ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅಧಿಸೂಚನೆಯ ಮೂಲಕ ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಫೆಬ್ರವರಿ 01 ರ ಮೊದಲು ಅರ್ಜಿ ಸಲ್ಲಿಸಬೇಕು. KPSC ನೇಮಕಾತಿ 2025 ಅರ್ಹತಾ ವಿವರಗಳು: ಶೈಕ್ಷಣಿಕ ಅರ್ಹತೆ: KPSC ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ಯಾವುದೇ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಆಹಾರ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ/ಬಯೋಟೆಕ್ನಾಲಜಿ/ಕೃಷಿ ಇಂಜಿನಿಯರಿಂಗ್‌ನಲ್ಲಿ B.Sc , B.Tech ಪೂರ್ಣಗೊಳಿಸಿರಬೇಕು . ವಯೋಮಿತಿ: ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 07-ನವೆಂಬರ್-2024 ರಂತೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 38 ವರ್ಷ ಹೊಂದಿರಬೇಕು. ಪೋಸ್ಟ್ ಹೆಸರು:ಕೃಷಿ ಅಧಿಕಾರಿಗಳು, ಸಹಾಯಕ ಕೃಷಿ ಅಧಿಕಾರಿಗಳು ಸಂಬಳ (ತಿಂಗಳಿಗೆ):ರೂ.43100-83900/-ರೂ.40900-78200/- ವಯೋಮಿತಿ ಸಡಿಲಿಕೆ: SC/ST/Cat-1…
Author: Author AIN
ಹಿಂದೂ ಸಂಪ್ರದಾಯದಲ್ಲಿ ಮನೆಯ ದೇವರ ಮುಂದಿನ ಜ್ಯೋತಿ, ದೀಪ, ಮೀನಾಕ್ಷಿ ದೀಪಕ್ಕೆ ವಿಶೇಷ ಸ್ಥಾನಮಾನವಿದೆ. ದೇವರ ಮುಂದಿನ ದೀಪ ಆರದಂತೆ ಬೆಳಗ್ಗೆ, ಸಂಜೆ ಎಣ್ಣೆ ಹಾಕಿ ದೀಪ ಹಚ್ಚುತ್ತಾರೆ. ಮನೆಯಲ್ಲಿ ಶಾಂತಿ, ನೆಮ್ಮದಿ, ದೇವರಿದ್ದಾನೆ ಎಂಬ ನಂಬಿಕೆಯನ್ನು ಜ್ಯೋತಿ ನೀಡುತ್ತೆ ಆದರೆ ದೀಪದ ವಿಚಾರದಲ್ಲಿ ಕೆಲವೊಂದು ತಪ್ಪುಗಳನ್ನು ಮಾಡಬಾರದು ದೀಪ ಬೆಳಗುವ ಮೊದಲು ನಿಮಗೆ ಈ ಸಂಗತಿ ತಿಳಿದಿರಲಿ : ದೀಪ ಹಚ್ಚಲು ಸರಿಯಾದ ಸಮಯ ಯಾವುದು ? : ಬೆಳಿಗ್ಗೆ ದೇವರಿಗೆ ಪೂಜೆ ಮಾಡಿ, ದೀಪ ಬೆಳಗಲು ಸೂಕ್ತ ಸಮಯ 5 ಗಂಟೆ. ಬೆಳಗಿನ ಜಾವ ಐದು ಗಂಟೆಯಿಂದ 10 ಗಂಟೆಯೊಳಗೆ ನೀವು ದೇವರಿಗೆ ದೀಪ ಹಚ್ಚಬೇಕು. ಬೆಳಗಿನ ಸಮಯ ಪ್ರಶಾಂತವಾಗಿರುತ್ತದೆ. ದೇವರ ಪೂಜೆಯನ್ನು ಏಕಾಗ್ರತೆಯಿಂದ ಮಾಡಲು ಸಹಾಯವಾಗುತ್ತದೆ. ಹಾಗಾಗಿ ಬೆಳಿಗ್ಗೆ ಎಷ್ಟು ಬೇಗ ನೀವು ದೇವರ ಪೂಜೆ ಮಾಡ್ತೀರೋ ಅಷ್ಟು ಒಳ್ಳೆಯದು. ಹಾಗೆಯೇ ಸಂಜೆ ಐದು ಗಂಟೆಯಿಂದ 7 ಗಂಟೆಯೊಳಗೆ ನೀವು ದೇವರ ಮುಂದೆ ದೀಪವನ್ನು ಬೆಳಗಬೇಕು. ದೀಪ ಇಡುವ…
