ಹುಬ್ಬಳ್ಳಿಯಲ್ಲಿ ಹಂತಕನಿಂದ ಕೊಲೆಯಾದ ನೇಹಾ ಬಗ್ಗೆ ಸೆಲೆಬ್ರಿಟಿಗಳು ಧ್ವನಿಯೆತ್ತಿದ್ದಾರೆ. ಘಟನೆಯ ಬಗ್ಗೆ ಸ್ಯಾಂಡಲ್ ವುಡ್ ನಟ, ನಟಿಯರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ. ನಟ ಪ್ರಥಮ್ ನೇಹಾ ಮನೆಗೆ ಭೇಟಿ ನೀಡಿ ಪೋಷಕರೊಂದಿಗೆ ಮಾತನಾಡಿದ್ದಾರೆ. ಜೊತೆಗೆ ನೇಹಾ ವಿಷಯದಲ್ಲಿ ನಟ ಪ್ರಕಾಶ್ ರಾಜ್ ಹಾಗೂ ಚೇತನ್ ಯಾಕೆ ಮಾತನಾಡುತ್ತಿಲ್ಲ ಎಂದು ಪರೋಕ್ಷವಾಗಿ ಪ್ರಶ್ನೆ ಮಾಡಿದ್ದಾರೆ. ಸದಾ ಪ್ರಗತಿಪರ ವಿಚಾರಗಳ ಕುರಿತು ಮಾತನಾಡುವ ಚೇತನ್ ಅಹಿಂಸಾ, ಪ್ರಕಾಶ್ ರಾಜ್ ಇಂದು ಯಾಕೆ ಮಾತನಾಡುತ್ತಿಲ್ಲ ಎಂದು ಕಿಡಿ ಕಾರಿದ್ದಾರೆ. ಎಲ್ಲದಕ್ಕೂ ಧ್ವನಿಯೆತ್ತುವ, ಮಾತೆತ್ತಿದರೆ ನರೇಂದ್ರ ಮೋದಿಯವರನ್ನು ಪ್ರಶ್ನಿಸುವವರು ಈಗ ರಾಜ್ಯದ ಮಗಳು ಮೃತಪಟ್ಟಿದ್ದಾರೆ. ಆಕೆಯ ಬಗ್ಗೆ ಯಾಕೆ ನೀವು ಧ್ವನಿ ಎತ್ತುತ್ತಿಲ್ಲ? ಬರೀ ಅಹಿಂಸಾ ಎಂದು ಹೆಸರಿಟ್ಟುಕೊಂಡರೆ ಸಾಲದು. ಇಂತಹ ಘಟನೆ ಬಗ್ಗೆ ಧ್ವನಿಯೆತ್ತಬೇಕು. ಕೇವಲ ನಿಮ್ಮ ಅನುಕೂಲಕ್ಕೆ ತಕ್ಕಂತೆ ಮಾತನಾಡುವುದಲ್ಲ ಎಂದು ಪ್ರಕಾಶ್ ರಾಜ್ ಮತ್ತು ಚೇತನ್ ಗೆ ಪರೋಕ್ಷವಾಗಿ ಕುಟುಕಿದ್ದಾರೆ. ಈ ನಡುವೆ ಫಯಾಜ್ ಮತ್ತು…
Author: Author AIN
ಮಲಯಾಳಂ ಸಿನಿಮಾ ರಂಗದ ಖ್ಯಾತ ನಿರ್ದೇಶಕ ಜೋಶಿ ಮನೆಯಲ್ಲಿ ಕಳ್ಳತನವಾಗಿದ್ದು ಆರೋಪಿಯನ್ನು ಬಂಧಿಸಿದ್ದಾರೆ. ಕೊಚ್ಚಿಯ ಪನಂಪಲ್ಲಿ ನಗರದ 10ನೇ ಅಡ್ಡ ರಸ್ತೆಯ ಬಿ ಸ್ಟ್ರೀಟ್ನಲ್ಲಿರುವ ಜೋಶಿ ಅವರ ಮನೆ ಅಭಿಲಾಷಮ್ ನಲ್ಲಿ ಕಳ್ಳತನ ನಡೆದಿದ್ದು, ಮನೆಯಲ್ಲಿದ್ದ ಸುಮಾರು ಒಂದು ಕೋಟಿ ಮೌಲ್ಯದ ಚಿನ್ನಭಾರಣ ಮತ್ತು ವಜ್ರಗಳು ಕಳ್ಳತನವಾಗಿತ್ತು. ಸದ್ಯ ಆರೋಪಿಯನ್ನು ಉಡುಪಿಯಲ್ಲಿ ಬಂಧಿಸಲಾಗಿದೆ. ಮನೆಯ ಹಿಂಬದಿಯ ಅಡುಗೆ ಮನೆ ಒಡೆದು ಕಳ್ಳರು ಮನೆಯೊಳಗೆ ನುಗ್ಗಿದ್ದಾರೆ. ಬಳಿಕ ಎರಡನೇ ಮಹಡಿಯ ಕೋಣೆಯನ್ನು ಪ್ರವೇಶಿಸಿ, ಕೊಠಡಿಯಲ್ಲಿದ್ದ ಸೇಫ್ ಲಾಕರ್ ಒಡೆದು 25 ಲಕ್ಷ ಮೌಲ್ಯದ ಹತ್ತು ವಜ್ರದ ಕಿವಿಯೋಲೆಗಳು, ಹತ್ತು ಉಂಗುರಗಳು, ಹತ್ತು ಚಿನ್ನದ ನೆಕ್ಲೇಸ್ ಗಳು, 10 ಬಳೆಗಳು, ಹತ್ತು ವಾಚ್ ಗಳನ್ನು ಕಳ್ಳತನ ಮಾಡಲಾಗಿದೆ. ಈ ವೇಳೆ ಜೋಶಿ ಅವರ ಪತ್ನಿ ಸಿಂಧು, ಸೊಸೆ ವರ್ಷಾ ಹಾಗೂ 3 ಮಕ್ಕಳು ಮನೆಯಲ್ಲಿದ್ದರು. ಜೋಶಿ ಅವರ ಪತ್ನಿ ಬೆಳಗ್ಗೆ ಅಡುಗೆ ಕೋಣೆಗೆ ಬಂದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಮನೆಯ ಕೆಲಸದಾಕೆ, ಕೊಂತುರುತಿ ಮೂಲದ…
ಬಿಜೆಪಿಯ ಗೋರಖ್ ಪುರದ ಸಂಸದ ರವಿ ಕಿಶನ್ ತನ್ನ ತಂದೆ ಎಂದು ನಟಿ ಶಿನೋವಾ ಆರೋಪ ಮಾಡಿದ್ದಾರೆ. ಈ ಬಗ್ಗೆ ಮುಂಬೈ ನ್ಯಾಯಾಲಯದಲ್ಲಿ ಸಿವಿಲ್ ಮೊಕದ್ದಮೆ ಹೂಡಿದ್ದು, ಡಿಎನ್ಎ ಪರೀಕ್ಷೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ. ಅಪರ್ಣಾ ಸೋನಿ ಜೊತೆ ರವಿ ಕಿಶನ್ ಅವರಿಗೆ ಸಂಬಂಧ ಇತ್ತು. ಆ ಸಂಬಂಧದಿಂದ ಜನಿಸಿದ ಮಗಳು ನಾನು ಎಂದು ಮೊಕದ್ದಮೆಯಲ್ಲಿ ಶಿನೋವಾ ತಿಳಿಸಿದ್ದಾರೆ. ಕಿಶನ್ ತನ್ನ ತಂದೆ ಎಂದು ಬಹಿರಂಗಗೊಳಿಸಿದ ನಂತರ ಉತ್ತರ ಪ್ರದೇಶದಲ್ಲಿ ಸೋನಿ ಮತ್ತು ಇತರರ ವಿರುದ್ಧ ದಾಖಲಾಗಿರುವ ಎಫ್ಐಆರ್ ಅನ್ನು ರದ್ದುಗೊಳಿಸುವಂತೆ ಅವರು ಬಾಂಬೆ ಹೈಕೋರ್ಟ್ಗೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಮೂರು ದಿನಗಳ ಹಿಂದೆ ಕಿಶನ್ ಅವರ ಪತ್ನಿ ಪ್ರೀತಿ ಶುಕ್ಲಾ ಅವರು ಶಿನೋವಾ ಸೇರಿ ಆರು ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ರವಿ ಕಿಶನ್ ಅವರು ತನ್ನ ತಂದೆ ಎಂದು ಆರೋಪ ಮಾಡಿದ ಹಿನ್ನೆಲೆಯಲ್ಲಿ ಪ್ರೀತಿ ಶುಕ್ಲಾ ಅವರು ಎಫ್ಐಆರ್ ದಾಖಲಿಸಿದ್ದರು. ರವಿ ಕಿಶನ್ ಅವರು ತನ್ನ ಮಗಳಿಗೆ ಅಪ್ಪ…
