Author: Author AIN

ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿರುವ ರಶ್ಯ, ಅವರನ್ನು ವಾಂಟೆಡ್ ಪಟ್ಟಿಯಲ್ಲಿ ಸೇರಿಸಿದೆ ಎಂದು ಸರಕಾರಿ ಸ್ವಾಮ್ಯದ `ತಾಸ್’ ಸುದ್ಧಿಸಂಸ್ಥೆ ವರದಿ ಮಾಡಿದೆ. 2022ರ ಫೆಬ್ರವರಿಯಲ್ಲಿ ಉಕ್ರೇನ್ ಜೊತೆಗಿನ ಸಂಘರ್ಷ ಆರಂಭಗೊಂಡಂದಿನಿಂದ ರಶ್ಯವು ಯುರೋಪ್ ಮತ್ತು ಉಕ್ರೇನ್‍ನ ಹಲವು ರಾಜಕಾರಣಿಗಳ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಿದೆ. ಎಸ್ಟೋನಿಯಾದ ಪ್ರಧಾನಿ ಕಾಜ ಕಲ್ಲಾಸ್, ಲಿಥ್ವೇನಿಯಾದ ಸಾಂಸ್ಕೃತಿಕ ಸಚಿವರು ಸೇರಿದಂತೆ ಹಲವರನ್ನು ಕಳೆದ ಫೆಬ್ರವರಿಯಲ್ಲಿ ವಾಂಟೆಡ್ ಪಟ್ಟಿಗೆ ಸೇರಿಸಿದ್ದು ಇದೀಗ ಝೆಲೆನ್ ಸ್ಕಿ ಅವರನ್ನು ಸೇರಿಸಿದೆ.

Read More

ಪಾಕಿಸ್ತಾನದ ಮುಖ್ಯ ನ್ಯಾಯಾಧೀಶ(ಸಿಜೆಪಿ) ಖಾಜಿ ಫಯಾಝ್ ಇಸಾ ಅವರು ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ ವಿರುದ್ಧ ಪಕ್ಷಪಾತ ದೋರಣೆ ತೋರುತ್ತಿದ್ದಾರೆ ಎಂದು ಪಿಟಿಐ ಸ್ಥಾಪಕ, ಮಾಜಿ ಪ್ರಧಾನಿ ಇಮ್ರಾನ್‍ ಖಾನ್ ಆರೋಪಿಸಿದ್ದಾರೆ. ತನ್ನ ವಿರುದ್ಧ ದಾಖಲಿಸಿರುವ ಪ್ರಕರಣಗಳ ವಿಚಾರಣೆಯನ್ನು ವಿಳಂಬ ತಂತ್ರ ಅನುಸರಿಸಲಾಗುತ್ತಿದೆ. ವಿಚಾರಣೆಯನ್ನು ತ್ವರಿತವಾಗಿ ಮುಗಿಸುವಂತೆ ಎಲ್ಲಾ ನ್ಯಾಯಾಧೀಶರನ್ನೂ ಆಗ್ರಹಿಸುವುದಾಗಿ ರಾವಲ್ಪಿಂಡಿಯ ಅಡಿಯಾಲಾ ಜೈಲಿನಿಂದ ಇಮ್ರಾನ್‍ಖಾನ್ ಹೇಳಿಕೆ ನೀಡಿದ್ದಾರೆ. ಇಮ್ರಾನ್ ವಿರುದ್ಧ ಹಲವು ಪ್ರಕರಣ ದಾಖಲಾಗಿದ್ದು ತೋಷಖಾನಾ ಪ್ರಕರಣದಲ್ಲಿ ಜೈಲುಶಿಕ್ಷೆ ಅನುಭವಿಸುತ್ತಿದ್ದಾರೆ. ತನ್ನ ಮೇಲೆ ಯಾವುದೇ ಒತ್ತಡವಿಲ್ಲ ಎಂದು ಸಿಜೆಪಿ ಇಸಾ ಹೇಳಿದ್ದಾರೆ. ಆದರೆ ತಪ್ಪು ಮಾಡಲು ನಿರಾಕರಿಸುವವರ ಮೇಲೆ ಒತ್ತಡ ಹೇರಲಾಗುತ್ತದೆ. ನೀವು ಸರಕಾರದ ಬಿ ತಂಡದಂತೆ ವರ್ತಿಸುವ ಕಾರಣ ನಿಮ್ಮ ಮೇಲೆ ಒತ್ತಡವಿರಲು ಸಾಧ್ಯವಿಲ್ಲ. ನೀವು ಪಿಟಿಐನಿಂದ ಚುನಾವಣಾ ಚಿಹ್ನೆಯನ್ನು ಕಿತ್ತುಕೊಂಡಿದ್ದೀರಿ. ಚುನಾವಣೆಯಲ್ಲಿ ನ್ಯಾಯಸಮ್ಮತ ಸ್ಪರ್ಧೆಗೆ ಅವಕಾಶ ನಿರಾಕರಿಸಿದ್ದೀರಿ. ಮೇ 9ರ ಘಟನೆ(ಸೇನೆಯ ಕೇಂದ್ರ ಕಚೇರಿ ಮೇಲೆ ಪಿಟಿಐ ಕಾರ್ಯಕರ್ತರ ದಾಳಿ ಆರೋಪ)ಯ ನೆಪದಲ್ಲಿ ನಮ್ಮ ಮೂಲಭೂತ…

