Author: Author AIN

 ಒಟ್ಟಾವ : ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಸೋಮವಾರ ತಮ್ಮ ಹದ್ದೆಗೆ ರಾಜೀನಾಮೆ ನೀಡಿದ್ದಾರೆ. ನೂತನ ಪ್ರಧಾನಿ ಆಯ್ಕೆಯಾಗುವವರೆಗೂ ತಾವು ಪ್ರಧಾನಿ ಹುದ್ದೆಯನ್ನು ಮುಂದುವರೆಯುವುದಾಗಿ ಟ್ರುಡೋ ತಿಳಿಸಿದ್ದಾರೆ. ಈ ಮಧ್ಯೆ ಟ್ರುಡೋ ಅವರಿಗೆ ಅಮೆರಿಕದ ಚುನಾಯಿತ ಅಧ್ಯಕ್ಷ ಟ್ರಂಪ್ ಬೆದರಿಕೆ ಹಾಕಿದ್ದು ಇದಕ್ಕೆ ಟ್ರಡೋ ತಿರುಗೇಟು ನೀಡಿದ್ದಾರೆ. ಜಸ್ಟಿನ್ ಟ್ರುಡೋ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ಅಮೆರಿಕಾ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆನಡಾವು ಅಮೆರಿಕದ 51ನೇ ರಾಜ್ಯವಾಗಲು ಆರ್ಥಿಕ ಬಲ ಬಳಕೆಗೂ ಸಿದ್ಧ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕೆನಡಾ ಹಂಗಾಮಿ ಪ್ರಧಾನಿ ಜಸ್ಟಿನ್ ಟ್ರೂಡೊ, ಇದು ಎಂದಿಗೂ ಸಾಧ್ಯವಾಗದು ಎಂದಿದ್ದಾರೆ. ಕೆನಡಾವು ಅಮೆರಿಕದ ಜತೆ ವಿಲೀನಗೊಳ್ಳುವ ಸಾಧ್ಯತೆಯನ್ನು ಕಲ್ಪಿಸಲೂ ಸಾಧ್ಯವಿಲ್ಲ. ಎರಡೂ ದೇಶಗಳು ಪರಸ್ಪರ ಅತೀ ದೊಡ್ಡ ವ್ಯಾಪಾರ ಮತ್ತು ಭದ್ರತಾ ಪಾಲುದಾರರಾಗಿ ಇರುವುದರಿಂದ ಎರಡೂ ದೇಶಗಳ ಕಾರ್ಮಿಕರು ಮತ್ತು ಸಮುದಾಯಕ್ಕೆ ಪ್ರಯೋಜನವಾಗಲಿದೆ ಎಂದು ಟ್ರೂಡೋ ಹೇಳಿದ್ದಾರೆ. ಟ್ರಂಪ್ ಅವರ ಹೇಳಿಕೆಯು ಕೆನಡಾದ ಬಗ್ಗೆ , ಕೆನಡಾ…

