ಸಿನಿಮಾ ರಂಗದಲ್ಲಿ ಕಾಸ್ಟಿಂಗ್ ಕೌಚ್ ಎಂಬ ಪದ ಆಗಾಗ ಕೇಳಿ ಬರುತ್ತಿರುತ್ತದೆ. ಚಿತ್ರರಂಗದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳದ ಬಗ್ಗೆ ಈಗಾಗಲೇ ಹಲವು ನಾಯಕಿಯರು ಓಪನ್ ಆಗಿ ಮಾತನಾಡಿದ್ದಾರೆ. ಇದೀಗ ಈ ಬಗ್ಗೆ ಕಾಲಿವುಡ್ ನಾಯಕಿ ಪ್ರತಿಕ್ರಿಯಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಕಾಲಿವುಡ್ ನಾಯಕಿ ಗಾಯತ್ರಿ ರೆಮಾ, ನಿರ್ದೇಶಕರು ಮತ್ತು ನಿರ್ಮಾಪಕರು ನೇರವಾಗಿ ನಾಯಕಿಯರೊಂದಿಗೆ ಮಾತನಾಡುತ್ತಾರೆ. ಅವರು ಆಫರ್‌ಗಳನ್ನು ಬಯಸಿದರೆ, ಅಡ್ಜೆಸ್ಟ್ ಮೆಂಟ್ ಮಾಡಿಕೊಳ್ಳಲು ಓಕೆ ಅಂದರೆ ಮಾತ್ರ ಸಿನಿಮಾದಲ್ಲಿ ಅವಕಾಶ ಸಿಗುತ್ತದೆ ಎಂದಿದ್ದಾರೆ. ಅಡ್ಜಸ್ಟಮೆಂಟ್ ಬೇಡ ಎನ್ನುವ ಕಾರಣಕ್ಕೆ ಸಿನಿಮಾ ಅವಕಾಶಗಳು ಸಿಗುತ್ತಿಲ್ಲ. ಈ ಕ್ರಮದಲ್ಲಿ ನಿರ್ದೇಶಕರೊಬ್ಬರು ಕಮಿಟ್ ಮೆಂಟ್ ಕೇಳಿದ್ದರು. ‘ನಟಿಸಲು ಹೇಳಿದರೂ ಪರವಾಗಿಲ್ಲ, ನನ್ನ ಜೊತೆ ಮಲಗಲು ಹೇಳಿದರೆ ಹೇಗೆ’ ಎಂದು ಅಸಹನೆ ವ್ಯಕ್ತಪಡಿಸಿದ ಗಾಯತ್ರಿ ರೇಮಾ, ಹೀರೋ ಸಿದ್ಧಾರ್ಥ್ ಎಂದರೆ ನನಗೆ ತುಂಬಾ ಇಷ್ಟ.. ಅವರ ಜೊತೆ ನಟಿಸುವ ಅವಕಾಶ ಸಿಕ್ಕರೆ.. ಹಾಸಿಗೆ ಹಂಚಿಕೊಳ್ಳಲು ಸಿದ್ಧ ಎಂದು ಓಪನ್ ಆಗಿ ಹೇಳಿದ್ದಾರೆ. ವಿಮಾನ ನಿಲ್ದಾಣದ ಬಳಿ ಶೂಟಿಂಗ್…
Author: Author AIN
ಕೊರಿಯಾದಲ್ಲಿ ಮಸೀದಿಯನ್ನು ನಿರ್ಮಿಸಲು ಮುಂದಾದ ಪಾಪ್ ತಾರೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ದಕ್ಷಿಣ ಕೊರಿಯಾದ ಯೂಟ್ಯೂಬರ್ ಮತ್ತು ಮಾಜಿ ಕೋರಿಯನ್ ಪಾಪ್ ತಾರೆ ದೌಡ್ ಕಿಮ್ ಇಂಚಿಯಾನ್‌ನಲ್ಲಿ ಮಸೀದಿ ನಿರ್ಮಿಸುವ ಪ್ರಯತ್ನಕ್ಕೆ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. 