ಸೂರ್ಯೋದಯ – 6:52 ಬೆ. ಸೂರ್ಯಾಸ್ತ – 5:54 ಸಂ. ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ ಅಯಣ, ಶುಕ್ಲ ಪಕ್ಷ, ಹೇಮಂತ್ ಋತು, ಪುಷ್ಯ ಮಾಸ, ತಿಥಿ – ದಶಮಿ 12:22 ಮ ವರೆಗೆ ನಕ್ಷತ್ರ – ಭರಣಿ 3:06 ಮ ವರೆಗೆ ರಾಹು ಕಾಲ – 01:30 ದಿಂದ 03:00 ವರೆಗೆ ಯಮಗಂಡ – 06:00 ದಿಂದ 07:30 ವರೆಗೆ ಗುಳಿಕ ಕಾಲ – 09:00 ದಿಂದ 10:30 ವರೆಗೆ ಬ್ರಹ್ಮ ಮುಹೂರ್ತ – 5:16 ಬೆ ದಿಂದ 6:04 ಬೆ ವರೆಗೆ ಅಮೃತ ಕಾಲ – 10:34 ಬೆ ದಿಂದ 12:05 ಮ ವರೆಗೆ ಅಭಿಜಿತ್ ಮುಹುರ್ತ – 12:01 ಮ ದಿಂದ 12:45 ಮ ವರೆಗೆ ಮೇಷ ರಾಶಿ: ಸ್ಟಾಕ್ ಷೇರಿನ ವ್ಯಾಹಾರದಲ್ಲಿ ಸಾಕಷ್ಟು ಲಾಭ ಗಳಿಸುವಿರಿ,ಜ್ಯೂಸು ಅಂಗಡಿ ಮಾರಾಟಗಾರರಿಗೆ ಲಾಭ, ರಂಗಭೂಮಿ ಕಲಾವಿದರಿಗೆ ಶುಭದಾಯಕ, ಪಾಲುದಾರಿಕೆ ವ್ಯಾಪಾರ ಬೇಡವೇ ಬೇಡ, ರಾಜಕೀಯ…
ಬಹುದಿನಗಳಿಂದ ಎದುರು ನೋಡ್ತಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಗೆ ಕೌಂಟ್‌ಡೌನ್ ಶುರುವಾಗಿದೆ. ಈ ಮಹತ್ವದ ಟೂರ್ನಿಗೆ ಕೇವಲ 45 ದಿನಗಳು ಮಾತ್ರ ಬಾಕಿ ಇದ್ದು ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಬಲಿಷ್ಠ ಟೀಮ್ ಇಂಡಿಯಾ ಪ್ರಕಟಿಸಲು ಬಿಸಿಸಿಐ ಮುಂದಾಗಿದೆ. ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿಗೆ ದಿನಗಣನೆ ಶುರುವಾಗಿದೆ. ಫೆಬ್ರವರಿ 19 ರಿಂದ ಆರಂಭವಾಗಲಿರುವ ಈ ಟೂರ್ನಿಯಲ್ಲಿ 8 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳನ್ನು ಘೋಷಿಸಲು ಜನವರಿ 12ರವರೆಗೆ ಗಡುವು ವಿಧಿಸಲಾಗಿದ್ದು, https://ainlivenews.com/do-you-have-a-heart-problem-if-so-eating-fish-twice-a-week-is-enough/ ಭಾರತ ಮತ್ತು ಇಂಗ್ಲೆಂಡ್ ನಡುವಣ ಸರಣಿಯು ಜನವರಿ 22 ರಿಂದ ಶುರುವಾಗಲಿದೆ. ಭಾರತದಲ್ಲಿ ನಡೆಯಲಿರುವ ಈ ಸರಣಿಯಲ್ಲಿ 5 ಟಿ20 ಹಾಗೂ 3 ಏಕದಿನ ಪಂದ್ಯಗಳನ್ನಾಡಲಾಗುತ್ತದೆ. ಈ ಪಂದ್ಯಗಳ ಬಳಿಕ ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿಗಾಗಿ ದುಬೈಗೆ ತೆರಳಲಿದೆ. ಇನ್ನು ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19 ರಿಂದ ಆರಂಭವಾಗಲಿದೆ. ಅದರಂತೆ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಟೀಮ್ ಇಂಡಿಯಾದಲ್ಲಿ ಮಹತ್ವದ ಬದಲಾವಣೆ ಕಂಡು ಬರಲಿದ್ದು, ಈ ಬದಲಾವಣೆಯ ಪ್ರಮುಖಾಂಶಗಳು ಈ ಕೆಳಗಿನಂತಿದೆ ಇಂಗ್ಲೆಂಡ್…
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ರೋಡ್ ರೇಜ್ ಪ್ರಕರಣಗಳು ಹೆಚ್ಚಾಗುತ್ತಿದೆ. ನಡು ರಸ್ತೆಯಲ್ಲಿ ಕಿಡಿಗೇಡಿಗಳು ಅಟ್ಟಹಾಸ ಮೆರೆಯುತ್ತಿರುವ ಪ್ರಸಂಗ ಬೆಳಕಿಗೆ ಬರುತ್ತಿವೆ. ಅದರಂತೆಯೇ ಮತ್ತೊಂದು ಘಟನೆ ಇದೀಗ ವರದಿಯಾಗಿದೆ. ಕಿಡಿಗೇಡಿಯೋರ್ವ ಕಾರಿನ ಗ್ಲಾಸ್ ಮೇಲೆ ಕಲ್ಲು ಎತ್ತಿ ಹಾಕಿ ಅಟ್ಟಹಾಸ ಮೆರೆದಿದ್ದಾನೆ. ಹೌದು ಕಾರಿನ ಚಾಲಕನನ್ನು ಹಿಂಬಾಲಿಸಿಕೊಂಡು ಬಂದ ಯುವಕರ ಗುಂಪು ಕಾರಿನ ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಆದರೆ ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಮಾಹಿತಿ ದೊರೆತಿದೆ. https://ainlivenews.com/are-you-18-years-old-men-you-must-take-this-test/ ಬೆಂಗಳೂರಿನ, ಕೋರಮಂಗಲದ ಬಳಿಯಲ್ಲಿ ಘಟನೆ ನಡೆದಿದ್ದು. ಕ್ಯಾಬ್ನ್ನು ಫಾಲೋ ಮಾಡಿಕೊಂಡು ಬಂದ ಪುಂಡ ಯುವಕರ ಗುಂಪು ಕಾರಿನ ಬ್ಯಾನೆಟ್ ಮೇಲೆ ಹತ್ತಿ ಏಕಾಏಕಿ ಹಲ್ಲೆಗೆ ಯತ್ನಿಸಿದ್ದಾರೆ. ಯುವಕರ ಪುಂಡಾಟದಿಂದ ಕಾರಿಗೆ ಡ್ಯಾಮೇಜ್ ಆಗಿರುವುದು ಕಂಡು ಬಂದಿದೆ. ಡಿಸೆಂಬರ್ 28ರಂದು ಕೋರಮಂಗಲ ಬಳಿ ನಡೆದ ಘಟನೆಯಾಗಿದೆ.