Read More

ನ್ಯೂಯಾರ್ಕ್: ಫ್ಲೋರಿಡಾದ ಫೋರ್ಟ್ ಲಾಡರ್‍ಡೇಲ್-ಹಾಲಿವುಡ್ ವಿಮಾನ ನಿಲ್ದಾಣದಲ್ಲಿ ಸೋಮವಾರ ರಾತ್ರಿ ಭೂಸ್ಪರ್ಷ ಮಾಡಿದ ಜೆಟ್‍ಬ್ಲೂ ವಿಮಾನದ ಲ್ಯಾಂಡಿಂಗ್ ಗೇರ್‌ನಲ್ಲಿ ಎರಡು ಮೃತದೇಹಗಳು ಪತ್ತೆಯಾಗಿರುವುದಾಗಿ ಏರ್‌ಲೈನ್ ಅಸೋಸಿಯೇಟೆಡ್ ಮಾಹಿತಿ ನೀಡಿದೆ. ವಿಮಾನದ ನಿಗದಿತ ಪ್ರಯಾಣ ಮುಗಿದ ಬಳಿಕ ನಡೆಸಲಾಗುವ ಪರಿಶೀಲನೆಯ ಸಂದರ್ಭದಲ್ಲಿ ಎರಡು ಮೃತದೇಹಗಳು ಲ್ಯಾಂಡಿಂಗ್ ಗೇರ್ ನಲ್ಲಿ ಪತ್ತೆಯಾಗಿವೆ. ನ್ಯೂಯಾರ್ಕ್‍ನ ಜೆಎಫ್‍ಕೆ ವಿಮಾನ ನಿಲ್ದಾಣದಿಂದ ಹೊರಟಿದ್ದ ವಿಮಾನ 3 ಗಂಟೆಗಳ ಪ್ರಯಾಣದ ಬಳಿಕ ಲಾಡರ್‍ಡೇಲ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿತ್ತು. ಮೃತವ್ಯಕ್ತಿಗಳ ಮಾಹಿತಿಯನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ. “ಮೃತ ವ್ಯಕ್ತಿಗಳ ಗುರುತುಗಳು ಮತ್ತು ಅವರು ವಿಮಾನವನ್ನು ಹೇಗೆ ಪ್ರವೇಶಿಸಿದರು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಜೆಟ್ ಬ್ಲೂ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ. “ಇದು ಹೃದಯವಿದ್ರಾವಕ ಪರಿಸ್ಥಿತಿಯಾಗಿದೆ, ಮತ್ತು ಇದು ಹೇಗೆ ಸಂಭವಿಸಿತು ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ ಎಂದು ಎಂದು ಏರ್ಲೈನ್ಸ್ ಹೇಳಿದೆ.

Read More

ಢಾಕ : ಢಾಕಾ: ಬಾಂಗ್ಲಾದೇಶದಿಂದ ಪಲಾಯಗೊಂಡಿರುವ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಹಾಗೂ ಇತರ 96 ಮಂದಿಯ ಪಾಸ್‍ಪೋರ್ಟ್ ರದ್ದುಗೊಳಿಸಿರುವುದಾಗಿ ಬಾಂಗ್ಲಾದೇಶದ ಸರಕಾರ ತಿಳಿಸಿದೆ. ಬಲವಂತದ ನಾಪತ್ತೆಗಳು ಹಾಗೂ ಜುಲೈಯಲ್ಲಿ ಪ್ರತಿಭಟನೆ ಸಂದರ್ಭ ನಡೆದ ಹತ್ಯೆಗಳಲ್ಲಿ ಭಾಗಿಯಾಗಿರುವ ಆರೋಪ ಹಿನ್ನೆಲೆಯಲ್ಲಿ ಪಾಸ್ ಪೋರ್ಟ್ ರದ್ದುಗೊಳಿಸಲಾಗಿದೆ. ಕಳೆದ ವರ್ಷದ ಆಗಸ್ಟ್ ನಲ್ಲಿ ಢಾಕಾದಲ್ಲಿ ನಡೆದಿದ್ದ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆಗೆ ಮಣಿದು ರಾಜೀನಾಮೆ ಸಲ್ಲಿಸಿದ್ದ ಹಸೀನಾ ದೇಶದಿಂದ ಪಲಾಯನ ಮಾಡಿ ಆಗಸ್ಟ್ 5ರಿಂದ ಭಾರತದಲ್ಲಿ ನೆಲೆಸಿದ್ದಾರೆ. ಅವರನ್ನು ಬಾಂಗ್ಲಾಕ್ಕೆ ಗಡೀಪಾರು ಮಾಡಬೇಕೆಂಬ ಮಧ್ಯಂತರ ಸರಕಾರದ ಕೋರಿಕೆ ಸೂಕ್ತ ವಿವರವನ್ನು ಹೊಂದಿಲ್ಲ ಮತ್ತು ಅಪುರ್ಣವಾಗಿದೆ ಎಂದು ಹೇಳಿ ಭಾರತ ಸರಕಾರ ಕೋರಿಕೆಯನ್ನು ಮಾನ್ಯ ಮಾಡಿಲ್ಲ.

Read More

ಖ್ಯಾತ ಚಲನಚಿತ್ರ ನಿರ್ಮಾಪಕ ಪ್ರೀತಿಶ್ ನಂದಿ ನಿಧನರಾಗಿದ್ದಾರೆ. ಜನವರಿ 8ರಂದು ಸಂಜೆ ಮುಂಬೈನಲ್ಲಿರುವ ತಮ್ಮ ಮನೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ನಟ ಅನುಪಮ್ ಖೇರ್ ನಿರ್ಮಾಪಕ ಪ್ರೀತಿಶ್ ನಂದಿ ಅವರ ಸಾವಿನ ಸುದ್ದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ದೃಢಪಡಿಸಿದ್ದಾರೆ. “ನನ್ನ ಅತ್ಯಂತ ಪ್ರೀತಿಯ ಮತ್ತು ಆಪ್ತ ಸ್ನೇಹಿತರಲ್ಲಿ ಒಬ್ಬರಾದ ಪ್ರೀತಿಶ್ ನಂದಿ ಅವರ ನಿಧನದ ಸುದ್ದಿ ಕೇಳಿ ತುಂಬಾ ದುಃಖ ಮತ್ತು ಆಘಾತವಾಗಿದೆ. ಅದ್ಭುತ ಕವಿ, ಬರಹಗಾರ, ಚಲನಚಿತ್ರ ನಿರ್ಮಾಪಕ ಮತ್ತು ಧೈರ್ಯಶಾಲಿ ಮತ್ತು ಅನನ್ಯ ಸಂಪಾದಕ/ಪತ್ರಕರ್ತ. ಮುಂಬೈನಲ್ಲಿ ನನ್ನ ಆರಂಭಿಕ ದಿನಗಳಲ್ಲಿ ಅವರು ನನ್ನ ಅತ್ಯಂತ ದೊಡ್ಡ ಬೆಂಬಲ ವ್ಯವಸ್ಥೆ ಮತ್ತು ನನ್ನ ಶಕ್ತಿಯ ಅತ್ಯಂತ ದೊಡ್ಡ ಮೂಲವಾಗಿದ್ದರು. ನಮ್ಮಿಬ್ಬರ ನಡುವೆ ಹಲವು ಸಾಮ್ಯತೆಗಳಿದ್ದವು ಎಂದು ಅನುಪಮ್ ಕೇರ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. “ನಾನು ಭೇಟಿಯಾದವರಲ್ಲಿ, ಅವರು ಅತ್ಯಂತ ನಿರ್ಭೀತ ವ್ಯಕ್ತಿಗಳಲ್ಲಿ ಒಬ್ಬರು. ಯಾವಾಗಲೂ ಲಾರ್ಜರ್ ದ್ಯಾನ್ ಲೈಫ್. ನಾನು ಅವರಿಂದ ಹಲವು ವಿಷಯಗಳನ್ನು ಕಲಿತಿದ್ದೇನೆ. ನಾವು…

