ಭಾರತದ ಸೈಬರ್ ಸೆಕ್ಯುರಿಟಿ ಏಜೆನ್ಸಿ ಸಿಇಆರ್ಟಿ-ಇನ್ ಗೂಗಲ್ ಕ್ರೋಮ್ ನ ಡೆಸ್ಕ್ ಟಾಪ್ ಆವೃತ್ತಿಯ ಬಳಕೆದಾರರಿಗೆ ಹೆಚ್ಚಿನ ಅಪಾಯದ ಎಚ್ಚರಿಕೆಯನ್ನು ನೀಡಿದೆ. ಈ ಎಚ್ಚರಿಕೆಯು ಗೂಗಲ್ ಕ್ರೋಮ್ ನಲ್ಲಿ ಅನೇಕ ದುರ್ಬಲತೆಗಳನ್ನು ಎತ್ತಿ ತೋರಿಸುತ್ತದೆ, ಇದು ರಿಮೋಟ್ ದಾಳಿಕೋರರಿಗೆ ಉದ್ದೇಶಿತ ವ್ಯವಸ್ಥೆಗಳಲ್ಲಿ ಅನಿಯಂತ್ರಿತ ಕೋಡ್ ಅನ್ನು ಕಾರ್ಯಗತಗೊಳಿಸಲು ಅನುವು ಮಾಡಿಕೊಡುತ್ತದೆ. ಈ ಉದ್ದೇಶಿತ ದಾಳಿಗಳನ್ನು ತಪ್ಪಿಸಲು, ಬಳಕೆದಾರರು ತಮ್ಮ ಬ್ರೌಸರ್ಗಳನ್ನು ತಕ್ಷಣವೇ ನವೀಕರಿಸಲು ಸೂಚನೆ ನೀಡಲಾಗಿದೆ. ಸಿಇಆರ್ಟಿ-ಇನ್ ಪ್ರಕಾರ, ವಿಂಡೋಸ್ ಮತ್ತು ಮ್ಯಾಕ್ನ ಗೂಗಲ್ ಕ್ರೋಮ್ ಆವೃತ್ತಿಗಳಲ್ಲಿ ಅನೇಕ ದುರ್ಬಲತೆಗಳು ಅಸ್ತಿತ್ವದಲ್ಲಿವೆ, ಇದು ರಿಮೋಟ್ ಅಟ್ಯಾಕರ್ಗೆ ನಿಮ್ಮ ಸಿಸ್ಟಮ್ನ ನಿಯಂತ್ರಣವನ್ನು ತೆಗೆದುಕೊಳ್ಳಲು ಅಥವಾ ಅದನ್ನು ಕ್ರ್ಯಾಶ್ ಮಾಡಲು ಅನುವು ಮಾಡಿಕೊಡುತ್ತದೆ ಎನ್ನಲಾಗಿದೆ.
Author: Author AIN
ನಾಝಿ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಜನ್ಮದಿನದಂದು ಹಿಟ್ಲರ್ ಜನಿಸಿದ ಮನೆಯಲ್ಲಿ ಸ್ಮರಣೆಗಾಗಿ ಬಿಳಿಗುಲಾಬಿ ಇರಿಸಿ ಬಳಿಕ `ಹಿಟ್ಲರ್ ಸೆಲ್ಯೂಟ್’ ನೀಡಿದ ನಾಲ್ವರು ಜರ್ಮನ್ ಪ್ರಜೆಗಳನ್ನು ಬಂಧಿಸಿರುವ ಘಟನೆ ಪಶ್ಚಿಮ ಆಸ್ಟ್ರಿಯಾದಲ್ಲಿ ನಡೆದಿದೆ. ಆರೋಪಿಗಳನ್ನು ಬಂಧಿಸಿರುವ ಕುರಿತು ಆಸ್ಟ್ರಿಯಾದ ಪೊಲೀಸರು ತಿಳಿಸಿದ್ದಾರೆ. 1889ರ ಎಪ್ರಿಲ್ 20ರಂದು ಪಶ್ಚಿಮ ಆಸ್ಟ್ರಿಯಾದ ಬ್ರೌನೌ ಆಮ್ಇನ್ನಲ್ಲಿ ಹಿಟ್ಲರ್ ಜನಿಸಿದ್ದ ಮನೆಯನ್ನು ಪೊಲೀಸ್ ಠಾಣೆಯನ್ನಾಗಿ ಪರಿವರ್ತಿಸುವ ಯೋಜನೆಗೆ ಕಳೆದ ವರ್ಷ ಚಾಲನೆ ದೊರಕಿದೆ. ಹಿಟ್ಲರ್ ನನ್ನು ವೈಭವೀಕರಿಸುವ ಜನರು ಹಿಟ್ಲರ್ ಜನಿಸಿದ್ದ ಮನೆಯನ್ನು ಯಾತ್ರಾ ಸ್ಥಳವನ್ನಾಗಿ ಮಾಡುವ ಪ್ರಯತ್ನವನ್ನು ತಡೆಯುವ ಉದ್ದೇಶದಿಂದ ಇದನ್ನು ಪೊಲೀಸ್ ಠಾಣೆಯನ್ನಾಗಿ ಪರಿವರ್ತಿಸಲು ಸರಕಾರ ಉದ್ದೇಶಿಸಿದೆ. ಇಬ್ಬರು ಸಹೋದರಿಯರು ಹಾಗೂ ಅವರ ಪೋಷಕರು ಶನಿವಾರ(ಎಪ್ರಿಲ್ 20) ಹಿಟ್ಲರ್ ಜನಿಸಿದ್ದ ಮನೆಗೆ ತೆರಳಿ ಮನೆಯ ಕಿಟಕಿಯ ಬಳಿ ಬಿಳಿ ಗುಲಾಬಿಯನ್ನು ಇರಿಸಿದ್ದಾರೆ. ಬಳಿಕ ಮನೆಯೆದುರು ನಿಂತು ಫೋಟೋ ತೆಗೆಸಿಕೊಳ್ಳುವಾಗ ಒಬ್ಬ ಯುವತಿ ಹಿಟ್ಲರ್ ಗೆ ಸಶಸ್ತ್ರ ಪಡೆ ಸಲ್ಲಿಸುತ್ತಿದ್ದ `ಸೆಲ್ಯೂಟ್’ ಗೌರವವನ್ನು ಸಲ್ಲಿಸಿದ್ದಾರೆ. ಆ ಪ್ರದೇಶದಲ್ಲಿ…
ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ಅನಿರೀಕ್ಷಿತ ದಾಳಿಯನ್ನು ತಡೆಯಲು ವಿಫಲವಾಗಿರುವುದರ ಹೊಣೆ ಹೊತ್ತು ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ಇಸ್ರೇಲ್ ಮಿಲಿಟರಿ ಗುಪ್ತಚರ ದಳದ ನಿರ್ದೇಶಕ ಮೇ.ಜ. ಅಹರಾನ್ ಹಲೀವಾ ಘೋಷಿಸಿದ್ದಾರೆ. ಹಮಾಸ್ ಸಶಸ್ತ್ರ ಹೋರಾಟಗಾರರು ಇಸ್ರೇಲ್ನ ಗಡಿ ರಕ್ಷಣೆಯನ್ನು ಸ್ಫೋಟಿಸಿ ಇಸ್ರೇಲ್ನ ಪ್ರದೇಶಕ್ಕೆ ನುಗ್ಗಿ, ರಸ್ತೆಗಳಲ್ಲಿ ಮುಕ್ತವಾಗಿ ಸಂಚರಿಸಿದ್ದರು. ಹಮಾಸ್ನ ದಾಳಿಯನ್ನು ಸುಮಾರು 1,200 ಜನರು ಹತರಾಗಿದ್ದು ಸುಮಾರು 250 ಜನರನ್ನು ಗಾಝಾಕ್ಕೆ ಕೊಂಡೊಯ್ದು ಒತ್ತೆಸೆರೆಯಲ್ಲಿ ಇರಿಸಲಾಗಿದೆ. ಈ ದಾಳಿಯು ಗಾಝಾದಲ್ಲಿ 7 ತಿಂಗಳಿಂದ ಮುಂದುವರಿದಿರುವ ಇಸ್ರೇಲ್-ಹಮಾಸ್ ಯುದ್ಧಕ್ಕೆ ಕಾರಣವಾಗಿದೆ. `ನನ್ನ ಕಮಾಂಡ್ ನಡಿ ಇದ್ದ ಗುಪ್ತಚರ ಪ್ರಾಧಿಕಾರವು ತನಗೆ ವಹಿಸಿಕೊಟ್ಟಿದ್ದ ಕಾರ್ಯದ ಹೊಣೆ ನಿರ್ವಹಿಸುವಲ್ಲಿ ವಿಫಲವಾಗಿದೆ. ಅಂದಿನಿಂದಲೂ ಆ ಕಪ್ಪುದಿನದ ಕಹಿನೆನಪು ನನಗೆ ಹಗಲು-ರಾತ್ರಿ ಕಾಡುತ್ತಿದೆ. ಈ ನೋವು ನನ್ನಲ್ಲಿ ಶಾಶ್ವತವಾಗಿ ಉಳಿಯಲಿದೆ’ ಎಂದು ಹಲೀವಾ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಭದ್ರತಾ ಲೋಪದ ಹೊಣೆಯನ್ನು ತಾನೇ ವಹಿಸುವುದಾಗಿ ಹಲೀವಾ ತಿಳಿಸಿದ್ದರು. ಹಲೀವಾ…
