ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಬೋಯಿಂಗ್‍ನ ಸ್ಟಾರ್‍ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಪೈಲಟ್ ಆಗಿ ನಾಳೆ ಮೂರನೇ ಬಾರಿಗೆ ಬಾಹ್ಯಾಕಾಶಕ್ಕೆ ಹಾರಲು ಸಿದ್ಧರಾಗಿದ್ದಾರೆ. 58 ವರ್ಷದ ಸ್ಟಾರ್‍ಲೈನರ್ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕರೆತರಲಾಗುತ್ತಿದೆ ಈ ಯೋಜನೆ ಬೋಯಿಂಗ್ ಕಾರ್ಯಕ್ರಮಕ್ಕೆ ಮಹತ್ವದ ಮತ್ತು ಬಹುನಿರೀಕ್ಷಿತ ವಿಜಯವಾಲಿದೆ. ನಿಗದಿತ ಲಿಫ್ಟ್ ಆಫ್ ಅನ್ನು ಸೋಮವಾರ ಸ್ಥಳೀಯ ಸಮಯ 22:34 ಕ್ಕೆ ಹೊಂದಿಸಲಾಗಿದೆ (ಮಂಗಳವಾರ ಬೆಳಗ್ಗೆ 8:04 )ಬಾಹ್ಯಾಕಾಶಕ್ಕೆ ರಾಕೆಟ್ ಹಾರಲಿದೆ. ನಾವೆಲ್ಲರೂ ಇಲ್ಲಿದ್ದೇವೆ ,ನಾವೆಲ್ಲರೂ ಸಿದ್ಧರಾಗಿದ್ದೇವೆಅಂತೆಯೇ ನಮ್ಮ ಕುಟುಂಬ ಹಾಗು ಸ್ನೇಹಿತರು ಸಂತೋಷದಿಂದ ಹೆಮ್ಮೆಪಡುತ್ತಾರೆ, ನಾವು ಎಲ್ಲವನ್ನೂ ಸರಿಪಡಿಸುವ ಪ್ರಕ್ರಿಯೆಯ ಭಾಗವಾಗಿದ್ದೇವೆ ಎಂದು ವಿಲಿಯಮ್ಸ್ ಹೇಳಿದ್ದಾರೆ. ಬಾಹ್ಯಾಕಾಶ ನೌಕೆಯ ಅಭಿವೃದ್ಧಿಯಲ್ಲಿನ ವಿಳಂಬ ಮಿಷನ್ ವಿಳಂಬವಾಗಿದೆ,ಇದು ಯಶಸ್ವಿಯಾದರೆ, ಎಲೋನ್ ಮಸ್ಕ್‍ನ ಸ್ಪೇಸ್‍ಎಕ್ಸ್ ಜೊತೆಗೆ ಗೆ ಮತ್ತು ಅಲ್ಲಿಂದ ಸಿಬ್ಬಂದಿ ಸಾರಿಗೆಯನ್ನು ಒದಗಿಸುವ ಎರಡನೇ ಖಾಸಗಿ ಸಂಸ್ಥೆಯಾಗುತ್ತದೆ. ಸ್ಪೇಸ್‍ಎಕ್ಸ್‍ನ ಕ್ರೂ ಡ್ರ್ಯಾಗನ್ ಮತ್ತು ಸ್ಟಾರ್‍ಲೈನರ್ ನಿಯಮಿತವಾಗಿ ಹಾರುವ ಇಂತಹ ಸನ್ನಿವೇಶವು…
Author: Author AIN
ಆಸ್ಟ್ರೇಲಿಯಾದಲ್ಲಿ ನಡೆದ ಭಾರತೀಯ ವಿದ್ಯಾರ್ಥಿಗಳ ನಡುವಿನ ಜಗಳದಲ್ಲಿ 22 ವರ್ಷದ ಎಂಟೆಕ್ ವಿದ್ಯಾರ್ಥಿಯನ್ನು ಇರಿದು ಕೊಲ್ಲಲಾಗಿದೆ. ನವಜೀತ್ ಸಂಧು ಮೃತ ವಿದ್ಯಾರ್ಥಿ. ಬಾಡಿಗೆ ವಿಚಾರದಲ್ಲಿ ಕೆಲವು ಭಾರತೀಯ ವಿದ್ಯಾರ್ಥಿಗಳ ನಡುವೆ ನಡೆದ ವಿವಾದದಲ್ಲಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ ಇನ್ನೊಬ್ಬ ವಿದ್ಯಾರ್ಥಿಯು ಚಾಕುವಿನಿಂದ ನವಜೀತ್ ಸಂಧು ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ನವಜೀತ್ ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೆಲ್ಬೋರ್ನ್‌ನಲ್ಲಿ ಸ್ಥಳೀಯ ಕಾಲಮಾನ ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ನಡೆದಿದ್ದು ಘಟನೆಯಲ್ಲಿ ಮತ್ತೊಬ್ಬ ವಿದ್ಯಾರ್ಥಿ ಗಾಯಗೊಂಡಿದ್ದಾನೆ ಎಂದು ಮೃತ ವಿದ್ಯಾರ್ಥಿಯ ಚಿಕ್ಕಪ್ಪ ತಿಳಿಸಿದ್ದಾರೆ. ನವಜೀತ್‌ನ ಸ್ನೇಹಿತ (ಮತ್ತೊಬ್ಬ ಭಾರತೀಯ ವಿದ್ಯಾರ್ಥಿ) ಬಳಿ ಕಾರು ಇತ್ತು. ಹೀಗಾಗಿ ಆತನ ಸಾಮಾನುಗಳನ್ನು ತೆಗೆದುಕೊಳ್ಳಲು ಸ್ನೇಹಿತನ ಜೊತೆಗೆ ಕಾರಿನಲ್ಲಿ ಆತನ ಮನೆಗೆ ಹೋಗಿದ್ದಾನೆ. ಅವನ ಸ್ನೇಹಿತ ಒಳಗೆ ಹೋದಾಗ, ನವಜೀತ್ ಗೆ ಚೀರಾಡುವ ಕೂಗುಗಳನ್ನು ಕೇಳಿಸಿಕೊಂಡು ಒಳ ಹೋಗಿದ್ದಾನೆ. ಜಗಳವಾಡಬೇಡಿ ಎಂದು ನವಜೀತ್ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ, ಆತನ ಎದೆಗೆ ಚಾಕುವಿನಿಂದ…
ಹೊಸ ರೇಷನ್ ಕಾರ್ಡ್ ಪಡೆಯಲು ಇಚ್ಚಿಸುವವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಿಹಿಸುದ್ದಿ ನೀಡಿದೆ. ಜೂನ್ ಮೊದಲ ವಾರದಲ್ಲಿ ಹೊರ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಹರು ರಾಜ್ಯದ ನಾಗರೀಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ahara.kar.nic.in ಜಾಲತಾಣದ ಮೂಲಕ, ಹೊಸ ಪಡಿತರ ಚೀಟಿಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಕರ್ನಾಟಕ ಪಡಿತರ ಚೀಟಿ ಪಟ್ಟಿ ಯಲ್ಲಿ ಹೆಸರು ಇಲ್ಲದ ಎಲ್ಲಾ ಜನರು ಈಗ ಅಗತ್ಯವಿರುವ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು, ಜೊತೆಗೆ ಅರ್ಜಿಯ ಸ್ಥಿತಿಗತಿಯನ್ನು ಪರಿಶೀಲಿಸಬಹುದು. ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಬೇಕಿರುವ ಅಗತ್ಯ ದಾಖಲೆಗಳು ವೋಟರ್ ಐಡಿ ಆಧಾರ್ ಕಾರ್ಡ್ ವಯಸ್ಸಿನ ಪ್ರಮಾಣ ಪತ್ರ ಡ್ರೈವಿಂಗ್ ಲೈಸೆನ್ಸ್ ಇತ್ತೀಚಿನ ಪಾರ್ಸ್ ಪೋರ್ಟ್ ಅಳತೆಯ ಭಾವಚಿತ್ರ ಮೊಬೈಲ್ ಸಂಖ್ಯೆ ಸ್ವಯಂ ಘೋಷಿತ ಪ್ರಮಾಣ ಪತ್ರ ಈ ಮೇಲ್ಕಂಡ ದಾಖಲೆಗಳಿದ್ದಲೇ, ಆನ್ ಲೈನ್ ಮೂಲಕ ಹೊಸ ಪಡಿತರ ಚೀಟಿಗಾಗಿ ನೀವು ಅರ್ಜಿಯನ್ನು ಸಲ್ಲಿಸಬಹುದು. ಹಾಗಾದ್ರೇ ಅರ್ಜಿ ಸಲ್ಲಿಸೋದು ಹೇಗೆ ಎನ್ನುವ…
‘ಲೋಫರ್’ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿಕೊಟ್ಟ ನಟಿ ದಿಶಾ ಪಟಾನಿ ತಮ್ಮ ಹಾಟ್ ಲುಕ್ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಸದಾ ತಮ್ಮ ವಿನೂತನ ಲುಕ್ ನಿಂದಲೇ ಸುದ್ದಿಯಾಗೋ ಬೆಡಗಿ ಇದೀಗ ಬೀಚ್ ನಲ್ಲಿ ಬಿಕಿನಿ ತೊಟ್ಟು ಬಳುಕಿದ್ದಾರೆ. ಬಿಕಿನಿ ಅವತಾರದಲ್ಲಿರೋ ನಟಿ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಫೋಟೋ ಶೇರ್ ಮಾಡಿ ಹುಡುಗರ ಟೆಂಪರೇಚರ್ ಹೆಚ್ಚಿಸಿದ್ದಾರೆ. ನಟಿ ದಿಶಾ ಪಟಾನಿ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ತಮ್ಮ ಹಾಟ್ ಹಾಟ್ ಫೋಟೋಸ್ ಶೇರ್ ಮಾಡುತ್ತಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಕ್ರೇಜ್ ಕ್ರಿಯೇಟ್ ಮಾಡುವುದರಲ್ಲಿ ಯಾವಾಗಲೂ ದಿಶಾ ಮುಂಚೂಣಿಯಲ್ಲಿರುತ್ತಾರೆ. ದಿಶಾ ಪಟಾನಿ ಸದ್ಯ ಥೈಲ್ಯಾಂಡ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ. ಬೀಚ್ ಕ್ಷಣಗಳ ಗ್ಲಿಂಪ್‌ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಸಖತ್ ವೈರಲ್ ಆಗಿದೆ. ದಿಶಾ ಪಟಾನಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ಕೆಲವು ಫೋಟೋಗಳು ಆನ್ಲೈನ್ ಬಿಸಿ ಹೆಚ್ಚಿಸಿದೆ. ದಿಶಾ ಪಟಾನಿ ಬಿಕಿನಿ ಧರಿಸಿ ಸಮುದ್ರ ಅಂಚಿನಲ್ಲಿ ಕುಳಿತು ಹಾಟ್ ಅವತಾರದಲ್ಲಿ ಪೋಸ್ ಕೊಟ್ಟಿದ್ದು ನೆಟ್ಟಿಗರು ಆಕೆಯ ಸೌಂದರ್ಯವನ್ನು ಹೊಗಳಿದ್ದಾರೆ.…
ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕರುನಾಡು ಮಾತ್ರವಲ್ಲ ಪರಭಾಷೆಯ ಮಂದಿಯೂ ಪ್ರತಿಕ್ರಿಯೆ ನೀಡಿದ್ದಾರೆ. ಮೊಮ್ಮಗ ಮಾಡಿದ ಕೆಲಸದಿಂದು ಮಾಜಿ ಪ್ರಧಾನಿ ದೇವೇಗೌಡ ಅವರ ಹೆಸರಿಗೂ ಕಳಂಕ ಉಂಟಾಗಿದೆ. ಘಟನೆಯ ಕುರಿತು ನಟ ಜಗ್ಗೇಶ್ ಮಾತನಾಡಿದ್ದಾರೆ. ನಟ ಜಗ್ಗೇಶ್ ಅವರು ಹೆಣ್ಣಿನ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ ವಿಶೇಷವಾದ ಪೋಸ್ಟ್ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಜಗ್ಗೇಶ್ ಹೆಣ್ಣಿನ ಬಗ್ಗೆ ಕೆಲ ಸಾಲು ಬರೆದುಕೊಂಡಿ ಇದನ್ನು ನೋಡಿದರೆ ಪ್ರಜ್ವಲ್ ರೇವಣ್ಣ ಅವರನ್ನೇ ಗಮನದಲ್ಲಿಟ್ಟುಕೊಂಡು ಬರೆದಿದ್ದಾರೆ ಎಂದು ಊಹಿಸುವಂತಿದೆ. ಹೆಣ್ಣು ದೇವರ ಪ್ರತಿರೂಪ ತನ್ನ ಸೃಷ್ಠಿಯ ಕಾರ್ಯ ಭೂಲೋಕದಲ್ಲಿ ಹೆಣ್ಣಿಂದ ಮಾಡಿಸುತ್ತಾನೆ. ಹಾಗಾಗಿ ಹೆಣ್ಣುಕುಲಕ್ಕೆ ವಿಶೇಷ ಶಕ್ತಿ ಬ್ರಹ್ಮಾಂಡದಲ್ಲಿ…ಹೆಣ್ಣು ಮಗಳು ಮಡದಿ ತಾಯಿ ರೂಪ ಹೊಂದಿ ಮನುಕುಲದ ಉದ್ಧಾರಕ್ಕೆ ಜನಿಸಿದ ಮಾತೃ ಸ್ವರೂಪಿಣಿ ಅರ್ಥಾತ್ ದೈವ ಸ್ವರೂಪ. ಇಂಥ ಹೆಣ್ಣುಕುಲವ ಶೋಷಣೆ ಯಾ ದುಃಖ ಯಾ ಅಪಮಾನ ಯಾ ಮಾನಭಂಗ ಮಾಡುವ ಯಾವ ನರನು ಉದ್ಧಾರವಾದ ಇತಿಹಾಸವಿಲ್ಲ ಎಂದಿರುವ ಜಗ್ಗೇಶ್ ಯಾರು ಯಾವ…
ಬೆಂಗಳೂರಿನ ಅತಿದೊಡ್ಡ ಚಿತ್ರಮಂದಿರಗಳಲ್ಲಿ ಒಂದಾಗಿದ್ದ ಸ್ಯಾಂಕಿ ರಸ್ತೆಯ ʻಕಾವೇರಿʼ ಚಿತ್ರಮಂದಿರ ಈಗ ಶಾಶ್ವತವಾಗಿ ಮುಚ್ಚಿದೆ. ಈ ಮೂಲಕ 21 ವರ್ಷದಲ್ಲಿ 6 ಥಿಯೇಟರ್ ಗಳು ಬಂದ್ ಆಗಿವೆ. ಒಟಿಟಿ , ಮಲ್ಟಿಪ್ಲೆಕ್ ಇತ್ಯಾದಿ ಕಾರಣಗಳಿಂದ ಇತ್ತೀಚೆಗೆ ಚಿತ್ರಮಂದಿರಗಳತ್ತ ಜನ ಕಡಿಮೆ ಸಂಖ್ಯೆಯಲ್ಲಿ ಮುಖ ಮಾಡುತ್ತಿದ್ದಾರೆ . ಹೀಗಾಗಿ ಥಿಯೇಟರ್ ಮಾಲಿಕರು ತೊಂದರೆ ಅನುಭವಿಸುವಂತಾಗಿದೆ. ಇದೇ ಕಾರಣದಿಂದ ಹಲವು ಚಿತ್ರಮಂದಿರಗಳು ಮುಚ್ಚುವ ನಿರ್ಧಾರಕ್ಕೆ ಬಂದಿದೆ. ಇದೀಗ ಈ ಪಟ್ಟಿದೆ ಸ್ಯಾಂಕಿ ರಸ್ತೆಯ ʻಕಾವೇರಿʼ ಚಿತ್ರಮಂದಿರ ಕೂಡ ಸೇರಿದೆ. ಸುಮಾರು 50 ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಕಾವೇರಿ ಚಿತ್ರ ಮಂದಿರ ಇದೀಗ ಶಾಶ್ವತವಾಗಿ ಮುಚ್ಚಲ್ಪಟ್ಟಿದೆ. 1974ರ ಜನವರಿ 11ರಂದು ಡಾ. ರಾಜ್‌ಕುಮಾರ್ ನಟನೆಯ ‘ಬಂಗಾರದ ಪಂಜರ’ ಸಿನಿಮಾ ಪ್ರದರ್ಶನದ ಮೂಲಕ ʻʻಕಾವೇರಿʼʼ ಚಿತ್ರಮಂದಿರ ಶುರುವಾಗಿತ್ತು. ಅಂದಿನಿಂದ ಇಲ್ಲಿಯವರೆಗೂ ಈ ಚಿತ್ರ ಮಂದಿರದಲ್ಲಿ ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ನಾನಾ ಭಾಷೆಯ ಚಿತ್ರಗಳು ತೆರೆಕಂಡಿದ್ದವು. ಈ ಚಿತ್ರಮಂದಿರದಲ್ಲಿ ಪುನೀತ್ ರಾಜ್‌ಕುಮಾರ್ ಅಭಿನಯದ ‘ಪರಮಾತ್ಮ’…
ತ್ರಿವಿಕ್ರಮ ಸಪಲ್ಯ ನಿರ್ಮಾಣದ, ಸಕ್ಸಸ್ ಫಿಲಂಸ್ ಮತ್ತು ತ್ರಿವಿಕ್ರಮ ಸಿನಿಮಾಸ್ ಬ್ಯಾನರ್ ನಡಿ, ಸುಧೀರ್ ಅತ್ತಾವರ್ ನಿರ್ದೇಶನದ ಬಹು ನಿರೀಕ್ಷಿತ ಕೊರಗಜ್ಜ ಸಿನಿಮಾದ ‘ಮೋಷನ್ ಪೋಸ್ಟರ್’ ಜೊತೆ ಫಸ್ಟ್ ಲುಕ್ ಸಿದ್ಧಗೊಂಡಿದ್ದು, ಕೊರಗಜ್ಜ ದೈವದ ಕಳೆ-ಕಾರ್ಣಿಕ ಮತ್ತು ಪಾವಿತ್ರ್ಯತೆಗೆ ಯಾವುದೇ ಧಕ್ಕೆ ಬಾರದಂತೆ ಅದನ್ನು ವಿನ್ಯಾಸ ಗೊಳಿಸಿ ಮೊದಲಿಗೆ ಕೊರಗಜ್ಜ, ಗುಳಿಗ ಹಾಗೂ ಕಲ್ಲುರ್ಟಿ ದೈವಗಳಿಗೆ ನಿರ್ದೇಶಕ ಸುಧೀರ್ ಅತ್ತಾವರ್ ಮತ್ತೆ ವಿಷೇಶ ಕೋಲಸೇವೆ ನೀಡಿ, ಅದೇ ಸಮಯದಲ್ಲಿ ಶ್ರೀ ದೈವಗಳ ಸಮಕ್ಷಮದಲ್ಲಿ ದೈವದ ಒಪ್ಪಿಗೆಗಾಗಿ ಪ್ರದರ್ಶಿಸಿದರು. ಶ್ರೀ ದೈವಗಳಿಂದ ಫಸ್ಟ್ ಲುಕ್ ಅನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಲು ಅನುಮತಿಯನ್ನು ಭಯ-ಭಕ್ತಿಯಿಂದ ಬೇಡಿಕೊಂಡು, ಒಪ್ಪಿಗೆ ಪಡೆಯಲಾಯ್ತು. ಎಲ್ಲೆಂದರಲ್ಲಿ ಈ ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರನ್ನು ದೈವಕ್ಕೆ ಅಪಚಾರ ಆಗುವ ರೀತಿಯಲ್ಲಿ ಸಾರ್ವಜನಿಕರು ದುರುಪಯೋಗ ಪಡಿಸಬಾರದು ಎಂದು ದೈವಗಳು ಅಪ್ಪಣೆ ನೀಡಿದವು.ಮೋಷನ್ ಪೋಸ್ಟರನ್ನು ವಿಶೇಷವಾಗಿ ವಿನ್ಯಸಗೊಳಿಸಿದ್ಧರೂ ದೈವಗಳು ಒಪ್ಪಿಗೆ ನೀಡದಿದ್ದರೆ ಅದನ್ನು ಬಿಡುಗಡೆಗೊಳಿಸುವುದು ಅಸಾದ್ಯವಾಗಬಹುದಿತ್ತು.ಈ ರಿಸ್ಕನ್ನು ನಿರ್ದೇಶಕ ಮತ್ತು ನಿರ್ಮಾಪಕರು ತೆಗೆದುಕೊಂಡಿದ್ದರು.…
ಹಾಲಿವುಡ್ ನ ಅತ್ಯಂತ ಜನಪ್ರಿಯ ಸಿನಿಮಾಗಳಲ್ಲಿ ಒಂದಾದ ಟೈಟಾನಿಕ್ ಸಿನಿಮಾದಲ್ಲಿ ಕ್ಯಾಪ್ಟನ್ ಆಗಿ ಕಾಣಿಸಿಕೊಂಡಿದ್ದ ನಟ ಬರ್ನಾರ್ಡ್ ನಿಧನರಾಗಿದ್ದಾರೆ. 79ರ ವಯಸ್ಸಿನ ಈ ನಟ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆ ಪಲಿಸದೆ ಕೊನೆಯುಸಿರೆಳೆದಿದ್ದಾರೆ. ಹಿಲ್ ಅವರು ಟೈಟಾನಿಕ್ ಚಿತ್ರದಲ್ಲಿ ‘ಕ್ಯಾಪ್ಟನ್ ಎಡ್ವರ್ಡ್ ಸ್ಮಿತ್’ ಎಂಬ ಅಪ್ರತಿಮ ಪಾತ್ರವನ್ನು ಇವರು ನಿರ್ವಹಿಸಿದ್ದರು. ಇದಲ್ಲದೆ, ‘ಲಾರ್ಡ್ ಆಫ್ ದಿ ರಿಂಗ್ಸ್’ ಚಿತ್ರದ ಮೂಲಕವೂ ಜನಮನ್ನಣೆ ಗಳಿಸಿದ್ದರು. ಚಲನಚಿತ್ರಗಳಲ್ಲಿ ಮಾತ್ರವಲ್ಲದೆ ಟಿವಿ ಶೋಗಳು ಮತ್ತು ರಂಗಭೂಮಿಯಲ್ಲಿಯೂ ಅವಿರತ ಕೆಲಸ ಮಾಡಿ ಪ್ರೇಕ್ಷಕರ ಮನ ಗೆದ್ದಿದ್ದರು. 