Read More

ಕನ್ನಡ ಚಿತ್ರರಂಗದ ಅದ್ಭುತ ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಚೊಚ್ಚಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ತುಂಬು ಗರ್ಭಿಣಿ ಹರಿಪ್ರಿಯಾಗೆ ಇತ್ತೀಚೆಗೆ ಅದ್ದೂರಿಯಾಗಿ ಸೀಮಂತ ಶಾಸ್ತ್ರ ಮಾಡಲಾಗಿದೆ. ತುಂಬು ಗರ್ಭಿಣಿಯಾಗಿರುವ ಹರಿಪ್ರಿಯಾ ಕೆಲವೇ ದಿನಗಳಲ್ಲಿ ಮುದ್ದಾದ ಮಗವಿಗೆ ಜನ್ಮ ನೀಡಲಿದ್ದಾರೆ. ಇದೀಗ ವಸಿಷ್ಠ ಸಿಂಹ 2 ತಿಂಗಳ ಮೆಟರ್ನಿಟಿ ಲೀವ್ ತೆಗೆದುಕೊಂಡು ಸದಾ ಪತ್ನಿ ಜೊತೆಗಿದ್ದು ಕೇರ್ ಮಾಡಲು ಮುಂದಾಗಿದ್ದಾರೆ. ‘ನಾನು ಎರಡು ತಿಂಗಳುಗಳ ಕಾಲ ಪೆಟರ್ನಿಟಿ ಬ್ರೇಕ್ ತೆಗೆದುಕೊಳ್ಳಬೇಕು ಎಂದು ನಿರ್ಧರಿಸಿರುವೆ’ ಎಂದು ವಸಿಷ್ಠ ಸಿಂಹ ಹೇಳಿದ್ದಾರೆ. ಮಾಲ್ಡೀವ್ಸ್‌ ಟ್ರಿಪ್‌ನಲ್ಲಿ ಸೆರೆ ಹಿಡಿದಿರುವ ಫೋಟೋಗಳನ್ನು ಅಪ್ಲೋಡ್ ಮಾಡುವ ಮೂಲಕ ತಾವು ಪೋಷಕರಾಗುತ್ತಿರುವ ಮಾಹಿತಿಯನ್ನು ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ನೀಡಿದ್ದರು. ‘ಸಮಯ ಬಲು ಬೇಗ ಸಾಗುತ್ತಿದೆ. ಅದೆಷ್ಟೋ ಅಮೂಲ್ಯವಾದ ಕ್ಷಣಗಳನ್ನು ನಾನು ಮಿಸ್ ಮಾಡಿಕೊಂಡಿರುವೆ. ಮಾನಸಿಕವಾಗಿ ಹಾಗೂ ದೈಹಿಕವಾಗಿ ಹರಿಪ್ರಿಯಾ ಸಾಕಷ್ಟು ಬದಲಾವಣೆಗಳನ್ನು ಎದುರಿಸುತ್ತಿದ್ದಳು. ಈ ಸಮಯದಲ್ಲಿ ಆಕೆ ಪರ ನಿಂತುಕೊಂಡು ನಾನು ಸಪೋರ್ಟ್ ಮಾಡಲು ಆಗಲಿಲ್ಲ ಏಕೆಂದರೆ…

Read More

ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಯುಐ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಅದ್ಭುತ ರೆಸ್ಪಾನ್ಸ್ ಪಡೆದುಕೊಂಡಿದೆ. ಇದೀಗ ಈ ಸಿನಿಮಾ ಸದ್ಯಲ್ಲೇ ಓಟಿಟಿಗೆ ಬರುತ್ತೆ ಅನ್ನೋ ಸುದ್ದಿ ಕೇಳಿ ಬಂದಿತ್ತು. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಚಿತ್ರದ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಯುಐ ಸಿನಿಮಾದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದಿದ್ದಾರೆ. ನಮ್ಮ ಯುಐ ಚಿತ್ರದ ಬಗ್ಗೆ ಒಂದು ಸುದ್ದಿ ಹರಿದಾಡುತ್ತಿದೆ. ಸನ್‌ ನೆಕ್ಸ್ಟ್ ಅಲ್ಲಿಯೇ ಯುಐ ಚಿತ್ರದ ಸ್ಟ್ರೀಮಿಂಗ್ ಆಗುತ್ತದೆ. ಆದಷ್ಟು ಬೇಗ ಇದು ಬರುತ್ತದೆ ಅನ್ನೋ ಸುದ್ದಿ ಕೇಳಿ ಬಂದಿದ್ದು ಇದಕ್ಕೆ ನಿರ್ಮಾಪಕ ಶ್ರೀಕಾಂತ್ ಸ್ಪಷ್ಟನೆ ನೀಡಿದ್ದಾರೆ. ನಮ್ಮ ಚಿತ್ರ ಯಾವ ನೆಟ್‌ವರ್ಕ್‌ ಅಲ್ಲಿ ಸ್ಟ್ರೀಮಿಂಗ್ ಆಗುತ್ತದೆ. ಯಾವ ಸಂಸ್ಥೆಗೆ ಯುಐ ಚಿತ್ರ ಹೋಗಿದೆ. ಈ ರೀತಿಯ ಎಲ್ಲ ಮಾಹಿತಿಯನ್ನ ಅಧಿಕೃತವಾಗಿಯೇ ನಾವೇ ಕೊಡುತ್ತೇವೆ. ಸೋಷಿಯಲ್ ಮೀಡಿಯಲ್ಲಿ ಸದ್ಯ ಹರಿದಾಡುತ್ತಿರೋದು ಸುಳ್ಳು ಸುದ್ದಿನೇ ಆಗಿದೆ ಅಂತಲೇ ಕೆ.ಪಿ.ಶ್ರೀಕಾಂತ್ ಹೇಳಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶಿಸಿರುವ ಯುಐ ಸಿನಿಮಾ ನಾಲ್ಕನೇ…