ಅಮೆರಿಕದ ಅರಿಜೋನಾದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಭಾರತ ಮೂಲದ ಇಬ್ಬರು ವಿದ್ಯಾರ್ಥಿ ಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.. ಏ..20ರಂದು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು ಪರಿಣಾಮ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತರನ್ನು ತೆಲಂಗಾಣದ ಕರೀಂನಗರ ಜಿಲ್ಲೆಯ ಮುಕ್ಕ ನಿವೇಶ್(19) ಹಾಗೂ ಜನ ಗಾಂವ್ ಜಿಲ್ಲೆಯ ಗೌತಮ್ ಪಾರ್ಸಿ(19) ಎಂದು ಗುರುತಿಸ ಲಾಗಿದೆ. ಮೃತರು ಅರಿಜೋನಾ ವಿವಿಯಲ್ಲಿ ಎಂಜಿನಿಯರಿಂಗ್ ಅಧ್ಯಯನ ಮಾಡುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ 73 ವರ್ಷ ವಯಸ್ಸು. ಆದರೆ ಯುವಕರನ್ನೂ ನಾಚಿಸುವಂತೆ ಸೂಪರ್ ಸ್ಟಾರ್ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ರಜನಿ ನಟನೆಯ 171ನೇ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಇದ್ದು, ಈ ಸಿನಿಮಾದ ಟೈಟಲ್ ಇದೀಗ ರಿಲೀಸ್ ಆಗಿದೆ. ರಜನಿಕಾಂತ್ ನಟನೆಯ 171ನೇ ಸಿನಿಮಾಗೆ ಖ್ಯಾತ ನಿರ್ದೇಶಕ ಲೋಕೇಶ್ ಕನಗರಾಜ್ ನಿರ್ದೇಶನ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಇದರ ಶೂಟಿಂಗ್ ಆರಂಭ ಆಗಲಿದೆ. ಸದ್ಯಕ್ಕೆ ಟೈಟಲ್ ಟೀಸರ್ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾಗೆ ‘ಕೂಲಿ’ ಎಂದು ಶೀರ್ಷಿಕೆ ಇಡಲಾಗಿದ್ದು, ಟೈಟಲ್ ಟೀಸರ್ ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ. ತೋಳಿನಲ್ಲಿ ಕೂಲಿ ಎಂಬ ಹೆಸರು ಇರುವ ಬ್ಯಾಡ್ಜ್ ಧರಿಸಿ ರಜನಿಕಾಂತ್ ಎಂಟ್ರಿ ನೀಡಿದ್ದಾರೆ. ಬ್ಲ್ಯಾಕ್ ಆ್ಯಂಡ್ ವೈಟ್ ಥೀಮ್ನಲ್ಲಿ ಇಡೀ ಟೀಸರ್ ಮೂಡಿಬಂದಿದೆ. ಆದರೆ ಇದರಲ್ಲಿ ಇರುವ ಬಂಗಾರದ ವಸ್ತುಗಳನ್ನು ಮಾತ್ರ ಬಣ್ಣದಲ್ಲಿ ತೋರಿಸಲಾಗಿದೆ. ಆ ಮೂಲಕ ಕಥೆಯ ಬಗ್ಗೆ ಹಿಂಟ್ ಬಿಟ್ಟುಕೊಡಲಾಗಿದೆ. ಇದು ಗೋಲ್ಡ್ ಸ್ಮಗ್ಲಿಂಗ್ ಕುರಿತ ಸಿನಿಮಾ ಎನ್ನಲಾಗಿದೆ. ಗೋಲ್ಡ್ ಬಿಸ್ಟೆಟ್, ಗೋಲ್ಡ್ ವಾಚ್…
ಕೆಜಿಎಫ್ ಸಿನಿಮಾದ ಬಳಿಕ ರಾಕಿಂಗ್ ಸ್ಟಾರ್ ಯಶ್ ಗೆ ಪರಭಾಷೆಯಲ್ಲಿ ಸಖತ್ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಈಗಾಗಲೇ ಯಶ್ ಹಿಂದಿಯಲ್ಲಿ ‘ರಾಮಾಯಣ’ ಸಿನಿಮಾ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಯಶ್ ಗೆ ಮತ್ತೊಂದು ಆಫರ್ ಬಂದಿದೆ ಎನ್ನಲಾಗಿದೆ. ರಾಮಾಯಣ್ ಸಿನಿಮಾದ ಬಳಿಕ ಯಶ್ ಗೆ ಮತ್ತೊಂದು ಹಿಂದಿ ಸಿನಿಮಾದಿಂದ ಆಫರ್ ಬಂದಿದೆ. ಸುಭಾಷ್ ಘಾಯ್ ನಿರ್ದೇಶನದ ‘ಖಳನಾಯಕ್’ ಸಿನಿಮಾ 1993ರಲ್ಲಿ ರಿಲೀಸ್ ಆಗಿತ್ತು. ಈ ಚಿತ್ರದಲ್ಲಿ ಸಂಜಯ್ ದತ್, ಮಾಧುರಿ ದೀಕ್ಷಿತ್, ಜಾಕಿ ಶ್ರಾಫ್ ಮೊದಲಾದವರು ನಟಿಸಿದ್ದರು. ಈ ಸಿನಿಮಾ ಗೆದ್ದಿತ್ತು. ಸುಮಾರು 31 ವರ್ಷಗಳ ಬಳಿಕ ಸೀಕ್ವೆಲ್ ಮಾಡಲಾಗುತ್ತಿದೆ. ಈಗ ಸುಭಾಷ್ ಹೊಸ ಪಾತ್ರವರ್ಗದೊಂದಿಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಸಿನಿಮಾದ ಸ್ಕ್ರಿಪ್ಟ್ ಕೂಡ ಫೈನಲ್ ಆಗಿದೆ ಎನ್ನಲಾಗುತ್ತಿದೆ. ಸಂಜಯ್ ದತ್ ಮಾಡಿದ ಬಲ್ಲು ಬಲರಾಮ್ ಪಾತ್ರ ಸಾಕಷ್ಟು ಗಮನ ಸೆಳೆದಿತ್ತು. ಈ ಪಾತ್ರಕ್ಕೆ ಸುಭಾಷ್ ಘಾಯ್ ಅವರು ರಣವೀರ್ ಸಿಂಗ್, ರಣಬೀರ್ ಕಪೂರ್ ಅವರನ್ನು ಅಪ್ರೋಚ್ ಮಾಡುವ ಪ್ಲ್ಯಾನ್ನಲ್ಲಿದ್ದಾರೆ. ಇಷ್ಟೇ…
ಭಾರತದಲ್ಲಿ ಪಾಕಿಸ್ತಾನದ ಕಲಾವಿದರನ್ನು ಬ್ಯಾನ್ ಸಾಕಷ್ಟು ಸಮಯ ಕಳೆದಿದೆ. ಭಯೋತ್ಪಾದಕ ಚಟುವಟಿಕೆಗಳಿಗೆ ಪಾಕ್ ಸಹಾಯ ಮಾಡುತ್ತಿದೆ ಎಂಬ ಕಾರಣದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಭಾರತದ ಸಿನಿಮಾ, ಮ್ಯೂಸಿಕ್ ವಿಡಿಯೋ, ಧಾರಾವಾಹಿ.. ಹೀಗೆ ಯಾವುದರಲ್ಲೂ ಪಾಕಿಸ್ತಾನದ ಕಲಾವಿದರಿಗೆ, ತಂತ್ರಜ್ಞರಿಗೆ ಅವಕಾಶ ನೀಡಲಾಗುತ್ತಿಲ್ಲ. ಈ ಬಗ್ಗೆ ಹಿರಿಯ ನಟಿ ಮುಮ್ತಾಜ್ ಪ್ರತಿಕ್ರಿಯಿಸಿದ್ದಾರೆ. ಪಾಕಿಸ್ತಾನದ ಪ್ರವಾಸ ಮುಗಿಸಿ ಬಂದಿರುವ ನಟಿ ಪಾಕ್ ಕಲಾವಿಧರೊಂದಿಗಿರುವ ಫೋಟೋ ಹಂಚಿಕೊಂಡು ಪಾಕಿಸ್ತಾನದವರ ಮೇಲೆ ಹಾಕಿರುವ ನಿಷೇಧವನ್ನು ವಾಪಸ್ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ‘ಭಾರತಕ್ಕೆ ಬಂದು ಕೆಲಸ ಮಾಡಲು ಅವರಿಗೂ ಅವಕಾಶ ನೀಡಬೇಕು. ಅವರು ಪ್ರತಿಭಾವಂತರು. ಹಿಂದಿ ಚಿತ್ರರಂಗದಲ್ಲಿ ಪ್ರತಿಭಾವಂತರಿಗೆ ಯಾವುದೇ ಕೊರತೆ ಇಲ್ಲ. ಹಾಗಿದ್ದರೂ ಕೂಡ ಪಾಕಿಸ್ತಾನದವರಿಗೂ ಬಾಲಿವುಡ್ನಲ್ಲಿ ಅವಕಾಶ ಸಿಗಬೇಕು’ ಎಂದಿದ್ದಾರೆ. 60 ಮತ್ತು 70ರ ದಶಕದಲ್ಲಿ ಮುಮ್ತಾಜ್ ಅವರು ಹಿಂದಿ ಚಿತ್ರರಂಗದಲ್ಲಿ ಸುಪ್ರಸಿದ್ಧ ನಟಿಯಾಗಿ ಮಿಂಚಿದರು. ಅವರಿಗೆ ಪಾಕಿಸ್ತಾನದಲ್ಲೂ ಅಭಿಮಾನಿಗಳು ಇದ್ದಾರೆ. ಕೆಲವೇ ದಿನಗಳ ಹಿಂದೆ ಅವರು ತಮ್ಮ ಸಹೋದರಿಯ ಜೊತೆ ಪಾಕಿಸ್ತಾನಕ್ಕೆ ಹೋಗಿ ಬಂದಿದ್ದಾರೆ.…
ಚೀನಾದ ವೀಡಿಯೊ ಹಂಚಿಕೆ ಅಪ್ಲಿಕೇಶನ್ ಟಿಕ್ ಟಾಕ್ ಅನ್ನು ಯುನೈಟೆಡ್ ಸ್ಟೇಟ್ಸ್ ನಲ್ಲಿ ನಿಷೇಧಿಸುವ ಹೊಸ ಶಾಸನವನ್ನು ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅನುಮೋದಿಸಿದೆ. ಇದಕ್ಕೂ ಮುನ್ನ ಮಾರ್ಚ್ ನಲ್ಲಿ, ಟಿಕ್ ಟಾಕ್ ಅನ್ನು