್ಯದ ಉತ್ಪನ್ನ ಸಕ್ಕರೆ ಮುಕ್ತ ಹಾಗೂ ಕೆಫೀನ್ ಮುಕ್ತ ಎಂದು ಪೆಪ್ಸಿಕೋ ಮುದ್ರಿಸಿತ್ತು. ಆದರೆ ಈ ಉತ್ಪನ್ನಗಳು ಸಾಮಾನ್ಯ ಸಕ್ಕರೆಯ ಅಂಶವನ್ನು ಹೊಂದಿದ್ದು, ಮಧುಮೇಹವನ್ನು ನಿರ್ವಹಿಸುವ ಅಥವಾ ಸಕ್ಕರೆ-ನಿರ್ಬಂಧಿತ ಆಹಾರವನ್ನು ಅನುಸರಿಸುವ ಜನರಿಗೆ ಅಪಾಯಕಾರಿ ಎಂಬ ಅಂಶ ಪತ್ತೆಯಾಗಿದೆ. ಮೇರಿಲ್ಯಾಂಡ್, ಪೆನ್ಸಿಲ್ವೇನಿಯಾ ಮತ್ತು ವೆಸ್ಟ್ ವರ್ಜೀನಿಯಾಕ್ಕೆ ಕಳುಹಿಸಲಾದ 7.5-ಔನ್ಸ್ ಕ್ಯಾನ್‌ಗಳ 233 ಕೇಸ್ ಗಳನ್ನು ಸಂಸ್ಥೆ ಹಿಂಪಡೆದಿದೆ. ಹಿಂಪಡೆಯುವ ಪ್ರಕ್ರಿಯೆಯನ್ನು ಮಾರ್ಚ್ 9 ರಂದು ಪ್ರಾರಂಭಿಸಲಾಯಿತು ಎಂದು ಎಬಿಸಿ ವರದಿ ಮಾಡಿದೆ. ಪೆಪ್ಸಿಕೋದ ಆಂತರಿಕ ತನಿಖೆಯ ನಂತರ, ಕಂಪನಿ “ಶೂನ್ಯ ಸಕ್ಕರೆ” ಎಂದು ಲೇಬಲ್ ಮಾಡಲಾದ ಉತ್ಪನ್ನಗಳನ್ನು ಬಹಿರಂಗಪಡಿಸುವುದರ ಮೇಲೆ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿತು ಎಂದು FDA ಹೇಳಿದೆ. ಉತ್ಪನ್ನಗಳಿಂದಾಗಿ ಸದ್ಯಕ್ಕೆ,…
ಮಹಾನ್ ವ್ಯಕ್ತಿ, ತುಂಬಾ ಜನ ಹುಟ್ತಾರೆ ಸಾಯ್ತಾರೆ. ಆದರೆ ಈ ಬದುಕಿನ ಅವಕಾಶವನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದನ್ನು ದ್ವಾರಕೀಶ್ ಅವರಿಂದ ಕಲಿತುಕೊಳ್ಳಬೇಕು. ಅವರ ಯಾವಾಗಲೂ ಸ್ಫೂರ್ತಿ ಆಗಿದ್ದರು. ಕನ್ನಡ ಚಿತ್ರರಂಗ ಇರೋವರೆಗೂ ಅವರ ಸೇವೆಯನ್ನು ಮರೆಯೋಲ್ಲ. ಅವರ ಕುಟುಂಬಕ್ಕೆ ಈ ದುಖಃವನ್ನು ತೆಡೆದುಕೊಳ್ಳುವ ಶಕ್ತಿ ನೀಡಲಿ ಎಂದು ನಟ ಯಶ್ ಹೇಳಿದ್ದಾರೆ. ದ್ವಾರಕೀಶ್ ಅವರ ಚಿತೆಗೆ ಅಗ್ನಿಸ್ಪರ್ಷ ಮಾಡುವ ಮುನ್ನ ಪೊಲೀಸ್ ಇಲಾಖೆಯು ಪೊಲೀಸ್ ಗೌರವವನ್ನು ಸಲ್ಲಿಸಲಾಯಿತು. ನಂತರ ಬ್ರಾಹ್ಮಣ ವಿಧಿವಿಧಾನದ ಪ್ರಕಾರ ಮೊದಲಿಗೆ ಪ್ರೇತ ಸಂಸ್ಕಾರ. ಆನಂತರ ಕಿವಿಯಲ್ಲಿ ನಾರಾಯಣ ಸ್ಮರಣೆ. ಚಿತಾ ಅಗ್ನಿ ಹೋಮದ ನಂತರ ಚಿತಾ ಶುದ್ಧಿ , ಭೂ ಸ್ಪರ್ಶ ದಹನ ಮಾಡಿ, ಆಮೇಲೆ ಅಗ್ನಿ ದಿಗ್ಬಂಧನ ಮಾಡಲಾಯಿತು. ನಿನ್ನೆ ಬೆಳಗ್ಗೆ ದ್ವಾರಕೀಶ್ ಅವರು ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದರು. ನಿನ್ನೆಯಿಂದ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕನ್ನಡ ಚಿತ್ರೋದ್ಯಮದ ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದರು. ಅಲ್ಲದೇ, ಪ್ರಧಾನಿ ನರೇಂದ್ರ ಮೋದಿ, ಸೂಪರ್ ಸ್ಟಾರ್ ರಜನಿಕಾಂತ್…