2020ರಲ್ಲಿ ಇಸ್ಲಾಂಗೆ ಮತಾಂತರಗೊಂಡ ಬಳಿಕ ತನ್ನ ಹೆಸರನ್ನು ದೌಡ್ ಕಿಮ್ ಎಂದು ಬದಲಾಯಿಸಿಕೊಂಡಿರುವ ಜೇ ಕಿಮ್ ಎರಡನೇ ಭಾರಿ ಮಸೀದಿ ನಿರ್ಮಿಸಲು ಪ್ರಯತ್ನಿಸಿದರು. ಸದ್ಯ ಅವರ ಮಸೀದಿಯನ್ನು ನಿರ್ಮಿಸುವ ಪ್ರಯತ್ನವು ಸ್ಥಳೀಯರಿಂದ ಪ್ರತಿರೋಧ ಮತ್ತು ವಂಚನೆಯ ಆರೋಪಗಳನ್ನು ಎದುರಿಸುತ್ತಿದೆ. 5.55 ಮಿಲಿಯನ್ ಯೂಟ್ಯೂಬ್ ಚಂದಾದಾರರನ್ನು ಹೊಂದಿರುವ ದೌಡ್ ಕಿಮ್ ದಕ್ಷಿಣ ಕೊರಿಯಾದಲ್ಲಿ ಮುಸ್ಲಿಮರಿಗೆ ಪ್ರಾರ್ಥನೆ ಮಾಡಲು ಹೆಚ್ಚಿನ ಸ್ಥಳಗಳನ್ನು ನಿರ್ಮಿಸಲು ಬಯಸಿರುವುದಾಗಿ Instagram ನಲ್ಲಿ ಹಂಚಿಕೊಂಡಿದ್ದಾರೆ. ಮಸೀದಿ ನಿರ್ಮಾಣ ಮಾಡಬೇಕೆಂದ ಉದ್ದೇಶದಿಂದ ಪಾಪ್ ತಾರೆ ದೌಡ್ ಕಿಮ್ ಇಂಚೆನ್‌ನ ಯೊಂಗ್‌ಜಾಂಗ್ ದ್ವೀಪದಲ್ಲಿ 284.4 ಚದರ ಮೀಟರ್ ಭೂಮಿಯನ್ನು 189.2 ಮಿಲಿಯನ್ ವೋನ್‌ಗಳಿಗೆ ($136,500) ಖರೀದಿ ಮಾಡಿದ್ದರು. ಆದರೆ ಸಿಯೋಲ್ ಕ್ಯಾಪಿಟಲ್ ಏರಿಯಾದ ಭಾಗವಾಗಿರುವ…
ಲೋಕಸಭಾ ಚುನಾವಣೆಗೆ ಇನ್ನೂ ಕೆಲವೇ ಕೆಲವು ದಿನಗಳು ಮಾತ್ರವೇ ಭಾಕಿ ಇದೆ. ಸಾಕಷ್ಟು ನಟ, ನಟಿಯರು ತಮ್ಮ ನೆಚ್ಚಿನ ಅಭ್ಯರ್ಥಿ ಪರ ಬೀದಿಗಿಳಿದು ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಕನ್ನಡ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಸಕ್ರಿಯರಾಗಿರುವ ನಟಿ ಮೇಘಾ ಶೆಟ್ಟಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದು ಕೆಲವೊಂದು ಫೋಟೋಸ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿವೆ. ಸವದತ್ತಿ ವಿಧಾನಸಭಾ ಕ್ಷೇತ್ರದ ಸತ್ತಿಗೇರಿ ಗ್ರಾಮದಲ್ಲಿ ಲೋಕಸಭೆ ಚುನಾವಣೆಯ ಪ್ರಚಾರದಲ್ಲಿ ಭಾಗಿಯಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಪೋಸ್ಟ್ ಮಾಡಿದ್ದಾರೆ. ಇದೇ ಸಮಯದಲ್ಲಿ ಕಿರುತರೆ ನಟಿಯರು ಪ್ರಚಾರದಲ್ಲಿ ಭಾಗಿಯಾಗಿ ಸಾಥ್ ನೀಡಿರುವುದು ಖುಷಿ ತಂದಿದೆ. ಪ್ರಚಾರದಲ್ಲಿ ಶಾಸಕರಾದ ವಿಶ್ವಾಸ ಅಣ್ಣ ವೈದ್ಯ, ಗ್ರಾಮದ ಮುಖಂಡರು ಕಿರುತೆರೆ ನಟಿಯರಾದ ಮೇಘ ಶೆಟ್ಟಿ, ಮೌನ ಗುಡ್ಡೆಮನೆ, ಭವ್ಯಾ ಗೌಡ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. ಕರ್ನಾಟಕ ಲೋಕಸಭಾ ಚುನಾವಣೆಯ ಮತದಾನಕ್ಕೆ ಎರಡು ದಿನಗಳು ಮಾತ್ರ ಬಾಕಿ ಉಳಿದಿದೆ. ಏಪ್ರಿಲ್…
ಮಹಿಳಾ ವೈದ್ಯರಿಂದ ಚಿಕಿತ್ಸೆ ಪಡೆದ ರೋಗಿಗಳು ಮರಣ ಹೊಂದುವ ಸಾಧ್ಯತೆ ಕಡಿಮೆ ಹಾಗೂ ತಕ್ಷಣಕ್ಕೆ ಚೇತರಿಸಿಕೊಳ್ಳುತ್ತಾರೆ ಎಂದು ಆನಲ್ಸ್ ಆಫ್ ಇಂಟರ್ನಲ್ ಮೆಡಿಸಿನ್ ಅಚ್ಚರಿಯ ವರದಿಯನ್ನು ಪ್ರಕಟಿಸಿದೆ. ಪುರುಷ ವೈದ್ಯರಿಂದ ಚಿಕಿತ್ಸೆ ಪಡೆದ ರೋಗಿಗಳಿಗಿಂತ ಮಹಿಳಾ ವೈದ್ಯರಿಂದ ಚಿಕಿತ್ಸೆ ಪಡೆದ ರೋಗಿಗಳು ಕಡಿಮೆ ಮರಣ ಪ್ರಮಾಣ ಹೊಂದಿದ್ದಾರೆ ಎಂದು ಈ ವರದಿಯ ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ. 2016 ರಿಂದ 2019 ರವರೆಗೆ ಆಸ್ಪತ್ರೆಗೆ ದಾಖಲಾದ 458,100 ಮಹಿಳಾ ರೋಗಿಗಳು, ಅದರಲ್ಲೂ 318,800 ಕ್ಕೂ ಹೆಚ್ಚು ಪುರುಷ ರೋಗಿಗಳು ಸೇರಿದಂತೆ 776,000 ಜನರನ್ನು ಈ ಅಧ್ಯಯನಕ್ಕೆ ಬಳಸಲಾಗಿದೆ. ಮಹಿಳಾ ವೈದ್ಯರಿಂದ ಚಿಕಿತ್ಸೆ ಪಡೆದಾಗ ರೋಗಿಗಳಿಗೆ ಕಡಿಮೆ ಮರಣ ಮತ್ತು ತಕ್ಷಣದಲ್ಲಿ ಚೇತರಿಕೆಗೊಂಡಿದ್ದಾರೆ ಎಂದು ಹೇಳಲಾಗಿದೆ. ಮಹಿಳಾ ವೈದ್ಯರಿಂದ ಚಿಕಿತ್ಸೆ ಪಡೆದ ಮಹಿಳಾ ರೋಗಿಗಳ ಮರಣ ಪ್ರಮಾಣವು 8.15% ರಷ್ಟಿದ್ದರೆ, ಪುರುಷ ವೈದ್ಯರಿಂದ ಚಿಕಿತ್ಸೆ ಪಡೆದು ಮರಣ ಹೊಂದಿದ ರೋಗಿಗಳು 8.38% ರಷ್ಟಿದೆ. ಇನ್ನು ಇದರಲ್ಲಿ ಮರಣ ಹೊಂದದವರ ಪ್ರಮಾಣವನ್ನು ಹೊಂದಾಣಿಕೆ ಮಾಡಿದ್ರೆ, ಪುರುಷ ವೈದ್ಯರಿಂದ ಚಿಕಿತ್ಸೆ ಪಡೆದು…