Read More

ಇಂಡೊನೇಶ್ಯಾದ ಸುಲಾವೆಸಿ ದ್ವೀಪದಲ್ಲಿ ಸುರಿಯುತ್ತಿರುವ ಭಾರೀ ಮಳೆ ಮತ್ತು ಪ್ರವಾಹದಿಂದ ಹಲವೆಡೆ ಭೂಕುಸಿತ ಸಂಭವಿಸಿದ್ದು ಕನಿಷ್ಟ 14 ಮಂದಿ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಗುರುವಾರದಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ದಕ್ಷಿಣ ಸುಲಾವೆಸಿ ಪ್ರಾಂತದ ಲುವು ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿದೆ. ಪ್ರವಾಹದಿಂದಾಗಿ ತಗ್ಗುಪ್ರದೇಶಗಳಲ್ಲಿ ಸುಮಾರು 10 ಅಡಿಗಳಷ್ಟು ನೀರು ಹರಿಯುತ್ತಿದ್ದು 13 ಉಪಜಿಲ್ಲೆಗಳಲ್ಲಿ ಹೆಚ್ಚಿನ ಸಮಸ್ಯೆಯಾಗಿದೆ. ಮಳೆಯಿಂದಾಗಿ ಪ್ರಮುಖ ರಸ್ತೆಗಳಲ್ಲಿ ಕಲ್ಲು, ಮಣ್ಣುಗಳ ರಾಶಿಬಿದ್ದಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ. 1000ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದ್ದು ಇದರಲ್ಲಿ 42 ಮನೆಗಳು ಪ್ರವಾಹದಲ್ಲಿ ಕೊಚ್ಚಿಹೋಗಿವೆ ಎಂದು ತುರ್ತು ಸೇವಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಜಲಾವೃತಗೊಂಡಿರುವ ಮನೆಗಳ ನಿವಾಸಿಗಳನ್ನು ರಬ್ಬರ್ ದೋಣಿ ಬಳಸಿ ತೆರವುಗೊಳಿಸಲಾಗುತ್ತಿದೆ. ಹಲವರನ್ನು ಮಸೀದಿಗಳು ಅಥವಾ ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಏಜೆನ್ಸಿಯ ವಕ್ತಾರ ಅಬ್ದುಲ್ ಮುಹಾರಿ ಹೇಳಿದ್ದಾರೆ.