Read More

ರಾಕಿಂಗ್ ಸ್ಟಾರ್ ಯಶ್ ನಿನ್ನೆ ಬರ್ತಡೇ ಆಚರಿಸಿಕೊಂಡಿದ್ದಾರೆ. ಸಿಂಪಲ್ ಆಗಿ ಯಶ್ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಿಕೊಂಡಿದ್ದು ಯಶ್ ಬರ್ತಡೇ ಹಿನ್ನೆಲೆಯಲ್ಲಿ ಟಾಕ್ಸಿಕ್ ಸಿನಿಮಾದ ಗ್ಲಿಮ್ಸ್ ಬಿಡುಗಡೆ ಮಾಡಲಾಗಿದೆ. ಈ ಗ್ಲಿಮ್ಸ್ ನೋಡಿ ಪ್ರತಿಯೊಬ್ಬರು ಮೆಚ್ಚುಗೆ ಸೂಚಿಸಿದ್ದಾರೆ. ಅಂತೆಯೇ ನಟ ರಿಷಬ್ ಶೆಟ್ಟಿ ಕೂಡ ಗಿಮ್ಸ್ ಗೆ ಮೆಚ್ಚುಗೆ ಸೂಚಿಸಿದ್ದು ಅದನ್ನು ಶೇರ್ ಮಾಡಿ ಯಶ್ ಬರ್ತಡೇಗೆ ವಿಶ್ ಮಾಡಿದ್ದಾರೆ. ಯಶ್ ಹುಟ್ಟುಹಬ್ಬಕ್ಕೆ ರಿಷಬ್ ಶೆಟ್ಟಿ ವಿಶೇಷವಾಗಿ ಸೋಶಿಯಲ್ ಮೀಡಿಯಾದಲ್ಲಿ ವಿಶ್ ಮಾಡಿದ್ದಾರೆ. ‘ಟಾಕ್ಸಿಕ್’ ಗ್ಲಿಂಪ್ಸ್ ನೋಡಿ ಬೆರಗುಗೊಳಿಸುವಂತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಟಾಕ್ಸಿಕ್’ ಸಿನಿಮಾದ ತುಣುಕು ಶೇರ್ ಮಾಡಿ, ಹುಟ್ಟುಹಬ್ಬದ ಶುಭಾಶಯಗಳು ಯಶ್ ಸರ್ ಎಂದು ರಿಷಬ್ ಬರೆದುಕೊಂಡಿದ್ದಾರೆ. ಗೋವಾದಲ್ಲಿ ಮಧ್ಯರಾತ್ರಿ ಯಶ್ ಕೇಕ್ ಕತ್ತರಿಸಿ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ್ದಾರೆ. ಪತ್ನಿ ರಾಧಿಕಾ ಮತ್ತು ಮಕ್ಕಳೊಂದಿಗೆ ಬರ್ತ್‌ಡೇ ಆಚರಿಸಿ ಯಶ್ ಖುಷಿಪಟ್ಟಿದ್ದಾರೆ. ನಟನ ಆಪ್ತ ಪಾನಿ ಪುರಿ ಕಿಟ್ಟಿ, KVN ಸಂಸ್ಥೆಯ ರೂವಾರಿ ವೆಂಕಟ್ ಸೇರಿದಂತೆ ಅನೇಕರು ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿ…

Read More

ಮಲಯಾಳಂ ಖ್ಯಾತ ನಟಿ ಹನಿ ರೋಸ್‌ಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಖ್ಯಾತ ಉದ್ಯಮಿ ಚೆಮ್ಮನೂರ್ ಮಾಲೀಕ ಬಾಬಿ ಚೆಮ್ಮನೂರ್ ಅವರನ್ನು ಬಂಧಿಸಲಾಗಿದೆ. ನಟಿ ಹನಿ ರೋಸ್ ಅವರ ದೂರಿನ ಮೇರೆಗೆ ಮಂಗಳವಾರ ದೂರು ದಾಖಲಿಸಿಕೊಂಡ ಪೊಲೀಸರು ಇದೀಗ ಬಾಬಿಯನ್ನು ಬಂಧಿಸಿದ್ದಾರೆ.  ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಬೋಬಿ ಚೆಮ್ಮನೂರ್ ಅಲಿಯಾಸ್ ‘ಬೋಚೆ’ ಅವರನ್ನು ಕೊಚ್ಚಿ ನಗರ ಪೊಲೀಸರು ಬಂಧಿಸಿದ್ದಾರೆ. ಬುಧವಾರ ಬೆಳಗ್ಗೆ ವಯನಾಡಿನಿಂದ ಚೆಮ್ಮನೂರ್‌ರನ್ನು ಬಂಧಿಸಲಾಯಿತು. ಅವರನ್ನು ಕೊಚ್ಚಿಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 75 ಸೇರಿದಂತೆ ವಿವಿಧ ಜಾಮೀನು ರಹಿತ ಸೆಕ್ಷನ್‌ಗಳ ಮೂಲಕ ಕೊಚ್ಚಿ ಕೇಂದ್ರ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು.

Read More

ಬೆಂಗಳೂರು: ದೇಶದ ಜನತೆಗೆ ಕೇಂದ್ರ ಸರ್ಕಾರದಿಂದ ಗುಡ್‌ ನ್ಯೂಸ್‌ ಸಿಕ್ಕಿದೆ. ರಸ್ತೆ ಅಪಘಾತಗಳಿಗೆ ಅತಿ ಹೆಚ್ಚು ವೇಗ, ಅಜಾಗರೂಕ ಚಾಲನೆ, ಕುಡಿದು ವಾಹನ ಚಾಲನೆ ಮತ್ತು ಸಂಚಾರ ನಿಯಮಗಳನ್ನು ಪಾಲಿಸದೇ ಇರುವುದು ಅತ್ಯಂತ ದೊಡ್ಡ ಕಾರಣಗಳಾಗಿವೆ. ಇಂತಹ ರಸ್ತೆ ಅಪಘಾತಗಳ ಬಗ್ಗೆ ಚಾಲಕರಲ್ಲಿ ಜಾಗೃತಿ ಮೂಡಿಸಬೇಕು. ಇದರಿಂದ ಸಾಧ್ಯವಾದಷ್ಟು ಜೀವಗಳನ್ನು ಉಳಿಸಬಹುದು. ಚಾಲಕರಿಗೆ ಅನೇಕ ರೀತಿಯ ಶಿಕ್ಷಣ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಪ್ರಾರಂಭಿಸಬೇಕು ಎಂದು ಸಚಿವಾಲಯ ತಿಳಿಸಿದೆ. https://ainlivenews.com/do-you-have-a-heart-problem-if-so-eating-fish-twice-a-week-is-enough/ ಅದಲ್ಲದೆ  ರಸ್ತೆ ಅಪಘಾತಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ದೊಡ್ಡ ಘೋಷಣೆ ಮಾಡಿದೆ. ಇನ್ಮುಂದೆ ಅಪಘಾತಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ  ನಗದು ರಹಿತ ಚಿಕಿತ್ಸಾ ಯೋಜನೆಯನ್ನು ಘೋಷಿಸಿದ್ದಾರೆ. ಅಪಘಾತ ಸಂಭವಿಸಿದ 24 ಗಂಟೆಯೊಳಗೆ ಪೊಲೀಸರಿಗೆ ಮಾಹಿತಿ ನೀಡಿದರೆ 1.5 ಲಕ್ಷ ರೂ.ವರೆಗಿನ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಲಿದೆ ಅಂತ ತಿಳಿಸಿದ್ದಾರೆ. ಈ ಯೋಜನೆಯು ಯಾವುದೇ ವರ್ಗದ ರಸ್ತೆ ಅಪಘಾತಗಳಿಗೆ ಅನ್ವಯಿಸಲಿದೆ.…