ನಿಷೇಧಿಸುವ ಪ್ರಸ್ತಾಪವನ್ನು ಬೆಂಬಲಿಸಿ ಸದನವು ಮತ ಚಲಾಯಿಸಿತು.170 ದಶಲಕ್ಷಕ್ಕೂ ಹೆಚ್ಚು ಅಮೆರಿಕನ್ನರು ಟಿಕೆಟ್ ಲಾಕ್ ಬಳಸುತ್ತಿದ್ದಾರೆ. ಟಿಕ್ ಟಾಕ್ ನ ಮೂಲ ಕಂಪನಿ ಬೈಟ್ ಡ್ಯಾನ್ಸ್ ಕಾನೂನು ಜಾರಿಗೆ ಬಂದ 180 ದಿನಗಳಲ್ಲಿ ತನ್ನ ಮಾಲೀಕತ್ವವನ್ನು ತ್ಯಜಿಸುತ್ತದೆ ಎಂದು ಮೊದಲ ಮಸೂದೆ ಹೇಳುತ್ತದೆ. ಕಾನೂನನ್ನು ಅನುಸರಿಸದಿದ್ದರೆ, ಟಿಕ್ ಟಾಕ್ ಅನ್ನು ಆಪಲ್ ಮತ್ತು ಗೂಗಲ್ ಆಪ್ ಸ್ಟೋರ್ ನಿಂದ ತೆಗೆದುಹಾಕಲಾಗುತ್ತದೆ. ತಿದ್ದುಪಡಿ ಮಾಡಿದ ಮಸೂದೆಯು ಬೈಟ್ ಡ್ಯಾನ್ಸ್ ನ ಈ ಆರು ತಿಂಗಳ ಅವಧಿಯನ್ನು ಸುಮಾರು ಒಂಬತ್ತು ತಿಂಗಳಿಗೆ ವಿಸ್ತರಿಸುತ್ತದೆ. ಇದಲ್ಲದೆ, ಮಾಧ್ಯಮ ವರದಿಗಳ ಪ್ರಕಾರ, ಶ್ವೇತಭವನವು ಈ ಗಡುವನ್ನು ಹೆಚ್ಚುವರಿ 90 ದಿನಗಳವರೆಗೆ ವಿಸ್ತರಿಸಬಹುದು. ಸೆನೆಟರ್ ಗಳು ಟಿಕ್ ಟಾಕ್ ಷರತ್ತು ತೆಗೆದುಹಾಕುವ ಆಯ್ಕೆಯನ್ನು…
ಇತ್ತೀಚಿನ ಕಾಂಗ್ರೆಷನಲ್ ವರದಿಯ ಪ್ರಕಾರ ಒಟ್ಟು 65,960 ಭಾರತೀಯರು ಅಧಿಕೃತವಾಗಿ ಅಮೆರಿಕದ ಪ್ರಜೆಗಳಾಗಿದ್ದಾರೆ, ಇದು ಮೆಕ್ಸಿಕೊದ ನಂತರ ಅಮೆರಿಕಾದಲ್ಲಿ ಹೊಸ ನಾಗರಿಕರಿಗೆ ಎರಡನೇ ಅತಿದೊಡ್ಡ ಮೂಲ ದೇಶವಾಗಿದೆ. ಅಮೆರಿಕದ ಜನಗಣತಿ ಬ್ಯೂರೋದ ಅಮೇರಿಕನ್ ಸಮುದಾಯ ಸಮೀಕ್ಷೆಯ ಮಾಹಿತಿಯ ಪ್ರಕಾರ, 2022 ರಲ್ಲಿ ಅಂದಾಜು 46 ಮಿಲಿಯನ್ ವಿದೇಶಿ ಸಂಜಾತ ವ್ಯಕ್ತಿಗಳು ಯುನೈಟೆಡ್ ಸ್ಟೇಟ್ಸ್ನಲ್ಲಿ ನೆಲೆಸಿದ್ದಾರೆ, ಒಟ್ಟು ಅಮೆರಿಕ ಜನಸಂಖ್ಯೆಯ 333 ಮಿಲಿಯನ್ನ ಸರಿಸುಮಾರು 14 ಪ್ರತಿಶತ ವಿದೇಶಿಯರಿದ್ದಾರೆ. 