Read More

ಲೇಬರ್ ಪಕ್ಷದ ಸಾದಿಕ್ ಖಾನ್ ಸತತ ಮೂರನೇ ಬಾರಿಎಗ ಲಂಡನ್ ಮೇಯರ್ ಆಗುವ ಮೂಲಕ ಐತಿಹಾಸಿಕ ಜಯ ಸಾಧಿಸಿದ್ದಾರೆ. 2016ರ ಮೇ ತಿಂಗಳಲ್ಲಿ ಮೊದಲ ಬಾರಿಗೆ ಲಂಡನ್ ಮೇಯರ್ ಆಗಿ ಆಯ್ಕೆಯಾಗಿದ್ದ ಸಾದಿಕ್ ಖಾನ್, ತಮ್ಮ ಕನ್ಸರ್ವೇರ್ಟಿವ್ ಪಕ್ಷದ ಎದುರಾಳಿ ಸುಸಾನ್ ಹಾಲ್ ಅವರನ್ನು 2.76 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದಾರೆ. ಲೇಬರ್ ಪಕ್ಷದ ಪರವಾಗಿ ಶೇಕಡ 3.2ರಷ್ಟು ಹೆಚ್ಚುವರಿ ಮತಗಳು ಚಲಾವಣೆಯಾಗಿವೆ. ಒಟ್ಟು 14 ಕ್ಷೇತ್ರಗಳ ಪೈಕಿ ಸಾದಿಕ್ ಖಾನ್ 9 ರಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು, ಇದರದಲ್ಲಿ ಟೋರಿಸ್‍ನಿಂದ ಲಭ್ಯವಾಗಿರುವ ಎರಡು ಹೆಚ್ಚುವರಿ ಸ್ಥಾನಗಳು ಸೇರಿವೆ. 24 ಲಕ್ಷಕ್ಕೂ ಅಧಿಕ ಮತದಾರರು ಈ ಚುನಾವಣೆಯಲ್ಲಿ ಮತ ಚಲಾಯಿಸಿದ್ದು, ಒಟ್ಟಾರೆ ಶೇಕಡ 42.8ರಷ್ಟು ಮತದಾನವಾಗಿತ್ತು. ಇದು ಕಳೆದ ಬಾರಿ 2021ರಲಿ ನಡೆದ ಮೇಯರ್ ಚುನಾವಣೆಯಲ್ಲಿ ಚಲಾವಣೆಯಾದ ಮತಕ್ಕೆ ಹೋಲಿಸಿದರೆ ತುಸು ಕಡಿಮೆಯಾಗಿದೆ. ಗೆಲುವನ್ನು ಘೋಷಿಸಿದ ಬಳಿಕ ಮಾತನಾಡಿದ ಸಾದಿಕ್ ಖಾನ್, ನನಗೆ ಪ್ರೀತಿಯ ನಗರವಾಗಿರುವ ಲಂಡನ್‍ನ ಜನತೆಗೆ ಸೇವೆ ಸಲ್ಲಿಸಲು…

Read More

ಆದಿ, ಅಂಬಿ, ಸ್ನೇಹಾನಾ ಪ್ರೀತಿನಾ ಚಿತ್ರಗಳ ಮೂಲಕ ಗಮನ ಸೆಳೆದಿದ್ದ ನಟ ಆದಿತ್ಯ ಕೆಲ ಸಮಯದಿಂದ ಸಿನಿಮಾ ರಂಗದಿಂದ ದೂರವಾಗಿದ್ದರು. ಇದೀಗ ಸಾಕಷ್ಟು ವರ್ಷಗಳ ಬಳಿಕ ಮತ್ತೆ ಎಂಟ್ರಿಕೊಟ್ಟಿದ್ದು ಇದೇ ವೇಳೆ ಬಂಧನ 2 ಚಿತ್ರವನ್ನು ಕೈಬಿಟ್ಟಿದ್ದೇಕೆ ಎಂದು ತಿಳಿಸಿದ್ದಾರೆ. ನನ್ನ ತಂದೆ ನಿರ್ದೇಶನ ಮಾಡಿದ್ದ ಹಲವು ಚಿತ್ರಗಳು ಅಂದಿನ ಕಾಲದಲ್ಲಿ ಅಪಾರ ಜನರ ಮೆಚ್ಚುಗೆ ಗಳಿಸಿದ್ದವು. ಅವುಗಳನ್ನು ಈಗ ರಿಮೇಕ್ ಮಾಡುವುದಾಗಲಿ ಅಥವಾ ಅದರ ಸೀಕ್ವೆಲ್ ಮಾಡುವುದಾಗಲಿ ತುಂಬಾ ಕಷ್ಟ. ಅಂಥವುಗಳನ್ನು ಮೂಲ ಚಿತ್ರದ ನಿರ್ದೇಶಕರೇ ಮಾಡಿದರೆ ಸರಿ, ಮಿಕ್ಕವರು ಅವುಗಳನ್ನು ಟಚ್ ಮಾಡುವುದು ಅಷ್ಟು ಸೂಕ್ತವಲ್ಲ ಎನ್ನುವುದು ನನ್ನ ಭಾವನೆ ಎಂದಿದ್ದಾರೆ. ಆದರೆ, ನನ್ನ ತಂದೆಯವರೇ ‘ಬಂಧನ 2’ ಮಾಡಬಹುದು. ಮಾಡೋಣ ಅಂತ ಶುರು ಮಾಡಿದ್ವಿ. ಆದರೆ, ಎರಡು ದಿನಗಳಷ್ಟೇ ಶೂಟ್ ಮಾಡಿದ್ದು. ಬಳಿಕ ನಾನೇ ನನ್ನ ತಂದೆಯವರಿಗೆ ಬೇಡ ಎಂದು ಹೇಳಿಬಿಟ್ಟೆ. ಯಾಕೋ ನನಗೆ ಈ ಸಿನಿಮಾ ಮುಂದುವರೆಸುವುದು ಬೇಡ ಅನ್ನಿಸಿಬಿಟ್ಟಿತು. ‘ಬಂಧನ 2’ ಸಿನಿಮಾ ಮಾಡುವ…

Read More

ಬಾಲಿವುಡ್ ಬೆಡಗಿ ನಟಿ ದೀಪಿಕಾ ಪಡುಕೋಣೆ ಹಾಗೂ ರಣಭೀರ್ ಸಿಂಗ್ ದಂಪತಿ ಸದ್ಯದಲ್ಲೇ ಹೊಸ ಅತಿಥಿಯ ಆಗಮನದ ನಿರೀಕ್ಷೆಯಲ್ಲಿದ್ದಾರೆ. ದೀಪಿಕಾ ಪಡುಕೋಣೆ ತಾಯಿಯಾಗಲಿದ್ದು ಈ ಹಿನ್ನೆಲೆಯಲ್ಲಿ ನಟಿ ಈಗಾಗಲೇ ಒಪ್ಪಿಕೊಂಡಿರುವ ಚಿತ್ರಗಳನ್ನು ಪೂರ್ಣಗೊಳಿಸುತ್ತಿದ್ದಾರೆ. ಇದೀಗ ದೀಪಿಕಾ ಕುರಿತಾದ ಹೊಸ ವಿಚಾರವೊಂದು ಹೊರಬಿದ್ದಿದ್ದು, ಮೇ ಬಳಿಕ ಸಿನಿಮಾಗೆ ಗುಡ್ ಬೈ ಹೇಳಲಿದ್ದಾರೆ ಎನ್ನಲಾಗುತ್ತಿದೆ. ಸದ್ಯ ದೀಪಿಕಾ ಸಿಂಗಂ 3, ಪ್ರಭಾಸ್ ಜೊತೆಗಿನ ‘ಕಲ್ಕಿ 2898 ಡಿ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಪ್ರೆಗ್ನೆಂಟ್ ದೀಪಿಕಾ ವರ್ಕ್ ಡೆಡಿಕೇಷನ್‌ನಿಂದ ಒಪ್ಪಿಕೊಂಡಿರುವ ಚಿತ್ರಕ್ಕೆ ತೊಂದರೆಯಾಗಬಾರದು ಎಂದು ಸಿನಿಮಾ ಶೂಟಿಂಗ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಮೂಲಗಳ ಪ್ರಕಾರ, ದೀಪಿಕಾ ಪಡುಕೋಣೆ ಸದ್ಯ ‘ಕಲ್ಕಿ 2898 ಡಿ’ ಚಿತ್ರದ ಪ್ರಚಾರಕ್ಕೆ ಕಮಿಟ್ ಆಗಿದ್ದಾರೆ. ಅದಕ್ಕೆ ಚಿತ್ರ ತಂಡವು ಆಕೆಯ ಗರ್ಭಧಾರಣೆಯನ್ನು ಪರಿಗಣಿಸಿ, ಮುಂದಿನ ಶೂಟಿಂಗ್ ಅನ್ನು ಮುಂಚಿತವಾಗಿ ಯೋಜಿಸಿದ್ದಾರೆ. ಅವರು ನಿರ್ಮಾಪಕರ ಜೊತೆ ಚರ್ಚೆ ಮಾಡಿ, ಮೇ ಅಂತ್ಯದೊಳಗೆ ಶೂಟಿಂಗ್ ಮತ್ತು ಪ್ರಚಾರಕ್ಕೆ ಸಂಬಂಧಿಸಿದ ಕೆಲಸಗಳು ಪೂರ್ಣಗೊಳಿಸುವಂತೆ ವಿನಂತಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಮೇ ತಿಂಗಳ ಬಳಿಕ…