ಕನ್ನಡಕ್ಕೆ ಮತ್ತು ಕನ್ನಡ ಸಿನಿಮಾ ರಂಗಕ್ಕೆ ದ್ವಾರಕೀಶ್ ಅಪಾರ ಸೇವೆ ಸಲ್ಲಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ದ್ವಾರಕೀಶ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಸಿದ್ದರಾಮಯ್ಯ, ದ್ವಾರಕೀಶ್ ಬಹಳಷ್ಟು ಏಳುಬೀಳುಗಳನ್ನ ಕಂಡಿದ್ದರು. ಎಷ್ಟೇ ಕಷ್ಟಬಂದರು ಸಹಿಸಿಕೊಂಡು ಕನ್ನಡಕ್ಕೆ ಅಪಾರ ಕೊಡುಗೆ ಕೊಟ್ಟಿದ್ದಾರೆ. ಹೆಚ್ಚಾಗಿ ಅವರು ಸಹ ಮೈಸೂರಿನವರು. ಅನೇಕ ವಿಚಾರಗಳನ್ನ ಅವರೊಂದಿಗೆ ಚರ್ಚೆ ಮಾಡಿದ್ದೆ. ಕನ್ನಡ ಸೇವೆ ಮಾಡಿದ ಅಪರೂಪ ನಟ. ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ದೃಷ್ಟಿ ಕೊಡುವಂತವ ಕೆಲಸ ಮಾಡಿರೋದು ಶ್ಲಾಘನೀಯ. ಕನ್ನಡ ಚಿತ್ರರಂಗ ಅವರ ಸಾವಿನಿಂದ ಬಹಳ ಬಡವಾಯಿತು. ಒಬ್ಬ ಕನ್ನಡ ಪ್ರೇಮಿ ಕಳೆದುಕೊಂಡಿದ್ದೇವೆ. ಅವರ ಧರ್ಮಪತ್ನಿ ಕಾಲವಾದ ದಿನವೇ ಅವರು ಕಾಲವಾಗಿದ್ದಾರೆ ಎಂದು ಹೇಳಿದರು. ದ್ವಾರಕೀಶ್ ಅವರ ಚಿತೆಗೆ ಅಗ್ನಿಸ್ಪರ್ಷ ಮಾಡುವ ಮುನ್ನ ಪೊಲೀಸ್ ಇಲಾಖೆಯು ಪೊಲೀಸ್ ಗೌರವವನ್ನು ಸಲ್ಲಿಸಲಾಯಿತು. ನಂತರ ಬ್ರಾಹ್ಮಣ ವಿಧಿವಿಧಾನದ ಪ್ರಕಾರ ಮೊದಲಿಗೆ ಪ್ರೇತ ಸಂಸ್ಕಾರ. ಆನಂತರ ಕಿವಿಯಲ್ಲಿ ನಾರಾಯಣ…
ಹಬ್ಬ, ಹರಿದಿನಗಳ ಬಂತು ಅಂದ್ರೆ ಸಾಮಾನ್ಯವಾಗಿ ಮಹಿಳೆಯರು ಚಿನ್ನ ಬೆಳ್ಳಿಯನ್ನು ಖರೀದಿಸಲು ಮುಂದಾಗುತ್ತಾರೆ. ಆದರೆ ಹೆಚ್ಚುತ್ತಿರುವ ಬೆಲೆಯಿಂದಾಗಿ ಮಹಿಳೆಯರ ಆಸೆಗೆ ತಣ್ಣೀರೆರಚಿದಂತಾಗಿದೆ. ಇಂದು ರಾಮನವಮಿ ಹಿನ್ನೆಲೆಯಲ್ಲಿ ಚಿನ್ನ ಬೆಳ್ಳಿ ಕೊಂಡುಕೊಳ್ಳಬೇಕು ಎಂದು ಕೊಂಡವರಿಗೆ ಬೆಲೆ ಏರಿಕೆ ಮತ್ತೆ ಆಭರಣ ಖರೀದಿಗೆ ತಣ್ಣೀರೆರಚಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಂ ಚಿನ್ನಕ್ಕೆ 6,795 ರೂ. ಇದೆ. ನಿನ್ನೆ 6,705 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 90 ರೂ ಏರಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 54,360 ರೂ. ನೀಡಬೇಕು. ನಿನ್ನೆ 53,640 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 720 ರೂ. ಹೆಚ್ಚಾಗಿದೆ. 10 ಗ್ರಾಂ ಚಿನ್ನಕ್ಕೆ 67,950 ರೂ ಇದೆ. ನಿನ್ನೆ 67,050 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 900 ರೂ. ಏರಿಕೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,79,500 ರೂ. ನೀಡಬೇಕು. ನಿನ್ನೆ 6,70,500 ರೂ. ಇದ್ದು ಈ ದರಕ್ಕೆ…