ಹುಬ್ಬಳಿಯ ಯುವತಿ ನೇಹಾ ಹಿರೇಮಠ್ ಕೊಲೆಗೆ ಅನೇಕರು ಕಂಬನಿ ಮಿಡಿದಿದ್ದಾರೆ. ಈಗಾಗ್ಲೆ ಚಂದನವನದ ಸ್ಟಾರ್ಸ್ ಗಳು ಘಟನೆಯ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ಕನ್ನಡ ಚಿತ್ರರಂಗದ ನಟ ಪ್ರಥಮ್ ನೇಹಾ ತಂದೆ-ತಾಯಿಯನ್ನು ಭೇಟಿ ಮಾಡಿದ್ದಾರೆ. ನೇಹಾ ಪೋಷಕರನ್ನು ಭೇಟಿಯಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಪ್ರಥಮ್, ‘ಕಲಾವಿದರು ಎಲೆಕ್ಷನ್ ಪ್ರಚಾರಕ್ಕೆ ಬರುತ್ತಾರೆ. ಇಂಥ ಘಟನೆ ಆದಾಗ ಯಾರೂ ಬರಲ್ಲ. ಅಂಥ ಕಲಾವಿದರನ್ನು ತಲೆ ಮೇಲೆ ಇಟ್ಟುಕೊಂಡು ಮೆರೆಸಬೇಡಿ. ನೇಹಾ ಹಿರೇಮಠ್ ನಿಧನದಿಂದ ಚಿತ್ರರಂಗದ ಎಲ್ಲರಿಗೂ ನೋವಾಗಿದೆ. ಪ್ರಹ್ಲಾದ್ ಜೋಶಿ ಅವರೇ ನೀವು 10 ವರ್ಷದಿಂದ ಅಧಿಕಾರದಲ್ಲಿ ಇದ್ದೀರಿ. ಅಂತರ್ ಧರ್ಮೀಯ ವಿವಾಹದ ಬಗ್ಗೆ ಕಠಿಣ ನಿಯಮ ತೆಗೆದುಕೊಂಡು ಬನ್ನಿ’ ಎಂದಿದ್ದಾರೆ. ‘ಹಿಂದೂ ಧರ್ಮದ ಹುಡುಗಿಯರನ್ನು ಬೇರೆ ಧರ್ಮದವರು ಮದುವೆ ಆಗಲೇಬಾರದು. ಯಾಕೆ ಆಗಬೇಕು? ಹಿಂದೂ ಹುಡುಗಿಯರ ಜೊತೆ ನೀವು ಲವ್ ಯಾಕೆ ಮಾಡುತ್ತೀರಿ? ಅದರಿಂದಲೇ ತಾನೆ ಇಷ್ಟೆಲ್ಲ ಕ್ರೌರ್ಯ ಆಗುತ್ತಿರುವುದು. ನಿಮ್ಮ ಪಾಡಿಗೆ, ನಿಮ್ಮ ಸಮುದಾಯದವರನ್ನೇ ಮದುವೆ ಆಗಿ. ಹಿಂದೂ ಹುಡುಗಿಯರ ಜೊತೆ ನಿಮಗೆ…
ಪ್ರಭಾಸ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಬಿಗ್ ಬಿ ಲುಕ್ ಹೇಗಿರಲಿದೆ ಎಂಬ ಕುತೂಹಲ ಮನೆ ಮಾಡಿತ್ತು. ಇದೀಗ ಚಿತ್ರತಂಡ ಅಮಿತಾಭ್ ಪಾತ್ರದ ಪೋಸ್ಟರ್ ರಿಲೀಸ್ ಮಾಡಿದೆ. ಕಲ್ಕಿ ಸಿನಿಮಾದಲ್ಲಿ ಬಿಗ್ ಬಿ ಪಾತ್ರದ ಪೋಸ್ಟರ್ ರಿವೀಲ್ ಮಾಡುವ ಮೂಲಕ ನಿರೀಕ್ಷೆ ಹುಟ್ಟಿಸಿದ್ದಾರೆ. ದೇವಸ್ಥಾನದ ಎದುರು ಬಿಗ್ ಬಿ ಕುಳಿತಿದ್ದು, ಕಣ್ಣಿಗೆ ಸೂರ್ಯ ಕಿರಣ ಬಿದ್ದಿದೆ. ಮೈತುಂಬಾ ಬಟ್ಟೆ ಸುತ್ತಿಕೊಂಡಿದ್ದು, ನೋಟ ಖಡಕ್ ಆಗಿದೆ. ಪೋಸ್ಟರ್ನಲ್ಲಿ ಈಗ ಸಮಯ ಬಂದಿದೆ ಎಂದು ಅಡಿಬರಹ ನೀಡಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ‘ಕಲ್ಕಿ 2898 ಎಡಿ’ ಸಿನಿಮಾದ ರಿಲೀಸ್ ಡೇಟ್ ಬಗ್ಗೆ ಗೊಂದಲ ಮೂಡಿದೆ. ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆ ಆದ ಬಳಿಕ ಈ ಗೊಂದಲ ಶುರುವಾಗಿದೆ. ತೆಲುಗು ರಾಜ್ಯಗಳಲ್ಲಿ ಮೇ 12ರಂದು ಎಲೆಕ್ಷನ್ ನಡೆಯಲಿದೆ. ಅದಕ್ಕೂ 3 ದಿನ ಮುನ್ನ, ಅಂದರೆ ಮೇ 9ರಂದು ‘ಕಲ್ಕಿ 2898 ಎಡಿ’…