2022 ರ ಆರ್ಥಿಕ ವರ್ಷದಲ್ಲಿ ಸ್ವತಂತ್ರ ಕಾಂಗ್ರೆಷನಲ್ ರಿಸರ್ಚ್ ಸರ್ವೀಸ್ ಏಪ್ರಿಲ್ 15 ರ ಅದರ ಇತ್ತೀಚಿನ ಯುಎಸ್ ನ್ಯಾಚುರಲೈಸೇಶನ್ ಪಾಲಿಸಿ ವರದಿಯಲ್ಲಿ ಒಟ್ಟು 969,380 ವ್ಯಕ್ತಿಗಳು ಸ್ವಾಭಾವಿಕ ಅಮೆರಿಕ ನಾಗರಿಕರಾಗಿದ್ದಾರೆ ಎಂದು ಮಾಹಿತಿ ನೀಡಿದೆ. ಮೆಕ್ಸಿಕೋದಲ್ಲಿ ಜನಿಸಿದ ವ್ಯಕ್ತಿಗಳು ಹೆಚ್ಚಿನ ಸಂಖ್ಯೆಯ ನೈಸರ್ಗಿಕೀಕರಣಗಳನ್ನು ಪ್ರತಿನಿಧಿಸುತ್ತಾರೆ, ನಂತರ ಭಾರತ, ಫಿಲಿಪೈನ್ಸ್, ಕ್ಯೂಬಾ ಮತ್ತು ಡೊಮಿನಿಕನ್ ರಿಪಬ್ಲಿಕ್ನ ವ್ಯಕ್ತಿಗಳು ಎಂದು ವರದಿ ತಿಳಿಸಿದೆ. ಆದಾಗ್ಯೂ, ಅಮೆರಿಕದಲ್ಲಿ ವಾಸಿಸುತ್ತಿರುವ ಭಾರತದಲ್ಲಿ ಸಂಜಾತ ವಿದೇಶಿ ಪ್ರಜೆಗಳಲ್ಲಿ 42…
ಗಾಜಾದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಹಲವು ಮಂದಿ ಸಾವನ್ನಪ್ಪಿದ್ದು, ತುಂಬು ಗರ್ಭಿಣಿಯಾಗಿದ್ದ ಮಹಿಳೆ ಮೃತಪಟ್ಟ ಬಳಿಕವೂ ವೈದ್ಯರು ಹೆರಿಗೆ ಮಾಡಿಸಿ ಮಗುವನ್ನು ರಕ್ಷಿಸಿದ ಘಟನೆ ನಡೆದಿದೆ. ವೈದ್ಯರು ಮೃತ ಗರ್ಭಿಣಿಯ ಹೆರಿಗೆ ಮಾಡಿಸಿ 1.4 ಕೆಜಿ ತೂಕದ ಮಗುವನ್ನು ಹೊರತೆಗೆದಿದ್ದರು. ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಮಗುವನ್ನು ರಾಫಾ ಆಸ್ಪತ್ರೆಯಲ್ಲಿ ಇನ್ಕ್ಯುಬೇಟರ್ನಲ್ಲಿ ಮತ್ತೊಂದು ಶಿಶುವಿನ ಜೊತೆಗೆ ಇರಿಸಲಾಯಿತು. ದಾಳಿಯಲ್ಲಿ ಮೃತಪಟ್ಟ ಮಗುವಿನ ಸಹೋದರಿ ತನ್ನ ತಂಗಿಗೆ ರೂಹ್ ಎಂದು ನಾಮಕರಣ ಮಾಡಲು ಬಯಸಿದ್ದಳು ಎಂದು ಮಗುವಿನ ಚಿಕ್ಕಪ್ಪ ಹೇಳಿದ್ದಾರೆ. ಮಗು ಮೂರ್ನಾಲ್ಕು ವಾರಗಳ ಕಾಲ ಆಸ್ಪತ್ರೆಯಲ್ಲಿಯೇ ಇರುತ್ತದೆ, ಅದಾದ ನಂತರ ಮಗುವನ್ನು ಎಲ್ಲಿಗೆ ಕಳುಹಿಸಬೇಕು ಎಂದು ನಾವು ನೋಡುತ್ತೇವೆ ಎಂದಿದ್ದಾರೆ. ಕಳೆದ 24 ಗಂಟೆಗಳಲ್ಲಿ ಗಾಜಾ ಪಟ್ಟಿಯಾದ್ಯಂತ ಇಸ್ರೇಲಿ ಸೇನಾ ದಾಳಿಗಳು ನಡೆದಿವೆ, 48 ಪ್ಯಾಲೆಸ್ತೀನಿಯರನ್ನು ಕೊಂದು 79 ಮಂದಿ ಗಾಯಗೊಳಿಸಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಗಾಜಾದ ಆಸ್ಪತ್ರೆಯಲ್ಲಿ ಸಾಮೂಹಿಕ ಸಮಾಧಿ ಗಾಜಾದ…