Read More

ಚಳಿಗಾಲದ ಸಮಯದಲ್ಲಿ ನೀವು ನಿಮ್ಮ ಆರೋಗ್ಯವನ್ನು ಎಷ್ಟು ಕಾಳಜಿಯಿಂದ ನೋಡಿಕೊಂಡರೂ ಸಾಲದು. ಶೀತ, ಜ್ವರದಂತಹ ಆರೋಗ್ಯ ಸಮಸ್ಯೆಗಳು ಕಾಡುವ ಸಮಯದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಪದಾರ್ಥಗಳನ್ನು ಸೇವಿಸಿ. ಚಳಿಗಾಲದ ಸಮಯದಲ್ಲಿ ಮೂಲಂಗಿಯನ್ನುತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ರುಚಿಯೂ ಹೌದೂ ಆರೋಗ್ಯ ಪ್ರಯೋಜನಗಳನ್ನೂ ನೀಡುತ್ತದೆ. ಆದ್ರೆ ಮೂಲಂಗಿ ಎಲ್ಲ ಆಹಾರದ ಜೊತೆ ಹೊಂದಿಕೊಳ್ಳುವುದಿಲ್ಲ. ಕೆಲವು ಪದಾರ್ಥಗಳ ಜೊತೆ ಮೂಲಂಗಿ ಸೇವನೆ ಮಾಡಿದ್ರೆ ಆರೋಗ್ಯ ಹಾಳಾಗುತ್ತದೆ. ನಾವಿಂದು ಮೂಲಂಗಿ ಜೊತೆ ಯಾವ ಆಹಾರ ಸೇವನೆ ಮಾಡಬಾರದು ಎಂಬುದನ್ನು ನಿಮಗೆ ಹೇಳ್ತೇವೆ. ಮೂಲಂಗಿ ಜೊತೆ ಈ ಆಹಾರ ಸೇವನೆ ಬೇಡ : ಮೂಲಂಗಿ ಜೊತೆ ಹಾಲು ಕುಡಿಯಬೇಡಿ : ಮೂಲಂಗಿ ತಿನ್ನುತ್ತ ಹಾಲು ಕುಡಿಯುವ ತಪ್ಪನ್ನು ನೀವು ಮಾಡಬೇಡಿ. ಹಾಲು ಹಾಗೂ ಮೂಲಂಗಿ ಹೊಂದಿಕೊಳ್ಳುವುದಿಲ್ಲ. ಇದು ಆರೋಗ್ಯಕ್ಕೆ ಹಾನಿಕರ. ಬರೀ ಹಾಲು ಮಾತ್ರವಲ್ಲ ಹಾಲಿನಿಂದ ಮಾಡಿದ ಯಾವುದೇ ಪದಾರ್ಥವನ್ನು ನೀವು ಸೇವನೆ ಮಾಡಬೇಡಿ. ಇವೆರಡರ ಕಾಂಬಿನೇಷನ್ ನಿಂದ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ.…

Read More