ಆಕೆ ಬೆಳಿಗ್ಗೆ ಎದ್ದು ಮನೆ ಸ್ವಚ್ಛತೆ ಕೆಲಸ ಮುಗಿಸಿ ಸ್ನಾನಕ್ಕೆ ಅಂತ ಹಿತ್ತಲಿಗೆ ಹೋಗಿದ್ಲು. ಇನ್ನೇನು ಸ್ನಾನ ಮಾಡಬೇಕು ಅನ್ನೊಷ್ಟರಲ್ಲಿ ಯಾರೋ ದುಷ್ಕರ್ಮಿಗಳು ತಲೆಗೆ ರಾಡ್ ನಿಂದ ಹೊಡೆದಿದ್ದಾರೆ. ಬಲವಾಗಿ ಪೆಟ್ಟು ಬೀಳುತ್ತಿದ್ದಂತೆ ತೀವ್ರ ರಕ್ತಸ್ರಾವದಿಂದ ಪ್ರಾಣ ಪಕ್ಷಿ ಹಾರಿಹೋಗಿದೆ. ಮಹಿಳೆ ಸಾವಿನ ಹಿಂದೆ ಹತ್ತಾರು ಅನುಮಾನ ಹುಟ್ಟಿಕೊಂಡಿವೆ. ಈ ಕುರಿತು ಸ್ಟೋರಿ ಇಲ್ಲಿದೆ ನೋಡಿ. ಹೌದು, ಈ ದೃಶ್ಯ ಕಂಡುಬಂದಿದ್ದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮುತ್ತೂರು ಗ್ರಾಮದಲ್ಲಿ. ಬೆಳಿಗ್ಗೆ ಎದ್ದು ಮನೆ ಕೆಲಸ ಮುಗಿಸಿ ಇನ್ನೇನು ಸ್ನಾನ ಮಾಡಬೇಕು ಅಂತ ಹಿತ್ತಲಿಗೆ ಹೋದ ಮಹಿಳೆಗೆ ಹೆಣವಾಗಿ ಬಿದಿದ್ದಾಳೆ. ಇಲ್ಲಿ ಶವವಾಗಿ ಬಿದ್ದಿರೋ ಮಹಿಳೆಯ ಹೆಸರು ಶೋಭಾ ಪರಶುರಾಮ ಮಾಂಗ್ ವಯಸ್ಸು 40 ವರ್ಷ. ಶೋಭಾ ಸ್ನಾನ ಮಾಡುವಾಗಲೇ ಯಾರೋ ದುಷ್ಕರ್ಮಿಗಳು ಕಬ್ಬಿನದ ರಾಡ್ ನಿಂದ ಬಲವಾಗಿ ತಲೆಗೆ ಹೊಡೆದಿದ್ದಾರೆ. ತಲೆಗೆ ಗಂಭೀರವಾಗಿ ಪೆಟ್ಟು ಬೀಳುತ್ತಿದ್ದಂತೆ ತೀವ್ರ ರಕ್ತಸ್ತ್ರಾವದಿಂದ ಕ್ಷಣಾರ್ಧದಲ್ಲಿ ಮೃತಪಟ್ಟಿದ್ದಾಳೆ. ವಿಷಯ ತಿಳಿದು ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯ…
ಬೆಂಗಳೂರು: ಸುಮಾರು 12 ವರ್ಷಗಳಿಂದ ಶರವಣ ಚಾರಿಟಬಲ್ ಟ್ರಸ್ಟ್ ವತಿಯಿಂದ ವೈಕುಂಠ ಏಕಾದಶಿ ಪ್ರಯುಕ್ತ ಲಡ್ಡು ವಿತರಣೆ ಮಾಡಲಾಗುತ್ತಿದೆ. ಅದರಂತೆ ಈ ವರ್ಷವೂ ಶರವಣ ಚಾರಿಟಬಲ್ ಟ್ರಸ್ಟ್ ವತಿಯಿಂದ ವೈಕುಂಠ ಏಕಾದಶಿ ಪ್ರಯುಕ್ತ ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಇದರ ಜೊತೆಗೆ 1 ಲಕ್ಷ ಲಡ್ಡು ಪ್ರಸಾದವನ್ನು ಭಕ್ತಾದಿಗಳಿಗೆ ವಿತರಿಸಲಾಗಿದೆ. ಈ ಲಡ್ಡು