ಇಂದು ವರನಟ ಡಾ.ರಾಜ್‌ಕುಮಾರ್ ಅವರ 95ನೇ ವರ್ಷದ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ನಟ ಜಗ್ಗೇಶ್ ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ ಅಣ್ಣವ್ರ ಸ್ಮಾರಕಕ್ಕೆ ನಮಸಿದ್ದಾರೆ. ಇದೇ ವೇಳೆ ತಾವು ಆತ್ಮಹತ್ಯೆಗೆ ಪ್ರಯತ್ನಿಸಿದ ಸಂದರ್ಭದಲ್ಲಿ ಆಸ್ಪತ್ರೆಗೆ ಬಂದು ಅಣ್ಣಾವ್ರು ಧೈರ್ಯ ತುಂಬಿದ್ದರು ಎಂದು ಹಳೆಯ ದಿನಗಳನ್ನು ಜಗ್ಗೇಶ್ ಸ್ಮರಿಸಿದ್ದಾರೆ. 1994ರ ಸಮಯದಲ್ಲಿ ಜಗ್ಗೇಶ್ ಅವರ ಸಿನಿಮಾಗಳು ಫ್ಲಾಪ್ ಆದವು. ಇದರಿಂದ ಬೇಸರಗೊಂಡ ಜಗ್ಗೇಶ್ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದರು. ನನ್ನ ಪರ ನಿಂತಿದ್ದು ಅಣ್ಣಾವ್ರು ಎಂದಿದ್ದಾರೆ. ಆಗ ನಾನು ಆತ್ಮಹತ್ಯೆಗೆ ಪ್ರಯತ್ನಿಸಿದ್ದೆ, ಆಸ್ಪತ್ರೆಗೆ ನನ್ನನ್ನು ದಾಖಲಿಸಿದ್ದರು. ಅಂದು ಅಣ್ಣಾವ್ರು ಬಂದು ತಲೆ ಮೇಲೆ ಕೈ ಇಟ್ಟು ಒಳ್ಳೆಯದಾಗಲಿ ಎಂದು ಆಶೀರ್ವಾದ ಮಾಡಿದ್ದರು. ಯಾವುದೇ ಕಾರಣಕ್ಕೂ ಅತಿಯಾದ ಆಸೆ ಬೇಡ, ಜಗತ್ತನ್ನು ಮೆಚ್ಚಿಸಿ ಬದುಕೋಕೆ ಹೋಗಬಾರದು ಎಂದು ಕಿವಿಹಿಂಡಿದ್ದರು. ನನಗೆ ಮಾನಸಿಕವಾಗಿ ನನ್ನ ಜೊತೆ ನಿಂತರು. ಅವರ ಆಶೀರ್ವಾದದ ನಂತರ ನನ್ನ ಸಿನಿಮಾಗಳು ಮಾಸಿವ್ ಹಿಟ್ ಆದವು ಎಂದು ಅಣ್ಣಾವ್ರರನ್ನು ನೆನಪಿಸಿಕೊಂಡಿದ್ದಾರೆ ಜಗ್ಗೇಶ್. ನಮ್ಮ ತಂದೆ…
ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಪುತ್ರಿ ಸಾನ್ವಿಗೆ ಸಂಗೀತದ ಮೇಲೆ ಸಾಕಷ್ಟು ಒಲವಿದೆ. ಸದ್ಯ ಸಾನ್ವಿ ತಮ್ಮ ನೆಚ್ಚಿನ ಮ್ಯೂಸಿಕ್ ಡೈರೆಕ್ಟರ್ ತೆಲುಗಿನ ತಮನ್ ಅವರನ್ನು ಭೇಟಿಯಾಗಿದ್ದಾರೆ. ನೆಚ್ಚಿನ ಸಂಗೀತ ನಿರ್ದೇಶಕನನ್ನು ಭೇಟಿಯಾದ ಬಗ್ಗೆ ಸಾನ್ವಿ ಸಂತಸ ವ್ಯಕ್ತಪಡಿಸಿದ್ದಾರೆ. ತಮನ್ ಎಸ್. ಅವರ ಸಂಗೀತ ನನಗಿಷ್ಟ. ಇವರ ಹಾಡುಗಳನ್ನು ತುಂಬಾನೇ ಕೇಳಿದ್ದೇನೆ. ಅವುಗಳಲ್ಲಿ ಎಲ್ಲವೂ ಇಷ್ಟ. ಆದರೆ ಇಲ್ಲಿಯವರೆಗೂ ಅವರನ್ನು