Read More

ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣದ ಕುರಿತು ಈಗಾಗಲೇ ಸಾಕಷ್ಟು ಮಂದಿ ಪ್ರತಿಕ್ರಿಯಿಸಿದ್ದಾರೆ. ಇದೀಗ ಕೊಡಗಿನ ಬೆಡಗಿ ನಟಿ ಹರ್ಷಿಕಾ ಪೂಣಚ್ಚ ಧ್ವನಿಯೆತ್ತಿದ್ದಾರೆ. ತಪ್ಪು ಮಾಡಿದ್ರೆ ಕಾನೂನು ಅಡಿಯಲ್ಲಿ ತಕ್ಕ ಶಿಕ್ಷೆಯಾಗಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಹರ್ಷಿಕಾ ಬರೆದುಕೊಂಡಿದ್ದಾರೆ. ದುರದೃಷ್ಟವಶಾತ್ ವೈರಲ್ ಆಗಿರುವ 2976 ವೀಡಿಯೊಗಳಲ್ಲಿ ಒಂದನ್ನು ನಾನು ನೋಡಿದೆ. ಅದನ್ನು ನೋಡುವುದು ನಿಜಕ್ಕೂ ನೋವಿನ ಸಂಗತಿ. ವೀಡಿಯೋಗಳು ಕಾನೂನುಬದ್ಧ ಮತ್ತು ನೈಜವಾಗಿದ್ದರೆ, ಅಂತಹ ಕೊಳಕು ಕೃತ್ಯಗಳನ್ನು ಸೃಷ್ಟಿಸಿದವರು ಖಂಡಿತವಾಗಿಯೂ ದೇಶದ ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಯಾಗಬೇಕು ಎಂದು ನಟಿ ಬರೆದುಕೊಂಡಿದ್ದಾರೆ. ಈ ವೀಡಿಯೊಗಳಲ್ಲಿ ಕಾಣಿಸಿಕೊಂಡಿರುವ ಅಸಂಖ್ಯಾತ ಮಹಿಳೆಯರ ಕುರಿತಾಗಿ ನನ್ನ ನೋವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರೆಲ್ಲರೂ ಸಭ್ಯ ಮತ್ತು ಸರಳ ಕುಟುಂಬದ ಸಾಮಾನ್ಯ ಮಹಿಳೆಯರಂತೆ ಕಾಣುತ್ತಾರೆ. ಈ ಸಂತ್ರಸ್ತರ ಮುಖಗಳನ್ನು ವಿವಿಧ ಗುಂಪುಗಳು ರಾಜಕೀಯ ಚರ್ಚೆಗೆ ಬಳಸಿಕೊಳ್ಳುತ್ತಿರುವುದು ಅತ್ಯಂತ ದುರದೃಷ್ಟಕರ ಎಂದಿದ್ದಾರೆ. ವಿಡಿಯೋದಲ್ಲಿರುವ ಮಹಿಳೆಯರ ಮುಖವನ್ನು ಬ್ಲರ್ ಮಾಡಬಹುದಿತ್ತು. ಭವಿಷ್ಯದಲ್ಲಿ ಅವರು ಸಮಾಜವನ್ನು ಹೇಗೆ ಎದುರಿಸುತ್ತಾರೆ. ಇನ್ನು ಮುಂದೆ ನಮ್ಮ…

Read More

ಬಾಲಿವುಡ್ ನಟಿ ಜಾನ್ವಿ ಕಪೂರ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ನಟಿ ತೆಲುಗು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದು ಈ ಮಧ್ಯೆ ಮತ್ತೊಂದು ಬಾಲಿವುಡ್ ಸಿನಿಮಾಗೆ ಸಹಿ ಮಾಡಿದ್ದಾರೆ. ಈ ಹೊಸ ಸಿನಿಮಾದಲ್ಲಿ ವರುಣ್ ಧವನ್‌ಗೆ ನಾಯಕಿಯಾಗಿ ಜಾನ್ವಿ ನಟಿಸುತ್ತಿದ್ದು ಹೊಸ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಅದ್ಧೂರಿಯಾಗಿ ನಡೆದಿದೆ. ಮುಂಬೈನಲ್ಲಿ ವರುಣ್ ಧವನ್, ಜಾನ್ವಿ ಕಪೂರ್, ಸಾನ್ಯ ಮಲ್ಹೋತ್ರಾ ನಟನೆಯ ‘ಸನ್ನಿ ಸಂಸ್ಕರಿ ತುಳಸಿ ಕುಮಾರಿ’ ಚಿತ್ರಕ್ಕೆ ಚಾಲನೆ ನೀಡಲಾಗಿದೆ. ಈ ವೇಳೆ, ಚಿತ್ರತಂಡದ ಜೊತೆ ಜಾನ್ವಿ ಮತ್ತು ವರುಣ್ ಖುಷಿ ಖುಷಿಯಾಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಸಿನಿಮಾ ಮುಹೂರ್ತದ ವಿಡಿಯೋ ನಟಿ ಹಂಚಿಕೊಂಡಿದ್ದಾರೆ. ಕಳೆದ ವರ್ಷ ‘ಬಾವಲ್’ ಎಂಬ ಸಿನಿಮಾದಲ್ಲಿ ಜಾನ್ವಿ ಕಪೂರ್ ಮತ್ತು ವರುಣ್ ಧವನ್ ಜೋಡಿಯಾಗಿ ನಟಿಸಿದ್ದರು. ಈ ಚಿತ್ರದ ಮೂಲಕ ಮತ್ತೆ ಈ ಜೋಡಿ ಒಂದಾಗಿದೆ. ಜಾನ್ವಿ ಹೊಸ ಚಿತ್ರಕ್ಕೆ ಕರಣ್ ಜೋಹರ್ ಬಂಡಾವಳ ಹೂಡುತ್ತಿದ್ದಾರೆ.