ವಿತರಣಾ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಶಾಸಕ ಟಿಎ ಶರವಣ ಅವರು ಚಾಲನೆ ನೀಡಿದ್ದಾರೆ. ನಂತರ ಮಾತನಾಡಿದ ಪರಿಷತ್ ಶಾಸಕ ಟಿಎ ಶರವಣ ಅವರು, ವೈಕುಂಠ ಏಕಾದಶಿ ದಿನದಂದು ಮಹಾವಿಷ್ಣುವಿನ ವೈಕುಂಠ ಮಹಾದ್ವಾರ ತೆಗೆಯಾಗುತ್ತದೆ ಎಂದು ನಂಬಿಕೆ ಹಿಂದೂ ಧರ್ಮದಲ್ಲಿ ಇದೆ. ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ಎಂಬ ಬಿರುದಾಂಕಿತ ವೈಕುಂಠ ಏಕಾದಶಿಯಂದು ಶ್ರೀ ವೆಂಕಟೇಶ್ವರ ದರ್ಶನ ಪಡೆಯಬೇಕು, ತಿರುಮಲ ತಿರುಪತಿಗೆ ಹೋಗಬೇಕು , ಲಡ್ಡು ಪ್ರಸಾದ ಸ್ವೀಕರಿಸಬೇಕು ಎಂಬ ಬಯಕೆ ಭಕ್ತಿ, ಎಲ್ಲರಿಗೂ ಇರುತ್ತದೆ ಎಂದರು. https://youtu.be/yfHy_I_OvGw?si=fqxRjoA0JKLXfsxm ಇನ್ನೂ ಶುದ್ದ ತುಪ್ಪ, ಗೋಡಂಬಿ,ದಾಕ್ಷಿ,ಕಡಲೆಬೇಳೆ ಬಳಸಿ ತಿರುಪತಿಯ ಲಡ್ಡು…
ಬೆಂಗಳೂರು: ಎಂಎಲ್ಸಿ ಸಿ.ಟಿ.ರವಿ ವಿಚಾರದಲ್ಲಿ ರಾಜ್ಯ ಸರ್ಕಾರದ ನಡೆ ವಿರುದ್ಧ ಬಿಜೆಪಿ ರಾಜಭವನದ ಮೆಟ್ಟಿಲೇರಿದೆ. ಲಕ್ಷ್ಮೀ ಹೆಬ್ಬಾಳ್ಕರ್ಗೆ ನಿಂದನೆ ಮಾಡಿದ ಆರೋಪ ಪ್ರಕರಣದಲ್ಲಿ ಸಿಟಿ ರವಿ ಅವರನ್ನ ರಾಜ್ಯ ಸರ್ಕಾರ ನಡೆಸಿಕೊಂಡು ರೀತಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದರು. ಇದೀಗ ಪ್ರಕರಣ ಸಂಬಂಧ, ಮಧ್ಯಪ್ರವೇಶ ಮಾಡಿ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳ ಕಚೇರಿಗೆ ಡಿಸೆಂಬರ್ 31ರಂದೇ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪತ್ರ ಬರೆದಿದ್ದರು ಎಂಬುದು ಈಗ ತಿಳಿದುಬಂದಿದೆ. https://ainlivenews.com/do-you-have-a-heart-problem-if-so-eating-fish-twice-a-week-is-enough/ ಹೌದು ಸಿಟಿ ರವಿ ಅವರ ವಿರುದ್ಧ ಪೊಲೀಸರು ಅನುಮಾನಾಸ್ಪದ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಹಾಗಾಗಿ ಪ್ರಕರಣದ ವಿವರಣೆ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪತ್ರ ಬರೆದಿದ್ದಾರೆ. ಸಿಟಿ ರವಿ ಪ್ರಕರಣದಲ್ಲಿ ಪೊಲೀಸರು ನಡೆದುಕೊಂಡ ರೀತಿಯ ಕುರಿತು ವಿವರಣೆ ನೀಡುವಂತೆಯೂ ಸಿಎಂಗೆ ಪತ್ರ ಬರೆದಿದ್ದಾರೆ. ಬೆಳಗಾವಿಯಲ್ಲಿ ಸಿಟಿ ರವಿ ಅವರನ್ನು ಬಂಧಿಸಿದ ಬಳಿಕ ಪೊಲೀಸರು ನಡೆದುಕೊಂಡ ನಡೆಯ ಕುರಿತು ಸಿಟಿ ರವಿ ಅವರು ಅನುಮಾನ ವ್ಯಕ್ತಪಡಿಸಿದ್ದರು. ಮಾತ್ರವಲ್ಲ…
ಬೆಂಗಳೂರು: ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಲು ನಿರ್ಧರಿಸಿದ್ದಂತ 6 ಮೋಸ್ಟ್ ವಾಂಟೆಂಡ್ ನಕ್ಸಲರು ಎಂ ಸಿದ್ಧರಾಮಯ್ಯ ಸಮ್ಮುಖದಲ್ಲಿ ಶರಣಾಗತಿಯಾಗಲಿದ್ದಾರೆ. ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರಪ್ಪ ಅರೋಲಿ, ತಮಿಳುನಾಡಿನ ಕೆ ವಸಂತ ಮತ್ತು ಕೇರಳದ ಟಿಎನ್ ಜೀಶಾ ಶಸ್ತ್ರಾಸ್ತ್ರ ತೊರೆದು ಮುಖ್ಯವಾಹಿನಿಗೆ ಬರಲಿದ್ದಾರೆ. ಇನ್ನೂ ಇನ್ನು ಶರಣಾಗತಿಯಾಗುತ್ತಿರುವ ನಕ್ಸಲರಿಗೆ ರಾಜ್ಯ ಸರ್ಕಾರ, ಮೂರು ಕೆಟಗರಿಯಲ್ಲಿ ಪ್ಯಾಕೇಜ್ ಘೋಷಿಸಿದೆ. https://ainlivenews.com/do-you-have-a-heart-problem-if-so-eating-fish-twice-a-week-is-enough/ ಇಂದು ಬೆಳಗ್ಗೆಯಿಂದ ಚಿಕ್ಕಮಗಳೂರಿನ ಪ್ರವಾಸಿ ಮಂದಿರದಲ್ಲಿ ಶಾಂತಿಗಾಗಿ ನಾಗರಿಕರ ವೇದಿಕೆ, ದಲಿತ ಸಂಘಟನೆ ಮುಖಂಡರು, ಶರಣಾಗುತ್ತಿರುವ ನಕ್ಸಕರ ಕುಟುಂಬದ ಸದಸ್ಯರ ಹಾಗೂ ಮಾಧ್ಯಮದವರು ಕಾಯುತ್ತಿದ್ದರು. ಆದ್ರೆ, ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಛೇರಿಯಲ್ಲಿ ಶರಣಾಗತಿ ಆಗಬೇಕಿದ್ದ ಆರು ನಕ್ಸಲರನ್ನು ಮುಖ್ಯಮಂತ್ರಿ ಸೂಚನೆ ಮೇರೆಗೆ ಪೊಲೀಸರು ಬೆಂಗಳೂರಿಗೆ ಕರೆತಂದು ಶರಣಾಗತಿ ಮಾಡಿಸಲಿದ್ದಾರೆ. ನಕ್ಲರಿಗೆ ಪ್ಯಾಕೇಜ್ ಘೋಷಣೆ ಈ ನಕ್ಸಲರು ಸುಮ್ಮನೇ ಶರಣಾಗುತ್ತಿಲ್ಲ. ಸಾಕಷ್ಟು ಬೇಡಿಕೆಗಳನ್ನಿಟ್ಟುಕೊಂಡೇ ಶರಣಾಗುತ್ತಿದ್ದಾರೆ. ಶರಣಾಗತಿಯಾಗುತ್ತಿರುವ ನಕ್ಸಲರಿಗೆ ಸರ್ಕಾರ ಪ್ಯಾಕೇಜ್ ನೀಡುತ್ತಿದೆ. ಇದರಲ್ಲಿ ಮೂರು ಕೆಟಗರಿ ಇದೆ. ಕೆಟಗರಿ ಎ: ನಮ್ಮ…
ಟೀಮ್ ಇಂಡಿಯಾದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದೆ. ಸುಮಾರು 5 ವರ್ಷಗಳ ನಂತರ ಚಹಾಲ್ ಮತ್ತವರ ಪತ್ನಿ ಧನಶ್ರೀ ವರ್ಮಾ ಬೇರೆ ಆಗುತ್ತಿದ್ದಾರೆ ಎನ್ನುವ ಸುದ್ದಿ ಇದೆ. ಸೋಷಿಯಲ್ ಮೀಡಿಯಾದಲ್ಲಿ ಇಬ್ಬರು ಪರಸ್ಪರ ಅನ್‌ಫಾಲೋ ಮಾಡಿಕೊಂಡಿದ್ದು, ಇದು ಡಿವೋರ್ಸ್ ಊಹಾಪೋಹಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ. ಇನ್ನೂ ಈ ವಿಚ್ಛೇದನ ವದಂತಿಯ ನಡುವೆ ಚಹಲ್ ಮತ್ತೊಬ್ಬ ಹುಡುಗಿಯ ಜೊತೆ ಓಡಾಟ ನಡೆಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸದ್ಯಕ್ಕೆ ಚಹಾಲ್ ಜೊತೆಗೆ ಕಾಣಿಸಿಕೊಂಡಿರುವ ಆ ಯುವತಿ ಯಾರೆಂಬುದು ತಿಳಿದುಬಂದಿಲ್ಲ. ಆದರೆ ಈ ಇಬ್ಬರು ಜೊತೆಯಾಲ್ಲಿ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. https://www.instagram.com/reel/DEeIQP8N22Q/?utm_source=ig_embed&ig_rid=35f440ca-6841-4484-9641-468e2777237f ಈ ವೇಳೆ ಮಾಧ್ಯಮದ ಕ್ಯಾಮರಾಗಳು ಚಹಾಲ್ ಅವರನ್ನು ಸೆರೆಹಿಡಿಯಲು ಪ್ರಯತ್ನಿಸಿದಾಗ ಅವರು ತನ್ನ ಮುಖವನ್ನು ಮರೆಮಾಚಿದ್ದಾರೆ. ಅಂದಿನಿಂದ ಧನಶ್ರೀ ಮತ್ತು ಚಹಾಲ್ ವಿಚ್ಛೇದನದ ಸುದ್ದಿಗೆ ಈ ನಿಗೂಢ ಹುಡುಗಿಯೇ ಕಾರಣ ಎಂಬ ಚರ್ಚೆಗಳು ನಡೆಯುತ್ತಿವೆ. ಚಹಾಲ್ ಮತ್ತು ಧನಶ್ರೀ ಕಳೆದ ಕೆಲವು ತಿಂಗಳಿನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಈ…