ಇಂದು (ಏ.24) ವರನಟ ಡಾ.ರಾಜ್ ಕುಮಾರ್ ಅವರ ಹುಟ್ಟು ಹಬ್ಬ. ಈ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಅಭಿಮಾನಿಗಳು ನಾನಾ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಚುನಾವಣೆ ನಡುವೆಯೂ ಕರ್ನಾಟಕ ಸರಕಾರ ಮತ್ತು ಡಾ.ರಾಜ್ ಕುಮಾರ್ ಸ್ಮಾರಕ ಟ್ರಸ್ಟ್ ಪ್ರತಿ ವರ್ಷದಂತೆ ಈ ವರ್ಷವೂ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪ್ರತಿ ವರ್ಷದಂತೆ ಈ ಸಲವೂ ಡಾ.ರಾಜ್ ಪುಣ್ಯಭೂಮಿ ಸ್ಥಳದಲ್ಲಿ ಅಭಿಮಾನಿಗಳು ರಕ್ತದಾನ ಶಿಬಿರ, ಕಣ್ಣುದಾನ ಶಿಬಿರ, ಅನ್ನ ಸಂತರ್ಪಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಳ್ಳುತ್ತಿದ್ದಾರೆ. ಬೆಳಗ್ಗೆಯಿಂದಲೇ ಈ ಎಲ್ಲ ಕೆಲಸಗಳು ಬೆಂಗಳೂರಿನ ಕಂಠೀರವ ಸ್ಟುಡಿಯೋದ ಆವರಣದಲ್ಲೇ ಶುರುವಾಗಲಿವೆ. ಇವುಗಳ ಜೊತೆಗೆ ರಾಜ್ಯಾದ್ಯಂತ ಡಾ.ರಾಜ್ ಅಭಿಮಾನಿಗಳು ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಅನ್ನ ಸಂತರ್ಪನೆ, ರಕ್ತದಾನ ಶಿಬಿರಗಳನ್ನು ಏರ್ಪಡಿಸಿದ್ದಾರೆ. ಡಾ.ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಸಂಗೀತ ಸಂಜೆ ಕಾರ್ಯಕ್ರಮಗಳು ಅಲ್ಲಲ್ಲಿ ನಡೆಯಲಿವೆ. ಇಂದು ಬೆಳಗ್ಗೆ ಡಾ.ರಾಜ್ ಕುಮಾರ್ ಕುಟುಂಬಸ್ಥರು ಕಂಠೀರವ ಸ್ಟುಡಿಯೋದಲ್ಲಿರುವ ಸ್ಮಾರಕಕ್ಕೆ ಭೇಟಿ ನೀಡಿ, ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ.…
Author: Author AIN
ರಷ್ಯಾ ಹಾಗೂ ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದಿಂದ ಸಾಕಷ್ಟು ಮಂದಿ ಜೀವ ಕಳೆದುಕೊಂಡಿದ್ದಾರೆ. ಉಕ್ರೇನ್ ನ ಯುದ್ಧಭೂಮಿ ಸಾವುನೋವುಗಳ ಇತ್ತೀಚಿನ ಅಂದಾಜುಗಳನ್ನು ಯುಎಸ್ ರಕ್ಷಣಾ ಸಚಿವ ಸೆರ್ಗೆ ಶೋಯಿಗು ಹಂಚಿಕೊಂಡಿದ್ದಾರೆ. ಫೆಬ್ರವರಿ 2022 ರಿಂದ ಉಕ್ರೇನ್ ಮಿಲಿಟರಿ ನಷ್ಟವು ಸುಮಾರು 500,000 ಕ್ಕೆ ತಲುಪಿದೆ ಎಂದು ರಷ್ಯಾದ ರಕ್ಷಣಾ ಸಚಿವ ಸೆರ್ಗೆ ಶೋಯಿಗು ಹೇಳಿದ್ದಾರೆ. ರಷ್ಯಾದ ಪಡೆಗಳು ಮುಂಚೂಣಿಯಲ್ಲಿವೆ ಮತ್ತು ತಮ್ಮ ವಿರೋಧಿಗಳನ್ನು ಹಿಂದಕ್ಕೆ ತಳ್ಳುತ್ತಿವೆ ಎಂದು ಶೋಯಿಗು ಸಚಿವರ ಸಭೆಯಲ್ಲಿ ಹೇಳಿದರು. ಈ ಒತ್ತಡವು ಕೀವ್ ಪಡೆಗಳು ತಮ್ಮ ರಕ್ಷಣಾತ್ಮಕ ಸ್ಥಾನಗಳನ್ನು ಹಿಡಿದಿಟ್ಟುಕೊಳ್ಳುವುದನ್ನು ತಡೆಯುತ್ತದೆ ಎಂದು ಅವರು ಹೇಳಿದರು. ಕೀವ್ ಗೆ 60 ಬಿಲಿಯನ್ ಡಾಲರ್ ಮಿಲಿಟರಿ ನೆರವು ನೀಡುವ ಅಮೆರಿಕದ ನಿರೀಕ್ಷೆಯ ಬಗ್ಗೆಯೂ ರಕ್ಷಣಾ ಸಚಿವರು ಪ್ರಸ್ತಾಪಿಸಿದರು. ಈ ಕ್ರಮವು ಉಕ್ರೇನಿಯನ್ ಪಡೆಗಳ ‘ಕುಸಿತವನ್ನು ತಡೆಗಟ್ಟುವ’ ಉದ್ದೇಶವನ್ನು ಹೊಂದಿದೆ ಎಂದು ಅವರು ಗಮನಿಸಿದರು, ಆದರೆ ಹಣವು ಯುದ್ಧಭೂಮಿಯ ಪರಿಸ್ಥಿತಿಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುವುದಿಲ್ಲ, ಏಕೆಂದರೆ ಹೆಚ್ಚಿನ ಧನಸಹಾಯವು…
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮನೆಗೆ ಹೊರಗೆ ಇತ್ತೀಚೆಗೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಗುಂಡಿನ ದಾಳಿಗೆ ಬಳಸಿದ ಶಸ್ತ್ರಾಸ್ತ್ರಗಳನ್ನು ಪತ್ತೆ ಮಾಡುವ ಶೋಧ ಕಾರ್ಯಾಚರಣೆಯಲ್ಲಿ ಮುಂಬೈ ಪೊಲೀಸರ ಅಪರಾಧ ವಿಭಾಗವು ಗುಜರಾತ್ನ ತಾಪಿ ನದಿಯಿಂದ ಎರಡು ಪಿಸ್ತೂಲ್ಗಳು, ಮ್ಯಾಗಜೀನ್ಗಳು ಮತ್ತು ಬುಲೆಟ್ಗಳನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶೋಧ ಕಾರ್ಯದ ವೇಳೆ ಅಪರಾಧ ವಿಭಾಗದ ಅಧಿಕಾರಿಗಳು ಎರಡು ಪಿಸ್ತೂಲ್ಗಳು, ಮೂರು ಮ್ಯಾಗಜೀನ್ಗಳು ಮತ್ತು 13 ಬುಲೆಟ್ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ‘ಎನ್ಕೌಂಟರ್ ಸ್ಪೆಷಲಿಸ್ಟ್’ ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ದಯಾ ನಾಯಕ್ ಸೇರಿದಂತೆ 12 ಅಧಿಕಾರಿಗಳ ತಂಡ ಇನ್ನೂ ಸ್ಥಳದಲ್ಲಿಯೇ ಬೀಡು ಬಿಟ್ಟಿದೆ. ಸ್ಕೂಬಾ ಡೈವರ್ಗಳ ಸಹಾಯದಿಂದ ಶೋಧ ಕಾರ್ಯ ನಡೆಯುತ್ತಿದೆ ಎಂದರು.ಇಬ್ಬರು ಬಂಧಿತ ಆರೋಪಿಗಳಾದ ವಿಕ್ಕಿ ಗುಪ್ತಾ (24) ಮತ್ತು ಸಾಗರ್ ಪಾಲ್ (21) ಎಪ್ರಿಲ್ 14 ರಂದು ಮುಂಬೈನ ಬಾಂದ್ರಾ ಪ್ರದೇಶದ ಗ್ಯಾಲಕ್ಸಿ ಅಪಾರ್ಟ್ಮೆಂಟ್ನಲ್ಲಿರುವ ಖಾನ್ ಅವರ ಮನೆಯ ಹೊರಗೆ ಗುಂಡು ಹಾರಿಸಿ ನಂತರ ಮೋಟಾರ್ಬೈಕ್ನಲ್ಲಿ ಸ್ಥಳದಿಂದ…
ಹಿರಿಯ ನಟಿ ಲಕ್ಷ್ಮಿ ಇಂದಿಗೂ ಲಕ್ಷಾಂತರ ಅಭಿಮಾನಿಗಳ ನೆಚ್ಚಿನ ನಟಿ. ಲಕ್ಷ್ಮಿ ನಟಿಸಿರುವ ಅದೇಷ್ಟೋ ಸಿನಿಮಾಗಳು ಇಂದಿಗೂ ಕನ್ನಡ ಸಿನಿ ಪ್ರೇಕ್ಷಕರಿಗೆ ಅಚ್ಚುಮೆಚ್ಚು. ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟಿಯ ರಿಯಲ್ ಲೈಫ್ ನಲ್ಲಿ ಮಾತ್ರ ಸಾಕಷ್ಟು ವಿವಾದಗಳೇ ಕೇಳಿ ಬಂದಿತ್ತು. 80ರ ದಶಕದಲ್ಲಿ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದ ಲಕ್ಷ್ಮಿ ‘ಜೂಲಿ’ ಸಿನಿಮಾ ರಿಲೀಸ್ ಆದ ಬಳಿಕ ಜೂಲಿ ಲಕ್ಷ್ಮಿ ಅಂತಲೇ ಪ್ರಸಿದ್ಧರಾದರು. ಹಿಂದಿ ಭಾಷೆಯೊಂದನ್ನು ಬಿಟ್ಟು ಸೌತ್ ಸಿನಿರಂಗದಲ್ಲಿ ಲಕ್ಷ್ಮಿ ನಟಿಸಿ ಖ್ಯಾತಿ ಗಳಿಸಿದ್ದಾರೆ. ಲಕ್ಷ್ಮಿ ನಟಿಸಿರುವ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಆಗಿವೆ. 1968ರಲ್ಲಿ ಡಾ.ರಾಜ್ ಕುಮಾರ್ ಅಭಿನಯದ ಗೋವಾದಲ್ಲಿ ಸಿ.ಐ.ಡಿ 999 ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟರು. ಕನ್ನಡ ಸಿನಿ ಪ್ರೇಮಿಗಳ ಮನಗೆದ್ದರು. ನಾ ನಿನ್ನ ಮರೆಯಲಾರೆ ಮತ್ತು ಒಲವು ಗೆಲವು, ಚಂದನಗೊಂಬೆ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಲಕ್ಷ್ಮಿ ನಟಿಸಿದ್ದಾರೆ. ಸಿನಿಮಾ ಹಿನ್ನಲೆ ಕುಟುಂಬದಿಂದ…