ಭೇಟಿಯಾಗಿರಲಿಲ್ಲ. ಈಗ ಆ ಅವಕಾಶ ಸಿಕ್ಕಿದೆ. ಒಂದಲ್ಲ ಒಂದು ದಿನ ನಿಮ್ಮ ಜೊತೆ ಕೆಲಸ ಮಾಡುವ ಕನಸಿದೆ. ನಿಮ್ಮನ್ನು ಭೇಟಿಯಾಗಿರೋದು ಕನಸು ನನಸಾದಂತೆ ಆಗಿದೆ. ನಿಮ್ಮ ಬೆಂಬಲದ ಮಾತುಗಳು ಖುಷಿ ಕೊಟ್ಟಿದೆ ಎಂದು ಸಾನ್ವಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಸುದೀಪ್ ನಟನಾಗಿ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿದ್ರೆ, ಮಗಳು ಗಾಯಕಿಯಾಗಿ ಗುರುತಿಸಿಕೊಳ್ಳುವ ಹಂತದಲ್ಲಿದ್ದಾರೆ. ಅದ್ಭುತವಾಗಿ ಹಾಡುವ ಸಾನ್ವಿ ಇದೀಗ ‘ಜಿಮ್ಮಿ’ ಸಿನಿಮಾದ ಮೂಲಕ ಗಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಪರಿಚಿತರಾಗುತ್ತಿದ್ದಾರೆ.
ಮದುವೆಯಾದ ಬಳಿಕ ಬಾಲಿವುಡ್ ಬ್ಯೂಟಿ ನಟಿ ಪ್ರೀತಿ ಜಿಂಟಾ ವಿದೇಶದಲ್ಲಿ ಸೆಟಲ್ ಆಗಿದ್ದಾರೆ. ಐಪಿಎಲ್ ಕಾರಣದಿಂದ ಆಗಾಗ ಭಾರತಕ್ಕೆ ಭೇಟಿ ನೀಡುತ್ತಿರುವ ನಟಿ ಇದೀಗ ಹಲವು ವರ್ಷಗಳ ಬಳಿಕ ನಟನೆಗೆ ಕಮ್ ಬ್ಯಾಕ್ ಮಾಡಿದ್ದಾರೆ. ‘ಗದರ್ 2’ ಸಿನಿಮಾದ ಮೂಲಕ ಸಕ್ಸಸ್ ಕಂಡಿರುವ ಸನ್ನಿ ಡಿಯೋಲ್ ಜೊತೆ ಪ್ರೀತಿ ಜಿಂಟಾ ನಟಿಸುತ್ತಿದ್ದಾರೆ. ಹೊಸ ಸಿನಿಮಾಗೆ ‘ಲಾಹೋರ್ 1947’ ಎಂದು ಟೈಟಲ್ ನೀಡಲಾಗಿದೆ. ಚಿತ್ರಕ್ಕೆ ರಾಜ್‌ಕುಮಾರ್ ಸಂತೋಷಿ ನಿರ್ದೇಶನ ಮಾಡುತ್ತಿದ್ದ ಖ್ಯಾತ ನಟ ಆಮೀರ್ ಖಾನ್ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಚಿತ್ರೀಕರಣ ಸಂದರ್ಭದ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ. ಸನ್ನಿ ಡಿಯೋಲ್ ಜೊತೆ ಪ್ರೀತಿ ಜಿಂಟಾಗೆ ಉತ್ತಮ ಬಾಂಧವ್ಯವಿದೆ. ಈ ಹಿಂದೆ ಇಬ್ಬರೂ ಜೊತೆಯಾಗಿ ಎರಡ್ಮೂರು ಚಿತ್ರಗಳಲ್ಲಿ ಜೋಡಿಯಾಗಿ ನಟಿಸಿದ್ದಾರೆ. ಈಗ ‘ಲಾಹೋರ್ 1947’ ಚಿತ್ರದ ಮೂಲಕ ತೆರೆ ಮೇಲೆ ಮೋಡಿ ಮಾಡಲು ಜೋಡಿ ಒಂದಾಗಿದೆ.