ಲೋಕಸಭೆ ಚುನಾವಣೆಯ ನಂತರ ಜನರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. ಮೊಬೈಲ್ ಸೇವಾ ಸಂಸ್ಥೆಗಳು ಸುಂಕ ಹೆಚ್ಚಿಸಲು ಸಿದ್ಧತೆ ನಡೆಸಿದ್ದು, ಚುನಾವಣೆ ಮುಗಿದ ಬೆನ್ನಲ್ಲೇ ಮೊಬೈಲ್ ರೀಚಾರ್ಜ್ ದುಬಾರಿಯಾಗಲಿದೆ ಎನ್ನಲಾಗುತ್ತಿದೆ. ಲೋಕಸಭಾ ಚುನಾವಣೆಯ ನಂತರ ಟೆಲಿಕಾಂ ಉದ್ಯಮದಲ್ಲಿ ಅಂದಾಜು 15-17% ನಷ್ಟು ಸುಂಕ ಹೆಚ್ಚಳವಾಗಲಿದೆ ಎಂದು ಇತ್ತೀಚೆಗೆ ಬಿಡುಗಡೆಯಾದ ವರದಿ ಹೇಳಿದೆ. ದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ಏಪ್ರಿಲ್ 19 ರಿಂದ ಜೂನ್ 1 ರವರೆಗೆ 7 ಹಂತಗಳಲ್ಲಿ ನಡೆಯಲಿವೆ. ಜೂನ್ 4 ರಂದು ಮತ ಎಣಿಕೆ ನಡೆಯಲಿದೆ. ಆ್ಯಂಟಿಕ್ ಸ್ಟಾಕ್ ಬ್ರೋಕಿಂಗ್ನ ಈ ವರದಿಯ ಪ್ರಕಾರ ಟೆಲಿಕಾಂ ವಲಯದಲ್ಲಿ ಸುಂಕ ಹೆಚ್ಚಳವು ಬಹಳ ದಿನಗಳಿಂದ ಬಾಕಿ ಉಳಿದಿದ್ದು, ಚುನಾವಣೆಯ ನಂತರ ದರ ಮತ್ತಷ್ಟು ಹೆಚ್ಚಾಗಲಿದೆ. ಲೋಕಸಭಾ ಚುನಾವಣೆಯ ನಂತರ ಟಿಲಿಕಾಂ ಉದ್ಯಮವು ಶೇ.15-17ರಷ್ಟು ಶುಲ್ಕವನ್ನು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಡಿಸೆಂಬರ್ 2021ರಲ್ಲಿ ಕೊನೆಯ ಬಾರಿಗೆ ಸುಮಾರು 20% ನಷ್ಟು ಶುಲ್ಕವನ್ನು ಹೆಚ್ಚಿಸಲಾಗಿತ್ತು. ಅಂದರೆ ಸದ್ಯ ಸುಮಾರು 3 ವರ್ಷಗಳ…
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೆ ಕಾಫಿ ಅಂದರೆ ಸಖತ್ ಇಷ್ಟು. ಅದು ಎಷ್ಟು ಇಷ್ಟ ಅನ್ನೋದು ವಿಜಯ ಲಕ್ಷ್ಮೀ ಶೇರ್ ಮಾಡಿರುವ ಫೋಟೋದಲ್ಲಿ ಗೊತ್ತಾಗುತ್ತೆ. ವಿಜಯ ಲಕ್ಷ್ಮಿ ದೊಡ್ಡ ಸೈಜ್ ನ ಕಪ್ನಲ್ಲಿ ಕಾಫಿ ಸವಿದಿದ್ದಾರೆ. ಇದರ ಜೊತೆಗೆ ಎರಡೂ ಕೈಗಳಿಂದ ಎತ್ತುವಷ್ಟು ದೊಡ್ಡ ಕ್ರುಸಾಂಟ್ ಕೂಡಾ ತಿಂದಿದ್ದು ಅವುಗಳ ಸ್ಪೆಷಲ್ ಫೋಟೋಸ್ ಇನ್ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ದೊಡ್ಡ ಸೈಜ್ ನ ಕಾಫಿ ಕಪ್ ಬಳಿ ಮುಖವಿಟ್ಟುಕೊಂಡ ವಿಜಯಲಕ್ಷ್ಮಿ ಅದರ ಪರಿಮಳವನ್ನು ಆನಂದಿಸಿದ್ದಾರೆ. ಆಕರ್ಷಕವಾದ ಗಾಗಲ್ಸ್ ಧರಿಸಿದ್ದ ಅವರು ಬ್ಲ್ಯಾಕ್ ಔಟ್ಫಿಟ್ನಲ್ಲಿ ಸೂಪರ್ ಆಗಿ ಕಾಣಿಸಿದ್ದಾರೆ. ಟೇಬಲ್ ಮೇಲಿದ್ದ ಕಾಫಿ ಹಾಗೂ ಕ್ರುಸಾಂಟ್ ಎಂಜಾಯ್ ಮಾಡಿದ್ದಾರೆ. ಇನ್ನೊಂದು ಫೋಟೋದಲ್ಲಿ ವಿಜಯಲಕ್ಷ್ಮಿ ಅವರು ಕಾಫಿ ಮಗ್ನ್ನು ಬಳಸಿ ಹಿಡಿದುಕೊಂಡಿರುವುದನ್ನು ಕಾಣಬಹುದು. ವಿಜಯಲಕ್ಷ್ಮಿ ಫೋಟೋಗೆ 6 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಮೇಡಂ ಕಾಫಿ ಎಷ್ಟು ಬೇಕು ನಿಮಗೆ ಕುಡಿಯಿರಿ. ಹಾಗೆ ನಮ್ಮ ಬಾಸ್ಗೂ ಸ್ವಲ್ಪ ಉಳಿಸಿ ಎಂದು ಸಾಕಷ್ಟು…
ಮಹಿಳೆಯೊಬ್ಬಳು 1 ಗಂಟೆಯಲ್ಲಿ 6 ಮಕ್ಕಳಿಗೆ ಜನ್ಮ ನೀಡಿದ ಅಪರೂಪದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಪಾಕಿಸ್ತಾನದ ರಾವಲ್ಪಿಂಡಿಯ ಹಾಜಿರಾ ಕಾಲೋನಿಯಲ್ಲಿ ನೆಲೆಸಿರುವ ಮೊಹಮ್ಮದ್ ವಹೀದ್ ಅವರ ಪತ್ನಿ ಜೀನತ್ ವಹೀದ್ ಎಂಬುವವರು 1 ಗಂಟೆ ಅವಧಿಯಲ್ಲಿ 6 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಗುರುವಾರ (ಏಪ್ರಿಲ್ 18)ರಂದು ಜೀನತ್ ವಹೀದ್ ಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ಜೀನತ್ ವಹೀದ್ 6 ಮಕ್ಕಳಿಗೆ ಮಕ್ಕಳಿಗೆ ಜನ್ಮ ನೀಡಿದ್ದು, ಈ ಪೈಕಿ 2 ಹೆಣ್ಣು ಮತ್ತು 4 ಗಂಡುಮಕ್ಕಳು ಜನಿಸಿದ್ದಾರೆ. ತಾಯಿ ಸೇರಿದಂತೆ ಎಲ್ಲಾ ಶಿಶುಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಜೊತೆಗೆ ಶಿಶುಗಳು ತಲಾ ಎರಡು ಪೌಂಡ್ಗಳಿಗಿಂತ ಕಡಿಮೆ ತೂಕವನ್ನು ಹೊಂದಿರುವುದಾಗಿ ತಿಳಿಸಿದ್ದಾರೆ. ಶಿಶುಗಳನ್ನು ಇನ್ಕ್ಯುಬೇಟರ್ಗಳಲ್ಲಿ ಇರಿಸಲಾಗಿದ್ದು, ಮಕ್ಕಳಿಗೆ ಹಾಗೂ ತಾಯಿಗೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಶಿಶುಗಳನ್ನು ಹೆರಿಗೆ ಮಾಡಿದ ನಂತರ ಜೀನತ್ಗೆ ಕೆಲವು ಆರೋಗ್ಯ…