Read More

ಬಾಲಿವುಡ್ ನಟ ಗೋವಿಂದ ಅವರ ಸೋದರ ಸೊಸೆ ಮತ್ತು ಜನಪ್ರಿಯ ಕಿರುತೆರೆ ನಟಿ ರಾಗಿಣಿ ಖನ್ನಾ ಕ್ರೈಸ್ತ ಧರ್ಮಕ್ಕೆ ಮತಾಂತರವಾದ ಮರುದಿನವೇ ಹಿಂದೂಧರ್ಮಕ್ಕೆ ವಾಪಸ್ಸಾಗಿದ್ದಾರೆ. ಇತ್ತೀಚಿಗೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡು ಅದರ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡು ಹುಬ್ಬೇರುವಂತೆ ಮಾಡಿದ್ದ ನಟಿ ಇನ್ನು ಮುಂದೆ ಕ್ರಿಶ್ಚಿಯನ್ ಸಂಪ್ರದಾಯವನ್ನು ಅನುಸರಿಸುವುದಾಗಿ ಘೋಷಿಸಿದ್ದರು. ಆದಾಗ್ಯೂ ಮತಾಂತರಗೊಂಡ 24 ಗಂಟೆಗಳ ಒಳಗೆ ರಾಗಿಣಿ ತಮ್ಮ ಕ್ರಮಗಳಿಗೆ ಕ್ಷಮೆಯಾಚಿಸಿ ಹಿಂದೂ ಧರ್ಮಕ್ಕೆ ಮರಳಿರುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವ ಕುರಿತು ಹಾಕಿದ್ದ ತಮ್ಮ ಹಿಂದಿನ ಪೋಸ್ಟ್ ಅನ್ನು ರಾಗಿಣಿ ಖನ್ನಾ ಡಿಲೀಟ್ ಮಾಡಿದ್ದಾರೆ. ಅವರ ಹೊಸ ಪೋಸ್ಟ್ ನಲ್ಲಿ “ಹಾಯ್, ನಾನು ರಾಗಿಣಿ ಖನ್ನಾ. ನಾನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ನನ್ನ ಹಿಂದಿನ ರೀಲ್‌ಗಳಿಗಾಗಿ ಕ್ಷಮೆಯಾಚಿಸಲು ಬಯಸುತ್ತೇನೆ. ನಾನು ನನ್ನ ಮಾತೃಧರ್ಮಕ್ಕೆ ಮರಳಿದ್ದೇನೆ ಮತ್ತು ಈಗ ಕಟ್ಟರ್ ಹಿಂದೂ ಸನಾತನಿಯ ಮಾರ್ಗವನ್ನು ಅಳವಡಿಸಿಕೊಂಡಿದ್ದೇನೆ” ಎಂದು ಬರೆದುಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಟಿ,  ‘ನಾವು ಕಲಾವಿದರಾಗಿರುವುದರಿಂದ ಹೆಚ್ಚು…

Read More

ಯಶ್ ನಟನೆಯ ಟಾಕ್ಸಿಕ್ ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ನಟಿ ಕರೀನಾ ಕಪೂರ್ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಡೇಟ್ಸ್ ಹೊಂದಾಣಿಕೆ ಆಗದ ಕಾರಣಕ್ಕೆ ಕರೀನಾ ಚಿತ್ರತಂಡದಿಂದ ಹೊರ ಹೋಗಿದ್ದಾರೆ ಎನ್ನಲಾಗಿದೆ. ಇದೀಗ ಕರೀನಾ ಜಾಗಕ್ಕೆ ಮತ್ತೋರ್ವ ಸ್ಟಾರ್ ನಟಿ ಎಂಟ್ರಿಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಯೆಸ್. ಲೇಡಿ ಸೂಪರ್ ಸ್ಟಾರ್ ನಯನತಾರಾ ಟಾಕ್ಸಿಕ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. ಈ ಮೂಲಕ ನಯನತಾರಾ ಎರಡನೇ ಬಾರಿ ಕನ್ನಡ ಸಿನಿಮಾ ರಂಗಕ್ಕೆ ಬರಲಿದ್ದಾರೆ. ಈ ಹಿಂದೆ ನಟಿ ಉಪೇಂದ್ರ ನಟನೆಯ ಚಿತ್ರದಲ್ಲಿ ನಟಿಸಿದ್ದರು. ಇದೀಗ ಟಾಕ್ಸಿಕ್ ಚಿತ್ರದಲ್ಲಿ ಪ್ರಮುಖ ಪಾತ್ರ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಯಶ್ ನಟನೆಯ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾವನ್ನು ಗೀತಾ ಮೋಹನ್ ದಾಸ್ ನಿರ್ದೇಶಿಸುತ್ತಿದ್ದು, ಕೆವಿಎನ್ ಪ್ರೊಡಕ್ಷನ್ ಹೌಸ್ ನಿರ್ಮಾಣ ಮಾಡುತ್ತಿದೆ ಎಂಬ ಸುದ್ದಿ ಕೇಳಿ ಬಂದಿದೆ. ಅದರ ಹೊರತಾಗಿ ಮತ್ಯಾವ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿರಲಿಲ್ಲ. ಯಶ್ ಅವರ ಸಹೋದರಿಯಾಗಿ ಈ ಸಿನಿಮಾದಲ್ಲಿ ಕರೀನಾ ನಟಿಸಬೇಕಿತ್ತು. ಆದರೆ, ಡೇಟ್ ಹೊಂದಾಣಿಕೆಯ…

Read More