ಇಂದು ವರನಟ ಡಾ.ರಾಜ್‌ಕುಮಾರ್ ಅವರ 95ನೇ ವರ್ಷದ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ರಾಜ್ ಕುಮಾರ್ ಕುಟುಂಬಸ್ಥರು ಕಂಠೀರವ ಸ್ಟುಡಿಯೋದಲ್ಲಿರುವ ರಾಜ್ ಕುಮಾರ್ ಸಮಾಧಿಗೆ ಭೇಟಿ ನೀಡಿ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿರುವ ಡಾ.ರಾಜ್‌ಕುಮಾರ್ ಸ್ಮಾರಕದ ಬಳಿ ರಾಘವೇಂದ್ರ ರಾಜ್‌ಕುಮಾರ್, ಪತ್ನಿ ಮಂಗಳ, ಡಾ.ರಾಜ್ ಪುತ್ರಿ ಲಕ್ಷ್ಮಿ ದಂಪತಿ, ಅಶ್ವಿನಿ ರಾಜ್‌ಕುಮಾರ್ ಪುತ್ರಿ ವಂದಿತಾಡಾ.ರಾಜ್ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ ಹೊನ್ನವಳ್ಳಿ ಕೃಷ್ಣ ಕೂಡ ಭಾಗಿಯಾಗಿ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ್ದರು. ಡಾ.ರಾಜ್ ಕುಮಾರ್ ಅವರ 95ನೇ ವರ್ಷದ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿಸಲು ಅಭಿಮಾನಿಗಳು ನಾನಾ ರೀತಿಯ ಸಿದ್ಧತೆಯನ್ನು ಹಮ್ಮಿಕೊಂಡಿದ್ದಾರೆ. ಪ್ರತಿ ವರ್ಷದಂತೆ ಈ ಸಲವೂ ಡಾ.ರಾಜ್ ಪುಣ್ಯಭೂಮಿ ಸ್ಥಳದಲ್ಲಿ ಅಭಿಮಾನಿಗಳು ರಕ್ತದಾನ ಶಿಬಿರ, ಕಣ್ಣುದಾನ ಶಿಬಿರ, ಅನ್ನ ಸಂತರ್ಪಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದಾರೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್ ಇತ್ತೀಚೆಗೆ ತೆಲುಗು ಸ್ಟಾರ್ ನಟ ವಿಜಯ್ ದೇವರಕೊಂಡ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿ ವಿಜಯ್ ನಿವಾಸದಲ್ಲಿ ನಡೆದಿದ್ದು, ಭೇಟಿಯ ಬಳಿಕ ಅಭಿಮಾನಿಗಳ ವಲಯದಲ್ಲಿ ಕುತೂಹಲ ಮೂಡಿಸಿದೆ. ಚಿತ್ರರಂಗದಲ್ಲಿ ಯಾರೂ ಕೂಡ ಕಾರಣ ಇಲ್ಲದೇ ಒಬ್ಬರನ್ನೊಬ್ಬರು ಭೇಟಿ ಆಗುವುದಿಲ್ಲ. ಈಗ ಪ್ರಶಾಂತ್ ನೀಲ್ ಹಾಗೂ ವಿಜಯ್ ದೇವರಕೊಂಡ ನಡುವಿನ ಭೇಟಿಯ ಹಿಂದೆ ಇರುವ ಉದ್ದೇಶ ಏನು ಎಂಬ ಪ್ರಶ್ನೆ ಮೂಡಿದೆ. ಅಂದುಕೊಂಡಂತೆ ಆಗಿದ್ದರೆ ಸಲಾರ್ 2 ಸಿನಿಮಾ ಶುರುವಾಗಬೇಕಿತ್ತು. ಇದಾದ ನಂತರ ಜ್ಯೂನಿಯರ್ ಎನ್.