ಪರ ಪುರುಷನ ಜತೆ ಸಂಬಂಧ ಹೊಂದಿದ್ದ ಶಂಕೆಯಿಂದ ಪ್ರೇಯಸಿಯನ್ನು ಹೊಡೆದು ಸಾಯಿಸಿದ ಭಾರತ ಮೂಲದ ವ್ಯಕ್ತಿಯೊಬ್ಬನಿಗೆ ಸಿಂಗಾಪುರ ಕೋರ್ಟ್ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಎಂ.ಕೃಷ್ಣನ್ ಪ್ರೇಯಸಿ ಮಲ್ಲಿಕಾ ಬೇಗಂ ನನ್ನು ಹೊಡೆದು ಸಾಯಿಸಿದ್ದಾನೆ. ಮಲ್ಲಿಕಾ ಬೇಗಂ ರಹಮಾನ್ಸ್ ಅಬ್ದುಲ್ ರಹಮಾನ್ ಎಂಬಾತನ ಜೊತೆ ಸಂಬಂಧ ಹೊಂದಿದ್ದಳು ಎಂಬ ಕಾರಣಕ್ಕೆ ಕೃಷ್ಣನ್ ಆಕೆಯನ್ನು ಒದ್ದಿದ್ದರಿಂದ 2019ರ ಜನವರಿ 17ರಂದು ಆಕೆ ಮೃತಪಟ್ಟಿದ್ದಳು. ಕೃಷ್ಣನ್ ಸೆರವಾಸ ಅವಧಿ ಆತನ ಬಂಧನದ ದಿನದಿಂದ ಪೂರ್ವಾನ್ವಯವಾಗುತ್ತದೆ. 2018ರಲ್ಲಿ ಪೊಲೀಸ್ ಅಧಿಕಾರಿಯನ್ನು ನಿಂದಿಸಿದ ಆರೋಪದಲ್ಲಿ ಕೃಷ್ಣನ್ ತನ್ನನ್ನು ತಿದ್ದಿಕೊಳ್ಳುತ್ತೇನೆ ಎಂದು ಹೇಳಿದ್ದ. ಆದರೆ ಪತ್ನಿ ಹಾಗೂ ಪ್ರೇಯಸಿಗೆ ಕಿರುಕುಳ ನೀಡುತ್ತಿದ್ದ ಎಂದು ನ್ಯಾಯಮೂರ್ತಿ ವೆಲೇರಿ ಥಿಯಾನ್ ಹೇಳಿದ್ದಾರೆ. ಕೃಷ್ಣನ್ ಮಾನಸಿಕ ಕಾಯಿಲೆ ಹಾಗೂ ಆಲ್ಕೋಹಾಲ್ ಕೂಡಾ ಆತನ ಕೃತ್ಯದ ಮೇಲೆ ಪ್ರಭಾವ ಬೀರಿತ್ತು ಎಂದು ನ್ಯಾಯಮೂರ್ತಿ ತೀರ್ಪಿನಲ್ಲಿ ವಿವರಿಸಿದ್ದಾರೆ. ಇದು ವಾಸ್ತವವಾಗಿ ನೈಜ ಹತ್ಯೆ ಪ್ರಕರಣವಾಗಿರದೇ ಪ್ರಮಾದವಶಾತ್ ಹತ್ಯೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಇಂದು ಬೆಳಗ್ಗೆ ರಾಯಲ್ ಮಲೇಶಿಯನ್ ನೌಕಾಪಡೆಯ ಪರೇಡ್ ವೇಳೆ ಎರಡು ಹೆಲಿಕಾಪ್ಟರ್ಗಳು ಢಿಕ್ಕಿ ಹೊಡೆದುಕೊಂಡಿದ್ದು ಪರಿಣಾಮ ಹತ್ತು ಮಂದಿ ಸಾವನ್ನಪ್ಪಿದ್ದಾರೆ ಎಂದು ಮಲೇಶಿಯನ್ ನೌಕಾಪಡೆ ತಿಳಿಸಿದೆ. ಪಶ್ಚಿಮ ರಾಜ್ಯ ಪೆರಾಕ್ನ ಲುಮುಟ್ ನೌಕಾನೆಲೆಯಲ್ಲಿ ಮಂಗಳವಾರ ಬೆಳಗ್ಗೆ 9.32 ಗಂಟೆಗೆ ಅಪಘಾತ ನಡೆದಿದ್ದು, ವಿಮಾನದಲ್ಲಿದ್ದ ಎಲ್ಲಾ 10 ಮಂದಿ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ನೌಕಾಪಡೆ ಮಾಹಿತಿ ನೀಡಿದೆ. ವಿಮಾನದಲ್ಲಿದ್ದ ಹತ್ತೂ ಮಂದಿಯೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸಹದೇವ್ ಕೆಲವಡಿ ನಿರ್ದೇಶನದ, ರೂಪಾ ರಾವ್ ನಿರ್ಮಾಣದ ಕೆಂಡ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಈ ಹೊತ್ತಿನಲ್ಲಿ ಚಿತ್ರತಂಡ ಮತ್ತೊಂದು ಖುಷಿಯ ವಿಚಾರವನ್ನು ಹಂಚಿಕೊಂಡಿದೆ. ಕೆಂಡ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಫಿಲಂ ಫೆಸ್ಟಿವಲ್ ಗೆ ಆಯ್ಕೆಯಾಗಿದೆ. ದೆಹಲಿಯಲ್ಲಿ ನಡೆಯಲಿರುವ 14ನೇ ದಾದಾ ಸಾಹೇಬ್ ಫಾಲ್ಕೆ ಫಿಲಂ ಫೆಸ್ಟಿವಲ್-24ಕ್ಕೆ ಕೆಂಡ ಸಿನಿಮಾ ಪ್ರವೇಶ ಪಡೆದಿದೆ. ಕೇವಲ ಚಿತ್ರತಂಡಕ್ಕೆ ಮಾತ್ರವಲ್ಲದೇ, ಕನ್ನಡ ಚಿತ್ರರಂಗದ ಪಾಲಿಗೂ ಖುಷಿಯ ಸಂಗತಿ. ಈ ಫಿಲಂ ಫೆಸ್ಟಿವಲ್ ಪ್ರತಿಷ್ಠೆಯನ್ನು ಕಾಯ್ದುಕೊಂಡು ಬಂದಿದೆ. ಇದಕ್ಕೆ ಆಯ್ಕೆಯಾಗಬೇಕೆಂದು ಅದೆಷ್ಟೋ ಸಿನಿಮಾ ಮಂದಿಯ ಕನಸಾಗಿರುತ್ತದೆ. ಹಾಗಂತ, ಅದೇನೂ ಸಲೀಸಿನ ಸಂಗತಿಯಲ್ಲ. ಅಲ್ಲಿ ನಾನಾ ಪರೀಕ್ಷೆಗಳಿಗೆ ಎದುರಾಗಿ ಜೈ ಎನಿಸಿಕೊಂಡರೆ ಮಾತ್ರವೇ ಸಿನಿಮಾವೊಂದು ಆಯ್ಕೆಯಾಗಲು ಸಾಧ್ಯ. ಎಲ್ಲ ರೀತಿಯಿಂದಲೂ ಗುಣಮಟ್ಟ ಕಾಯ್ದುಕೊಂಡ ಸಿನಿಮಾಗಳಿಗೆ ಮಾತ್ರವೇ ಆ ಅವಕಾಶ ಸಿಗುತ್ತದೆ. ಈ ಸಿನಿಮಾ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ಸಹದೇವ್ ಕೆಲವಡಿ ಮೊದಲ ಚಿತ್ರದಲ್ಲೇ ಗೆಲುವಿನ ನಗೆ ಬೀರಿದ್ದಾರೆ. ಈ ಚಿತ್ರ ಇದೇ…
ಕನ್ನಡದ ನಟಿ ಶ್ರೀಲೀಲಾ ಟಾಲಿವುಡ್ ಸಿನಿಮಾ ರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಶ್ರೀಲೀಲಾ ನಟನೆಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗುತ್ತಿವೆ. ಇದೇ ಕಾರಣಕ್ಕೆ ಕಾಲಿವುಡ್ ಚಿತ್ರರಂಗದತ್ತ ಮುಖ ಮಾಡಿರುವ ನಟಿ ಮೊದಲ ಸಿನಿಮಾದಲ್ಲಿ ಸ್ಟಾರ್ ನಟನ ಜೊತೆ ಸ್ಕ್ರೀನ್ ಶೇರ್ ಮಾಡ್ತಿದ್ದಾರೆ. ತಮಿಳು