11 ಆಸ್ಕರ್ ಪ್ರಶಸ್ತಿಗಳನ್ನು ಪಡೆದ ಎರಡು ಚಿತ್ರಗಳಲ್ಲಿ ನಟಿಸಿರುವ ಏಕೈಕ ನಟ ಎಂಬ ಹೆಗ್ಗಳಿಕೆಯೂ ಹಿಲ್ ಅವರದ್ದು. ಟೈಟಾನಿಕ್ ಮತ್ತು ಲಾರ್ಡ್ ಆಫ್ ದಿ ರಿಂಗ್ಸ್ ಚಿತ್ರಗಳು ತಲಾ 11 ಆಸ್ಕರ್ ಪ್ರಶಸ್ತಿಗಳನ್ನು ಗೆದ್ದಿದ್ದವು. ಬರ್ನಾರ್ಡ್ ತಮ್ಮ ಅತ್ಯುತ್ತಮ ಅಭಿನಯಕ್ಕಾಗಿ ಹಿಲ್ ಅವರು BAFTA ಪ್ರಶಸ್ತಿ, ಬ್ರಾಡ್ಕಾಸ್ಟಿಂಗ್ ಪ್ರೆಸ್ ಗಿಲ್ಡ್ ಪ್ರಶಸ್ತಿ ಮತ್ತು ಅಂತಾರಾಷ್ಟ್ರೀಯ ಎಮ್ಮಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಆದಾಗ್ಯೂ,…
ಈಗೇನಿದ್ದರು ಸೋಷಿಯಲ್ ಮೀಡಿಯಾದ್ದೇ ಕಾರು ಬಾರು. ಬಹುತೇಕರು ಸೋಷಿಯಲ್ ಮೀಡಿಯಾಗಳಲ್ಲಿ ಸ್ಟೇಟಸ್ ಅಪ್‌ಡೇಟ್ ಮಾಡೋ ಖಯಾಲಿ ಬೆಳೆಸಿಕೊಂಡಿರುತ್ತಾರೆ. ಎಲ್ಲಿಗೆ ಪ್ರವಾಸ ಹೋಗುತ್ತಿದ್ದಾರೆ? ಯಾವ ಹೋಟೆಲ್‌ನಲ್ಲಿ ಊಟ ಮಾಡಿದ್ರು? ಎಲ್ಲಿ ಶಾಪಿಂಗ್‌ಗೆ ಹೋಗಿದ್ರು? ಹೀಗೆ ಪ್ರತಿಯೊಂದನ್ನು ಸಾಮಾಜಿಕ ಜಾಲಾ ತಾಣದಲ್ಲಿ ಶೇರ್ ಮಾಡುತ್ತಿರುತ್ತಾರೆ. ಕಳೆದ ಏಪ್ರಿಲ್ 28 ರಂದು ಈಕ್ವೆಡಾರ್ ದೇಶದ ಬ್ಯೂಟಿ ಕ್ವೀನ್, 2022ರ ಮಿಸ್ ಈಕ್ವೆಡಾರ್ ಕಿರೀಟ ಧರಿಸಿದ್ದ ಲ್ಯಾಂಡಿ ಪರಾಗ ಗೊಯ್ಬುರೊ ಅವರು ಹತ್ಯೆಗೀಡಾದರು. ಈಕ್ವೆಡಾರ್ ದೇಶದ ಕ್ವೆವೆಡೊ ನಗರದಲ್ಲಿ ಇರುವ ಜನಪ್ರಿಯ ರೆಸ್ಟೋರೆಂಟ್ ಒಂದರಲ್ಲಿ ಕುಳಿತಿದ್ದ ಈಕೆಯನ್ನು ಇಬ್ಬರು ಅಪರಿಚಿತ ಹಂತಕರು ಗುಂಡಿಟ್ಟು ಕೊಂದಿದ್ದರು. 23 ವರ್ಷ ವಯಸ್ಸಿನ ಲ್ಯಾಂಡಿ ಪರಾಗ ಗೊಯ್ಬುರೊ ಅವರಿಗೆ ಇನ್‌ಸ್ಟಾಗ್ರಾಂನಲ್ಲಿ ಅಪಾರ ಅಭಿಮಾನಿಗಳು ಹೊಂದಿದ್ದರು. ಅವರೆಲ್ಲರೂ ಈ ಘಟನೆಗೆ ಆಘಾತ ವ್ಯಕ್ತಪಡಿಸಿದರು. ಈ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರಿಗೆ ಲ್ಯಾಂಡಿ ಪರಾಗ ಗೊಯ್ಬುರೊ ಅವರ ಇನ್‌ಸ್ಟಾಗ್ರಾಂ ಖಾತೆಯೇ ಸುಳಿವು ನೀಡಿದೆ. ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿರುವ ಲ್ಯಾಂಡಿ ಪರಾಗ ಗೊಯ್ಬುರೊ, ತಾವು…
ದಕ್ಷಿಣ ಬ್ರೇಜಿಲ್ ನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಪ್ರವಾಹ ಉಂಟಾಗಿದ್ದು ಜನ ಜೀವನ ಅಸ್ತವ್ಯಸ್ಥವಾಗಿದೆ. ಪ್ರವಾಹದಿಂದು ಇದುವರೆಗೂ 78 ಮಂದಿ ಮೃತಪಟ್ಟಿದ್ದು, ಬ್ರೆಜಿಲ್‌ನ ದಕ್ಷಿಣ ರಾಜ್ಯವಾದ ರಿಯೊ ಗ್ರಾಂಡೆ ಡೊ ಸುಲ್‌ನಲ್ಲಿ ಸುಮಾರು 105 ಮಂದಿ ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರವಾಹದಿಂದಾಗಿ ಇದುವರೆಗೂ 1,15,000ಕ್ಕೂ ಹೆಚ್ಚು ಜನ ಸ್ಥಳಾಂತರಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕುಸಿದ ಮನೆಗಳು, ಸೇತುವೆಗಳು ಮತ್ತು ರಸ್ತೆಗಳ ಅವಶೇಷಗಳ ಕೆಳಗೆ ಸಿಲುಕಿರುವವರನ್ನು ಪತ್ತೆಹಚ್ಚಲು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. 3,000ಕ್ಕೂ ಹೆಚ್ಚು ಸೈನಿಕರು, ಅಗ್ನಿಶಾಮಕ ಸಿಬ್ಬಂದಿ ಮತ್ತು ಇತರ ರಕ್ಷಕರಿಂದ ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ. ನೀರು, ವಿದ್ಯುತ್ ಇಲ್ಲದೆ ಮನೆಗಳಲ್ಲಿ ಸಿಲುಕಿರುವ ಜನರ ರಕ್ಷಣೆ ಮಾಡಲಾಗುತ್ತಿದೆ. ಇದರೊಂದಿಗೆ ಸೇನಾ ಆಸ್ಪತ್ರೆ ಸ್ಥಾಪಿಸಿ ಜನರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಪ್ರವಾಹದಿಂದಾಗಿ ಹಲವೆಡೆ ಭೂಕುಸಿತ ಉಂಟಾಗಿದ್ದು ರಸ್ತೆಗಳು ಬಂದ್ ಆಗಿವೆ. ರಿಯೊ ಗ್ರಾಂಡೆ ಡೊ ಸುಲ್ ಹೆಚ್ಚು ಪರಿಣಾಮ ಬೀರಿದೆ. ಈ ನಡುವೆ ಡಾಟ್‌ಕಾಂ ಎಂಬ ಕಂಪನಿಯ ಕಟ್ಟಡದಲ್ಲಿ ಕೆಲವರು…