ಟಿ.ಆರ್ ಅವರಿಗೆ ಪ್ರಶಾಂತ್ ಸಿನಿಮಾವೊಂದನ್ನು ನಿರ್ದೇಶನ ಮಾಡಬೇಕಿದೆ. ಇವೆರಡೂ ಸಿನಿಮಾ ಸದ್ಯಕ್ಕೆ ಸಾಧ್ಯವಿಲ್ಲ ಎನ್ನುವ ಸುದ್ದಿ ಹರಿದಾಡುತ್ತಿದೆ. ಪ್ರಭಾಸ್ ಮತ್ತು ಜ್ಯೂನಿಯರ್ ಎನ್.ಟಿ.ಆರ್ ಬ್ಯಾಕ್ ಟು ಬ್ಯಾಕ್ ಸಿನಿಮಾ ಒಪ್ಪಿಕೊಂಡಿದ್ದರಿಂದ ವಿಜಯ್ ಭೇಟಿ ಕುತೂಹಲ ಮೂಡಿಸಿದೆ. ಹಲವು ಸಾಧ್ಯತೆಗಳ ಬಗ್ಗೆ ನೆಟ್ಟಿಗರು ಊಹಿಸುತ್ತಿದ್ದಾರೆ. ‘ಸಲಾರ್ 2’ ಸಿನಿಮಾದಲ್ಲಿ ಅಥವಾ ಜೂನಿಯರ್ ಎನ್ಟಿಆರ್ ಜೊತೆಗಿನ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಅವರಿಗೂ…
ಅಮೆರಿಕದ ವಾಷಿಂಗ್ಟನ್ ನಗರದ ಬಳಿ ವೆಸ್ಟ್ ರಿಚ್ಲಂಡ್ ಪ್ರಾಥಮಿಕ ಶಾಲೆಯಲ್ಲಿ ಗುಂಡಿನ ದಾಳಿ ನಡೆದಿದ್ದು ಘಟನೆಯಲ್ಲಿ ಮಹಿಳೆಯೊಬ್ಬಳು ಮೃತಪಟ್ಟಿದ್ದು ಆರೋಪಿ ಪರಾರಿಯಾಗಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿಮಾಡಿವೆ. ಸಂಜೆ ಶಾಲೆಯಿಂದ ಮಕ್ಕಳು ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಶಾಲೆಯ ಕಂಪೌಂಡ್ ಪ್ರವೇಶಿಸಿದ ಅಪರಿಚಿತ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾನೆ. ಗುಂಡೇಟಿನಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದು ಆಕೆಯ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸಿಲ್ಲ. ಗುಂಡು ಹಾರಿದ ಬಳಿಕ ಶಾಲೆಯ ಕ್ಯಾಂಪಸ್ ಅನ್ನು ಮುಚ್ಚಲಾಗಿದ್ದು ಮಕ್ಕಳನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಲಾಗಿದೆ. ಪರಾರಿಯಾಗಿರುವ ಆರೋಪಿ ಮಾಹಿತಿ ಲಭಿಸಿದ್ದು ಆತನ ಮನೆಯನ್ನೂ ಸೀಲ್ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.