ಪ್ರಯಾಣಿಕರನ್ನು ಕರೆದೊಯ್ಯುವಾಗ ಜನದಟ್ಟಣೆಯಿಂದ ತುಂಬಿದ ಹಿನ್ನೆಲೆಯಲ್ಲಿ ದೋಣಿ ಮುಳುಗಿ ಕನಿಷ್ಠ 58 ಜನರು ಸಾವನ್ನಪ್ಪಿರುವ ಘಟನೆ ಮಧ್ಯ ಆಫ್ರಿಕನ್ ನಲ್ಲಿ ನಡೆದಿದೆ. ರಾಜಧಾನಿ ಬಾಂಗುಯಿಯಲ್ಲಿರುವ ಎಂಪೊಕೊ ನದಿಯಲ್ಲಿ ಅಂತ್ಯಕ್ರಿಯೆಗೆ 300 ಕ್ಕೂ ಹೆಚ್ಚು ಜನರನ್ನು ಕರೆದೊಯ್ಯುತ್ತಿದ್ದ ಮರದ ದೋಣಿ ಮುಳುಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಶೂಗಳಿಗೆ ಹೆಸರವಾಸಿಯಾಗಿರುವ ನೈಕ್ ಸಿಬ್ಬಂದಿಗಳಿಗೆ ಶೂಕಿಂಗ್ ನ್ಯೂಸ್ ಕೊಟ್ಟಿದೆ. ಜೂನ್ 28 ರೊಳಗೆ ಯುಎಸ್ ನ ಒರೆಗಾನ್ ಪ್ರಧಾನ ಕಚೇರಿಯಲ್ಲಿ 740 ಉದ್ಯೋಗಿಗಳನ್ನು ವಜಾಗೊಳಿಸಲು ನೈಕ್ ಮುಂದಾಗಿದೆ. ಕಾರ್ಮಿಕ ಹೊಂದಾಣಿಕೆ ಮತ್ತು ಮರು ತರಬೇತಿ ಅಧಿಸೂಚನೆ ಕಾಯ್ದೆಯಿಂದ ಕಡ್ಡಾಯಗೊಳಿಸಲಾದ ನೋಟಿಸ್ ನಲ್ಲಿ ಕಂಪನಿಯು ತನ್ನ ಬೀವರ್ಟನ್, ಒರೆಗಾನ್ ಪ್ರಧಾನ ಕಚೇರಿಯಲ್ಲಿ ಕಾರ್ಯಪಡೆಯಲ್ಲಿ ಸಂಭವಿಸುವ ವಜಾಗಳ ಬಗ್ಗೆ ರಾಜ್ಯ ಮತ್ತು ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಜೂನ್ 28 ರಿಂದ ನೈಕ್ ತನ್ನ ವಿಶ್ವ ಪ್ರಧಾನ ಕಚೇರಿಯಲ್ಲಿ ಉದ್ಯೋಗಿಗಳ ಸಂಖ್ಯೆಯನ್ನು ಶಾಶ್ವತವಾಗಿ ಕಡಿಮೆ ಮಾಡಲಿದೆ ಎಂದು ನೈಕ್ ಉಪಾಧ್ಯಕ್ಷ ಮಿಚೆಲ್ ಆಡಮ್ಸ್ ನೋಟಿಸ್ ನಲ್ಲಿ ತಿಳಿಸಿದ್ದಾರೆ. ಎರಡು ತಿಂಗಳ ಹಿಂದೆ, ನೈಕ್ ಸಿಇಒ ಜಾನ್ ಡೊನಾಹೋ ತನ್ನ ಉದ್ಯೋಗಿಗಳನ್ನು ಸುಮಾರು 2 ಪ್ರತಿಶತದಷ್ಟು ಅಥವಾ 1,600 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕಡಿತಗೊಳಿಸುವ ಯೋಜನೆಗಳನ್ನು ಉದ್ಯೋಗಿಗಳಿಗೆ ಮೆಮೋದಲ್ಲಿ ವಿವರಿಸಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. 31 ಮೇ 2023 ರ ಹೊತ್ತಿಗೆ…