ಕಾಂಗ್ರೆಸ್ ಸರ್ಕಾರ ಕೊಟ್ಟಿರುವ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಮಹಿಳೆಯರಿಗೆ ಫ್ರೀ ಬಸ್ ಕುರಿತಾಗಿ ನಟಿ ಶೃತಿ ಮಾತನಾಡಿದ್ದು ಇದೀಗ ಶೃತಿ ವಿರುದ್ಧ ನೋಟಿಸ್ ಜಾರಿಯಾಗಿದೆ. ಫ್ರೀ ಬಸ್ ಯೋಜನೆಯಿಂದ ತೀರ್ಥಯಾತ್ರೆಗೆಂದು ಹೋಗುತ್ತೇವೆ ಎಂದು ಹೇಳಿ ಹೆಣ್ಣು ಮಕ್ಕಳು ಎಲ್ಲೆಲ್ಲೋ ಹೋಗುತ್ತಿರುತ್ತಾರೆ ಎಂದು ನಟಿ ಶ್ರುತಿ ಹೇಳಿದ್ದಾರೆ. ಕಾಂಗ್ರೆಸ್ನವರು ಫ್ರೀ ಬಸ್ ನೀಡಿದ್ದಾರೆ. ಇದ್ರಿಂದ ಮನೆಯವರು ಹಾಗೂ ಮಕ್ಕಳು ಉಪವಾಸವಿರಬೇಕಾಗುತ್ತದೆ. ಇಂತಹ ಭಾಗ್ಯಗಳನ್ನು ಕೊಟ್ಟು ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಶ್ರುತಿ ಆರೋಪಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತ ಮನೋಹರ್ ಎಂಬುವವರು ಶ್ರುತಿ ಹೇಳಿಕೆ ವಿರೋಧಿಸಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ನಟಿ ಶ್ರುತಿ ಮಾತನಾಡಿರೋದು ಮಾಧ್ಯಮದಲ್ಲಿ ವರದಿಯಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕಾರಣ ಕೇಳಿ ರಾಜ್ಯ ಮಹಿಳಾ ಆಯೋಗ ಅವರಿಗೆ ನೋಟಿಸ್ ಜಾರಿ ಮಾಡಿದೆ. ಉಡುಪಿ ಜಿಲ್ಲೆಯ ಬಂದೂರಿನಲ್ಲಿ ನಡೆದ ಚುನಾವಣಾ ಭಾಷಣದ ವೇಳೆ ಫ್ರೀ ಬಸ್ ಯೋಜನೆಯಿಂದ ತೀರ್ಥಯಾತ್ರೆಗೆಂದು ಹೋಗುತ್ತೇವೆ ಎಂದು ಹೇಳಿ ಹೆಣ್ಣು ಮಕ್ಕಳು ಎಲ್ಲೆಲ್ಲೂ ಹೋಗುತ್ತಿರುತ್ತಾರೆ ಎಂದು ನಟಿ ಶ್ರುತಿ…
Author: Author AIN
ಚೀನಾ ವಿಶ್ವದ ಅತಿ ಎತ್ತರದ ಯುದ್ಧಭೂಮಿ ಎಂದು ಕರೆಯಲ್ಪಡುವ ಸಿಯಾಚಿನ್ ಹಿಮನದಿಯ ಬಳಿ ಅಕ್ರಮವಾಗಿ ಆಕ್ರಮಿತ ಕಾಶ್ಮೀರದ ಒಂದು ಭಾಗದಲ್ಲಿ ರಸ್ತೆ ನಿರ್ಮಿಸುತ್ತಿದೆ ಎಂದು ಉಪಗ್ರಹ ಚಿತ್ರಗಳು ತೋರಿಸಿವೆ. ಪಾಕಿಸ್ತಾನ ಆಕ್ರಮಿತ-ಕಾಶ್ಮೀರದ (ಪಿಒಕೆ) ಭಾಗವಾದ ಶಕ್ಸ್ಗಮ್ ಕಣಿವೆಯ ರಸ್ತೆ 1963 ರಲ್ಲಿ ಚೀನಾಕ್ಕೆ ಹಸ್ತಾಂತರಿಸಲ್ಪಟ್ಟಿತು, ಚೀನಾದ ಕ್ಸಿನ್ಜಿಯಾಂಗ್ನ ಹೆದ್ದಾರಿ ಜಿ 219 ರ ವಿಸ್ತರಣೆಯಿಂದ ಬೇರ್ಪಟ್ಟು ಒಂದು ಸ್ಥಳದಲ್ಲಿ ಪರ್ವತಗಳಾಗಿ ಕಣ್ಮರೆಯಾಗುತ್ತದೆ (ಸಮನ್ವಯ: 36.114783°, 76.671051°) ಭಾರತದ ಉತ್ತರದ ತುದಿಯಿಂದ ಉತ್ತರಕ್ಕೆ ಸುಮಾರು 50 ಕಿ.ಮೀ ದೂರದಲ್ಲಿದೆ. ಯುರೋಪಿಯನ್ ಸ್ಪೇಸ್ ಏಜೆನ್ಸಿ ಸೆರೆಹಿಡಿದ ಮತ್ತು ಇಂಡಿಯಾ ಟುಡೇಯ ಓಪನ್-ಸೋರ್ಸ್ ಇಂಟೆಲಿಜೆನ್ಸ್ (ಒಎಸ್‌ಐಎನ್ಟಿ) ತಂಡವು ಪರಿಶೀಲಿಸಿದ ಉಪಗ್ರಹ ಚಿತ್ರಗಳು ಕಳೆದ ವರ್ಷ ಜೂನ್ ಮತ್ತು ಆಗಸ್ಟ್ ನಡುವೆ ರಸ್ತೆಯ ಮೂಲ ಹಾದಿಯನ್ನು ಹಾಕಲಾಗಿದೆ ಎಂದು ಬಹಿರಂಗಪಡಿಸುತ್ತವೆ. “ಈ ರಸ್ತೆ ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ ಮತ್ತು ಭಾರತವು ತನ್ನ ರಾಜತಾಂತ್ರಿಕ ಪ್ರತಿಭಟನೆಯನ್ನು ಚೀನಾದೊಂದಿಗೆ ದಾಖಲಿಸಬೇಕು” ಎಂದು ಕಾರ್ಗಿಲ್, ಸಿಯಾಚಿನ್ ಹಿಮನದಿ ಮತ್ತು ಪೂರ್ವ ಲಡಾಖ್ ಅನ್ನು…
ರಕ್ಷಿತ್ ಶೆಟ್ಟಿ ನಟನೆಯ ಚಾರ್ಲಿ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಸಿನಿಮಾದ ಬಳಿಕ ಚಿತ್ರದ ನಿರ್ದೇಶಕ ಕಿರಣ್ ರಾಜ್ ನಿರ್ದೇಶನದ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಶುರುವಾಗಿದೆ. ಇದೀಗ ಕಿರಣ್ ರಾಜ್ ಬಾಲಿವುಡ್ ನಟ ಜಾನ್ ಅಬ್ರಾಹಂ ಅವರನ್ನು ಭೇಟಿ ಮಾಡಿ ಕುತೂಹಲ ಮೂಡಿಸಿದ್ದಾರೆ. ಕೆಲ ತಿಂಗಳ ಹಿಂದೆ ಹೊಸದೊಂದು ಪ್ರಾಜೆಕ್ಟ್ ಕೈಗೆತ್ತಿಕೊಂಡಿರುವ ಬಗ್ಗೆ ಕಿರಣ್ ರಾಜ್ ಹೇಳಿಕೊಂಡಿದ್ದರು. ಅದೊಂದು ಕಾಮಿಡಿ ಹಾರರ್ ಚಿತ್ರ ಎಂದು ಮಾಹಿತಿ ಹಂಚಿಕೊಂಡಿದ್ದರು. ವಿಎಫ್ ಎಕ್ಸ್ ತುಂಬಾ ಇರುವ ಕಾರಣದಿಂದಾಗಿ ಅದನ್ನು ಕಲಿಯಲು ಹೊರಟಿದ್ದೇನೆ ಎಂದಿದ್ದರು. ವಿದೇಶಕ್ಕೂ ಹಾರಿದ್ದರು. ಕಿರಣ್ ರಾಜ್ ಇದೀಗ ವಿದೇಶದಿಂದ ವಾಪಸ್ಸಾಗಿದ್ದರು. ಬಂದವರೇ ಬಾಲಿವುಡ್ ನತ್ತ ಮುಖ ಮಾಡಿದ್ದಾರೆ. ಮುಂಬೈನಲ್ಲಿ ಅವರು ಬಾಲಿವುಡ್ ನಟ ಜಾನ್ ಅಬ್ರಾಹಂ ಅವರನ್ನು ಭೇಟಿ ಮಾಡಿದ್ದು, ಆ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೊಂದು ಅತ್ಯುತ್ತಮ ಗಳಿಗೆ ಎಂದು ಬರೆದುಕೊಂಡಿದ್ದಾರೆ. ಹಲವು ಭಾಷೆಗಳಲ್ಲಿ ತಮ್ಮ ಸಿನಿಮಾ ನಿರ್ಮಾಣವಾಗಲಿದೆ ಎಂದು ಹೇಳಿದ್ದರಿಂದ, ಮುಂದಿನ ಸಿನಿಮಾವನ್ನು ಜಾನ್…
ಸ್ಯಾಂಡಲ್ ವುಡ್ ನಟಿ ಅಮೂಲ್ಯ ಪತಿ ಜಗದೀಶ್ ಅವರ ಜೊತೆ ಆರ್.ಆರ್ ನಗರದ ಮತ ಕೇಂದ್ರಕ್ಕೆ ಆಗಮಿಸಿ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ಸರದಿ ಸಾಲಿನಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ನಿಂತಿದ್ದ ನಟಿ ಆ ಬಳಿಕ ಸರತಿ ಸಾಲಿನಲ್ಲಿ ನಿಂತಿದ್ದವರಿಗೆ ಮನವಿ ಮಾಡಿಕೊಂಡು ಹೋಗಿ ವೋಟು ಹಾಕಿದ್ದಾರೆ. ಬಳಿಕ ಮಾತನಾಡಿದ ಅಮೂಲ್ಯ, ತುಂಬಾ ಕ್ಯೂ ಇದೆ. ಇಷ್ಟು ಜನ ನೋಡಿ ಖುಷಿಯಾಯ್ತು. ಮಕ್ಕಳಿರೋದ್ರಿಂದ ರಿಕ್ವೆಸ್ಟ್ ಮಾಡಿದೆ, ಬೇಗ ಬಿಟ್ರು. ಆದ್ರೂ ಅರ್ಧ ಗಂಟೆ ಇದ್ದೆ. ಇದು ನಮ್ಮ ಹಕ್ಕು. ನಾವು ವೋಟ್ ಮಾಡಲೇಬೇಕು. ಸಮಯ ವ್ಯರ್ಥ ಮಾಡದೆ, ವೋಟ್ ಮಾಡಬೇಕು. ಈ ಬಾರಿ ಹೆಚ್ಚು ಮತದಾನ ಆಗುತ್ತೆ ಅಂದ್ಕೊಂಡಿದ್ದೇನೆ ಎಂದರು. ಇನ್ನೂ ನಟ ಗಣೇಶ್ ಪತ್ನಿ ಶಿಲ್ಪಾ ಅವರೊಂದಿಗೆ ಆರ್.ಆರ್ ನಗರದ ಬೂತ್ ಗೆ ಆಗಮಿಸಿ ಮತದಾನ ಮಾಡಿದರು. ದಂಪತಿ ಸಮೇತ ಬೆಳಗ್ಗೆ 7.20ಕ್ಕೆ ಆಗಮಿಸಿದ್ದ ಗಣೇಶ್ ಮತದಾನ ಮಾಡಿ ಮಾದರಿಯಾದರು. ತಪ್ಪದೇ ಎಲ್ಲರೂ ಮತದಾನದಲ್ಲಿ ಭಾಗಿಯಾಗಿ ಎಂದರು.