ಚಿತ್ರರಂಗಕ್ಕೆ ಎಂಟ್ರಿಕೊಟ್ಟಿರುವ ನಟಿ ಶ್ರೀಲೀಲಾ ವಿಜಯ್ ದಳಪತಿ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ವಿಜಯ್ ಸದ್ಯ ‘ಗೋಟ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಶ್ರೀಲೀಲಾ ಹೆಜ್ಜೆ ಹಾಕುತ್ತಿದ್ದಾರೆ. ಸದ್ಯದಲ್ಲೇ ಅಧಿಕೃತ ಮಾಹಿತಿ ಚಿತ್ರತಂಡದಿಂದ ಹೊರಬೀಳಲಿದೆ. ವಿಜಯ್ ಜೊತೆಗಿನ ಸಿನಿಮಾ ಮಾತ್ರವಲ್ಲ. ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್ಗೆ ನಾಯಕಿಯಾಗಿಯೂ ಶ್ರೀಲೀಲಾಗೆ ನಟಿಸುವ ಚಾನ್ಸ್ ಸಿಕ್ಕಿದೆ. ತೆಲುಗಿನ ಸಿನಿಮಾಗಳು ಮಕಾಡೆ ಮಲಗಲು ಶುರುವಾದ ಬಳಿಕ ತಮಿಳು ಸಿನಿಮಾ ರಂಗದಲ್ಲಿ ನಟಿ ತೊಡಗಿಕೊಂಡಿದ್ದಾರೆ. ಅಜಿತ್ ಕುಮಾರ್ ನಟನೆಯ ‘ಗುಡ್ ಬ್ಯಾಡ್ ಅಗ್ಲಿ’ ಚಿತ್ರಕ್ಕೆ ಅಧಿಕ್ ರವಿಚಂದ್ರನ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ನಟಿಸಲು ಶ್ರೀಲೀಲಾರನ್ನು ಸಂಪರ್ಕಿಸಿದೆ…
ನಟಿ ಸಮಂತಾರಿಂದ ದೂರವಾದ ಬಳಿಕ ನಾಗಚೈತನ್ಯ ಶೋಭಿತಾ ಜೊತೆ ಡೇಟಿಂಗ್ ಮಾಡ್ತಿದ್ದಾರೆ. ಈ ಹಿಂದೆ ಇಬ್ಬರು ರೆಸ್ಟೋರೆಂಟ್ ಒಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದೀಗ ಮತ್ತೆ ಇಬ್ಬರೂ ಒಟ್ಟಿಗೆ ಓಡಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಇತ್ತೀಚೆಗೆ ನಾಗಪುರದ ತಿಪೇಶ್ವರ್ ವನ್ಯಜೀವಿಧಾಮಕ್ಕೆ ಶೋಭಿತಾ ಭೇಟಿ ನೀಡಿದ್ದರು. ಇದರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನಟಿ ಮಾಡಿದ್ದರು. ಇದರಲ್ಲಿ ಅವರು ಕಾಡು ಸುತ್ತಾಡುತ್ತಿರುವ ಫೋಟೋ ಇದೆ. ಅದೇ ರೀತಿ ನಾಗ ಚೈತನ್ಯ ಕೂಡ ಒಂದು ಫೋಟೋ ಪೋಸ್ಟ್ ಮಾಡಿದ್ದು, ಕಾಡಿನ ರೀತಿಯ ಬ್ಯಾಕ್ಗ್ರೌಂಡ್ ಇದೆ. ಇದರಿಂದ ಇಬ್ಬರೂ ಒಂದೇ ಕಡೆಯಲ್ಲಿ ಸುತ್ತಾಡುತ್ತಿದ್ದಾರೆ ಎಂದು