ಕೆಜಿಎಫ್ ಸಿನಿಮಾದ ಮೂಲಕ ಖ್ಯಾತಿ ಘಳಿಸಿದ ನಟಿ ರೂಪಾ ರಾಯಪ್ಪ ಸದ್ಯ ಫೋಟೋ ಶೂಟ್ ನಲ್ಲಿ ಬ್ಯುಸಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಹಾಟ್ ಹಾಟ್ ಫೋಟೋಗಳನ್ನು ಶೇರ್ ಮಾಡುತ್ತಿರುವ ನಟಿ ಇದೀಗ ಟಾಪ್ ಲೆಸ್ ಆಗಿ ಫೋಟೋ ಶೂಟ್ ಮಾಡಿಸಿದ್ದು ಅವುಗಳನ್ನು ಸಾಮಾಜಿಕ ಜಾಲಾ ತಾಣದಲ್ಲಿ ಹಂಚಿಕೊಂಡಿದ್ದಾರೆ. ‘ಕೆಜಿಎಫ್’ ಸಿನಿಮಾದಲ್ಲಿ ಶಾಂತಿ ಎಂಬ ಸಣ್ಣ ಪಾತ್ರದ ಮೂಲಕ ಗಮನ ಸೆಳೆದಿರೋ ನಟಿ ಟಾಪ್ ಧರಿಸದೇ ಫೋಟೋಶೂಟ್ ಮಾಡಿಸಿರೋದು ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ನಟಿ ಕೆಂಪು ಬಣ್ಣ ಬಣ್ಣದ ಬಾಟಮ್ ವಸ್ತ್ರವನ್ನು ಧರಿಸಿದ್ದಾರೆ. ಟಾಪ್ ಲೆಸ್ ಆಗಿ ಕಾಣಿಸಿಕೊಂಡಿದ್ದು, ಎದೆಗೆ ಕೈ ಹಿಡಿದು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ಫೋಟೋ ಶೇರ್ ಮಾಡುತ್ತಿದ್ದಂತೆ ಸಾಕಷ್ಟು ಮಂದಿ ಸಾಕಷ್ಟು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಇತ್ತೀಚೆಗೆ ರೂಪಾ ಹಾಟ್ ಫೋಟೋ ಜೊತೆ ಟ್ರೋಲ್ ಮಾಡೋರಿಗೆ ಮನವಿ ಕೂಡ ಮಾಡಿದ್ದರು. ನನ್ನ ಹಾಲಿವುಡ್ ಸಿನಿಮಾ ಕನಸಿನ ಬಗ್ಗೆ ಹೇಳುತ್ತಾ ಟ್ರೋಲರ್ಸ್‌ಗೆ ಒಂದು ಮನವಿ ಎಂದು…
ಮೃತ ವಿದ್ಯಾರ್ಥಿನಿ ನೇಹಾ ಹಿರೇಮಠ ಮನೆಗೆ ನಟಿ ಮಾಳವಿಕಾ ಅವಿನಾಶ್ ಭೇಟಿ ನೀಡಿದ್ದು ನೇಹಾ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ. ಇದೇ ವೇಳೆ ಸರ್ಕಾರವ ವಿರುದ್ಧ ನಟಿ ವಾಗ್ದಾಳಿ ನಡೆಸಿದ್ದಾರೆ. ನೇಹಾ ಪೋಷಕರನ್ನು ಭೇಟಿಯಾದಿ ಮಾಳವಿಕಾ ನೇಹಾ ಹತ್ಯೆಯ ಕುರಿತು ಬೇಸರ ಹೊರಹಾಕಿದ್ದಾರೆ. ನೇಹಾ ಪೋಷಕರ ಬಳಿ ಘಟನೆಯ ಬಗ್ಗೆ ವಿಚಾರಿಸಿ ಸಾಂತ್ವನ ಹೇಳಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶವೇ ಬೆಚ್ಚಿಬೀಳುವಂತಹ ಘಟನೆ ನಮ್ಮ ಹುಬ್ಬಳ್ಳಿಯಲ್ಲಿ ನಡೆದಿದೆ. ಅತ್ಯಂತ ಕ್ರೂರ ರೀತಿಯಲ್ಲಿ ನೇಹಾ ಹಿರೇಮಠ ಕೊಲೆ ಆಗಿದೆ. ಅದು ಕೂಡ ಕಾಲೇಜು ಆವರಣದಲ್ಲಿಯೇ ನಡೆದಿದೆ ಎಂಬುದು ಆತಂಕವನ್ನು ಮೂಡಿಸಿದೆ. ಹೆಣ್ಣು ಮಕ್ಕಳಿಗೆ ಕಾಲೇಜು ಕ್ಯಾಂಪಸ್‌ನಲ್ಲೇ ರಕ್ಷಣೆ ಇಲ್ಲ ಎಂದರೆ ಅವರನ್ನು ಕಾಲೇಜಿಗೆ ಕಳಿಸಲು ಇನ್ಮುಂದೆ ಪೋಷಕರು ಹೇಗೆ ಧೈರ್ಯ ಮಾಡುತ್ತಾರೆ ಎಂದು ಮಾಳವಿಕಾ ಬೇಸರ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣವನ್ನು ಸಿಬಿಐಗೆ ಕೊಡಬೇಕು ಎಂದು ಹೇಳುತ್ತೇನೆ. ಆಗ ಮಾತ್ರ ನ್ಯಾಯ ಸಿಗುತ್ತದೆ. ರಾಜ್ಯ ಸರ್ಕಾರದ…
‘ಗೀತಾ’ ಧಾರವಾಹಿಯ ಮೂಲಕ ಖ್ಯಾತಿ ಘಳಿಸಿರುವ ನಟ ಧನುಷ್ ಗೌಡ ಮದುವೆ ಸಂಭ್ರದಲ್ಲಿದ್ದಾರೆ. ಧನುಷ್ ಮನೆಯಲ್ಲಿ ವಿವಾಹ ಪೂರ್ವ ಕಾರ್ಯಕ್ರಮಗಳು ಅದ್ಧೂರಿಯಾಗಿ ಜರುಗುತ್ತಿದ್ದು, ಅತ್ತೆಯ ಮಗಳು ಸಂಜನಾ ಜೊತೆ ಹಸೆಮಣೆ ಏರಲು ಧನುಷ್ ರೆಡಿಯಾಗಿದ್ದಾರೆ. ಧನುಷ್ ಹಾಗೂ ಸಂಜನಾ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಮೆಹೆಂದಿ ಶಾಸ್ತ್ರ, ಬಳೆ ಶಾಸ್ತ್ರ ಸೇರಿದಂತೆ ಅದ್ಧೂರಿಯಾಗಿ ಕಾರ್ಯಕ್ರಮ ನಡೆಯುತ್ತಿದೆ. ಕಳೆದ ಡಿಸೆಂಬರ್‌ನಲ್ಲಿ ಧನುಷ್ ಅವರು ಅತ್ತೆ ಮಗಳು ಸಂಜನಾ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಬೆಂಗಳೂರಿನ ರೆಸಾರ್ಟ್‌ವೊಂದರಲ್ಲಿ ಈ ನಿಶ್ಚಿತಾರ್ಥ ನೆರವೇರಿತ್ತು. ಈಗ ಅದ್ದೂರಿಯಾಗಿ ಹಸೆಮಣೆ ಏರಲು ಸಜ್ಜಾಗಿದ್ದಾರೆ.
ಪಿವಿಆರ್ ಐನಾಕ್ಸ್ನಲ್ಲಿ ಸಿನಿಮಾ ನೋಡಲು ಹೋಗುವವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಇನ್ನು ಕೆಲವೇ ದಿನಗಳಲ್ಲಿ ಜಾಹೀರಾತು ಪ್ರಸಾರ ಸಂಪೂರ್ಣವಾಗಿ ನಿಲ್ಲಲಿದೆ. ಆ ಬಳಿಕ ಸಿನಿ ಅಭಿಮಾನಿಗಳು ಯಾವುದೇ ಜಾಹೀರಾತಿನ ಕಿರಿಕಿರಿ ಇಲ್ಲದೆ ಸಿನಿಮಾ ನೋಡಬಹುದಾಗಿದೆ. ಹೀಗೊಂದು ಯೋಜನೆಯನ್ನು ಸಂಸ್ಥೆ ರೂಪಿಸುತ್ತಿದೆ. ದಿನದ ಒಟ್ಟಾರೆ ಜಾಹೀರಾತು ಪ್ರದರ್ಶನದ ಅವಧಿಯಲ್ಲಿ ಒಂದು ಶೋನ ಹೆಚ್ಚುವಾರಿಯಾಗಿ ಪ್ರದರ್ಶಿಸಬಹುದು ಅನ್ನೋದು ಸಂಸ್ಥೆಯ ಆಲೋಚನೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದು ನಿಜವಾಗಿದ್ದರೆ ಸಿನಿ ಪ್ರಿಯರಿಗೆ ಸಖತ್ ಖುಷಿಯಾಗಲಿದೆ. ಪಿವಿಆರ್-ಐನಾಕ್ಸ್ಗಳಲ್ಲಿ ಕನಿಷ್ಠ 5-10 ನಿಮಿಷಗಳ ಕಾಲ ಕೆಲವೊಮ್ಮೆ ಅದಕ್ಕೂ ಹೆಚ್ಚಿನ ಸಮಯದಲ್ಲಿ ಜಾಹೀರಾತು ಪ್ರದರ್ಶನ ಮಾಡಲಾಗುತ್ತಿದೆ. ಈಗ ಇದನ್ನು ಬಂದ್ ಮಾಡಲು ಸಂಸ್ಥೆ ಮುಂದಾಗಿದೆ ಎಂದು ಮನಿ ಕಂಟ್ರೋಲ್ ವೆಬ್ಸೈಟ್ ವರದಿ ಮಾಡಿದೆ. ಜಾಹೀರಾತು ಪ್ರದರ್ಶನಗಳಿಂದ ಪಿವಿಆರ್ ಐನಾಕ್ಸ್ಗೆ ದೊಡ್ಡ ಮಟ್ಟದ ಲಾಭ ಆಗುತ್ತಿದೆ. ಇದನ್ನು ನಿಲ್ಲಿಸಿದರೆ ಮುಂದೇನು ಎನ್ನುವ ಪ್ರಶ್ನೆ ಬರುತ್ತಿದೆ. ಜಾಹೀರಾತಿನ ಬದಲು ಒಂದು ಶೋನ ಹೆಚ್ಚುವರಿಯಾಗಿ ಪ್ರದರ್ಶಿಸಲು ಸಂಸ್ಥೆ ಮುಂದಾಗಿದೆ. ಇದರಿಂದ ಹೆಚ್ಚಿನ ಜನರು ಸಿನಿಮಾ ನೋಡಲು…
ಕೆಜಿಎಫ್ ಸಿನಿಮಾದ ಬಳಿಕ ರಾಕಿಂಗ್ ಸ್ಟಾರ್ ಯಶ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಕೆಜಿಎಫ್ ಬಳಿಕ ಯಶ್ ನಟನೆಯ ಮುಂದಿನ ಸಿನಿಮಾ ‘ಟಾಕ್ಸಿಕ್’ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಮಧ್ಯೆ ಯಶ್ ಹಿಂದಿಯ ‘ರಾಮಾಯಣ’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ರಾವಣನಾಗಿ ಕಾಣಿಸಿಕೊಳ್ಳಲಿದ್ದು, ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಬಗ್ಗೆ ಯಶ್ ಪ್ರತಿಕ್ರಿಯಿಸಿದ್ದಾರೆ. ನಮಿತ್ ಮಲ್ಹೋತ್ರಾ ಅವರು ‘ರಾಮಾಯಣ’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಅವರ ಜೊತೆಗೆ ಯಶ್ ಕೂಡ ಕೈ ಜೋಡಿಸಿದ್ದಾರೆ. ‘ವೆರೈಟಿ ಮ್ಯಾಗಜಿನ್’ಗೆ ನೀಡಿದ ಸಂದರ್ಶನದಲ್ಲಿ ಯಶ್ ಸಿನಿಮಾ ನಿರ್ಮಾಣದ ಹಿಂದಿನ ಕಾರಣ ತಿಳಿಸಿದ್ದಾರೆ. ‘ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸುವ ಸಿನಿಮಾಗಳನ್ನು ನಿರ್ಮಾಣ ಮಾಡಬೇಕು ಎಂಬುದು ನನ್ನ ದೀರ್ಘಕಾಲದ ಆಕಾಂಕ್ಷೆ ಆಗಿತ್ತು. ಅದರ ಅನ್ವೇಷಣೆಯಲ್ಲಿ ನಾನು ಲಾಸ್ ಏಂಜಲೀಸ್ಗೆ ಹೋಗಿದ್ದೆ. ಅತ್ಯುತ್ತಮ ವಿಎಫ್ಎಕ್ಸ್ ಸ್ಟುಡಿಯೋಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಅಲ್ಲಿದ್ದೆ. ಭಾರತೀಯ ಸಿನಿಮಾದ ದೃಷ್ಟಿಯಲ್ಲಿ ನನ್ನ ಮತ್ತು ನಮಿತ್ ಆಲೋಚನೆಗಳು ಹೊಂದುತ್ತವೆ’ ಎಂದಿದ್ದಾರೆ. ‘ನಾವು ವಿವಿಧ ಯೋಜನೆಗಳ…
ಬಾಲಿವುಡ್ ನ ಹಿರಿಯ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಈ ವಯಸ್ಸಿನಲ್ಲೂ ಬಿಡುವಿಲ್ಲದೆ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಅದೆಷ್ಟರ ಮಟ್ಟಿಗೆ ಅಂದರೆ ಅಮಿತಾಬ್ ಗೆ ಊಟ ಮಾಡಲು ಸಮಯ ಸಿಗುತ್ತಿಲ್ಲವಂತೆ. ಈ ಬಗ್ಗೆ ಸ್ವತಃ ಅಮಿತಾಬ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ದಿನದ ಒಂಬತ್ತು ಗಂಟೆ ಕೆಲಸ ಮಾಡುವೆ. ಕಾರಲ್ಲೇ ಊಟ ಮಾಡಿದೆ ಎಂದೆಲ್ಲ ಅಮಿತಾಬ್ ಬರೆದುಕೊಂಡಿದ್ದಾರೆ. ಸದ್ಯ ಅಮಿತಾಬ್ ಕಿರುತೆರೆಯ ಅತ್ಯಂತ ಜನಪ್ರಿಯ ಶೋ ಕೌನ್ ಬನೇಗಾ ಕರೋಡ್ಪತಿ ಸೀಸನ್ 16ರ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ವೇಳಾ ಪಟ್ಟಿಯ ಪ್ರಕಾರ 81ನೇ ವಯಸ್ಸಲ್ಲೂ ಬಿಗ್ ಬಾಸ್ ಸರಿ ಸುಮಾರು ಒಂಬತ್ತು ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ಈ ಮಾಹಿತಿಯನ್ನೂ ಅವರೇ ಹೇಳಿದ್ದಾರೆ. ಕರೋಡ್ಪತಿ ಸೆಟ್ ನಲ್ಲಿರುವ ಫೋಟೋವನ್ನೂ ಅವರು ಶೇರ್ ಮಾಡಿಕೊಂಡಿದ್ದು, ಕಾರಿನಲ್ಲೇ ಪ್ರಶ್ನೆಗಳನ್ನು ಓದುತ್ತಿದ್ದಾರೆ. ಅಲ್ಲಿಯೇ ಊಟ ಮಾಡುತ್ತಿದ್ದಾರೆ. ಜೊತೆಗೆ ಟ್ರಾವೆಲ್ ಮಾಡ್ತಾ, ಕಾರ್ಯಕ್ರಮದ ವಿವರವನ್ನೂ ಪಡೆದುಕೊಳ್ತಿದ್ದಾರೆ. ಈ ವಯಸ್ಸಿನಲ್ಲೂ ಅಮಿತಾಬ್ ಅವರಿಗೆ ಕೆಲಸದ ಮೇಲಿರುವ ಪ್ರೀತಿಯನ್ನು ಕಂಡು…