ರ್ಚೆಯಾಗುತ್ತಿದೆ. ಕಾಡು ಮೇಡು ಅಂತ ಇಬ್ಬರೂ ಸುತ್ತಾಟದಲ್ಲಿ ಬ್ಯುಸಿಯಾಗಿದ್ದಾರೆ. ಕೆಲ ತಿಂಗಳುಗಳ ಹಿಂದೆ ನಾಗಚೈತನ್ಯ- ನಟಿ ಶೋಭಿತಾ ಲಂಡನ್ಗೆ ತೆರಳಿದ್ದರು. ಅಲ್ಲಿ ಒಂದು ಹೋಟೆಲ್ನಲ್ಲಿ ಇವರು ಊಟಕ್ಕೆ ತೆರಳಿದ್ದರು. ಅಲ್ಲಿಯ ಶೆಫ್ ನಾಗ ಚೈತನ್ಯ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಹಿಂಭಾಗದಲ್ಲಿ ಶೋಭಿತಾ ಇದ್ದರು. ಇದರಿಂದ ಇವರ ಡೇಟಿಂಗ್ ವಿಷ್ಯ ಹೊರಬಿತ್ತು.…
ಶಿವರಾಜ್ ಕುಮಾರ್ ಹಾಗೂ ಡಾಲಿ ಧನಂಜಯ್ ನಟನೆಯ ಉತ್ತರಕಾಂಡ ಸಿನಿಮಾದ ಮೂಲಕ ದಕ್ಷಿಣ ಭಾರತದ ಖ್ಯಾತ ನಟಿ ಐಶ್ವರ್ಯಾ ರಾಜೇಶ್ ಸ್ಯಾಂಡಲ್ ವುಡ್ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ನಟಿ ಐಶ್ವರ್ಯ ಚಿತ್ರದಲ್ಲಿ ಧನಂಜಯ ಅವರ ಜೋಡಿಯಾಗಿ ‘ದುರ್ಗಿ’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದಿ ಗ್ರೇಟ್ ಇಂಡಿಯನ್ ಕಿಚನ್, ದಿ ವರ್ಲ್ಡ್ ಫೇಮಸ್ ಲವರ್, ವಡಾ ಚೆನ್ನೈ, ಕಾಕ ಮುತ್ತೈ, ಜೋಮೋಂಟೇ ಸುವಿಶೇಷಂಗಳ್, ಟಕ್ ಜಗದೀಶ್, ವಾನಂ ಕೊಟ್ಟಾಟುಂ ಸೇರಿದಂತೆ ಹಲವಾರು ಯಶಸ್ವಿ ಚಿತ್ರಗಳಲ್ಲಿ ನಟಿಸಿರುವ ಐಶ್ವರ್ಯ ಇದೀಗ ‘ಉತ್ತರಕಾಂಡ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಸಿನಿ ಅಭಿಮಾನಿಗಳ ಮನಸ್ಸು ಗೆಲ್ಲಲ್ಲು ರೆಡಿಯಾಗಿದ್ದಾರೆ. ರೋಹಿತ್ ಪದಕಿ ನಿರ್ದೇಶನದ ಉತ್ತರಕಾಂಡ ಸಿನಿಮಾದ ಚಿತ್ರೀಕರಣ ಸದ್ಯ ವಿಜಯಪುರದಲ್ಲಿ ನಡೆಯುತ್ತಿದೆ. ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಕೆ.ಆರ್.ಜಿ.ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಿರುವ ಈ ಸಿನಿಮಾದಲ್ಲಿ, ಮಲಯಾಳಂ ನಟ ವಿಜಯ್ ಬಾಬು, ರಂಗಾಯಣ ರಘು, ಚೈತ್ರ ಜೆ ಆಚಾರ್, ಉಮಾಶ್ರೀ, ಯೋಗರಾಜ್ ಭಟ್, ದಿಗಂತ್ ಮಂಚಾಲೆ, ಗೋಪಾಲಕೃಷ್ಣ…